Tag: ಶಾಂತಕುಮಾರ್

  • KPSC ಬೋರ್ಡ್ ಮುಂದೆ ನೂರಾರು ಪತ್ರಗಳನ್ನು ಚೆಲ್ಲಿ ಅಭ್ಯರ್ಥಿ ಹೈಡ್ರಾಮಾ

    KPSC ಬೋರ್ಡ್ ಮುಂದೆ ನೂರಾರು ಪತ್ರಗಳನ್ನು ಚೆಲ್ಲಿ ಅಭ್ಯರ್ಥಿ ಹೈಡ್ರಾಮಾ

    ಬೆಂಗಳೂರು: ಕೆಪಿಎಸ್‍ಸಿ ಬೋರ್ಡ್ (KPSC Board) ವಿರುದ್ಧ ಅಭ್ಯರ್ಥಿಗಳು ಸಿಡಿದೆದ್ದಿದ್ದು, ಇಂದು ಭಾರೀ ಹೈಡ್ರಾಮಾವೊಂದು ನಡೆಯಿತು.

    ಅಭ್ಯರ್ಥಿಯೊಬ್ಬ ನೂರಾರು ಪತ್ರಗಳನ್ನು ಬೋರ್ಡ್ ಮುಂದೆ ಚೆಲ್ಲಿ ತನ್ನ ಆಕ್ರೋಶ ಹೊರಹಾಕಿದ್ದಾನೆ. ಪರೀಕ್ಷೆ ನಡೆದು ಎರಡು ವರ್ಷ ಕಳೆದರೂ ಪ್ರಾವಿಷನ್ ಲಿಸ್ಟ್ ಹಾಗೂ ಫೈನಲ್ ಲಿಸ್ಟ್ ಬಿಟ್ಟಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಕಿಡಿಕಾರಿದ್ದಾನೆ.

    ಈ ಸಂಬಂಧ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಕಾಂತಕುಮಾರ್ ಪ್ರತಿಕ್ರಿಯಿಸಿ, ಕೆ.ಪಿಎಸ್.ಸಿ ನೋಟಿಫಿಕೇಶನ್ ಆಗಿ ಎರಡು ವರ್ಷ ಆಗಿದೆ. ಗ್ರೂಪ್ ಎ, ಬಿ, ಸಿ ನಲ್ಲಿರುವ ವಿವಿಧ ಹುದ್ದೆಗಳಿಗಾಗಿ ಎಕ್ಸಾಂಗಳು ನಡೆದಿತ್ತು. ಪರೀಕ್ಷೆ ಬರೆದಿದ್ದರೂ ಇನ್ನೂ ಫೈನಲ್ ಲಿಸ್ಟ್ ಬಿಟ್ಟಿಲ್ಲ. ಆರು ತಿಂಗಳಿಂದ ಪ್ರತಿದಿನ ಮನವಿ ಕೊಟ್ಟಿದ್ದೇವೆ. ಮೂವ್ ಮಾಡ್ತೀವಿ ಅಂತ ಹೇಳ್ತಾರೆ. ಆದರೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಗರಂ ಆಗಿದ್ದಾರೆ.  ಇದನ್ನೂ ಓದಿ: ಲೋಕ ಸಮರದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡ್ತೇವೆ: ವಿಜಯೇಂದ್ರ

     

    ಕೆ.ಪಿ.ಎಸ್.ಸಿ ಒಂದು ಎಕ್ಸಾಂ ಪಾಸ್ ಆಗಬೇಕು ಅಂದ್ರೆ ಕಷ್ಟ ಇದೆ. ಸಾಕಷ್ಟು ಜನ ಬಡ ವಿದ್ಯಾರ್ಥಿಗಳು ಇದರಲ್ಲಿ ಎಕ್ಸಾಂ ಬರೆಯೋಕೆ ರೆಡಿಯಾಗಿದ್ದಾರೆ. ಆದರೆ ಇವರು ಹೋಲ್ಡ್ ಮಾಡ್ತಿರೋದಕ್ಕೆ ಕಾರಣ ಏನು ಗೊತ್ತಿಲ್ಲ. ನಾವೇನಾದರು ಕೊಡಬೇಕೋ ಏನೋ ಗೊತ್ತಿಲ್ಲ. ಟೈಂ ಟು ಟೈಂ ಎಕ್ಸಾಂ ನಡೆಸಬೇಕು. ಇವರ ಉದ್ದೇಶ ಏನು ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: 4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ

    ಪ್ರತಿಯೊಬ್ಬ ಮಿನಿಸ್ಟರ್ ಹತ್ರ ನಮ್ಮ ಬೇಡಿಕೆ ಇಟ್ಟಿದ್ದೇವೆ. ಪೊಲೀಸ್ ಫೋರ್ಸ್ ಯೂಸ್ ಮಾಡಿಕೊಂಡು ನಮ್ಮನ್ನು ತಡೆಯುತ್ತಿದ್ದಾರೆ. ನಾನು ಒಬ್ಬ ಮಾತ್ರ ಅಲ್ಲ, ನನ್ನ ಹಿಂದೆ ಲಕ್ಷ ಲಕ್ಷ ಜನ ಇದ್ದಾರೆ. ಆದರೆ ಅವರ್ಯಾರನ್ನೂ ಬೋರ್ಡ್ ಹತ್ರ ಬರೋಕೆ ಬಿಡುತ್ತಿಲ್ಲ. ಬಂದರೆ ಅವರನ್ನು ಫೋರ್ಸ್ ಯೂಸ್ ಮಾಡಿ ಕಳುಹಿಸುತ್ತಾರೆ ಎಂದು ತಿಳಿಸಿದರು. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾ ಅಭ್ಯರ್ಥಿಯನ್ನು ವಶಕ್ಕೆ ಪಡೆದರು.

  • ಪಿಎಸ್‌ಐ ಅಕ್ರಮ ಪ್ರಕರಣ – ಒಎಂಆರ್‌ ತಿದ್ದಲು ನೆರವಾಗಿದ್ದ ಡಿವೈಎಸ್‌ಪಿ ಶಾಂತಕುಮಾರ್‌ ಬಂಧನ

    ಪಿಎಸ್‌ಐ ಅಕ್ರಮ ಪ್ರಕರಣ – ಒಎಂಆರ್‌ ತಿದ್ದಲು ನೆರವಾಗಿದ್ದ ಡಿವೈಎಸ್‌ಪಿ ಶಾಂತಕುಮಾರ್‌ ಬಂಧನ

    ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಶಾಂತಕುಮಾರ್‌ ಅವರನ್ನು ಬಂಧಿಸಲಾಗಿದೆ.

    ನೇಮಕಾತಿ ವಿಭಾಗದಲ್ಲಿ ಡಿವೈಎಸ್‌ಪಿಯಾಗಿದ್ದ ಶಾಂತ್‌ಕುಮಾರ್‌ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ದಿನಗಳ ಹಿಂದಷ್ಟೆ ನೇಮಕಾತಿ ವಿಭಾಗದಲ್ಲಿ ನಾಲ್ವರು ಅಧಿಕಾರಿಗಳನ್ನು ಸಿಐಡಿ ಬಂಧಿಸಿತ್ತು. ಇದನ್ನೂ ಓದಿ: ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ: ಡಿಕೆಶಿ ಕಾಲೆಳೆದ ಬಿಜೆಪಿ

    ಒಒಡಿ ಮೇಲೆ ನೇಮಕಾತಿ ವಿಭಾಗದಲ್ಲಿ ಶಾಂತಕುಮಾರ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಪಿಐಎಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆಸಿಕೊಂಡಿದ್ದ ಸಿಐಡಿ, ಶಾಂತಕುಮಾರ್‌ರನ್ನು ಬಂಧಿಸಿದೆ.

    ಶಾಂತಕುಮಾರ್ 1996 ರ ಬ್ಯಾಚ್‌ನ CAR ಕಾನ್ಸ್‌ಟೇಬಲ್ ಆಗಿದ್ದರು. ಆಗಲೇ ತಾಂತ್ರಿಕವಾಗಿ ತುಂಬಾ ಚುರುಕಾಗಿದ್ದರು. ಹೀಗಿದ್ದ ಶಾಂತಕುಮಾರ್ 2006 ರಲ್ಲಿ ಆರ್‌ಎಸ್‌ಐ ಎಕ್ಸಾಂ ಬರೆದು ನೇಮಕಗೊಂಡಿದ್ದರು. ಗುಲ್ಬರ್ಗದಲ್ಲಿ ಒಂದು ವರ್ಷ ಆರ್‌ಎಸ್‌ಐ ತರಬೇತಿ ಮುಗಿಸಿ ಬಳಿಕ ಪ್ರೊಬೆಷನರಿ ಅವಧಿಯಲ್ಲಿ ತುಮಕೂರಿನಲ್ಲಿ ಇದ್ದರು. ಇದನ್ನೂ ಓದಿ: ಹಣ ಮಾಡಲು ಸರ್ಕಾರ ನಾಲ್ಕನೇ ಅಲೆ ಬರುತ್ತದೆ ಎನ್ನುತ್ತಿದೆ: ನಲಪಾಡ್

