Tag: ಶಶಿತರೂರ್

  • ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನ?

    ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನ?

    – ಶಶಿತರೂರ್, ಗೊಗೋಯ್ ಆಕಾಂಕ್ಷಿ!

    ನವದೆಹಲಿ: ಒಂದೆಡೆ ಸರ್ಕಾರ ರಚಿಸಲು ಎನ್‍ಡಿಎ ಕಸರತ್ತು ನಡೆಸಿದರೆ, ಇತ್ತ ಕಾಂಗ್ರೆಸ್‍ನಲ್ಲಿ (Congress) ವಿಪಕ್ಷ ಸ್ಥಾನವನ್ನು ಯಾರು ಅಲಂಕರಿಸಬಹುದು ಎಂಬುದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ವಿಪಕ್ಷ ಸ್ಥಾನ ರಾಹುಲ್ ಗಾಂಧಿಯವರಿಗೆ (Rahul Gandhi) ಬಹುತೇಕ ಫಿಕ್ಸ್ ಆಗಿದೆ. ರಾಹುಲ್‍ಗೆ ಮತ್ತೆ ದೊಡ್ಡ ಜವಾಬ್ದಾರಿ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಶಶಿತರೂರ್ (Shashi Taroor), ಗೌರವ್ ಗೊಗೋಯ್ (Gaurav Gogoi) ಕೂಡ ವಿರೋಧ ಪಕ್ಷದ ನಾಯಕರಾಗಲು ಆಕಾಂಕ್ಷಿಗಳಾಗಿದ್ದಾರೆ.

    ಕಾಂಗ್ರೆಸ್ 52 ಸ್ಥಾನಗಳಿಂದ ಈಗ 99 ಸ್ಥಾನಗಳಿಗೆ ಏರಿಕೆಯಾಗಿರುವುದಕ್ಕೆ ರಾಹುಲ್ ಗಾಂಧಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೇ ಈ ಸ್ಥಾನವನ್ನು ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೃತೃತ್ವದಲ್ಲಿ ನಡೆದ ಇಂಡಿಯಾ ಒಕ್ಕೂಟ ಸಭೆಯಲ್ಲಿಯೂ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಅಬ್‌ಕೀ ಬಾರ್‌ ಸಮ್ಮಿಶ್ರ ಸರ್ಕಾರ್‌ – ಎನ್‌ಡಿಎ ಮೈತ್ರಿಕೂಟದ ಸಂಖ್ಯೆ 303ಕ್ಕೆ ಏರಿಕೆ!

  • ಸುಪ್ರಿಯಾ ಮೆಲು ಧ್ವನಿಯಲ್ಲಿ ಮಾತನಾಡುತ್ತಿದ್ದರು, ಕೇಳಿಸಿಕೊಳ್ಳಲು ನಾನು ಡೆಸ್ಕ್ ಮೇಲೆ ಒರಗಿದೆ

    ಸುಪ್ರಿಯಾ ಮೆಲು ಧ್ವನಿಯಲ್ಲಿ ಮಾತನಾಡುತ್ತಿದ್ದರು, ಕೇಳಿಸಿಕೊಳ್ಳಲು ನಾನು ಡೆಸ್ಕ್ ಮೇಲೆ ಒರಗಿದೆ

    ನವದೆಹಲಿ: ಸಂಸತ್ತಿನಲ್ಲಿ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರೊಂದಿಗಿನ ಇತ್ತೀಚಿನ ಸಂಭಾಷಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.

    ಲೋಕಸಭೆ ಕಲಾಪದ ವೇಳೆ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಎದ್ದು ನಿಂತು, ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ, ಅವರ ಹಿಂದೆ ಕುಳಿತಿದ್ದ ಶಶಿ ತರೂರ್, ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ಮಾತುಕತೆಯಲ್ಲಿ ಮಗ್ನರಾಗಿದ್ದರು. ಇದನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು.

    ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ತರೂರ್, ವೀಡಿಯೋ ನೋಡಿ ಆಂದಿಸುತ್ತಿರುವ ಎಲ್ಲರಿಗೂ ಸ್ಪಷ್ಟನೆ ನೀಡಲು ಬಯಸುತ್ತೇನೆ. ಲೋಕಸಭೆಯಲ್ಲಿ ಫಾರೂಕ್ ಅಬ್ದುಲ್ಲಾ ಮಾತುಕತೆ ಮುಗಿದ ಬಳಿಕ ಸುಪ್ರಿಯಾ ಮಾತನಾಡಲಿದ್ದರು. ಅದಕ್ಕಾಗಿ ಸುಪ್ರಿಯಾ, ನನ್ನ ಬಳಿ ಪ್ರಶ್ನೆಯೊಂದನ್ನು ಕೇಳುತ್ತಿದ್ದರು. ಫಾರೂಕ್ ಅವರಿಗೆ ತೊಂದರೆಯಾಗದಂತೆ ಸುಪ್ರಿಯಾ ಮೃದುವಾಗಿ ಮಾತನಾಡುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಳ್ಳಲು ನಾನು ಡೆಸ್ಕ್ ಮೇಲೆ ಒರಗಿದೆ ಅಷ್ಟೇ’ ಎಂದು ಹೇಳಿಕೊಂಡಿದ್ದಾರೆ.

  • ಮೋದಿ ಸರ್ಕಾರ ನಿದ್ರಿಸುತ್ತಿದೆ- ಲಾರಿ ಚಿತ್ರ ಹಂಚಿಕೊಂಡ ತರೂರ್

    ಮೋದಿ ಸರ್ಕಾರ ನಿದ್ರಿಸುತ್ತಿದೆ- ಲಾರಿ ಚಿತ್ರ ಹಂಚಿಕೊಂಡ ತರೂರ್

    ತಿರುವನಂತಪುರಂ: ಕಾಂಗ್ರೆಸ್ ಸಂಸದ ಶಶಿ ತರೂರ್ ಲಾರಿಯೊಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಕೇಂದ್ರ ಸರ್ಕಾರ ನಿದ್ರಿಸುತ್ತಿದೆ ಎಂದು ಛೇಡಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕೇಂದ್ರ ಸರ್ಕಾರ ನಿದ್ರಿಸುತ್ತಿದೆ ಎಂದು ಛೇಡಿಸಿದ್ದಾರೆ. ಲಾರಿಯೊಂದರ ಹಿಂಬರಹದಲ್ಲಿ ದಯವಿಟ್ಟು ಹಾರ್ನ್ ಮಾಡಬೇಡಿ, ಮೋದಿ ಸರ್ಕಾರ ನಿದ್ರಿಸುತ್ತಿದೆ ಎಂದು ಬರೆದಿದ್ದು, ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ. ಆದರೆ ಇದು ನಿಜವಾದ ಚಿತ್ರವಲ್ಲ, ಫೋಟೋಶಾಪ್ ಮಾಡಿರುವ ಚಿತ್ರವೆಂದು ಅನೇಕರು ಕಮೆಂಟ್ ಮಾಡಿದ್ದಾರೆ. ಫ್ಯಾಕ್ಟ್ ಚೆಕ್ ವರದಿಗಳು ಇದನ್ನೇ ಹೇಳಿವೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ಈ ಹಿಂದೆ ಇದೇ ಚಿತ್ರದ ಮೂಲಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಛೇಡಿಸಲಾಗಿತ್ತು. ಡೀಸೆಲ್‍ನಿಂದ ಚಲಿಸುತ್ತೇನೆ, ಸರಿಯಾಗಿ ಶುಲ್ಕವನ್ನು ಪಾವತಿಸುತ್ತೇನೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಂತೆ ದಳ್ಳಾಳಿತನದಿಂದ ಜನರ ದುಡ್ಡಿನಲ್ಲಿ ಮಜಾ ಮಾಡುವುದಿಲ್ಲ ಎಂದು ಹಿಂಬರಹದಲ್ಲಿ ಹೇಳಲಾಗಿತ್ತು. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

