Tag: ಶರ್ಮಿಳಾ

  • ಬಸ್ ಚಾಲಕಿಗೆ ಕಮಲ್ ಹಾಸನ್ ಕಾರು ಗಿಫ್ಟ್ : ಇದರ ಹಿಂದಿದೆ ಗೊಂದಲದ ಸ್ಟೋರಿ

    ಬಸ್ ಚಾಲಕಿಗೆ ಕಮಲ್ ಹಾಸನ್ ಕಾರು ಗಿಫ್ಟ್ : ಇದರ ಹಿಂದಿದೆ ಗೊಂದಲದ ಸ್ಟೋರಿ

    ರಡ್ಮೂರು ದಿನಗಳಿಂದ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಅವರು, ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿಯನ್ನು (Bus Driver) ಕರೆಯಿಸಿಕೊಂಡು ಕಾರು (Car)  ಗಿಫ್ಟ್ ನೀಡಿರುವ ಸುದ್ದಿ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬರೀ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಇದೀಗ ತಮಿಳು ನಾಡಿನ ರಾಜಕೀಯ ವಲಯದಲ್ಲೂ ಅದು ಚರ್ಚೆಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ನಡೆ ಎಂದು ಹೇಳಲಾಗುತ್ತಿದ್ದು, ಕಾರು ಕೊಟ್ಟಿರುವ ಕಮಲ್ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

    ಏನಿದು ಪ್ರಕರಣ?

    ಶರ್ಮಿಳಾ (Sharmila) ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ. ಅವತ್ತು ಮಹಿಳಾ ಚಾಲಕಿಯರನ್ನು ಗೌರವಿಸುವುದಕ್ಕಾಗಿ ಡಿಎಂಕೆ ಸಂಸದೆ ಕನಿಮೊಳಿ (Kanimozhi) ಕೊಯಮತ್ತೂರಿಗೆ ಬಂದಿದ್ದರು. ಚಾಲಕಿಯರನ್ನು ಗೌರವಿಸಿದ ಕೆಲವೇ ಗಂಟೆಗಳಲ್ಲೇ ಕನಿಮೊಳಿ ಅವರು ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದಾರೆ. ಇಲ್ಲಿಯೇ ಎಡವಟ್ಟು ಆಗಿದೆ.

    ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದ ಕನಿಮೊಳಿಗೆ ಆ ಬಸ್ ನಲ್ಲಿದ್ದ ಕಂಡಕ್ಟರ್ ಟಿಕೆಟ್ ತಗೆದುಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಶರ್ಮಿಳಾ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಂಸದರು ನಮ್ಮನ್ನು ಗೌರವಿಸುವುದಕ್ಕಾಗಿ ಬಸ್ ಏರಿದ್ದಾರೆ. ಬಸ್‍ ನಲ್ಲಿ ಅವರು ಪ್ರಯಾಣಿಸುತ್ತಿರುವುದು ನಮಗೆ ಗೌರವ. ಟಿಕೆಟ್ ತಗೆದುಕೊಳ್ಳುವುದು ಬೇಡ ಎಂದಿದ್ದಾರೆ ಶರ್ಮಿಳಾ. ಈ ವಿಚಾರವಾಗಿ ಕಂಡಕ್ಟರ್ ಗೂ ಮತ್ತು ಶರ್ಮಿಳಾಗೂ ಗಲಾಟೆ ಆಗಿದೆ. ಈ ಗಲಾಟೆಗೆ ಈಗ ನಾನಾ ಬಣ್ಣಗಳು ಮೆತ್ತಿಕೊಂಡಿವೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಈ ಘಟನೆಯಾದ ಕೆಲವೇ ಗಂಟೆಗಳಲ್ಲೇ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಒಂದು ಕಡೆಯಾದರೆ, ಮತ್ತೊಂದು ಕಡೆ ಬಸ್ ಮಾಲೀಕರೆ ಶರ್ಮಿಳಾರನ್ನು ಕೆಲಸದಿಂದ ತಗೆದುಹಾಕಿದ್ದಾರೆ ಎನ್ನುವ ಸುದ್ದಿಯೂ ಇದೆ. ಸ್ವಯಂ ಪ್ರಚಾರಕ್ಕಾಗಿ ಸಿಲೆಬ್ರಿಟಿಗಳನ್ನು ಬಸ್ ನಲ್ಲಿ ಹತ್ತಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಸ್ ಮಾಲೀಕರು ಶರ್ಮಿಳಾರನ್ನು ಕೆಲಸದಿಂದ ತಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ಮಾಲೀಕರು ನಿರಾಕರಿಸಿದ್ದಾರೆ.