    KARNATAKA PSI EXAM

    ಅಷ್ಟರಲ್ಲಾಗಲೇ ಪಿಎಸ್‌ಐ ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಈ ಶಾಂತಕುಮಾರ್‌ರನ್ನು ಸೇರಿಸಿಕೊಳ್ಳುತ್ತಾರೆ. 2007-08 ರಿಂದ ನೇಮಕಾತಿ ವಿಭಾಗದಲ್ಲೇ ಶಾಂತಕುಮಾರ್‌ ಠಿಕಾಣಿ ಹೊಡೆದಿದ್ದರು. ನೇಮಕಾತಿಯಲ್ಲಿ ಏನೇನಾಗುತ್ತೆ ಅನ್ನೋದನ್ನು ತಿಳಿದುಕೊಂಡಿದ್ದರು. ಕಳೆದ 2 ವರ್ಷದ ಹಿಂದೆ ಇನ್ಸ್‌ಪೆಕ್ಟರ್‌ನಿಂದ ಡಿವೈಎಸ್ಪಿ ಆಗಿ ಪ್ರಮೋಷನ್ ಪಡೆದಿದ್ದರು. ಇಡೀ ನೇಮಕಾತಿ ವಿಭಾಗ ಶಾಂತಕುಮಾರ್‌ ಹಿಡಿತದಲ್ಲಿತ್ತು.

    ಒಎಂಆರ್ ತಿದ್ದಲು ಶಾಂತಕುಮಾರ್‌ ನೆರವಾಗಿದ್ದರು. ಶಾಂತಕುಮಾರ್ ಅಕ್ರಮಕ್ಕೆ ಕೈಜೋಡಿಸಿ ಒಎಂಆರ್ ತಿದ್ದಿಸಿದ್ದಾರೆ. ಈ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು.

  • ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ: ಶಾಂತಕುಮಾರ್

    ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ: ಶಾಂತಕುಮಾರ್

    ಬೆಳಗಾವಿ: ʼಕನಿಷ್ಟ ಬೆಂಬಲ ಬೆಲೆ ರೈತರಿಗೆ ಏಕೆ ಬೇಕು?ʼ ಎಂಬ ವಿಚಾರವಾಗಿ ಚರ್ಚಿಸಲು ಏ.29ರಂದು ಬೆಂಗಳೂರಿನಲ್ಲಿ ಚಿಂತನ ಮಂಥನ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರ ಶಾಂತಕುಮಾರ್ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಉತ್ಪನ್ನಗಳಿಗೆ ಎಂಎಸ್‍ಪಿ ನಿಗದಿಗೊಳಿಸದೇ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಈ ವಿಷಯವಾಗಿ ಕೃಷಿ ಪರಿಣಿತರು ರೈತ ಮುಖಂಡರ ನೇತೃತ್ವದಲ್ಲಿ ಸಂವಾದ ನಡೆಸಲಾಗುವುದು. ರೈತರಿಗೆ ಎಂ.ಎಸ್.ಪಿ ಅಗತ್ಯದ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

    BRIBE

    ಕಬ್ಬಿನಿಂದ ಬರುವ ಎಥೆನಾಲ್ ಉತ್ಪಾದನೆ, ಆದಾಯ ನೀತಿ ನಿಯಮಗಳ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ಶೀಘ್ರದಲ್ಲಿಯೇ ಉತ್ತರ ಪ್ರದೇಶದ ಲಕ್ನೋ ಹಾಗೂ ಕಾನ್ಪುರದ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಲವ್ ಕೇಸರಿಗೆ ಕರೆಕೊಟ್ಟು ಪ್ರಚೋದನಕಾರಿ ಭಾಷಣ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ರಾಜ್ಯದಲ್ಲಿ 70 ಸಕ್ಕರೆ ಕಾರ್ಖಾನೆಗಳಿವೆ. ಕಬ್ಬು ಪೂರೈಸಿದ ರೈತರಿಗೆ 2022ರ ಫೆಬ್ರವರಿಯಿಂದ ಈವರೆಗೆ 3,500 ಕೋಟಿ ರೂ. ಬಿಲ್ ಬರಬೇಕಿದೆ. ಅದಕ್ಕೆ ಶೇ.15 ಬಡ್ಡಿ ಸೇರಿಸಿ ಬಿಲ್ ಪಾವತಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

    ರಾಮದುರ್ಗ ತಾಲೂಕಿನಲ್ಲಿ ವೀರಭದ್ರೇಶ್ವರ ನೀರಾವರಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಿಲ್ಲ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ರೈತರಿಗೆ ಪರಿಹಾರ ಒದಗಿಸಿ, ಕಾಮಗಾರಿಗೆ ವೇಗ ನೀಡಬೇಕು. ಇಲ್ಲದಿದ್ದರೆ ಮೇ ಮೊದಲ ವಾರ ಸಾಲಹಳ್ಳಿ ಬಳಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.