Tag: ಶಾಮಿಯಾನ

  • ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ (Annapoorneshwari Police Station) ಶಾಮಿಯಾನ ಹಾಕಿದ್ದರ ಹಿಂದಿನ ನಿಜವಾದ ಕಾರಣ ರಿವೀಲ್ ಆಗಿದೆ.

    ನಟ ದರ್ಶನ್ (Challenging Star Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸಹಿತ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ 15 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲಿಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನಿನ್ನೆ (ಗುರುವಾರ) ಏಕಾಏಕಿ ಪೊಲೀಸ್ ಠಾಣೆಯ ಆವರಣದ ಗೋಡೆಗೆ ಶಾಮಿಯಾನ ಹಾಕಲಾಗಿತ್ತು. ಈ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಈ ಬೆನ್ನಲ್ಲೇ ಇದೀಗ ದರ್ಶನ್ & ಗ್ಯಾಂಗ್‍ಗೆ ವಿಐಪಿ ಟ್ರೀಟ್‍ಮೆಂಟ್ ಹಿಂದಿನ ಸೀಕ್ರೆಟ್ ಬಯಲಾಗಿದೆ. ಶಾಮಿಯಾನದ ಸೈಡ್ ವಾಲ್ ಹಾಕಿಸಿದ್ದು ನಟ ದರ್ಶನ್‍ಗಾಗಿಯೇ ಎಂಬುದು ಇದರ ಹಿಂದಿನ ಸತ್ಯವಾಗಿದೆ. ಪೊಲೀಸರ ಮುಂದೆ ದರ್ಶನ್ ಮನವಿ ಹಿನ್ನೆಲೆಯಲ್ಲಿ ಪೊಲೀಸರು ಈ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ದರ್ಶನ್ ಇರೋ ಪೊಲೀಸ್ ಠಾಣೆ ಬಳಿ 144 ಸೆಕ್ಷನ್- ವಾಹನ ಸವಾರರ ಪರದಾಟ

    ದರ್ಶನ್ ಹೇಳಿದ್ದೇನು..?: ಸಾರ್ ನನಗೆ ಒಂದೇ ಕಡೆ ಕುಳಿತು ಇರಲು ಆಗುತ್ತಿಲ್ಲ. ನಾನು ವಾಕ್ ಮಾಡಬೇಕು ನನ್ನ ಕೈಲಿ ಆಗ್ತಿಲ್ಲ. ನಾನು ಬಾಡಿ ರಿಲ್ಯಾಕ್ಸ್ ಮಾಡಬೇಕು. ಸಿಗರೇಟ್ ಇಲ್ಲವಾದ್ರೆ ನನಗೆ ಕೈ ನಡುಗುತ್ತೆ. ನೀವು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇದ್ದೀರಿ. ನಾನು ಎಷ್ಟು ಸಲ ಹೇಳಲಿ ನನಗೆ ಏನು ಗೊತ್ತಿಲ್ಲ ಅಂತಾ. ಪದೇ ಪದೇ ಅದೇ ಪ್ರಶ್ನೆ ಕೇಳ್ತೀರಿ ಎಂದು ಪೊಲೀಸರ ಮುಂದೆ ದರ್ಶನ್ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಠಾಣೆ ಒಳಗೆ ತಿರುಗಾಡಲು ಜಾಗ ಇಲ್ಲ ಅದಕ್ಕೆ ಸೈಡ್ ವಾಲ್ ಹಾಕಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

  • ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

    ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

    ಬೆಂಗಳೂರು: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್‌ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ ಪ್ರಸಂಗ ನಡೆದಿದೆ.

    ಹೌದು. ಚಿತ್ರದುರ್ಗದ ರೇಣುಕಾಸ್ವಾಮಿ (Renukaswamu Murder Case) ಕೊಲೆಗಡುಕರು ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ (Annapoorneshwari Police Station) ಶಾಮಿಯಾನ ಹೊದಿಸುವಂತೆ ಪೊಲೀಸ್‌ ಆಯುಕ್ತ ದಯಾನಂದ್‌ ಸೂಚನೆ ನೀಡಿದ್ದಾರೆ. ಅದರಂತೆ ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ. ಸದ್ಯ ಆಯುಕ್ತರು ಕೂಡ ಪೊಲೀಸ್‌ ಠಾಣೆಯಲ್ಲಿಯೇ ಇದ್ದಾರೆ. ಜೊತೆಗೆ ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ನಿನ್ನೆಯವರೆಗೆ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿದ್ದರು. ಈ ವೇಳೆ ಠಾಣೆ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಆದರೆ ಇಂದು ಅಭಿಮಾನಿಗಳು ಕೂಡ ಠಾಣೆಯತ್ತ ಸುಳಿದಿಲ್ಲ. ಆದರೂ ಠಾಣೆಯ ಕಾಂಪೌಂಡ್‌ಗೆ ಶಾಮಿಯಾನ ಕಟ್ಟಿದ್ದು, ಭಾರೀ ಅನುಮಾನ ಹುಟ್ಟಿಸಿದೆ. ಮೊನ್ನೆ ಆರೋಪಿಗಳಿಗೆ ಠಾಣೆ ಒಳಗೆ ಬಿರಿಯಾನಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಈ ಬೆನ್ನಲ್ಲೇ ಇಂದು ಶಾಮಿಯಾನದಿಂದ ಮುಚ್ಚಿರುವುದು ಠಾಣೆ ಒಳಗಡೆ ಆರೋಪಿಗಳಿಗೆ ರಾಜಮರ್ಯಾದೆ ಕೊಡಲಾಗುತ್ತಿದೆಯಾ..? ಇವುಗಳನ್ನು ಮಾಧ್ಯಮಗಳಿಂದ ಮುಚ್ಚಿಡಲು ಈ ರೀತಿ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

    ಸಾರ್ವಜನಿಕರಿಗೂ ಪ್ರವೇಶ ನಿರ್ಬಂಧಿಸಿ ಠಾಣೆ ಕ್ಲೋಸ್ ಮಾಡಲಾಗಿದೆ. ಇನ್ನೊಂದೆಡೆ ತುರ್ತು ವಿಚಾರಗಳಿಗೆ ಠಾಣೆಗೆ ಸಂಪರ್ಕ ಮಾಡಲು ಬಂದವರಿಗೂ ಪೊಲೀಸರು ಪ್ರತಿಕ್ರಿಯೆ ನೀಡುತ್ತಿಲ್ಲ. ಸಾರ್ವಜನಿಕ ಆಸ್ತಿಯಾಗಿರೋ ಪೊಲೀಸ್ ಠಾಣೆಗೆ ಸೈಡ್ ವಾಲ್ ಕಟ್ಟೋದೇನಿದೆ..!?, ಯಾರನ್ನ ಮೆಚ್ಚಿಸೋಕೆ ಪೊಲೀಸರು ಈ ಕೆಲಸ ಮಾಡುತ್ತಿದ್ದಾರೆ ಎಂಬ ಆಕ್ರೋಶದ ಪ್ರಶ್ನೆಗಳು ಎದ್ದಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್‌ ಹಾಗೂ ಮರ್ಡರ್‌ ಪ್ರಕರಣ ಸಂಬಂಧ ಇದೀಗ ಪೊಲೀಸರು ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Challenging Star Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ 14 ಮಂದಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳೆಲ್ಲರೂ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದು, ಇಂದು ಕೂಡ ಸ್ಥಳ ಮಹಜರು ಪ್ರಕ್ರಿಯೆ ನಡೆಯಲಿದೆ.

  • ವೇದಿಕೆ ತೆಗ್ದು ಹಾಕದಿದ್ರೆ ಅರಮನೆಯಿಂದ ಓಡಿಸ್ತೀನಿ: ಶಾಮಿಯಾನ ಮಾಲೀಕನಿಗೆ ಪ್ರತಾಪ್ ಸಿಂಹ ಅವಾಜ್

    ವೇದಿಕೆ ತೆಗ್ದು ಹಾಕದಿದ್ರೆ ಅರಮನೆಯಿಂದ ಓಡಿಸ್ತೀನಿ: ಶಾಮಿಯಾನ ಮಾಲೀಕನಿಗೆ ಪ್ರತಾಪ್ ಸಿಂಹ ಅವಾಜ್

