Tag: ಶರಾದ್‌ ಪವಾರ್‌

  • ಶರದ್ ಪವಾರ್‌ಗೆ ಜೀವ ಬೆದರಿಕೆ – ಕೇಸ್ ದಾಖಲು

    ಶರದ್ ಪವಾರ್‌ಗೆ ಜೀವ ಬೆದರಿಕೆ – ಕೇಸ್ ದಾಖಲು

    ಮುಂಬೈ: ಎನ್‍ಸಿಪಿ (NCP) ನಾಯಕ ಶರಾದ್ ಪವಾರ್‌ಗೆ (Sharad Pawar) ಫೋನ್ ಕರೆ ಮಾಡಿ ಜೀವ ಬೆದರಿಕೆ (Death Threat) ಹಾಕಿರುವ ಬಗ್ಗೆ ಬಿಹಾರದಲ್ಲಿ ಕೇಸ್ ದಾಖಲಾಗಿದೆ.

    ಶರಾದ್ ಪವಾರ್ ಅವರ ಸಿಲ್ವರ್ ಓಕ್ ರೆಸಿಡೆನ್ಸಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮುಂಬೈನಲ್ಲಿ (Mumbai) ನಿಮ್ಮನ್ನು ಗನ್‍ನಿಂದ ಸುಟ್ಟು ಕೊಲ್ಲುತ್ತೇನೆ ಎಂದು ಫೋನ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಶರದ್ ಪವಾರ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ಈ ಸಂಬಂಧ ಐಪಿಸಿ ಸೆಕ್ಷನ್ 294 (ಅಶ್ಲೀಲ ಪದಗಳ ಬಳಕೆ), 506 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಹಿಂದೆ ಕೂಡ ಶರಾದ್ ಪವಾರ್‌ಗೆ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿಂದೆ ಕೂಡ ಅವರ ಸಿಲ್ವರ್ ಓಕ್ ನಿವಾಸಕ್ಕೆ ಫೋನ್ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದೀಗ ಎರಡನೇ ಬಾರಿ ಜೀವ ಬೆದರಿಕೆ ಕರೆ ಬಂದಿದೆ. ಹಾಗಾಗಿ ಪೊಲೀಸರು ಸೂಕ್ತ ತನಿಖೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ

    ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರಿಗೆ ನೀಡಿರುವ ದೂರಿನಲ್ಲಿ 20 ರಿಂದ 25 ಬಾರಿ ಇಂತಹ ಕರೆಗಳು ಬಂದಿವೆ. ಈ ತೊಂದರೆಯಿಂದ ಮುಕ್ತಿ ನೀಡುವಂತೆ ಕೋರಿದ್ದಾರೆ. ಎನ್‍ಸಿಪಿ ನಾಯಕರ ಕಚೇರಿ ಮತ್ತು ಭದ್ರತಾ ವಿವರಗಳು ಈ ಹಿಂದೆ ಕರೆ ಮಾಡಿದವರ ಬಗ್ಗೆ ಗಾಮ್‍ದೇವಿ ಪೊಲೀಸ್ ಠಾಣೆ ಮತ್ತು ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಕಚೇರಿಗೆ ದೂರು ನೀಡಲಾಗಿದೆ. ಕರೆ ಮಾಡಿದವರು ಮಾನಸಿಕವಾಗಿ ಅಸ್ವಸ್ಥನಂತೆ ಕಂಡು ಬರುತ್ತಿದೆ. ಶರದ್ ಪವಾರ್ ನಿವಾಸಕ್ಕೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಎನ್‍ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರದ ತಾಳ್ಮೆ ಪರೀಕ್ಷಿಸಬೇಡಿ – ಕರ್ನಾಟಕಕ್ಕೆ ಪವಾರ್‌ ಎಚ್ಚರಿಕೆ

    ಮಹಾರಾಷ್ಟ್ರದ ತಾಳ್ಮೆ ಪರೀಕ್ಷಿಸಬೇಡಿ – ಕರ್ನಾಟಕಕ್ಕೆ ಪವಾರ್‌ ಎಚ್ಚರಿಕೆ

    ಮುಂಬೈ: ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದ(Maharashtra-Karnataka Border Row) ಉಲ್ಬಣಗೊಂಡಿರುವ ನಡುವೆಯೇ ಮುಂದಿನ 24 ಗಂಟೆಗಳಲ್ಲಿ ಪರಿಸ್ಥಿತಿ ಸುಧಾರಿಸದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಕೇಂದ್ರ ಮತ್ತು ಕರ್ನಾಟಕದ ಬಿಜೆಪಿ ಸರ್ಕಾರವೇ(Karnataka BJP Government) ನೇರ ಹೊಣೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್(Sharad Pawar) ಹೇಳಿದ್ದಾರೆ.

    ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಮತ್ತು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಪವಾರ್ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಈಗ ದೃಢ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಎಲ್ಲಾ ಪಕ್ಷಗಳನ್ನು ವಿಶ್ವಾಸದಲ್ಲಿಟ್ಟುಕೊಳ್ಳಬೇಕು. ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದ್ದು ಎಲ್ಲಾ ಸಂಸದರು ಒಗ್ಗೂಡಿ ಮತ್ತು ಅದೇ ನಿಲುವನ್ನು ತೆಗೆದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮೇಯುತ್ತಿದ್ದ ಹಸುಗಳನ್ನು ಗುಂಡಿಟ್ಟು ಕೊಂದ ಎಸ್ಟೇಟ್ ಮಾಲೀಕ


    ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಿದೆ ಎಂದು ಆರೋಪಿಸಿದ ಪವಾರ್, ಕಳೆದ ಕೆಲವು ವಾರಗಳಿಂದ ಪರಿಸ್ಥಿತಿಯನ್ನು ಬೇರೆ ದಿಕ್ಕಿನಲ್ಲಿ ಕೊಂಡೊಯ್ಯಲು ಕರ್ನಾಟಕದ ಸಿಎಂ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದ ನಂತರ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.

    Live Tv
    [brid partner=56869869 player=32851 video=960834 autoplay=true]