Tag: ಶಾಂತಿನಗರ

  • ಚಿತ್ರದುರ್ಗದಲ್ಲಿ ಕರಡಿ ಉಪಟಳ – ಮನೆಯಿಂದ ಹೊರಬರಲು ಜನ ಹಿಂದೇಟು

    ಚಿತ್ರದುರ್ಗದಲ್ಲಿ ಕರಡಿ ಉಪಟಳ – ಮನೆಯಿಂದ ಹೊರಬರಲು ಜನ ಹಿಂದೇಟು

    ಚಿತ್ರದುರ್ಗ: ಇಲ್ಲಿಯವರೆಗೆ ಬೆಟ್ಟಗುಡ್ಡದ ಪಕ್ಕದಲ್ಲಿನ ಹಳ್ಳಿಗಳಿಗೆ ವನ್ಯಮೃಗಗಳು ಲಗ್ಗೆ ಇಡುತ್ತಿದ್ದವು. ಇದೀಗ ಚಿತ್ರದುರ್ಗದ (Chitradurga) ಶಾಂತಿನಗರದ ಜನವಸತಿ ಪ್ರದೇಶಕ್ಕೆ ಕರಡಿ ನಿತ್ಯ ಬರುತ್ತಿರುವ ಪರಿಣಾಮ ಕೋಟೆನಾಡಿನ ನಾಗರಿಕರಲ್ಲಿ ಆತಂಕ ಮನೆಮಾಡಿದೆ.

    ಚಿತ್ರದುರ್ಗದ ಮಾಳಪ್ಪನಹಟ್ಟಿ ಬಳಿಯ ಶಾಂತಿನಗರದಲ್ಲಿ (Shantinagar) ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಇಲ್ಲಿನ ಜನರು ಇದೇ ರಸ್ತೆಯಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಇಲ್ಲಿಯೇ ಒಡಾಡುತ್ತಾರೆ. ನಿತ್ಯ ಮನೆ ಪಾಠಕ್ಕೆ ತೆರಳುತ್ತಾರೆ. ಆದರೆ ಕಳೆದ ಒಂದು ವಾರದಿಂದ ಈ ಬಡಾವಣೆ ಪಕ್ಕದಲ್ಲಿರುವ ಬನ್ನಿಮರದ ಬಳಿಗೆ ಕರಡಿಯೊಂದು (Bear) ಬರುತ್ತಿದೆ. ಅಲ್ಲಿ ಕೈಗೆ ಸಿಗುವ ಆಹಾರ ಸೇವಿಸಿ ಪರಾರಿಯಾಗುತ್ತದೆ. ಇದನ್ನೂ ಓದಿ: ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್‌, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ

    ಇನ್ನೂ ಕರಡಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಕರಡಿ ಓಡಾಟದ ವೀಡಿಯೋ ವೀಕ್ಷಿಸಿರುವ ಬಡಾವಣೆಯ ಜನರಲ್ಲಿ ಭೀತಿ ಸೃಷ್ಠಿಯಾಗಿದೆ. ಹೀಗಾಗಿ ಮನೆಯಿಂದ ಹೊರಬರಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಈ ಬಡಾವಣೆಯ ಮಕ್ಕಳು, ಮಹಿಳೆಯರು ಸಂಜೆಯಾದರೆ ಮನೆಯೊಳಗೆ ಅಡಗಿಕೊಳ್ಳಲಿದ್ದು, ಭಯದಿಂದ ಬದುಕುವ ವಾತಾವರಣವಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಾಗರಿಕರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ವೇಳೆ ನಗರ ಪ್ರದೇಶದೊಳಗೆ ಎಂಟ್ರಿಯಾಗುವ ಕರಡಿ ಉಪಟಳ ಮಿತಿಮೀರಿದೆ. ಹೀಗಾಗಿ ಆ ಕರಡಿ ಮನೆಯೊಳಗೆ ನುಗ್ಗಿದರೆ ನಮ್ಮ ಗತಿಯೇನು ಎಂಬ ಪ್ರಾಣಭಯ ಮಹಿಳೆಯರು ಹಾಗು ಮಕ್ಕಳಲ್ಲಿದೆ. ಕೂಡಲೇ ಕರಡಿಯನ್ನು ಸೆರೆಹಿಡಿದು ಬೇರೆಡೆಗೆ ಶಿಫ್ಟ್ ಮಾಡಬೇಕೆಂಬ ಆಗ್ರಹ ಬಡಾವಣೆ ಮುಖಂಡರಿಂದ ಕೇಳಿಬಂದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ – ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ FIR

  • ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು

    ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು

    ಚಿಕ್ಕಬಳ್ಳಾಪುರ: ಜಾತ್ರೆಯಲ್ಲಿ (Fair) ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದಿದೆ.

    ಶಾಂತಿನಗರ (Shanthingara) ನಿವಾಸಿ ಮಂಜುನಾಥ್ ಅವರ ಪುತ್ರ ಶ್ರೇಯಸ್ (9) ಮೃತ ಬಾಲಕ. ಈತ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ಜಾತ್ರೆಗೆ ಹೋಗಿದ್ದ. ಅಲ್ಲದೇ ಮೈದಾನದಲ್ಲಿ ವಿವಿಧ ಆಟಗಳನ್ನಾಡಿ ಮನೆಗೆ ತೆರಳಿದ್ದ. ಈ ವೇಳೆ ಆತನ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಕಾಫಿನಾಡಿನ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು

    ಬಿಪಿ ಲೋ (Low BP) ಆದ ಕಾರಣ ಮಗ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಪೊಲೀಸರು ವಶಕ್ಕೆ ಪಡೆಯುತ್ತಿದ್ದ ವೇಳೆ ಮಹಡಿಯಿಂದ ಬಿದ್ದು ಯುವಕ ದುರ್ಮರಣ!

  • ರಾಜಕಾಲುವೆ ನಿರ್ವಹಣೆಯಲ್ಲಿ ಭ್ರಷ್ಟಾಚಾರ- ಸ್ಥಳೀಯರ ಆರೋಪ

    ರಾಜಕಾಲುವೆ ನಿರ್ವಹಣೆಯಲ್ಲಿ ಭ್ರಷ್ಟಾಚಾರ- ಸ್ಥಳೀಯರ ಆರೋಪ

    ಬೆಂಗಳೂರು: ಮಳೆಗಾಲ ಬರುತ್ತಿದ್ದಂತೆ ಪಾಲಿಕೆ ದುಡ್ಡು ಮಾಡಲು ರೆಡಿಯಾಗಿದೆ. ಅದರಲ್ಲೂ ರಾಜಕಾಲುವೆಗಳ ರಿಪೇರಿ, ನಿರ್ವಹಣೆ ಹೆಸರಲ್ಲಿ ಹಣ ಪೀಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಶಾಂತಿನಗರ ರಾಜಕಾಲುವೆ ತಡೆಗೋಡೆ ಪ್ರತಿ ವರ್ಷ ನಿರ್ವಹಣೆ ಹೆಸರಲ್ಲಿ ಒಡೆದು ಮತ್ತೆ ಕಟ್ಟುತ್ತಾರೆ. ಹಾಗಂತ ನೀರು ರಸ್ತೆಗೆ ಬರುವುದು, ಸಮಸ್ಯೆ ಆಗುವುದು ತಪ್ಪಿಲ್ಲ. ಬದಲಾಗಿ ರಸ್ತೆ ಮಧ್ಯೆ ಮಳೆ ಬಂದಾಗ ಕೆರೆ ಚಿತ್ರಣ ಇರುತ್ತದೆ. ಇಷ್ಟಾದ್ರೂ ಪಾಲಿಕೆ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶ ಎಂಬ ಲೆಕ್ಕಚಾರದ ಪಟ್ಟಿ ಬಿಡುಗಡೆ ಮಾಡಿ ಪ್ರತಿ ವರ್ಷ ರಾಜಕಾಲುವೆ ಗೋಡೆ ಒಡೆದು ಕಟ್ಟುವ ಪ್ರಕ್ರಿಯೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಛಾಯಾ, ವಾಹನಗಳು ಮಳೆ ಬಂದಾಗ ಕೆಡುತ್ತದೆ, ಜನರ ತೆರಿಗೆ ಹಣ ಪ್ರತಿ ವರ್ಷ ಹಾಳು ಮಾಡದೇ ಒಂದು ಸೂಕ್ತ ಪ್ರಾಜೆಕ್ಟ್ ಯೋಜನೆ ತಯಾರಿ ಮಾಡಿದರೆ ಯಾವುದೇ ಅನಾಹುತಗಳು ಆಗುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಪ್ರಸಕ್ತ ಮಳೆಗಾಲದ ತಯಾರಿ ಅಂತ ಶಾಂತಿನಗರದಲ್ಲಿ ಈಗ ಗೋಡೆ ಒಡೆದು ಕಟ್ಟುವ ಕಾರ್ಯ ಮುಂದುವರಿದಿದೆ.

  • ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಅಡಮಾನ – ಪ್ರತಿ ತಿಂಗಳು ಬಿಎಂಟಿಸಿ ಪಾವತಿಸುತ್ತಿದೆ 1.04 ಕೋಟಿ ಬಡ್ಡಿ

    ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಅಡಮಾನ – ಪ್ರತಿ ತಿಂಗಳು ಬಿಎಂಟಿಸಿ ಪಾವತಿಸುತ್ತಿದೆ 1.04 ಕೋಟಿ ಬಡ್ಡಿ

    ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿ ಬೆಂಗಳೂರಿನ ಬಸ್‌ ನಿಲ್ದಾಣವನ್ನೇ ಅಡವಿಟ್ಟಿದ್ದು ಪ್ರತಿ ತಿಂಗಳು 1.04 ಕೋಟಿ ರೂ. ಹಣವನ್ನು ಬಡ್ಡಿಯಾಗಿ ಪಾವತಿಸುತ್ತಿದೆ.

    160 ಕೋಟಿ ರೂಪಾಯಿ ಸಾಲಕ್ಕೆ  ಶಾಂತಿನಗರ ಟಿಟಿಎಂಸಿಯನ್ನು ಅಡವಿಟ್ಟ ಬಿಎಂಟಿಸಿ ಈಗ ಪ್ರತಿ ತಿಂಗಳು 1.04 ಕೋಟಿ ರೂಪಾಯಿ ಬಡ್ಡಿಯನ್ನು ಕೆನರಾ ಬ್ಯಾಂಕಿಗೆ ಪಾವತಿಸುತ್ತಿರುವ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಯಲಾಗಿದೆ.

    ಆನಂದ ಎಂಬವರು 2019 ಅಕ್ಟೋಬರ್‌ 10 ರಿಂದ 2021 ಜನವರಿ 12ರವರೆಗೆ ಬಿಎಂಟಿಸಿ ಸಂಸ್ಥೆ ಎಷ್ಟು ಸಾಲ ಮಾಡಿದೆ? ಇದಕ್ಕೆ ಎಷ್ಟು ಬಡ್ಡಿಯನ್ನು ಕಟ್ಟಲಾಗುತ್ತಿದೆ ಮತ್ತು ಈ ಸಾಲಕ್ಕೆ ಅಡಮಾನ ಇಟ್ಟಿರುವ ಆಸ್ತಿಯ ವಿವರಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು

    ಈ ಅರ್ಜಿಗೆ  ಬಿಎಂಟಿಸಿಯ ಅಯವ್ಯಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಜ.28 ರಂದು ಉತ್ತರ ನೀಡಿದ್ದಾರೆ. ಉತ್ತರದಲ್ಲಿ ಕೇಳಿದ ಅವಧಿಯಲ್ಲಿ ಒಟ್ಟು 160 ಕೋಟಿ ರೂ. ಸಾಲವನ್ನು ಕೆನರಾ ಬ್ಯಾಂಕಿನಿಂದ ಪಡೆಯಲಾಗಿದೆ. ಈ ಸಾಲಕ್ಕೆ ಪ್ರತಿ ತಿಂಗಳು 1.04 ಕೋಟಿ ರೂ. ಬಡ್ಡಿಯನ್ನು ಪಾವತಿಸಲಾಗುತ್ತಿದೆ. ಈ ಸಾಲ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿಬ್ಬಂದಿಯ ಪಿಎಫ್‌, ವಿಮೆ ಮತ್ತು ಇನ್ನಿತರೆ ಬಾಕಿ ಪಾವತಿಗೆ ಹಣವಿಲ್ಲದೆ ಬಿಎಂಟಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ 2019ರಲ್ಲಿ 160 ಕೋಟಿ ರೂ. ಸಾಲ ಕೋರಿ ಟೆಂಡರ್‌ ಕರೆದಿತ್ತು. ಆದರೆ ಯಾವುದೇ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬರದ ಕಾರಣ ಟಿಟಿಎಂಸಿ ಕಟ್ಟಡವನ್ನು ಅಡವಿಟ್ಟು, ಸಾಲವನ್ನು ಪಡೆಯಲಾಗಿತ್ತು.

