Tag: ಶಾನಿದ್ ಆಸಿಫ್ ಅಲಿ

  • ಶಾನಿದ್ ಆಸಿಫ್ ಅಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಜೋಶ್ ನಟಿ ಪೂರ್ಣಾ

    ಶಾನಿದ್ ಆಸಿಫ್ ಅಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಜೋಶ್ ನಟಿ ಪೂರ್ಣಾ

    ರಾಕೇಶ್ ಅಡಿಗ ಸೇರಿದಂತೆ ಹಲವು ಕಲಾವಿದರು ನಟಿಸಿದ್ದ ಜೋಶ್ (Josh) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ಪೂರ್ಣಾ ಅಲಿಯಾಸ್ ಶಮ್ನಾ ಕಾಸಿಮ್ (Shamna Kasim) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ನಟಿ ತಾವು ಮದುವೆ ಆಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ, ಯಾರನ್ನು ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಮಾತ್ರ ಗುಟ್ಟಾಗಿ ಇಟ್ಟಿದ್ದರು.

    ಅಂದಹಾಗೆ ಶಮ್ನಾ ದುಬೈ (Dubai) ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ (Shanid Asif Ali) ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಅದ್ಧೂರಿಯಾಗಿಯೇ ಈ ಜೋಡಿಯ ಮದುವೆ ನೆರವೇರಿದೆ. ಅಕ್ಟೋಬರ್ 24 ರಂದು ದುಬೈನಲ್ಲಿಯೇ ರಾತ್ರಿ ಈ ಜೋಡಿಯ ವಿವಾಹ ನಡೆದಿದ್ದು, ಕುಟುಂಬದ ಸದಸ್ಯರಿಗೆ ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ತಮ್ಮ ಮದುವೆಯ ವಿಚಾರವನ್ನು ಹಂಚಿಕೊಳ್ಳುವುದರ ಮೂಲಕ ಮದುವೆ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ನಟಿ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಮುಸ್ಲಿಂ ಸಂಪ್ರದಾಯದಂತೆ ಶಮ್ನಾ ಮದುವೆ (Marriage) ಆಗಿದ್ದು, ಕೆಂಪು ಬಣ್ಣದ ಜೆರಿಯ ಬಿಳಿ ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಶಮ್ನಾ ಮಿಂಚುತ್ತಿದ್ದರು. ಅಲ್ಲದೇ, ಸಾಕಷ್ಟು ಬಂಗಾರದ ಆಭರಣಗಳನ್ನೂ ಅವರು ಧರಿಸಿದ್ದರು. ಮದುವೆ ಸಿಂಪಲ್ ಅಂತ  ಅನಿಸಿದರೂ, ಅದೊಂದು ದುಬಾರಿ ಮದುವೆ ಆಗಿತ್ತು ಎಂದು ಹೇಳಲಾಗುತ್ತಿದೆ.

    ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಶಮ್ನಾ, ಮಂಜು ಪೋಲೂರು ಪೆಂಕುಟ್ಟಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ನಂತರ ತೆಲುಗು ಮತ್ತು ತಮಿಳಿನಲ್ಲೂ ಅವರು ಸಿನಿಮಾಗಳನ್ನು ಮಾಡಿದರು. ಕನ್ನಡದ ಜೋಶ್ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.

    ಜೋಶ್ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಶಮ್ನಾ ಸ್ಟಾರ್ ನಟಿಯಾಗಿ ಬದಲಾದರು. ಅಲ್ಲದೇ, ಇತ್ತೀಚೆಗಷ್ಟೇ ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಇವರು, ಈ ಹೊತ್ತಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಇವರಿಗೆ ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಸೆಮಣೆ ಏರಲು ಸಜ್ಜಾದ `ಜೋಶ್’ ನಟಿ ಪೂರ್ಣ

    ಹಸೆಮಣೆ ಏರಲು ಸಜ್ಜಾದ `ಜೋಶ್’ ನಟಿ ಪೂರ್ಣ

    ನ್ನಡ ಚಿತ್ರರಂಗಕ್ಕೆ `ಜೋಶ್’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದ ಪೂರ್ಣ ಈಗ ಹಸೆಮಣೆ ಏರಲು ಸಜ್ಜಾಗಿದ್ದು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ, ಪತಿಯನ್ನು ಪರಿಚಯಿಸುವ ಮೂಲಕ ತಮ್ಮ ಮದುವೆಯ ಕುರಿತು ನಟಿ ಪೂರ್ಣ ರಿವೀಲ್ ಮಾಡಿದ್ದಾರೆ.

    `ಜೋಶ್’ ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್. ಬಹುಭಾಷಾ ಸಿನಿಮಾಗಳಲ್ಲಿ ಛಾಪೂ ಮೂಡಿಸಿರುವ ನಟಿ ಪೂರ್ಣ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಶಾಮ್ನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

    `ನನ್ನ ಜೀವನದ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ’ ಎಂದು ಸಂತಸದ ವಿಚಾರವನ್ನು ನಟಿ ಪೂರ್ಣ ಹಂಚಿಕೊಂಡಿದ್ದಾರೆ. ಜೊತೆಗೆ ಭಾವಿ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಪೂರ್ಣ ಮದುವೆಯಾಗುತ್ತಿರುವ ಹುಡುಗ ಶಾನಿದ್ ಆಸಿಫ್ ಅಲಿ.

    ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪೂರ್ಣ ನನ್ನ ಕುಟುಂಬದ ಆಶೀರ್ವಾದದ ಜೊತೆಗೆ ನಾನು ನನ್ನ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಇದು ಅಧಿಕೃತ ಎಂದು ಹೇಳಿದ್ದಾರೆ. ನೆಚ್ಚಿನ ನಟಿಯ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ.