Tag: ಶಾಪಿಂಗ್

  • ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ – ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಪತ್ನಿಯಿಂದ ಗೂಸಾ

    ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ – ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಪತ್ನಿಯಿಂದ ಗೂಸಾ

    ಲಕ್ನೋ: ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ ಮಾಡುತ್ತಿದ್ದ ಪತಿಯನ್ನು ರೆಡ್ ಹ್ಯಾಂಡ್ ಆಗಿ ನೋಡಿದ ಪತ್ನಿ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗಾಜಿಯಾಬಾದ್ ಮಾರುಕಟ್ಟೆಯಲ್ಲಿ (Ghaziabad market) ನಡೆದಿದೆ.

    ಸದ್ಯ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆ ತನ್ನ ಕೆಲವು ಸ್ನೇಹಿತೆಯರ ಜೊತೆ ಸೇರಿ ಗಂಡನ ಕಾಲರ್ ಹಿಡಿದು ಸಾರ್ವಜನಿಕವಾಗಿ ಥಳಿಸಿದ್ದಾಳೆ. ಈ ವೇಳೆ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿದ ಗರ್ಲ್ ಫ್ರೆಂಡ್ ಮೇಲೂ ಮಹಿಳೆ ಹಲ್ಲೆ ನಡೆಸಿದ್ದಾಳೆ. ಇದನ್ನೂ ಓದಿ: ಮಣಿಪಾಲ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ಬ್ಲಡ್ ಗ್ರೂಪ್‍ನ ಕಿಡ್ನಿ ಕಸಿ ಯಶಸ್ವಿ

    ಈ ವೇಳೆ ಅಂಗಡಿಯ ಮಾಲೀಕರೊಬ್ಬರು ಈ ವಿಚಾರವನ್ನು ಹೊರಗಡೆ ಇಟ್ಟುಕೊಳ್ಳಿ, ಹೊರಗೆ ಹೋಗಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಇದೀಗ ಈ ಸಂಬಂಧ ಮಹಿಳೆ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪತಿಯೊಂದಿಗೆ ಜಗಳವಾದ ನಂತರ ಮಹಿಳೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಕರ್ವಾ ಚೌತ್‍ಗಾಗಿ (Karwa Chauth) ಶಾಪಿಂಗ್ ಮಾಡಲು ತನ್ನ ತಾಯಿಯೊಂದಿಗೆ ಬಂದಿದ್ದಳು. ಈ ವೇಳೆ ತನ್ನ ಪತಿ ಮತ್ತೊಬ್ಬಳೊಂದಿಗೆ ಓಡಾಡುತ್ತಿರುವುದನ್ನು ನೋಡಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ಇದನ್ನೂ ಓದಿ: ಮುರುಘಾ ಶ್ರೀಗೆ ಮತ್ತೆ ಸಂಕಷ್ಟ – ಮೈಸೂರಿನಲ್ಲಿ ಮತ್ತೊಂದು FIR ದಾಖಲು

    ಕರ್ವಾ ಚೌತ್ ಹಿಂದೂ ಹಬ್ಬವಾಗಿದ್ದು, ಈ ಹಬ್ಬವನ್ನು ದೇಶದಲ್ಲಿ ಹೆಚ್ಚಾಗಿ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ದಿನ ವಿವಾಹಿತ ಮಹಿಳೆಯರು ಉಪವಾಸ ಮಾಡುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಕರ್ವಾ ಚೌತ್ ಅನ್ನು ಕೃಷ್ಣ ಪಕ್ಷದ ನಾಲ್ಕನೇ ದಿನ ಅಥವಾ ಕಾರ್ತಿಕ್ ತಿಂಗಳ ಹಿಂದೂ ಕ್ಯಾಲೆಂಡರ್ ತಿಂಗಳಿನ ಕರಾಳ ಹದಿನೈದು ದಿನದಂದು ಆಚರಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬೋರಾದಾಗೆಲ್ಲ ಶಾಪಿಂಗ್ ಮಾಡ್ತಾರಂತೆ ನಿವೇದಿತಾ ಗೌಡ

    ಬೋರಾದಾಗೆಲ್ಲ ಶಾಪಿಂಗ್ ಮಾಡ್ತಾರಂತೆ ನಿವೇದಿತಾ ಗೌಡ

    ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ನಿವೇದಿತಾ ಗೌಡ ವಿಂಟರ್ ಶಾಪಿಂಗ್ ಮಾಡಿದ್ದಾರೆ. ಈ ಕುರಿತು ಅವರು ವಿಡಿಯೋವೊಂದನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಮೊನ್ನೆಯಷ್ಟೇ ನನಗೆ ಸಖತ್ ಬೋರ್ ಆಗಿತ್ತು. ಹಾಗಾಗಿ ಶಾಪಿಂಗ್ ಮಾಡಲು ಹೋಗಿದ್ದೆ ಎಂದು ಮಾತು ಶುರು ಮಾಡಿ, ಏನೆಲ್ಲ ಶಾಪಿಂಗ್ ಮಾಡಿದ್ದಾರೆ ಎನ್ನುವುದನ್ನೂ ತೋರಿಸಿದ್ದಾರೆ.

    ಅವರ ಬಳಿ ಕೆಂಪು ಬಣ್ಣದ ಡ್ರೆಸ್ ಇದೆಯಂತೆ. ಆ ಡ್ರೆಸ್ ಗೆ ಮ್ಯಾಚ್ ಆಗುವಂತಹ ಹೀಲ್ಸ್ ಬೇಕಿತ್ತಂತೆ. ಅದನ್ನು ಖರೀದಿಸಲು ಹೋಗಿ ಬೇರೆ ಏನೆಲ್ಲ ಪರ್ಚೇಸ್ ಮಾಡಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ. ಶಾಪಿಂಗ್ ಮಾಡಿರುವ ವಸ್ತುಗಳನ್ನು ಅವರು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಇದನ್ನೂ ಓದಿ:ಮತ್ತೆ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್

