Tag: ಶಾರುಖ್ ಖಾನ್

  • ಜವಾನ್ ಚಿತ್ರದ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟ

    ಜವಾನ್ ಚಿತ್ರದ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟ

    ಶಾರುಖ್ ಖಾನ್ ಅಭಿನಯದ ‘ಜವಾನ್’ (Jawaan) ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರವನ್ನು ಶಾರುಖ್ ಖಾನ್ (Shah Rukh Khan) ಅವರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸುತ್ತಿದ್ದು,  ಜನಪ್ರಿಯ ನಿರ್ದೇಶಕರಾದ ಅಟ್ಲಿ (Atlee) ನಿರ್ದೇಶನ ಮಾಡುತ್ತಿದ್ದಾರೆ.

    ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬ್ಲಾಕ್‌ಬಸ್ಟರ್ ಎಂದೆನಿಸಿಕೊಂಡಿತ್ತು. ಈಗ ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು (Rights) ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ. ಇದನ್ನೂ ಓದಿ:ತನ್ನದೇ ಸಿನಿಮಾ ನಟಿಗೆ ತೈಲ ಕೊಡಿ ಸರಿ ಹೋಗ್ತಾಳೆ ಎಂದ ನಿರ್ದೇಶಕ

    ‘ಜವಾನ್’ ಚಿತ್ರದ ಓಟಿಟಿ, ಸ್ಯಾಟಿಲೈಟ್ ಮತ್ತು ಸಂಗೀತ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿದ್ದು, ಭಾರೀ ಮೊತ್ತಕ್ಕೆ ಹಕ್ಕುಗಳನ್ನು ಕೊಂಡಿರುವ ಸುದ್ದಿ ಇದೆ. ಆದರೆ, ಚಿತ್ರತಂಡದವರು ಮಾತ್ರ ಇನ್ನೂ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿವೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

     

    ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ (Nayantara) , ವಿಜಯ್ ಸೇತುಪತಿ (Vijay Sethupathi), ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್, ಈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

  • ಶಾರುಖ್‌ ಖಾನ್‌ ಜೊತೆ ಕನ್ನಡತಿ ಪ್ರಿಯಾಮಣಿ ರೊಮ್ಯಾನ್ಸ್

    ಶಾರುಖ್‌ ಖಾನ್‌ ಜೊತೆ ಕನ್ನಡತಿ ಪ್ರಿಯಾಮಣಿ ರೊಮ್ಯಾನ್ಸ್

    ಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ (Priyamani) ಅವರು ಮತ್ತೆ ಶಾರುಖ್ ಖಾನ್ (Sharukh Khan) ಜೊತೆ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಹಿಂದೆ ʻಚೆನ್ನೈ ಎಕ್ಸಪ್ರೆಸ್’ (Chennai Express) ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದ ನಟಿ ಮತ್ತೆ ಶಾರುಖ್ ಜೊತೆ ನಟಿಸುವ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ.

    ಪ್ಯಾನ್ ಇಂಡಿಯಾ ನಟಿಯಾಗಿ ಪ್ರಿಯಾಮಣಿ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ನಟನೆಯ ‘ಜವಾನ್’ (Jawan) ಚಿತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಈ ಬಗ್ಗೆ ನಟಿ ಕೂಡ ಖುಷಿಯಿಂದ ರಿಯಾಕ್ಟ್ ಮಾಡಿದ್ದಾರೆ.‌ ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

    ಅಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಮಲ್ಟಿ ಸ್ಟಾರ್ಸ್ ನಟಿಸುತ್ತಿದ್ದಾರೆ. ಆ ಸಾಲಿಗೆ ಈಗ ಪ್ರಿಯಾಮಣಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ 1,2,3,4 ಎಂಬ ಹಾಡಿಗೆ ಶಾರುಖ್ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಈಗ ಮತ್ತೆ ಶಾರುಖ್- ಪ್ರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ‘ಜವಾನ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುತ್ತಿದ್ದೇನೆ ಎಂಬ ಬಗ್ಗೆ ಖುಷಿಯಿದೆ. ಈ ಚಿತ್ರವನ್ನು ಜನ ಯಾವಾಗ ನೋಡ್ತಾರೋ ಅಂತಾ ನಾನು ಕಾಯ್ತಿದ್ದೀನಿ. ಶಾರುಖ್ ಖಾನ್ (Sharukh Khan) ಜೊತೆ ಕೆಲಸ ಮಾಡುವುದು ಮ್ಯಾಜಿಕಲ್ ಅನುಭವ. ಅವರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದೇ ಖುಷಿಯ ವಿಚಾರ ಎಂದು ಮಾತನಾಡಿದ್ದಾರೆ.

