Tag: ಶಸ್ತ್ರ ಚಿಕಿತ್ಸೆ

  • ಮಂಡ್ಯದಲ್ಲಿ ಬಾಲಕಿ ಸಾವು ಪ್ರಕರಣ – ಭುಗಿಲೆದ್ದ ಆಕ್ರೋಶ, ತನಿಖೆಗೆ ವೈದ್ಯರ ತಂಡ ರಚನೆ

    ಮಂಡ್ಯದಲ್ಲಿ ಬಾಲಕಿ ಸಾವು ಪ್ರಕರಣ – ಭುಗಿಲೆದ್ದ ಆಕ್ರೋಶ, ತನಿಖೆಗೆ ವೈದ್ಯರ ತಂಡ ರಚನೆ

    – ಮೆಡಿಕಲ್‌ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದಾರೆಂದು ಪೋಷಕರ ಆರೋಪ

    ಮಂಡ್ಯ: ಪೊಲೀಸರ ನಿರ್ಲಕ್ಷ್ಯದಿಂದ ಮೂರುವರೆ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇದೀಗ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವನ್ನಪ್ಪಿದೆ ಎಂಬ ಆರೋಪ ಮಂಡ್ಯದಲ್ಲಿ ಕೇಳಿಬಂದಿದೆ. ಮಿಮ್ಸ್ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರ ಜೊತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.

    ಹೌದು. ಮಳವಳ್ಳಿಯ ನೆಲ್ಲೂರು ಗ್ರಾಮದ ನಿಂಗರಾಜು ಮತ್ತು ರಂಜಿತಾ ದಂಪತಿಗಳ ಪುತ್ರಿ ಸಾನ್ವಿ. ಮೇ 29 ರಂದು ಮನೆಯಲ್ಲಿ ಟೈಲ್ಸ್ ಬಾಲಕಿಯ ಪಾದದ ಮೇಲೆ ಬಿದ್ದಿದೆ. ಈ ವೇಳೆ ಬಾಲಕಿಯ ಕಾಲು ಮುರಿತವಾಗಿದೆ. ಇದರಿಂದ ಉತ್ತಮ ಚಿಕಿತ್ಸೆ ಸಿಗುತ್ತೆ ಅನ್ನುವ ನಿರೀಕ್ಷೆ ಇಟ್ಟುಕೊಂಡು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮೂಳೆ ಸರಿಯಾಗಬೇಕು ಅಂದ್ರೆ ಕೂಡಲೇ ಆಪರೇಷನ್ ಮಾಡಬೇಕು ಅಂತ ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಸಾನ್ವಿಗೆ 29ರ ರಾತ್ರಿಯೆ ಬಾಲಕಿಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಆದ ನಂತರ ಬಾಲಕಿ ಚೇತರಿಸಿಕೊಂಡಿದ್ದು, ಪೋಷಕರ ಜೊತೆಯು ಮಾತನಾಡಿದ್ದಾಳೆ. ತಾನು‌ ಬೇಗ ಚೇತರಿಸಿಕೊಳ್ಳುವುದಾಗಿ ಪೋಷಕರು ಧೈರ್ಯ ಹೇಳಿದ್ದಾರೆ. ‌ಆದ್ರೆ‌ ನಿನ್ನೆ ರಾತ್ರಿ ಬಾಲಕಿ ಮೃತ ಪಟ್ಟಿದ್ದಾಳೆ. ಇದನ್ನೂ ಓದಿ: ಮಂಡ್ಯದಲ್ಲಿ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ – ಮಿಮ್ಸ್ ವೈದ್ಯರ ವಿರುದ್ಧ ಕುಟುಂಬ ಆಕ್ರೋಶ

    ಭುಗಿಲೆದ್ದ ಪ್ರತಿಭಟನೆ
    ಸದ್ಯ ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೆ ಕಾರಣ ಅಂತ ಇದೀಗ ಪೊಲೀಸರು ಆರೋಪಿಸಿ ಪೋಷಕರು ಮಿಮ್ಸ್ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಪೋಷಕರ ಈ ಪ್ರತಿಭಟನೆಗೆ ಹಲವು ಸಂಘಟನೆಗಳು ಸಾಥ್ ನೀಡಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಲಕಿಗೆ ಆಪರೇಷನ್ ಆದ ನಂತರ ಸರಿಯಾದ ಶುಶ್ರೂಷೆ ಮಾಡಿಲ್ಲ. ವೈದ್ಯರ ಬದಲಾಗಿ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡಿದ್ದು ಈ ಘಟನೆಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೇ ಮಗು ಸಾವನಪ್ಪಿದ್ರೆ ಪೋಷಕರಿಗೆ ಮೊದಲು ವಿಚಾರ ತಿಳಿಸಬೇಕಾಗಿತ್ತು. ಆದರೆ ಅದರ ಬದಲು ಪೊಲೀಸರಿಗೆ ವಿಚಾರ ತಿಳಿಸಿ ನಂತರ ಪೋಷಕರಿಗೆ ತಿಳಿಸಿದ್ದಾರೆ ಅಂತ ಆರೋಪಿಸಿದ್ದಾರೆ.

