ನಿನ್ನೆಯಷ್ಟೇ ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಇನ್ಸ್ಟಾದಲ್ಲಿ ಪೂನಂ ಅವರ ಮ್ಯಾನೇಜರ್ ಗರ್ಭಕೋಶ ಕಂಠ ಕ್ಯಾನ್ಸರ್ (Cancer)ನಿಂದಾಗಿ ಪೂನಂ ನಿಧನರಾಗಿದ್ದಾರೆ (Death) ಎಂದು ಪೋಸ್ಟ್ ಹಾಕಿ ಇಡೀ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಪೂನಂ ನಿಧನ ಇಡೀ ದೇಶವೇ ಚರ್ಚೆ ಮಾಡುವಂತೆ ಮಾಡಿತ್ತು. ಪೂನಂ ಸತ್ತಿರುವ ಸಮಾಚಾರದ ಹೊರತಾಗಿ ಬೇರೆ ಯಾವ ಫೋಟೋಗಳು ಆಚೆ ಬರಲಿಲ್ಲ. ಹಾಗಾಗಿ ಸಹಜವಾಗಿಯೇ ಸಾವಿನ ಬಗ್ಗೆ ಅನುಮಾನ ಮೂಡಿತ್ತು.
ಇದೀಗ ಪೂನಂ ಬದುಕಿರುವ ಸುದ್ದಿಯನ್ನು ಸ್ವತಃ ಪೂನಂ ಅವರೇ ನೀಡಿದ್ದಾರೆ. ತಾನು ಬದುಕಿದ್ದೇನೆ. ಹಾಗೆ ಮಸೇಜ್ ಮಾಡಲು ಕಾರಣವಿದೆ. ಗರ್ಭಕೋಶ ಕಂಠ ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸಬೇಕಿತ್ತು. ಹಾಗಾಗಿ ಈ ಪೋಸ್ಟ್ ಮಾಡಲಾಯಿತು. ದಯವಿಟ್ಟು ಈ ಕ್ಯಾನ್ಸರ್ ಕುರಿತಂತೆ ಜಾಗೃತ ವಹಿಸಿ ಎಂದು ಪೂನಂ ವಿಡಿಯೋ ಮೂಲಕ ಹೇಳಿದ್ದಾರೆ.
ಪೂನಂ ಬದುಕಿರುವ ಸಮಾಚಾರ ತಿಳಿದು ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಜಗತ್ತನ್ನೇ ಫೂಲ್ ಮಾಡಿದ ಪೂನಂರನ್ನು ಕೆಲವರು ತರಾಟೆಗೂ ತೆಗೆದುಕೊಂಡಿದ್ದಾರೆ. ಏನೇ ಇರಲಿ.. ಈ ಮಾರ್ಗದ ಮೂಲಕ ಜಾಗೃತಿ ಮೂಡಿಸುವುದು ತರವಲ್ಲ ಎನ್ನುವುದು ಅನೇಕರ ಅಭಿಪ್ರಾಯ.
ವಿಜಯಪುರ: ವಿದ್ಯುತ್ ತಗುಲಿ ಸಹೋದರರಿಬ್ಬರು ಸ್ಥಳದಲ್ಲೇ ಧಾರುಣ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದಿದೆ.
ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ ಮೃತ ಸಹೋದರರು. ಅಣ್ಣ ಮುದ್ದುಗೌಡ ಮೋಟಾರ್ ಆನ್ ಮಾಡಲು ಹೋದಾಗ ಕರೆಂಟ್ ತಗುಲಿದೆ. ಈ ವೇಳೆ ಅಣ್ಣನನ್ನು ರಕ್ಷಿಸಲು ಹೋದಾಗ ತಮ್ಮ ಶಿವರಾಜ್‍ಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.
ಚಿಕ್ಕೋಡಿ/ಬೆಳಗಾವಿ: ನೀರು ಹಾಯಿಸಲು ಬಾವಿಯ ಮೋಟರ್ ಸ್ಟಾರ್ಟ್ ಮಾಡಲು ಹೋಗಿ ಸಹೋದರಿಬ್ಬರು ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದ ಬಡಿಗೇರ ತೋಟದಲ್ಲಿ ನಡೆದಿದೆ.
