Tag: ಶವಗಾರ

  • ಮಂಗಳೂರು ಆಸ್ಪತ್ರೆಯಲ್ಲಿ ಸಾವು – ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಪುನರ್ಜನ್ಮ!

    ಮಂಗಳೂರು ಆಸ್ಪತ್ರೆಯಲ್ಲಿ ಸಾವು – ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಪುನರ್ಜನ್ಮ!

    – ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಮಂಗಳೂರು ಆಸ್ಪತ್ರೆ
    – ಅಂತ್ಯಸಂಸ್ಕಾರ ನಡೆಸಲು ಮುಂದಾಗಿದ್ದ ಕುಟುಂಬಸ್ಥರು

    ತಿರುವನಂತಪುರಂ: ಚಿಕಿತ್ಸೆ ಫಲಿಸದೇ ಮಂಗಳೂರು (Mangaluru) ಆಸ್ಪತ್ರೆಯಲ್ಲಿ ಮೃತಪಟ್ಟ 67 ವರ್ಷದ ವ್ಯಕ್ತಿಗೆ ಕೇರಳ (Kerala) ಆಸ್ಪತ್ರೆಯ ಶವಾಗಾರದಲ್ಲಿ (Mortuary) ಪುನರ್ಜನ್ಮ ಸಿಕ್ಕಿದೆ.

    ಪಾರ್ಶ್ವವಾಯು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಣ್ಣೂರಿನ ಪಚಪೊಯ್ಕಾದ ವೆಲ್ಲುವಕ್ಕಂಡಿ ಪವಿತ್ರನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಳ್ಳುವುದಾಗಿ ಕುಟುಂಬಕ್ಕೆ ಆಸ್ಪತ್ರೆ ತಿಳಿಸಿತ್ತು. ಸೋಮವಾರ ಸಂಜೆಯ ವೇಳೆ ಪವಿತ್ರನ್‌ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತ್ತು. ಇದನ್ನೂ ಓದಿ: ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ

    ಸೋಮವಾರ ಸಂಜೆ 6:30 ರ ಸುಮಾರಿಗೆ ಅವರ ಶವವನ್ನು ಅಂಬುಲೆನ್ಸ್‌ (Ambulance) ಮೂಲಕ ಕಣ್ಣೂರಿಗೆ ಕಳುಹಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ರಾತ್ರಿ ಶವವವನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ ಮಂಗಳವಾರ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿತ್ತು.

    ರಾತ್ರಿ 11:30ರ ಹೊತ್ತಿಗೆ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಪವಿತ್ರನ್‌ ಕೈ ಅಲುಗಾಡುವನ್ನು ಕರ್ತವ್ಯದಲ್ಲಿದ್ದ ಅಟೆಂಡೆಂಟ್ ಜಯನ್ ಗಮನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯಕೀಯ ತಂಡವು ದೇಹ ಪರೀಕ್ಷಿಸಿ ಪವಿತ್ರನ್ ಜೀವಂತವಾಗಿರುವುದನ್ನು ಎಂದು ದೃಢಪಡಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಈಗ ಚಿಕಿತ್ಸೆಗೆ ಪವಿತ್ರನ್‌ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ.

    ಅಟೆಂಡೆಂಟ್ ಜಯನ್ ಪ್ರತಿಕ್ರಿಯಿಸಿ, ಅಂಬುಲೆನ್ಸ್‌ನಿಂದ ದೇಹವನ್ನು ಇಳಿಸಿದಾಗ ಕೈ ಸ್ವಲ್ಪ ಚಲಿಸಿದನ್ನು ನೋಡಿದೆ. ನನಗೆ ಅನುಮಾನ ಬಂದ ವಿಚಾರವನ್ನು ನನ್ನ ಸಹೋದ್ಯೋಗಿ ಜೊತೆ ಹೇಳಿದೆ. ನಂತರ ಅವರ ಹೃದಯದ ನಾಡಿ ಮಿಡಿತ ಪರೀಕ್ಷೆ ಮಾಡಿದಾಗ ಅವರು ಜೀವಂತ ಇರುವುದು ದೃಢವಾಯಿತು ಎಂದು ತಿಳಿಸಿದರು.

    ಈಗ ಮಂಗಳೂರಿನ ಖಾಸಗಿ ಆಸ್ಪತ್ರೆ ಮಾಡಿದ ಸಾವಿನ ದೃಢೀಕರಣದ ಬಗ್ಗೆ ಹಲವು ಪ್ರಶ್ನೆಗಳು ಸೃಷ್ಟಿಯಾಗಿದೆ. ಪವಿತ್ರನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬೆನ್ನಲ್ಲೇ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

     

  • ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಗಳ ಶವ

    ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಗಳ ಶವ

    ಬಾಗಲಕೋಟೆ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರ ಮಾಡಿದರೆ ಶವಾಗಾರದಲ್ಲೇ ಎರಡು ನಾಯಿಗಳು ಸತ್ತು ಕೊಳೆತ ಸ್ಥಿತಿಯಲ್ಲಿರೋದು ಕಂಡು ಗ್ರಾಮಸ್ಥರು ದಂಗಾಗಿದ್ದಾರೆ.

    ಬಾಗಲಕೋಟೆ ತಾಲೂಕಿನ ರಾಂಪುರ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿ ಆಗಿದೆ. 25 ವರ್ಷದ ಪವಾಡೆಪ್ಪ ಗೌಡರ ಎಂಬ ವ್ಯಕ್ತಿ ರಾಂಪುರ ಗ್ರಾಮದ ಬಳಿ ಬೈಕ್ ನಿಂದ ಬಿದ್ದು ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದ. ಈತನ ಮರಣೋತ್ತರ ಪರೀಕ್ಷೆಗೆ ಎಂದು ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

    ಆದರೆ ಮರಣೋತ್ತರ ಪರೀಕ್ಷೆ ಮಾಡೋಕೆ ಯಾವುದೇ ವೈದ್ಯರು ಕೂಡ ಆಸ್ಪತ್ರೆಯಲ್ಲಿರಲಿಲ್ಲ. ಇದರಿಂದ ಸುಮಾರು ನಾಲ್ಕು ತಾಸುಗಳ ಕಾಲ ಸಂಬಂಧಿಕರು ಕಾಯಬೇಕಾಯಿತು. ನಂತರ ಸ್ಥಳಕ್ಕೆ ಬಂದ ವೈದ್ಯ ಎಸ್ ವಿ ಲೇಬಗಿರಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

    ಇದೊಂದು ಕಡೆಯಾದ್ರೆ ಶವಾಗಾರದಲ್ಲಿ ನಾಲ್ಕು ದಿನಗಳ ಹಿಂದೆಯೇ ಎರಡು ನಾಯಿಗಳು ಸತ್ತಿದ್ದು, ಕೊಳೆತ ಸ್ಥಿತಿಯಲ್ಲಿ ನಾಯಿಗಳ ದೇಹಗಳು ಬಿದ್ದಿವೆ. ಆದರೂ ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮಾಡಿಲ್ಲ. ರಾಂಪುರ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

  • ರಾಜ್ಯದ ಈ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಹಣ ಕೊಡಲಿಲ್ಲ ಅಂದ್ರೆ ಶವ ಕೊಡಲ್ಲ

    ರಾಜ್ಯದ ಈ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಹಣ ಕೊಡಲಿಲ್ಲ ಅಂದ್ರೆ ಶವ ಕೊಡಲ್ಲ

    ವಿಜಯಪುರ: ಹಣ ಅಂದ್ರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಪ್ರಭಾವಿ ಸಚಿವರಾಗಿರುವ ಎಂಬಿ ಪಾಟೀಲ್ ಜಿಲ್ಲೆಯಲ್ಲಿ ಹಣ ಇಲ್ಲಾಂದ್ರೆ ಏನೂ ಆಗಲ್ಲ. ಆಸ್ಪತ್ರೆಯಲ್ಲಿ ಸತ್ತಿರುವ ಶವನೂ ಹೊರಗೆ ಹೋಗಲ್ಲ.

    ಹೌದು. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ಶವಾಗಾರದ ಸಹಾಯಕ ಈರಣ್ಣನ ಕೈಬಿಸಿ ಮಾಡಿಲ್ಲ ಅಂದ್ರೆ ಸರ್ಕಾರಿ ಶವಗಾರದಿಂದ ಒಂದೇ ಒಂದು ಹೆಣವೂ ಹೊರಗೆ ಹೋಗಲ್ಲ. ದುಡ್ಡು ಕೊಡಿ ಸ್ವಾಮಿ ಅಂತಾ ನಾಚಿಕೆ ಮಾನ-ಮರ್ಯಾದೆ ಇಲ್ಲದೇ ಬಾಯ್ಬಿಟ್ಟು ಕೇಳ್ತಾನೆ. ಒಂದು ಹೆಣಕ್ಕೆ ಕಮ್ಮಿಯಂದ್ರೂ ಎರಡರಿಂದ ನಾಲ್ಕು ಸಾವಿರ ರೂ. ಕೊಡ್ಲೇಬೇಕು.

    ಈರಣ್ಣ ಸೊಲ್ಹಾಪುರ ಮೂಲದವರಿಂದ ಲಂಚ ಪೀಕ್ತಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೃತನ ಕುಟುಂಬಸ್ಥರು ಸಾವಿನ ಶೋಕದಲ್ಲಿ ಕಣ್ಣೀರು ಹಾಕ್ತಿದ್ರೆ ಅತ್ತ ಹೇಗೋ ನನ್ನ ಜೇಬು ತುಂಬ್ತಲ್ಲ ಬಿಡಿ ಅನ್ನೋ ಖುಷಿ ಈರಣ್ಣನದ್ದು.

    ಯಾವಾಗ ಈರಣ್ಣನ ಭ್ರಷ್ಟಾಚಾರದ ವೀಡಿಯೋದಲ್ಲಿ ಸೆರೆ ಆಯ್ತೋ ಈಗ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಚಾವ್ಹಾಣ್ ಸಮಜಾಯಿಷಿ ಕೊಟ್ಟಿದ್ದಾರೆ.