    ಪೋಷಕರ ಈ ಆರೋಪ ತಳ್ಳಿಹಾಕಿರುವ ವೈದ್ಯರು, ಮೊದಲು ಪರೀಕ್ಷೆ ಮಾಡಿದ ನಂತರ ಆಪರೇಷನ್ ಮಾಡಲಾಗಿದೆ. ಆದ್ರೆ ಅಪರೇಷನ್ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ರಕ್ತ ಪರೀಕ್ಷೆ ಮಾಡಿದಾಗ ಮಗುವಿನ ಪ್ಲೇಟ್ ಲೇಟ್ ಕಡಿಮೆಯಾಗಿತ್ತು, ಜೊತೆಗೆ ಇನ್ಫೆಕ್ಷನ್ ಆಗಿರುವುದು ಗೊತ್ತಾಗಿದೆ. ಇಲ್ಲಿ ವೈದ್ಯರು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ ಅಂತ ವೈದ್ಯಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ನಾಲ್ಕೇ ದಿನಕ್ಕೆ KRSನಲ್ಲಿ 11 ಅಡಿ ನೀರು ಹೆಚ್ಚಳ – ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ!

    ಮೃತದೇಹ ಮೈಸೂರಿಗೆ ರವಾನೆ
    ಮಿಮ್ಸ್‌ ವೈದ್ಯರ ವಿರುದ್ಧ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತ ದೇಹ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ವೈದ್ಯರ ತಂಡವನ್ನೇ ನೇಮಿಸಿ ತನಿಖೆ ಮಾಡಲಾಗುತ್ತೆ. ಯಾವೆಲ್ಲ ವೈದ್ಯರು ಚಿಕಿತ್ಸೆ ಮಾಡಿದ್ರು? ಚಿಕಿತ್ಸೆಗೆ ಏನೆಲ್ಲಾ ಔಷಧಿ ನೀಡಲಾಗಿದೆ? ಸಾವಿಗೆ ಕಾರಣ ಏನು ಅನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತೆ? ಮರಣೋತ್ತರ ಪರೀಕ್ಷೆ ಜೊತೆ ಸ್ಯಾಂಪಲ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುವುದು. ಮಿಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿರುವ ಕಾರಣ ಕೆ.ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತೆ. ಅದಕ್ಕಾಗಿ ಮೃತದೇಹವನ್ನ ಮೈಸೂರಿಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಬಾಲಕಿ ಸಾವು ಕೇಸ್ | ಎಚ್ಚೆತ್ತ ಬೆಂಗಳೂರು ಪೊಲೀಸರಿಂದ ಹೊಸ ಎಸ್‌ಒಪಿ ಜಾರಿ

  • ಮಂಡ್ಯದಲ್ಲಿ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ – ಮಿಮ್ಸ್ ವೈದ್ಯರ ವಿರುದ್ಧ ಕುಟುಂಬ ಆಕ್ರೋಶ

    ಮಂಡ್ಯದಲ್ಲಿ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ – ಮಿಮ್ಸ್ ವೈದ್ಯರ ವಿರುದ್ಧ ಕುಟುಂಬ ಆಕ್ರೋಶ

    ಮಂಡ್ಯ:‌ ನಗರದಲ್ಲಿ ಮಿಮ್ಸ್ ವೈದ್ಯರ (MIMS Hospital Doctors) ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.

    ಮಳವಳ್ಳಿಯ ನೆಲ್ಲೂರು ಗ್ರಾಮದ ಸಾನ್ವಿ (7) ಮೃತ ಬಾಲಕಿ. ಪಾದದ ಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವನ್ನಪ್ಪಿದ್ದು, ಮಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಬಾಲಕಿ ಕುಟುಂಬಸ್ಥರು ಸಾಲು ಸಾಲು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ – ಕದ್ದು ಮುಚ್ಚಿ ಗಾಡಿ ಹಿಡಿಯದಂತೆ ಡಿಜಿ & ಐಜಿಪಿ ಆದೇಶ

    ಟೈಲ್ಸ್‌ ಬಿದ್ದು ಬಾಲಕಿ ಸಾನ್ವಿಯ ಪಾದದ ಮೂಳೆ ಮುರಿದಿತ್ತು. ಇದರಿಂದ ತಂದೆ ನಿಂಗರಾಜು ಮೇ 29ರ ಗುರುವಾರ ಮಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಎಲ್ಲಾ ಪರೀಕ್ಷೆಗಳ ನಂತರ ಗುರುವಾರ ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಪರೇಷನ್‌ ಬಳಿಕ ರಾತ್ರಿಯೇ ಸಾನ್ವಿಯನ್ನ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಆದ್ರೆ ಶುಕ್ರವಾರ ಬೆಳಗ್ಗೆಯೇ ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮತ್ತೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಬಾಲಕಿಗೆ ಚಿಕಿತ್ಸೆ ಮುಂದುವರಿದಿತ್ತು.

