ಮಂಗಳೂರು: ಧರ್ಮಸ್ಥಳದ ಅರಣ್ಯದಲ್ಲಿ ಅನಾಮಿಕ ವ್ಯಕ್ತಿಯ ಬುರುಡೆ ರಹಸ್ಯ (Dharmasthala Mass Burials) ಬಿಚ್ಚಿಡುವ ಕಾರ್ಯಾಚರಣೆ ಮುಂದುವರೆದಿದೆ. ಕಳೆದ 15 ದಿನಗಳಿಂದ ವಿಚಾರಣೆ, ಸಮಾಧಿ ಶೋಧ ನಡೆಯುತ್ತಾ ಬಂದಿದ್ದು, ಶುಕ್ರವಾರ ಧಿಡೀರ್ 15ನೇ ಪಾಯಿಂಟ್‌ನಲ್ಲಿ ಶೋಧಕಾರ್ಯ ನಡೆಯಿತು. 5 ಗಂಟೆಗಳ ಕಾಲಹರಣ ಬಿಟ್ಟರೆ ಸಮಾಧಿ ಒಳಗೆ ಸಿಕ್ಕಿದ್ದು ಬರೀ ಮಣ್ಣು.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ಅನಾಮಿಕನ ವಿಚಾರಣೆ ಮತ್ತು ಸ್ಥಳಶೋಧ ಕಾರ್ಯ ಮುಂದುವರೆಯಿತು. ನೇತ್ರಾವತಿ ನದಿ ತೀರದ ಬಂಗ್ಲೆಗುಡ್ಡೆಯ ಕಾರ್ಯಾಚರಣೆ ಮುಗಿದಿದ್ದು ಶುಕ್ರವಾರ ಅಧಿಕಾರಿಗಳ ತಂಡ ಬೊಳಿಯಾರ್‌ಗೆ ಬಂದು ಇಳಿಯಿತು. ಮಧ್ಯಾಹ್ನ ಒಂದು ಗಂಟೆಗೆ ಮುಸುಕುಧಾರಿ ಮತ್ತು 40 ಅಧಿಕಾರಿಗಳು ಹಾಗೂ ಪೊಲೀಸರ ತಂಡ ಕಾಡು ಪ್ರವೇಶಿಸಿತು. ನಂತರ ಶುರುವಾಗಿದ್ದೇ ತಲೆ ಬುರುಡೆಗಳ ತಲಾಶ್ ಕಾರ್ಯ. ಇದನ್ನೂ ಓದಿ: ಪುಟಿನ್ ಭೇಟಿಗೆ ಟ್ರಂಪ್ ಮುಹೂರ್ತ ಫಿಕ್ಸ್ – ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ಮಾತುಕತೆ
ಕಾಡಿನಲ್ಲಿ ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ನಂತರ ಎಸ್‌ಐಟಿ (SIT) ಅಧಿಕಾರಿಗಳಿಗೆ ಸಿಕ್ಕಿದ್ದು ಬರೀ ಮಣ್ಣು ಮಾತ್ರ. ಆರು ಅಡಿಗಿಂತ ಆಳಕ್ಕೆ ಹೋದ ತಂಡ ಇಲ್ಲೇನು ಇಲ್ಲ ಎಂದು ನಿರ್ಧರಿಸಿಬಿಟ್ಟಿತು. ಮಾಸ್ಕ್ ಮ್ಯಾನ್ ಮತ್ತೆ ಕನ್ಫ್ಯೂಷನ್ ಆಗಿ ಬೇರೆಬೇರೆ ಜಾಗ ತೋರಿಸಿದ. ಅಲ್ಲಿ ಇಲ್ಲಿ ಕಾಡಿನಲ್ಲಿ ಸುತ್ತಾಡಿ ಪರಿಶೀಲಿಸಿ ತಂಡ ವಾಪಸ್ ಬಂದಿದೆ. ಇದನ್ನೂ ಓದಿ: ಬುದ್ಧಿಮಾಂದ್ಯ ಯುವತಿ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ಮಾಡಿ ಯುವತಿಯ ಸಹೋದರನಿಗೆ ಕಳುಹಿಸಿದ ಕೀಚಕರು
-ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶ ಪಡೆದುಕೊಂಡಿರುವ ದೂರುದಾರ
ಮಂಗಳೂರು: ಧರ್ಮಸ್ಥಳದಲ್ಲಿ (Dharmastala) ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ವ್ಯಕ್ತಿಯನ್ನು ಎಸ್‌ಐಟಿ (SIT) ತಮ್ಮ ವಶದಲ್ಲಿಯೇ ಇರಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ನಿವಾಸಿ ಶ್ಯಾಮ ಸುಂದರ ಅವರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಎಸ್‌ಐಟಿಗೆ ಪತ್ರ ಬರೆದಿರುವ ಅವರು, ಅನಾಮಿಕ ವ್ಯಕ್ತಿ 13 ಸ್ಥಳಗಳನ್ನು ಈಗಾಗಲೇ ತೋರಿಸಿದ್ದಾನೆ. ಆತ ಗುರುತಿಸಿದ 12 ಸ್ಥಳಗಳಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಆರಂಭದಲ್ಲಿ ಅನಾಮಿಕ ವ್ಯಕ್ತಿ ತನ್ನ ವಕೀಲರ ಜೊತೆ ಮಂಗಳೂರಿನ (Mangaluru) ರೂಮ್‌ವೊಂದರಲ್ಲಿ ನೆಲೆಸಿರುವ ಬಗ್ಗೆ ಮಾಹಿತಿಯಿತ್ತು. ಆದರೆ ಕೆಲ ದಿನಗಳಿಂದ ಈ ಅನಾಮಿಕ ವ್ಯಕ್ತಿ ಉಜಿರೆಯ (Ujire) ಖಾಸಗಿ ವ್ಯಕ್ತಿಯೋರ್ವನ ಮನೆಯಲ್ಲಿ ಉಳಿದುಕೊಳ್ಳುವ ಬಗ್ಗೆ ಮಾಹಿತಿಯಿದೆ. ಇಷ್ಟು ಗಂಭೀರ ಪ್ರಕರಣದಲ್ಲಿ ಅನಾಮಿಕನನ್ನು ಎಸ್‌ಐಟಿ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಬೇಕಿತ್ತು. ಆದರೆ ವಕೀಲರು, ಖಾಸಗಿ ವ್ಯಕ್ತಿಗಳ ಬಳಿ ಬಿಟ್ಟರೆ ನಿಷ್ಪಕ್ಷಪಾತ ತನಿಖೆ ಹೇಗೆ ನಡೆಯಲು ಸಾಧ್ಯ? ಹೀಗಾಗಿ ಅನಾಮಿಕ ವ್ಯಕ್ತಿಯನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬೇಕು. ಜೊತೆಗೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಕೆ ಸುಧಾಕರ್ ಹೆಸರು ಬರೆದು ಕಾರು ಚಾಲಕ ಆತ್ಮಹತ್ಯೆ
ಮನವಿ ಪತ್ರಕ್ಕೆ ಎಸ್‌ಐಟಿ ಪತ್ರಿಕ್ರಿಯಿಸಿದ್ದು, ನಿಮ್ಮ ಅರ್ಜಿಯನ್ನು ಸ್ವೀಕರಿಸಿ ಪರಿಶೀಲಿಸುತ್ತೇವೆ. ಯಾವುದೇ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಅಥವಾ ದೂರನ್ನು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ಉಲ್ಲೇಖಿಸಿದೆ
ದೂರಿನಲ್ಲಿ ಏನಿದೆ?
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬಹಳಷ್ಟು ಕೊಲೆಗಳು ನಡೆದಿದ್ದು, ಸದರಿ ಪ್ರಕರಣಗಳಲ್ಲಿ ತಾನು ಕಳೇಬರೆಗಳನ್ನು ಹೂತಿರುತ್ತೇನೆ ಎಂದು ಅನಾಮಿಕ ವ್ಯಕ್ತಿಯೋರ್ವನು ಅಪಾದಿಸಿದಂತೆ ಮಾನ್ಯ ಸರ್ಕಾರದ ನಿರ್ದೇಶನದಲ್ಲಿ ರಚಿಸಲ್ಪಟ್ಟಿರುವ ವಿಶೇಷ ತನಿಖಾ ದಳವು ಅತ್ಯಂತ ಉತ್ತಮ ರೀತಿಯಲ್ಲಿ ಪಾರದರ್ಶಕವಾಗಿ ತನಿಖೆಯನ್ನು ಮಾಡುತ್ತಿದೆ. ಈ ಬಗ್ಗೆ ನಮ್ಮ ಅಭಿಮಾನಗಳನ್ನು ಸಲ್ಲಿಸುತ್ತಿದ್ದೇವೆ.
ಮೃತ ವ್ಯಕ್ತಿಗಳ ಕಳೇಬರಗಳನ್ನು ತಾನು ತೋರಿಸುವುದಾಗಿ ಹೇಳಿ ಅನಾಮಿಕ ವ್ಯಕ್ತಿಯು 13 ಸ್ಥಳಗಳನ್ನು ತೋರಿಸಿದ್ದು, ಮಾನ್ಯರಾದ ತಾವು ಈಗಾಗಲೇ 12 ಸ್ಥಳಗಳನ್ನು ತನಿಖೆಗೆ ಒಳಪಡಿಸಿರುತ್ತೀರಿ. ಹೀಗಿರುವಲ್ಲಿ ತಮಗೆ ಸ್ಥಳವನ್ನು ತೋರಿಸುತ್ತಿರುವ ಅನಾಮಿಕ ವ್ಯಕ್ತಿಯು ಪ್ರತಿನಿತ್ಯ ವಕೀಲರುಗಳು ಎಂದು ಕರೆಯಲ್ಪಡುವ ವ್ಯಕ್ತಿಗಳ ಜೊತೆ ಬರುತ್ತಿದ್ದು, ಅವರ ಜೊತೆ ಮಂಗಳೂರಿನಲ್ಲಿ ಹೋಗಿ ರೂಮ್‌ನಲ್ಲಿ ನೆಲೆಸುತ್ತಿದ್ದಾರೆ ಎಂದು ಮಾಧ್ಯಮಗಳಿಂದ ನಮಗೆ ತಿಳಿದುಬಂದಿರುತ್ತದೆ. ಅದಲ್ಲದೇ ಇತ್ತೀಚಿನ ಕೆಲವು ದಿನಗಳ ಹಿಂದೆ ಈ ಅನಾಮಿಕ ವ್ಯಕ್ತಿಯು ಉಜಿರೆಯಲ್ಲಿ ಖಾಸಗಿ ವ್ಯಕ್ತಿಯ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ನಮಗೆ ಮಾಧ್ಯಮಗಳಿಂದ ತಿಳಿದುಬಂದಿರುತ್ತದೆ.
ಇಷ್ಟು ಗಂಭೀರ ಪ್ರಕರಣದಲ್ಲಿ ಮಾಹಿತಿದಾರನಾದ ಅನಾಮಿಕನನ್ನು ತಮ್ಮ ಸುಪರ್ದಿಗೆಯಲ್ಲಿ ಇಡದೆ, ವಕೀಲರುಗಳ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಬಿಟ್ಟರೆ ನಿಷ್ಪಕ್ಷಪಾತವಾದ ತನಿಖೆಯು ಹೀಗೆ ನಡೆಯಲು ಸಾಧ್ಯ? ಆದುದರಿಂದ ದೂರುದಾರ ಅನಾಮಿಕ ವ್ಯಕ್ತಿಯನ್ನು ತಮ್ಮ ಸುಪರ್ದಿಯಲ್ಲಿಯೇ ಇರಿಸಿಕೊಂಡು ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆಯನ್ನು ತಾವು ಮಾಡಬೇಕೆಂದು ಈ ಮೂಲಕ ನಾವು ಪ್ರಾರ್ಥಿಸುತ್ತಿದ್ದೇವೆ.ಇದನ್ನೂ ಓದಿ: ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ
– ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶದಡಿಯಲ್ಲಿರುವ ದೂರುದಾರ
ಅನಾಮಿಕ ದೂರುದಾರ ವ್ಯಕ್ತಿ ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಜಿಲ್ಲಾ ನ್ಯಾಯಾಧೀಶರ ಕಮಿಟಿಯೂ ಕೂಡ ಈ ಅವಕಾಶವನ್ನು ಅಪ್ರೂವ್ ಮಾಡಿದೆ. ಈ ಅವಕಾಶದಡಿ ದೂರುದಾರ ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು. ಫೋನ್ ಬಳಕೆ ಮಾಡಬಹುದು, ಯಾರನ್ನು ಬೇಕಾದರೂ ಭೇಟಿಯಾಗಬಹುದು. ದೂರುದಾರನಿಗೆ ನಾಲ್ಕು ಮಂದಿ ಪೊಲೀಸರ ಭದ್ರತೆ ನೀಡಲಾಗಿದ್ದು, ಫೋನ್ ಡಿಟೇಲ್ಸ್ ಮತ್ತು ಭೇಟಿಯಾದವರ ಎಲ್ಲಾ ದಾಖಲೆಯನ್ನು ಪೊಲೀಸರು ಮಾನಿಟರಿಂಗ್ ಮಾಡುತ್ತಿರುತ್ತಾರೆ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ (Dharmasthala Mass Burials) ಎಂದು ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ತನಿಖೆಯನ್ನು ಎಸ್‌ಐಟಿ (SIT) ಇಂದಿನಿಂದ ನಡೆಸಲಿದೆ. ಎಸ್‌ಐಟಿ ತಂಡ ಶುಕ್ರವಾರ ಮಂಗಳೂರು ತಲುಪಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನ ಭೇಟಿ ಮಾಡಿದೆ.
ಶುಕ್ರವಾರ ತಡರಾತ್ರಿಯೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದ ಎಸ್‌ಐಟಿ ತನಿಖಾಧಿಕಾರಿ, ಕೇಸ್ ಫೈಲ್ ಪಡೆದಿದ್ದಾರೆ.ಬೆಳ್ತಂಗಡಿಯಲ್ಲಿ ಕಚೇರಿ ತೆರದಿರೋ ಎಸ್‌ಐಟಿ ಇಂದೇ ತನಿಖೆಗೆ ಇಳಿಯಲಿದ್ದು, ಧರ್ಮಸ್ಥಳಕ್ಕೂ ಭೇಟಿ ನೀಡಲಿದೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್
ಕಳೆದ ಜುಲೈ 3 ರಂದು ದೂರುದಾರನ ಪರವಾಗಿ ವಕೀಲರು ಧರ್ಮಸ್ಥಳ ಪೊಲೀಸ್ ಠಾಣೆಗೆ ಆತನ ಹಸ್ತಾಕ್ಷರದ ಪ್ರತಿಯನ್ನು ಸಲ್ಲಿಸಿದ್ದರು. ಮಾರನೇ ದಿನ ಎಫ್‌ಐಆರ್ ದಾಖಲಾಗಿದ್ದು, ಸ್ಥಳ ಮಹಜರು ನಡೆಸಿ ದೂರುದಾರನ ಸಮ್ಮುಖದಲ್ಲಿ ಶವಗಳನ್ನ ಅಗೆದು ತೆಗೆಯಲು ಪೊಲೀಸರು ನ್ಯಾಯಾಲಯದ ಅನುಮತಿಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪ್ರಕರಣ ತನಿಖೆಯನ್ನು ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ನಾಲ್ಕು ಐಪಿಎಸ್ ಅಧಿಕಾರಿಗಳ ಸಹಿತ ಒಟ್ಟು 20 ಮಂದಿಯ ಎಸ್‌ಐಟಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ. ಹೀಗಾಗಿ ಶುಕ್ರವಾರ ರಾತ್ರಿ ಮಂಗಳೂರಿಗೆ ಆಗಮಿಸಿದ ಎಸ್‌ಐಟಿ ತಂಡ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಡೆತ್‌ನೋಟ್ ಬರೆದಿಟ್ಟು ಗುಪ್ತಚರ ಇಲಾಖೆ ಪೇದೆ ಆತ್ಮಹತ್ಯೆ
ಇನ್ನು ಡಿಐಜಿ ಅನುಚೇತ್ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ತಡರಾತ್ರಿ ಧರ್ಮಸ್ಥಳ ಠಾಣೆಗೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಆಗಮಿಸಿ ಕೇಸ್ ಫೈಲ್ ಪಡೆದಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್, ಪ್ರಕರಣದ ಈವರೆಗಿನ ತನಿಖಾಧಿಕಾರಿ ಸಮರ್ಥ್ ಗಾಣಿಗೇರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ
ಇಡೀ ಪ್ರಕರಣದ ತನಿಖೆಯನ್ನು ಎಸ್‌ಐಟಿ ಇಂದಿನಿಂದಲೇ ಆರಂಭಿಸಲಿದೆ. ಬೆಳ್ತಂಗಡಿಯಲ್ಲಿ ಕಚೇರಿ ತೆರೆದಿದ್ದು, ತನಿಖೆಗೆ ಬೇಕಾದ ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದ್ದಾರೆ. ಪ್ರಕರಣದ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿದ ಅಧಿಕಾರಿಗಳು, ಪ್ರಕರಣ ತನಿಖೆಗೆ ಧರ್ಮಸ್ಥಳಕ್ಕೂ ಆಗಮಿಸಲಿದ್ದಾರೆ. ತನಿಖೆ ಒಂದು ಹಂತಕ್ಕೆ ಬಂದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ದೂರುದಾರನನ್ನ ಶವ ಹೂತಿಟ್ಟ ಸ್ಥಳಗಳಿಗೆ ಕರೆದುಕೊಂಡು ಹೋಗಿ ಆತನ ಸಮ್ಮುಖದಲ್ಲೇ ಮಣ್ಣು ಅಗೆದು ಶವಗಳನ್ನ ಹೊರ ತೆಗೆಯೋ ಪ್ರಕ್ರಿಯೆ ನಡೆಯಲಿದೆ. ಆತನ ದೂರಿನಂತೆ ಸುಮಾರು 20 ವರ್ಷಗಳ ಹಿಂದೆ ಶವಗಳನ್ನ ಹೂತಿಟ್ಟಿರೋದು ನಿಜವಾಗಿದ್ದರೆ ಅದರ ಅಸ್ತಿಪಂಜರಗಳು ಸಿಗೋ ಸಾಧ್ಯತೆ ಇದೆ. ಆ ಬಳಿಕ ಅದರ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ವಿಷವಿದ್ದಂತೆ ರುಚಿ ನೋಡಿದ್ರೆ ಸತ್ತು ಹೋಗ್ತೀರಿ: ಮಲ್ಲಿಕಾರ್ಜುನ ಖರ್ಗೆ