Tag: ಶಶಿ ಕುಮಾರ್

  • ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ (SP Muddahanume Gowda) ಹಾಗೂ ಚಿತ್ರದುರ್ಗದ ಮಾಜಿ ಸಂಸದ, ಹಿರಿಯ ಚಿತ್ರನಟ ಶಶಿಕುಮಾರ್ (Shashi Kumar) ಅವರು ಇಂದು ಬೆಂಗಳೂರಿನ (Bengaluru) ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿ (BJP) ಸೇರ್ಪಡೆಯಾದರು.

    ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ (Basavaraj Bommai) ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಇಬ್ಬರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕಟೀಲ್ ಮತ್ತು ಸಿಎಂ ಮಾಜಿ ಸಂಸದರಾದ ಶಶಿಕುಮಾರ್ ಹಾಗೂ ಮುದ್ದಹನುಮೇಗೌಡರಿಗೆ ಪಕ್ಷದ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಈ ವೇಳೆ ಕೆಪಿಸಿಸಿ ಸದಸ್ಯರಾಗಿದ್ದ ವೆಂಕಟಾಚಲ, ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಮೈಸೂರಿನ ರಮೇಶ್ ಮುನಿಯಪ್ಪ ಬಿಜೆಪಿ ಸೇರ್ಪಡೆ ಆದರು. ರಮೇಶ್‌ ಮುನಿಯಪ್ಪ ಮಾಜಿ ಸಿಎಂ ಶೀಲಾ ದಿಕ್ಷೀತ್‌ರಿಗೆ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದರು.

    ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದ ರಾಜಕಾರಣ‌ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡು ಅಧಿಕಾರ ಕಳೆದುಕೊಳ್ಳುತ್ತಿದೆ. ಈಗ ಕಾಂಗ್ರೆಸ್‌ಗೆ ಜನಮತ ಇಲ್ಲ. ಬಹುತೇಕ ಸಚಿವರು ಸೋತಿದ್ದರು. ಆದರೂ ಕಾಂಗ್ರೆಸ್ ಹಿಂಬಾಗಿಲಿಂದ ಅಧಿಕಾರ ಪಡೆದಿತ್ತು. ಆದರೆ ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರದ ಪ್ರಯೋಗ ವಿಫಲವಾಯಿತು. ನಂತರ ಬಿಜೆಪಿ ಅಧಿಕಾರಕ್ಕೇರಿ ಜನಮನ್ನಣೆ ಪಡೆದಿದೆ. ಬಿಜೆಪಿ ಪರ ಸಂಪೂರ್ಣ ದಿಕ್ಸೂಚಿ ಕಾಣುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉತ್ತರ ಕರ್ನಾಟಕದಲ್ಲಿ ಜನಸಂಕಲ್ಪ ಯಾತ್ರೆಗಳಿಗೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಕಾಂಗ್ರೆಸ್‌ನ ಹಲವು ನಾಯಕರಿಗೆ ಅಲ್ಲಿ ಸೇವೆ ಮಾಡಿದ್ರೂ ಬೆಲೆ ಸಿಗುತ್ತಿದೆ. ಹಲವರಿಗೆ ಕಾಂಗ್ರೆಸ್‌ನಲ್ಲಿ ಬೆಲೆ ಸಿಕ್ತಿಲ್ಲ ಅಂಥ ನಾಯಕರು ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಿಜೆಪಿಗೆ ಸೇರುತ್ತಿದ್ದಾರೆ. ಹಲವರು ಭ್ರಮನಿರಸನಗೊಂಡು ನಮ್ಮ ಪಕ್ಷ ಸೇರಿದ್ದಾರೆ ಎಂದರು.