    ಶನಿವಾರ (ನಿನ್ನೆ) ಬೆಳಗ್ಗೆ ಡ್ರಿಪ್ಸ್‌ ಮೂಲಕ ಔಷಧಿ ನೀಡಲಾಗಿತ್ತು. ಔಷಧಿ ನೀಡ್ತಿದ್ದಂತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಬಾಲಕಿ ಸಾನ್ವಿ ಶನಿವಾರ ರಾತ್ರಿ 10:30ರಲ್ಲಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೋವಿಡ್ ಕೇಸ್ ಏರಿಕೆ – ಆರೋಗ್ಯ ಇಲಾಖೆಯಿಂದ ಸಹಾಯವಾಣಿ ಬಿಡುಗಡೆ

    ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದರಿಂದ ಸಾವಾಗಿದೆ ಎಂದು ದೂರಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಮಿಮ್ಸ್‌ನ ಆರ್‌ಎಂಒ ಡಾ. ದರ್ಶನ್, ಅಂಗಾಂಗ ವೈಫಲ್ಯದಿಂದ ಬಾಲಕಿ ಸಾವಾಗಿದೆ, ತನಿಖೆ ಮಾಡಿಸಿಕೊಳ್ಳಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಭೂಕುಸಿತ | ಕೊಚ್ಚಿ ಹೋದ ವಾಹನ – 7 ಮಂದಿ ದುರ್ಮರಣ

  • ನಟಿ ರಾಖಿಗೆ ಗರ್ಭಾಶಯ ತೊಂದರೆ: ನಾಳೆ ಶಸ್ತ್ರ ಚಿಕಿತ್ಸೆ

    ನಟಿ ರಾಖಿಗೆ ಗರ್ಭಾಶಯ ತೊಂದರೆ: ನಾಳೆ ಶಸ್ತ್ರ ಚಿಕಿತ್ಸೆ

    ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ (Rakhi Sawant) ಮೊನ್ನೆಯಷ್ಟೇ ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದರೂ, ನಾನಾ ರೀತಿಯಲ್ಲಿ ರಾಖಿ ಬಗ್ಗೆ ಕಾಮೆಂಟ್‍ಗಳು ಕೇಳಿ ಬಂದಿದ್ದವು. ಅದು ಡ್ರಾಮಾ ಎಂದು ಹೇಳಲಾಗಿತ್ತು. ಆದರೆ, ರಾಖಿ ಗರ್ಭಾಶಯ ತೊಂದರೆಯಿಂದ ಬಳಲುತ್ತಿದ್ದಾರಂತೆ. ನಾಳೆ ಶಸ್ತ್ರ ಚಿಕಿತ್ಸೆಗೆ (Surgery) ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.

    ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆಕೆ ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

    ರಾಖಿ ಸಾವಂತ್ ಅವರ ಈ ಫೋಟೋಗಳನ್ನು ನೋಡಿದರೆ ಆಕೆಗೆ ಪ್ರಜ್ಞೆ ಇಲ್ಲದೇ ಮಲಗಿದ್ದಾರಾ ಅಥವಾ ಗಾಢ ನಿದ್ರೆಯಲ್ಲಿದ್ದಾರೋ ಎಂಬುದು ತಿಳಿದಿರಲಿಲ್ಲ. ಫೋಟೋದಲ್ಲಿ ನರ್ಸ್ ಬಿಪಿ ಪರೀಕ್ಷಿಸುತ್ತಿರುವುದನ್ನು ಕಾಣಬಹುದಾಗಿತ್ತು. ಹಿಂಭಾಗದಲ್ಲಿ ದೊಡ್ಡ ಇಸಿಜಿ ಯಂತ್ರವನ್ನೂ ಅಳವಡಿಸಲಾಗಿತ್ತು.

     

    ಈ ಕುರಿತಂತೆ ಆದಿಲ್ ಮಾತನಾಡಿದ್ದು, ಬಂಧನ ಭೀತಿಯಲ್ಲಿರುವ ರಾಖಿ ಡ್ರಾಮಾ ಮಾಡುತ್ತಿದ್ದಾಳೆ. ಜೈಲಿಗೆ ಹೋಗೋದನ್ನು ತಪ್ಪಿಸಲು ಆಸ್ಪತ್ರೆಯಲ್ಲಿ ಮಲಗಿದ್ದಾಳೆ ಎಂದು ಆರೋಪ ಮಾಡಿದ್ದರು.

  • ನಟಿ ಪರಿಣಿತಿ ಚೋಪ್ರಾ ಪತಿಯ ಕಣ್ಣಿಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ

    ನಟಿ ಪರಿಣಿತಿ ಚೋಪ್ರಾ ಪತಿಯ ಕಣ್ಣಿಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಪತಿ, ರಾಜಕಾರಣಿ ರಾಘವ್ ಚಡ್ಡಾ ಅವರ ಕಣ್ಣಿಗೆ ಬಲವಾಗಿ ಏಟು ಬಿದ್ದಿರುವ ಪರಿಣಾಮ, ಅವರಿಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ (Surgery) ನಡೆಸಲಾಗಿದೆ. ಕಣ್ಣಿನ ರೆಟಿನಾದಲ್ಲಿ ರಂಧ್ರವಿರುವ ಕಾರಣದಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಸದ್ಯ ಲಂಡನ್ (London) ನಲ್ಲೇ ಪತಿಯ ಆರೈಕೆಯಲ್ಲಿದ್ದಾರೆ ಪರಿಣಿತಿ.

    ಈ ನಡುವೆ ಪರಿಣಿತಿ ಚೋಪ್ರಾ (Parineeti Chopra) ವೈವಾಹಿಕ ಬದುಕಿನ ಬಗ್ಗೆ ಈಗ ಭಾರೀ ಚರ್ಚೆ ಆಗುತ್ತಿದೆ. ಮದುವೆಯಾಗಿ ಮಕ್ಕಳಿರುವ ರಾಘವ್ (Raghav Chadha) ಜೊತೆ ಪರಿಣಿತಿ ಮದುವೆಯಾದ್ರಾ? ಎಂಬ ವಿಚಾರ ಚರ್ಚೆಯಾಗುತ್ತಿದೆ. ರಾಘವ್‌ಗೆ ಇದು 2ನೇ ಮದುವೆನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

    ಪರಿಣಿತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಈಗ ರಾಘವ್ ಮೊದಲ ಮದುವೆ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ನಾವಿಬ್ಬರೂ ಲಂಡನ್ ಕಾರ್ಯಕ್ರಮದಲ್ಲಿ ಭೇಟಿಯಾದೆವು. ಸಾಮಾನ್ಯವಾಗಿ ನಾನು ಜಸ್ಟ್ ಹಾಯ್ ಹೇಳಿ ಮುಂದುವರಿಯುತ್ತೇನೆ. ಆದರೆ ರಾಘವ್ ವಿಚಾರದಲ್ಲಿ ಹಾಗಾಗಲಿಲ್ಲ, ನಾನು ಅವರಲ್ಲಿ ಉಪಾಹಾರಕ್ಕಾಗಿ ಭೇಟಿಯಾಗೋಣ ಎಂದು ಹೇಳಿದೆ.

    ಅಂದು ನಮ್ಮ ಗ್ಯಾಂಗ್ ಕೂಡ ಇತ್ತು, ನಮ್ಮ ಈ ಟೀಮ್‌ನಲ್ಲಿ 8 ರಿಂದ 10 ಜನರಿದ್ದರು. ಹಾಗೂ ಮರುದಿನ ನಾವು ಭೇಟಿಯಾದೆವು. ನನಗೆ ಆತನ ಬಗ್ಗೆ ಯಾವುದೇ ಐಡಿಯಾಗಳಿರಲಿಲ್ಲ, ಆತ ಯಾರು ಏನು ಮಾಡುತ್ತಿದ್ದಾನೆ ಎಂಬ ಬಗ್ಗೆ ನನಗೆ ತಿಳಿದಿರಲಿಲ್ಲ. ಭೇಟಿಯಾದ ಕೆಲವೇ ನಿಮಿಷಗಳಲ್ಲಿ ನಾನು ಇವರನ್ನೇ ಮದುವೆಯಾಗುತ್ತೇನೆ ಎಂದು ಅನಿಸಿತು.

     

    ಅವರಿಗೆ ಮದುವೆಯಾಗಿದೆಯೋ, ಮಕ್ಕಳಿದ್ದಾರೋ ಅಥವಾ ಅವರ ವಯಸ್ಸು ಎಷ್ಟಿರಬಹುದು ಎಂದು ಯಾವುದೇ ವಿಚಾರ ನನಗೆ ತಿಳಿದಿರಲಿಲ್ಲ ಎಂದು ಪತಿ ಜೊತೆಗಿನ ಮೊದಲ ಭೇಟಿಯ ಬಗ್ಗೆ ಪರಿಣಿತಿ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ಕೇಳಿ ಫ್ಯಾನ್ಸ್ ಕನ್ಫೂಸ್ ಆಗಿದ್ದಾರೆ. ಸದ್ಯ ಚರ್ಚೆಯಾಗುತ್ತಿರುವ ರಾಘವ್ ಮೊದಲ ಮದುವೆ ಮ್ಯಾಟರ್ ನಿಜನಾ? ಸುಳ್ಳಾ ಎಂಬುದನ್ನು ನಟಿಯೇ ತಿಳಿಸಬೇಕಿದೆ.