ಬಾವಿಗೆ ಅಳವಡಿಸಲಾಗಿದ್ದ ನೀರೆತ್ತುವ ಮೋಟರ್ ನ್ನು ಬೆಳಗ್ಗೆ ಸ್ಟಾರ್ಟ್ ಮಾಡಲು ಹೋಗಿ ರಾಜು ಬಾಳಪ್ಪ ಬಡಿಗೇರ ಹಾಗೂ ಸಹೋದರ ಶಂಕರ್ ರಾಮಪ್ಪ ಬಡಿಗೇರ ಸಾವೀಗಿಡಾಗಿದ್ದಾರೆ. ಮದುವೆ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ
ಮಳೆ, ಗಾಳಿಗೆ ವಿದ್ಯುತ್ ತಂತಿಗಳು ಕೆಳಗೆ ನೇತಾಡುತ್ತಿದ್ದು, ಆಕಸ್ಮಿಕವಾಗಿ ವಿದ್ಯುತ್ ಮೋಟರ್ ಗೆ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹಾಗೂ ಮೃತ ಸಹೋದರರ ಸಂಬಂಧಿಕರು ತಿಳಿಸಿದ್ದಾರೆ. ರಾಮ-ಲಕ್ಷ್ಮಣರಂತೆ ಒಂದಾಗೇ ಇರುತ್ತಿದ್ದ ಅಣ್ಣ, ತಮ್ಮನ ಏಕಾಏಕಿ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಕುರಿತು ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ನೋ: ಪೊಲೀಸ್ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯ ಮರಣೋತ್ತರ ಪರೀಕ್ಷೆ ಬಂದಿದ್ದು, ವರದಿಯಲ್ಲಿ ಆತ ಪೊಲೀಸರ ಗುಂಡೇಟಿನಿಂದ ಸಾನ್ನಪ್ಪಿಲ್ಲ ಎಂದು ತಿಳಿದು ಬಂದಿದೆ.
ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.
ಪೊಲೀಸರನ್ನು ಕೊಂದಿದ್ದ ವಿಕಾಸ್ ದುಬೆಯನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಆದರೆ ದುಬೆ ಸಾವನ್ನಪ್ಪಿದ್ದು, ಪೊಲೀಸರು ಹೊಡೆದ ಗುಂಡೇಟಿನಿಂದಲ್ಲ. ಪೊಲೀಸರು ಗುಂಡು ಹೊಡೆದಾಗ ಆತ ಸತ್ತಿರಲಿಲ್ಲ. ಬದಲಿಗೆ ಪೊಲೀಸರು ಗುಂಡು ಹೊಡೆದಾಗ ಆತನಿಗೆ ತೀವ್ರ ರಕ್ತಸ್ರಾವವಾಗಿದೆ. ಜೊತೆಗೆ ಗುಂಡು ಬಿದ್ದ ತಕ್ಷಣ ಆತ ಶಾಕ್‍ಗೆ ಒಳಗಾಗಿದ್ದಾನೆ. ಹೀಗಾಗಿ ಆತ ರಕ್ತಸ್ರಾವ ಮತ್ತು ಶಾಕ್‍ನಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಇದನ್ನು ಓದಿ: 22 ವರ್ಷದ ಹಿಂದೆಯೇ ಪೊಲೀಸರನ್ನು ಓಡಾಡಿಸಿಕೊಂಡು ಹೊಡೆದಿತ್ತು ದುಬೆ ಫ್ಯಾಮಿಲಿ
ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.
ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಗೆ ಬಲಿಯಾಗಿದ್ದ.
ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು ಅವೈಜ್ಞಾನಿಕ ವಿದ್ಯುತ್ ಬಿಲ್ ವಸೂಲಿಗೆ ಇಳಿದಿವೆ.
ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಗ್ರಾಹಕರ ಮೇಲೆ ಬರೆ ಎಳೆಯುವ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ ಎರಡೂ ತಿಂಗಳ ಅಂದ್ರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ಆಧಾರದ ಮೇಲೆ ಬಿಲ್ ನೀಡಿರುವುದು ಅವೈಜ್ಞಾನಿಕ ಎಂದು ಸಾವಿರಾರು ಗ್ರಾಹಕರು ಆರೋಪಿಸುತ್ತಿದ್ದಾರೆ.
ಕೇಸ್ ನಂ.1: ರಾಜು ಬಿರ್ಜಣ್ಣ, ಧಾರವಾಡ
ಹಳೆ ಬಿಲ್ 130 ರೂ. – ಹೊಸ ಬಿಲ್ 7.64 ಲಕ್ಷ ರೂ.
