Tag: ಶಾನ್ವಿ

  • ಶೂಟಿಂಗ್ ವೇಳೆ ಜಾರಿ ಬಿದ್ದು ಶಾನ್ವಿಗೆ ಗಾಯ

    ಶೂಟಿಂಗ್ ವೇಳೆ ಜಾರಿ ಬಿದ್ದು ಶಾನ್ವಿಗೆ ಗಾಯ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶಾನ್ವಿ ಶ್ರೀವಾಸ್ತವ್ ಚಿತ್ರೀಕರಣದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

    shanvi srivastava

    ಬ್ಯಾಂಗ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶಾನ್ವಿ ಗ್ಯಾಂಗ್‍ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರ ಆ್ಯಕ್ಷನ್ ದೃಶ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದರು. ಹೀಗಿದ್ದರೂ ಚಿತ್ರೀಕರಣದ ವೇಳೆ ಮಳೆಯ ಎಫೆಕ್ಟ್ ನಲ್ಲಿ ಶೂಟಿಂಗ್ ಮಾಡುವಾಗ ಶಾನ್ವಿ ಶ್ರೀವಾಸ್ತವ್ ಕಾಲು ಜಾರಿ ಬಿದ್ದು ಕೈಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    shanvi srivastava

    ಸದ್ಯ ಈ ಕುರಿತಂತೆ ಚಿತ್ರತಂಡ, ಬ್ಯಾಂಗ್ ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ನನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ 9 ರಿಂದ 10 ಗಂಟೆಗಳ ಕಾಲ ಶೂಟಿಂಗ್ ನಡೆಯುತ್ತಿತ್ತು. ಆಗ ಶಾನ್ವಿ ಕಾಲು ಜಾರಿ ಕೆಳಗೆ ಬಿದ್ದು, ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಸದ್ಯ ಶಾನ್ವಿ ಚೇರಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

    shanvi srivastava

    ಈ ಚಿತ್ರಕ್ಕೆ ಶ್ರೀ ಗಣೇಶ್ ಪರಶುರಾಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸದಾ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಾನ್ವಿ ಇದೇ ಮೊದಲ ಬಾರಿಗೆ ಗ್ಯಾಂಗ್ ಸ್ಟಾರ್ ಆಗಿ ಕಾಣಿಸಿಕೊಳ್ಳಿದ್ದಾರೆ. ಅಲ್ಲದೇ ಸ್ಟಂಟ್ ಮಾಸ್ಟರ್ ಆಗಿ ಚೇತನ್ ಫೈಟಿಂಗ್ ಹೇಳಿಕೊಡುತ್ತಿದ್ದಾರೆ. ಇದನ್ನೂ ಓದಿ:ಅರವಿಂದ್‍ಗೆ ಹೇರ್ ಕಟ್ ಚಾಲೆಂಜ್ ಕೊಟ್ಟ ಸುದೀಪ್ – ಡಿಯು ಕೂದಲ ಗತಿಯೇನು?

  • ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಬೆಂಗಳೂರು: `ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಲಕ್ಷ್ಮೀ ಸಮೇತ ಇಂದು ರಕ್ಷಿತ್ ಶೆಟ್ಟಿ ರಾಜಾದ್ಯಂತ ಥಿಯೇಟರ್‍ಗೆ ಎಂಟ್ರಿಕೊಡುತ್ತಿದ್ದಾರೆ. ವಿಭಿನ್ನ ಕಥೆಯ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಸಿಂಪಲ್‍ಸ್ಟಾರ್ ಬಂಪರ್ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ.