  • ಎರಡೂ ಕೈ ಮುರಿದುಕೊಂಡಿದ್ದ ನಟಿ ಮನೆಗೆ ವಾಪಸ್ಸು

    ಎರಡೂ ಕೈ ಮುರಿದುಕೊಂಡಿದ್ದ ನಟಿ ಮನೆಗೆ ವಾಪಸ್ಸು

    ತ್ತೀಚೆಗಷ್ಟೇ ಶೂಟಿಂಗ್ (Shooting) ವೇಳೆಯ ಕನ್ನಡದ ನಟ ಶ್ರೀಮುರುಳಿ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಇದರ ಬೆನ್ನಲ್ಲೆ ಹಿಂದಿ ಕಿರುತೆರೆಯ ಕ್ಷೇತ್ರದಿಂದ ಮತ್ತೊಂದು ಸುದ್ದಿ ಬಂದಿತ್ತು. ಕಿರುತೆರೆಯ ಖ್ಯಾತ ನಟಿ ದಿವ್ಯಾಂಕಾ ತ್ರಿಪಾಠಿಗೆ (Divyanka Tripathi) ಅಪಘಾತವಾಗಿದ್ದು (Accident), ಅವರ ಎರಡೂ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

    ಅತೀ ಎತ್ತರದ ಸ್ಥಳದಿಂದ ಬಿದ್ದ ಕಾರಣದಿಂದಾಗಿ ಎರಡೂ ಕೈಗಳ ಮಣಿಕಟ್ಟುಗಳು ಮುರಿದಿದ್ದವು. ಇದು ಜಿಮ್ ನಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಆಗ  ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ ಎಂದು ಪತಿ ವಿವೇಕ್ ತಿಳಿಸಿದ್ದರು. ಈಗ ಅವರು ಮನೆಗೆ ವಾಪಸ್ಸಾಗಿದ್ದಾರೆ. ವಿಶ್ರಾಂತಿ ತಗೆದುಕೊಳ್ಳಲು ವೈದ್ಯರು ತಿಳಿಸಿದ್ದಾರೆ.

    ನಾನು ಈಗ ವಿಶ್ರಾಂತಿಯಲ್ಲಿ ಇದ್ದೇನೆ. ವೈದ್ಯರು ಚೆನ್ನಾಗಿಯೇ ನೋಡಿಕೊಂಡರು. ಆದಷ್ಟು ಬೇಗ ಸರಿ ಹೋಗಿ ಮತ್ತೆ ಶೂಟಿಂಗ್ ಗೆ ಮರಳುತ್ತೇನೆ ಎಂದು ಅವರು ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬೇಗ ಸರಿ ಹೋಗಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

     

    ಮಧ್ಯ ಪ್ರದೇಶ ಮೂಲದ ದಿವ್ಯಾಂಕ ಕೇವಲ ಕಿರುತೆರೆ ನಟಿ ಮಾತ್ರವಲ್ಲ, ಆಕಾಶವಾಣಿ ಕಲಾವಿದೆ ಕೂಡ ಆಗಿದ್ದಾರೆ. ಅಲ್ಲದೇ ಅನೇಕ ರಿಯಾಲಿಟಿ ಶೋಗಳನ್ನೂ ಅವರು ಭಾಗಿಯಾಗಿದ್ದಾರೆ. ವೆಬ್ ಸಿರೀಸ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

  • ನಟ ದರ್ಶನ್ ಪ್ರಚಾರ ವೇಳೆ ಗಮನ ಸೆಳೆದ ಕೈಕಟ್ಟು

    ನಟ ದರ್ಶನ್ ಪ್ರಚಾರ ವೇಳೆ ಗಮನ ಸೆಳೆದ ಕೈಕಟ್ಟು

    ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ನಟ ದರ್ಶನ್ (Darshan). ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಅವರ ಮತಯಾಚನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಕೈಗೆ ಕಟ್ಟಲಾದ ಬೆಲ್ಟ್ ಗಮನ ಸೆಳೆಯುತ್ತಿದೆ.

    ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ದರ್ಶನ್, ಕೈಗೆ ಏಟು ಮಾಡಿಕೊಂಡಿದ್ದರು. ಬಲವಾಗಿಯೇ ಅವರ ಕೈಗೆ ಏಟು ಬಿದ್ದಿತ್ತು. ಹಾಗಾಗಿ ಶಸ್ತ್ರ ಚಿಕಿತ್ಸೆಗೂ (Surgery) ಒಳಗಾಗಿದ್ದರು. ಕೈ ಎಲುಬು ಎಷ್ಟರ ಮಟ್ಟಿಗೆ ಏಟಾಗಿದೆ ಎನ್ನುವುದಕ್ಕೆ ಅವರು ಕೈಗೆ ಆಗಿರುವ ಬೆಲ್ಟ್ (Belt) ಸಾಕ್ಷಿಯಾಗಿದೆ.