  • ಕಮರ್ಷಿಯಲ್ ಪೈಲಟ್ ಆದ ಕೇರಳದ ಮೊದಲ ಮಹಿಳೆ – ಶಶಿ ತರೂರ್ ಶ್ಲಾಘನೆ

    ಕಮರ್ಷಿಯಲ್ ಪೈಲಟ್ ಆದ ಕೇರಳದ ಮೊದಲ ಮಹಿಳೆ – ಶಶಿ ತರೂರ್ ಶ್ಲಾಘನೆ

    ತಿರುವನಂತಪುರಂ: ಕೇರಳದಲ್ಲಿ ಕಮರ್ಷಿಯಲ್ ಪೈಲಟ್ ಆದ ಮೊದಲ ಮಹಿಳೆ ಜೆನಿ ಜೆರೊಮ್, ಈಕೆ ನಿಜವಾದ ಸ್ಫೂರ್ತಿ ಎಂದು ತಿರುವನಂತಪುರಂ ಸಂಸದ ಮತ್ತು ಕಾಂಗ್ರೆಸ್ ನೇತಾರ ಶಶಿ ತರೂರ್ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

    ಜೆನಿ ಅವರಿಗೆ ಅಭಿನಂದನೆ, ಅವಳು ಇಂದಿನ  @airarabiagroup ವಿಮಾನವನ್ನು ಶಾರ್ಜಾದಿಂತ ತಿರುವನಂತಪುರಂಗೆ ಹಾರಿಸಿದ್ದಾರೆ. ಇದು ಒಂದು ಸಣ್ಣ ಮೀನುಗಾರಿಕಾ ಕುಗ್ರಾಮದಿಂದ ವಾಣಿಜ್ಯ ಪೈಲಟ್ ಆಗಬೇಕೆಂಬ ಹುಡುಗಿಯ ಬಾಲ್ಯದ ಕನಸಿನ ಸಾಕ್ಷಾತ್ಕಾರವಾಗಿದೆ. ಇದು ನಿಜವಾದ ಸ್ಫೂರ್ತಿಯಾಗಿದೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

    ಶಾರ್ಜಾದಿಂದ ತಿರುವನಂತಪುರಂಗೆ ಸಹ ಪೈಲಟ್ ಆಗಿ ಏರ್ ಅರೇಬಿಯಾ ಜಿ 9 449 ವಿಮಾನವನ್ನು ಹಾರಾಟ ನಡೆಸಬೇಕೆಂದು ತಿಳಿದಾಗ 23 ವರ್ಷದ ಜೆನಿ ಜೆರೋಮ್‍ಗೆ ಕನಸು ನನಸಾದಗಳಿಗೆಯಾಗಿದೆ. ತಿರುವನಂತಪುರಂನ ಕರಾವಳಿ ಗ್ರಾಮವಾದ ಕೊಚ್ಚುತ್ತುರ ಮೂಲದ ಜೆನಿ ಪ್ರಸ್ತುತ ಅಜ್ಮಾನ್ ನಲ್ಲಿ ತಮ್ಮ ಹೆತ್ತವರೊಂದಿಗೆ ವಾಸವಾಗಿದ್ದಾರೆ. ವಿಮಾನ ಹಾರಾಟ ನಡೆಸಬೇಕೆಂಬುದು ಜೆನಿ ಅವರ ಆಸೆಯಾಗಿತ್ತು. ಕೊನೆಗೂ ಸಹ ಪೈಲಟ್ ಆಗಿ ತನ್ನ ಊರು ತಿರುವನಂತಪುರಂಗೆ ಬಂದಾಗ ನಾಡಿನ ಜನರು ಪ್ರೀತಿಯಿಂದ ಬರ ಮಾಡಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ಜೆನಿ ಅವರ ಕನಸು ನನಸಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಕೇರಳದ ಹೆಮ್ಮೆಯಾಗಿ ಮಾರ್ಪಟ್ಟ ಜೆನಿ ಜೆರೋಮ್‍ಗೆ ಅಭಿನಂದನೆಗಳು. ತಿರುವನಂತಪುರಂ ಜಿಲ್ಲೆಯ ಕರಾವಳಿ ಹಳ್ಳಿಯಾದ ಕೊಚ್ಚುತುರಾ ಮೂಲದ ಜೆನಿ ಕೇರಳದ ಹೆಮ್ಮೆಯಾಗಿದ್ದಾರೆ. ಪರಿಸ್ಥಿತಿಗಳೊಂದಿಗದೆ ಹೋರಾಡಿ ತನ್ನ ಕನಸನ್ನು ನನಸಾಗಿಸಿದ ಜೆನಿಯ ಜೀವನ ಮಹಿಳೆಯರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಪ್ರೇರಣೆಯಾಗಿದೆ. ಇದು ಲಿಂಗ ಸಮಾನತೆಯ ಸಾಮಾಜಿಕ ಅರಿವನ್ನು ಸಹ ಸೃಷ್ಟಿಸುತ್ತದೆ. ಜೆನಿಯ ಆಶಯಗಳನ್ನು ಬೆಂಬಲಿಸಿದ ಕುಟುಂಬವು ಸಮುದಾಯಕ್ಕೆ ಆದರ್ಶಪ್ರಾಯವಾಗಿದೆ. ಬಾಲಕಿಯರಿಗೆ ಬೆಂಬಲ ನೀಡುವುದಕ್ಕೆ ಒಟ್ಟಾರೆ ಸಮುದಾಯ ಸಿದ್ಧರಾಗಿರಬೇಕು. ಜೆನಿ ಇನ್ನೂ ಹೆಚ್ಚಿನ ಸಾಧೆನೆಗೈಯ್ಯಲಿ ಎಂದು ನಾನು ಪ್ರಾಮಾಣಿಕವಾಗಿ ನಾನು ಹಾರೈಸುತ್ತೇನೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೇಸ್‍ಬುಕ್ ನಲ್ಲಿ ಬರೆದಿದ್ದಾರೆ.

  • ಕೆಂಪುಕೋಟೆಯ ಮೇಲೆ ಪವಿತ್ರ ತಿರಂಗ ಮಾತ್ರ ಹಾರಬೇಕು – ದುರದೃಷ್ಟಕರ ಎಂದ ತರೂರ್

    ಕೆಂಪುಕೋಟೆಯ ಮೇಲೆ ಪವಿತ್ರ ತಿರಂಗ ಮಾತ್ರ ಹಾರಬೇಕು – ದುರದೃಷ್ಟಕರ ಎಂದ ತರೂರ್

    ನವದೆಹಲಿ: ಕೆಂಪುಕೋಟೆಯ ಮೇಲೆ ಪವಿತ್ರ ತಿರಂಗ ಮಾತ್ರ ಹಾರಬೇಕು. ಆದರೆ ಇಂದಿನ ಘಟನೆ ದುರದೃಷ್ಟಕರ ಎಂದು ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

    ನಾನು ಮೊದಲಿನಿಂದಲೂ ರೈತ ಹೋರಾಟಕ್ಕೆ ಬೆಂಬಲವನ್ನು ನೀಡುತ್ತಾ ಬಂದಿದ್ದೇನೆ. ಆದರೆ ಕಾನೂನು ಬಾಹಿರವಾಗಿ ಬಂದರೆ ಕ್ಷಮಿಸಲು ಸಾಧ್ಯವಾಗುವುದಿಲ್ಲ. ಗಣರಾಜ್ಯೋತ್ಸವವಾದ ಇಂದು ತಿರಂಗ ಮಾತ್ರ ಕೆಂಪುಕೋಟೆಯ ಮೇಲೆ ಹಾರಾಡಬೇಕಿತ್ತು. ಅಧಿಕಾರಿಗಳು ಹಿಂಸಾಚಾರವನ್ನು ತಪ್ಪಿಸಬೇಕು. ಈ ಬಿಕ್ಕಟ್ಟನ್ನು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಪರಿಹರಿಸಬೇಕೇ ಹೊರತು ಬಲವಂತವಾಗಿ ಅಲ್ಲ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ವಿಶ್ವ ಪರಂಪರಿಕ ತಾಣವಾದ ಕೆಂಪುಕೋಟೆಯ ಮೇಲೆ ರೈತ ಸಂಘದ ಧ್ವಜ ಹಾರಿದೆ. ಅಷ್ಟೇ ಅಲ್ಲದೇ ಗುಮ್ಮಟದ ಮೇಲೆ ಸಿಖ್ ಧ್ವಜಗಳು ಹಾರಿದೆ.

    ಸಾವಿರಾರು ಜನ ಒಂದೇ ಬಾರಿಗೆ ಕೆಂಪು ಕೋಟೆಗೆ ನುಗ್ಗಿದ ಪರಿಣಾಮ ಅಲ್ಲಿದ್ದ ಭದ್ರತಾ ಸಿಬ್ಬಂದಿಗೂ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ವೇಳೆ ರೈತರು ಇಷ್ಟ ಬಂದ ಕಡೆ ಧ್ವಜವನ್ನು ಹಾರಿಸಿದ್ದಾರೆ.

  • ಚಾಯ್‍ವಾಲಾ ಪ್ರಧಾನಿಯಾಗಲು ಜವಾಹರಲಾಲ್ ನೆಹರು ಕಾರಣ: ಶಶಿ ತರೂರ್

    ಚಾಯ್‍ವಾಲಾ ಪ್ರಧಾನಿಯಾಗಲು ಜವಾಹರಲಾಲ್ ನೆಹರು ಕಾರಣ: ಶಶಿ ತರೂರ್

    ನವದೆಹಲಿ: ಚಾಯ್‍ವಾಲಾ ಆಗಿದ್ದ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಿದ್ದಾರೆಂದರೇ, ಅದಕ್ಕೆ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರೇ ಕಾರಣ ಎಂದು ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.

    ನವೆಂಬರ್ 14ರ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಇದೇ ವೇಳೆ ದೆಹಲಿಯಲ್ಲಿ ಚಾಚಾರ `ನೆಹರೂ, ದಿ ಇನ್ವೆಂಷನ್ ಆಫ್ ಇಂಡಿಯಾ’ ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಭಾರತೀಯನು ಸಹ, ದೇಶದ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಮಾಡಿಕೊಟ್ಟಿದ್ದವರೇ ಪಂಡಿತ್ ಜವಹರಲಾಲ್ ನೆಹರು. ಇವರು ಸ್ಥಾಪಿಸಿದ ಸಂಸ್ಥೆಗಳು ಹಾಗೂ ವ್ಯವಸ್ಥೆಗಳಿಂದ ಇಂದು ಚಾಯ್‍ವಾಲಾರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.

    ಇಂದು ಕೇಂದ್ರ ಸರ್ಕಾರ ಮಂಗಳಯಾನದ ಕುರಿತು ಹೆಮ್ಮೆಪಟ್ಟುಕೊಳ್ಳುತ್ತಿದೆ. ಆದರೆ ಅದಕ್ಕೆ ಕಾರಣವಾದ ಇಸ್ರೋ ಸಂಸ್ಥೆಯನ್ನು ಹುಟ್ಟು ಹಾಕಿದ್ದವರು ಯಾರು? ದೇಶದ ಬಡವರೂ ಸಹ ಆಕಾಶದೆತ್ತರಿಗಿನ ಗುರಿಗಳನ್ನು ಏರುವ ಕನಸನ್ನು ಕಲಿಸಿಕೊಟ್ಟವರು ಯಾರು? ಅಸಂಖ್ಯಾ ಯುವಕರನ್ನು ಸಿಲಿಕಾನ್ ವ್ಯಾಲಿಗೆ ಕಳುಹಿಸಲು, ಐಐಟಿಗಳನ್ನು ಸ್ಥಾಪನೆ ಮಾಡಿದವರು ಯಾರು? ಅಲ್ಲಿರುವ ಶೇ.40ರಷ್ಟು ಸ್ಟಾರ್ಟ್ಅಪ್ ಕಂಪನಿಗಳು ಇಂದು ಭಾರತೀಯರ ಕೈಯಲ್ಲಿವೆ ಎಂದರೇ ಅದಕ್ಕೆ ಕಾರಣ ಯಾರು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ನಮಗೆಲ್ಲ ವೇದಿಕೆ ನಿರ್ಮಾಣ ಮಾಡಿಕೊಟ್ಟ ಭಾರತದ ಶ್ರೇಷ್ಟ ವ್ಯಕ್ತಿ ಪಂಡಿತ್ ಜವಾಹರಲಾಲ್ ನೆಹರೂರವರ ಬಗ್ಗೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕಡೆಗಣಿಸುವ ಯತ್ನ ನಡೆಯುತ್ತಿದೆ. ತಾವು ಪ್ರಧಾನಿಯಾಗಲು ಕಾರಣರಾಗಿದ್ದ ಚಾಚಾರನ್ನು ನರೇಂದ್ರ ಮೋದಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ- ಹಿಂದೂ ಧಾರ್ಮಿಕ ಆಚರಣೆ ಮೇಲೆ ಮಾತ್ರ ನಿಷೇಧ ಏಕೆ: ಚೇತನ್ ಭಗತ್ ಪ್ರಶ್ನೆ

    ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ- ಹಿಂದೂ ಧಾರ್ಮಿಕ ಆಚರಣೆ ಮೇಲೆ ಮಾತ್ರ ನಿಷೇಧ ಏಕೆ: ಚೇತನ್ ಭಗತ್ ಪ್ರಶ್ನೆ

    ನವದೆಹಲಿ: ದೀಪಾಳಿಗೆ ಪಟಾಕಿ ನೀಷೆಧಿಸುವುದು ಕ್ರಿಸ್‍ಮಸ್ ಹಬ್ಬಕ್ಕೆ ಕ್ರಿಸ್‍ಮಸ್ ಟ್ರೀ ನಿಷೇಧ ಮಾಡಿದ ಹಾಗೆ ಎಂದು ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ ನವೆಂಬರ್ 1 ರವರೆಗೆ ಪಟಾಕಿಗಳನ್ನು ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರೋ ಹಿನ್ನೆಲೆಯಲ್ಲಿ ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿದ್ದು, ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಮಾತ್ರ ಏಕೆ ಈ ನಿಷೇಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತೀರ್ಪಿನ ಕುರಿತು ಬಾಲಿವುಡ್ ಹಾಗೂ ಕ್ರಿಕೆಟ್‍ನ ಹಲವು ತಾರೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ಲೇಖಕ ಚೇತನ್ ಭಗತ್ ಅವರು ಈ ಕುರಿತು ಟ್ವಿಟ್ಟರ್‍ನಲ್ಲಿ ಸರಣಿ ಟ್ವೀಟ್‍ಗಳನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ದೀಪಾಳಿ ಸಂದರ್ಭದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದ್ದು ಯಾಕೆ? ಇದು ಸಂಪೂರ್ಣ ನಿಷೇಧವೇ? ಪಟಾಕಿ ಇಲ್ಲದ ದೀಪಾಳಿಯನ್ನು ಮಕ್ಕಳು ಹೇಗೆ ಆಚರಿಸುತ್ತಾರೆ? ಕೇವಲ ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಮಾತ್ರ ಹೀಗೆ ಮಾಡಲು ಧೈರ್ಯ ಹೇಗೆ? ಶೀಘ್ರದಲ್ಲೇ ಮೇಕೆಗಳ ಬಲಿ ಹಾಗೂ ಮೊಹರಂ ರಕ್ತಪಾತವನ್ನೂ ನಿಷೇಧಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

    ದೀಪಾಳಿಗೆ ಪಟಾಕಿಯನ್ನು ನೀಷೆಧ ಮಾಡುವುದು ಕ್ರಿಸ್‍ಮಸ್ ಹಬ್ಬಕ್ಕೆ ಕ್ರಿಸ್‍ಮಸ್ ಟ್ರೀ ನಿಷೇಧ ಮಾಡಿದ ಹಾಗೆ. ಬಕ್ರೀದ್‍ಗೆ ಮೇಕೆಗಳನ್ನ ನಿಷೇಧಿಸಿದ ಹಾಗೆ. ನಿಯಂತ್ರಣ ಮಾಡಿ. ಆದ್ರೆ ನಿಷೇಧ ಬೇಡ. ಸಂಪ್ರದಾಯಗಳನ್ನ ಗೌರವಿಸಿ ಎಂದಿದ್ದಾರೆ.

    ಇದು ಕೇವಲ ವರ್ಷದಲ್ಲಿ ಒಂದು ಸಲ ಬರುವಂತದ್ದು. ನಮ್ಮ ಬಹುದೊಡ್ಡ ಹಬ್ಬವಿದು. ಯಾವುದೇ ನಿಷೇಧಕ್ಕಿಂತ ಊಬರ್ ಹೆಚ್ಚಿನ ಮಾಲಿನ್ಯವನ್ನ ಉಳಿಸಿದೆ. ಹೊಸ ಪರಿಹಾರಗಳೊಂದಿಗೆ ಬನ್ನಿ. ನಿಷೇಧವಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಭಗತ್ ಅವರ ಟ್ವೀಟ್‍ಗಳಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದು, ನೀವು ಹೇಳಿರುವ ಆಚರಣೆಗಳ ಉದಾಹರಣೆಗಳನ್ನ ನೋಡುವುದಾದ್ರೆ ಅವೆಲ್ಲಾ ಅಚರಣೆಗಳ ಅವಿಭಾಜ್ಯ ಅಂಗ. ಅವುಗಳನ್ನ ಬ್ಯಾನ್ ಮಾಡುವುದೆಂದರೆ ದೀಪಾವಳಿಗೆ ದೀಪಗಳನ್ನ ಬ್ಯಾನ್ ಮಾಡಿದಂತೆ. ಪಟಾಕಿಗಳು ಹೆಚ್ಚುವರಿಯಾಗಿ ಸೇರಿಸಲಾಗಿರುವಂತದ್ದು ಎಂದಿದ್ದಾರೆ.