    ಕೆಂಪು ಬಣ್ಣದ ಹೀಲ್ಸ್ ಖರೀದಿಸಲು ಹೋಗಿದ್ದೆ. ಆದರೆ, ಅಂಗಡಿಗೆ ಹೋದಾಗ ಏನೆಲ್ಲ ಹೊಸ ಹೊಸ ವಸ್ತುಗಳು ಬಂದಿದ್ದವು. ಎಲ್ಲವನ್ನೂ ಖರೀದಿಸಬೇಕು ಅಂತ ಅನಿಸಿತು. ಅದರಲ್ಲೂ ನನಗೆ ಬ್ಯಾಗ್ ಗಳು ಅಂದರೆ ತುಂಬಾ ಇಷ್ಟ ಹಾಗಾಗಿ ಅಷ್ಟೊಂದು ಬ್ಯಾಗ್ ಖರೀದಿಸಿದೆ ಎಂದು ಹೇಳಿಕೊಂಡಿದ್ದಾರೆ. ಯಾವ ವಸ್ತುಗಾಗಿ ಶಾಪಿಂಗೆಗೆ ಹೋಗಿದ್ದೆನೋ, ಅದನ್ನು ಬಿಟ್ಟು ಬಿಳಿದೆಲ್ಲವನ್ನೂ ತಂದೆ ಎಂದು ಹೇಳಿಕೊಂಡಿದ್ದಾರೆ. ಕೆಂಪು ಹೀಲ್ಸ್ ಗಾಗಿ ಮತ್ತೊಮ್ಮೆ ಶಾಪಿಂಗ್ ಗೆ ಹೋಗಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಬೆಂಕಿಗೆ ಹೊತ್ತಿ ಉರಿದ ಮುಂಬೈ ಶಾಪ್ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

    ಭಾರೀ ಬೆಂಕಿಗೆ ಹೊತ್ತಿ ಉರಿದ ಮುಂಬೈ ಶಾಪ್ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

    ಮುಂಬೈ: ಮುಂಬೈನ ಅಂದೇರಿ ಪಶ್ಚಿಮ ಭಾಗದಲ್ಲಿಂದು ಮಳಿಗೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮಳಿಗೆಯೊಂದು ಹೊತ್ತಿ ಉರಿದಿದೆ.

    https://twitter.com/Blinkorshrink/status/1552971079508967426?ref_src=twsrc%5Etfw%7Ctwcamp%5Etweetembed%7Ctwterm%5E1552971079508967426%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Findia%2Fmassive-fire-breaks-out-in-mumbais-andheri-three-fire-engines-rush-to-spot-5649943.html

    1,000 ಚದರ ಅಡಿಯ ಅಂಗಡಿ ಇದಾಗಿದ್ದು, ಭಾರೀ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿದೆ. ಸ್ಟಾರ್ ಬಜಾರ್ ಸಮೀಪದ ಲಿಂಕ್ ರೋಡ್ ಬಳಿ ಇರುವ ಈ ಶಾಪ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಅದೃಷ್ಠವಶಾತ್ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅಗ್ನಿಅವಘಢದ ವಿಡಿಯೋ ಬಹಿರಂಗವಾಗಿದ್ದು, ಆತಂಕ ತರುವಂತಿದೆ. ಇದನ್ನೂ ಓದಿ: ಅಕ್ಷಯ್ ಕುಮಾರ್ ಭಾರತ ದೇಶದವರಲ್ಲ, ದೇಶದಿಂದ ಹೊರ ಹಾಕಿಸುವೆ : ಮಾಜಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ

    ಇಲ್ಲಿನ ಮಹಾಲಕ್ಷ್ಮೀ ಎಸ್ಟೇಟ್ ಸಮೀಪದ ಚಿತ್ರಕೋಟ್ ಸ್ಟುಡಿಯೋ ಹಿಂಭಾಗದಲ್ಲಿ ಇಂದು ಸಂಜೆ 4.30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಶಾಪ್ ಹೊತ್ತಿ ಉರಿದಿದೆ. ಇತ್ತ ಮಾಹಿತಿ ಪಡೆದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಹೆಂಗಳೆಯರ ಫ್ಯಾಷನ್‌ಗೆ ಕೊನೆಯೇ ಇಲ್ಲ. ಹೊಸತು ಹಳೆಯದ್ದಾಗುತ್ತಿದ್ದಂತೆ ಈಗ ಹಳೆಯ ಕಾಲದ ಆಭರಣಗಳೇ ಟ್ರೆಂಡ್ ಆಗಿವೆ. ಯುವತಿಯರೂ ಸಹ ಅಜ್ಜ – ಅಜ್ಜಿ ಕಾಲದ ಒಡವೆಗಳಿಗೆ ಚಿತ್ತಾಕರ್ಷಕ ರೂಪಕೊಟ್ಟು ಧರಿಸುತ್ತಿದ್ದಾರೆ. ಬೆಳ್ಳಿ ಬಂಗಾರ ಎಂದರೆ ಕಣ್ಣರಳಿಸುವ ಹೆಣ್ಣುಮಕ್ಕಳು ಪ್ರತೀ ಒಡವೆಯನ್ನೂ ಟ್ರೆಂಡಿಯಾಗಿ ಹೇಗೆ ಧರಿಸಬಹುದು ಎಂದೇ ಲೆಕ್ಕಾಚಾರ ಹಾಕುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಬೆಳ್ಳಿ-ಬಂಗಾರ ಎಲ್ಲರ ಮನಗೆಲ್ಲುತ್ತಿದೆ. ಬೆಳ್ಳಿಯ ಆಭರಣಗಳು ಧರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಾ ರೀತಿಯ ಧಿರಿಸಿಗೆ ಒಪ್ಪುವಂತಹ ಚೆಂದದ ಡಿಸೈನ್ ಬೆಳ್ಳಿ ಪ್ರಿಯರಿಗೆ ಅಚ್ಚುಮೆಚ್ಚು. ಅನಾದಿ ಕಾಲದಿಂದಲೂ ಬೆಳ್ಳಿಯ ಬಳಕೆ ಚಾಲ್ತಿಯಲ್ಲಿದೆ. ಇಂದಿನ ದಿನಮಾನಗಳಲ್ಲೂ ಬೆಳ್ಳಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಕೆಲವರು ಇದೇ ಬೆಳ್ಳಿ ಆಭರನಣಕ್ಕೆ ಚಿನ್ನದ ಹೊಳಪು ನೀಡಿ ಧರಿಸುತ್ತಾರೆ.