  • ಬರ್ತ್ ಡೇ ಆಚರಿಸಿಕೊಂಡು ವಿವಾದಕ್ಕೀಡಾಗಿದ್ದ ಶಾಸಕರಿಂದ ಮತ್ತೊಂದು ಎಡವಟ್ಟು

    ಬರ್ತ್ ಡೇ ಆಚರಿಸಿಕೊಂಡು ವಿವಾದಕ್ಕೀಡಾಗಿದ್ದ ಶಾಸಕರಿಂದ ಮತ್ತೊಂದು ಎಡವಟ್ಟು

    ಬೆಂಗಳೂರು: ಯೋಧರನ್ನು ಕಳೆದುಕೊಂಡು ಇಡೀ ದೇಶ ಮರುಗುತ್ತಿದ್ದ ವೇಳೆಯಲ್ಲೇ ಶಾಂತಿನಗರ ಶಾಸಕ ಹ್ಯಾರಿಸ್ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ವಿವಾದಕ್ಕೀಡಾದ ಬೆನ್ನಲ್ಲೇ ಇದೀಗ ಮತ್ತೊಂದು ಆರೋಪ ಅವರ ವಿರುದ್ಧ ಕೇಳಿಬಂದಿದೆ.

    ಹೌದು. ಶಾಸಕ ಎನ್ ಎ ಹ್ಯಾರಿಸ್ ಈಗ ತಮ್ಮ ಜನ್ಮದಿನಕ್ಕಾಗಿ ಸರ್ಕಾರಿ ಶಾಲೆಯ ಕಟ್ಟಡವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡ ಆರೋಪಕ್ಕೆ ಸಿಲುಕಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಶಾಸಕರು ತಮ್ಮ ಹುಟ್ಟುಹಬ್ಬಕ್ಕಾಗಿ ಕ್ಷೇತ್ರದ ಮತದಾರರಿಗೆ ರಾತ್ರೋರಾತ್ರಿ ಕಂಬಳಿಗಳನ್ನು ವಿತರಣೆ ಮಾಡಿದ್ರು. ಆದರೆ ಈ ಕಂಬಳಿಗಳನ್ನು ಅವರ ಕ್ಷೇತ್ರದಲ್ಲಿ ಬರುವ ಜೋಗುಪಾಳ್ಯದಲ್ಲಿರುವ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶೇಖರಣೆ ಮಾಡಿಟ್ಟಿದ್ದರು.

    ಶಾಲೆಯ ಎರಡು ಕೊಠಡಿಗಳಲ್ಲಿ ಈ ಕಂಬಳಿಗಳ ರಾಶಿ ಇಡಲಾಗಿತ್ತು. ಇದರಿಂದ ಎರಡು ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕೊಠಡಿಯಿಲ್ಲದೆ ಪಾಠಕ್ಕೆ ತೊಂದರೆಯಾಗಿದೆ. ಸಾಲದ್ದಕ್ಕೆ ರಾತ್ರಿ ವೇಳೆಯಲ್ಲೂ ಕ್ಷೇತ್ರದ ಮತದಾರರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ಶಾಲೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಇದೇ ಶಾಲೆಗೆ ಅಂಟಿಕೊಂಡಿರುವ ರಸ್ತೆಗೆ ಫುಟ್ ಪಾತ್ ಇಲ್ಲ. ಮಕ್ಕಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಜೊತೆಗೆ ಶಾಲೆಯ ಎದುರೇ ಕಸದ ರಾಶಿ ಸದಾ ಬಿದ್ದಿರುತ್ತದೆ. ಇವೆಲ್ಲ ಸರಿ ಮಾಡದ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಶಾಲೆಯನ್ನೆ ದುರ್ಬಳಕೆ ಮಾಡಿಕೊಳ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪ್ರೇಮಿಗಳ ದಿನದಂದೇ ಉಗ್ರನ ಆತ್ಮಾಹುತಿ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಇಡೀ ದೇಶ ದುಃಖದಲ್ಲಿ ಮುಳುಗಿದ್ದಾಗ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಶಾಂತಿನಗರದ ಬಸ್ ನಿಲ್ದಾಣದಲ್ಲಿ ಅಬ್ಬರದ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಿ ವಿವಾದಕ್ಕೆ ಗುರಿಯಾಗಿದ್ರು. ಈ ವಿವಾದ ಮರೆಯಾಗುವ ಮುನ್ನವೇ ಇದೀಗ ಮತ್ತೊಂದು ವಿವಾದ ಶಾಸಕರನ್ನು ಸುತ್ತಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸ್ಥಾನ ನೀಡುವಂತೆ ಶಾಸಕ ಹ್ಯಾರಿಸ್ ಪರ ಬ್ಯಾಟ್ ಬೀಸಿದ್ರಾ ರಮ್ಯಾ