     

    120 ಡಿಗ್ರಿ ಕೋನದಲ್ಲಿ ಕಟ್ಟಲಾದ ಕೈ ಕಟ್ಟು ಅದಾಗಿದ್ದು, ಬರೋಬ್ಬರಿ ಎರಡ್ಮೂರು ವಾರಗಳ ಕಾಲ ಅದನ್ನು ಹಾಗೆಯೇ ಕಟ್ಟಬೇಕು. ಯಾವ ಕೋನದಲ್ಲಿ ಕೈಕಟ್ಟು ಇದೆ ಎನ್ನುವುದನ್ನು ಬೆಲ್ಟ್ ಗೆ ಅಳವಡಿಸಿರುವ ಕ್ಲಾಕ್ ತೋರಿಸುತ್ತದೆ. ಅಂತಹ ಕೈಕಟ್ಟು ಈಗ ಗಮನ ಸೆಳೆದಿದೆ. ಅದೇನು ಎನ್ನುವುದರ ಕುರಿತು ಅನೇಕರು ಇಂಟರ್ ನೆಟ್ ನಲ್ಲಿ ಸರ್ಚ್ ಮಾಡಿದ್ದಾರೆ.

  • ಒಂದು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ನಟ ದರ್ಶನ್

    ಒಂದು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ನಟ ದರ್ಶನ್

    ಟ ದರ್ಶನ್ (Darshan) ಅವರಿಗೆ ಡೆವಿಲ್ (Devil Film) ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಪೆಟ್ಟಾಗಿತ್ತು. ಮೊನ್ನೆಯಷ್ಟೇ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಕೈಗೆ ಸರ್ಜರಿ (Hand Surgery) ಮಾಡಲಾಗಿತ್ತು. ಚಿಕಿತ್ಸೆಯ ನಂತರ ವೈದ್ಯರು ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ (Rest) ಸೂಚಿಸಿದ್ದಾರಂತೆ.

    ಶಸ್ತ್ರ ಚಿಕಿತ್ಸೆಯ ನಂತರ ಮತ್ತೆ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಡ್ಡಾಯವಾಗಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರಿಂದ ಅದನ್ನು ಅವರು ಪಾಲಿಸಲೇಬೇಕಿದೆ ಎಂದು ಅವರು ಆಪ್ತರು ತಿಳಿಸಿದ್ದಾರೆ. ಹಾಗಾಗಿ ಡೆವಿಲ್ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗುವುದು ಅನಿವಾರ್ಯವಾಗಿದೆ.

    ಏ.4ರಂದು ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು. ಈ ವೇಳೆ, ದರ್ಶನ್ ಅವರೇ ತಾವು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿದೆ ಎಂದು ಹೇಳಿಕೊಂಡಿದ್ದರು. ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಈಗ ಯಶಸ್ವಿಯಾಗಿ ಆಪರೇಷನ್ ಮುಗಿದಿದೆ.

     

    ‘ಡೆವಿಲ್’ ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಏಟು ಬಿದ್ದಿತ್ತು. ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ದರ್ಶನ್ ಆಪರೇಷನ್‌  ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟ ವಿಶ್ರಾಂತಿ ಪಡೆಯುತ್ತಿರುವ ವಿಚಾರ ಕೇಳಿ ಅಭಿಮಾನಿಗಳಿಗೂ ಖುಷಿಯಾಗಿದೆ.

  • ನಟ ದರ್ಶನ್ ಕೈಗೆ ಇಂದು ಶಸ್ತ್ರ ಚಿಕಿತ್ಸೆ

    ನಟ ದರ್ಶನ್ ಕೈಗೆ ಇಂದು ಶಸ್ತ್ರ ಚಿಕಿತ್ಸೆ

    ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾದ ಶೂಟಿಂಗ್ ವೇಳೆ ನಟ ದರ್ಶನ್ (Darshan) ಅವರ ಕೈಗೆ ಪೆಟ್ಟಾಗಿದ್ದು, ಇಂದು ಅವರು ಆಪರೇಷನ್ ಗೆ ಒಳಗಾಗಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ಆಸ್ಪತ್ರೆಗೆ (Hospital) ಅಡ್ಮಿಟ್ ಆಗಿ ಆಪರೇಷನ್ ಗೆ ಒಳಗಾಗಲಿದ್ದೇನೆ ಎಂದಿದ್ದಾರೆ.

    ಡೆವಿಲ್ ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದ್ದು, ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಈಗ ಆಪರೇಷನ್ ಗೆ ಒಳಗಾಗಲು ಅವರು ಮುಂದಾಗಿದ್ದಾರೆ.

    ಆಪರೇಷನ್ ಒಳಗಾಗುವ ಮುನ್ನ ಹಲವಾರು ಕಾರ್ಯಕ್ರಮಗಳಲ್ಲೂ ದರ್ಶನ್ ಭಾಗಿ ಆಗಿದ್ದಾರೆ. ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ ಸಿನಿಮಾದ ಇವೆಂಟ್, ನಿನ್ನ ಜಾಜಿ ಹೆಸರಿನ ಕಾರ್ಯಕ್ರಮ ಹೀಗೆ ಕೈಗೆ ಬೆಲ್ಟ್ ಕಟ್ಟಿಕೊಂಡೇ ದರ್ಶನ್ ಭಾಗಿ ಆಗಿದ್ದಾರೆ.

  • ನಟ ಅಜಿತ್ ಕುಮಾರ್ ಗೆ ಶಸ್ತ್ರಚಿಕಿತ್ಸೆ: ಮ್ಯಾನೇಜರ್ ಪ್ರತಿಕ್ರಿಯೆ

    ನಟ ಅಜಿತ್ ಕುಮಾರ್ ಗೆ ಶಸ್ತ್ರಚಿಕಿತ್ಸೆ: ಮ್ಯಾನೇಜರ್ ಪ್ರತಿಕ್ರಿಯೆ

    ನಿನ್ನೆಯಷ್ಟೇ ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಆಸ್ಪತ್ರೆಗೆ ದಾಖಲಾಗಿದ್ದರು. ಇದ್ದಕ್ಕಿದ್ದಂತೆಯೇ ಅಜಿತ್ ಪ್ರತಿಷ್ಠಿತ ಆಸ್ಪತ್ರೆಗೆ ಸೇರಿರುವುದು ನಾನಾ ಊಹಾಪೋಹಗಳನ್ನು ಸೃಷ್ಟಿ ಮಾಡಿತ್ತು. ನಟ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲದಕ್ಕೂ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಸ್ಪಷ್ಟನೆ ನೀಡಿದ್ದಾರೆ. ಅವರು ಸಣ್ಣದೊಂದು ಶಸ್ತ್ರ ಚಿಕಿತ್ಸೆ (Surgery) ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಅಜಿತ್ ಆಸ್ಪತ್ರೆಗೆ (Hospital) ಭೇಟಿ ನೀಡಿದ್ದರು. ಈ ವೇಳೆ ಅವರ ಕಿವಿಯ ಕೆಳಗೆ ಸಣ್ಣದಾಗಿ ಊತ ಕಾಣಿಸಿಕೊಂಡಿರುವುದು ಗಮನಕ್ಕೆ ಬಂತು. ವೈದ್ಯರ ಸಲಹೆ ಮೇರೆಗೆ ಅದಕ್ಕೆ ಚಿಕಿತ್ಸೆ ನೀಡಲಾಯಿತು. ಅರ್ಧ ಗಂಟೆಯಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಸಾಮಾನ್ಯ ವಾರ್ಡ್ ನಲ್ಲಿ ಸದ್ಯ ಅವರು ಇದ್ದಾರೆ. ಯಾವುದೇ ಅಪಾಯವಿಲ್ಲ ಎಂದಿದ್ದಾರೆ ಮ್ಯಾನೇಜರ್.

    ಮೆದುಳಿನ ಗಡ್ಡೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಅಂಥದ್ದೇನೂ ಅವರಿಗೆ ಆಗಿಲ್ಲ. ಮೂರು ತಿಂಗಳ ವಿಶ್ರಾಂತಿ ಬೇಕು ಎನ್ನುವ ವದಂತಿಯನ್ನೂ ಮ್ಯಾನೇಜರ್ ತಳ್ಳಿ ಹಾಕಿದ್ದಾರೆ. ಆದಷ್ಟು ಬೇಗ ಅಜಿತ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅತೀ ಶೀಘ್ರದಲ್ಲೇ ಡಿಸ್ಚಾರ್ಜ್ ಕೂಡ ಆಗಲಿದ್ದಾರೆ ಎಂದಿದ್ದಾರೆ.

     

    ನಿನ್ನ ಅಜಿತ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸಾಕಷ್ಟು ವದಂತಿಗಳು ಹರಡಿದ್ದವು. ಹಾಗಾಗಿ ಅಭಿಮಾನಿಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು. ಯಾವುದೇ ಕಾರಣಕ್ಕೂ ಆತಂಕ ಪಡುವಂಥದ್ದು ಏನು ಆಗಿಲ್ಲ ಅಂದಿದ್ದಾರೆ ಸುರೇಶ್ ಚಂದ್ರ.

  • ಎರಡು ತಿಂಗಳ ವಿರಾಮ ಘೋಷಿಸಿದ ನಟ ಪ್ರಭಾಸ್

    ಎರಡು ತಿಂಗಳ ವಿರಾಮ ಘೋಷಿಸಿದ ನಟ ಪ್ರಭಾಸ್

    ಪ್ರಭಾಸ್ (Prabhas) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅದಕ್ಕೆ ಕಾರಣ ಸಲಾರ್ (Salaar) ಮಹಾ ಗೆಲುವು. ಭರ್ತಿ ಏಳು ನೂರು ಕೋಟಿಯನ್ನು ಗಳಿಸಿ ಮತ್ತೆ ರೆಬೆಲ್‌ ಸ್ಟಾರ್‌ಗೆ ಆನೆ ಬಲ ನೀಡಿದೆ. ಮೂರು ಸೋಲಿನಿಂದ ಒದ್ದಾಡುತ್ತಿದ್ದ ಡಾರ್ಲಿಂಗ್ ಅದೇ ಖುಷಿಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಎರಡು ತಿಂಗಳು ಯಾರಿಗೂ ಸಿಗಲ್ಲ ಎಂದು ಘೋಷಿಸಿದ್ದಾರೆ. ಏಕಾಏಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್? ಎರಡು ತಿಂಗಳು ಏನು ಮಾಡಲಿದ್ದಾರೆ ? ಅದರ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ.

