Tag: ಶಾರದಾಂಬೆ ದೇವಾಲಯ

  • ಕಾರ್‌ನಿಂದ ಇಳಿದು ಶಾಲಾ ಮಕ್ಕಳಿಗೆ ವಿಶ್ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

    ಕಾರ್‌ನಿಂದ ಇಳಿದು ಶಾಲಾ ಮಕ್ಕಳಿಗೆ ವಿಶ್ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

    ಚಿಕ್ಕಮಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿಯಲ್ಲಿ ಕಾರಿನಿಂದ ಕೆಳಗಿಳಿದು ಮಕ್ಕಳಿಗೆ ವಿಶ್ ಮಾಡಿದ್ದಾರೆ. ಅವರು ಇಂದು ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡಿದ್ದಾರೆ.

    ಬೆಳಗ್ಗೆ 11 ಗಂಟೆಗೆ ಶೃಂಗೇರಿ ದೇವಸ್ಥಾನಕ್ಕೆ ಬಂದ ಅವರು ಸಂಜೆ ನಾಲ್ಕು ಗಂಟೆವರೆಗೂ ಮಠದಲ್ಲೇ ಇದ್ದರು. 11 ಗಂಟೆಗೆ ದೇವಾಲಯದ ಆವರಣಕ್ಕೆ ಬಂದ ರಾಷ್ಟ್ರಪತಿಗಳು ಶೃಂಗೇರಿಶಾರದಾಂಬೆ ದರ್ಶನ ಪಡೆದು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶೃಂಗೇರಿ ಮಠದ ಜಗದ್ಗುರುಗಳಾದ ಭಾರತೀ ತೀರ್ಥ ಶ್ರೀಗಳು ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದರು. ಸುಮಾರು ಅರ್ಧ ಗಂಟೆಗಳ ಕಾಲ ಶ್ರೀಗಳ ಜೊತೆ ಮಾತುಕತೆ ನಡೆಸಿದರು. ಇದನ್ನೂ ಓದಿ:  ಗೋಕರ್ಣದಲ್ಲಿ ಪೂಜೆ, ದಕ್ಷಿಣೆ ಕಾಸಿಗಾಗಿ ಜಗಳ – ಕೊನೆಗೂ ಭಕ್ತರಿಗೆ ಅವಕಾಶ, ಅರ್ಚಕರಿಗೆ ಶಾಕ್‌

    ಈ ವೇಳೆ, ರಾಷ್ಟ್ರಪತಿಗೆ ಶಾಲು ಹೊದಿಸಿ, ಸನ್ಮಾನಿಸಿ ಶಂಕರಾಚಾರ್ಯರ ವಿಗ್ರಹ, ಫಲ ಮಂತ್ರಾಕ್ಷತೆ ಮತ್ತು ಬೆಳ್ಳಿಯ ಪದಕವನ್ನ ರಾಷ್ಟ್ರಪತಿ ಅವರಿಗೆ ನೀಡಲಾಯಿತು. ಮಧ್ಯಾಹ್ನ ಮಠದಲ್ಲೇ ಊಟ ಮಾಡಿದ ರಾಷ್ಟ್ರಪತಿ ಅವರಿಗೆ ಚಪಾತಿ ಅನ್ನ, ತಿಳಿಸಾರು, ಸಾಂಬಾರು, ಹುಳಿತೊವೆ, ಮಜ್ಜಿಗೆ ಹುಳಿ, ಎರಡು ತರಹದ ಕೋಸಂಬರಿ, ಎರಡು ರೀತಿಯ ಪಲ್ಯ, ಚಿಪ್ಸ್, ಮಿಕ್ಸರ್,ಡ್ರೈ ಜಾಮೂನು, ಗೋಡಂಬಿ ಬರ್ಫಿಯನ್ನ ಸಿದ್ಧಪಡಿಸಲಾಗಿತ್ತು. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್

    ರಾಷ್ಟ್ರಪತಿ ಅವರು ಭೇಟಿ ಹಿನ್ನೆಲೆ ಶೃಂಗೇರಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಸುಮಾರು 800-1000 ಪೊಲೀಸರು ಶೃಂಗೇರಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಹೆಲಿಪ್ಯಾಡ್ ನಿಂದ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ನಾಯಿ, ದನಕರುಗಳು ರಸ್ತೆಯಲ್ಲಿ ಅಡ್ಡ ಸಂಚರಿಸದಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪತ್ನಿ, ಪುತ್ರಿ ಜೊತೆ ಬಂದಿದ್ದ ರಾಮನಾಥ್ ಕೋವಿಂದ್ ಅವರು ಶಾರದಾಂಬೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ

    ಶಾರದಾಂಬೆ ದರ್ಶನದ ಬಳಿಕ ಶಕ್ತಿಗಣಪತಿಯ ದರ್ಶನ ಪಡೆದರು. ರಾಷ್ಟ್ರಪತಿಯವರ ಆಗಮನದ ಹಿನ್ನೆಲೆ ಇಂದು ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ನಿಬರ್ಂಧಿಸಲಾಗಿತ್ತು. ಶಾರದಾಂಭೆ ದರ್ಶನಕ್ಕೆ ಬಂದ ನೂರಾರು ಜನ ಹೊರಗಡೆಯೇ ಕಾಯುವಂತಾಗಿತ್ತು. ಮತ್ತೊಂದೆಡೆ ಅವರನ್ನ ನೋಡಲೆಂದೇ ದೇವಸ್ಥಾನದ ಎದುರು ಜನ ಜಾತಕಪಕ್ಷಿಗಳಂತೆ ಕಾಯುತ್ತಿದ್ದರು. ಇದನ್ನೂ ಓದಿ:  ನನಗೆ ಅಕ್ರಮ ಸಂಬಂಧ ಇಲ್ಲ- ಟ್ರೋಲಿಗರ ವಿರುದ್ಧ ಕುಟುಕಿದ ಸಮಂತಾ

    ಸಂಜೆ ದೇವಸ್ಥಾನದಿಂದ ಹಿಂದಿರುಗುವಾಗ ನೆರೆದಿದ್ದ ಜನ ಸಾಮಾನ್ಯರತ್ತ ಕೈ ಬೀಸಿ ಹೊರಟರು. ಹೆಲಿಪ್ಯಾಡ್‍ಗೆ ಹೋಗುವ ಮಾರ್ಗದಲ್ಲಿನ ಕುರುಬಗೇರೆ ಗ್ರಾಮದಲ್ಲಿ ಮಕ್ಕಳು ರಾಷ್ಟ್ರಪತಿಯನ್ನ ನೋಡಲು ಶಾಲಾ ಕಾಂಪೌಂಡ್ ಒಳಗೆ ಕಾಯುತ್ತಿದ್ದರು. ರಾಮನಾಥ್ ಕೋವಿಂದ್ ಅವರು ಕಾರಿನಿಂದ ಕೆಳಗಿಳಿದು ಮಕ್ಕಳಿಗೆ ವಿಶ್ ಮಾಡಿ ಹೊರಟಿದ್ದಾರೆ.

  • ಶಾರದಾಂಬೆ ದರ್ಶನ ಪಡೆದ ಡಿಕೆಶಿ- ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

    ಶಾರದಾಂಬೆ ದರ್ಶನ ಪಡೆದ ಡಿಕೆಶಿ- ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

    ಚಿಕ್ಕಮಗಳೂರು: ಜಾರಿ ನಿರ್ದೇಶನಾಲಯ(ಇಡಿ) ಪ್ರಕರಣದಿಂದ ಹೊರಬಂದ ಬಳಿಕ ಟೆಂಪಲ್ ರನ್ ಮಾಡುತ್ತಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಕುಟುಂಬದ ಜೊತೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ.

    ಡಿಕೆಶಿ ಅವರು ಪತ್ನಿ ಉಷಾ, ಪುತ್ರಿ ಐಶ್ವರ್ಯ ಜೊತೆ ಚಿಕ್ಕಮಗಳೂರಿನ ಶೃಂಗೇರಿಗೆ ಬಂದು ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಶಾರದಾಂಬೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಾಯಿಗೆ ನಮಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಯಾಗೇ ಮತ್ತೆ ಬರಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಅವರಿಗೆ ಶುಭಹಾರೈಸಿದ್ದಾರೆ. ಶಾರದಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಡಿಕೆಶಿ ಹಾಗೂ ಪತ್ನಿ, ಮಗಳು ಜಗದ್ಗುರುಗಳ ಆಶೀರ್ವಾದ ಪಡೆದಿದ್ದಾರೆ.

    ಡಿಕೆಶಿ ಶಾರದಾಂಬೆ ದೇವಾಲಯದ ಪ್ರದಕ್ಷಿಣೆ ಹಾಕುತ್ತಿದ್ದ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ‘ಸರ್ ನಂಗೊಂದು ಸೆಲ್ಫಿ, ನಂಗೊಂದು ಸೆಲ್ಫಿ’ ಅಂತ ಡಿಕೆಶಿ ಹಿಂದೆ ಅಭಿಮಾನಿಗಳು ಬಿದ್ದಿದ್ದರು. ಕೊನೆಗೆ ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳಲು ಡಿಕೆಶಿ ಅವಕಾಶ ಮಾಡಿಕೊಟ್ಟರು. ಈ ವೇಳೆ ಡಿಕೆಶಿ ಅವರಿಗೆ ಸ್ಥಳೀಯ ಶಾಸಕ ರಾಜೇಗೌಡ ಸಾಥ್ ನೀಡಿದ್ದರು.