    ಸಚಿವ ಸ್ಥಾನ ನೀಡುವಂತೆ ಶಾಸಕ ಹ್ಯಾರಿಸ್ ಪರ ಬ್ಯಾಟ್ ಬೀಸಿದ್ರಾ ರಮ್ಯಾ

    ಬೆಂಗಳೂರು: ವಿಧಾನಸಭಾ ಚುನಾವಣೆಯ ಬಳಿಕ ಸೈಲೆಂಟಾಗಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಇದೀಗ ಶಾಸಕ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರೆ.

    ಹೌದು. ಕರ್ನಾಟಕ ವಿಧಾನ ಸಭೆ ಚುನಾವಣೆ ಮತ್ತು ಮೈತ್ರಿ ಸರ್ಕಾರ, ಸಂಪುಟ ರಚನೆಯಿಂದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಂತರ ಕಾಯ್ದುಕೊಂಡಿದ್ದರು. ಆದ್ರೆ ಇದೀಗ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ನಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಪುತ್ರ ನಲಪಾಡ್ ಜೈಲು ಸೇರಿರುವ ಹಿನ್ನೆಲೆಯಲ್ಲಿ ಹ್ಯಾರಿಸ್ ಯಾವುದೇ ಮುಖಂಡರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ರಮ್ಯಾ ಅವರನ್ನ ಮುಂದಿಟ್ಟುಕೊಂಡು ಹೈಕಮಾಂಡ್ ಮಟ್ಟದಲ್ಲಿ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರಂತೆ. ರಮ್ಯಾ ದೆಹಲಿಯಲ್ಲಿ ತಮಗಿರುವ ಸಂಪರ್ಕ ಬಳಸಿ ಅಲ್ಪಸಂಖ್ಯಾತ ಖೋಟಾದಲ್ಲಿ ರೋಶನ್ ಬೇಗ್ ಬದಲು ಹ್ಯಾರಿಸ್‍ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

    ಹ್ಯಾರಿಸ್ ಪರ ರಮ್ಯಾ ಲಾಬಿ ಯಾಕೆ ಗೊತ್ತೆ?
    ಈ ಹಿಂದೆ ರಮ್ಯಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ ಅವರು ಹ್ಯಾರಿಸ್ ಪರವಾಗಿ ರೋಡ್ ಶೋ ನಡೆಸಿದ್ದರು. ಅಲ್ಲದೇ ಶಾಂತಿನಗರ ನಿವಾಸಿಯಾಗಿರುವ ರಮ್ಯಾ ಅವರು ಶಾಸಕ ಹ್ಯಾರಿಸ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಸ್ಥಳೀಯ ಶಾಸಕರಾಗಿರುವ ಹ್ಯಾರಿಸ್ ಪರವಾಗಿ ಸಚಿವರಾಗಬೇಕು ಎನ್ನುವ ಉದ್ದೇಶ ಅವರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ಶಾಂತಿನಗರ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸಂಚು?

    ಶಾಂತಿನಗರ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸಂಚು?

    ಬೆಂಗಳೂರು: ಇಲ್ಲಿನ ಶಾಂತಿನಗರ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತಾ ಅನ್ನೋ ಪ್ರಶ್ನೆಯೊಂದು ಎದ್ದಿದೆ. ಯಾಕಂದ್ರೆ ನೀಲಸಂದ್ರ ನಿವಾಸಿ ಘಸರ್ ಖಾನ್ ಎಂಬಾತ ಶ್ರೀಧರ್ ರೆಡ್ಡಿ ನಿವಾಸದ ಬಳಿ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದನು ಎನ್ನಲಾಗಿದೆ.

    ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆ ಶ್ರೀಧರ್ ರೆಡ್ಡಿ ಮನೆಯ ಬಳಿ ಬೈಕ್‍ನಲ್ಲಿ ಬಂದ ಘಸರ್ ಖಾನ್ ಎಂಬಾತ ಶ್ರೀಧರ್ ರೆಡ್ಡಿ ಎಲ್ಲಿ..? ಎಷ್ಟು ಟೈಂಗೆ ಮನೆಗೆ ಬರ್ತಾರೆ ಅಂತಾ ವಿಚಾರಿಸಿದ್ದನು. ಈ ವೇಳೆ ಅನುಮಾನಗೊಂಡ ಕೆಲ ಕಾರ್ಯಕರ್ತರು, ಘಸರ್ ಖಾನ್‍ನನ್ನು ಸೆರೆಹಿಡಿದು ಬೈಕ್ ಪರಿಶೀಲನೆ ನಡೆಸಿದ್ರು.

    ಈ ವೇಳೆ ಬೈಕ್ ನಲ್ಲಿ ಲಾಂಗ್ ಇರೋದು ಬೆಳಕಿಗೆ ಬಂದಿದೆ. ಲಾಂಗ್ ಜೊತೆಗೆ ಗಾಂಜಾ, ಕಾಂಗ್ರೆಸ್ ಶಾಸಕ ಎನ್‍ಎ ಹ್ಯಾರೀಸ್ ಫೋಟೋ ಇರೋ ಟೋಪಿ ಕಂಡುಬಂದಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕೂಡಲೇ ಸ್ಥಳಕ್ಕೆ ಬಂದ ಆಶೋಕನಗರ ಪೊಲೀಸರು ಆರೋಪಿ ಘಸರ್ ಖಾನ್‍ನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

  • ಜಾಮೀನು ಅರ್ಜಿ ತಿರಸ್ಕೃತ- ಹ್ಯಾರಿಸ್ ಪುತ್ರನಿಗೆ ಜೈಲೇ ಗತಿ

    ಜಾಮೀನು ಅರ್ಜಿ ತಿರಸ್ಕೃತ- ಹ್ಯಾರಿಸ್ ಪುತ್ರನಿಗೆ ಜೈಲೇ ಗತಿ

    ಬೆಂಗಳೂರು: ನಗರದ ಯುಬಿ ಸಿಟಿಯ ಫರ್ಜಿಕೆಫೆ ಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕೃತ ಗೊಳಿಸಿದೆ.

    ಸಿಸಿಟಿವಿನಲ್ಲಿ ಹಲ್ಲೆ ನಡೆಸಿರೋದು ಸ್ಪಷ್ಟವಾಗಿದೆ. ತನಿಖಾಧಿಕಾರಿಗಳಿಗೆ ಸಿಗದ ಡಿಸ್ಚಾರ್ಜ್ ಸಮ್ಮರಿ ಆರೋಪಿಯ ತಂದೆಗೆ ಸಿಕ್ಕಿರುವುದು ಸಿಕ್ಕಿರೋದು ಅನುಮಾನ ಮೂಡುತ್ತದೆ ಅಂತ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ನಲಪಾಡ್ ಜಾಮೀನು ಅರ್ಜಿ ವಜಾಗೊಳಿಸಿದೆ. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ದೂರು ದಾಖಲಿಸಿದ್ದರೂ, ಎಫ್‍ಐಆರ್ ಹಾಕುವಲ್ಲಿ ವಿಳಂಬ, ಸಿಸಿಟಿವಿಯಲ್ಲಿ ಮೊದಲು ನಲಪಾಡ್ ಹಲ್ಲೆ ನಡೆಸಿರುವ ದೃಶ್ಯ ಸೆರೆ, ವಿದ್ವತ್ ವೈದ್ಯಕೀಯ ವರದಿ ಹ್ಯಾರಿಸ್ ಕೈ ಸೇರಿದ್ದು, ಈ ಹಿಂದೆ ಈ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ಉಲ್ಲೇಖಿಸಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