    ನಾನು ಸೆಟ್‌ಗೆ ಬರುವಾಗ ಅವರಿಗೆ ನಾನು ನೆನಪಿರುತ್ತೇನಾ ಎಂಬ ಗೊಂದಲವಿತ್ತು. ಅವರು ನೆನಪಿಟ್ಟುಕೊಂಡು ಮಾತನಾಡಿದ ರೀತಿ ಖುಷಿಯಾಯ್ತು. ಈ ಹಿಂದೆ ಸಿನಿಮಾವೊಂದಕ್ಕಾಗಿ ಕೇವಲ ಒಂದು ಸಾಂಗ್‌ನಲ್ಲಿ ಶಾರುಖ್ ಜೊತೆ ನಟಿಸಿದ್ದೇ. ಈಗ ಮತ್ತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ. ಜವಾನ್‌ನಲ್ಲಿ ಪ್ರಿಯಾಮಣಿ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ನಟಿ ಗುಟ್ಟು ಬಿಟ್ಟು ಕೊಟ್ಟಿಲ್ಲ.

  • ಶಾರುಖ್ ಪುತ್ರನ ಡ್ರಗ್ಸ್ ಕೇಸಲ್ಲಿ ಲಂಚದ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ

    ಶಾರುಖ್ ಪುತ್ರನ ಡ್ರಗ್ಸ್ ಕೇಸಲ್ಲಿ ಲಂಚದ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ

    ಮುಂಬೈ: ನನಗೆ ಹಾಗೂ ನನ್ನ ಕುಟುಂಬಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬೆದರಿಕೆಗಳು ಬರುತ್ತಿವೆ ಎಂದು ಮುಂಬೈನ ಎನ್‍ಸಿಬಿ (Narcotics Control Bureau) ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.

    ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಅವರು, ನಕಲಿ ಟ್ವಿಟ್ಟರ್ ಖಾತೆಯ ಮೂಲಕ ಬೆದರಿಕೆಗಳು ಬರುತ್ತಿವೆ. ನನಗೆ ಹಾಗೂ ನನ್ನ ಕುಟುಂಬದ ಮೇಲೆ ದಾಳಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇವರ ದಯೆಯಿಂದ ನಾವು ಕೋರಮಂಡಲ್ ಎಕ್ಸ್‌ಪ್ರೆಸ್ ಹತ್ತಲಿಲ್ಲ – ಬೆಂಗಳೂರಿಗೆ ಬಂದಿಳಿದ ವಾಲಿಬಾಲ್ ಕೋಚ್ ಪ್ರತಿಕ್ರಿಯೆ

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ 25 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪವನ್ನು ವಾಂಖೆಡೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಿಬಿಐ (CBI) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರೊಂದಿಗೆ ಮಾತುಕತೆ ನಡೆಸಿ ಸಮೀರ್ ವಾಂಖೆಡೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಎನ್‍ಸಿಬಿ ಆರೋಪಿಸಿದೆ.

    ಆರೋಪಿಯ ಕುಟುಂಬದೊಂದಿಗೆ ವಾಂಖೆಡೆ ಮಾತನಾಡಿರುವುದು ಎನ್‍ಸಿಬಿಯ ನೀತಿ ನಿಯಮಗಳಿಗೆ ವಿರುದ್ಧವಾಗಿದೆ. ತನಿಖಾಧಿಕಾರಿಯು ಆರೋಪಿಯ ಕುಟುಂಬದೊಂದಿಗೆ ಮಾತನಾಡುವ ಅಗತ್ಯ ಏನಿತ್ತು? ಎಂದು ನ್ಯಾಯಾಲಯದಲ್ಲಿ ಸಿಬಿಐ ವಾದಿಸಿತ್ತು. ಅಲ್ಲದೆ ಶಾರುಖ್ ಖಾನ್ ಅವರೊಂದಿಗೆ ಸಂಪರ್ಕಿಸಿದ್ದ ಮೊಬೈಲ್ ನೀಡಲು ನಿರಾಕರಿಸಿದ್ದರು. ಅಧಿಕಾರಿಗಳಿಗೆ ಹೆದರಿಸುವ ಪ್ರಯತ್ನ ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ.

    ಸಿಬಿಐ ಕ್ರಮದ ವಿರುದ್ಧ ವಾಂಖೆಡೆ ಬಾಂಬೆ ಹೈಕೋರ್ಟ್ (Bombay High Court) ಮೊರೆ ಹೋಗಿದ್ದರು. ಅಲ್ಲಿಂದ ಅವರಿಗೆ ಮೇ 22 ರ ವರೆಗೆ ಬಂಧಿಸದಂತೆ ಕೋರ್ಟ್ ರಕ್ಷಣೆ ನೀಡಿತ್ತು. ಬಳಿಕ ಕೋರ್ಟ್ ಜೂನ್ 8 ರವರೆಗೆ ಬಂಧಿಸದಂತೆ ವಿಸ್ತರಿಸಿದೆ. ಇದನ್ನೂ ಓದಿ: ಅರ್ಕೆಸ್ಟ್ರಾ ಹಾಡು ಬದಲಿಸುವ ವಿಚಾರಕ್ಕೆ ಗಲಾಟೆ – ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