    ಮತ್ತೊಂದು ಕಡೆ ಶರ್ಮಿಳಾ ಡಿಎಂಕೆ (DMK) ಬೆಂಬಲಿಗರು. ಹಾಗಾಗಿ ಕನಿಮೊಳಿ ಅವರ ಬೆಂಬಲಕ್ಕೆ ನಿಂತು ಟಿಕೆಟ್ ರಹಿತ ಪ್ರಯಾಣ ಮಾಡಿಸಲು ಮುಂದಾಗಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ಏನೇ ಆದರೂ ಕೆಲಸ ಕಳೆದುಕೊಂಡು ಶರ್ಮಿಳಾಗೆ ಕಮಲ್ ಹಾಸನ್ ಕಾರು ಗಿಫ್ಟ್ ನೀಡುವ ಮೂಲಕ ಅವರ ಬದುಕಿಗೆ ನೆರವಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಶರ್ಮಿಳಾರನ್ನು ಎಳೆದೊಯ್ದ ಪೊಲೀಸರು

    ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಶರ್ಮಿಳಾರನ್ನು ಎಳೆದೊಯ್ದ ಪೊಲೀಸರು

    ಹೈದರಾಬಾದ್: ತೆಲಂಗಾಣದಲ್ಲಿ (Telangana) ಇಂದು ರಾಜಕೀಯ ಹೈಡ್ರಾಮಾ ನಡೆದಿದೆ. ತೆಲಂಗಾಣ ರಾಜಕಾರಣಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (Y.S.Jagan Mohan Reddy) ಅವರ ಸಹೋದರಿ ವೈ.ಎಸ್.ಶರ್ಮಿಳಾ (Y.S.Sharmila) ಅವರ ಕಾರನ್ನು ನಗರ ಪೊಲೀಸರು ತಂದ ಕ್ರೇನ್ ಎಳೆದೊಯ್ದ ಘಟನೆ ಹೈದರಾಬಾದ್‌ನ (Hyderabad) ಆರ್ಟಿರಿಯಲ್ ರಸ್ತೆ ಬಳಿ ನಡೆಯಿತು.

    ಶರ್ಮಿಳಾ ಅವರು ಕಾರಿನೊಳಗೆ ಕುಳಿತಿದ್ದರು. ಅದನ್ನೂ ಲೆಕ್ಕಿಸದೇ ಪೊಲೀಸರು ಕ್ರೇನ್‌ ಮೂಲಕ ಕಾರನ್ನು ಎಳೆದೊಯ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಡಾಡಿದೆ. ಇದನ್ನೂ ಓದಿ: ಚುನಾವಣಾ ರ‍್ಯಾಲಿ ವೇಳೆ ನುಗ್ಗಿದ ಗೂಳಿ, ಸಭಿಕರು ಚೆಲ್ಲಾಪಿಲ್ಲಿ- ಬಿಜೆಪಿ ಪಿತೂರಿ ಎಂದ ರಾಜಸ್ಥಾನ ಸಿಎಂ

    ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಅವರ ಬೆಂಬಲಿಗರು ಮತ್ತು ವಾರಂಗಲ್‌ನಲ್ಲಿ ಆಡಳಿತಾರೂಢ ಟಿಆರ್‌ಎಸ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಟಿಆರ್‌ಎಸ್‌ ಬೆಂಬಲಿಗರು ತಮ್ಮ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಶರ್ಮಿಳಾ ಅವರು ಆರೋಪಿಸಿದ್ದರು. ಇದರ ಮಧ್ಯೆಯೇ ಶರ್ಮಿಳಾರನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

