Tag: ಶಸ್ತ್ರ ಚಿಕಿತ್ಸೆ

  • ನಾಲ್ಕು ತಿಂಗಳ ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ

    ನಾಲ್ಕು ತಿಂಗಳ ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಆರ್ಥಿಕ ಸಹಾಯ

    ಚಿತ್ರದುರ್ಗ: ಮದುವೆಯಾಗಿ ಹಲವು ವರ್ಷಗಳ ನಂತರ ಹುಟ್ಟಿದ ಮಗುವಿನ ಪೋಷಕರು ಖುಷಿಯಾಗಿದ್ದರು. ಆದರೆ ಮಗು ನಾಲ್ಕು ತಿಂಗಳು ತುಂಬುವುದರಲ್ಲಿ ಹೊಕ್ಕಳ ಮೇಲೆ ಗಡ್ಡೆ ಕಾಣಿಸಿಕೊಂಡು ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕಿ ಗ್ರಾಮದ ಮಂಜುನಾಥ್ ಹಾಗೂ ರಂಗಮ್ಮ ಅವರ ಮಗ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೊಕ್ಕಳ ಮೇಲೆ ದಿನೇ ದಿನೇ ದೊಡ್ಡದಾಗುತ್ತಿರೋದ ಗುಳ್ಳೆಯಿಂದ ಮಗು ಪ್ರತಿ ನಿತ್ಯ ನರಕ ಯಾತನೆ ಅನುಭವಿಸುತ್ತಿದೆ. ಮಲ, ಮೂತ್ರ ವಿಸರ್ಜನಾ ಕ್ರಿಯೆಗೆ ಸಾಕಷ್ಟು ಸಂಕಟ ಪಡುತ್ತಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮಂಜುನಾಥ್ ಟ್ರ್ಯಾಕ್ಟರ್ ಚಾಲಕ ಕೆಲಸ ಇದ್ರೆ ಮಾತ್ರ ಜೀವನ ಇಲ್ಲಾ ಅಂದ್ರೆ ಜೀವನ ನಡೆಸೋದು ಕಷ್ಟ. ಮಗನ ಸ್ಥಿತಿಯನ್ನ ಕಂಡು ಯಾರಾದ್ರೂ ಸಹಾಯ ಮಾಡಿ ಅಂತಾ ಅಂಗಲಾಚುತ್ತಿದ್ದಾರೆ.

    ಶಸ್ತ್ರ ಚಿಕಿತ್ಸೆಗೆ ಬೇಕಿದೆ ಸಹಾಯ: ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೆಳ ಭಾಗದಲ್ಲಿ ಇದೇ ರೀತಿ ಗುಳ್ಳೆಯಾದಾಗ ಆಪರೇಷ್ ಮಾಡಿದ್ರು. ಆ ಸಂದರ್ಭದಲ್ಲೇ ಮಗುವಿಗೆ ಮತ್ತೆ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ಹೇಳಿದ್ರು. ಹೆರಿಗೆಗೆ ಸುಮಾರು 30 ಸಾವಿರ ಹಾಗೂ ಮೊದಲ ಆಪರೇಷನ್‍ಗೆ ಸುಮಾರು 20 ಸಾವಿರ ಹಣ ಖರ್ಚು ಮಾಡಿ ಕುಟುಂಬ ಕಂಗಾಲಾಗಿದೆ. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ಬಳಿ ತೋರಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ತಾತ್ಕಾಲಿಕವಾಗಿ ಔಷಧಿ ನೀಡಿದ್ದಾರೆ. ಆದ್ರೆ ಔಷಧಿ ಹಾಕಿದಾಗ ಮಾತ್ರ ಮಗು ಅಳೋದನ್ನ ನಿಲ್ಲಿಸುತ್ತೆ. ಉಳಿದಂತೆ ನೋವಿನಿಂದ ಅಳುತ್ತೆ. ಮಗು ಗುಣ ಮುಖವಾಗಲು ಆರಪೇಷ್ ಮಾಡಿಸಬೇಕು ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.

    ಮಗು ಗುಣಮುಖವಾಗಲು ಆಪರೇಷ್ ಮಾಡ್ಲೇಬೇಕು. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಆರಪೇಷನ್‍ಗಾಗಿ 20 ರಿಂದ 30 ಸಾವಿರ ಹಣ ಖರ್ಚಾಗಲಿದೆ. ಯಾರಾದ್ರೂ ಸಹಾಯ ಮಾಡಿದ್ರೆ ಮಂಜುನಾಥ್ ರಂಗಮ್ಮ ದಂಪತಿಯ ಬಾಳಲ್ಲಿ ಬೆಳಕು ಮೂಡಲಿದೆ.

     

  • ನೀರಿಲ್ಲದ್ದಕ್ಕೆ ದಾವಣಗೆರೆ ಆಸ್ಪತ್ರೆಯಲ್ಲಿ ಆಪರೇಷನ್ ಇಲ್ಲ!

    ನೀರಿಲ್ಲದ್ದಕ್ಕೆ ದಾವಣಗೆರೆ ಆಸ್ಪತ್ರೆಯಲ್ಲಿ ಆಪರೇಷನ್ ಇಲ್ಲ!

    ದಾವಣಗೆರೆ: ಇತ್ತೀಚಿನ ದಿನನಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿದ್ದರೆ, ದಾವಣಗೆರೆಯ ಇಎಸ್‍ಐ ಆಸ್ಪತ್ರೆಯಲ್ಲಿ ನೀರಿನ ಕೊರತೆಯಿಂದಾಗಿ ವೈದ್ಯಾಧಿಕಾರಿಗಳು ಆಪರೇಷನ್ ಮಾಡೋದನ್ನೇ ಮುಂದೂಡುತ್ತಿದ್ದಾರೆ.

    ಹೌದು. ಕಳೆದ 15 ದಿನಗಳಿಂದ ನಗರದ ಇಎಸ್‍ಐ ಆಸ್ಪತ್ರೆಗೆ ನೀರಿನ ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲಿ ನೀರು ಸಿಗದೇ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದಲೂ ಯಾರೊಬ್ಬರಿಗೂ ಅಪರೇಷನ್ ಮಾಡದ ಕಾರಣ ರೋಗಿಗಳಿಗೆ ನರಕಯಾತನೆ ಪಡುತ್ತಿದ್ದಾರೆ. ವೈದ್ಯರ ಬಳಿ ಅಪರೇಷನ್ ಮಾಡಿ ಅಂತ ಕೇಳಿದ್ರೆ ನಾಳೆ, ನಾಡಿದ್ದು ಎಂದು ದಿನ ದೂಡುತ್ತ ಬಂದಿದ್ದಾರೆ. ಇದರಿಂದ ಕೆಲ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಸಮಸ್ಯೆಗೆ ಪರಿಹಾರವಿಲ್ಲವೇ ಎಂದು ಪಬ್ಲಿಕ್ ಟಿವಿ ಇಎಸ್‍ಐ ಆಸ್ಪತ್ರೆಯ ಸೂಪರಿಡೆಂಟ್ ಪ್ರಕಾಶ್ ಅವರನ್ನು ಪ್ರಶ್ನಿಸಿದ್ದಕ್ಕೆ, ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಪಾಲಿಕೆ ಮೇಯರ್ ಅವರಿಗೆ ಕೇಳಿದ್ರೆ ಎರಡು ಟ್ಯಾಂಕರ್ ಮಾತ್ರ ಉಚಿತ ನೀಡುತ್ತೇವೆ. ನಂತರ ಪ್ರತಿ ಟ್ಯಾಂಕರ್ ಗೆ 675 ರೂಪಾಯಿ ಪಾವತಿ ಮಾಡಿ ನೀರು ಬಿಡಿಸಿಕೊಳ್ಳಿ ಎಂದು ತಿಳಿಸುತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನೀರು ಸಿಗುತ್ತಿಲ್ಲ. ಅಲ್ಲದೆ ನಮ್ಮ ಆಸ್ಪತ್ರೆಯಲ್ಲಿ ಇದ್ದ ಕೊಳವೆ ಬಾವಿ ಬತ್ತಿ ಹೋಗಿದ್ದರಿಂದ ನೀರು ಸಿಗದೇ ಅನಿವಾರ್ಯವಾಗಿ ನಾವು ಕೆಲಸ ಮಾಡುವುದನ್ನ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

    ದಾವಣಗೆರೆ ಜಿಲ್ಲೆಯ ಕೃಷಿಕರಿಗೆ ಇಲ್ಲಿಯವರೆಗೆ ನೀರಿನ ಸಮಸ್ಯೆಯಾಗಿತ್ತು. ಆದರೆ ಈಗ ನೀರಿನ ಎಫೆಕ್ಟ್ ಆಸ್ಪತ್ರೆಯ ಮೇಲೆ ದುಷ್ಪರಿಣಾಮ ಬೀರಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.