ರಾಜು ಬಿರ್ಜಣ್ಣರದ್ದು ಚಿಕ್ಕ ಮನೆ, 3 ಲೈಟ್, ಒಂದು ಫ್ಯಾನ್, ಟಿವಿ ಇದೆ. ಪ್ರತಿ ತಿಂಗಳು 130 ರೂ. ಬರುತ್ತಿತ್ತು. ಈ ಬಾರಿ 7.64 ಲಕ್ಷ ರೂ. ಬಂದಿದೆ. ಹೆಸ್ಕಾಂನವರಿಗೆ ಕರೆ ಮಾಡಿ ತಿಳಿಸಿದ ನಂತರ ಸಿಬ್ಬಂದಿ ಬಂದು ಬಿಲ್ ವಾಪಸ್ ಪಡೆದುಕೊಂಡು ಹೋಗಿದ್ದಾರೆ.
ಕೇಸ್ ನಂ.2: ಆಸ್ವಿತ್, ಹೊಸಪೇಟೆ (ಬಳ್ಳಾರಿ)
ಹಳೆ ಬಿಲ್ 861 ರೂ. – ಹೊಸ ಬಿಲ್ 10,017 ರೂ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ನಿವಾಸಿ ಆಸ್ವಿತ್ ಅವರಿಗೆ ಪ್ರತಿ ಬಾರಿಗಿಂತ 10 ಪಟ್ಟು ಹೆಚ್ಚು ಬಿಲ್ ಬಂದಿದೆ. ಈ ಬಗ್ಗೆ ಜೆಸ್ಕಾಂಗೆ ಕೇಳಿದರೆ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ. ಅಧಿಕಾರಿಗಳು ನಮ್ಮ ತಪ್ಪೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಬಿಲ್‍ನಲ್ಲಿ ಡಿಸೆಂಬರ್ 2019ರಿಂದ ಬಿಲ್ ಜನರೇಟ್ ಆಗಿದೆ. ಆದರೆ ಇವರು ಡಿಸೆಂಬರ್‍ನಿಂದ ಪ್ರತಿ ತಿಂಗಳು ಸಹ ಬಿಲ್ ಕಟ್ಟಿದ್ದಾರೆ.
ಕೇಸ್ ನಂ.3: ಅಬ್ದುಲ್ ರೆಹಮಾನ್, ಕಲಬುರಗಿ
ಹಳೆ ಬಿಲ್ 961 ರೂ. – ಹೊಸ ಬಿಲ್ 6,800 ರೂ.
ಕಲಬುರಗಿಯಲ್ಲಿ ಜೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿ ಬಿಲ್ ನೀಡಿದ್ದು ಗ್ರಾಹಕರು ಶಾಕ್ ಆಗಿದ್ದಾರೆ. ಕಲಬುರಗಿಯ ಅಬ್ದುಲ್ ರೆಹಮಾನ್‍ಗೆ ಪ್ರತಿ ತಿಂಗಳು 900ರಿಂದ 1000 ರೂ. ಬಿಲ್ ಬರುತ್ತಿತ್ತು. ಈ ಬಾರಿ 6,813 ರೂ ಬಂದಿದೆ. ಬಹುತೇಕ ಕಡೆ ಪ್ರತಿ ಮೀಟರ್ ಲೆಕ್ಕದಲ್ಲಿ 50 ರೂ. ಹೆಚ್ಚು ಪಡೆಯಲಾಗ್ತಿರೋ ಆರೋಪ ಕೇಳಿಬಂದಿದೆ.
ಕೇಸ್ ನಂ.4: ಮಧು, ದಾವಣಗೆರೆ
ಹಳೆ ಬಿಲ್ 720ರೂ. – ಹೊಸ ಬಿಲ್ 5,299 ರೂ.
ದಾವಣಗೆರೆ ಜನರಿಗೂ ಬೆಸ್ಕಾಂ ಶಾಕ್ ನೀಡಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕಡಿಮೆ ಬಿಲ್ ಬಂದರೆ ಈ ಬಾರಿ 3 ರಿಂದ 5 ಪಟ್ಟು ಹೆಚ್ಚು ಬಿಲ್ ಬಂದಿದೆ. ಏಪ್ರಿಲ್ ತಿಂಗಳು ಬಿಟ್ಟು ಮೇ ತಿಂಗಳ ಬಿಲ್ ನೋಡಿದ ಜನ ಶಾಕ್ ಆಗಿದ್ದಾರೆ. ಸಾವಿರ ರೂ.ಒಳಗೆ ಬರುತ್ತಿದ್ದವರಿಗೆ ಐದಾರು ಸಾವಿರ ಬಿಲ್ ಬಂದಿದೆ. ಬೆಸ್ಕಾಂ ಯಡವಟ್ಟಿಗೆ ಜನ ಚಿಂತಾಕ್ರಾಂತರಾಗಿದ್ದಾರೆ.