    ಕ್ರಿಕೆಟರ್ ಯುವರಾಜ್ ಸಿಂಗ್ ತಮ್ಮ ಟ್ವಿಟ್ಟರ್‍ನಲ್ಲಿ `ಸೇ ನೋ ಟು ಕ್ರ್ಯಾಕರ್ಸ್’ ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಾಲಿನ್ಯರಹಿತ ದೀಪಾವಳಿ ಆಚರಿಸೋಣ ಎಂದಿದ್ದಾರೆ.

    ಇನ್ನುಳಿದಂತೆ ನಿರೂಪಕರಾದ ರಾಕಿ ಮತ್ತು ಮಯೂರ್ ಪಟಾಕಿಯನ್ನ ವಿರೋಧಿಸಿದ್ದಾರೆ. ಪಟಾಕಿಯ ಹೊಗೆ ಅಂದ್ರೆ ಕಾನ್ಸರ್‍ಕಾರಕ ಅಂಶಗಳು. ಜೊತೆಗೆ ತೀವ್ರ ಉಸಿರಾಟದ ತೊಂದರೆಗಳನ್ನ ಉಂಟು ಮಾಡಬಹುದಾದ ಮಾಲಿನ್ಯ. ಇದರಿಂದ ಮಕ್ಕಳು ಹಾಗೂ ಹಿರಿಯರಿಗೆ ಹೆಚ್ಚಾಗಿ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

    ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಕಾರಣ 2016 ನವೆಂಬರ್ ನಲ್ಲಿಯೇ ಸುಪ್ರೀಂ ಕೋರ್ಟ್ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು. ಕಳೆದ ತಿಂಗಳು ಕೋರ್ಟ್ ತಾತ್ಕಾಲಿಕವಾಗಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು.

    2015 ರಲ್ಲಿ ದೀಪಾವಳಿ ಹಬ್ಬದಂದು ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದರಿಂದ ಜನರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಂಡುಬಂದಿತ್ತು. ಹೀಗಾಗಿ 2015 ರಲ್ಲಿ ಮೂವರು ಬಾಲಕರು ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಎಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆರೋಗ್ಯವಂತರಾಗಿ ಜೀವನ ನಡೆಸಬೇಕೆಂದು ಸಂವಿಧಾನ ನಮಗೆ ಬದುಕುವ ಹಕ್ಕು ನೀಡಿದೆ. ಆದರೆ ಪಟಾಕಿಯಲ್ಲಿರುವ ರಾಸಾಯನಿಕ ಅಂಶಗಳಿಂದಾಗಿ ವಾಯುಮಾಲಿನ್ಯ ಆಗುವುದಲ್ಲದೇ ನಮಗೆ ಅಸ್ತಮಾ, ಕೆಮ್ಮು, ಇತ್ಯಾದಿ ಆರೋಗ್ಯ ಸಮಸ್ಯೆಗಳು ಬರುತ್ತಿದೆ. ಹೀಗಾಗಿ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಬಾಲಕರು ಅರ್ಜಿಯಲ್ಲಿ ಮನವಿ ಮಾಡಿದ್ದರು.

    ಆದರೆ ಪಟಾಕಿ ಅಂಗಡಿಯ ಮಾಲೀಕರು, ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದರೆ ಜೀವನೋಪಾಯಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ನಿಷೇಧ ಮಾಡಬಾರದು ಎಂದು ವಾದಿಸಿದ್ದರು. ಕೋರ್ಟ್ ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ನವೆಂಬರ್ 1ರ ರವರೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ.

    https://twitter.com/Crimson_Bud/status/917343745552478209?

    https://twitter.com/autumnrainwish/status/917272332032282624?

    https://twitter.com/YUVSTRONG12/status/917045683126902784?