    – ಪೊಲೀಸರ ಮೇಲೂ ಆಕ್ರೋಶ

    ಮೈಸೂರು: ದಸರಾ ಹೊಸ್ತಿಲಲ್ಲಿ ಮೈಸೂರಿನಲ್ಲಿ ಚಾಮುಂಡಿ ದಸರಾ ವರ್ಸಸ್ ಮಹಿಷ ದಸರಾ ಎಂಬ ಸೈದ್ಧಾಂತಿಕ ಸಮರ ಶುರುವಾಗಿದೆ. ಈ ಕಾರಣಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸರಿಗೆ ಸಂಸದ ಪ್ರತಾಪ್ ಸಿಂಹ ತರಾಟೆ ತೆಗೆದುಕೊಂಡಿದ್ದಾರೆ.

    ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ಬಗ್ಗೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪ್ರತಾಪ್ ಸಿಂಹ, ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಹಾಕುವಾಗ ನೀವು ಏನು ಮಾಡುತ್ತಿದ್ರಿ ಪೊಲೀಸರೇ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿದ್ದಾರೆ.

    ಆಗ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯಿತಿ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದರು. ದಸರಾ ಉತ್ಸವ ಕಾರ್ಯಕ್ರಮಗಳಿಗೆ ವೇದಿಕೆ ಹಾಕುವ ಶಾಮಿಯಾನ ಮಾಲೀಕ ಶಫಿ ನೇತೃತ್ವದಲ್ಲಿ ಈ ವೇದಿಕೆ ಹಾಕಲಾಗಿತ್ತು. ಹೀಗಾಗಿ ಕೂಡಲೇ ಟ್ರಕ್ ತಂದು ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸುತ್ತೇನೆಂದು ಶಾಮಿಯಾನ ಮಾಲೀಕರಿಗೆ ಪ್ರತಾಪ್ ಸಿಂಹ ಅವಾಜ್ ಹಾಕಿದ್ದಾರೆ.

  • ದಸರಾದಲ್ಲೂ ಪಾಲಿಟಿಕ್ಸ್- ಶಾಮಿಯಾನ ಹಾಕಿಸೋ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ಫೈಟ್

    ದಸರಾದಲ್ಲೂ ಪಾಲಿಟಿಕ್ಸ್- ಶಾಮಿಯಾನ ಹಾಕಿಸೋ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ಫೈಟ್

    ಮಂಡ್ಯ: ಶ್ರೀರಂಗಪಟ್ಟಣ ದಸರಾದಲ್ಲಿ ಶಾಮಿಯಾನ ಹಾಕುವ ವಿಚಾರಕ್ಕೆ ಪಾಲಿಟಿಕ್ಸ್ ಶುರುವಾಗಿದ್ದು, ದಸರಾ ಶಾಮಿಯಾನದ ಜಗಳ ಬೀದಿಗೆ ಬಂದು ನಿಂತಿದೆ.

    ಜೆಡಿಎಸ್ ಮತ್ತು ಬಿಜೆಪಿ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಗಳ ನಡೆದಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಿದ್ದಾಜಿದ್ದಿ ನಡೆದಿದೆ. ಒಂದೆಡೆ ಇಷ್ಟು ವರ್ಷ ದಸರಾಗೆ ನಾವು ಶಾಮಿಯಾನ ಹಾಕುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಿದ್ದರೆ, ಆಗ ನೀವು ಹಾಕಿಸುತ್ತಾ ಇದ್ರಿ, ಈಗ ನಮ್ಮ ಸರ್ಕಾರ ಇದೆ. ಹೀಗಾಗಿ ಈ ಬಾರಿ ನಾವು ಹಾಕಿಸುತ್ತೇವೆ ಎಂದು ಬಿಜೆಪಿ ಮುಖಂಡರು ಶಾಮಿಯಾನ ಹಾಕಿಸಲು ಪಟ್ಟು ಹಿಡಿದು ಕುಳಿತಿದ್ದಾರೆ.