    ಬೆಳ್ಳಿ ಆಭರಣಗಳಲ್ಲಿ ಕಿವಿಯೋಲೆಗಳು, ಉಂಗುರಗಳು, ಮೂಗಿನ ನತ್ತುಗಳು, ಬೆಳ್ಳಿಯ ನೆಕ್ಲೆಸ್‌ಗಳು, ಬಳೆ, ಖಡಗಗಳು ಸೇರಿ ಇನ್ನೂ ಅನೇಕವು ಫ್ಯಾಷನ್ ಪ್ರಿಯರ ಲಗ್ಗೆ ಇಟ್ಟಿದೆ. ಅಲ್ಲದೆ ಬೆಳ್ಳಿ ಆರೋಗ್ಯಕ್ಕೂ ಒಳ್ಳೆಯದು. ಹಾಗಾದ್ರೆ ಯಾವೆಲ್ಲ ರೀತಿಯಲ್ಲಿ ಈ ಬೆಳ್ಳಿ ಆಭರಣಗಳನ್ನು ಟ್ರೆಂಡಿಯಾಗಿ ಧರಿಸಬಹುದು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್.

    ಆಫೀಸ್‌ಗಳಲ್ಲೂ ಟ್ರೆಂಡಿ ಲುಕ್:
    ಬೆಳ್ಳಿ ಆಭರಣಗಳು ಒಂದೇ ರೀತಿಯದಲ್ಲ. ಹೀಗಾಗಿ ನೀವು ಅದನ್ನು ಆಫೀಸ್‌ಗೂ ಧರಿಸಿ ಹೋಗಬಹುದು. ಇದನ್ನು ನಿಮ್ಮ ಡೆನಿಮ್ ಶರ್ಟ್ ಅಥವಾ ಫಾರ್ಮಲ್ ಮೇಲೆ ಧರಿಸಬಹುದು. ಅಥವಾ ಕಾಟನ್ ಸೀರೆಗಳ ಮೇಲೂ ಧರಿಸಬಹುದಾಗಿದೆ. ಬೆಳ್ಳಿ ಖಡಗ, ಬೆಳ್ಳಿ ಉಂಗುರ, ನೆಕ್ಲೆಸ್ ಸೇರಿದಂತೆ ಬೆಳ್ಳಿ ನತ್ತುಗಳನ್ನು ಧರಿಸಿದರೆ ಸಖತ್ ಸ್ಟೈಲಿಷ್ ಲುಕ್ ನೀಡುತ್ತದೆ.

    ದೇಸಿ ಸ್ಟೈಲ್‌:
    ಬೆಳ್ಳಿಯ ಆಭರಣಗಳು ಕುರ್ತಾ ಮತ್ತು ಸಲ್ವಾರ್ ಕಮೀಜ್‌ಗಳೊಂದಿಗೆ ಉತ್ತಮವಾಗಿ ಕಾಣುತ್ತವೆ. ಜೊತೆಗೆ ಪಲಾಜೋಸ್ ಮತ್ತು ಇತರ ಟ್ರೆಡೀಷನಲ್ ಉಡುಪುಗಳೊಂದಿಗೆ ಬೆಳ್ಳಿ ಚೆನ್ನಾಗಿ ಒಪ್ಪುತ್ತದೆ. ಬೆಳ್ಳಿ ಬಳೆಗಳು, ಕಿವಿಯೋಲೆಗಳು, ಚೋಕರ್ ಅಥವಾ ನೆಕ್ಲೆಸ್ ರೂಪದಲ್ಲಿ ಧರಿಸಿ ಸ್ಟೈಲಿಷ್ ಆಗಿ ಕಾಣಬಹುದಾಗಿದೆ.

    ಬೊಹಿಮಿಯನ್ ಶೈಲಿ:
    ಬೋಹೀಮಿಯನ್ ಬೆಳ್ಳಿ ಆಭರಣಗಳು ಟ್ರೆಂಡಿ ಮತ್ತು ಆರಾಮದಾಯಕ ಶೈಲಿಯಾಗಿದೆ. ದೊಡ್ಡ ಮೂಗುತಿ ಉಡುಪಿನೊಂದಿಗೆ ಧರಿಸಬಹುದು. ಅಲ್ಲದೇ ಬೆಳ್ಳಿ ಬಳೆ ಮತ್ತು ನೆಕ್ಲೆಸ್‌ಗಳನ್ನು ಕೂಡ ಶರ್ಟ್‌ಗಳ ಮೇಲೆ ಧರಿಸಬಹುದಾಗಿದೆ.

    ಸ್ಟ್ರೀಟ್‌ ಸ್ಟೈಲ್‌:
    ಇಂಡೋ-ವೆಸ್ಟರ್ನ್ ಮತ್ತು ಬೋಹೀಮಿಯನ್ ಶೈಲಿಗಳು ಇಂದು ಹೆಚ್ಚು ಟ್ರೆಂಡಿಂಗ್ ಶೈಲಿಗಳಾಗಿವೆ. ವಿಶೇಷ ಸಂದರ್ಭಗಳಲ್ಲಿ ಅಥವಾ ಶಾಪಿಂಗ್‌ಗೆ ಹೋಗುವಾಗ ನೀವು ಆಭರಣಗಳನ್ನು ಧರಿಸಬಹುದು. ಇದು ಹೀಲ್ಸ್, ಜೆಗ್ಗಿಂಗ್‌ಗಳು ಮತ್ತು ಸಡಿಲವಾದ ಟಾಪ್‌ಗಳೊಂದಿಗೆ ಸಖತ್ ಫ್ಯಾಷನೇಬಲ್ ಆಗಿ ಕಾಣುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ಅಮೆಜಾನ್‌ನಲ್ಲಿ ಶೂ ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಟ್ರೈಮಾಡಿ

    ಇನ್ಮುಂದೆ ಅಮೆಜಾನ್‌ನಲ್ಲಿ ಶೂ ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಟ್ರೈಮಾಡಿ

    ವಾಷಿಂಗ್ಟನ್: ಆನ್‌ಲೈನ್‌ನಲ್ಲಿ ಶೂಗಳನ್ನು ಕೊಳ್ಳುವಾಗ ಎಲ್ಲರಿಗೂ ಒಂದು ಭಯ ಇರುತ್ತದೆ. ಶೂಗಳು ತಮ್ಮ ಪಾದಕ್ಕೆ ಹೊಂದಿಕೆಯಾಗುತ್ತೋ ಇಲ್ಲವೋ ಎಂದುಕೊಂಡ ಬಳಿಕ ಇಷ್ಟವಾಗದೇ ಹೋದರೆ ಅದನ್ನು ವಾಪಸ್ ಕಳುಹಿಸುವ ಜಂಜಾಟವೂ ಇರುತ್ತೆ. ಆದರೆ ಅಮೆಜಾನ್‌ನ ಹೊಸದೊಂದು ಫೀಚರ್ ಈ ಎಲ್ಲಾ ಸಮಸ್ಯೆಗೂ ಪರಿಹಾರವಾಗಿದೆ.

