Tag: ಶಾಪ್

  • ಮದ್ಯ ಖರೀದಿ ಫುಲ್ ಡಲ್ – ಮದ್ಯದಂಗಡಿಗಳತ್ತ ಮುಖ ಮಾಡದ ಮದ್ಯಪ್ರಿಯರು

    ಮದ್ಯ ಖರೀದಿ ಫುಲ್ ಡಲ್ – ಮದ್ಯದಂಗಡಿಗಳತ್ತ ಮುಖ ಮಾಡದ ಮದ್ಯಪ್ರಿಯರು

    ಚಿಕ್ಕಬಳ್ಳಾಪುರ: ಲಾಕ್‍ಡೌನ್ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೆ ತಡ ಮದ್ಯಪ್ರಿಯರು ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಮುಗಿಬಿದ್ದಿದ್ದರು. ಆದರೆ ಇದೀಗ ಮದ್ಯಪ್ರಿಯರು ಎಣ್ಣೆ ಅಂಗಡಿಯತ್ತ ಮುಖ ಮಾಡುತ್ತಿಲ್ಲ.

    ಇಷ್ಟು ದಿನ ಕೇವಲ ಎಂಎಸ್‍ಐಎಲ್‍ನಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಇಂದಿನಿಂದ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಇಷ್ಟು ದಿನ ಚಿಕ್ಕಬಳ್ಳಾಪುರದ ಮದ್ಯದಂಗಡಿಗಳ ಮುಂದೆ ಮದ್ಯಪ್ರಿಯರು ಕ್ಯೂ ಇರುತ್ತಿದ್ದರು. ಆದರೆ ಇಂದು ಬಹುತೇಕ ಮದ್ಯದಂಗಡಿಗಳ ಎದುರು ಗ್ರಾಹಕರಿಲ್ಲದೆ ಬಣಗುಡುವಂತಿತ್ತು.

    ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ತಕ್ಷಣ ಹಲವರು ಮತ್ತೆ ಲಾಕ್‍ಡೌನ್ ಆಗಬಹದು ಅಂತ ಸ್ಟಾಕ್ ಮಾಡಿಕೊಂಡಿದ್ದಾರೆ. ಹೀಗಾಗಿ ಈಗಾಗಲೇ ಮದ್ಯ ಸ್ಟಾಕ್ ಮಾಡಿಕೊಂಡಿರುವುದರಿಂದ ಮೊದಲು ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದ ವೈನ್ ಸ್ಟೋರ್‌ಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಇಂದಿನಿಂದ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

  • ಮೆಡಿಕಲ್ ಶಾಪ್ ಖಾಲಿ – ಮದ್ಯದಂಗಡಿ ಫುಲ್

    ಮೆಡಿಕಲ್ ಶಾಪ್ ಖಾಲಿ – ಮದ್ಯದಂಗಡಿ ಫುಲ್

    – ಬಿಸಿಲಿನಲ್ಲೇ ಕ್ಯೂ ನಿಂತ ಎಣ್ಣೆಪ್ರಿಯರು

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಇದೂವರೆಗೂ ಮದ್ಯ ಮಾರಾಟವನ್ನ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಲಾಕ್‍ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಪರಿಣಾಮ ಮದ್ಯ ಪ್ರಿಯರು ಬೆಳಗ್ಗೆಯಿಂದ ಮದ್ಯ ಖರೀದಿ ಮಾಡಲು ಕ್ಯೂ ನಿಂತಿದ್ದಾರೆ. ಆದರೆ ಪಕ್ಕದಲ್ಲಿದ್ದ ಮೆಡಿಕಲ್ ಶಾಪ್ ಮಾತ್ರ ಖಾಲಿಯಾಗಿದೆ.

    ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ ಬಳಿಯ ದಾರುವಾಲ್ ಶಾಪ್ ಮುಂದೆ ಎಣ್ಣೆ ಖರೀದಿ ಮಾಡಲು ಸುಮಾರು ಒಂದು ಕೀಲೋ ಮೀಟರ್‌ವರೆಗೂ ಕ್ಯೂನಲ್ಲಿ ಜನರು ನಿಂತಿದ್ದಾರೆ. ಮಧ್ಯಾಹ್ನವಾದರೂ ಕ್ಯೂ ಮಾತ್ರ ಕಡಿಮೆಯಾಗಿಲ್ಲ. ಬಿಸಿಲಿನ ತಾಪಮಾನ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದ್ದರೂ ಮದ್ಯಪ್ರಿಯರು ಮಾತ್ರ ಯಾವುದೇ ಬಿಸಿಲನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

    ಇನ್ನೂ ಮದ್ಯದ ಅಂಗಡಿ ಪಕ್ಕದಲ್ಲಿರುವ ಮೆಡಿಕಲ್ ಶಾಪ್ ಮುಂದೆ ಯಾವುದೇ ಗ್ರಾಹಕರು ಇಲ್ಲದೇ ಬಿಕೋ ಎನ್ನುತ್ತಿದೆ. ಇದರ ಪಕ್ಕದಲ್ಲೇ ಇರುವ ಮದ್ಯ ಅಂಗಡಿಯಲ್ಲಿ ಮಾತ್ರ ಗ್ರಾಹಕರನ್ನು ನಿಯಂತ್ರಣ ಮಾಡಲು ಪೊಲೀಸರು ಹಾಗೂ ಅಂಗಡಿಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಜನರ ಪ್ರಮಾಣ ಪ್ರತಿ ಗಂಟೆಗೂ ಹೆಚ್ಚಾಗುತ್ತಿದ್ದು, ಮದ್ಯ ಖರೀದಿಗೆ ಕಿಕ್ಕಿರಿದು ಸೇರುತ್ತಿರುವ ಜನರನ್ನು ನೋಡಿ ಕರ್ತವ್ಯನಿರತ ಪೊಲೀಸರು ಕಂಗಾಲಾಗಿದ್ದಾರೆ.

  • ಯಾದಗಿರಿಯಲ್ಲಿ ಕಲಬುರಗಿ ಸೋಂಕಿತ ತಂದ ಫಜೀತಿ

    ಯಾದಗಿರಿಯಲ್ಲಿ ಕಲಬುರಗಿ ಸೋಂಕಿತ ತಂದ ಫಜೀತಿ

    ಯಾದಗಿರಿ: ಗ್ರೀನ್‍ಜೋನ್‍ನಲ್ಲಿರುವ ಯಾದಗಿರಿಗೆ ಕೊರೊನಾ ಆತಂಕ ಎದುರಾಗಿದೆ. ಲಾಕ್‍ಡೌನ್ ಸಡಲಿಕೆ ಎಫೆಕ್ಟ್ ನಿಂದಾಗಿ ಯಾದಿಗಿರಿಗೆ ಬಂದು ಹೋಗಿದ್ದ ಕಲಬುರಗಿ ಸೋಂಕಿತನಿಂದ ಇದೀಗ ಜಿಲ್ಲಾಡಳಿತ ಫಜೀತಿಗೆ ಸಿಲುಕಿದೆ.

    ಏಪ್ರಿಲ್ 21 ರಂದು ರೋಗಿ 413 ಕಲಬುರಗಿ ವ್ಯಕ್ತಿಗೆ ಕೊರಾನಾ ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿಯಲ್ಲಿ ಹೊರ ಬಿದ್ದರುವ ಸತ್ಯ ಯಾದಗಿರಿ ಜನರ ನಿದ್ದೆಗೆಡಿಸಿದೆ. ಪಾಸಿಟಿವ್ ಬಂದ ವ್ಯಕ್ತಿಗೆ ಯಾದಗಿರಿ ನಗರದಲ್ಲಿ ಕನ್ನಡಕದ ಅಂಗಡಿಯಿದ್ದು, ಈ ಅಂಗಡಿ ಏಪ್ರಿಲ್ 15 ರಿಂದ 22ವರೆಗೆ ತೆರೆದಿತ್ತು. ಈತನಿಗೆ ಕೊರೊನಾಯಿದೆ ಎಂದು ಗೊತ್ತಾಗಿದ್ದರೂ ಯಾದಗಿರಿ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಅಲ್ಲದೆ ಕಲಬುರಗಿಯಿಂದ ಯಾದಗಿರಿಗೆ ದಿನಾಲೂ ಸಂಚಾರ ಮಾಡಿದ್ದ.

    ಇತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನು ಜಿಲ್ಲಾಡಳಿತ ಈಗಾಗಲೇ ಪತ್ತೆ ಹಚ್ಚಿ, ಪರೀಕ್ಷೆ ನಡೆಸಿದೆ. ಆದರೆ ಅವರಿಗೆ ಸದ್ಯ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಅವರನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ. ಇನ್ನೂ ದ್ವಿತೀಯ ಸಂಪರ್ಕದಲ್ಲಿರುವವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಯಾದಗಿರಿ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.

  • ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಚೆನ್ನೈ: ದಿನದಿಂದ ದಿನಕ್ಕೆ ಈರುಳ್ಳಿ ದರದಲ್ಲಿ ಏರಿಕೆಯಾಗುತ್ತಿದ್ದು, ಇತ್ತ ತಮಿಳುನಾಡಿನ ಮೊಬೈಲ್ ಮಾರಾಟಗಾರರೊಬ್ಬರು ಇದನ್ನೇ ಬಂಡವಾಳ ಮಾಡಿಕೊಂಡು ಫೋನ್ ಸೇಲ್ ಮಾಡುತ್ತಿದ್ದಾರೆ.

    ಹೌದು. ತಂಜಾವೂರು ಜಿಲ್ಲೆಯ ಪಟ್ಟುಕೊಟೈನ ತಲಯಾರಿ ಸ್ಟ್ರೀಟ್ ನಲ್ಲಿರುವ ಎಸ್‍ಟಿಆರ್ ಸರ್ವಿಸ್ ಸೆಂಟರಿನ ಮಾಲೀಕ, ಅಂಗಡಿಯಲ್ಲಿ ಮೊಬೈಲ್ ಕೊಂಡರೆ ಒಂದು ಕೆ.ಜಿ ಈರುಳ್ಳಿ ಉಚಿತವಾಗಿ ನೀಡುವುದಾಗಿ ಅನೌನ್ಸ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ಸದ್ಯ ಈರುಳ್ಳಿ ಕೆ.ಜಿಗೆ 140 ರಿಂದ 160 ರೂ. ಇದೆ.

    ಈ ಸಂಬಂಧ ಅಂಗಡಿ ಮಾಲೀಕ ಶರವಣ ಕುಮಾರ್ ಮಾತನಾಡಿ, ಇಂತಹ ಆಫರ್ ಗಳನ್ನು ಇಲ್ಲಿ ಯಾರೂ ಕೊಟ್ಟಿರಲಿಲ್ಲ. ಹೀಗಾಗಿ ಜನರಿಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅಲ್ಲದೆ ನಾನು ಈ ರೀತಿ ಜಾಹೀರಾತನ್ನು ನೀಡಿದಾಗಿನಿಂದ ಸಾಕಷ್ಟು ಜನ ನನ್ನ ಅಂಗಡಿಗೆ ಬರುತ್ತಾನೇ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

    8 ವರ್ಷಗಳ ಹಿಂದೆ ಪಟ್ಟುಕೊಟೈನಲ್ಲಿ ಶರವಣ ಕುಮಾರ್ ಎಸ್ ಟಿ ಆರ್ ಎಂಬ ಮೊಬೈಲ್ ಶಾಪ್ ಆರಂಭಿಸಿದ್ದರು. ಆ ಬಳಿಕದಿಂದ ದಿನದಲ್ಲಿ 2 ಮೊಬೈಲ್ ಗಳು ಮಾರಾಟವಾಗುತ್ತಿತ್ತು. ಇದೀಗ ಜಾಹೀರಾತು ಹಾಕಿದ ಬಳಿಕ ಅಂದರೆ ಗುರುವಾರ ಮತ್ತು ಶುಕ್ರವಾರ ಸುಮಾರು 8 ಮೊಬೈಲ್ ಗಳು ಮಾರಾಟವಾಗಿವೆ. ಹೀಗಾಗಿ ಜನ ನನ್ನ ಆಫರನ್ನು ಮೆಚ್ಚಿಕೊಂಡಿದ್ದಾರೆ ಎಂದು ನನಗನ್ನಿಸುತ್ತಿದೆ ಎಂದಿದ್ದಾರೆ. ಅಲ್ಲದೆ ಮೊಬೈಲ್ ತಗೊಂಡಾತ ಅವನಿಗೆ ಬೇಕಾದ ಈರುಳ್ಳಿ(ಸಣ್ಣ ಅಥವಾ ದೊಡ್ಡ) ಯನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