  • ನನ್ನನ್ನು ಮದುವೆ ಆಗ್ತೀರಾ?: ಸಲ್ಮಾನ್ ಗೆ ಡೈರೆಕ್ಟ್ ಆಗಿ ಕೇಳಿದ ಪತ್ರಕರ್ತೆ

    ನನ್ನನ್ನು ಮದುವೆ ಆಗ್ತೀರಾ?: ಸಲ್ಮಾನ್ ಗೆ ಡೈರೆಕ್ಟ್ ಆಗಿ ಕೇಳಿದ ಪತ್ರಕರ್ತೆ

    ಬಾಲಿವುಡ್ (Bollywood) ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ಮದುವೆ ಮೇಲೆಯೇ ಎಲ್ಲರದ್ದೂ ಕಣ್ಣು. ವಯಸ್ಸು ಐವತ್ತಾದರೂ ಇನ್ನೂ ಮದುವೆ (Marriage) ಬಗ್ಗೆ ಪ್ರಶ್ನೆ ಮಾಡುವುದನ್ನು ಮತ್ತು ಪ್ರಪೋಸ್ ಮಾಡುವುದನ್ನು ಬಿಟ್ಟಿಲ್ಲ. ಸಲ್ಲು ಎದುರಾದಾಗೊಮ್ಮೆ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಯಾರು ಅತೀ ಹೆಚ್ಚು ಬಾರಿ ಸಲ್ಲುವನ್ನು ‘ಮದುವೆ ಯಾವಾಗ?’ ಎಂದು ಕೇಳುತ್ತಿದ್ದರೋ, ಅವರೇ ಇಂದು ಮದುವೆ ಆಗುತ್ತೀಯಾ? ಎಂದು ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    salman

    ಇತ್ತೀಚೆಗಷ್ಟೇ ಸಿನಿಮಾವೊಂದರ ಪ್ರಚಾರದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಅವರನ್ನು ಹಾಲಿವುಡ್ ಪತ್ರಕರ್ತೆಯೊಬ್ಬರು (Journalist) ನೇರವಾಗಿ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ‘ನಾನು ಹಾಲಿವುಡ್ (Hollywood) ನಿಂದ ಬಂದಿದ್ದೇನೆ. ನಿಮ್ಮನ್ನು ನೋಡಿದ ತಕ್ಷಣ ಫಿದಾ ಆದೆ. ನನ್ನನ್ನು ಮದುವೆ ಆಗುತ್ತೀರಾ? ಎಂದು ಕೇಳಿದ್ದಾರೆ. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

    ಪತ್ರಕರ್ತೆಯ ಮಾತಿಗೆ ನಗುತ್ತಲೇ ಉತ್ತರಿಸಿರುವ ಸಲ್ಮಾನ್ ಖಾನ್, ‘ನೀವು ಶಾರುಖ್ ಖಾನ್ (Shahrukh Khan) ಬಗ್ಗೆ ಹೇಳ್ತಾ ಇದ್ದೀರಿ. ಕನ್ಫ್ಯೂಸ್ ಮಾಡಿಕೊಂಡಿದ್ದೀರಿ’ ಎಂದು ಉತ್ತರಿಸುತ್ತಾರೆ. ‘ಇಲ್ಲ ನಾನು ನಿಮ್ಮನ್ನೇ ಕೇಳ್ತಾ ಇರೋದು. ಸಖತ್ ಹ್ಯಾಂಡ್ ಸಮ್ ಆಗಿದ್ದೀರಿ. ನೀವು ಒಪ್ಪಿದರೆ ನಾನು ಮದುವೆ ಆಗಲು ತಯಾರು’ ಎಂದು ಮತ್ತೆ ಪತ್ರಕರ್ತೆ ಮರು ಪ್ರಶ್ನೆ ಮಾಡುತ್ತಾರೆ.

    ಪತ್ರಕರ್ತೆಯ ಮಾತಿಗೆ ಮತ್ತೆ ಉತ್ತರಿಸುವ ಸಲ್ಮಾನ್, ‘ನೀವು ಇಪ್ಪತ್ತು ವರ್ಷಗಳ ಹಿಂದೆ ಬಂದು ಕೇಳಿದ್ದರೆ ಒಪ್ಪಬಹುದಿತ್ತು. ನನಗೀಗ ಮದುವೆ ಕಾಲ ಮುಗಿದಿದೆ. ತಡವಾಗಿದೆ’ ಎಂದು ಮತ್ತೆ ತಮಾಷೆ ಮಾಡುತ್ತಲೇ ಉತ್ತರಿಸುತ್ತಾರೆ. ಒಂದು ರೀತಿಯಲ್ಲಿ ಇಬ್ಬರ ಮಾತು ಪ್ರತಿಮಾತುಗಳು ಸಖತ್ ತಮಾಷೆಯನ್ನು  ನೀಡಿವೆ.

  • ಸಿನಿಮಾ ನಿರ್ಮಾಣ ಸಂಸ್ಥೆಯ ಬಳಿಕ ಹೊಸ ಉದ್ಯಮದತ್ತ ನಟಿ ನಯನತಾರಾ

    ಸಿನಿಮಾ ನಿರ್ಮಾಣ ಸಂಸ್ಥೆಯ ಬಳಿಕ ಹೊಸ ಉದ್ಯಮದತ್ತ ನಟಿ ನಯನತಾರಾ

    ಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ (Nayanatara) ಅವರು ಇದೀಗ ಹೊಸ ಹೆಜ್ಜೆ ಇಟ್ಟಿದ್ದಾರೆ. 56 ವರ್ಷ ಹಳೆಯ ಚಿತ್ರಮಂದಿರವೊಂದನ್ನ ನಟಿ ನಯನತಾರಾ ಖರೀದಿಸಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ, ಸ್ಕಿನ್‌ ಕೇರ್‌ ಬ್ಯುಸಿನೆಸ್‌ ಬಳಿಕ ಚೆನ್ನೈನ ಹಳೆಯ ಚಿತ್ರಮಂದಿರವನ್ನ (Theatre) ಖರೀದಿಸಿದ್ದಾರೆ.

    ನಯನತಾರಾ ಸದ್ಯ ಸಿನಿಮಾ ಜೊತೆಗೆ ಇಬ್ಬರೂ ಮುದ್ದಾದ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕಿಂಗ್ ಖಾನ್ ಶಾರುಖ್ ಖಾನ್‌ಗೆ (Sharukh Khanನಯನತಾರಾ ನಾಯಕಿಯಾಗುವ ಮೂಲಕ ಬಾಲಿವುಡ್‌ಗೆ (Bollywood) ಲಗ್ಗೆ ಇಟ್ಟಿದ್ದಾರೆ.

    ನಯನಾತಾರ ತಮ್ಮ ಪತಿ ವಿಘ್ನೇಶ್ ಶಿವನ್ (Vignesh Shivan) ಅವರೊಂದಿಗೆ ಉತ್ತರ ಚೆನ್ನೈನಲ್ಲಿರುವ ಅಗಸ್ತ್ಯ ಥಿಯೇಟರ್ ಅನ್ನು ತಮ್ಮ ನಿರ್ಮಾಣ ಕಂಪನಿ ರೌಡಿ ಪಿಕ್ಚರ್ಸ್ ಅಡಿಯಲ್ಲಿ ಖರೀದಿಸಿದ್ದಾರೆ. ಇದು ಲೇಡಿ ಸೂಪರ್ ಸ್ಟಾರ್ ಚೆನ್ನೈನಲ್ಲಿ ಖರೀದಿಸಿದ ಮೊದಲ ಆಸ್ತಿಯಾಗಿದೆ. ಅಗಸ್ತ್ಯ ಥಿಯೇಟರ್ ಮುಚ್ಚಿಹೋಗಿ ವರ್ಷಗಳೇ ಆಗಿತ್ತು. ಸುಮಾರು 56 ವರ್ಷಗಳ ಹಳೆಯ ಚಿತ್ರಮಂದಿರ ಇದಾಗಿದೆ. ಸದ್ಯ ನಯನತಾರಾ ತೆಕ್ಕೆಗೆ ಬಂದಿದೆ. ಇದನ್ನೂ ಓದಿ:ದಿ ಕೇರಳ ಸ್ಟೋರಿ: ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದ ನಟಿಗೆ ಕೊಲೆ ಬೆದರಿಕೆ

    ನಯನತಾರಾ ಸ್ಟಾರ್ ನಾಯಕಿಯಾಗಿ ನಟಿಸುವುದರ ನಡೆಸುವುದರ ಜೊತೆಗೆ ಹಲವಾರು ಬ್ಯುಸಿನೆಸ್ ಮಾಡುತ್ತಿದ್ದಾರೆ. ಈಗ ಥಿಯೇಟರ್ ವ್ಯವಹಾರಕ್ಕೆ ಇಳಿದಿದ್ದಾರೆ. ದೇವಿ ಥಿಯೇಟರ್ ಗ್ರೂಪ್ ಒಡೆತನದ ಅಗಸ್ತ್ಯ ಥಿಯೇಟರ್ 1967ರಿಂದ ಉತ್ತರ ಚೆನ್ನೈ ಪ್ರದೇಶದಲ್ಲಿ ಕಾರ್ಯನಿರ್ವಹಿಸಿತು. ಎಂಜಿಆರ್, ಶಿವಾಜಿ ಗಣೇಶನ್‌ರಿಂದ ರಜಿನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ವಿಜಯ್‌ವರೆಗೆ ತಮಿಳು ಚಿತ್ರರಂಗದ ದಿಗ್ಗಜರ ಸಿನಿಮಾಗಳು ಈ ಚಿತ್ರಮಂದಿರ ಪ್ರದರ್ಶಿಸಿದೆ.

  • ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ವೃತ್ತಿ ಬದುಕಿಗೆ ಸಾಥ್ ನೀಡಿದ ಚಿತ್ರದ ಸರಣಿಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಈ ಹಿಂದೆ ಡಾನ್, ಡಾನ್ 2 ಸರಣಿಯಲ್ಲಿ ನಟಿಸಿದ್ದರು. ಇದೀಗ ಡಾನ್ 3 ಸಿನಿಮಾ ಮಾಡಲು ನಿರ್ದೇಶಕ ಫರ್ಹಾನ್ ಅಖ್ತರ್ ಸಿದ್ಧತೆ ಮಾಡಿಕೊಂಡಿದ್ದು, ಈ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

    ಇತ್ತೀಚೆಗಷ್ಟೇ ರಿತೇಶ್ ಮಾತನಾಡುತ್ತಾ ತಮ್ಮ ಎಕ್ಸೆಲ್ ಎಂಟರ್ ಟೇನ್ಮೆಂಟ್ ನಿರ್ಮಾಣ ಸಂಸ್ಥೆಯಿಂದ ಡಾನ್ 3 ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಫರ್ಹಾನ್ ಈಗಾಗಲೇ ಆ ಸಿನಿಮಾದ ತಯಾರಿ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿಯೂ ತಿಳಿಸಿದ್ದರು. ಸದ್ಯ ಸಿಗುತ್ತಿರುವ ಮಾಹಿತಿಯ ಪ್ರಕಾರ ಶಾರುಖ್ ಖಾನ್ ಈ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಡಾನ್ 3 ಸಿನಿಮಾದ ಕಥೆಯು ಶಾರುಖ್ ಖಾನ್ ಗೆ ಇಷ್ಟವಾಗಿಲ್ಲವಂತೆ. ಅಲ್ಲದೇ, ಮತ್ತದೆ ಗಿಮಿಕ್ ಮಾಡುವಂತಹ ಸಿನಿಮಾದಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರಂತೆ. ಜೊತೆಗೆ ಸಂಭಾವನೆ ವಿಚಾರದಲ್ಲೂ ಕಿರಿಕ್ ಆಗಿದೆ ಎಂದು ಹೇಳಲಾಗುತ್ತಿದೆ. ಡಾನ್ 3 ಸಿನಿಮಾ ಮಾಡಿದರೆ ಲಾಭದಲ್ಲಿ ಪರ್ಸಂಟೇಜ್ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  • ದಕ್ಷಿಣದ ತಾರೆಯರನ್ನು ಹಾಡಿಹೊಗಳಿದ ಶಾರುಖ್ ಖಾನ್

    ದಕ್ಷಿಣದ ತಾರೆಯರನ್ನು ಹಾಡಿಹೊಗಳಿದ ಶಾರುಖ್ ಖಾನ್

    ಠಾಣ್ ಚಿತ್ರದ ದೊಡ್ಡ ಯಶಸ್ಸಿನ ನಂತರ ಶಾರುಖ್ ಖಾನ್, ‘ಜವಾನ್’ (Jawaan) ಎಂಬ ಇನ್ನೊಂದು ಆಕ್ಷನ್ ಪ್ಯಾಕ್ಡ್ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಜವಾನ್ ಚಿತ್ರವನ್ನು ತಮಿಳಿನಲ್ಲಿ ಮಾಸ್ ಚಿತ್ರಗಳಿಗೆ ಹೆಸರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು, ಬಹಳ ಕುತೂಹಲದಿಂದ ಕಾಯುತ್ತಿರುವ ಈ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ, ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯ ಪೋಸ್ಟರ್ ಬಿಡುಗಡೆಯಾಗಿದೆ.

    ಜವಾನ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ಶಾರುಖ್ ಖಾನ್ (Shah Rukh Khan) ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಆಸ್ಕ್ ಎಸ್ಆರ್ಕೆ ಎಂಬ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಜವಾನ್ ಚಿತ್ರದ ಬಿಡುಗಡೆ ತಡವಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಒಂದೊಳ್ಳೆಯ ಚಿತ್ರ ಕೊಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಪ್ರತಿಯೊಬ್ಬರೂ ಬ್ರೇಕ್ ತೆಗೆದುಕೊಳ್ಳದೆ ಕಷ್ಟಪಟ್ಟು ಮತ್ತು ತಮ್ಮ ಶಕ್ತಿಮೀರಿ ದುಡಿದಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ಚಿತ್ರ ಬಹಳ ಚೆನ್ನಾಗಿ ಬಂದಿದೆ. ಚಿತ್ರ ಸ್ವಲ್ಪ ನಿಧಾನವಾದರೂ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಶಾರುಖ್.