    ಅಮೆಜಾನ್ ಹೊಸದಾಗಿ ಗ್ರಾಹಕರಿಗೆ ಶೂಗಳನ್ನು ವರ್ಚುವಲ್ ಆಗಿ ಟ್ರೈ ಮಾಡುವಂತಹ ಫೀಚರ್ ಅನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಶೂಗಳನ್ನು ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಕಾಲಿನಲ್ಲಿ ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಪರೀಕ್ಷಿಸಬಹುದು. ಈ ಮೂಲಕ ಶೂಗಳನ್ನು ಕೊಳ್ಳುವಾಗ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗಲಿದೆ. ಇದನ್ನೂ ಓದಿ: ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ

    ಅಮೆಜಾನ್‌ನ ಹೊಸ ವರ್ಚುವಲ್ ಟ್ರೈ-ಆನ್ ಫೀಚರ್ ಸಹಾಯದಿಂದ ಗ್ರಾಹಕರು ತಮ್ಮ ಮೊಬೈಲಿನಲ್ಲಿಯೇ ಶೂ ಪಾದಗಳಲ್ಲಿ ಹೇಗೆ ಕಾಣಿಸುತ್ತದೆ ಎಂಬುದನ್ನು ನೋಡಬಹುದು. ವರ್ಚುವಲ್ ಟ್ರೈ-ಆನ್ ಬಟನ್ ಟ್ಯಾಪ್ ಮಾಡಿದಾಗ ನಿಮ್ಮ ಫೋನ್ ಕ್ಯಾಮೆರಾ ಆನ್ ಆಗುತ್ತದೆ. ಅದನ್ನು ನಿಮ್ಮ ಕಾಲಿಗೆ ಪಾಯಿಂಟ್ ಮಾಡಿದಾಗ ನೀವು ಆಯ್ಕೆ ಮಾಡಿದ ಶೂಗಳು ಸ್ಕ್ರೀನ್‌ನಲ್ಲಿ ಕಾಲುಗಳಲ್ಲಿ ಹೇಗೆ ತೋರುತ್ತದೆ ಎಂಬುದನ್ನು ನೋಡಬಹುದು. ಬಳಕೆದಾರರು ತಮ್ಮ ಪಾದವನ್ನು ಬೇರೆ ಬೇರೆ ಕಡೆಗೆ ತಿರುಗಿಸುವುದರ ಮೂಲಕ ಶೂಗಳು ಬೇರೆ ಬೇರೆ ಆ್ಯಂಗಲ್‌ನಿಂದ ಹೇಗೆ ಕಾಣಿಸುತ್ತವೆ ಎಂಬುದನ್ನೂ ನೋಡಬಹುದು. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ಸದ್ಯ ಅಮೆಜಾನ್‌ನ ಈ ಹೊಸ ಫೀಚರ್ ಅಮೆರಿಕ ಹಾಗೂ ಕೆನಡಾದಲ್ಲಿ ಮಾತ್ರವೇ ಲಭ್ಯವಿದ್ದು, ಐಒಎಸ್ ಬಳಕೆದಾರರು ಮಾತ್ರವೇ ಇದನ್ನು ಪರಿಶೀಲಿಸಬಹುದು. ಈ ಫೀಚರ್ ಜಾಗತಿಕವಾಗಿ ಲಭ್ಯವಾದಲ್ಲಿ, ಶೂ ಕೊಳ್ಳುವಾಗ ಎಲ್ಲಾ ಗ್ರಾಹಕರು ಎದುರಿಸುವ ಸಮಸ್ಯೆಗಳಿಗೆ ಕಡಿವಾಣ ಬೀಳುತ್ತೋ ಎಂಬುದನ್ನು ಕಾದು ನೋಡಬೇಕಿದೆ.

  • ಜಾಲಿ ಮೂಡ್‍ನಲ್ಲಿ ಸಿದ್ದರಾಮಯ್ಯ- ದೆಹಲಿಯಲ್ಲಿ ಫುಲ್ ಶಾಪಿಂಗ್

    ಜಾಲಿ ಮೂಡ್‍ನಲ್ಲಿ ಸಿದ್ದರಾಮಯ್ಯ- ದೆಹಲಿಯಲ್ಲಿ ಫುಲ್ ಶಾಪಿಂಗ್

    ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿಗೆ ಆಗಮಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಯಲ್ಲಿ ಭರ್ಜರಿ ಶಾಪಿಂಗ್ ಮಾಡಿದ್ದಾರೆ.

    ಕೆನಾಟ್ ಪ್ಲೇಸ್ ಗೆ ತೆರಳಿದ್ದ ಅವರು, ಒಂದು ಗಂಟೆಗೂ ಅಧಿಕ ಕಾಲ ಮಾರುಕಟ್ಟೆ ಸುತ್ತಾಡಿ ಆರು ಸಾವಿರ ಮೌಲ್ಯದ ಲೆದರ್ ಬ್ಯಾಗ್ ಒಂದನ್ನು ಖರೀದಿಸಿದ್ದಾರೆ. ಮಂಗಳವಾರ ಸೋನಿಯಾಗಾಂಧಿ ಭೇಟಿಯಾಗಿದ್ದ ಸಿದ್ದರಾಮಯ್ಯ, ಅರ್ಧಗಂಟೆಗೂ ಹೆಚ್ಚು ಕಾಲ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಇಂದು ಯಾವುದೇ ಅಧಿಕೃತ ಕಾರ್ಯಕ್ರಮಗಳು, ರಾಷ್ಟ್ರೀಯ ನಾಯಕರ ಭೇಟಿ ಇಲ್ಲದ ಕಾರಣ ಶಾಸಕ ಜಮೀರ್ ಅಹ್ಮದ್, ಅಶೋಕ್ ಪಟ್ಟಣ್, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಜೊತೆಗೆ ಶಾಪಿಂಗ್ ಗೆ ತೆರಳಿದ್ದರು. ಇದನ್ನೂ ಓದಿ: ನಾಳೆ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