    ಹೌದು. ಇಂದಿನಿಂದ ಶ್ರೀಮನ್ನಾರಾಯಣ ದರ್ಶನ ಕೊಡುತ್ತಿದ್ದಾನೆ. ಹ್ಯಾಟ್ಸಪ್ ಸಾಂಗ್ ಮೂಲಕ ಕಿಕ್ಕೇರಿಸಿದ್ದ ರಕ್ಷಿತ್ ಶೆಟ್ಟಿಯ ಕಲ್ಪನೆಯ ಕೂಸು ಅವನೇ ಶ್ರೀಮನ್ನಾರಾಯಣ ಇಂದು 10 ಗಂಟೆಯಿಂದ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರೋ ಸಿಂಪಲ್ ಸ್ಟಾರ್ ನ ಸಕ್ಸಸ್ ಯಾತ್ರೆ ಇಂದು 450ಕ್ಕೂ ಹೆಚ್ಚಿನ ಚಿತ್ರಮಂದಿರಲ್ಲಿಂದು ಮೆರವಣಿಗೆ ಹೊರಡಲಿದೆ.

    ಅಂದಹಾಗೇ ಅವನೇ ಶ್ರೀಮನ್ನಾರಾಯಣನ ರಕ್ಷಿತ್ ಶೆಟ್ಟಿಯ ಮೂರು ವರ್ಷದ ತಪಸ್ಸು. ಈಗಾಗಲೇ ಇನ್ಸ್ ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಶ್ರೀಮನ್ನಾರಾಯಣ ಭಜನೆ ಜೋರಾಗಿದೆ. ಚಿತ್ರಮಂದಿರದ ಮುಂದೆ ಅವನೇ ಶ್ರೀಮನ್ನಾರಾಯಣನ ಕಟೌಟ್‍ಗಳು ರಾರಾಜಿಸ್ತಿದ್ದು, ಗ್ರ್ಯಾಂಡಾಗಿ ನಾರಾಯಣನನ್ನು ವೆಲ್‍ಕಂ ಮಾಡಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

    ಗುರುವಾರ ಊರ್ವಶಿ ಚಿತ್ರಮಂದಿರದಲ್ಲಿ ಅದ್ಧೂರಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕಲರ್‍ಫುಲ್ ಪ್ರಿಮಿಯರ್ ಶೋನಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ರಿಷಬ್ ಶೆಟ್ಟಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಗುರುದತ್ತ್, ವಸಿಷ್ಠ, ಇಮ್ರಾನ್ ಸರ್ದಾರಿಯಾ, ಕೆ.ಮಂಜು ಸೇರಿದಂತೆ ಚಿತ್ರರಂಗ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ರು. ಚಿತ್ರ ನೋಡಿದವರೆಲ್ಲಾ ಶೆಟ್ರಿಗೆ ಹ್ಯಾಟ್ಸಪ್ ಹೇಳಿದ್ದಾರೆ.

    1980ರ ಕಾಲಘಟ್ಟದ ಕಥೆ ಇದಾಗಿದೆ. ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ವೇಳೆ ಹೊಳೆದ ಅವನೇ ಶ್ರೀಮನ್ನಾರಾಯಣ ಕಥೆಯನ್ನ ಸ್ವತಃ ರಕ್ಷಿತೇ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರ ಅಂದ್ರೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತೆ. ಫ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ, ರಕ್ಷಿತ್ ಶೆಟ್ಟಿ- ಶಾನ್ವಿ ಜೋಡಿಯನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಕಾತರತೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್ ಗೌಡ ನಿರ್ಮಿಸಿರೋ 30 ಕೋಟಿ ವೆಚ್ಚದ `ಅವನೇ ಶ್ರೀಮನ್ನಾರಾಯಣ’ ದರ್ಶನಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

    ಒಟ್ಟಿನಲ್ಲಿ ಸಿನಿರಸಿಕರೇ ಚರಿತ್ರೆ ಸೃಷ್ಠಿಸುವ ಅವತಾರದಲ್ಲಿ `ಅವನೇ ಶ್ರೀಮನ್ನಾರಾಯಣ’ ಮತ್ತು ಅಮರಾವತಿಯಿಂದ ಬಂದಿರೋ ಲಕ್ಷ್ಮೀಯ ದರ್ಶನನ್ನ ಥಿಯೇಟರ್‍ನಲ್ಲೇ ಪಡೆಯಿರಿ.