Tag: ಶವ

  • MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

    MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

    ರೋಮ್:‌ ಭಾರತೀಯ ವಿದ್ಯಾರ್ಥಿಯೊಬ್ಬ (Indian Student) ಇಟಲಿಯಲ್ಲಿ (Italy) ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಇದೀಗ ಆತನ ಕುಟುಂಬದವರು ಸರ್ಕಾರದ ನೆರವು ಬಯಸಿದ್ದಾರೆ.

    ಮೃತನನ್ನು ರಾಮ್‌ ರಾವತ್‌ ಎಂದು ಗುರುತಿಸಲಾಗಿದ್ದು, ಈತ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ನಿವಾಸಿ. ಪೊಲೀಸರ ಪ್ರಕಾರ, ರಾವುತ್ ಎಂಬಿಎ (MBA) ಓದಲು ಇಟಲಿಗೆ ಹೋಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವುತ್ ಅವರ ಪೋಷಕರು ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಪೋಷಕರು ಮಾಡಿದ ಕರೆಯನ್ನು ರಾವತ್‌ ಸ್ವೀಕರಿಸಲಿಲ್ಲ. ಹೀಗಾಗಿ ಸಂಶಯಗೊಂಡ ಅವರು ವಸತಿಗೃಹದ ಮಾಲೀಕರನ್ನು ಸಂಪರ್ಕಿಸಿದರು. ಈ ವೇಳೆ ಅವರು ಮತ್ತೊಂದು ಮನೆಯ ವಾಶ್ ರೂಂನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ- 44 ಯುವತಿಯರ ರಕ್ಷಣೆ

    ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಪೋಷಕರು ಕಂಗಾಲಾಗಿದ್ದಾರೆ. ಅಲ್ಲದೇ ಆತನ ಮೃತದೇಹವನ್ನು ಭಾರತಕ್ಕೆ (India) ಕರೆತರಲು ಜಾರ್ಖಂಡ್‌ನ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದಾರೆ.

    ಘಟನೆಯ ಕುರಿತು ಮಾತನಾಡಿದ ಪಶ್ಚಿಮ ಸಿಂಗ್‌ಭೂಮ್‌ನ ಡೆಪ್ಯೂಟಿ ಕಮಿಷನರ್ ಅನನ್ಯ ಮಿತ್ತಲ್, ರಾಮ್ ರಾವತ್ ಸಾವಿನ ಬಗ್ಗೆ ನನಗೆ ಮಾಹಿತಿ ಬಂದಿದೆ. ಅಗತ್ಯ ಕ್ರಮಕ್ಕಾಗಿ ಗೃಹ ಇಲಾಖೆ ಮತ್ತು ಜಾರ್ಖಂಡ್‌ನ ವಲಸೆ ಸೆಲ್‌ಗೆ ತಿಳಿಸಲಾಗಿದೆ ಎಂದು ಹೇಳಿದರು.

    ಪ್ರಕರಣದ ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾ ಇಡುತ್ತಿದ್ದೇನೆ. ರಾಮ್‌ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮಿತ್ತಲ್ ಹೇಳಿದ್ದಾರೆ.

  • ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದು ದೇಹವನ್ನು ಕಾಲುವೆಗೆ ಎಸೆದ್ರು!

    ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದು ದೇಹವನ್ನು ಕಾಲುವೆಗೆ ಎಸೆದ್ರು!

    ನವದೆಹಲಿ: ಅನ್ಯ ಸಮುದಾಯದ ವ್ಯಕ್ತಿಯೊಂದಿಗೆ  ಸಂಬಂಧ ಹೊಂದಿರುವ ಆರೋಪ ಹೊರಿಸಿ ಇಬ್ಬರು ವ್ಯಕ್ತಿಗಳು ತಮ್ಮ ಸಹೋದರಿಯನ್ನು (Sister Murder) ಉಸಿರುಗಟ್ಟಿಸಿ ಕೊಂದು ಆಕೆಯ ದೇಹವನ್ನು ಕಾಲುವೆಗೆ ಎಸೆದಿರುವ ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಪೊಲೀಸ್ ಗಸ್ತು ತಂಡದ ತಪಾಸಣೆಯ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಶನಿವಾರ ಸಂಜೆ ಗಸ್ತು ತಿರುಗುತ್ತಿದ್ದ ಪೊಲೀಸರು, ಮುರಾದ್‌ನಗರದಲ್ಲಿ (Muradnagar) ಇಬ್ಬರನ್ನು ಗುರುತಿಸಿದ್ದಾರೆ. ಅಲ್ಲದೇ ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದ್ದಾರೆ. ಆಗ ವೇಳೆ ಅವರು ನೀಡಿರುವ ಉತ್ತರ ಅನುಮಾನ ಹುಟ್ಟುಹಾಕಿದೆ. ಕೂಡಲೇ ಪೊಲೀಸರು ಅವರನ್ನು ಹಿಡಿದರು. ಇದನ್ನೂ ಓದಿ: ಇಸ್ಪಿಟ್ ಆಡುತ್ತಿದ್ದ ನಗರಸಭೆ ಸದಸ್ಯ ಸಹಿತ 14 ಜನರ ಬಂಧನ

    ಸುಫಿಯಾನ್ ಮತ್ತು ಅವರ ಸೋದರ ಸಂಬಂಧಿ ಮಹತಾಬ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ತಮ್ಮ ಸಹೋದರಿಯನ್ನು ಉಸಿರುಗಟ್ಟಿಸಿ ಕೊಂದ ನಂತರ ಶವವನ್ನು ಗಂಗ್ನಾಹರ್ ಕಾಲುವೆಯಲ್ಲಿ ಎಸೆದಿದ್ದಾರೆ ಎಂದು ಬಹಿರಂಗಪಡಿಸಿದರು. ಪೊಲೀಸರು ಕಾರ್ಯಪ್ರವೃತ್ತರಾಗಿ ಕಾಲುವೆಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ತಮ್ಮ ಸಹೋದರಿ ಶೀಬಾ ದೆಹಲಿಯಲ್ಲಿ ಸಂಬಂಧಿಕರೊಂದಿಗೆ ತಂಗಿದ್ದರು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಸೂಫಿಯಾನ್ ಉತ್ತರಾಖಂಡದ ರೂರ್ಕಿಯವರು ಮತ್ತು ಅವರ ಚಿಕ್ಕಪ್ಪನ ಮಗ ಮಹತಾಬ್ ಮುಜಾಫರ್‌ನಗರದವರು. ಇತ್ತೀಚೆಗಷ್ಟೇ ಶೀಬಾಗೆ ಬೇರೊಂದು ಸಮುದಾಯದ ವ್ಯಕ್ತಿ ಜೊತೆಗಿನ ಸಂಬಂಧ ಇಬ್ಬರಿಗೆ ಗೊತ್ತಾಗಿದೆ. ಈ ಸಂಬಂಧವನ್ನು ವಿರೋಧಿಸಿದ ಇಬ್ಬರು ವ್ಯಕ್ತಿಗಳು ಆಕೆಯನ್ನು ಗಾಜಿಯಾಬಾದ್ ಕಾಲುವೆ ಬಳಿ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ನೀರಿಗೆ ಎಸೆದಿದ್ದಾರೆ.

    ಶೀಬಾಳ ಬಟ್ಟೆಗಳು, ಚಪ್ಪಲಿಗಳು ಮತ್ತು ಆಕೆಯನ್ನು ಉಸಿರುಗಟ್ಟಿಸಲು ಬಳಸಿದ ವಸ್ತುವನ್ನು ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ. ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಡೈವರ್‌ಗಳ ತಂಡವು ಕಾಲುವೆಯಲ್ಲಿ ಶೋಧ ನಡೆಸುತ್ತಿದೆ. ಆದರೆ ಮೃತದೇಹ ಇನ್ನೂ ಪತ್ತೆಯಾಗಿಲ್ಲ.

  • ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ – ಆತ್ಮಹತ್ಯೆ ಪ್ರಕರಣ ದಾಖಲು

    ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ – ಆತ್ಮಹತ್ಯೆ ಪ್ರಕರಣ ದಾಖಲು

    ಆನೇಕಲ್: ಅಪರಿಚಿತ ಮಹಿಳೆಯ ಶವವೊಂದು ಕೆರೆಯಲ್ಲಿ ಪತ್ತೆಯಾದ ಘಟನೆ ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟ (Bannerghatta) ಸಮೀಪದ ಸಿಕೆಪಾಳ್ಯದಲ್ಲಿ ನಡೆದಿದೆ.