ಕೇಸ್ ನಂ.5: ಹನುಮಂತಪ್ಪ ಕಬ್ಬಾರ, ರಾಣೇಬೆನ್ನೂರು (ಹಾವೇರಿ )
ಹಳೆ ಬಿಲ್ 349 ರೂ. – ಹೊಸ ಬಿಲ್ 1,324 ರೂ.
ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲೂ ಗ್ರಾಹಕರಿಗೆ ಹೆಸ್ಕಾಂ ಬರೆ ಹಾಕಿದೆ. ಕೆಲವರಿಗೆ 3 ತಿಂಗಳ ಹೆಚ್ಚುವರಿ ಹಣವನ್ನು ಈ ಬಾರಿಯ ಬಿಲ್‍ನಲ್ಲಿ ಸೇರಿಸಿದ್ದಾರೆ. ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ ಕಂಗಾಲಾಗಿರುವ ಜನರಿಗೆ ಹೆಚ್ಚು ಬಿಲ್ ಹಾಕಿ ತೊಂದರೆ ಕೊಡುತ್ತಿದ್ದಾರೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಸ್ ನಂ.6: ಅಶೋಕ್ ಶಂಕರಪ್ಪ, ಗದಗ
ಹಳೆ ಬಿಲ್ 250ರೂ. – ಹೊಸ ಬಿಲ್ 1,111ರೂ.
ಲಾಕ್‍ಡೌನ್ ಸಂಕಷ್ಟದಲ್ಲಿದ್ದ ಗದಗ ಜನರಿಗೆ ಹೆಸ್ಕಾಂ ಕರೆಂಟ್ ಶಾಕ್ ನೀಡಿದೆ. ಈ ಬಾರಿ ಬರೋಬ್ಬರಿ 4 ಪಟ್ಟು ಹೆಚ್ಚು ಬಿಲ್ ಬಂದಿದೆ. ಮನೆಯಲ್ಲಿ ಒಂದು ಟಿವಿ, ಒಂದು ಫ್ಯಾನ್, ಒಂದು ಫ್ರಿಡ್ಜ್ ಮಾತ್ರ ಬಳಸುತ್ತಿದ್ದರೂ ಹೆಚ್ಚು ಬಿಲ್ ಹಾಕಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಸ್ ನಂ.7: ಜಮುನಾ ಚಂದ್ರ, ಅರಸೀಕೆರೆ ( ಹಾಸನ )
ಹಳೆ ಬಿಲ್ 1,000ರೂ. – ಹೊಸ ಬಿಲ್ 3,515ರೂ.
ಹಾಸನ ಜಿಲ್ಲೆ ಅರಸೀಕೆರೆಯಲ್ಲೂ ಈ ಬಾರಿ 1ರಿಂದ 2 ಪಟ್ಟು ಬಿಲ್ ಹೆಚ್ಚು ಬಂದಿದೆ. ಹಾಸನ ಜಿಲ್ಲೆಯಲ್ಲಿ 2 ತಿಂಗಳ ಕರೆಂಟ್ ಬಿಲ್ ಒಟ್ಟಿಗೆ ಕೊಟ್ಟಿದ್ದಾರೆ. ಆದರೆ ಹೆಚ್ಚುವರಿ ಬಿಲ್ ಕೊಟ್ಟಿದ್ದಾರೆ. ಬಹುತೇಕ ಮನೆಗಳ ಬಿಲ್ ದುಬಾರಿಯಾಗಿದೆ.
ಕೇಸ್ ನಂ.8: ಅನಂತ್, ವಿಜಯಪುರ
ಹಳೆ ಬಿಲ್ 300 ರೂ. – ಹೊಸ ಬಿಲ್ 1,144 ರೂ.
ಕೊರೋನಾ ಅಬ್ಬರದ ಮಧ್ಯೆ ಲಾಕ್ ಆಗಿರೋ ವಿಜಯಪುರದ ಜನರಿಗೆ ಈ ತಿಂಗಳು ಕರೆಂಟ್ ಶಾಕ್ ಹೊಡೆದಿದೆ. ಒಬ್ಬೊಬ್ಬರಿಗೆ 500 ರಿಂದ 1000 ರೂ. ಹೆಚ್ಚು ಬಿಲ್ ಬಂದಿದೆ. ಲಾಕ್‍ಡೌನ್ ವೇಳೆ ಡಬಲ್ ಬಿಲ್ ಕೊಟ್ಟಿದ್ದಾರೆ. ಇದು ಸರಿಯಲ್ಲ, ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಅಂತ ಜನ ಆಗ್ರಹಿಸಿದ್ದಾರೆ.
ಕೇಸ್ ನಂ.9: ಬೆಂಗಳೂರು
ಹಳೆ ಬಿಲ್ 1,047ರೂ. – ಹೊಸ ಬಿಲ್ 4,601 ರೂ.
ಫೆಬ್ರವರಿ ತಿಂಗಳ ಬಿಲ್ 1,047 ರೂಪಾಯಿ ಬಂದಿದೆ. ಆದರೆ ಮಾರ್ಚ್ ಏಪ್ರಿಲ್ ಎರಡು ತಿಂಗಳ ಬಿಲ್ ಅಂತ 4,601 ರೂಪಾಯಿ ಬಂದಿರೋದು ಈ ಕುಟುಂಬಕ್ಕೆ ತಲೆ ತಿರುಗುವಂತೆ ಮಾಡಿದೆ.
ಕೇಸ್ ನಂ. 10: ಬೆಂಗಳೂರು
ಹಳೆ ಬಿಲ್ 1,560 ರೂ. – ಹೊಸ ಬಿಲ್ 4,366 ರೂ.
1,560 ರೂ. ಬರ್ತಿದ್ದ ಈ ಮನೆಯಲ್ಲಿ 4,366 ರೂಪಾಯಿ ಎರಡು ತಿಂಗಳ ಬಿಲ್ ಅಂತ ಬಂದಿದೆ. ಕೆಲಸ ಇಲ್ಲ, ಸಂಬಳ ಇಲ್ಲ ಈ ಟೈಮಿನಲ್ಲಿ ಹೀಗ್ ಬಿಲ್ ಬಂದರೆ ಏನ್ ಮಾಡೋದು ಅನ್ನುತ್ತೆ ಈ ಕುಟುಂಬ.
ದೂರು ಇದ್ಯಾ…? ಸಂಪರ್ಕಿಸಿ
ಮೆಸ್ಕಾಂ
ಹೆಲ್ಪ್ ಲೈನ್ ನಂಬರ್- 0824-2885766
ಇಮೇಲ್ -seemngmescom17@rediffmail.com
ಟ್ವಿಟ್ಟರ್ – @MESCOM Official
ಕೋಲಾರ: ವಿದ್ಯುತ್ ತಂತಿ ದುರಸ್ಥಿ ಕಾರ್ಯ ನಡೆಸುತ್ತಿದ್ದ ವೇಳೆ ಶಾಕ್ ಹೊಡೆದು ಗುತ್ತಿಗೆ ನೌಕರ ಕೆಲಕಾಲ ಕಂಬದಲ್ಲೇ ನೇತಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಬೆಸ್ಕಾಂ ಗುತ್ತಿಗೆ ನೌಕರ ದೀಪಕ್ ಗಂಭೀರ ಗಾಯಗೊಂಡಿದ್ದಾನೆ. ಕೋಲಾರ ನಗರದ ಕೋಲಾರಮ್ಮ ದೇವಾಲಯ ಮುಂಭಾಗದಲ್ಲಿ ವಿದ್ಯುತ್ ತಂತಿ ದುರಸ್ಥಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದ ದೀಪಕ್‍ಗೆ ಶಾಕ್ ಹೊಡೆದಿದೆ. ಇದರಿಂದ ನೌಕರ ಕೆಲಕಾಲ ಕಂಬದಲ್ಲೇ ನೇತಾಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ.
ಈ ವೇಳೆ ಇತರೆ ಐದಕ್ಕೂ ಹೆಚ್ಚು ಜನ ಬೆಸ್ಕಾಂ ನೌಕರರು ದುರಸ್ಥಿ ಕೆಲಸದಲ್ಲಿ ತೊಡಗಿದ್ದರು. ಆದರೆ ಅದೃಷ್ಟವಶಾತ್ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಗೊಂಡ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಆ್ಯಂಡಿ ಅವರ ತಂದೆ ಎಂಟ್ರಿ ಕೊಟ್ಟು ಮಗನನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಿಗೆ ರಿಮೋಟ್ ಕಂಟ್ರೋಲ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನಲ್ಲಿ ಬಿಗ್ ಬಾಸ್ `ಪಾಸ್’ ಎಂದು ಹೇಳಿದಾಗ ಸ್ಪರ್ಧಿಗಳು ಯಾರೇ ಬಂದರೂ ಮಾತನಾಡದೇ, ಅಲುಗಾಡದೇ ಸುಮ್ಮನೆ ನಿಲ್ಲಬೇಕಾಗುತ್ತದೆ. ಈ ವೇಳೆ ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಆಗಮಿಸುತ್ತಾರೆ.
