Tag: ಶಸ್ತ್ರಚಿಕಿತ್ಸೆ

  • ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಚಿಕಾಗೋ: ಇದೇ ಮೊದಲ ಬಾರಿ ಮನುಷ್ಯನಿಗೆ ಹಂದಿ ಹೃದಯದ ಕಸಿ ಮಾಡಿದ್ದು, ಈಗ ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

    ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ವ್ಯಕ್ತಿಗೆ ಹಂದಿ ಹೃದಯವನ್ನು ಅಳವಡಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸುತ್ತ ಈ ಚಿಕಿತ್ಸೆ ಯಶಸ್ವಿಯಾಗಿದ್ದು, ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಸಿನ್ ತಂಡವು ನಡೆಸಿದ ಶಸ್ತ್ರಚಿಕಿತ್ಸೆಯು ಹಂದಿಯಿಂದ ಮನುಷ್ಯನಿಗೆ ಮೊದಲ ಬಾರಿಗೆ ಹೃದಯ ಕಸಿ ಮಾಡಿದ್ದು, ಯಶಸ್ವಿಯಾಗಿದೆ. ಹೊಸ ಜೀನ್ ಎಡಿಟಿಂಗ್ ಉಪಕರಣಗಳಿಂದ ಶಸ್ತ್ರ ಚಿಕಿತ್ಸೆ ಸಾಧ್ಯವಾಯಿತು.

    ಮೇರಿಲ್ಯಾಂಡ್‍ನ 57 ವರ್ಷದ ಡೇವಿಡ್ ಬೆನೆಟ್‍ಗೆ, ಹೃದಯ ಕಸಿ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ವಿವರಿಸಿದರು.

    Surgeon Muhammad M. Mohiuddin, MD leads a team placing a genetically-modified pig heart into a storage device at the Xenotransplant lab before its transplant on David Bennett, a 57-year-old patient with terminal heart disease, at University of Maryland Medical Center in Baltimore, Maryland, U.S. January 7, 2022. Picture taken January 7, 2022. University of Maryland School of Medicine (UMSOM)/Handout via REUTERS.

    ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಗೆ ಕಸಿ ಮಾಡಿದ ಡಾ.ಬಾಟ್ರ್ಲಿ ಗ್ರಿಫಿತ್ ಈ ಕುರಿತು ಮಾತನಾಡಿದ್ದು, ಇದು ಒಂದು ಮಹತ್ವದ ಶಸ್ತ್ರಚಿಕಿತ್ಸೆಯಾಗಿದೆ. ಅಂಗಗ ದಾನ ಮಾಡುವ ಹಲವು ದಾನಿಗಳಿದ್ದರೂ, ಹೃದಯ ದಾನ ಮಾಡುವವರು ತುಂಬಾ ಕಡಿಮೆ. ಈಗ ಈ ರೀತಿಯ ಹೊಸ ಪ್ರಯೋಗದಿಂದ ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ವಿವರಿಸಿದರು.

    ಈ ರೀತಿ ಪ್ರಯೋಗ ಮಾಡಬೇಕಾದರೆ ನಾವು ಜಾಗರೂಕತೆಯಿಂದ ಮುಂದುವರಿಯಬೇಕು. ಆದರೆ ಈ ಶಸ್ತ್ರಚಿಕಿತ್ಸೆ ಪ್ರಪಂಚದಲ್ಲಿ ಮೊದಲ ಬಾರಿಗೆ ಮಾಡಲಾಗಿದೆ. ಇದು ಯಶಸ್ವಿಯಾಗಿರುವುದರಿಂದ ಇನ್ನೂ ಹೊಸ ರೀತಿಯ ಪ್ರಯೋಗ ಮಾಡುವುದಕ್ಕೆ ನಾವು ಆಶಾವಾದಿಯಾಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಹಂದಿಗಳು ಬಹಳ ಹಿಂದಿನಿಂದಲೂ ಮನುಷ್ಯನಿಗೆ ಕಸಿ ಮಾಡುವ ಮೂಲವಾಗಿದೆ. ಏಕೆಂದರೆ ಅವುಗಳ ಅಂಗಗಳು ಮನುಷ್ಯರಿಗೆ ಹೋಲುತ್ತವೆ. ಅದರಲ್ಲಿಯೂ ಮನುಷ್ಯನ ಹೃದಯ ಮತ್ತು ಹಂದಿ ಹೃದಯ ಒಂದೇ ಗಾತ್ರವನ್ನು ಹೊಂದಿರುತ್ತೆ. ಪ್ರಸ್ತುತ ಹಂದಿಗಳಿಂದ ಮಾನವರಿಗೆ ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಕಸಿ ಮಾಡಲು ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ:  : Mekedatu Padyatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

    ಹಿಂದೆಯೂ ಈ ರೀತಿ ಕೆಲವು ಪ್ರಯೋಗಗಳನ್ನು ಮಾಡಲಾಗಿದ್ದು, ಹಂದಿಯ ಸೋಂಕಿನ ಅಪಾಯದಿಂದ ಮನುಷ್ಯನಿಗೆ ಕಸಿ ಮಾಡಿದ ಹಿಂದಿನ ಪ್ರಯತ್ನಗಳು ವಿಫಲವಾಗಿತ್ತು. ಆದರೆ ಈ ಪ್ರಯೋಗದಲ್ಲಿ ದಾನಿ ಹಂದಿಯ ಹೃದಯ ಅತಿಯಾದ ಬೆಳವಣಿಗೆಯನ್ನು ತಡೆಯಲು ನಾವು ಹಂದಿ ಜೀನ್ ಅನ್ನು ತೆಗೆದಿದ್ದೇವೆ. ನಮ್ಮ ಎಲ್ಲ ಪ್ರಯತ್ನಗಳಿಗೆ ಇಂದು ಯಶಸ್ಸು ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ತೆಗೆದ ವೈದ್ಯರು

    ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ತೆಗೆದ ವೈದ್ಯರು

    ಹೈದರಾಬಾದ್: 50 ವರ್ಷದ ರೋಗಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ಅನ್ನು ಹೈದರಾಬಾದ್ ವೈದ್ಯರು ಹೊರ ತೆಗೆದಿದ್ದಾರೆ.

    ಪ್ರಮುಖ ಆಸ್ಪತ್ರೆಯ ವೈದ್ಯರು 50 ವರ್ಷದ ರೋಗಿಯಿಂದ ಲ್ಯಾಪರೊಸ್ಕೋಪಿ ಮತ್ತು ಎಂಡೋಸ್ಕೋಪಿಯನ್ನು ಬಳಸಿ 156 ಕಿಡ್ನಿ ಸ್ಟೋನ್ಸ್ ಗಳನ್ನು ಹೊರತೆಗೆದಿದ್ದಾರೆ. ಈ ಆಪರೇಷನ್ ಸುಮಾರು ಮೂರು ಗಂಟೆಗಳ ಕಾಲ ನಡೆದಿದ್ದು, ರೋಗಿಯು ಈಗ ಆರೋಗ್ಯವಾಗಿದ್ದಾರೆ.

    ಹುಬ್ಬಳ್ಳಿ ನಿವಾಸಿಯಾಗಿರುವ ಶಾಲಾ ಶಿಕ್ಷಕ ಬಸವರಾಜ್ ಮಡಿವಾಳರ್ ಅವರ ಹೊಟ್ಟೆ ಬಳಿ ಹಠಾತ್ ಆಗಿ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಗ ಅವರಿಗೆ ಸ್ಕ್ರೀನಿಂಗ್ ಗುಂಪು ಇರುವುದು ವೈದ್ಯರಿಗೆ ತಿಳಿದುಬಂದಿದೆ. ಈ ಹಿನ್ನೆಲೆ ಅವರು ಹೈದರಾಬಾದ್ ಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಯಶಸ್ವಿಯಾಗಿದೆ. ಇದನ್ನೂ ಓದಿ: ಅಪಘಾತದಲ್ಲಿ ವಿದ್ಯಾರ್ಥಿ ಸಾವು – ನುಚ್ಚು ನೂರಾದ ಮೆಡಿಕಲ್ ಕನಸು

    ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಚಂದ್ರ ಮೋಹನ್ ಈ ಕುರಿತು ಮಾತನಾಡಿದ್ದು, ರೋಗಿಯ ಮೂತ್ರಪಿಂಡದಲ್ಲಿ ಸಮಸ್ಯೆ ಇತ್ತು. ಹೊಟ್ಟೆಯ ಸಮೀಪವೇ ಸ್ಟೋನ್ಸ್ ತೆಗೆಯುವುದು ನಮಗೆ ಸವಾಲಿನ ಕೆಲಸವಾಗಿತ್ತು ಎಂದು ತಿಳಿಸಿದರು.

    ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಈ ರೋಗಿಯು ಕಿಡ್ನಿ ಸ್ಟೋನ್ಸ್ ಸಮಸ್ಯೆಯಿಂದ ಬಳಲುತ್ತಿದ್ದು, ಬರುಬರುತ್ತಾ ಈ ಕಲ್ಲುಗಳು ಬೆಳೆಯುತ್ತಾ ಹೋಗಿದೆ. ಆದರೆ ಇವರು ಈ ಹಿಂದೆ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿರಲಿಲ್ಲ. ಆದರೆ ಅವರಿಗೆ ಹಠಾತ್ ನೇ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಎಲ್ಲಾ ಅಗತ್ಯ ಪರೀಕ್ಷೆಗಳನ್ನು ಮಾಡಲಾಗಿದೆ. ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಪತ್ತೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

  • 16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

    16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

    ಜೈಪುರ: ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಶಸ್ತ್ರಚಿಕಿತ್ಸೆಯಲ್ಲಿ 16.8 ಕೆಜಿ ತೂಕದ ಗೆಡ್ಡೆಯನ್ನು ವೈದ್ಯರ ತಂಡ ಹೊರತೆಗೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.

    ಜುಂಜುನು ಜಿಲ್ಲೆಯ ನಿವಾಸಿಯಾಗಿರುವ 55 ವರ್ಷದ ಮಹಿಳೆ ಕಳೆದ ಮೂರು ವರ್ಷಗಳಿಂದ ಅಂಡಾಶಯದ ಗೆಡ್ಡೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಗಡ್ಡೆಯು ಕ್ರಮೇಣ ಬೆಳೆಯುತ್ತಲೇ ಇದ್ದು, ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಅಂತಿಮವಾಗಿ ಐದು ತಿಂಗಳ ಹಿಂದೆ ಮಹಿಳೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಮಸ್ಯೆ ಬಗ್ಗೆ ತಿಳಿದುಬಂದಿದೆ. ಇದನ್ನೂ ಓದಿ: ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ 5 ವರ್ಷದ ಪೋರಿ

    ಮಹಿಳೆಯ ಸಮಸ್ಯೆ ತಿಳಿದ ತಕ್ಷಣ ವೈದ್ಯರ ತಂಡ ಆಕೆಗೆ ಮ್ಯಾರಥಾನ್ ಶಸ್ತ್ರಚಿಕಿತ್ಸೆಯ ಮಾಡಿಸುವಂತೆ ತಿಳಿಸಲಾಗಿದೆ. ನಂತರ ಮಹಿಳೆ ಚಿಕಿತ್ಸೆ ಪಡೆದುಕೊಂಡಿದ್ದು, ಚಿಕಿತ್ಸೆ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ – ಮೂವರು ಹುತಾತ್ಮ, 14 ಜನರಿಗೆ ಗಾಯ 

    ಈ ಕುರಿತು ಭಗವಾನ್ ಮಹಾವೀರ್ ಕ್ಯಾನ್ಸರ್ ಆಸ್ಪತ್ರೆಯ ಆಂಕೊಲಾಜಿಸ್ಟ್ ಡಾ.ಪ್ರಶಾಂತ್ ಶರ್ಮಾ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದು, ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಹೊಟ್ಟೆಯಿಂದ 23 ಸೆಂ.ಮೀ ಗಾತ್ರದ ಗಡ್ಡೆಯನ್ನು ಹೊರತೆಗೆಯಲಾಗಿದೆ ಎಂದು ಹೇಳಿದರು.

  • ಬಾಲ ಇರುವ ಮಗು ಜನನ-ಬೆರಗಾದ ವೈದ್ಯರು

    ಬಾಲ ಇರುವ ಮಗು ಜನನ-ಬೆರಗಾದ ವೈದ್ಯರು

    ಬ್ರೆಸಿಲಿಯಾ: ನವಜಾತ ಶಿಶುವಿಗೆ ಪ್ರಾಣಿಗಳಿಗಿರುವಂತೆಯೇ 12 ಸೆಂಟಿಮೀಟರ್ ಉದ್ದದ ಬಾಲ ಬೆಳೆದಿದ್ದ ಘಟನೆ ಬೆಳಕಿಗೆ ಬಂದಿದೆ.

    ಜರ್ನಲ್ ಆಫ್ ಪೀಡಿಯಾರ್ಟಿಕ್ ಸರ್ಜರಿ ಕೇಸ್ ರಿಪೋಟ್ಸ್‍ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಬ್ರೆಜಿಲ್ ಫೋರ್ಟಲೇಜಾ ನಗರದ ಅಲ್ಪರ್ಟ್ ಸಬಿನ್ ಮಕ್ಕಳ ಆಸ್ಪತ್ರೆಯಲ್ಲಿ ನಜಿಸಿದ ಗಂಡು ಮಗುವಿಗೆ ಬಾಲ ಇತ್ತು ಎನ್ನಲಾಗಿದೆ. ಆ ಮಗುವಿನ ಚಿತ್ರಗಳನ್ನು ಪ್ರಕಟಿಸಿರುವ ಜರ್ನಲ್‍ನಲ್ಲಿ ವೈದ್ಯರು ಆಬಾಲವನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ:  ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ 7 ಕಾರ್ಮಿಕರಿಗೆ ಗಾಯ

     

    ಮಗು ಗರ್ಭದಲ್ಲಿರುವಾಗ ನಾಲ್ಕರಿಂದ ಎಂಟನೇ ವಾರದ ಜೆಸ್ಟೇಷನ್ ಸಮಯದಲ್ಲಿ ಒಂದು ಎಂಬ್ರಿಯಾನಿಕ್ ಬಾಲ ಬೆಳೆಯುವುದು ಸಹಜ, ಆದರೆ ಅದು ಕ್ರಮೆಣ ದೇಹದೊಳಕ್ಕೆ ಸೇರಿಕೊಂಡು ಟೇಲ್‍ಬೋನ್‍ಗೆ ದಾರಿ ಮಾಡುತ್ತದೆ. ಬ್ರೆಜಿಲ್ ಈ ಮಗುವಿನ ವಿಷಯದಲ್ಲಿ ಆ ಬಾಲ ಬೆಳೆಯುವುದು ಮುಂದುವರೆದಿತ್ತು. ಅಷ್ಟೇ ಅಲ್ಲದೇ ಹುಟ್ಟುವವರೆಗೂ ಅದು ಯಾವುದೇ ಸ್ಕಾನ್ ರಿಪೋರ್ಟ್‍ಗಳಲ್ಲಿ ಕಾಣಿಸಿಕೊಂಡು ಇರಲಿಲ್ಲ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    12 ಸೆಂಟಿಮೀಟರ್ ಉದ್ದವಿದ್ದ ಈ ಬಾಲ ಕೊನೆಯಲ್ಲಿ ಒಂದು 4 ಸೆಂಟಿಮೀಟರ್ ಮಾಂಸದ ಚೆಂಡು ಕೂಡಾ ಇತ್ತು. ಅದರ ಪರೀಕ್ಷೆ ಮಾಡಿದಾಗ ಯಾವುದೇ ಕಾರ್ಟಿಲೇಜ್ ಅಥವಾ ಬೋನ್ ಇರಲಿಲ್ಲ. ಆದ್ದರಿಂದ ಇದು ನಿಜವಾದ ಮಾನವ ಬಾಲ ಉದಾಹರಣೆ ಎಂಬ ನಿರ್ಣಯಕ್ಕೆ ಬರಲಾಯಿತ್ತು ಎಂದು ಜರ್ನಲ್‍ನಲ್ಲಿ ವಿವರಿಸಿದ್ದಾರೆ. ನಿಜವಾದ ಬಾಲಗಳೊಂದಿಗೆ ಜನಿಸಿದ ಮಕ್ಕಳ 40 ದಾಖಲಿತ ಪ್ರಕರಣಗಳು ಮಾತ್ರ ಈ ವರೆಗೆ ಕಂಡುಬಂದಿದ್ದು, ಈ ಪ್ರಕರಣವು ಜಗತ್ತಿನಲ್ಲೇ ಅತ್ಯಂತ ವಿರಳವಾದದ್ದೆನಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

  • ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

    ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

    – ಗೆಡ್ಡೆ ನೋಡಿ ಆಶ್ಚರ್ಯಗೊಂಡ ಸಿಬ್ಬಂದಿ

    ಮಡಿಕೇರಿ: ನಾಪೋಕ್ಲು ಗ್ರಾಮದ ಯುವತಿಯ ಹೊಟ್ಟೆಯಲ್ಲಿದ್ದ ಒಂದೂವರೆ ಕೆಜಿ ತೂಕದ ಕೂದಲಿನ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

    ಕಳೆದ ಹಲವಾರು ವರ್ಷಗಳಿಂದ 20 ವರ್ಷದ ಯುವತಿ ಯಾರಿಗೂ ತಿಳಿಯದಂತೆ ಕೂದಲನ್ನು ತಿಂದುಕೊಂಡು ಇದ್ದಳು. ಈ ಪರಿಣಾಮ ಬರೋಬ್ಬರಿ ಒಂದೂವರೆ ಕೆ.ಜಿಯಷ್ಟು ಕೂದಲು ಹೊಟ್ಟೆಯಲ್ಲಿ ಶೇಖರಣೆಯಾಗಿದ್ದು, ಗೆಡ್ಡೆಯಾಗಿದೆ. ಈ ಹಿನ್ನೆಲೆ ಕೂದಲಿನ ಗೆಡ್ಡೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

    ನಾಪೋಕ್ಲು ಗ್ರಾಮದಿಂದ ಹೊಟ್ಟೆ ನೋವು ಎಂದು ಹೇಳುತ್ತಿದ್ದ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಈ ಯುವತಿಯನ್ನು ಪರೀಕ್ಷೆಗೊಳಪಡಿಸಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲಿನ ಆಕಾರದ ಕಪ್ಪಾದ ಗೆಡ್ಡೆ ವೈದ್ಯರಿಗೆ ಗೋಚರಿಸಿದೆ. ಯುವತಿ ಯಾವಗಲೂ ಹೊಟ್ಟೆ ನೋವಿನಿಂದಾಗಿ ಏನು ತಿಂದರೂ ವಾಂತಿ ಮಾಡಿಕೊಳ್ಳುತ್ತಿದ್ದಳು. ಆಕೆಯಲ್ಲಿ ರಕ್ತದ ಪ್ರಮಾಣವೂ ಕಡಿಮೆಯಾಗಿದ್ದ ಹಿನ್ನೆಲೆ ರಕ್ತ ಕೊಡಿಸಿ ಉಪಚರಿಸಿದ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆಯನ್ನು ಹೊರತೆಗೆಯಲಾಗಿದೆ.

    ಈ ಕುರಿತು ಮಾತನಾಡಿದ ವೈದ್ಯರು, ಗೆಡ್ಡೆ ಒಂದೂವರೆ ಕೆಜಿ ತೂಕವಿದ್ದು, ಇದೀಗ ಯುವತಿ ಆರೋಗ್ಯದಿಂದಿದ್ದಾಳೆ. ಇದೊಂದು ಅಪರೂಪದ ಪ್ರಕರಣವಾಗಿದೆ. ‘ಟ್ರೆಂಕೊಬಸಾರ್’ ಎಂದು ಕರೆಯಲ್ಪಡುವ ಈ ಪ್ರಕರಣ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಕೂದಲು ತಿನ್ನುವುದರಿಂದ ಅದು ಜೀರ್ಣವಾಗದೆ ಗೆಡ್ಡೆಯ ರೂಪ ತಾಳುತ್ತದೆ. ಇದು ಜೀವಕ್ಕೆ ಅಪಾಯಕಾರಿ. ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಈ ಗೆಡ್ಡೆಯನ್ನು ಹೊರ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್

    ಆಶ್ಚರ್ಯಗೊಂಡ ಸಿಬ್ಬಂದಿ!

    ಶಸ್ತ್ರಚಿಕಿತ್ಸೆಯನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಡಿಕಲ್ ಸೈನ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಅಜಿತ್‍ಕುಮಾರ್, ಡಾ.ಅಭಿನಂದನ್, ಡಾ.ಪೊನ್ನಪ್ಪ, ಡಾ.ಪ್ರವೀಣ್‍ಕುಮಾರ್, ಡಾ.ತಾರಾನಂದನ್, ಡಾ.ಪ್ರದೀಪ್ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆ ಹೊರತೆಗೆದಿದ್ದಾರೆ. ಯುವತಿ ಇದೀಗಾ ಅರೋಗ್ಯದಿಂದ ಇದ್ದು, ನಾಪೋಕ್ಲು ಮನೆಗೆ ಕಳುಹಿಸಲಾಗಿದೆ. ಈ ಗೆಡ್ಡೆ ಆಕಾರದ ಕೂದಲನ್ನು ನೋಡಿದ ಅಸ್ಪತ್ರೆಯ ಸಿಬ್ಬಂದಿ ಆಶ್ಚರ್ಯ ಪಡುತ್ತಿದ್ದಾರೆ.

  • ಮಹಿಳೆ ಹೊಟ್ಟೆಯಲ್ಲಿ 16 ಕೆಜಿ ಗಡ್ಡೆ- ಸತತ 6 ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಮಹಿಳೆ ಹೊಟ್ಟೆಯಲ್ಲಿ 16 ಕೆಜಿ ಗಡ್ಡೆ- ಸತತ 6 ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಭೋಪಾಲ್: ಇಪ್ಪತ್ತು ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಲ್ಲಿದ್ದ 16 ಕೆ.ಜಿ ಗಡ್ಡೆಯನ್ನು ಭಾನುವಾರ ಭೋಪಾಲ್‍ನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದಿದ್ದಾರೆ.

    ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ದೇವೆಂದ್ರ ಚಂದೋಲಿಯಾ, ಇದೊಂದು ಅಂಡಾಶಯದ ಗಡ್ಡೆಯಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದೀಗ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಎರಡು ದಿನಗಳ ಹಿಂದೆ ಮಹಿಳೆ ರಾಜ್‍ಗಢದಿಂದ ಬಂದಿದ್ದು, ಅವರ ಹೊಟ್ಟೆಯಲ್ಲಿದ್ದ ಗಡ್ಡೆ ಬಹಳ ದೊಡ್ಡದಾಗಿತ್ತು. ಅಲ್ಲದೆ ಇದರಿಂದ ಮಹಿಳೆಗೆ ಊಟ ಮಾಡಲು ಹಾಗೂ ಓಡಾಡಲು ಸಮಸ್ಯೆಯಾಗುತ್ತಿತ್ತು. ಈ ಗಡ್ಡೆಯನ್ನು ಅಂಡಾಶಯದ ಗಡ್ಡೆ ಎಂದು ಕರೆಯಲಾಗಿದ್ದು, ಮಹಿಳೆಯ 48 ಕೆ.ಜಿ ತೂಕವಿದ್ದರೆ, ಗಡ್ಡೆ 16 ಕೆ.ಜಿ ತೂಕವಿತ್ತು. ಅಲ್ಲದೆ ಇಂದೊಂದು ದೊಡ್ಡ ಶಸ್ತ್ರ ಚಿಕಿತ್ಸೆಯಾಗಿದೆ ಎಂದರು.

    ಸರಿಯಾದ ಸಮಯಕ್ಕೆ ಗಡ್ಡೆಯನ್ನು ದೇಹದಿಂದ ತೆಗೆದು ಹಾಕದಿದ್ದಲ್ಲಿ ಮಹಿಳೆ ಬದುಕುಳಿಯುವ ಸಾಧ್ಯತೆ ಕಡಿಮೆಯಿತ್ತು. ಆದರೆ ಸುಮಾರು 6 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದೀಗ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದರು.

  • 20 ದಿನದ ಶಿಶುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ – ಕಂದಮ್ಮಗೆ ಪುನರ್ಜನ್ಮ ನೀಡಿದ ವೈದ್ಯರು

    20 ದಿನದ ಶಿಶುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ – ಕಂದಮ್ಮಗೆ ಪುನರ್ಜನ್ಮ ನೀಡಿದ ವೈದ್ಯರು

    ಧಾರವಾಡ: ಗಂಭೀರ ಹೃದಯ ರೋಗದಿಂದ ಬಳಲುತ್ತಿದ್ದ 20 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಧಾರವಾಡದ ನಾರಾಯಣ ಹೃದಾಯಲಯ ನವಜಾತ ಶಿಶುವಿಗೆ ಪುನರ್ಜನ್ಮ ನೀಡಿದೆ.

    ಹುಬ್ಬಳ್ಳಿ ಮೂಲದ ಫಾರುಕ್ ಮತ್ತು ಮುಬಿನ್ ದಂಪತಿಯ 20 ದಿನದ ಮಗು ಹುಟ್ಟಿದಾಗ 2.3 ಕೆಜೆ ತೂಕವಿತ್ತು. ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಕಾರಣದಿಂದ ಕುಟುಂಬದವರು ಮಗುವಿನ ಚಿಂತೆಯಲ್ಲೇ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿದರೂ ಅದು ಸರಿಯಾಗಿರಲಿಲ್ಲ. ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ, ಅಲ್ಲಿಯ ವೈದ್ಯರು, ನಾರಾಯಣ ಹಾರ್ಟ್ ಸೆಂಟರ್ ಗೆ ರೆಫರ್ ಮಾಡಿದ್ದರು.

    ಆಗ ಮಗುವಿನ ಹೃದಯ ರಕ್ತನಾಳದಲ್ಲಿ ಸಮಸ್ಯೆ ಇದೆ ಎಂದು ತಿಳಿದು ಬಂದಿತ್ತು. ರಕ್ತನಾಳದಲ್ಲಿ ಕೇವಲ 3 ಎಂಎಂ ಮಾತ್ರ ಜಾಗವನ್ನು ಹೊಂದಿತ್ತು. ಇದನ್ನು ಚಿಕ್ಕಮಕ್ಕಳ ಹೃದಯ ರೋಗ ತಜ್ಞ ಡಾ. ಅರುಣ ಕೆ. ಬಬ್ಲೇಶ್ವರ, ಮುಖ್ಯ ಹೃದಯ ಶಸ್ತ್ರ ಚಿಕಿತ್ಸಕ ಡಾ. ರವಿವರ್ಮ ಪಾಟೀಲ್ ಮತ್ತು ಹೃದಯ ಅರಿವಳಿಕೆ ತಜ್ಞರ ತಂಡ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೇರಿಸಿದ್ದಾರೆ. ಸದ್ಯ ಚಿಕಿತ್ಸೆ ಬಳಿಕ ಮಗು ಆರೋಗ್ಯವಾಗಿದ್ದು, ಮಗುವಿನ ಕುಟುಂಬ ಕೂಡಾ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

  • ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಗದಗ: ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲೆಯ ಗೋಜನೂರು ಗ್ರಾಮದ ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಸೋಂಕಿತರು ಅಂದರೆ ನಿಷ್ಠೂರವಾಗಿ ನೋಡುವುದರ ಜೊತೆಗೆ ಯಾರು ಹತ್ರಾನೂ ಸುಳಿಯಲ್ಲ. ಈ ಸಂದರ್ಭದಲ್ಲಿ ಗದಗ ಜಿಮ್ಸ್ ವೈದ್ಯರು ಸಿಸೇರಿನ್ ಮೂಲಕ ಎರಡು ಜೀವ ಉಳಿಸಿದ್ದಾರೆ. ವೈದ್ಯರಾದ ಡಾ.ಶಿವನಗೌಡ, ಡಾ.ಶೃತಿ ಹಾಗೂ ಡಾ ಅಜಯ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಸೋಂಕಿತೆಗೆ ಹೆಣ್ಣು ಮಗು ಜನನವಾಗಿದೆ.

    ನವಜಾತ ಶಿಶು 2.7 ಕೆಜಿ ತೂಕ ಹೊಂದಿದೆ. ಶಿಶುವಿಗೆ ಸ್ವಲ್ಪ ಉಸಿರಾಟದ ತೊಂದರೆ ಇರೋದರಿಂದ ಕೋವಿಡ್-19 ವಾರ್ಡ್‍ನಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಮಗು ಚೇತರಿಸಿಕೊಳ್ಳುವ ಲಕ್ಷಣಗಳು ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕಿತ ಮಹಿಳೆಗೆ ಮೊದಲನೇಯ ಹೆರಿಗೆ ಕೂಡ ಶಸ್ತ್ರಚಿಕಿತ್ಸೆಯಿಂದ ಆಗಿತ್ತು. ಈಗ 2ನೇ ಹೆರಿಗೆಯನ್ನು ಕೂಡ ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗಿದೆ. ಗದಗ ವೈದ್ಯಕೀಯ ಸಿಬ್ಬಂದಿ ತಂಡದ ಉತ್ತಮ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೀಯ ವ್ಯಕ್ತವಾಗುತ್ತಿದೆ.

  • ಕರುಳು ಕಿತ್ತು ಬಂದ ಅಶ್ವವನ್ನು ಕರುಣೆ ತೋರಿ ರಕ್ಷಿಸಿದ ಯುವಕರು

    ಕರುಳು ಕಿತ್ತು ಬಂದ ಅಶ್ವವನ್ನು ಕರುಣೆ ತೋರಿ ರಕ್ಷಿಸಿದ ಯುವಕರು

    ಶಿವಮೊಗ್ಗ: ತಾಯಿಯೊಂದಿಗೆ ಪಾರ್ಕ್ ನಲ್ಲಿ ಹುಲ್ಲು ಮೇಯುತ್ತಿದ್ದಾಗ ಪಾರ್ಕ್ ನಲ್ಲಿ ಅಳವಡಿಸಿದ್ದ ಗ್ರಿಲ್ ಗೆ ಸಿಲುಕಿಕೊಂಡ ಪರಿಣಾಮ ಮರಿ ಕುದುರೆಯ ಕರುಳು ಹೊರ ಬಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗದ ವಿನೋಬನಗರದ ಪಾರ್ಕ್‍ನಲ್ಲಿ ತಾಯಿ ಕುದುರೆಯೊಂದಿಗೆ ಮರಿ ಕುದುರೆ ಹುಲ್ಲು ಮೇಯುತಿತ್ತು. ಈ ವೇಳೆ ಪಾರ್ಕ್‍ನಿಂದ ತಾಯಿ ಕುದುರೆ ಮರೆಯಾಗಿದೆ. ಇದನ್ನು ಗಮನಿಸದ ಮರಿ ಕುದುರೆ ಅಲ್ಲಿಯೇ ಹುಲ್ಲು ಮೇಯುತಿತ್ತು. ನಂತರ ಪಾರ್ಕ್ ನಿಂದ ಹೊರ ಬರಲಾರದೇ ಚಡಪಡಿಸಿದೆ. ಅಲ್ಲದೇ ಪಾರ್ಕ್ ಅಳವಡಿಸಿದ್ದ ಗ್ರಿಲ್ ದಾಟಿ ಹೋಗಲು ಪ್ರಯತ್ನಿಸಿದೆ.

    ಆದರೆ ಈ ವೇಳೆ ಗ್ರಿಲ್‍ಗೆ ಅಳವಡಿಸಿದ್ದ ಚೂಪಾದ ಭರ್ಜಿಗೆ ಸಿಲುಕಿಕೊಂಡ ಕುದುರೆಯ ಕರುಳು ಹೊಟ್ಟೆ ಭಾಗದಿಂದ ಹೊರಬಂದಿದೆ. ನಂತರ ಕುದುರೆ ಅಲ್ಲಿಯೇ ನರಳಾಡುತ್ತಿದ್ದ ದೃಶ್ಯ ಗಮನಿಸಿದ ಯುವಕರು ತಕ್ಷಣವೇ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಸ್ಥಳದಲ್ಲಿಯೇ ಕುದುರೆಗೆ ಶಸ್ತ್ರಚಿಕಿತ್ಸೆ ನಡೆಸಿ ಕರಳನ್ನು ಉದರದ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

    ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

    – ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

    ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.

    ಕೊರೊನಾ ಸೋಂಕು ಪಾಸಿಟಿವ್ ಇದ್ದ ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ 25 ವರ್ಷದ ತುಂಬು ಗರ್ಭಿಣಿಗೆ, 39 ವಾರಗಳು ಹಾಗೂ 04 ದಿನಗಳು ಪೂರ್ಣಗೊಂಡಿದ್ದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದವು. ಹೀಗಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ.

    ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿದ್ದು, 3.5 ಕೆ.ಜಿ ತೂಕದ ಹೆಣ್ಣು ಮಗುವಿಗೆ ತಾಯಿ ಜನ್ಮ ನೀಡಿದ್ದಾಳೆ. ವಿಭಾಗದ ಮುಖ್ಯಸ್ಥೆ ಡಾ.ಕಸ್ತೂರಿ ಡೋಣಿಮಠ, ಶಸ್ತ್ರಚಿಕಿತ್ಸಕ ಡಾ.ವೈ.ಎಂ.ಕಬಾಡಿ, ಅರವಳಿಕೆ ತಜ್ಞೆ ಡಾ.ವೀಣಾ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಅಕ್ಷತಾ ನಿಂಗನೂರೆ, ಡಾ.ಸಹನಾ, ಡಾ.ರೂಪಾ, ನರ್ಸಿಂಗ್ ವಿಭಾಗದ ಶ್ವೇತಾ, ರೇಷ್ಮಾ, ಸಹಾಯಕ ಸಿಬ್ಬಂದಿ ಕಳಕಪ್ಪ ಮತ್ತಿತರರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

    ಕಿಮ್ಸ್ ತಜ್ಞರ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.