    ತಮ್ಮ ಮಟ್ಟಿಗೆ ಇದೊಂದು ಹೊಸ ಜಾನರ್ ನ ಚಿತ್ರ ಎಂದಿರುವ ಶಾರುಖ್, ‘ಈ ಚಿತ್ರ ನಾನು ಒಪ್ಪಿಕೊಳ್ಳಲು ಕಾರಣವೇನು ಎಂದು ಬಹಳಷ್ಟು ಜನ ಕೇಳಿದ್ದಾರೆ. ಪ್ರಮುಖವಾಗಿ, ಈ ಮಾದರಿಯ ಚಿತ್ರ ನನಗೆ ಬಹಳ ಹೊಸದು. ಇನ್ನು, ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಅಟ್ಲಿ (Atlee) ಮತ್ತು ಅವರ ತಂಡ ಸಹ ಪ್ರಮುಖ ಕಾರಣ. ಕ್ಲಾಸ್ ಮತ್ತು ಮಾಸ್ ಅಂಶಗಳನ್ನು ಬೆರೆಸಿ ಕಥೆ ಹೇಳುವ ಅಟ್ಲಿ ಅವರ ಶೈಲಿ ನನಗೆ ಬಹಳ ಇಷ್ಟವಾಯ್ತು. ಈ ಎಲ್ಲ ಕಾರಣಗಳಿಂದ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಎಂದು ಉತ್ತರಿಸಿದ್ದಾರೆ ಶಾರುಖ್.

    ಇತ್ತೀಚೆಗೆ ಬಿಡುಗಡೆಯಾದ ಹೊಸ ಪೋಸ್ಟರ್ನಲ್ಲಿ ಶಾರುಖ್ ಮುಖ ಕಾಣುವುದೇ ಇಲ್ಲ. ಪೋಸ್ಟರ್ ನಿಂದ ಶಾರುಖ್ ಅವರನ್ನು ಚಿತ್ರತಂಡ ದೂರ ಇಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಚಿತ್ರಮಂದಿರಕ್ಕೆ ಜನರನ್ನು ಸೆಳೆಯಲು ನನ್ನ ಮುಖಕ್ಕಿಂತ ಹೆಸರೇ ಸಾಕು ಎಂದು ನಿರ್ಮಾಪಕರಿಗೆ ಅನಿಸಿರಬಹುದು. ಹಾಗಾಗಿ, ಪೋಸ್ಟರ್ ನಲ್ಲಿ ನನ್ನ ಮುಖ ತೋರಿಸಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: The Kerala Story ಬಂದ್ಮೇಲೆ ಇಸ್ಲಾಂಗೆ 32 ಸಾವಿರ ಮಹಿಳೆಯರ ಮತಾಂತರ – ಗಂಭೀರ ಆರೋಪ

    ತಮ್ಮ ಸಹನಟರಾದ ನಯನತಾರಾ ಮತ್ತು ವಿಜಯ್ ಸೇತುಪತಿ ಅವರನ್ನು ಹಾಡಿಹೊಗಳಿರುವ ಕಿಂಗ್ ಖಾನ್, ‘ನಯನತಾರಾ (Nayanthara) ಒಬ್ಬ ಅದ್ಭುತ ನಟಿ. ಅವರೊಂದಿಗೆ ಕೆಲಸ ಮಾಡಿದ್ದು ಬಹಳ ಖುಷಿ ನೀಡಿತು. ಇನ್ನು, ವಿಜಯ್ ಸೇತುಪತಿ (Vijay Sethupathi) ಬಹಳ ಒಳ್ಳೆಯ ಮನುಷ್ಯ. ಒಬ್ಬ ಪ್ರತಿಭಾವಂತ ನಟ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎಂದು ಹೇಳಿದ್ದಾರೆ.

    ತಮಿಳು ನಿರ್ದೇಶಕರು ಮತ್ತು ತಮಿಳು ತಂತ್ರಜ್ಞರ ಜೊತೆಗೆ ಕೆಲಸ ಮಾಡಿದ್ದರಿಂದ ತಮಿಳು ಕಲಿಯುವ ಅವಕಾಶವೇನಾದರೂ ಸಿಕ್ಕಿತಾ ಎಂದರೆ, ‘ಅಟ್ಲಿ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್, ಹಾಡಿನ ಕೆಲವು ತಮಿಳು ಸಾಲುಗಳಿಗೆ ಲಿಪ್ ಸಿಂಕ್ ಮಾಡಿಸಿದರು. ಅದು ಸರಿಯಾಗಿ ಬಂದಿದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ. ಜವಾನ್ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಶಾರುಖ್ ಪತ್ನಿ ಗೌರಿ ಖಾನ್ ನಿರ್ಮಿಸಿದ್ದಾರೆ.

  • ಶಾರುಖ್ ಖಾನ್ ನಟನೆ ‘ಜವಾನ್’ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಶಾರುಖ್ ಖಾನ್ ನಟನೆ ‘ಜವಾನ್’ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ನಟನೆ ‘ಜವಾನ್’ (Jawaan) ಸಿನಿಮಾ ಮೇಲೆ ಚಿತ್ರರಸಿಕರ ಚಿತ್ತ ನೆಟ್ಟಿದೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲೀ (Atlee) ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಈ ಚಿತ್ರ ಸೆಪ್ಟಂಬರ್ 7ಕ್ಕೆ ವಿಶ್ವಾದ್ಯಂತ ದರ್ಶನ ಕೊಡಲಿದೆ.