ಆ್ಯಂಡಿ ಅವರನ್ನು ಭೇಟಿ ಮಾಡಲು ಅವರ ತಂದೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಬಂದ ತಕ್ಷಣ ಲಿವಿಂಗ್ ಏರಿಯಾದಲ್ಲಿ ಕುಳಿತ್ತಿದ್ದ ಆ್ಯಂಡಿ ಅವರ ಕೈ ಹಿಡಿದುಕೊಂಡು ಒಂದು ನಿಮಿಷ ಬಾ ಎಂದು ಹೇಳಿ ಉಳಿದ ಸ್ಪರ್ಧಿಗಳ ಬಳಿ ಕ್ಷಮೆ ಕೋರಿದ್ದಾರೆ.
ಈ ವೇಳೆ ಧನರಾಜ್ ಅವರು ಅಂಕಲ್ ನೀವು ಅಂದುಕೊಂಡಂತೆ ಏನಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಿಮಗೆಲ್ಲ ಇವನು ಎಷ್ಟು ತೊಂದರೆ ಮಾಡಿದ್ದಾನೆ. ನಾನು ಯಾಕೆ ಈತನನ್ನು ಇಲ್ಲಿ ಬಿಡಬೇಕು ಎಂದು ಹೇಳಿದ್ದಾರೆ.
ಬಳಿಕ ಕ್ಯಾಮೆರಾ ಮುಂದೆ ಹೋದ ಆ್ಯಂಡಿ ತಂದೆ, ಬಿಗ್ ಬಾಸ್ ನಾನು ಮಗನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಆಗ ಆ್ಯಂಡಿ “ಡ್ಯಾಡಿ ನಾನು ಕಷ್ಟಪಟ್ಟು ಆಡಿದ್ದೇನೆ” ಎಂದು ಹೇಳಿದಾಗ ಅವರ ತಂದೆ ಕೋಪದಿಂದ ಇಲ್ಲ. ನೀನು ಎಲ್ಲರ ಬಳಿ ಪ್ರೀತಿಯನ್ನು ಸಂಪಾದಿಸಬೇಕು ಎಂದು ಹೇಳಿ ಆ್ಯಂಡಿ ಕೈ ಹಿಡಿದುಕೊಂಡು ಮನೆಯ ಮುಖ್ಯದ್ವಾರದ ಬಳಿ ಕರೆದುಕೊಂಡು ಹೋಗಿದ್ದಾರೆ.
ಆ್ಯಂಡಿ ಅವರ ತಂದೆಯ ವರ್ತನೆ ನೋಡಿ ಮನೆಯವರು ಆಶ್ಚರ್ಯಗೊಂಡಿದ್ದಾರೆ. ಅಲ್ಲದೇ ಆ್ಯಂಡಿ ಅವರನ್ನು ಲಿವಿಂಗ್ ಏರಿಯಾದಿಂದ ಕರೆದುಕೊಂಡು ಹೋಗುವಾಗ ಸ್ಪರ್ಧಿಗಳು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಇದು ಕೇವಲ ಪ್ರೋಮೋ ಆಗಿದ್ದು, ಆ್ಯಂಡಿ ನಿಜವಾಗಲೂ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಾ, ಇಲ್ಲವಾ ಎಂಬುದು ಇಂದಿನ(ಗುರುವಾರ) ಸಂಚಿಕೆಯಲ್ಲಿ ಗೊತ್ತಾಗಲಿದೆ.
ಬೆಂಗಳೂರು: ಸಿಂಪಲ್ ಮದುವೆ ಆಗುವವರಿಗೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ದೇವಸ್ಥಾನದಲ್ಲಿ ಇನ್ಮುಂದೆ ಮದುವೆ ಆಗುವುದಕ್ಕೆ ಅನುಮತಿಯಿಲ್ಲ.
