Tag: ಶಾಕ್

  • ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರ ಸಾವು

    ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರ ಸಾವು

    ಚಿಕ್ಕಬಳ್ಳಾಪುರ: 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ವಿದ್ಯುತ್ ಹರಿದು ಬೆಸ್ಕಾಂ ಹೊರಗುತ್ತಿಗೆ ನೌಕರನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ವೀರಾಪುರ ಬಳಿ ನಡೆದಿದೆ.

    ಬೆಸ್ಕಾಂ ನ ಹೊರಗುತ್ತಿಗೆ ನೌಕರ ತೌಶೀಫ್ (20) ಮೃತ ಯುವಕ. ಕಳೆದ ರಾತ್ರಿ ಮಳೆಗೆ ನೆಲಕ್ಕುರುಳಿದ್ದ 11 ಕೆ ವಿ ವಿದ್ಯುತ್ ಲೈನ್ ದುರಸ್ಥಿ ವೇಳೆ ಏಕಾಏಕಿ ವಿದ್ಯುತ್ ಹರಿದಿದೆ. ಈ ವೇಳೆ ಕಂಬದ ಮೇಲಿದ್ದ ತೌಶೀಫ್ ಗೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    ಈ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ವಿದ್ಯುತ್ ಶಾಕ್ ಆಗಿ ಮಗುವಿನ ಬಲಗೈ ಕಟ್- ಮಗಳು ಬೇಡ ಎಂದ ತಂದೆ

    ವಿದ್ಯುತ್ ಶಾಕ್ ಆಗಿ ಮಗುವಿನ ಬಲಗೈ ಕಟ್- ಮಗಳು ಬೇಡ ಎಂದ ತಂದೆ

    ಬೆಂಗಳೂರು: ವಿದ್ಯುತ್ ಶಾಕ್ ಒಳಗಾಗಿ ಬಲಗೈ ಕಳೆದುಕೊಂಡಿದ್ದ 6 ವರ್ಷದ ಮಗಳನ್ನು ತಂದೆಯೊಬ್ಬ ದೂರ ಮಾಡಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.

    ನೆಲಮಂಗಲ ಪಟ್ಟಣದ ರೇಣುಕಾನಗರದಲ್ಲಿ ಕಳೆದ ಒಂದು ತಿಂಗಳ ಹಿಂದೆ ಮನೆಯ ಮೇಲೆ ಆಟವಾಡುತ್ತಿದ್ದ ಮಗು ಆಯತಪ್ಪಿ ವಿದ್ಯುತ್ ತಂತಿಗೆ ಕೈ ತಗುಲಿದಾಗ, ಮಗುವಿನ ಬಲಗೈ ವಿದ್ಯುತ್ ಶಾಕ್‍ ಗೆ ಒಳಗಾಗಿ ಕೈ ಕಳೆದು ಕೊಂಡಿತ್ತು.

    ಚಿಕಿತ್ಸೆಗೆಂದು ಮಗು ಆಶ್ರಿಯಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಪುಟಾಣಿ ಆಶ್ರೀಯಳ ಬಲಗೈ ತುಂಡರಿಸಿ ಜೀವವನ್ನ ಉಳಿಸಿದ್ದಾರೆ. ಆದರೆ ಮಗುವಿಗೆ ಈ ರೀತಿಯಾಗಿ ತಿಂಗಳುಗಳೇ ಕಳೆದರು, ಇಲ್ಲಿಯವರೆಗೂ ಪಾಪಿ ತಂದೆ ಸೈಯದ್ ಪಾಷ ಆಸ್ಪತ್ರೆಗಾಗಲಿ, ಮನೆಗಾಗಲಿ ಬಂದು ತಾನು ಜನ್ಮ ನೀಡಿದ ಮಗುವಿನ ಯೋಗಕ್ಷೇಮ ನೋಡಿಲ್ಲ ಎಂದು ಮಗುವಿನ ತಾಯಿ ಶಬೀನಬಾನು ಆರೋಪಿಸಿದ್ದಾರೆ.

    ಅಲ್ಲದೆ ಮಗು ತನ್ನ ಬಲಗೈ ಕಳೆದುಕೊಂಡಿರೋದರಿಂದ ನೋಡಲು ಅಸಹ್ಯ ಹಾಗೂ ಮುಂದಿನ ಜೀವನ ಕಷ್ಟ ಎಂದು ತಾಯಿ ಮಗುವನ್ನು ತಿರಸ್ಕರಿಸಿ, ಎರಡನೇ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಹಾಕುತ್ತಿದ್ದಾನೆ. ಇನ್ನೂ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು, ಆಸ್ಪತ್ರೆಯ ಖರ್ಚು ವೆಚ್ಚವನ್ನು ನಿಭಾಯಿಸಿ ಕೈತೊಳೆದು ಕೊಂಡಿದ್ದಾರೆ.

    ಇತ್ತ ಗಂಡನ ಆಸರೆ ಇಲ್ಲದೆ ಇತ್ತ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು ನೀಡಿದ ಪರಿಹಾರದ ಭರವಸೆ ಹುಸಿಯಾಗಿದೆ. ತಾಯಿ ಹಾಗೂ ಕೈ ಕಳೆದುಕೊಂಡಿರುವ ಪುಟ್ಟ ಮಗು ಕಣ್ಣೀರು ಹಾಕುತ್ತಿದ್ದು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

  • ವಿದ್ಯುತ್ ಕಂಬದಿಂದ ಕೆಳಗೆ ಬಿದ್ದು ಯುವಕ ಸಾವು

    ವಿದ್ಯುತ್ ಕಂಬದಿಂದ ಕೆಳಗೆ ಬಿದ್ದು ಯುವಕ ಸಾವು

    ರಾಯಚೂರು: ವಿದ್ಯುತ್ ಕಂಬ ಏರಿ ರಿಪೇರಿ ಕೆಲಸ ಮಾಡುತ್ತಿದ್ದ ವೇಳೆ ಯುವಕನಿಗೆ ವಿದ್ಯುತ್ ಶಾಕ್ ಹೊಡೆದು ಕಂಬದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಜಿಲ್ಲೆಯ ದೇವದುರ್ಗ ತಾಲೂಕಿನ ಮುಕ್ಕಲಗುಡ್ಡ ತಾಂಡದಲ್ಲಿ ಈ ಘಟನೆ ನಡೆದಿದೆ. ಪಕ್ಕದ ಮುರಾನಪುರ ತಾಂಡದ ನಿವಾಸಿಯಾದ 18 ವರ್ಷದ ರಾಜೇಶ್ ಮೃತ ಯುವಕ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಹಿನ್ನೆಲೆಯಲ್ಲಿ ರಾಜೇಶ್ ರಿಪೇರಿ ಮಾಡಲು ಕಂಬ ಹತ್ತಿದ್ದ. ಆದ್ರೆ ವಿದ್ಯುತ್ ಪ್ರಸರಣ ಆರಂಭವಾಗಿದ್ದು, ಶಾಕ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.