    ಸಲಾರ್. ಇದೊಂದು ಗೆಲುವು ಬೇಕಾಗಿತ್ತು. ಒಂದಲ್ಲ ಎರಡಲ್ಲ, ಭರ್ತಿ ಮೂರು ಮೂರು ಸಿನಿಮಾ ಆಕಾಶ ನೋಡಿದ್ದವು. ಅಂದರೆ ಹೆಚ್ಚು ಕಮ್ಮಿ ಐದು ವರ್ಷ ಪ್ರಭಾಸ್‌ಗೆ ಗೆಲುವು ದಕ್ಕಿರಲಿಲ್ಲ. ಗೆಲುವನ್ನು ಪಕ್ಕಕ್ಕಿಡಿ. ಈ ಸಿನಿಮಾಗಳಿಂದ ಅವರು ಅತಿ ಹೆಚ್ಚು ಟೀಕೆ ಎದುರಿಸಬೇಕಾಯಿತು. ಹೀಗಾಗಿ ಪ್ರಶಾಂತ್ ನೀಲ್ ಮೇಲೆ ಭರವಸೆ ಇಟ್ಟಿದ್ದರು. ಕೊನೆಗೂ ನೀಲ್ ಕೈ ಬಿಡಲಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ ನೀಲ್ ಮ್ಯಾಜಿಕ್ ಕೆಲಸ ಮಾಡಿತ್ತು. ಬರೋಬ್ಬರಿ ಏಳು ನೂರು ಕೋಟಿಯನ್ನು ಗಳಿಸಿತು. ಹೊಂಬಾಳೆ ಸಂಸ್ಥೆ ಮೀಸೆ ತಿರುವಿತು. ಪ್ರಭಾಸ್ ಮೈ ಕೊಡವಿ ಎದ್ದು ನಿಂತರು. ಇದೇ ಖುಷಿಯಲ್ಲಿ ಯುರೋಪ್‌ಗೆ ಎರಡು ತಿಂಗಳು ಹಾರಲಿದ್ದಾರೆ. ಪಿಕ್‌ನಿಕ್ ಅಲ್ಲಪ್ಪಾ, ಚಿಕಿತ್ಸೆ ಮಾಡಿಸಿಕೊಂಡು ಬರಲು.

    ಸಿನಿಮಾ ಮಂದಿಗೆ ಇದು ಹೊಸದಲ್ಲ. ಶೂಟಿಂಗ್ ಸಮಯದಲ್ಲಿ ಯಾವ್ಯಾವುದೋ ಕಾರಣಕ್ಕೆ ಏಟು ಬಿದ್ದಿರುತ್ತವೆ. ಅದನ್ನು ಆ ಕ್ಷಣಕ್ಕೆ ಸರಿ ಮಾಡಿಕೊಂಡು ಮತ್ತೆ ಕ್ಯಾಮೆರಾ ಮುಂದೆ ನಿಂತಿರುತ್ತಾರೆ. ಆದರೆ ಅದು ಸಾಕಾಗಲ್ಲ. ಅದಕ್ಕೆ ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ (Surgery) ನಡೆಯಬೇಕು. ಅದಕ್ಕಾಗಿಯೇ ಪ್ರಭಾಸ್ ಎರಡು ತಿಂಗಳು ವಿಶ್ರಾಂತಿ ತೆಗೆದುಕೊಂಡು, ಮೈ ಹಗುರ ಹಾಗೂ ಗಟ್ಟಿ ಮಾಡಿಕೊಂಡು ಬರಲು ವಿಮಾನ ಏರಲಿದ್ದಾರೆ. ಇದೇನು ತೀರಾ ಗಂಭೀರ ಆಪರೇಶನ್ ಅಲ್ಲ. ಕೆಲವು ದಿನ ರೆಸ್ಟ್ ಮಾಡಿ, ಮತ್ತೆ ಕಲ್ಕಿ ಹಾಗೂ ರಾಜಾಸಾಬ್ ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ.

    ಎರಡು ತಿಂಗಳಲ್ಲಿ ಮತ್ತೆ ಕುದುರೆಯಂತೆ ಎದ್ದು ಬರುವ ಪ್ರಭಾಸ್ ಗಾಗಿ ಅವರ ಅಭಿಮಾನಿಗಳು ಕಾಯುತ್ತಾರೆ. ಕಾಯುವುದರಲ್ಲಿ ಸುಖವಿದೆ ಎನ್ನುವುದು ಅವರ ಅಭಿಮಾನಿಗಳು ಅರಿತುಕೊಂಡಿದ್ದಾರೆ.