    ಕೆನಾಟ್ ಪ್ಲೇಸ್‍ನಲ್ಲಿರುವ ಮಳಿಗೆಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಹಲವು ವಸ್ತುಗಳನ್ನು ನೋಡಿದರು. ಕಡೆಗೆ ಲೆದರ್ ಬ್ಯಾಗ್‍ವೊಂದನ್ನು ಖರೀದಿಸಿದರು. ಜಮೀರ್ ಅಹ್ಮದ್ ಆಪ್ತ ಮತ್ತು ಆಂಧ್ರಪ್ರದೇಶದ ಮೂಲದ ಕಮಿಡಿಯನ್ ಅಕಾಬರ್ ಬಿನ್ ತಬರ್ ಅವರಿಗೆ ಸಿದ್ದರಾಮಯ್ಯ ಶೂ ಕೊಡಿಸಿದ್ದಾರೆ.

    ಶಾಪಿಂಗ್ ಬಳಿಕ ಯುನೈಟೆಡ್ ಕಾಫಿ ಶಾಪ್ ಗೆ ತೆರಳಿ ಕಾಫಿ ಕುಡಿದ ಅವರು, ಸಂಗಡಿಗರ ಜೊತೆಗೆ ಹರಟೆ ಹೊಡೆದು ಬಳಿಕ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದರು. ರಾಜ್ಯದಲ್ಲಿ ಸದಾ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಸಿದ್ದರಾಮಯ್ಯ ದೆಹಲಿಯ ಮಾರುಕಟ್ಟೆಯಲ್ಲಿ ಸುತ್ತಾಡಿ ಶಾಪಿಂಗ್ ಮಾಡಿದ್ದು ವಿಶೇಷವಾಗಿತ್ತು.

  • ಜಿಮ್ ಡ್ರೆಸ್‍ನಲ್ಲಿ ಅಂಗಡಿ ಮುಂದೆ ಹಾಟ್ ಆಗಿ ಕಾಣಿಸಿಕೊಂಡ ಮಲೈಕಾ ಅರೋರಾ

    ಜಿಮ್ ಡ್ರೆಸ್‍ನಲ್ಲಿ ಅಂಗಡಿ ಮುಂದೆ ಹಾಟ್ ಆಗಿ ಕಾಣಿಸಿಕೊಂಡ ಮಲೈಕಾ ಅರೋರಾ

    ಮುಂಬೈ: ಬಾಲಿವುಡ್ ನಟಿ ಹಾಗೂ ಡ್ಯಾನ್ಸರ್ ಮಲೈಕಾ ಅರೋರಾ ಇಂದು ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡರು.

    Malaika Arora

    ಮುಂಬೈನ ಬಂದ್ರದಲ್ಲಿರುವ ಅಂಗಡಿಯಿಂದ ಕೆಲವು ಪದಾರ್ಥ ಖರೀದಿಸಿ ಬರುವ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಮಲೈಕಾ ಅರೋರಾ ಸಖತ್ ಹಾಟ್ ಆಗಿ ಕಾಣಿಸಿಕೊಂಡರು. ಇದನ್ನೂ ಓದಿ: ಶರ್ಟ್ ಧರಿಸಿ ಪ್ಯಾಂಟ್ ಹಾಕದೆ ಮನೆಯಿಂದ ಹೊರ ಬಂದ ಮಲೈಕಾ

    Malaika Arora

    ಬ್ಲಾಕ್ ಕಲರ್ ಜಿಮ್ ಡ್ರೆಸ್‍ನಲ್ಲಿ ಕಾಣಿಸಿಕೊಂಡ ಮಲೈಕಾ ಬಿಳಿ ಬಿಣ್ಣದ ಹ್ಯಾಂಡ್ ಕವರ್ ಹಿಡಿದುಕೊಂಡು ಅಂಗಡಿಯಿಂದ ಹೊರಗೆ ಬಂದರು. ಈ ವೇಳೆ ಮಲೈಕಾ ಒಂದು ಕೈಯಲ್ಲಿ ಕವರ್ ಹಿಡಿದುಕೊಂಡಿದ್ದರೆ, ಮತ್ತೊಂದು ಕೈಯಲ್ಲಿ ಮೊಬೈಲ್ ಫೋನ್ ಹಾಗೂ ಕೂಲಿಂಗ್ ಗ್ಲಾಸ್ ಹಿಡಿದುಕೊಂಡಿದ್ದರು. ಇದನ್ನೂ ಓದಿ: ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ತಿಳಿಸಿದ ಮಲೈಕಾ

    Malaika Arora

    ಇದೇ ವೇಳೆ ಮಲೈಕಾ ಕ್ಯಾಮೆರಾಗೆ ಹಾಯ್ ಮಾಡಿ ಕಾರಿನ ಬಳಿ ತಮ್ಮ ಕೆಲಸಗಾರರೊಬ್ಬರ ಕೈಗೆ ಕವರ್‌ಗಳನ್ನು ನೀಡಿ, ಮತ್ತೊಮ್ಮೆ ಕ್ಯಾಮೆರಾಗೆ ಹಾಯ್ ಮಾಡಿ ಕಾರಿನೊಳಗೆ ಕುಳಿತುಕೊಂಡರು. ಇದನ್ನೂ ಓದಿ: ಪ್ರೀತಿಯಲ್ಲಿ ಎಲ್ಲರೂ ಎರಡನೇ ಅವಕಾಶಕ್ಕೆ ಅರ್ಹರು: ಮಲೈಕಾ

    Malaika Arora

    ಇತ್ತೀಚೆಗಷ್ಟೇ ಮಲೈಕಾ ಅರೋರಾ ಬಾತುಕೋಳಿಯಂತೆ ನಡೆಯುವ ಮೂಲಕ ಸಖತ್ ಸುದ್ದಿಯಾಗಿದ್ದರು. ಮಲೈಕಾ ಅವರ ಬಾತುಕೋಳಿ ನಡಿಗೆ ಕಂಡ ಅವರ ಅಭಿಮಾನಿಗಳಲ್ಲಿ ಕೆಲವರು ಮೆಚ್ಚುಕೊಂಡರೆ, ಇನ್ನು ಕೆಲವರು ಇಷ್ಟವಾಗಿಲ್ಲ. ಬಾತುಕೋಳಿ ನಡಿಗೆ ಎಂದು ನೆಟ್ಟಿಗರು ಕಾಲೆಳೆದಿದ್ದರು. ಮತ್ತೆ ಹಲವರು ಏಕೆ ಹಾಗೆ ನಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದರು.