    ಜವಾನ್ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ (Release) ಎನ್ನಲಾಗುತ್ತಿತ್ತು. ಇದೀಗ ಚಿತ್ರತಂಡ ಅಂತಿಮ ದಿನಾಂಕ ಘೋಷಿಸಿದ್ದು, ಎಸ್ ಆರ್ ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಪಕ್ಕ ಆಕ್ಷನ್ ಪ್ಯಾಕ್ಡ್ ಸಿನಿಮಾವಾಗಿರುವ ಜವಾನ್ ನಲ್ಲಿ ದಕ್ಷಿಣ ಭಾರತದ ಸಿನಿತಾರೆಯರ ದಂಡೇ ಇದೆ. ಇದನ್ನೂ ಓದಿ:ನಾನೇಕೆ ಡಿವೋರ್ಸ್ ಫೋಟೋಶೂಟ್ ಮಾಡಿಸಿದೆ?: ನಟಿ ಶಾಲಿನಿ ಬಿಚ್ಚಿಟ್ಟ ರಹಸ್ಯ

    ಶಾರುಖ್ ಗೆ ಮೊದಲ ಬಾರಿಗೆ ಜೋಡಿಯಾಗಿ ಲೇಡಿ ಸೂಪರ್ ಸ್ಟಾರ್ ನಯನ ತಾರಾ (Nayanthara) ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ (Vijay Sethupathi), ಯೋಗಿಬಾಬು ಸೇರಿದಂತೆ ಹಲವರು ಬಣ್ಣ ಹಚ್ಚಿರುವ ಈ ಸಿನಿಮಾವನ್ನು ಗೌರಿ ಖಾನ್ ನಿರ್ಮಾಣ ಮಾಡಿದ್ದಾರೆ.

    ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್  ಎಂಟರ್ ಟೈನ್ಮೆಂಟ್ ನಡಿ ಬರ್ತಿರುವ ಜವಾನ್ ಸಿನಿಮಾ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮಾತ್ರ ರಿಲೀಸ್ ಆಗ್ತಿದೆ.  ಕಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಅಟ್ಲಿ ಮೊದಲ ಬಾರಿಗೆ ಬಾಲಿವುಡ್ ಬಾದ್ ಷಾ ಶಾರುಖ್ ಗೆ ಆಕ್ಷನ್ ಕಟ್ ಹೇಳಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ವಿವಿಧ ದೇಶದಲ್ಲಿ ಚಿತ್ರೀಕರಣ ನಡೆಸುತ್ತಿರುವ ಜವಾನ್ ಸಿನಿಬಳಗ ಶೀಘ್ರದಲ್ಲಿಯೇ ಟೀಸರ್ ಬಿಡುಗಡೆಗೆ ಪ್ಲ್ಯಾನ್ ನಡೆಸುತ್ತಿದೆ.

  • ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್- ನಟನ ವರ್ತನೆಗೆ ಫ್ಯಾನ್ಸ್ ಕಿಡಿ

    ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್- ನಟನ ವರ್ತನೆಗೆ ಫ್ಯಾನ್ಸ್ ಕಿಡಿ

    ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಈ ವರ್ಷದ ಆರಂಭದಲ್ಲಿಯೇ ‘ಪಠಾಣ್’ (Pathaan) ಸಿನಿಮಾಗೆ ಬಿಗ್ ಓಪನಿಂಗ್ಸ್ ಸಿಕ್ತು. ಚಿತ್ರದ ಸಕ್ಸಸ್ ಖುಷಿಯಲ್ಲಿ ಶಾರುಖ್ ತೇಲುತ್ತಿದ್ದಾರೆ. ಹೀಗಿರುವಾಗ ‘ಪಠಾಣ್’ ಸ್ಟಾರ್ ಶಾರುಖ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ತಳ್ಳಿದ ಶಾರುಖ್ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ.

    ಸಿದ್ಧಾರ್ಥ್ ಆನಂದ್ (Siddarth Anand) ನಿರ್ದೇಶನದ ‘ಪಠಾಣ್’ ಚಿತ್ರ ಈ ವರ್ಷ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗೆದ್ದು ಬೀಗಿದೆ. ಶಾರುಖ್- ದೀಪಿಕಾ ಪಡುಕೋಣೆ (Deepika Padukone) ಜೋಡಿ, ಸಿನಿಮಾ ಕಥೆ, ಆ್ಯಕ್ಷನ್ ಎಲ್ಲವೂ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಈ ಚಿತ್ರದ ಸಕ್ಸಸ್‌ ಶಾರುಖ್‌ ವರ್ತನೆಗೆ ಫ್ಯಾನ್ಸ್‌ ಕಿಡಿಕಾರಿದ್ದಾರೆ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