    ಗುರುವಾರ ಶ್ರೀರಂಗಪಟ್ಟಣದಲ್ಲಿ ಶಾಮಿಯಾನ ವಿಚಾರಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜೋರಾಗಿ ಜಗಳ ನಡೆದಿದ್ದು, ಎರಡು ಪಕ್ಷದವರೂ ಶಾಮಿಯಾನ ಲಾರಿಗಳನ್ನು ನಿಲ್ಲಿಸಿಕೊಂಡು ಗಲಾಟೆ ಮಾಡಿದ್ದಾರೆ. ನಮ್ಮವರೇ ಶಾಮಿಯಾನ ಹಾಕುತ್ತಾರೆ ಎಂದು ಜೆಡಿಎಸ್‍ನವರು, ಇಲ್ಲ ಈ ಸಲ ನಮ್ಮವರು ಹಾಕುತ್ತಾರೆ ಎಂದು ಬಿಜೆಪಿ ದಸರಾ ಶಾಮಿಯಾನ ವಿಚಾರಕ್ಕೂ ರಾಜಕೀಯ ಮಾಡುತ್ತಿದ್ದಾರೆ.

  • ಕಾಲೇಜಿನಲ್ಲಿ ಜಾಗವಿಲ್ಲದೆ ಶಾಮಿಯಾನದಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ಕಾಲೇಜಿನಲ್ಲಿ ಜಾಗವಿಲ್ಲದೆ ಶಾಮಿಯಾನದಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೂರಲು ಜಾಗವಿಲ್ಲದೇ ಶಾಮಿಯಾನ ಖುರ್ಚಿ ಬಾಡಿಗೆಗೆ ತಂದು ಪರೀಕ್ಷೆ ಬರೆಸಲಾಗಿದೆ.

    ಹರಪ್ಪನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ವಿದ್ಯಾರ್ಥಿಗಳು ಶಾಮಿಯಾನದಡಿ ಪರೀಕ್ಷೆ ಬರೆಯುತ್ತಿದ್ದಾರೆ. ಕಾಲೇಜಿನಲ್ಲಿ ಎಲ್ಲಾ ವಿಭಾಗ ಸೇರಿ 1,394 ವಿದ್ಯಾರ್ಥಿಗಳಿದ್ದಾರೆ. ಆದರೆ ಕಾಲೇಜಿನಲ್ಲಿ ಕೇವಲ ಏಳು ಕೊಠಡಿಗಳಿವೆ. ಇದರಿಂದಾಗಿ ಪರೀಕ್ಷೆ ಬರೆಯಲು ಜಾಗವಿಲ್ಲದಂತಾಗಿದೆ. ಇದನ್ನು ಮನಗಂಡ ಉಪನ್ಯಾಸಕರು ಪ್ರತಿನಿತ್ಯ ಊಟದ ಟೇಬಲ್, ಚೇರ್, ಶಾಮಿಯಾನಕ್ಕೆ 7,660 ರೂಪಾಯಿ ಬಾಡಿಗೆ ಕೊಟ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸುತ್ತಿದ್ದಾರೆ.

    ವಿದ್ಯಾರ್ಥಿಗಳು ಇಷ್ಟೆಲ್ಲಾ ಕಷ್ಟ ಪಡುತ್ತಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಎಷ್ಟೇ ಸಾರಿ ಕಾಲೇಜಿನ ಪರಿಸ್ಥಿತಿ ಕುರಿತು ತಿಳಿಸಿದರು ನಮಗೆ ಸ್ಪಂದಿಸುತ್ತಿಲ್ಲ ಎಂದು ಕಾಲೇಜಿನ ಉಪನ್ಯಾಸಕರು ಆರೋಪಿಸಿದ್ದಾರೆ.

    ಈ ಮಧ್ಯೆ ವಿದ್ಯಾರ್ಥಿಗಳು ಮಾತ್ರ ಶಾಮಿಯಾನದಡಿ ಕುಳಿತು ಮಳೆ ಬಂದ್ರೆ ಏನು ಗತಿ ಎನ್ನುವ ಭಯದಲ್ಲಿ ಪ್ರತಿನಿತ್ಯ ಪರೀಕ್ಷೆ ಬರೆಯುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv