Tag: ಶರತ್ ಕೊಲೆ

  • ಚಾರ್ಮಾಡಿಯಲ್ಲಿ ಸಿಗದ ಶರತ್ ಮೃತದೇಹ- ಕಾರ್ಯಾಚರಣೆ ಇಂದೂ ಮುಂದುವರಿಕೆ

    ಚಾರ್ಮಾಡಿಯಲ್ಲಿ ಸಿಗದ ಶರತ್ ಮೃತದೇಹ- ಕಾರ್ಯಾಚರಣೆ ಇಂದೂ ಮುಂದುವರಿಕೆ

    ಚಿಕ್ಕಮಗಳೂರು: ಸಬ್ಸಿಡಿ ಕಾರಿನ ವಿಚಾರವಾಗಿ ಹಣಕಾಸಿನ ವಿಷಯಕ್ಕೆ ಕೊಲೆಯಾದ ಬೆಂಗಳೂರಿನ ಕೋಣನಕುಂಟೆಯ ಯುವಕ ಶರತ್ (Sharat Murder Case) ಮೃತದೇಹಕ್ಕಾಗಿ ಬೆಂಗಳೂರಿನ ಪೊಲೀಸರು ಕಳೆದ ಎರಡು ದಿನಗಳಿಂದ ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ.

    ಮೂರನೇ ದಿನವಾದ ಇಂದು ಕೂಡ ಶೋಧ ಕಾರ್ಯ ಮುಂದುವರಿಯಲಿದೆ. ಮೃತದೇಹದ ಶೋಧಕ್ಕಾಗಿ ಎ1 ಹಾಗೂ ಎ2 ಇಬ್ಬರು ಆರೋಪಿಗಳನ್ನ ಸ್ಥಳಕ್ಕೆ ಕರೆತಂದಿರೋ ಪೊಲೀಸರು ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಹುಡುಕಾಡುತ್ತಿದ್ದಾರೆ. ಆದರೆ ಮೃತದೇಹ ಮಾತ್ರ ಸಿಕ್ಕಿಲ್ಲ. ಆರೋಪಿಗಳು ಒಂದೊಂದು ಬಾರಿ ಒಂದೊಂದು ಜಾಗ ತೋರಿಸುತ್ತಿರುವುದರಿಂದ ಹುಡುಕಾಡಿ-ಹುಡುಕಾಡಿ ಪೊಲೀಸರು ಕೂಡ ಹೈರಾಣಾಗಿದ್ದಾರೆ. ಇದನ್ನೂ ಓದಿ: ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ

    ಒಮ್ಮೆ ಓರ್ವ ಬಲ ಭಾಗ ಅಂದ್ರೆ, ಮತ್ತೋರ್ವ ಎಡಭಾಗ ಅಂತಿದ್ದಾನೆ. ಇದು ಪೊಲೀಸರನ್ನ ಅತಂತ್ರಕ್ಕೀಡುಮಾಡಿದೆ. ಗೋಣಿಚೀಲದಲ್ಲಿ ತುಂಬಿ ಮೃತದೇಹವನ್ನು ಎಸೆದಿದ್ದೇವೆ ಎಂದು ಆರೋಪಿಗಳು ಹೇಳುತ್ತಿದ್ದಾರೆ. ಗೋಣೀಚೀಲವಾದ್ರೆ ಮೃತದೇಹ ಸಿಗೋದು ಡೌಟ್. ಯಾಕಂದ್ರೆ ಚಾರ್ಮಾಡಿ (Charmadi Ghat) ಯಲ್ಲಿ ಕಾಡುಹಂದಿ, ಸೀಳುನಾಯಿಗಳು ಹೆಚ್ಚಿದ್ದು ಚೀಲವನ್ನ ಎಳೆದೊಯ್ಯೋ ಸಾಧ್ಯತೆ ಇದೆ. ಅಷ್ಟೆ ಅಲ್ಲದೇ ಒಂಬತ್ತು ತಿಂಗಳ ಹಿಂದಿನ ಶವವಾಗಿರೋದ್ರಿಂದ ಸಿಗೋದು ಡೌಟ್ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

    ಪೊಲೀಸರು ಮಾತ್ರ ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಮೃತದೇಹಕ್ಕಾಗಿ ಬೆಟ್ಟ-ಗುಡ್ಡ ಹತ್ತಿ ಇಳಿದು ಹುಡುಕಾಡುತ್ತಿದ್ದಾರೆ. 22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮಧ್ಯರಾತ್ರಿಯ ಕಗ್ಗತ್ತಲಲ್ಲಿ ಎಲ್ಲಿ ಬಿಸಾಡಿದ್ದಾರೋ ಏನೋ. ಆದರೆ ಪೊಲೀಸರು ಅವರು ಹೇಳಿದ ಕಡೆಯಲ್ಲೆಲ್ಲಾ ಹುಡುಕಾಡುತ್ತಿದ್ದಾರೆ. ಮೃತದೇಹದ ಯಾವುದೇ ಗುರುತು ಪತ್ತೆಯಾಗಿಲ್ಲ. ಚಾರ್ಮಾಡಿ ಘಾಟಿಯಲ್ಲಿ ಮೃತದೇಹ ಹುಡುಕೋದು ಅಷ್ಟು ಸುಲಭದ ಮಾತಲ್ಲ.

    ಚಾರ್ಮಾಡಿ ಘಾಟ್ ಸಾವಿರಾರು ಅಡಿ ಪ್ರಪಾತದ ಪ್ರದೇಶ. ದಟ್ಟ ಕಾನನ. ಅಸಂಖ್ಯಾತ ಪ್ರಾಣಿಗಳ ಆವಸ ಸ್ಥಾನ. ಜೊತೆಗೆ ಯಥೇಚ್ಛವಾಗಿ ಮಳೆ ಬೀಳುವ ಪ್ರದೇಶ. ಇಲ್ಲಿ ಬೀಳುವ ಮಳೆ ನೀರು ಕಣಿವೆಯಲ್ಲಿ ಹರಿದು ನೇತ್ರಾವತಿ (Netravathi River) ನದಿ ಸೇರುತ್ತೆ. 2022ರಲ್ಲಿ ಕಾಫಿನಾಡಲ್ಲಿ ಯಥೇಚ್ಛವಾಗಿ ಮಳೆ ಸುರಿದಿದೆ. ಮಳೆ ನೀರಲ್ಲಿ ಕೊಚ್ಚಿಯೂ ಹೋಗಿರಬಹುದು ಅಥವಾ ಪ್ರಾಣಿಗಳು ತಿಂದಿರಬಹುದು. ಇಂತಹ ದುರ್ಗಮ ಪ್ರದೇಶದಲ್ಲಿ 9 ತಿಂಗಳ ಹಿಂದಿನ ಹೆಣ ಹುಡುಕೋದು ಕಷ್ಟ ಸಾಧ್ಯ. ಇಲ್ಲಿ ಒಂದೇ ರೀತಿಯ ತಿರುವುಗಳು ಹತ್ತಾರಿವೆ. ಕೊಲೆ ಮಾಡಿರೋ ಭಯದಲ್ಲಿ ಮಧ್ಯರಾತ್ರಿಯ ಕತ್ತಲಲ್ಲಿ ಮೃತದೇಹವನ್ನ ಯಾವ ತಿರುವಿನಲ್ಲಿ ಎಲ್ಲಿ ಎಸೆದಿದ್ದಾರೋ ಗೊತ್ತಿಲ್ಲ. ಆದರೆ ಪೊಲೀಸರು ಅವರು ಹೇಳಿದ ಜಾಗದಲ್ಲೆಲ್ಲ ನಿರಂತರವಾಗಿ ಹುಡುಕಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ

    ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ

    ಬೆಂಗಳೂರು: ಕೋಣನ ಕುಂಟೆ ನಿವಾಸಿ ಶರತ್ (Sharat Murder Case) ಕೊಲೆ ಪ್ರಕರಣವು ಕಬ್ಬನ್ ಪಾರ್ಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟ್‍ (Charmadi Ghat) ನಲ್ಲಿ ಶರತ್ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಕಬ್ಬನ್ ಪಾರ್ಕ್ ಪೊಲೀಸರು ಪ್ರಮುಖ ಆರೋಪಿಗಳಾದ ಛಲಪತಿ, ಶರತ್, ಜೊತೆಗೆ ಕರೆದುಕೊಂಡು ಸ್ಥಳಕ್ಕೆ ಹೋಗಿದ್ದಾರೆ.

    ಕೊಲೆ ಆರೋಪಿಗಳು ದಿನಕ್ಕೊಂದು ಜಾಗ ತೋರಿಸುತ್ತಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಆಳವಾದ ಕಂದಕಗಳು, ದಟ್ಟವಾದ ಪೂದೆಗಳ ಜಾಗಗಳನ್ನು ತೋರಿಸಿದ್ದಾರೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಶರತ್ ಮೃತದೇಹ ಮಾತ್ರ ಸಿಗುತ್ತಿಲ್ಲ. ತಾವು ತೋರಿಸಿದ ಕಡೆ ಶವ ಸಿಗದೇ ಇದ್ದಾಗ, ಮತ್ತೊಂದು ಜಾಗ ಇರಬಹುದು ಎನ್ನುತ್ತಿದ್ದಾರೆ. ಹೀಗಾಗಿ ಆರೋಪಿಗಳು ಹೇಳಿದ ಜಾಗಗಳಲ್ಲಿ ಪೊಲೀಸರ ತಂಡಗಳು ತೀವ್ರ ಹುಡುಕಾಟ ನಡೆಸುತ್ತಿವೆ. ಎಷ್ಟೇ ಹುಡುಕಾಟ ನಡೆಸಿದರೂ ಮೃತದೇಹದ ಸಣ್ಣ ಕುರುಹು ಸಹ ಸಿಗದಿರುವುದರಿಂದ ಪೊಲೀಸರು ಕಂಗಾಲಾಗಿದ್ದಾರೆ.

    ಏನಿದು ಘಟನೆ..?: ಹಣದ ವಿಚಾರಕ್ಕೆ ಕಳೆದ ಒಂಬತ್ತು ತಿಂಗಳ ಹಿಂದೆ ಆರೋಪಿಗಳು ಶರತ್ ನನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ನಂತರ ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ ಎಸೆದಿದ್ದರು. ಇದೀಗ ಕೊಲೆ ನಡೆದು 6 ತಿಂಗಳ ನಂತ್ರ ಪ್ರಕರಣ ಬೆಳಕಿಗೆ ಬಂದಿದೆ. ಸಾಲ ಪಡೆದು ಹಿಂದಿರುಗಿಸದೆ ಶರತ್ ಓಡಾಡುತ್ತಿದ್ದರು. ಸಾಲ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಶರತ್ ನನ್ನ 6 ತಿಂಗಳ ಹಿಂದೆಯೇ ಕಿಡ್ನಾಪ್ ಮಾಡಿದ್ದರು. ಬಳಿಕ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಂದಿರುವುದು ಬೆಳಕಿಗೆ ಬಂದಿದೆ. ಶರತ್‍ನನ್ನ ಅರೆ ನಗ್ನಗೊಳಿಸಿ ಕಟ್ಟಿಹಾಕಿ ಮನಸ್ಸೋ ಇಚ್ಛೆ ಥಳಿಸಿರೋ ವೀಡಿಯೋಗಳು ಕೂಡ ಲಭ್ಯವಾಗಿದೆ.

    ಕೊಲೆಯಾಗಿ ತಿಂಗಳು ಕಳೆದ್ರೂ ಯಾರಿಗೂ ಗೊತ್ತಿರಲಿಲ್ಲ. ಅಲ್ಲದೆ ಕೊಲೆಯಾದವನ ಮೊಬೈಲ್‍ (Mobile) ನಿಂದಲೇ ಪೋಷಕರಿಗೆ ಸಂದೇಶ ರವಾನಿಸಲಾಗಿದೆ. ನಾನು ದುಡಿಯಲು ಹೋಗುತ್ತಿದ್ದೇನೆ ಹುಡುಕಬೇಡಿ ಎಂದು ಆರೋಪಿಗಳೇ ಶರತ್ ಪೋಷಕರಿಗೆ ಮೆಸೇಜ್ ಮಾಡಿದ್ದರು. ಬಳಿಕ ಮೊಬೈಲ್ ಅನ್ನು ಲಾರಿ (Lorry) ಮೇಲೆ ಎಸೆದಿದ್ದರು. ಈ ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರರಾಜ್ಯಕ್ಕೆ ಪ್ರಯಾಣ ಬೆಳೆಸಿದೆ.

    ಇತ್ತ ಮೊಬೈಲ್ ಸ್ವಿಚ್ ಆಫ್ ಆದ ನಂತರ ಪೋಷಕರಿಗೆ ಶರತ್ ಸಂಪರ್ಕವೇ ಇಲ್ಲ. ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆಂಬ ನಂಬಿಕೆಯಲ್ಲಿದ್ದ ಪೋಷಕರಿಗೆ ವೀಡಿಯೋಗಳು ದೊರೆತಾಗ ಆಕಾಶವೇ ಕಳಚಿ ಬಿದ್ದಂತಾಗಿದೆ. ಕೂಡಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ (Cubbon Park Police Station) ಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದಾಗ ಕೊಲೆ ಆಗಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 88,920 ರೂ. ಮೌಲ್ಯದ ಬಿಸ್ಕೆಟ್ ಕದ್ದ ಖದೀಮರಿಬ್ಬರ ಬಂಧನ

    ಚಿಕ್ಕಬಳ್ಳಾಪುರ (Chikkaballapur) ಮೂಲದ ಶ್ರವಣ್ ಈ ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ಕನ್ನಡಪರ ಸಂಘಟನೆಯೊಂದರ ಮುಖಂಡನ ಮಗ. ಆನಂತರ ಕೊಲೆ ತನಿಖೆಯ ಆಳಕ್ಕಿಳಿದ ಪೊಲೀಸರಿಗೆ ಶಾಕ್ ಆಗಿದೆ. ಈ ಕೊಲೆ ರಹಸ್ಯ ದೃಶ್ಯ ಸಿನಿಮಾವನ್ನೂ ಮೀರಿಸುವಂತಿದೆ. ತನಿಖೆಗೆ ಮುಂದಾದ ಪೊಲೀಸರಿಗೆ ಸಿಕ್ಕ ವಿವರಗಳೇ ರೋಚಕವಾಗಿದೆ. ಕೊಲೆಯಾದ ವಿಷಯ ತಿಳಿಯುತ್ತಿದಂತೆ 5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

    ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆ ನಡೆಸಿದಾಗ ಸರ್ಕಾರಿ ಯೋಜನೆಗಳಲ್ಲಿ ಕಾರು ಕೊಡಿಸೋದಾಗಿ ವಂಚನೆ ಮಾಡಿದ್ದ ಆರೋಪ ಕೊಲೆಯಾದ ಶರತ್ ಮೇಲಿದೆ. ಹಲವು ಮಂದಿಯಿಂದ ಹಣ ಪಡೆದು ವಂಚಿಸಿದ್ದ ಆರೋಪವೂ ಕೇಳಿ ಬಂದಿದೆ. ಆರೋಪದ ಮೇಲೆ ಕಿಡ್ನಾಪ್ ಮಾಡಿ ಆರೋಪಿಗಳು ಹತ್ಯೆ ಮಾಡಿರುವುದಾಗಿ ಬಯಲಾಗಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ. ಇಂದು ಒಬಳೇಶ್, ನವೀನ್ ಸಂಕೇತ್ , ಗೋವಿಂದ್ ಮತ್ತು ಉದಯ್ ರಾಜ್ ಎಂಬ ಐವರನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]