    ‘ಡುಂಕಿ'(Dunki) ಸಿನಿಮಾದ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ತೆರಳಿದ್ದ ಶಾರುಖ್ ಮುಂಬೈಗೆ (Mumbai) ವಾಪಸ್ ಆಗಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮ್ಯಾನೆಜರ್ ಪೂಜಾ (Pooja)  ಶಾರುಖ್ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಶಾರುಖ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಶಾರುಖ್‌ಗೆ ಕೋಪ ಬಂದಿದೆ. ಮೊಬೈಲ್ ಹಿಡಿದು ತಮ್ಮ ಕಡೆ ಬಂದ ಅಭಿಮಾನಿಯನ್ನು ಶಾರುಖ್ ತಳ್ಳಿದ್ದಾರೆ. ಅಲ್ಲದೇ ಒಂದು ಕ್ಷಣ ಹಿಂದಕ್ಕೆ ತಿರುಗಿ ನೋಡಿದ್ದಾರೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಈ ವೀಡಿಯೋ ಸೆರೆಯಾಗಿದೆ.

     

    View this post on Instagram

     

    A post shared by @varindertchawla

    ಅಭಿಮಾನಿಯನ್ನು ತಳ್ಳಿರೋದ್ದಕ್ಕೆ ಶಾರುಖ್ ವಿರುದ್ಧ ಫ್ಯಾನ್ಸ್ ಕಿಡಿಕಾರಿದ್ದಾರೆ. ‘ಪಠಾಣ್’ ಸಕ್ಸಸ್ ಆಗಿದ್ದಕ್ಕೆ ಶಾರುಖ್‌ಗೆ ಸೊಕ್ಕು ಬಂದಿದೆ. ಸಿನಿಮಾ ಮಾಡುವಾಗ ಫ್ಯಾನ್ಸ್ ಬೇಕು, ಸಿನಿಮಾ ಗೆದ್ದರೆ ಫ್ಯಾನ್ಸ್ ಬೇಡ ಎಂದರೆ ಹೇಗೆ ಎಂದು ಶಾರುಖ್‌ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

  • ಕಾಶ್ಮೀರದಿಂದ ಶುರುವಾಯ್ತು ಶಾರುಖ್ ನಟನೆಯ ‘ಡಂಕಿ’ ಚಿತ್ರ

    ಕಾಶ್ಮೀರದಿಂದ ಶುರುವಾಯ್ತು ಶಾರುಖ್ ನಟನೆಯ ‘ಡಂಕಿ’ ಚಿತ್ರ

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಶಾರುಖ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹೆಸರಾಂತ ನಿರ್ದೇಶಕ ರಾಜ್ ಕುಮಾರ್ ಹಿರಾನಿ (Raj Kumar Hirani) ನಿರ್ದೇಶನದಲ್ಲಿ ತಯಾರಾಗುತ್ತಿರುವ ಡಂಕಿ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ.

    ಡಂಕಿ ಸಿನಿಮಾವನ್ನು ನಿರ್ದೇಶಕರು ಕಾಶ್ಮೀರದಿಂದ (Kashmir) ಶುರು ಮಾಡಿದ್ದಾರೆ. ಈ ಭಾಗದ ಚಿತ್ರೀಕರಣಕ್ಕಾಗಿ ಶಾರುಖ್ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದಾರೆ. ಕಾಶ್ಮೀರದಲ್ಲಿ ತಮ್ಮ ನೆಚ್ಚಿನ ನಟ ಶಾರುಖ್ ಶೂಟಿಂಗ್ ನಲ್ಲಿ ಪಾಲ್ಗೊಂಡ ವಿಡಿಯೋವನ್ನು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಹನ್ನೊಂದು ವರ್ಷದ ನಂತರ ಶಾರುಖ್ ಸಿನಿಮಾ ಕಾಶ್ಮೀರದಲ್ಲಿ ಚಿತ್ರೀಕರಣವಾಗುತ್ತಿದ್ದು,  ಈ ಹಿಂದೆ ಜಬ್ ತಕ್ ಹೈ ಜಾನ್ ಸಿನಿಮಾದ ಶೂಟಿಂಗ್ ಅದೇ ಸ್ಥಳದಲ್ಲೇ ನಡೆದಿತ್ತು ಎಂದು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಬರೋಬ್ಬರಿ 11 ವರ್ಷಗಳ ಬಳಿಕ ಆ ನೆಲದಲ್ಲಿ ಶಾರುಖ್ ಕಾಲಿಟ್ಟಿರುವುದು ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಡಂಕಿ ಸಿನಿಮಾದಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು(Taapsee Pannu) ಮತ್ತು ವಿಕ್ಕಿ ಕೌಶಲ್ (Vicky Kaushal) ನಟಿಸಿದ್ದು, ಸದ್ಯ ಕಾಶ್ಮೀರದ ಸೋನ್ ಮಾರ್ಗ್ ಪ್ರದೇಶದಲ್ಲಿ ಮಾತಿನ ಭಾಗದ ಚಿತ್ರೀಕರಣವನ್ನು ಮಾಡುತ್ತಿದ್ದಾರಂತೆ ನಿರ್ದೇಶಕ ರಾಜಕುಮಾರ್ ಹಿರಾನಿ.