ಮುಜರಾಯಿ ಇಲಾಖೆ ದೇಗುಲದಲ್ಲಿ ಮದುವೆಯನ್ನು ನಿಷಿದ್ಧ ಮಾಡಿದೆ. ಪತಿ ಅಥವಾ ಪತ್ನಿಗೆ ಹೇಳದೇ ಇನ್ನೊಂದು ವಿವಾಹ, ಕುಟುಂಬಕ್ಕೆ ಮಾಹಿತಿ ನೀಡದೇ ಮದ್ವೆ, ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವುದು ಹೀಗೆ ಅನೇಕ ಪ್ರಕರಣ ನಡೆಯುತ್ತಿದ್ದು, ಕೇಸ್‍ಗಳಾದರೆ ಅರ್ಚಕರೇ ಸಾಕ್ಷಿಗಳಾಗಬೇಕಾಗುತ್ತೆ.
ಅಲ್ಲದೇ ಕೆಲವರು ಅರ್ಚಕರಿಗೆ ಹೆದರಿಸಿ ಬೆದರಿಸಿ ಮದುವೆ ಮಾಡುವಂತೆ ಕಿರಿಕ್ ಮಾಡುತ್ತಿದ್ದಾರೆ. ಇದಕ್ಕಾಗಿ ಅರ್ಚಕರೇ ಸ್ವತಃ ಮುಜರಾಯಿಗೆ ಮನವಿ ಮಾಡಿದ್ದು ಈಗ ನಗರದ ಎಲ್ಲಾ ಮುಜರಾಯಿಯಲ್ಲೂ ಮದುವೆ ಬ್ಯಾನ್ ಮಾಡಲಾಗಿದೆ.
ದೇಗುಲಕ್ಕೆ ಹೊಂದಿಕೊಂಡ ಕಲ್ಯಾಣ ಮಂಟಪದಲ್ಲಿ ಮದುವೆಯಾಗಬೇಕು ಎಂದರೂ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿ ಮೂವತ್ತು ದಿನಗಳಾಗಿರಬೇಕು. ನಂತರವಷ್ಟೇ ಮದುವೆಗೆ ಅನುಮತಿ ನೀಡಲಾಗುತ್ತಿದೆ.
ಸದ್ಯ ಇದರ ಜೊತೆಗೆ ನಾಮಕರಣ, ಸೇರಿದಂತೆ ದೇವಸ್ಥಾನದಲ್ಲಿ ನಡೆಯುವ ಇತರೇ ಕಾರ್ಯಕ್ರಮಗಳಿಗೆ ಮುಜರಾಯಿ ನಿಷೇಧವನ್ನು ಹೇರಿದೆ.
ಈ ಬಗ್ಗೆ ಅರ್ಚಕರೊಬ್ಬರು ಮಾತನಾಡಿ, ತಂದೆ-ತಾಯಿ ವಿರೋಧ ವ್ಯಕ್ತಪಡಿಸಿ, ಮದುವೆ ಇಷ್ಟವಿಲ್ಲವೆಂದ್ರೆ ಪ್ರೇಮಿಗಳು ದೇವಸ್ಥಾನಕ್ಕೆ ಬಂದು ತಾಳಿ ಕಟ್ಟಿ ಹೋಗುತ್ತಿದ್ದರು. ಬಳಿಕ ಹೆತ್ತವರ ಗಲಾಟೆಗಳಿಂದ ಬಿಟ್ಟು ಹೋಗುತ್ತಿದ್ದರು. ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದರಿಂದ ನಮಗೆ ತುಂಬಾ ತೊಂದರೆಗಳಾಗುತ್ತಿತ್ತು. ಹೀಗಾಗಿ ದಯಮಾಡಿ ದೇವಸ್ಥಾನಗಳಲ್ಲಿ ಮದುವೆ ಮಾಡುವ ಮೊದಲು ಕಮಿಷನ್ ಗೆ ಪತ್ರ ಬರೆದು ಎರಡೂ ಕಡೆಯವರು ಒಪ್ಪಿಕೊಂಡು ನಂತರ ಕಮಿಷನರ್ ಆಯಾ ಪ್ರದೇಶದ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಲು ಅನುಮತಿ ನೀಡಬೇಕು ಅಂತ ನಾವೆಲ್ಲರೂ ಸೇರಿ ಮುಜರಾಯಿ ಇಲಾಖೆಗೆ ಪತ್ರ ಬರೆದಿದ್ದೆವು. ಹೀಗಾಗಿ ಸದ್ಯ ಕೆಲ ದೇವಸ್ಥಾನಗಳನ್ನು ಬಿಟ್ಟು ಉಳಿದೆಲ್ಲಾ ದೇವಾಲಯಗಳಲ್ಲಿ ಪ್ರೇಮಿಗಳಿಗೆ ಮದುವೆ ಮಾಡುವುದುನ್ನು ನಿಲ್ಲಿಸಲಾಗಿದೆ ಅಂತ ಹೇಳಿದ್ರು.