  • ವಿದ್ವತ್ ಡಿಸ್ಚಾರ್ಜ್‍ನಿಂದ ಶಾಸಕ ಹ್ಯಾರಿಸ್, ಮಗ ನಲಪಾಡ್ ಫುಲ್ ಖುಷ್

    ವಿದ್ವತ್ ಡಿಸ್ಚಾರ್ಜ್‍ನಿಂದ ಶಾಸಕ ಹ್ಯಾರಿಸ್, ಮಗ ನಲಪಾಡ್ ಫುಲ್ ಖುಷ್

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

    ಹಲ್ಲೆಗೊಳಗಾದ ವಿದ್ವತ್ ನಗರದ ಮಲ್ಯ ಆಸ್ಪತ್ರೆಯಿಂದ ಭಾನುವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಹ್ಯಾರಿಸ್, ದೇವರ ದಯೆಯಿಂದ ವಿದ್ವತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಬಳಿಕ ಆತ ಈಗಾಗಲೇ ಡಿಸ್ಚಾರ್ಜ್ ಆಗಿದ್ದು ಖುಷಿತಂದಿದೆ. ವೈದ್ಯರ ಡಿಸ್ಚಾರ್ಜ್ ಶೀಟ್ ನಲ್ಲಿ ವಿದ್ವತ್ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಅಂತ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆತ ಚೇತರಿಸಿಕೊಳ್ಳುವಂತೆ ಶ್ರಮಿಸಿದ ಮಲ್ಯ ಆಸ್ಪತ್ರೆ ವೈದ್ಯರಿಗೂ ಮತ್ತು ಸಿಬ್ಬಂದಿಗೂ ಧನ್ಯವಾದ ಎಂದು ಹ್ಯಾರಿಸ್ ಹೇಳಿದ್ದಾರೆ. ವಿದ್ವತ್ ಮತ್ತು ಆತನ ಕುಟುಂಬಸ್ಥರಲ್ಲಿ ಸಂತೋಷ ನೆಲೆಸಲಿ ಅಂತ ಹ್ಯಾರಿಸ್ ಹಾರೈಸಿದ್ದಾರೆ. ಇದನ್ನೂ ಓದಿ: ನಲಪಾಡ್ ಹಲ್ಲೆ ಪ್ರಕರಣ- ಹಲ್ಲೆಗೊಳಗಾಗಿದ್ದ ವಿದ್ವತ್ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

    ವಿದ್ವತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಯಾಗಿರೋ ನಲಪಾಡ್ ಕೂಡ ಸಂತಸದಿಂದಿದ್ದಾನೆ. ಯಾಕಂದ್ರೆ ಪ್ರಕರಣ ಸಂಬಂಧ ನಾಳೆ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದಾನೆ. ನಿನ್ನೆ ರಾತ್ರಿ ತಂದೆ ಹ್ಯಾರಿಸ್‍ಗೆ ಫೋನ್ ಮಾಡಿ ಖುಷಿಯಿಂದ ಮಾತನಾಡಿದ್ದಾನೆ. ಅಲ್ಲದೇ ನಾಳೆ ಯಾವುದೇ ಕಾರಣಕ್ಕೂ ಬೇಲ್ ಮಿಸ್ ಆಗದಂತೆ ಎಚ್ಚರಿಕೆ ನೀಡಿದ್ದಾನೆ ಅಂತ ಜೈಲಿನ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜಾಮೀನಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಪ್ಪನಿಗೆ ರೌಡಿ ನಲಪಾಡ್ ಸೂಚನೆ!

  • ನನ್ನ ಹಣೆ ಬರಹವೇ ಸರಿ ಇಲ್ಲ- ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಜೈಲಿನಲ್ಲಿ ಗೋಳಾಡಿದ ನಲಪಾಡ್

    ನನ್ನ ಹಣೆ ಬರಹವೇ ಸರಿ ಇಲ್ಲ- ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಜೈಲಿನಲ್ಲಿ ಗೋಳಾಡಿದ ನಲಪಾಡ್

    ಬೆಂಗಳೂರು: ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಜೈಲಿನ ಅಧೀಕ್ಷಕರ ಕೊಠಡಿಯಲ್ಲಿ ಟಿವಿ ನೋಡುತ್ತಿದ್ದ ನಲಪಾಡ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಅಲ್ಲದೇ ಜೊತೆಯಲ್ಲಿದ್ದ ಸ್ನೇಹಿತರ ಮುಂದೆಯೇ ಜೋರಾಗಿ ಕೂಗಾಡಿದ್ದಾನೆ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ.

    ನನ್ನ ಹಣೆ ಬರಹವೇ ಸರಿ ಇಲ್ಲ ಎಂದು ಗೋಳಾಡುತ್ತಿರುವ ನಲಪಾಡ್, ಬೇಸರ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. ಅರ್ಜಿ ವಿಚಾರಣೆ ತೀರ್ಪು ಹೊರಬೀಳುತ್ತಿದ್ದಂತೆಯೇ ಕೋರ್ಟ್ ಆವರಣದಲ್ಲಿದ್ದ ನಲಪಾಡ್ ಬೆಂಬಲಿಗರು ನಿರಾಶೆಯಿಂದ ಹಿಂದಿರುಗಿದ್ದಾರೆ. ಆದ್ರೆ ಈ ಕುರಿತು ನಲಪಾಡ್ ತಂದೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪ್ರಕರಣ ಸಂಬಂಧ ಇತರೆ 6 ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕೂಡ ಕೋರ್ಟ್ ವಜಾಗೊಳಿಸಿದೆ. ಇದೊಂದು ಗಂಭೀರವಾರ ಪ್ರಕರಣವಾಗಿದ್ದು ಕೇಸ್ ವಿಚಾರಣೆ ತನಿಖಾ ಹಂತದಲ್ಲಿದೆ. ಹಲ್ಲೆಯ ಬಳಿಕ ಆರೋಪಿ ಆಸ್ಪತ್ರೆವರೆಗೂ ಹಿಂಬಾಲಿಸಿ ದುವರ್ತನೆ ತೋರಿರುವುದನ್ನು ಗಮನಿಸಲಾಗಿದೆ ಎಂದು ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರವಾಗಿ ಜೈಲಿನಲ್ಲಿ ಫುಲ್ ಟೆನ್ಷನ್ ಆಗಿರುವ ನಲಪಾಡ್, ಇಂದು ಬೆಳಗ್ಗೆ ಜಾಮೀನು ಕೊಡಿಸಲು ನಿನ್ನಿಂದ ಆಗುತ್ತಾ ಇಲ್ವಾ ಹೇಳು ಎಂದು ತಂದೆಗೆ ಆವಾಜ್ ಹಾಕಿದ್ದ ಎಂದು ಜೈಲಿನ ಮುಲಗಳಿಂದ ತಿಳಿದುಬಂದಿತ್ತು. ಒಂದು ವೇಳೆ ಜಾಮೀನು ಕೊಡಿಸಲು ಆಗದಿದ್ದರೆ ಹೊರಗಡೆ ನನ್ನ ಹುಡುಗರಿದ್ದಾರೆ. ಅವರಿಂದ ನಾನು ಜಾಮೀನು ತರಿಸಿಕೊಳ್ಳುತ್ತೇನೆ ಎಂದು ನಲಪಾಡ್ ತಂದೆಯನ್ನು ತರಾಟೆಗೆ ತಗೊಂಡಿದ್ದಾನೆ ಎನ್ನಲಾಗಿದೆ. ಜೈಲಿಗೆ ಬಂದು ಇಷ್ಟು ದಿನ ಆಯ್ತು. ಒಂದು ದಿನವೂ ಕೂಡ ನನ್ನನ್ನು ನೋಡಲು ಬಂದಿಲ್ಲ. ನಾನು ಜೈಲಿನಿಂದ ಹೊರ ಬಂದ ಮೇಲೆ ನಿಂಗೆ ಇದೆ ನೋಡು. ಇವತ್ತು ಜೈಲಿಗೆ ಬಂದು ನನ್ನ ನೋಡ್ಲೆಬೇಕು ಎಂದು ತನ್ನ ತಂದೆಯೊಂದಿಗೆ ಉರ್ದು ಭಾಷೆಯಲ್ಲಿ ಹೇಳಿ ಹಠ ಹಿಡಿದಿದ್ದಾನೆ ಎಂದು ತಿಳಿದುಬಂದಿತ್ತು.