    Malaika Arora

    ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಮಲೈಕಾ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಪುತ್ರ ನಟ ಅರ್ಜುನ್ ಜೊತೆಗೆ ಬಹಳ ಕಾಲದಿಂದ ರಿಲೇಶನ್ ಶಿಪ್‍ನಲ್ಲಿದ್ದಾರೆ. ಇದನ್ನೂ ಓದಿ: ಬಾತುಕೋಳಿಯಂತೆ ನಡೆದ ಮಲೈಕಾ- ಸಖತ್ ಹಾಟ್

  • ಒಂದೇ ಸೂರಿನಲ್ಲಿ ಮದುವೆಯ ಬಟ್ಟೆಗಳು – ಸಮ್ಯಕ್‌ಗೆ ಬನ್ನಿ ಖರೀದಿಸಿ

    ಒಂದೇ ಸೂರಿನಲ್ಲಿ ಮದುವೆಯ ಬಟ್ಟೆಗಳು – ಸಮ್ಯಕ್‌ಗೆ ಬನ್ನಿ ಖರೀದಿಸಿ

    ದುವೆಗೆ ಉಡುಪುಗಳು ನಗರದಲ್ಲಿ ಸಿಗುತ್ತದೆ. ಆದರೆ ಬೇಕಾದ ರೀತಿಯ ಇಂದಿನ ಸ್ಟೈಲ್‌ಗೆ ತಕ್ಕಂತೆ ಉಡುಪುಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ನೀವು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ಬೇಕಾದ ಶೈಲಿಯ, ವಿಶಿಷ್ಟ ವಿನ್ಯಾಸಕಾರರು ಮಾಡಿರುವ ಉಡುಪುಗಳು ಬೇಕಾದ ದರದಲ್ಲಿ ʼಸಮ್ಯಕ್‌ʼನಲ್ಲಿ ಸಿಗುತ್ತದೆ.

    2006ರಲ್ಲಿ ಬೆಂಗಳೂರಿನಲ್ಲಿ ಸಮ್ಯಕ್‌ ತನ್ನ ಮಳಿಗೆಯನ್ನು ಆರಂಭಿಸಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೆಚ್ಚುಗೆ ಗಳಿಸಲು ಕಾರಣವೂ ಇದೆ. ಸಾಧಾರಣವಾಗಿ ಮದುವೆಯ ಸಂದರ್ಭದಲ್ಲಿ ಮಹಿಳೆಯರ ಉಡುಪುಗಳ ಖರೀದಿಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ. ಆದರೆ ಈಗ ಕಾಲ ಬದಲಾಗಿದ್ದು ಪುರುಷರೂ ಉಡುಪುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈ ನಿಟ್ಟಿನಲ್ಲಿ ಸಮ್ಯಕ್‌ ಮಹಿಳೆಯರ ಮತ್ತು ಪುರುಷರ ವಸ್ತ್ರಗಳ ಸಂಗ್ರಹವನ್ನೇ ತೆರೆದಿದೆ. ಒಂದೇ ಮಳಿಗೆಯಲ್ಲಿ ಎರಡು ಕಡೆಯವರಿಗೆ ವಸ್ತ್ರಗಳು ಸುಲಭವಾಗಿ ಸಿಗುವ ಕಾರಣ ಮೆಚ್ಚುಗೆಗೆ ಪಾತ್ರವಾಗಿದೆ.

    ಕಂಚಿಪುರಂ ಸಿಲ್ಕ್‌, ಬನಾರಸಿ, ಎಂಬ್ರಾಯಿಡರಿ ರೀತಿಯ ಸೀರೆಗಳು ಡಿಸೈನರ್‌ ಸಲ್ವಾರ್‌, ಗೌನ್‌, ಕುರ್ತಾಗಳು ಇಲ್ಲಿ ಲಭ್ಯವಿದೆ. ಶ್ರೇಷ್ಠ ವಿನ್ಯಾಸಕಾರರದಾದ ಸಬ್ಯಸಾಚಿ, ಮನೀಷ್‌ ಮಲ್ಹೋತ್ರಾ, ಅನಿತಾ ಡೋಂಗ್ರೆ, ರೋಹಿತ್‌ ಬಾಲ್‌, ಅನುಶ್ರೀ ರೆಡ್ಡಿ ವಿನ್ಯಾಸ ಮಾಡಿದ ವಧು-ವರರ ಉಡುಪುಗಳು ಸಮ್ಯಕ್‌ನಲ್ಲಿ ಸಿಗುವುದು ವಿಶೇಷ.

    ಪುರುಷರಿಗೆ ಬೇಕಾದ ಶೆರ್ವಾನಿ, ಇಂಡೋ ವೆಸ್ಟರ್ನ್‌ ಶೆರ್ವಾನಿ, ಕುರ್ತಾ ಪೈಜಾಮಾ, ವೆಸ್ಟ್‌ ಕೋಟ್‌ ಅಲ್ಲದೇ ಕ್ಲಾಸಿಕ್‌, ಟುಕ್ಸೆಡೋ, ಜೋಧ್‌ಪುರಿ ಶೈಲಿಯ ಸೂಟ್ಸ್‌ ಇಲ್ಲಿ ದೊರೆಯುತ್ತದೆ. ಇಲ್ಲಿರುವ ಕಲೆಕ್ಷನ್‌ಗಳು ವಿನ್ಯಾಸಗಾರರಿಗೆ ಸಹ ಪ್ರೇರಣೆ ನೀಡಿದೆ. ದೇಶದ ಎಲ್ಲೆಡೆ ಉತ್ತಮವಾದ ಸಂಪರ್ಕವಿದ್ದು ಉತ್ತಮವಾಗಿರುವುದರಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಆಯ್ಕೆ ಮಾಡಿ ಗ್ರಾಹಕರಿಗೆ ನೀಡುವುದರಲ್ಲಿ ಸಮ್ಯಕ್‌ ಯಾವಾಗಲೂ ಮುಂದಿರುತ್ತದೆ.

    ಗ್ರಾಹಕರ ನಂಬಿಕೆ ವಿಶ್ವಾಸ ಸಿಗುತ್ತಿದ್ದಂತೆ 2012ರಲ್ಲಿ https://www.samyakk.com ಹೆಸರಿನಲ್ಲಿ ವೆಬ್‌ಸೈಟ್‌ ಆರಂಭವಾಗಿದೆ. ವೆಬ್‌ಸೈಟ್‌ನಿಂದ ಭಾರತ ಮಾತ್ರವಲ್ಲ ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆಗಳು ಸಿಕ್ಕಿದೆ. ಆನ್‌ಲೈನ್‌ ವೆಬ್‌ಸೈಟ್‌ ತೆರದ ಬಳಿಕ ಶಾಪಿಂಗ್‌ ಸಹ ಸುಲಭವಾಯಿತು. ಜನರು ಕುಳಿತ ಸ್ಥಳದಿಂದಲೇ ಇಷ್ಟವಾಗಿರುವ ಬಟ್ಟೆಗಳನ್ನು ಖರೀದಿಸತೊಡಗಿದರು. ಯಾವುದಕ್ಕೂ ರಾಜಿಯಾಗದೇ ಗುಣಮಟ್ಟ ವಸ್ತುಗಳು ನಿಗದಿತ ಸಮಯದ ಒಳಗಡೆ ತಲುಪುತ್ತಿದ್ದ ಕಾರಣ ವಿದೇಶದಲ್ಲೂ ಸಮ್ಯಕ್‌ಗೆ ಗ್ರಾಹಕರು ಹುಟ್ಟಿಕೊಂಡರು.

    ದೇಶದ ಎಲ್ಲ ವರ್ಗದ ಜನರಿಗೆ ಬೇಕಾದ ಉಡುಪುಗಳ ಮಳಿಗೆ ಸಮ್ಯಕ್. ಸಾಂಪ್ರದಾಯಿಕ ವಿನ್ಯಾಸದಿಂದ ಹಿಡಿದು ಆಧುನಿಕ ಸಮಕಾಲೀನರವರೆಗಿನ ಸಂಪೂರ್ಣ ಶ್ರೇಣಿಯ ಉಡುಪುಗಳು ಇಲ್ಲಿ ಸಿಗುವುದು ವಿಶೇಷ. ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಂದ ಪ್ರೇರಣೆ ಪಡೆದು ವಸ್ತ್ರಗಳನ್ನು ವಿನ್ಯಾಸ ಮಾಡಲಾಗುತ್ತದೆ. ಮಹಿಳೆಯರಿಗೆ ಬೇಕಾದ ಸೀರೆಗಳು, ಲೆಹೆಂಗಾಗಳು ಮತ್ತು ಸಲ್ವಾರ್ ಸೂಟ್‌ಗಳು ಪುರುಷರಿಗಾಗಿ ಶೆರ್ವಾನಿ, ಸೂಟ್‌ಗಳು ಮತ್ತು ಇಂಡೋ-ವೆಸ್ಟರ್ನ್ ಸಾಂಪ್ರದಾಯಿಕ ಮತ್ತು ನವ ಸಾಂಸ್ಕೃತಿಕ ವಿನ್ಯಾಸಗಳ ಉಡುಪುಗಳು ಲಭ್ಯವಿದೆ.

    ಬೆಂಗಳೂರು ನಗರದ ಹೃದಯಭಾಗದಲ್ಲಿ ತೆರೆಯಲಾದ ಅಂಗಡಿಯಲ್ಲಿ 5 ಮಳಿಗೆಗಳಿವೆ. ಪ್ರತಿ ಮಹಡಿಯಲ್ಲಿ ನಮ್ಮ ಸೊಗಸಾದ ಮತ್ತು ಡಿಸೈನರ್ ಉಡುಪುಗಳು ಮತ್ತು ಪರಿಕರಗಳ ಸಂಗ್ರಹವಿದೆ. ಖರೀದಿ ಮಾತ್ರವಲ್ಲ, ಗ್ರಾಹಕರಿಗೆ ಬೆಸ್ಪೋಕ್ ಸೇವೆಗಳು ಸಹ ಇಲ್ಲಿ ಸಿಗುತ್ತದೆ. ಫ್ಯಾಷನ್ ಸಲಹೆಗಾರರು ಯಾವುದೇ ಸಂದರ್ಭಕ್ಕೂ ಅತ್ಯುತ್ತಮವಾದ ವಿನ್ಯಾಸ ಮತ್ತು ಉಡುಪುಗಳ ಆಯ್ಕೆಗಳ ಶಿಫಾರಸು ಮಾಡುತ್ತಾರೆ.

    ಉಡುಪುಗಳ ಪರಿಪೂರ್ಣತೆಗಾಗಿ ಕರಕುಶಲವಾಗಿ ತಯಾರಿಸಲಾಗುತ್ತದೆ ಮತ್ತು ಯಾವುದೇ ರೀತಿಯ ಕಡಿತ ಇರುವುದಿಲ್ಲ. ವಿಶ್ವಾದ್ಯಂತ ಬೆಲೆಗಳು ಏಕರೂಪವಾಗಿದೆ. ಉಡುಪುಗಳ ಮಾರಾಟದಲ್ಲಿ ದಶಕಗಳ ಅನುಭವ ಇರುವ ಕಾರಣ ಭಾರತದಲ್ಲಿ ಈಗ ಸಮ್ಯಕ್‌ ಒಂದು ನಂಬಿಕೆ ಮತ್ತು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಬ್ರ್ಯಾಂಡ್‌ಗಳ ಪೈಕಿ ಒಂದಾಗಿದೆ.

    ವಿಳಾಸ
    ಸಮ್ಯಕ್‌
    ಸಂಖ್ಯೆ 24, ಡಿಸೋಜಾ ವೃತ್ತ,
    ರಿಚ್ಮಂಡ್ ರಸ್ತೆ, ಬೆಂಗಳೂರು – 560047,
    0091-8041113330
    esales@samyakk.com
    080 – 43753548
    ಮೊ : 78299 28490
    ವೆಬ್‌ಸೈಟ್‌: www.samyakk.com

  • ಮೊಬೈಲ್-ಬೆಳ್ಳಿ ವಿಗ್ರಹ ಬರುತ್ತೆಂದು ಕಾಯ್ತಿದ್ದ ರೈತರಿಗೆ ಶಾಕ್

    ಮೊಬೈಲ್-ಬೆಳ್ಳಿ ವಿಗ್ರಹ ಬರುತ್ತೆಂದು ಕಾಯ್ತಿದ್ದ ರೈತರಿಗೆ ಶಾಕ್

    ದಾವಣಗೆರೆ: ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡಿ ರೈತರಿಬ್ಬರು ಮೋಸ ಹೋಗಿರುವ ಘಟನೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಡ ರೈತರಾದ ಪ್ರಕಾಶ್ ಮತ್ತು ಸನಾವುಲ್ಲಾ ಮೋಸ ಹೋದವರಾಗಿದ್ದು, ಒಂದು ವಾರದ ಹಿಂದೆ ಸಾಯಿ ಮಾರ್ಕೆಟಿಂಗ್ ಹೆಸರಲ್ಲಿ ಪ್ರಕಾಶ್ ಮೊಬೈಲ್‍ಗೆ ಫೋನ್ ಬಂದಿತ್ತು. ಲಕ್ಕಿ ಡ್ರಾ ಮೂಲಕ ನಿಮಗೆ ಆಫರ್ ಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಿಮಗೆ ಉಚಿತವಾಗಿ ನೀಡುವುದಾಗಿ ತಿಳಿಸಿದ್ದರು. ಅಲ್ಲದೆ ನಾವು ಕೊಡುವ ಗಿಫ್ಟ್ ನಲ್ಲಿ 15 ಸಾವಿರ ಮೌಲ್ಯದ ಮೊಬೈಲ್ ಹಾಗೂ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಬೆಳ್ಳಿ ವಿಗ್ರಹ ನೀಡುವುದಾಗಿ ಹೇಳಿ ನಂಬಿಸಿದ್ದರು. ಆದರೆ ನಾವು ಅದನ್ನು ಪೋಸ್ಟ್ ಮುಖಾಂತರ ನಿಮಗೆ ನೀಡುವುದಾಗಿ ತಿಳಿಸಿದ್ದರು.

    ಪೋಸ್ಟ್ ಮುಖಾಂತರ ಗಿಫ್ಟ್ ಬರುತ್ತೆ ಎಂದು ಆಸೆಯಿಂದ ಕಾಯುತ್ತಿದ್ದ ರೈತರಿಗೆ ಶುಕ್ರವಾರ ಪಾರ್ಸಲ್ ಬಂದಿದೆ. ಆಗ ರೈತರು 1,600 ಕಟ್ಟಿ ಪಾರ್ಸಲ್ ತೆಗೆದುಕೊಂಡಿದ್ದಾರೆ. ಆದರೆ ಪಾರ್ಸಲ್ ತೆಗೆದು ನೋಡಿದ್ರೆ ಅದರಲ್ಲಿ ಕೇವಲ ಒಂದು ಬಾಕ್ಸ್ ಸ್ವೀಟ್ ಹಾಗೂ ಹತ್ತು ರೂ. ಬೆಲೆ ಬಾಳುವ ವಿಗ್ರಹ ಇತ್ತು. ಇದನ್ನು ನೋಡಿ ರೈತರು ದಂಗಾಗಿದ್ದಾರೆ. ಅಲ್ಲದೆ ಪೋಸ್ಟ್ ಗೆ ಕಟ್ಟಿದ್ದ 1,600 ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಕ್ಷಣ ರೈತರು ಮತ್ತೆ ಅದೇ ನಂಬರಿಗೆ ಫೋನ್ ಮಾಡಿದ್ದಾರೆ. ಆದರೆ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

  • ಮದ್ವೆಗಾಗಿ ಶಾಪಿಂಗ್ ಮುಗಿಸಿ ಬರ್ತಿದ್ದ ಜೋಡಿ ದಾರುಣ ಸಾವು

    ಮದ್ವೆಗಾಗಿ ಶಾಪಿಂಗ್ ಮುಗಿಸಿ ಬರ್ತಿದ್ದ ಜೋಡಿ ದಾರುಣ ಸಾವು

    ಹೈದರಾಬಾದ್: ಮದುವೆ ಶಾಪಿಂಗ್‍ಗೆಂದು ಹೋಗಿ ಮನೆಗೆ ಹಿಂದಿರುಗುತ್ತಿದ್ದ ಜೋಡಿಗೆ ರೈಲು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಘಟನೆ ಚಂದಾನಗರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಮೃತರನ್ನು ಮನೋಹರ್ (24) ಮತ್ತು ಸೋನಿ (18) ಎಂದು ಗುರುತಿಸಲಾಗಿದೆ. ಈ ಜೋಡಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ಎಂಎಂಟಿಎಸ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮನೋಹರ್ ಮತ್ತು ಸೋನಿ ಇಬ್ಬರಿಗೂ ನಿಶ್ಚಿತಾರ್ಥವಾಗಿ ಒಂದು ತಿಂಗಳಾಗಿತ್ತು. ಮುಂದಿನ ವರ್ಷ ಅಂದರೆ ಫೆಬ್ರವರಿಯಲ್ಲಿ ಇಬ್ಬರ ಮದುವೆಯ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆ ಸಿದ್ಧತೆ ಕೂಡ ನಡೆಯುತ್ತಿತ್ತು. ಹೀಗಾಗಿ ಇಬ್ಬರೂ ಒಟ್ಟಿಗೆ ಮದುವೆಗಾಗಿ ಶಾಪಿಂಗ್ ಮಾಡಲು ಹೋಗಿದ್ದರು. ಶಾಪಿಂಗ್ ಮುಗಿಸಿ ಮನೆಗೆ ವಾಪಸ್ ಬರಲು ಚಂದಾನಗರದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ.

    ಈ ವೇಳೆ ಇಬ್ಬರು ಒಟ್ಟಿಗೆ ರೈಲ್ವೆ ಹಳಿಯನ್ನು ದಾಟುತ್ತಿದ್ದರು. ಆಗ ಎಂಎಂಟಿಎಸ್ ರೈಲು ಬಂದು ಡಿಕ್ಕಿ ಹೊಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಬಂದು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈಗಾಗಲೇ ಅಧಿಕಾರಿಗಳು ಅವರ ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.