ಮದುವೆ ನಡೆಯುತ್ತಿದ್ದ ಪ್ರಮುಖ ಮುಜರಾಯಿ ದೇವಾಲಯ
1. ಹಲಸೂರು ಸುಬ್ರಮಣ್ಯ ದೇಗುಲ – ಬೆಂಗಳೂರು
2. ಬನಶಂಕರಿ ದೇಗುಲ ಬೆಂಗಳೂರು
3. ಕುಕ್ಕೆ ಸುಬ್ರಮಣ್ಯ ದೇಗುಲ
4. ಗವಿಗಂಗಾಧರ ದೇಗುಲ
5. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ
6. ನಿಮಿಷಾಂಬಾ ದೇಗುಲ ಮಂಡ್ಯ
7. ಕೊಲ್ಲೂರು ಮೂಕಾಂಬಿಕ ದೇಗುಲ
ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜೈಲಾ..? ಬೇಲಾ..? ಎಂಬುದು ಇಂದು ಗೊತ್ತಾಗಲಿದೆ.
ಹೌದು. ಶಾಸಕ ಹ್ಯಾರಿಸ್ ಮಗ ನಲಪಾಡ್ ಜಾಮೀನು ಅರ್ಜಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸೋಮವಾರ ನಲಪಾಡ್ ಪರ ವಕೀಲ ಉಸ್ಮಾನ್ ವಾದ ಮುಕ್ತಾಯ ಮಾಡಿದ್ದಾರೆ. ಹೀಗಾಗಿ ಇಂದು ಎಸ್ ಪಿಪಿ ಅವರಿಂದ ಪ್ರತಿವಾದ ನಡೆಯಲಿದೆ.
ಪ್ರತಿವಾದ ಬೇಗ ಮುಗಿದ್ರೆ ಇಂದೇ ತೀರ್ಪು ಸಿಗುವ ಸಾಧ್ಯತೆಗಳಿವೆ. 63 ನೇ ಸಿಸಿಎಚ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿದ್ವತ್ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಜಾರ್ಜ್ ಶೀಟ್ ಸಲ್ಲಿಸಲಾಗಿದೆ.
ಈ ಹಂತದಲ್ಲಿ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಹಾಗಾಗಿ ಜಾಮೀನು ನೀಡುವಂತೆ ನಲಪಾಡ್ ಪರ ವಕೀಲರಿಂದ ವಾದ ಮಂಡಿಸಲಾಗಿತ್ತು. ಇಂದು ಕೂಡ ಸ್ಪೆಷಲ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ಅವರಿಂದ ವಾದ ಮಂಡನೆ ನಡೆಯಲಿದೆ.
ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.
ಮೈಸೂರು: ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಕಂಬದ ಮೇಲೆಯೇ ನರಳಾಡಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ್ ವಿದ್ಯುತ್ ಕಂಬ ಏರಿದ ಮಾಜಿ ಗುತ್ತಿಗೆ ನೌಕರ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಪರಿಶೀಲನೆಗೆ ಆಗಮಿಸಿದ್ದ ಚೆಸ್ಕಾಂ ಸಿಬ್ಬಂದಿ ಪುಟ್ಟರಾಜು, ಕಂಬ ಹತ್ತುವ ಬದಲು ಶಿವಕುಮಾರ್‍ನನ್ನು ಹತ್ತಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಶಿವಕುಮಾರ ಗುತ್ತಿಗೆ ಅವಧಿ 3 ತಿಂಗಳ ಹಿಂದೆಯೇ ಮುಗಿದಿತ್ತು. ಶಿವಕುಮಾರ್ ವಿದ್ಯುತ್ ಕಂಬ ಏರಿ ದುರಸ್ತಿ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಕಂಬದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಶಿವಕುಮಾರ್ ಕೆಲ ಕಾಲ ನರಳಾಡಿದ್ದಾರೆ.
ತಕ್ಷಣ ಶಿವಕುಮಾರ್ ಸಹಾಯಕ್ಕೆ ಆಗಮಿಸಿದ ಗ್ರಾಮಸ್ಥರು, ಕಂಬದಿಂದ ಇಳಿಸಿ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.