    ಸುಮಾರು 32 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಸಿಕೆಪಾಳ್ಯ ಕೆರೆಯಲ್ಲಿ ಪತ್ತೆಯಾಗಿದ್ದು, ಶವ ತೇಲುತ್ತಿರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧದ ಹೀರೋ ರಸ್ತೆ ಅಪಘಾತದಲ್ಲಿ ದುರ್ಮರಣ 

    ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ (Suicide) ಮಾಡಿಕೊಂಡಿರಬಹುದು ಎಂಬುವುದಾಗಿ ಶಂಕಿಸಿ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆಕೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ರವಾನಿಸಲಾಗಿದೆ. ಇದನ್ನೂ ಓದಿ: 2 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ರೈತ ಆತ್ಮಹತ್ಯೆಗೆ ಶರಣು

  • ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ 8 ಕಿ.ಮೀ. ಶವ ಹೊತ್ತು ನಡೆದ ಗ್ರಾಮಸ್ಥರು!

    ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ 8 ಕಿ.ಮೀ. ಶವ ಹೊತ್ತು ನಡೆದ ಗ್ರಾಮಸ್ಥರು!

    ಕಾರವಾರ: ರಸ್ತೆಯೇ ಇಲ್ಲದೇ ಶವವನ್ನು ಬೊಂಬಿಗೆ ಕಟ್ಟಿ ಗ್ರಾಮಸ್ಥರು ಸಾಗಾಟ ಮಾಡಿದ ಪ್ರಸಂಗವೊಂದು ಉತ್ತರ ಕನ್ನಡ (Uttara Kannada) ದಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಬೆರಡಿ ಗ್ರಾಮದಲ್ಲಿ ಘಟನೆ. ಬೆರಡಿ ಗ್ರಾಮದ ಹೊರವಲಯದಲ್ಲಿ ಮರಗಳಿಗೆ ಬೆಂಕಿ (Fire) ತಗುಲಿದ್ದಾಗ ದಾಮೋದರ ನೇಮು ನಾಯ್ಕ (68) ಸಿಲುಕಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಇವರ ಶವ ಸಾಗಾಟ ಮಾಡಲು ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ ಬಿದರಿನ ಬೊಂಬಿಗೆ ಕಟ್ಟಿ ಗ್ರಾಮಸ್ಥರು ಹೊತ್ತು ಸಾಗಿದರು. ಸುಮಾರು 8 ಕಿ.ಮೀ ವರಗೆ ಹೀಗೆ ಮೃತದೇಹ ಹೊತ್ತು ಸಾಗಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ; ವೀಡಿಯೋ ಲೀಕ್‌ ಮಾಡೋದಾಗಿ ಬೆದರಿಕೆ ಹಾಕಿದ್ದ IAS ಅಧಿಕಾರಿ, ಮಾಜಿ ಶಾಸಕ ವಿರುದ್ಧ ಕೇಸ್‌

    ಅಂಕೋಲ ತಾಲೂಕು ಆಸ್ಪತ್ರೆಯಿಂದ ಶವ ಪರೀಕ್ಷೆ ಕೊಂಡೊಯ್ದು ಮೃತದೇಹ ಹೊತ್ತುಕೊಂಡು ಮರಳಿ ಗ್ರಾಮಕ್ಕೆ ತಂದಿದ್ದಾರೆ.

    ಈ ಘಟನೆ ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯುವ ದೇಹದಾರ್ಢ್ಯ ಪಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಯುವ ದೇಹದಾರ್ಢ್ಯ ಪಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವ ದೇಹದಾರ್ಢ್ಯ ಪಟು (Body Builder) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಕೆ ಆರ್ ಪುರಂ (K R Puram) ಬಳಿಯ ಹೀರಂಡಹಳ್ಳಿಯಲ್ಲಿ ಶ್ರೀನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕೈಗೆ ಗಾಜು ಚುಚ್ಚಿ ನರ ಕಟ್- ಸರ್ಜರಿ ಬಳಿಕ ಯುವಕ ಸಾವು, ಆರೋಪ

    ಮೂಲತಃ ಕೋಲಾರದ ಶ್ರೀನಿವಾಸಪುರದ ಶ್ರೀನಾಥ್, ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದರು. ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು. ಆದರೆ ತಾವು ವಾಸವಿದ್ದ ಕೊಠಡಿಯಲ್ಲಿ ಮಂಗಳವಾರ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ದೊರೆತಿದ್ದಾರೆ.

    ಇದೀಗ ಶ್ರೀನಾಥ್ ಪೋಷಕರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆ (Avalahalli Police Station) ಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಕೃತ್ಯಕ್ಕೆ ಹಿಜಬ್‌ ಲಿಂಕ್‌ – ಸಹೋದರಿಗೆ ಕಾಟ ಕೊಟ್ಟಿದ್ದಕ್ಕೆ ಭಜರಂಗ ದಳ ಕಾರ್ಯಕರ್ತನ ಹತ್ಯೆಗೆ ಯತ್ನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದತ್ತು ಪುತ್ರನ ಶವದೊಂದಿಗೆ 4 ದಿನ ಕಳೆದ 82ರ ವೃದ್ಧ

    ದತ್ತು ಪುತ್ರನ ಶವದೊಂದಿಗೆ 4 ದಿನ ಕಳೆದ 82ರ ವೃದ್ಧ

    ಚಂಡೀಗಢ: 82 ವರ್ಷದ ವೃದ್ಧನೊಬ್ಬ ತನ್ನ ದತ್ತು ಪುತ್ರನ ಶವದೊಂದಿಗೆ 4 ದಿನ ಕಳೆದಿರುವ ಹೃದಯವಿದ್ರಾವಕ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ, ಬಲ್ವಂತ್ ಸಿಂಗ್ ತನ್ನ ದತ್ತು ಪುತ್ರ ಸುಖ್ವಿಂದರ್ ಸಿಂಗ್ ಜೊತೆ ವಾಸವಿದ್ದರು. ವೃದ್ಧ ವಯೋಸಹಜವಾಗಿ ಹೆಚ್ಚೇನೂ ಮಾತನಾಡದೇ ಇರುತ್ತಿದ್ದು, ತನ್ನ ಮಗ ಮೃತಪಟ್ಟಿರುವ ಬಗ್ಗೆ ತಿಳಿಯದೇ ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಬಲ್ವಂತ್ ಸಿಂಗ್ ಇದ್ದ ಮನೆಯಿಂದ ದುರ್ನಾತ ಬರುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮೊದಲಿಗೆ ಪೊಲೀಸರು ಮನೆಯೊಳಗಿರುವವರನ್ನು ಹೊರಗೆ ಕರೆಯಲು ಪ್ರಯತ್ನಿಸಿದ್ದರು. ಆದರೆ ಯಾರೂ ಉತ್ತರಿಸದ ಕಾರಣ ತಾವೇ ಬಾಗಿಲು ಮುರಿದು ಒಳ ಹೊಕ್ಕಿದ್ದಾರೆ. ಇದನ್ನೂ ಓದಿ: ಶೀತಲ ಸಮರವನ್ನು ಕೊನೆಗೊಳಿಸಿದ್ದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ನಿಧನ

    ಪೊಲೀಸರು ಮನೆ ಒಳಗೆ ಹೊಕ್ಕಾಗ ವೃದ್ಧ ತನ್ನ ಮಗನ ಶವದ ಪಕ್ಕದಲ್ಲಿ ಕುಳಿತಿದ್ದಿದ್ದು ಕಂಡುಬಂದಿದೆ. ಅಸ್ವಸ್ಥನಾಗಿ, ಅರೆಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧನನ್ನು ಬಳಿಕ ಪೊಲೀಸರು ಹಿರಿಯ ನಾಗರಿಕ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ಮೆನೆಯಲ್ಲಿ ಪತ್ತೆಯಾದ ಶವ ಬಲ್ವಂತ್ ಸಿಂಗ್‌ನ ದತ್ತು ಪುತ್ರ. ಅವರಿಗೆ ಸ್ವಂತ ಮಕ್ಕಳಿಲ್ಲ. ಅವರನ್ನು ಯಾರೂ ಕೂಡಾ ಭೇಟಿಯೂ ಆಗುತ್ತಿರಲಿಲ್ಲ. ಕಳೆದ 1 ತಿಂಗಳಿನಿಂದ ವೃದ್ಧ ಮನೆಯ ಒಳಗೆಯೇ ಇದ್ದರು. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿರುವುದು ನಮ್ಮ ಗಮನಕ್ಕೆ ಬಂದ ಬಳಿಕ ಅನುಮಾನಗೊಂಡ ನಾವು ಪೊಲೀಸರಿಗೆ ಕರೆ ಮಾಡಿದೆವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ಹಣವನ್ನು ಜೀವದ ಹಂಗು ತೊರೆದು ಜಪ್ತಿ ಮಾಡಿದ ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ನಿರ್ಜನ ಪ್ರದೇಶದಲ್ಲಿ ಅವರದ್ದೇ ಕಾರಿನಲ್ಲಿ ಸಿಕ್ಕಿದೆ ಜನಪ್ರಿಯ ಗಾಯಕಿ ವೈಶಾಲಿ ಮೃತದೇಹ

    ನಿರ್ಜನ ಪ್ರದೇಶದಲ್ಲಿ ಅವರದ್ದೇ ಕಾರಿನಲ್ಲಿ ಸಿಕ್ಕಿದೆ ಜನಪ್ರಿಯ ಗಾಯಕಿ ವೈಶಾಲಿ ಮೃತದೇಹ

    ಗುಜರಾತ್ ನ ಜನಪ್ರಿಯ ಗಾಯಕಿ, ನಟಿಯೂ ಆಗಿದ್ದ ವೈಶಾಲಿ ಬುಲ್ಸಾರ್ ಕಾಣೆಯಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವೈಶಾಲಿ ಪತಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವೈಶಾಲಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ವೈಶಾಲಿ ಹೆಣವಾಗಿ ದೊರೆತಿದ್ದಾರೆ. ಗುರಜಾರ್ ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರಲ್ಲಿ ನಿಂತಿದ್ದ ಅವರದ್ದೇ ಕಾರಿನಲ್ಲಿ ಅವರ ಮೃತದೇಹ ಸಿಕ್ಕಿದೆ.

    ವೈಶಾಲಿಯ ಕಾರು ವಲ್ಸಾಡ್ ಜಿಲ್ಲೆಯ ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದಲ್ಲಿನ ನಿರ್ಜನ ಪ್ರದೇಶದಲ್ಲಿ ಕಂಡಿದ್ದು, ಕಾರು ನೋಡಿದ್ದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕಾರಿನ ಹಿಂಬದಿಯ ಸೀಟಿನಲ್ಲಿ ವೈಶಾಲಿಯ ಮೃತದೇಹ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಪೊಲೀಸರ ಮಾಹಿತಿ ಪ್ರಕಾರ, ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಆಕೆಯ ಮೈಮೇಲೆ ಯಾವುದೇ ಗಾಯಗಳಿಲ್ಲ ಎಂದಿದ್ದಾರೆ. ಅಲ್ಲದೇ, ಸಾಯುವ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ತೋರಿಸಿದ ಕುರುಹುಗಳೂ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪತಿಯ ಹೇಳಿಕೆ ಪ್ರಕಾರ ವಲ್ಸಾಡ್ ನ ತಮ್ಮ ಮನೆಯಿಂದ ಹೊರಡುವಾಗ ಸ್ಥಳಿಯ ಅಯ್ಯಪ್ಪ ದೇವಸ್ಥಾನದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ತಿಳಿಸಿದ್ದರಂತೆ ವೈಶಾಲಿ. ಆನಂತರ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತಿ ದೂರು ದಾಖಲಿಸಿದ್ದರು. ಗಾಯಕಿಯಷ್ಟೇ ಅಲ್ಲ, ಸಂಗೀತ ಶಾಲೆಯನ್ನೂ ವೈಶಾಲಿ ನಡೆಸುತ್ತಿದ್ದು, ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಳೆಗಾಗಿ ವಿಚಿತ್ರ ಆಚರಣೆ- ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು

    ಮಳೆಗಾಗಿ ವಿಚಿತ್ರ ಆಚರಣೆ- ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು

    ವಿಜಯಪುರ: ಮಳೆಗಾಗಿ ಜನರು ಪೂಜೆ, ಹೋಮ, ಹವನ ಮಾಡೋದನ್ನು ಸಾಮಾನ್ಯವಾಗಿ ನೋಡಿ‌ದ್ದೀರಾ. ಆದರೆ ವಿಜಯಪುರ ಜಿಲ್ಲೆಯಲ್ಲಿ ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಹಾಕಿ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥನೆ ಮಾಡಿದ ವಿಚಿತ್ರ ಘಟನೆ ನಡೆದಿದೆ.

    ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಳೆಗಾಗಿ ಶವದ ಬಾಯಿಗೆ ಗ್ರಾಮಸ್ಥರು ನೀರು ಹಾಕಿದ್ದಾರೆ. ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಟ್ರ್ಯಾಕ್ಟರ್‌ನಿಂದ ಪೈಪ್ ಮೂಲಕ ನೀರು ಹಾಕಿದ್ದಾರೆ.  ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ದ್ರೌಪದಿ ಮುರ್ಮು- ಎನ್‍ಡಿಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ

    ಜಿಲ್ಲೆಯಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಆತಂಕಗೊಂಡಿದೆ. ಈ ರೀತಿ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿದೆ. ಹೀಗಾಗಿ ಗೋರಿಯಲ್ಲಿದ್ದ ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ತಂದು ಗ್ರಾಮಸ್ಥರು ಹಾಕಿದ್ದಾರೆ. ಆಧುನಿಕ ಕಾಲದಲ್ಲೂ ಈ ರೀತಿಯ ಆಚರಣೆ ಬಗ್ಗೆ ಜನರಲ್ಲಿ ಕೂತೂಹಲ ಇದೆ. ಕಾಕತಾಳೀಯ ಎಂಬಂತೆ ಶವದ ಬಾಯಿಗೆ ನೀರು ಹಾಕಿದ ಬಳಿಕ ಗ್ರಾಮದಲ್ಲಿ ಜಿಟಿಜಿಟಿ ಮಳೆ ಪ್ರಾರಂಭವಾಗಿದೆ. ಇದನ್ನೂ ಓದಿ: ಮೋದಿ ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ: ಕೆಸಿಆರ್

    Live Tv
    [brid partner=56869869 player=32851 video=960834 autoplay=true]

  • ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ

    ನೆಲಮಂಗಲ: 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ವೀವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪೂಜಾ ಮೃತ ಗೃಹಿಣಿ. ಕಳೆದ ಎರಡು ವರ್ಷಗಳ ಹಿಂದೆ ಅವರು ಮಂಜುನಾಥ್ ಜೊತೆ ಮದುವೆ ಮಾಡಿಕೊಂಡಿದ್ದರು. ಗೃಹಿಣಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಪೂಜಾ ಅವರ ಪತಿ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅಲ್ಲದೆ ಚಿತ್ರಹಿಂಸೆ ನೀಡುತ್ತಿದ್ದ ಬಗ್ಗೆ ಮೃತ ಪೂಜಾ ಕುಟುಂಬಸ್ಥರು ಆರೋಪಿಸಿದ್ದಾರೆ. ಆತನಿಗೆ ಶಿಕ್ಷೆ ಆಗಬೇಕೆಂದು ಮೃತ ಮಹಿಳೆಯ ಪೋಷಕರು ಆಗ್ರಹಿಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಪತಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು? 

  • ಸಮಾಧಿ ಅಗೆದು ಅಪ್ರಾಪ್ತೆಯ ಶವದ ಅತ್ಯಾಚಾರ- ಶಾಕ್ ಆದ ಕುಟುಂಬಸ್ಥರಿಂದ ದೂರು

    ಸಮಾಧಿ ಅಗೆದು ಅಪ್ರಾಪ್ತೆಯ ಶವದ ಅತ್ಯಾಚಾರ- ಶಾಕ್ ಆದ ಕುಟುಂಬಸ್ಥರಿಂದ ದೂರು

    ಇಸ್ಲಾಮಾಬಾದ್: ಸಮಾಧಿ ಅಗೆದು ಅಪ್ರಾಪ್ತೆ ಶವದೊಂದಿಗೆ ನೀಚ ಕಾಮುಕರು ಅತ್ಯಾಚಾರ ಮಾಡಿದ ವಿಲಕ್ಷಣ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

    ಈ ಘಟನೆ ಮೇ 5 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗುಜರಾತ್‍ನಲ್ಲಿ ಕ್ರೂರಿಗಳು ಸಮಾಧಿಯನ್ನು ಅಗೆದು ಬಾಲಕಿಯ ಶವವನ್ನು ಹೊರತೆಗೆದು ಅತ್ಯಾಚಾರ ಎಸಗಿದ್ದಾರೆ. ಈ ಮೂಲಕ ತಮ್ಮ ಕಾಮತೃಷೆಯನ್ನು ತೀರಿಸಿಕೊಂಡಿದ್ದಾರೆ.

    ಈ ಸಂಬಂಧ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್‍ಎನ್) ಉಪಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ತರಾರ್ ಅವರು ಮೇ 6ರಂದು ಟ್ವಿಟ್ಟರ್‍ನಲ್ಲಿ ಸಮಾಧಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಈಗಾಗಲೇ 17 ಮಂದಿ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಸಿಎಂ ಕೂಡ ವರದಿ ಕೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮೃತ ಬಾಲಕಿಯನ್ನು ಸ್ಮಶಾನದಲ್ಲಿ ಹೂತು ಮರುದಿನ ಸಂಬಂಧಿಕರು ತಮ್ಮ ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಲು ಸಮಾಧಿ ಬಳಿ ಹೋದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಮಾಧಿ ಅಗೆದು ಮೃತದೇಹವನ್ನು ಹೊರಗೆ ತೆಗೆಯಲಾಗಿತ್ತು. ಬಾಲಕಿಯ ದೇಹದಲ್ಲಿ ಯಾವುದೇ ಬಟ್ಟೆ ಇರಲಿಲ್ಲ. ಅಲ್ಲದೆ ದೇಹದ ಮೇಲೆ ರೇಪ್ ಮಾಡಿರುವ ಕುರುಹುಗಳು ಪತ್ತೆಯಾಗಿತ್ತು. ಇದನ್ನು ಕಂಡ ಬಾಲಕಿಯ ಚಿಕ್ಕಪ್ಪ ಕುಡಲೇ ಸ್ಥಳೀಯ ಪೊಲಿಸ್ ಠಾಣೆಗೆ ತೆರಳಿ ಎಫ್‍ಐಆರ್ ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಬಾಲಕಿ ವಿಕಲಚೇತನಳಾಗಿದ್ದು ಮೇ 4 ರಂದು ಮೃತಪಟ್ಟಿದ್ದಳು. ಹೀಗಾಗಿ ಸಂಬಂಧಿಕರು ಧಾರ್ಮಿಕ ಸಂಪ್ರದಾಯದಂತೆ ಸಂಜೆ 6 ಗಂಟೆ ಸುಮಾರಿಗೆ ಆಕೆಯನ್ನು ಸ್ಮಶಾನದಲ್ಲಿ ಸಮಾಧಿ ಮಾಡಿ ಮನೆಗೆ ಮರಳಿದರು. ಮರುದಿನ ಅವರು ಕೆಲ ಆಚರಣೆಗಳನ್ನು ಮಾಡಲು ಸ್ಮಶಾನಕ್ಕೆ ಹಿಂದಿರುಗಿದ್ದಾರೆ. ಆಗ ಸಮಾಧಿಯನ್ನು ಅಗೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಬಾಲಕಿಯ ಶವ ಕೂಡ ಅಲ್ಲಿ ಇರಲಿಲ್ಲ. ಕೂಡಲೇ ಸಂಬಮಧಿಕರೆಲ್ಲರೂ ಅಕ್ಕಪಕ್ಕ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಶವ ಹೂತ ಸುಮಾರು 200 ಚದರ ಅಡಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಲ್ಲಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.