Tag: ಶವ ಪತ್ತೆ

  • ನೇಣು ಬಿಗಿದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಶವ ಪತ್ತೆ

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಕಾಲೇಜ್‌ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.

    ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(20) ಶವವಾಗಿ ಪತ್ತೆಯಾಗಿದ್ದಾಳೆ. ಮಂಗಳೂರು ಹೊರವಲಯದ ಕುಂಪಲ ಆಶ್ರಯ ಕಾಲನಿಯಲ್ಲಿರುವ ನಿವಾಸದಲ್ಲಿ ಶವ ಪತ್ತೆಯಾಗಿದೆ.

    ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ಪ್ರೇಕ್ಷಾಇವತ್ತು ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು. ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಬ್ಬಳೇ ಇದ್ದಳು.

    ಮಧ್ಯಾಹ್ನ ತಾಯಿ ಊಟಕ್ಕೆಂದು ಮನೆಗೆ ಬಂದ ಸಂದರ್ಭ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • 9 ದಿನದ ಹಿಂದೆ ನಾಪತ್ತೆ – ಉಜಿರೆ ಯುವತಿಯ ಶವ ಕಾಡಿನಲ್ಲಿ ಪತ್ತೆ

    9 ದಿನದ ಹಿಂದೆ ನಾಪತ್ತೆ – ಉಜಿರೆ ಯುವತಿಯ ಶವ ಕಾಡಿನಲ್ಲಿ ಪತ್ತೆ

    ಮಂಗಳೂರು: ಕಳೆದ ಒಂಬತ್ತು ದಿನದ ಹಿಂದೆ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಯುವತಿಯ ಮೃತದೇಹ ಇಂದು ಕಾಡಿನಲ್ಲಿ‌ ಪತ್ತೆಯಾಗಿದೆ.

    ಉಜಿರೆ‌ ಮನೆಯೊಂದರಲ್ಲಿ ಕೆಲಸ‌ ಮಾಡಿಕೊಂಡು ಕಂಪ್ಯೂಟರ್‌ ಶಿಕ್ಷಣ ಪಡೆಯುತ್ತಿದ್ದ 23 ವರ್ಷದ ತೇಜಸ್ವಿನಿ ಕಳೆದ ಒಂಬತ್ತು ದಿನದಿಂದ ನಾಪತ್ತೆಯಾಗಿದ್ದಳು. ತಾಯಿ‌ ಮನೆಗೆ ಹೋಗಿ ಬರುವುದಾಗಿ  ಹೇಳಿದ್ದ ತೇಜಸ್ವಿನಿ ಆ ಬಳಿಕ ನಾಪತ್ತೆಯಾಗಿದ್ದಳು.

    ಇಂದು ಬೆಳ್ತಂಗಡಿಯ ಕೊಲೋಡಿ ಕಾಡಿನಲ್ಲಿ ತೇಜಸ್ವಿನಿಯ ಮೃತದೇಹ ಪತ್ತೆಯಾಗಿದ್ದು,ಈಕೆ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಶವ 8 ದಿನಗಳ ಬಳಿಕ ಪತ್ತೆ

    ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಶವ 8 ದಿನಗಳ ಬಳಿಕ ಪತ್ತೆ

    ಮಡಿಕೇರಿ: ಮೊಬೈಲ್‍ನಲ್ಲಿ ಸೆಲ್ಫಿ ಮೂಲಕ ನೀರಿನ ತೀವ್ರತೆಯ ಫೋಟೋ ತಗೆಯಲು ಹೋಗಿ ಮಲ್ಲಳ್ಳಿ ಫಾಲ್ಸ್​ಗೆ ಬಿದ್ದಿದ್ದ ಯುವಕನ ಮೃತ ದೇಹವು ಇಂದು ಪತ್ತೆಯಾಗಿದೆ.

    ಜೂನ್ 22 ಶುಕ್ರವಾರ ಸಂಜೆ ಮನೋಜ್(24) ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಲಪಾತಕ್ಕೆ ಬಿದ್ದಿದ್ದ. ಶನಿವಾರ ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಶವ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದರು. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಮನೋಜ್ ಮೃತ ದೇಹವು 2 ಕಿ.ಮೀ. ದೂರದಲ್ಲಿ ಸಿಕ್ಕಿದೆ.

    ಮೃತ ಮನೋಜ್ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದವನಾಗಿದ್ದು, ತನ್ನ 6 ಜನ ಸ್ನೇಹಿತರೊಂದಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿಗೆ ಮದುವೆ ರಿಸೆಪ್ಷನ್‍ಗೆಂದು ಹೋಗಿ, ಮರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

  • ಕೊಲೆ ಮಾಡಿ, ಶವವನ್ನು ಗೋಣಿ ಚೀಲಕ್ಕೆ ತುಂಬಿ ಕಾಲುವೆಗೆ ಹಾಕಿದ್ರು!

    ಕೊಲೆ ಮಾಡಿ, ಶವವನ್ನು ಗೋಣಿ ಚೀಲಕ್ಕೆ ತುಂಬಿ ಕಾಲುವೆಗೆ ಹಾಕಿದ್ರು!

    ಮಂಗಳೂರು: ಸುರತ್ಕಲ್‍ದ ಚೊಕ್ಕಬೆಟ್ಟು ಸೇತುವೆ ಕೆಳಗೆ ಗೋಣಿ ಚೀಲದಲ್ಲಿ ಶವವೊಂದು ಪತ್ತೆಯಾಗಿದ್ದು, ಕಾಲುವೆ ಮೂಲಕ ಶವ ಹರಿದು ಬಂದಿದೆ ಎನ್ನಲಾಗಿದೆ.

    ಕೊಪ್ಪಳ ಜಿಲ್ಲೆಯ ಕಬ್ಬರಗಿ ನಿವಾಸಿ ಮರಿಯಪ್ಪ (50) ಶವವಾಗಿ ಪತ್ತೆಯಾಗಿದ್ದಾರೆ. ಮರಿಯಪ್ಪನನ್ನು ಬರ್ಬರವಾಗಿ ಹಲ್ಲೆ ಮಾಡಿ, ಕೊಂದು ಗೋಣಿಚೀಲದಲ್ಲಿ ಹಾಕಿ ಕಾಲುವೆಗೆ ಎಸೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮಂಗಳೂರಿನ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.