    ನಿನ್ನೆಯ ಘರ್ಷಣೆಯಲ್ಲಿ ಹಾನಿಗೊಳಗಾದ ಕಾರಿನ ಚಾಲಕನ ಸೀಟಿನಲ್ಲಿ ಇಂದು ಬೆಳಿಗ್ಗೆ ಅವರು ಕುಳಿತು ಶರ್ಮಿಳಾ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಹೋಗಲು ಪ್ರಯತ್ನಿಸಿದರು. ಇದನ್ನೂ ಓದಿ: ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

    ನಿನ್ನೆ ವಾರಂಗಲ್ ಜಿಲ್ಲೆಯಲ್ಲಿ ಪಾದಯಾತ್ರೆ ವೇಳೆ ಟಿಆರ್‌ಎಸ್ ಗೂಂಡಾಗಳು ತಮ್ಮ ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಶರ್ಮಿಳಾ ಅವರು ಮುಖ್ಯಮಂತ್ರಿಯವರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಈ ವೇಳೆ ಹೈದರಾಬಾದ್ ಪೊಲೀಸರು ಅವರನ್ನು ತಡೆದು, ಎಸ್‌ಆರ್ ನಗರ ಪೊಲೀಸ್ ಠಾಣೆಗೆ ಅವರ ವಾಹನವನ್ನು ಎಳೆದೊಯ್ದರು.

    ಕಳೆದ 223 ದಿನಗಳಿಂದ ನಾನು ಮತ್ತು ನನ್ನ ಪಕ್ಷದ ನಾಯಕರು, ಪ್ರತಿನಿಧಿಗಳು ತೆಲಂಗಾಣದ ವಿವಿಧ ವರ್ಗಗಳ ಜನರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಲು ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಜನಪ್ರಿಯತೆಯನ್ನು ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಬೆಂಬಲಿಗರಿಗೆ ಸಹಿಸಲಾಗಿಲ್ಲ ಎಂದು ಶರ್ಮಿಳಾ ಆರೋಪಿಸಿದ್ದಾರೆ.

    ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಸಾಗುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು

    ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು

    ಹೈದರಾಬಾದ್: ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ಹಾಗೂ ಯುವಜನ ಶ್ರಮಿಕ ರೈತತೆಲಂಗಾಣ ಪಕ್ಷ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರು ತೆಲಂಗಾಣ ರಾಜ್ಯಾದ್ಯಂತ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ಮಾಡುವ ವೇಳೆ ಜೇನು ನೋಣಗಳು ದಾಳಿ ನಡೆಸಿದ ವೀಡಿಯೋ ವೈರಲ್ ಆಗುತ್ತಿದೆ.

    ಶರ್ಮಿಳಾ ದುರ್ಷಗಾನಿಪಲ್ಲಿ ಗ್ರಾಮದ ಮರದ ಕೆಳಗೆ ನಿಂತು ಜನರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಅದೇ ಮರಕ್ಕೆ ಗೂಡುಕಟ್ಟಿದ ಜೇನು ದಾಳಿ ನಡೆಸಿದೆ. ಒಮ್ಮೆಲೆ ಜೇನಿನ ಶಬ್ದ ಕೇಳಿ ಅಲ್ಲಿ ನೆರೆದಿದ್ದವರೆಲ್ಲರೂ ಆತಂಕಕ್ಕೊಳಗಾಗಿದ್ದಾರೆ.

    ಆದರೆ ಶರ್ಮಿಳಾ ಅವರ ಭದ್ರತಾ ಸಿಬ್ಬಂದಿ ಎಚ್ಚರದಿಂದ ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಶರ್ಮಿಳಾರನ್ನು ರಕ್ಷಿಸಲು ಅಲ್ಲಿದ್ದವರೆಲ್ಲ ಟವೆ ಲ್‍ಗಳನ್ನು ಬೀಸಿ, ಜೇನುನೊಣಗಳನ್ನು ದೂರ ಓಡಿಸಲು ಪ್ರಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಕೆಲ ಕಾರ್ಯಕರ್ತರಿಗೆ ಜೇನು ಕಚ್ಚಿದೆ. ಇದನ್ನೂ ಓದಿ: 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

    ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ವನ್ನು ಖಂಡಿಸಿ ಮತ್ತು ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ಬಂಗಾರು ತೆಲಂಗಾಣ ತರುವುದಾಗಿ ಭರವಸೆ ನೀಡಿ ನ್ಯಾಯ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಶರ್ಮಿಳಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್