    ಮುದ್ದ ಹನುಮೇಗೌಡ ಸಜ್ಜನ ರಾಜಕಾರಣಿ. ಮುದ್ದಹನುಮೇಗೌಡರ ಸೇರ್ಪಡೆ ನಮಗೆ ದೊಡ್ಡ ಬಲ ನೀಡಿದೆ. ಚಿತ್ರನಟ ಶಶಿಕುಮಾರ್ ನಮ್ಮಲ್ಲೇ ಇದ್ದವರು. ಈಗ ಅವರು ಮರಳಿ ನಮ್ಮಲ್ಲಿಗೆ ಬಂದಿದ್ದಾರೆ. ನಮ್ಮ ಮನೆಯೇ ಸುರಕ್ಷಿತ ಅಂತ ಶಶಿಕುಮಾರ್ ಮರಳಿದ್ದಾರೆ. ಶಶಿಕುಮಾರ್ ಸೇರ್ಪಡೆ ನಮ್ಮ ಪಕ್ಷದ ಬಲ ಹೆಚ್ಚಿಸಿದೆ. ಅನಿಲ್ ಕುಮಾರ್ ಜನಪರ ಐಎಎಸ್ ಅಧಿಕಾರಿ ಆಗಿದ್ದವರು. ಹಲವು ಸಲ ನಾವು ತಾತ್ವಿಕವಾಗಿ ಚರ್ಚೆ ಮಾಡಿದ್ದೇವೆ. ಅನಿಲ್ ಕುಮಾರ್ ಪಕ್ಷ ಸೇರ್ಪಡೆಯಿಂದ ಎಸ್ಸಿ ಸಮುದಾಯದಲ್ಲಿ ಮತ್ತು ಮೌಲಿಕ ರಾಜಕಾರಣಕ್ಕೆ ಬೆಲೆ ಬಂದಿದೆ ಎಂದು ಅಭಿಪ್ರಾಯ ಪಟ್ಟರು.

    ಈ ವೇಳೆ ಸಚಿವ ಎಸ್ ಟಿ ಸೋಮಶೇಖರ್, ಸಚಿವ ಅಶ್ವತ್ಥ ನಾರಾಯಣ, ಎಮ್‌ಎಲ್‌ಸಿಗಳಾದ ಲಕ್ಷ್ಮಣ ಸವದಿ, ಸಿಪಿ ಯೋಗೇಶ್ವರ್, ದೇವೇಗೌಡ, ಶಾಸಕ ಮಸಾಲೆ ಜಯರಾಮ್, ಸಚಿವ ಗೋವಿಂದ್ ಕಾರಜೋಳ, ರಾಜ್ಯಸಭೆ ಸದಸ್ಯ ಜಗ್ಗೇಶ್ ಭಾಗಿ‌ ಆಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್

    ಬಿಗ್ ಬಾಸ್ ಖ್ಯಾತಿಯ ಶಶಿ ಕುಮಾರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.‌ ಗುರುಹಿರಿಯರ ಸಮ್ಮುಖದಲ್ಲಿ ನಟ ಶಶಿ ಹಸಮಣೆ ಏರಿದ್ದಾರೆ.

    ಕಿರುತೆರೆ ದೊಡ್ಮನೆ ಆಟ ಬಿಗ್ ಬಾಸ್ ಕನ್ನಡ 6 ವಿನ್ನರ್ ಶಶಿ ಕುಮಾರ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಸ್ವಾತಿ ಎಂಬುವರನ್ನ ಶಶಿ ಕುಮಾರ್ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ಮಹಾನಟಿ ಕೀರ್ತಿ ಸುರೇಶ್: ಹುಡುಗ ಯಾರು ಗೊತ್ತಾ?

    ಶಶಿ ಕುಮಾರ್ ಹಾಗೂ ಸ್ವಾತಿ ಅವರ ವಿವಾಹ ಮಹೋತ್ಸವ ಆಗಸ್ಟ್ 6 ಮತ್ತು 7 ರಂದು ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್‌ವೊಂದರಲ್ಲಿ ಶಶಿ ಕುಮಾರ್ ಹಾಗೂ ಸ್ವಾತಿ ಅವರ ಕಲ್ಯಾಣ ಜರುಗಿದೆ. ಆಗಸ್ಟ್ 7 ರಂದು ಬೆಳಗ್ಗೆ 9 ರಿಂದ 10:15 ವರೆಗೆ ಇದ್ದ ಶುಭ ಮುಹೂರ್ತದಲ್ಲಿ ಸ್ವಾತಿ ಮತ್ತು ಶಶಿಕುಮಾರ್ ಹೊಸ ಬಾಳಿಗೆ ನಾಂದಿ‌ ಹಾಡಿದ್ದಾರೆ.

    ಬಿಗ್ ಬಾಸ್ ಶಶಿ ಮತ್ತು ಸ್ವಾತಿ ಅವರ ಮದುವೆ, ಗುರು ಹಿರಿಯರು ನಿಶ್ಚಿಯಿಸಿದ ಮದುವೆಯಾಗಿದ್ದು, ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು, ಹಿತೈಷಿಗಳು, ಶುಭಕೋರಿದ್ದಾರೆ. ಇದನ್ನೂ ಓದಿ: ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ತಲೈವಾ: ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ

    Live Tv
    [brid partner=56869869 player=32851 video=960834 autoplay=true]

  • ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

    ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರೆಲ್ಲ ಕುರುಕ್ಷೇತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಗಾಗಿ ಬಹು ದಿನಗಳಿಂದ ಕಾದು ಕೂತಿದ್ದರು. ಈ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋದಾಗೆಲ್ಲ ಆವರಿಸಿಕೊಳ್ಳುತ್ತಿದ್ದ ನಿರಾಸೆಯೂ, ದಿನ ಕಳೆಯುತ್ತಲೇ ನಿರೀಕ್ಷೆಯಾಗಿ ಪುಟಿದೇಳುತ್ತಿದ್ದದ್ದು ಕುರುಕ್ಷೇತ್ರದತ್ತ ಎಂಥಾ ಕ್ರೇಜ್ ಇದೆ ಎಂಬುದರ ಸ್ಪಷ್ಟ ಸೂಚನೆ ಎಂದರೂ ತಪ್ಪೇನಿಲ್ಲ. ಆದರೀಗ ಅಂಥಾ ನಿರೀಕ್ಷೆಗಳೆಲ್ಲ ತಣಿದಿವೆ. ಆಡಿಯೋ ಜೊತೆಗೆ ಕುರುಕ್ಷೇತ್ರದ ಕನ್ನಡಿಯಂತಿರೋ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ.

    ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬಂದಿರೋ ಮಹತ್ವಾಕಾಂಕ್ಷೆಯ ಚಿತ್ರ ಮುನಿರತ್ನ ಕುರುಕ್ಷೇತ್ರ. ಇದೀಗ ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದ ಮೂಲಕ ಪ್ರೇಕ್ಷಕರಿಗೆ ಬೋನಸ್ ಎಂಬಂತೆ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ. ಕುರುಕ್ಷೇತ್ರದ ಬಗ್ಗೆ ಯಾವ ಮಟ್ಟಕ್ಕೆ ಕ್ರೇಜ್ ಇದೆ ಎಂಬುದಕ್ಕೆ ಈ ಟ್ರೈಲರ್ ಬಿಡುಗಡೆಯಾಗಿ ಕ್ಷಣಾರ್ಧದಲ್ಲಿಯೇ ಯೂಟ್ಯೂಬ್‍ನಲ್ಲಿ ಸಿಕ್ಕ ವೀಕ್ಷಣೆಯೇ ಸಾಕ್ಷಿ. 24 ಗಂಟೆ ಕಳೆಯುವ ಮುನ್ನವೇ ಈ ಟ್ರೈಲರ್ ವೀಕ್ಷಣೆ 10 ಲಕ್ಷದ ಗಡಿಯತ್ತ ದಾಪುಗಾಲಿಟ್ಟಿದ್ದು, ಆ ಸಂಖ್ಯೆ ವೇಗವಾಗಿ ಏರಿಕೊಳ್ಳುತ್ತಲೇ ಇದೆ.

    ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿಯೂ ತಯಾರಾಗಿರೋ ಕುರುಕ್ಷೇತ್ರದ ಬಿಡುಗಡೆಗೀಗ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಬಿಡುಗಡೆಯಾಗಿರೋ ಈ ಟ್ರೈಲರ್ ದರ್ಶನ್ ದುಯೋರ್ಧನನಾಗಿ ಗದೆ ಹಿಡಿದು ಅಬ್ಬರಿಸೋದೂ ಸೇರಿದಂತೆ ಒಂದಷ್ಟು ಪಾತ್ರಗಳ ಖದರಿನ ಝಲಕ್‍ಗಳನ್ನು ಅನಾವರಣಗೊಳಿಸಿದೆ. ಇದನ್ನು ಕಂಡು ಪ್ರೇಕ್ಷಕರೂ ಕೂಡಾ ಖುಷಿಗೊಂಡಿದ್ದಾರೆ. ಈ ಮೂಲಕ ಆಡಿಯೋ ಬಿಡುಗಡೆಯ ಘಳಿಗೆಯಲ್ಲಿಯೇ ಟ್ರೈಲರ್ ಮೂಲಕವೂ ಕುರುಕ್ಷೇತ್ರ ಭಾರೀ ಸದ್ದು ಶುರುವಿಟ್ಟಿದೆ.

    ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರ. ಈ ಕಾರಣದಿಂದಲೇ ದರ್ಶನ್ ಅಭಿಮಾನಿಗಳೂ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಗಮನವನ್ನೂ ತನ್ನತ್ತ ಸೆಳೆದುಕೊಂಡಿರೋ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ತೆಗೆದುಕೊಂಡಿರೋ ದೊಡ್ಡ ಮಟ್ಟದ ಚಾಲೆಂಜ್. ಅದನ್ನವರು ಅಷ್ಟೇ ಶ್ರದ್ಧೆಯಿಂದಲೂ ರೂಪಿಸಿದ್ದಾರೆ. ಅಷ್ಟೇ ದೊಡ್ಡ ತಾರಾಗಣವನ್ನೂ ಕುರುಕ್ಷೇತ್ರ ಹೊಂದಿದೆ. ಅಂಬರೀಷ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿ ಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್, ಭಾರತಿ ವಿಷ್ಣುವರ್ಧನ್, ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್, ನಿಖಿಲ್ ಸೇರಿದಂತೆ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

    https://youtu.be/i1F0OpKaXOg

  • 28 ಮಕ್ಕಳನ್ನು ದತ್ತು ಪಡೆದ ಆಧುನಿಕ ರೈತ ಶಶಿ: ವಿಡಿಯೋ ನೋಡಿ

    28 ಮಕ್ಕಳನ್ನು ದತ್ತು ಪಡೆದ ಆಧುನಿಕ ರೈತ ಶಶಿ: ವಿಡಿಯೋ ನೋಡಿ

    ಬೆಂಗಳೂರು: ಬಿಗ್ ಬಾಸ್ ಸೀಸನ್- 6 ವಿಜೇತ, ಆಧುನಿಕ ರೈತ 28 ಮಕ್ಕಳನ್ನು ದತ್ತು ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಶಶಿಕುಮಾರ್ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದ ವಿವಿಎಸ್ ಶಾಲೆಯಲ್ಲಿ ಓದಿದ್ದರು. ಈಗ ಈ ಶಾಲೆಯ 28 ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರ ವಿದ್ಯಾಭ್ಯಾಸದ ಖರ್ಚುನ್ನು ನೋಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಅಲ್ಲದೆ ಈ ವಿಷಯವನ್ನು ಅವರು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವುದರ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ನಾನು ಈ ಶಾಲೆಯಲ್ಲಿ 28 ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿದ್ದೇವೆ. ಇವರು ಇಲ್ಲಿ ಎಷ್ಟು ದಿನ ಎಷ್ಟು ವರ್ಷ ಇರುತ್ತಾರೋ ನಾನು ಅವರ ವಿದ್ಯಾಭ್ಯಾಸ ಮುಗಿಸೋವರೆಗೂ, ಅವರ ವಿದ್ಯಾಭ್ಯಾಸದ ಖರ್ಚು, ಯೂನಿಫಾರಂ, ಬುಕ್ಸ್, ಶೂ ಇಂತಹ ಖರ್ಚು ವೆಚ್ಚ ಏನೇ ಬಂದರೂ ನಾನೇ ನೋಡಿಕೊಳ್ಳುತ್ತೇನೆ ಎಂದು ಅವರಿಗೆ ಮಾತು ನೀಡಿದ್ದೇನೆ. ಈ ವಿವಿಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಈ ವಿಷಯ ತಿಳಿಸಿದ್ದೀನಿ.

    ಈ ಮಕ್ಕಳನ್ನು ದತ್ತು ಪಡೆದುಕೊಂಡಿದಕ್ಕೆ ನನಗೆ ತುಂಬಾ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ನಾನು ಇದೇ ಊರಿನವನಾಗಿದ್ದು, ಈ ಶಾಲೆ ಮೈದಾನದಲ್ಲಿ ಆಟವಾಡುತ್ತಾ ಬೆಳೆದು ಬಂದಿರುವದರಿಂದ ನನಗೆ ಆ ಒಂದು ಋಣ ಇದೆ. ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗುತ್ತೆ ಎಂದುಕೊಂಡಿದ್ದೇನೆ. 28 ಸಂಖ್ಯೆ ಇನ್ನು ಜಾಸ್ತಿ ಆಗುತ್ತೆ ಎಂದು ನಾನು ಅಂದುಕೊಂಡಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

    ಶಶಿಕುಮಾರ್ ಈಗ ತಮ್ಮ ಎರಡನೇ ಸಿನಿಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಶಶಿಕುಮಾರ್ ಕೃಷಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

     

    View this post on Instagram

     

    Happy to adopt these 28 kids until they complete their schooling and listen to their dreams.

    A post shared by Shashi Kumar (@shashi.official) on

  • ಸ್ಯಾಂಡಲ್‍ವುಡ್ ನಟನನ್ನು ಭೇಟಿ ಮಾಡಿದ ಬಿಗ್‍ಬಾಸ್ ಶಶಿ

    ಸ್ಯಾಂಡಲ್‍ವುಡ್ ನಟನನ್ನು ಭೇಟಿ ಮಾಡಿದ ಬಿಗ್‍ಬಾಸ್ ಶಶಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್ -6ರ ವಿನ್ನರ್, ಆಧುನಿಕ ರೈತ ಶಶಿಕುಮಾರ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರನ್ನು ಭೇಟಿ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಶಶಿ ರೋರಿಂಗ್ ಸ್ಟಾರ್ ಮುರಳಿ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶಶಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕಿ, “ಶ್ರೀಮುರಳಿ ಅವರನ್ನು ಭೇಟಿ ಮಾಡಿ ಖುಷಿಯಾಯಿತು. ನಾವಿಬ್ಬರು ಕೃಷಿ, ಬಿಗ್ ಬಾಸ್ ದಿನಗಳು ಹಾಗೂ ಚಿತ್ರರಂಗದ ಬಗ್ಗೆ ಮಾತನಾಡಿದ್ದೇವೆ” ಎಂದರು.

    ಶಶಿ, ನಟ ಶ್ರೀಮುರಳಿ ಅವರನ್ನು ಭೇಟಿ ಮಾಡಿರುವುದು ಅವರ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಅಲ್ಲದೆ ಶಶಿ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಿಗೆ ಕಾಡುತ್ತಿದೆ. ಆದರೆ ಸ್ವತಃ ಶಶಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಸಿನಿಮಾದ ಬಗ್ಗೆ ಏನೂ ಮಾತನಾಡಿಲ್ಲ. ನಾನು ಕೃಷಿ ಬಗ್ಗೆ ಕೆಲವು ವಿಚಾರಗಳನ್ನು ಅವರ ಜೊತೆ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.

    ಶ್ರೀ ಮುರಳಿ ಈಗ ‘ಭರಾಟೆ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಅವರು ‘ಮದಗಜ’ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಶಶಿ ಕುಮಾರ್ ಟಿವಿ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟಿಸುವುದಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ‘ಕಂಟ್ರೋಲ್ ನಲ್ಲಿ ಇರಿ’ ಎಂದು ಸ್ಪರ್ಧಿಗೆ ಸುದೀಪ್ ವಾರ್ನ್

    ‘ಕಂಟ್ರೋಲ್ ನಲ್ಲಿ ಇರಿ’ ಎಂದು ಸ್ಪರ್ಧಿಗೆ ಸುದೀಪ್ ವಾರ್ನ್

    ಬೆಂಗಳೂರು: ಬಿಗ್‍ಬಾಸ್ ಸೀಸನ್ 6ನಲ್ಲಿ ಪ್ರತಿದಿನ ಒಂದಲ್ಲ ಒಂದು ಗಲಾಟೆ-ವಿವಾದ ನಡೆಯುತ್ತಿದೆ. ನಟ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಬುದ್ಧಿ ಹೇಳುತ್ತಿದ್ದಾರೆ. ಅದೇ ರೀತಿ ಇದೀಗ ಆಧುನಿಕ ರೈತ ಶಶಿಗೆ ಬುದ್ಧಿ ಹೇಳಿದ್ದಾರೆ.

    ಇತ್ತೀಚೆಗೆ ಬಿಗ್‍ಬಾಸ್ ಮನೆಯಲ್ಲಿ ಆಂಡ್ರ್ಯೂ ಮತ್ತು ಕವಿತಾ ನಡುವೆ ವಿವಾದ ನಡೆದಿದ್ದು, ಇದರಿಂದ ಆಧುನಿಕ ರೈತ ಶಶಿ ಕುಮಾರ್ ಆವೇಶಕ್ಕೆ ಒಳಗಾಗಿ ತಮ್ಮ ಕೈ ಮೂಳೆಯನ್ನೇ ಮುರಿದು ಕೊಂಡಿದ್ದರು.

    ಈ ಗಲಾಟೆಯ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು, ಮನಸ್ಸು ಮಾತ್ರ ನಮ್ಮ ದೇಹದ ಭಾಗವಲ್ಲ. ಟಾಸ್ಕ್ ಮಾಡುವಾಗ ದೇಹದ ಎಲ್ಲ ಭಾಗವೂ ಮುಖ್ಯವಾದದ್ದು. ಆದ್ದರಿಂದ ಅವುಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಈ ರೀತಿ ಕೈಗೆ ಪೆಟ್ಟು ಮಾಡಿಕೊಂಡರೆ ಕಠಿಣವಾದ ಟಾಸ್ಕ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಚೆನ್ನಾಗಿ ಪರ್ಫಾಮ್ ಮಾಡದೆ, ನಾಮಿನೆಟ್ ಆಗಿ ಬಿಗ್ ಬಾಸ್ ಮನೆಯಿಂದ ಹೋಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

    ಮೊದಲ ಬಾರಿಗೆ ಕೈ ಹೊಡೆದುಕೊಂಡಾಗ ಮರದ ಗೋಡೆ ಆಗಿತ್ತು. ಆದ್ದರಿಂದ ಏನೂ ಆಗಿಲ್ಲ. ಆದರೆ ಎರಡನೇ ಬಾರಿ ಜೋರಾಗಿ ಕೋಪಗೊಂಡು ಹೊಡೆಯಲು ಹೋಗಿದ್ದೀರಿ. ದುರಾದೃಷ್ಟವಶಾತ್ ಕಾಂಕ್ರೀಟ್ ಗೋಡೆ ಆದ್ದರಿಂದ ಮೂಳೆಗಳು ಮುರಿದೆ. ನಮ್ಮ ಮನಸ್ಸು, ಆವೇಶ, ಭಾವನೆಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಕೆಲವೊಮ್ಮೆ ನಮ್ಮದು ಯಾವುದಲ್ಲವೋ, ಅದು ನಮ್ಮದಲ್ಲ. ಅನ್ಯಾಯವಾಗಿ ಕೈ ಪೆಟ್ಟು ಮಾಡಿಕೊಂಡಿದ್ದೀರಿ. ಆದ್ದರಿಂದ ನೀವು ಕಂಟ್ರೋಲ್ ನಲ್ಲಿ ಇರಿ ಎಂದು ಸುದೀಪ್ ಅವರು ಶಶಿಗೆ ಬುದ್ಧಿ ಹೇಳಿದ್ದಾರೆ.

    ಬಿಸ್‍ಬಾಸ್ ಮನೆಯಲ್ಲಿ ಆಂಡ್ರ್ಯೂ ಮತ್ತು ಕವಿತಾ ನಡುವೆ ಟಾಸ್ಕ್ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಇದರಿಂದ ಸ್ಪರ್ಧಿ ಕವಿತಾ ಬೇಸರದಿಂದ ಅಳುತ್ತಿದ್ದರು. ಆಗ ಶಶಿ ಕೋಪಗೊಂಡು ಜಯಶ್ರೀ ಜೊತೆ ಸೇರಿ ಆಂಡ್ರ್ಯೂ ಜೊತೆ ಮಾತುಕತೆ ನಡೆಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೋಪಗೊಂಡ ಶಶಿ ಗೋಡೆಗೆ ಕೈ ಗುದ್ದಿಕೊಂಡರು. ಪರಿಣಾಮ ಶಶಿ ಕೈಯ 2 ಮೂಳೆಗಳು ಮುರಿದು ಹೋಗಿವೆ. ಕೂಡಲೇ ವೈದ್ಯರ ಬಳಿಕ ಚಿಕಿತ್ಸೆ ಪಡೆದು ಕೊಂಡಿದ್ದು, ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv