Tag: ಶರಣ್ಯ ಶೆಟ್ಟಿ

  • ಲಕ್ಷ್ಮಿ ಮಂಚು ಇನ್ಸ್ಟಾಗ್ರಾಂ ಖಾತೆ ಹ್ಯಾಕ್- ಫ್ಯಾನ್ಸ್‌ಗೆ ಎಚ್ಚರಿಸಿದ ನಟಿ

    ಲಕ್ಷ್ಮಿ ಮಂಚು ಇನ್ಸ್ಟಾಗ್ರಾಂ ಖಾತೆ ಹ್ಯಾಕ್- ಫ್ಯಾನ್ಸ್‌ಗೆ ಎಚ್ಚರಿಸಿದ ನಟಿ

    ತೆಲುಗಿನ ನಟಿ ಲಕ್ಷ್ಮಿ ಮಂಚು (Lakshmi Manchu) ಇನ್ಸ್ಟಾಗ್ರಾಂ ಖಾತೆ ಹ್ಯಾಕ್ (Hack) ಆಗಿದೆ. ನಟಿಯ ಖಾತೆಯಿಂದ ಫ್ಯಾನ್ಸ್‌ಗೆ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಲಕ್ಷ್ಮಿ ಮಂಚು ಸೈಬರ್ ಕ್ರೈಮ್‌ಗೆ ದೂರು ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಮೆಜೆಸ್ಟಿಕ್ 2’ ನಾಯಕಿ ಸಂಹಿತಾ ವಿನ್ಯಾ

    ಇನ್ಸ್ಟಾಗ್ರಾಂ ಹ್ಯಾಕ್‌ ಕುರಿತು ಲಕ್ಷ್ಮಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, ನನ್ನ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ನನಗೆ ಹಣದ ಅಗತ್ಯವಿದ್ದರೆ, ನಾನೇ ನಿಮಗೆ ನೇರವಾಗಿ ಕೇಳುತ್ತೇನೆ. ಅದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ. ಯಾರೂ ಹಣ ಕಳೆದುಕೊಂಡಿಲ್ಲ ಎಂದು ಭಾವಿಸಿದ್ದೇನೆ. ಎಲ್ಲವನ್ನೂ ಸರಿಪಡಿಸಿದ ಬಳಿಕ ಮತ್ತೆ ಎಕ್ಸ್ ಖಾತೆಯಲ್ಲಿ ತಿಳಿಸುತ್ತೇನೆ ಎಂದು ಲಕ್ಷ್ಮಿ ಮಂಚು ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು

    ಅಂದಹಾಗೆ, ದಕ್ಷ, ಅಗ್ನಿ ನಕ್ಷತ್ರಂ ಸೇರಿದಂತೆ ತೆಲುಗಿನ ಹಲವು ಸಿನಿಮಾಗಳಲ್ಲಿ ಲಕ್ಷ್ಮಿ ಮಂಚು ಬ್ಯುಸಿಯಾಗಿದ್ದಾರೆ.

  • ಶರಣ್ಯ ಶೆಟ್ಟಿ ಹೆಸರಿನಲ್ಲಿ ಹಣ ವಂಚನೆ- ಎಚ್ಚರಿಕೆ ನೀಡಿದ ನಟಿ

    ಶರಣ್ಯ ಶೆಟ್ಟಿ ಹೆಸರಿನಲ್ಲಿ ಹಣ ವಂಚನೆ- ಎಚ್ಚರಿಕೆ ನೀಡಿದ ನಟಿ

    ಸ್ಯಾಂಡಲ್‌ವುಡ್ ನಟಿ ಶರಣ್ಯ ಶೆಟ್ಟಿ (Sharanya Shetty) ಹೆಸರನ್ನು ಬಳಸಿಕೊಂಡು ಖದೀಮರು ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶರಣ್ಯ ಹೆಸರನ್ನು ದುರ್ಬಳಕೆ ಮಾಡಲಾಗಿದೆ. ಈ ಹಿನ್ನೆಲೆ ನನ್ನ ಹೆಸರು ದುರ್ಬಳಕೆ ಆಗುತ್ತಿದೆ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ನಕಲಿ ನಂಬರ್ ತೆಗೆದುಕೊಂಡು ಅದಕ್ಕೆ ನಟಿಯ ಫೋಟೋ ಡಿಪಿ ಹಾಕಿ ವಂಚಕರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಶರಣ್ಯ ಶೆಟ್ಟಿ ಹೆಸರು ಬಳಸಿ ವಂಚನೆ ಮಾಡುತ್ತಿದ್ದಾರೆ. ಟ್ರು ಕಾಲರ್‌ನಲ್ಲೂ ಶರಣ್ಯ ಶೆಟ್ಟಿ ಹೆಸರು ಹಾಕಿಕೊಂಡು ಹೀರೋಯಿನ್ಸ್ ಡಿಟೈಲ್ಸ್ ಪಡೆಯುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್‌ ಬಾಸ್‌’ ಖ್ಯಾತಿಯ ಇಶಾನಿ

    ನನ್ನ ಹೆಸರನ್ನು ಬಳಸಿಕೊಂಡು ಹಣಕ್ಕೆ ಬೇಡಿಕೆಯಿಟ್ಟು ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆ ನಂಬರ್ ನನ್ನದಲ್ಲ. ಇದೊಂದು ನಕಲಿ ನಂಬರ್, ಅದನ್ನು ನಂಬಿ ಯಾರು ಹಣ ಕಳುಹಿಸಬೇಡಿ. ಅಂತಹ ಖದೀಮರ ವಿರುದ್ಧ ನಾನು ಸೈಬರ್ ಕ್ರೈಂನಲ್ಲಿ ದೂರು ನೀಡೋದಾಗಿ ನಟಿ ತಿಳಿಸಿದ್ದಾರೆ.

    ಅಂದಹಾಗೆ, ಕಿರುತೆರೆಯ ಜನಪ್ರಿಯ ‘ಗಟ್ಟಿಮೇಳ’ ಸೀರಿಯಲ್ ಖಳನಾಯಕಿಯಾಗಿ ಶರಣ್ಯ ಗುರುತಿಸಿಕೊಂಡರು. ಆ ನಂತರ ಹಿರಿತೆರೆಯಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶರಣ್ಯ ನಟಿಸಿದ್ದಾರೆ.

  • ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ವ್ಲಿ ಸ್ಟಾರ್ ಪ್ರೇಮ್ (Prem) ಮತ್ತು ಶರಣ್ಯ ಶೆಟ್ಟಿ (Sharanya Shetty) ಉಡುಪಿ ಶ್ರೀಕೃಷ್ಣ ದೇಗುಲಕ್ಕೆ (Sri Krishna Temple) ಭೇಟಿ ನೀಡಿದ್ದಾರೆ. ಚಿತ್ರತಂಡದ ಜೊತೆ ಪ್ರೇಮ್ ಹಾಗೂ ಶರಣ್ಯ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ: ಕಿಚ್ಚ ಸುದೀಪ್‌ ಭಾಗಿ

    ಪ್ರೇಮ್ ನಟನೆಯ ಹೊಸ ಸಿನಿಮಾಗೆ ಶರಣ್ಯ ಶೆಟ್ಟಿ ನಾಯಕಿಯಾಗಿದ್ದಾರೆ. ಹಾಗಾಗಿ ಈ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಗುವ ಮುನ್ನ ಚಿತ್ರತಂಡದೊಂದಿಗೆ ಉಡುಪಿಯ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Sharanya Shetty (@iamsharanyashetty)

    ಅಂದಹಾಗೆ, ಲವ್ಲಿ ಸ್ಟಾರ್ ಪ್ರೇಮ್ ಹೊಸ ಸಿನಿಮಾಗೆ ತೇಜಸ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶರಣ್ಯ ಅವರಿಗೂ ಉತ್ತಮ ಪಾತ್ರ ಸಿಕ್ಕಿದೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಈಗಾಗಲೇ ನೆರವೇರಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

  • ‘ಕೃಷ್ಣಂ ಪ್ರಣಯ ಸಖಿ’ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರ: ನಟ ಗಣೇಶ್

    ‘ಕೃಷ್ಣಂ ಪ್ರಣಯ ಸಖಿ’ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರ: ನಟ ಗಣೇಶ್

    ತ್ರಿಶೂಲ್ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಾಯಕರಾಗಿ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಎರಡು ಹಾಡುಗಳು ಪ್ರೇಕ್ಷಕರ ಮನಗೆದ್ದಿದೆ. ಇದೀಗ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರವಿದು ಎಂದು ನಟ ಗಣೇಶ್ ಮಾತನಾಡಿದ್ದಾರೆ. ಇದನ್ನೂ ಓದಿ:ಕೈತುಂಬಾ ಅವಕಾಶವಿರುವಾಗಲೇ ನನಗೆ ಆಕ್ಸಿಡೆಂಟ್‌ ಆಯ್ತು: ನಭಾ ನಟೇಶ್

    ‘ದಂಡುಪಾಳ್ಯ’ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರದ ಕಥೆ ಹೇಳಲು ಬರುತ್ತಿದ್ದಾರೆ ಎಂದಾಗ, ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ ಆರಂಭದಲ್ಲೇ ಅವರು ಎಂಟು ನಾಯಕಿಯರು ಎಂದಾಗ, ಓ ಇದು ನನ್ನ ಜಾನರ್‌ನ ಚಿತ್ರ ಅನಿಸಿತು. ‘ಕೃಷ್ಣಂ ಪ್ರಣಯ ಸಖಿ’ ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು, ನನಗೆ ಸಂತೋಷವಾಯಿತು. ನೋಡುಗರಿಗೂ ಈ ಚಿತ್ರ ಇಷ್ಟವಾಗುತ್ತದೆ. ಅಂತಹ ಉತ್ತಮ ಚಿತ್ರ ಮಾಡಿದ್ದಾರೆ ಶ್ರೀನಿವಾಸರಾಜು. ಪ್ರಶಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ನನ್ನ ಈವರೆಗಿನ ವೃತ್ತಿ ಜೀವನದ ಬಿಗ್ ಬಜೆಟ್‌ನ ಚಿತ್ರ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿದ್ದಾರೆ.

    ಇದು ಗಣೇಶ್‌ಗೆ ಸೂಕ್ತವಾದ ಕಥೆ. ಅವರ ಹಾಗೂ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ ‘ಚಿನ್ನಮ್ಮ’ ಹಾಡಂತೂ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಸಿನಿಮಾ ನೋಡಿ ಹಾರೈಸಿ ಎಂದು ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿದ್ದಾರೆ.


    ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದಕ್ಕೆ ನಿರ್ಮಾಪಕರ ಪುತ್ರಿ ಪ್ರೇರಣಾ ಪ್ರಶಾಂತ್ ಧನ್ಯವಾದ ತಿಳಿಸಿದರು. ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ (Sharanya Shetty) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು ನಟಿಸಿದ್ದಾರೆ.

  • ‘ಫಾರೆಸ್ಟ್’ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌

    ‘ಫಾರೆಸ್ಟ್’ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌

    ಸ್ಯಾಂಡಲ್‌ವುಡ್ (Sandalwood) ‘ಉಪಾಧ್ಯಕ್ಷ’ ಚಿಕ್ಕಣ್ಣ (Chikkanna) ಸ್ನೇಹಿತರ ಜೊತೆಗೂಡಿ ಕಾಡಿನ ಕತೆ ಹೇಳೋಕೆ ರೆಡಿ ಆಗಿದ್ದಾರೆ. ಶೇಕಡ 80ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಹಾಗಾಗಿ ಚಿತ್ರಕ್ಕೆ ‘ಫಾರೆಸ್ಟ್’ ಅಂತಲೇ ಹೆಸರಿಡಲಾಗಿದೆ. ಈ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ. ಇದನ್ನೂ ಓದಿ:ದರ್ಶನ್ ಪ್ರಕರಣದ ಕುರಿತು ನಟಿ ಮಯೂರಿ ರಿಯಾಕ್ಷನ್

    ‘ಓಡೋ ಓಡೋ’ ಅಂತಾ ಶುರುವಾಗುವ ಹಾಡಿಗೆ ಪುನೀತ್ ಆರ್ಯ ಕ್ಯಾಚಿ ಆಗಿ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಕೈಲಾಸ್ ಖೇರ್, ಹರ್ಷ ಉಪ್ಪಾರ್ ಧ್ವನಿಯಾಗಿದ್ದಾರೆ. ಧರ್ಮವೀರ್ ಈ ಹಾಡಿಗೆ ಸಂಗೀತ ಒದಗಿಸಿದ್ದಾರೆ. ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ‘ಡಬಲ್ ಇಂಜಿನ್’, ‘ಬಾಂಬೆ ಮಿಠಾಯಿ’, ‘ಬ್ರಹ್ಮಚಾರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾವಾಗಿದ್ದು, ಹಿರಿಯ ನಟ ಅವಿನಾಶ್, ಪ್ರಕಾಶ್ ತುಮ್ಮಿನಾಡ್, ಶರಣ್ಯ ಶೆಟ್ಟಿ (Sharany Shetty), ಅರ್ಚನಾ ಕೊಟ್ಟಿಗೆ (Archana Kottige), ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾಬಳಗದಲ್ಲಿದ್ದಾರೆ.

    ‘ಫಾರೆಸ್ಟ್’ (Forest Film) ಸಿನಿಮಾಗೆ ಎನ್ ಎಂ ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಎಂಬುವವರು ಹಣ ಹಾಕುತ್ತಿದ್ದಾರೆ. ಚಿತ್ರಕ್ಕೆ ವಿ ರವಿಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಹೊಣೆಯನ್ನು ಅರ್ಜುನ್ ಕಿಟ್ಟು ಹೊತ್ತುಕೊಂಡಿದ್ದಾರೆ. ಧರ್ಮವೀರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿರುವ ಚಿತ್ರತಂಡ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

  • ಟ್ರೈಲರ್ ನಲ್ಲೇ ಮೋಡಿ ಮಾಡಿದೆ ‘ನಗುವಿನ ಹೂಗಳ ಮೇಲೆ’

    ಟ್ರೈಲರ್ ನಲ್ಲೇ ಮೋಡಿ ಮಾಡಿದೆ ‘ನಗುವಿನ ಹೂಗಳ ಮೇಲೆ’

    ಶ್ರೀಸತ್ಯಸಾಯಿ ಆರ್ಟ್ಸ್ ಲಾಂಛನದಲ್ಲಿ ಕೆ.ಕೆ ರಾಧಾಮೋಹನ್ ನಿರ್ಮಿಸಿರುವ, ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ (Venkat Bharadwaj)ನಿರ್ದೇಶನದ ಹಾಗೂ ಅಭಿ ದಾಸ್ –  ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ನಗುವಿನ ಹೂಗಳ ಮೇಲೆ’ (Naguvina hugala mele)ಚಿತ್ರದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಾಗಿದೆ.  ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಮನೆಮಾತಾಗಿರುವ ಈ ಕನ್ನಡ ಮಣ್ಣಿನ ನಿಜ ಪ್ರೇಮ ಕಥೆ  ಫೆಬ್ರವರಿ 9 ರಂದು ತೆರೆಗೆ ಬರುತ್ತಿದೆ.

    ನಿರ್ದೇಶಕ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ  ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಮರವಂತೆ, ಚದಂಬರ ನರೇಂದ್ರ, ಕಬ್ಬಡಿ ನರೇಂದ್ರ‌ಬಾಬು ಹಾಗೂ ಕಿರಣ್ ನಾಗರಾಜ್ ಅವರು ರಚಿಸಿರುವ ಹಾಡುಗಳಿಗೆ ಲವ್ ಪ್ರಾಣ್ ಮೆಹ್ತಾ ಸಂಗೀತ ಸಂಯೋಜಿಸಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಲರ್ವಿನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

    ಅಭಿದಾಸ್ (Abhidas), ಶರಣ್ಯ ಶೆಟ್ಟಿ (Sharanya Shetty), ಗಿರೀಶ್ ಬೆಟ್ಟಪ್ಪ, ಹರ್ಷ ಗೋ ಭಟ್, ಬಾಲ ರಾಜವಾಡಿ, ಬೆನಕ ನಂಜಪ್ಪ, ಜ್ಯೋತಿ ಮರೂರ್, ಆಶಾ ಸುಜಯ್ ಮುಂತಾದವರು “ನಗುವಿನ ಹೂಗಳ ಮೇಲೆ” ಚಿತ್ರದಲ್ಲಿ ನಟಿಸಿದ್ದಾರೆ.

  • ಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು

    ಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು

    ಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬದ (Christmas Festival) ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇದರ ನಡುವೆ ಸಿನಿಮಾ ನಟ-ನಟಿಯರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಕ್ರಿಸ್ಮಸ್ ಹಬ್ಬದಂದು ಚೆಂದದ ಫೋಟೋಗಳನ್ನ ಕೂಡ ಶೇರ್ ಮಾಡಿದ್ದಾರೆ.

    ಕ್ರಿಸ್ಮಸ್ ಹಬ್ಬದ ದಿನದಂದು ‘ಗಟ್ಟಿಮೇಳ’ (Gattimela) ಬ್ಯೂಟಿ ಶರಣ್ಯ ಶೆಟ್ಟಿ (Sharanya Shetty) ಅವರು ಕೆಂಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಕಲರ್ ಗೌನ್‌ಗೆ ಬಿಳಿ ಬಣ್ಣದ ಉಲ್ಲನ್ ಶಾಲ್ ಮತ್ತು ಟೋಪಿ ಧರಿಸಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಶರಣ್ಯ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ‘ಬಚ್ಚನ್’ ಚಿತ್ರದ ನಟಿ ಪಾರುಲ್ ಯಾದವ್ (Parul Yadav) ಅವರು ತಮ್ಮ ನಾಯಿ ಮರಿಗಳ ಜೊತೆ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಇದರ ಸ್ಪೆಷಲ್ ಫೋಟೋಗಳನ್ನ ಕೂಡ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ರಣ್‌ಬೀರ್-ಆಲಿಯಾ ದಂಪತಿ

    ಉಗ್ರಂ, ಬಘೀರ ಹೀರೋ ಶ್ರೀಮುರಳಿ (Srimurali) ಕೂಡ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿ ವಿದ್ಯಾ ಮತ್ತು ಮಕ್ಕಳೊಂದಿಗಿನ ಹಬ್ಬದ ಫೋಟೋ ಶ್ರೀಮುರಳಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ನಿರೂಪ್ ಜೊತೆ ಡ್ಯುಯೆಟ್ ಹಾಡೋಕೆ ಸಜ್ಜಾದ ಬೃಂದಾ

    ಬಾಲಿವುಡ್ ನಟಿ ಆಲಿಯಾ ಭಟ್ (Aliaa Bhatt) ದಂಪತಿ ಕೂಡ ತಮ್ಮ ಕುಟುಂಬದ ಜೊತೆ ಅದ್ದೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಿದ್ದಾರೆ. ಹಬ್ಬದ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ಇನ್ನೂ ಕ್ರಿಸ್ಮಸ್‌ ಹಬ್ಬದ ಖುಷಿಯಲ್ಲಿ ರಣ್‌ಬೀರ್‌-ಆಲಿಯಾ ಭಟ್‌ ಜೋಡಿ, ಮಗಳ ಮುಖವನ್ನ ರಿವೀಲ್‌ ಮಾಡಿದ್ದಾರೆ. ಕ್ರಿಸ್ಮಸ್‌ ಪಾರ್ಟಿವೊಂದರಲ್ಲಿ ಹೊರಬರುವಾಗ ಪಾಪರಾಜಿಗಳ ಕಣ್ಣಿಗೆ ರಾಹಾ ಮುದ್ದು ಮುದ್ದಾಗಿ ಪೋಸ್‌ ನೀಡಿದ್ದಾಳೆ.

  • ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಗ್ಲ್ಯಾಮರಸ್ ಬೆಡಗಿ ಶರಣ್ಯ ಶೆಟ್ಟಿ

    ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಗ್ಲ್ಯಾಮರಸ್ ಬೆಡಗಿ ಶರಣ್ಯ ಶೆಟ್ಟಿ

    ಕುಂದಾಪುರದ ಕುವರಿ ಶರಣ್ಯ ಶೆಟ್ಟಿ (Sharanya Shetty) ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ಕ್ಯಾಮೆರಾಗೆ ಹಾಟ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ‘ಗಟ್ಟಿಮೇಳ’ ನಟಿ ಶರಣ್ಯ ಶೆಟ್ಟಿ ನಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

    ಪ್ಯಾಂಟ್ ಲೆಸ್ ಆಗಿ ಕ್ಯಾಮೆರಾ ಕಣ್ಣಿಗೆ ಹಾಟ್ & ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬಿಳಿ ಬಣ್ಣದ ಟಾಪ್‌ನಲ್ಲಿ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ಗ್ಲ್ಯಾಮರಸ್ ಬೆಡಗಿಯ ನಯಾ ಅವತಾರಕ್ಕೆ ಪಡ್ಡೆಹುಡುಗು ನಾ ನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತ ನಟಿಯ ಸೌಂದರ್ಯವನ್ನ ವರ್ಣಿಸಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಠಕ್ಕರ್, ನಾಗಾರ್ಜುನಗೆ ಆಶಿಕಾ ರಂಗನಾಥ್ ನಾಯಕಿ

    ‘ಗಟ್ಟಿಮೇಳ’ (Gattimela) ಸೀರಿಯಲ್‌ನ ಸಾಹಿತ್ಯ ಪಾತ್ರದ ಮೂಲಕ ಟಿವಿ ಪ್ರಿಯರ ಮನೆಗೆದ್ದ ಚೆಲುವೆ ಈಗ ಬೆಳ್ಳಿಪರದೆಯಲ್ಲಿ ಹೀರೋಯಿನ್ ಮಿಂಚ್ತಿದ್ದಾರೆ. ಈಗಾಗಲೇ 1980, ಹುಟ್ಟುಹಬ್ಬದ ಶುಭಾಶಯಗಳು, ಸ್ಫೂಕಿ ಕಾಲೇಜ್ ಸಿನಿಮಾಗಳಲ್ಲಿ ಶರಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಸದ್ಯ ಗೋಲ್ಡನ್ ಸ್ಟಾರ್ ಗಣೇಶ್‌ಗೆ (Goldenstar Ganesh) ನಾಯಕಿಯಾಗಿ ಕೃಷ್ಣಂ ಪ್ರಣಯ ಸಖಿ, ಅನೀಶ್‌ಗೆ ಜೋಡಿಯಾಗಿ ಹೊಸ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಶರಣ್ಯ (Sharanya Shetty) ಬ್ಯುಸಿಯಾಗಿದ್ದಾರೆ.

    ಹೊಸ ಬಗೆಯ ಕಥೆಗಳನ್ನ ಕೇಳ್ತಿರೋ ಶರಣ್ಯ, ಸಿನಿಮಾಗಾಗಿ ಸಕಲ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಇಳಿದಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾಗಳ ಅಪ್‌ಡೇಟ್ ನೀಡಲಿದ್ದಾರೆ. ಸಿನಿರಸಿಕರ ಮನಗೆಲ್ಲುವಲ್ಲಿ ಶೆಟ್ರ ಬೆಡಗಿ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಕಾದುನೋಡಬೇಕಿದೆ.

  • ಶೆಟ್ರು ಹುಡುಗಿಯ ಹಾಟ್ ಪೋಸ್‌ಗೆ ಬೋಲ್ಡ್ ಆದ ಪಡ್ಡೆಹುಡುಗರು

    ಶೆಟ್ರು ಹುಡುಗಿಯ ಹಾಟ್ ಪೋಸ್‌ಗೆ ಬೋಲ್ಡ್ ಆದ ಪಡ್ಡೆಹುಡುಗರು

    ಕಿರುತೆರೆಯಲ್ಲಿ ಹಾವಳಿ ಮಾಡಿದ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮೋಡಿ ಮಾಡುತ್ತಿರುವ ಶರಣ್ಯ ಶೆಟ್ಟಿ (Sharanya Shetty) ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಸಂಚಲನ ಸೃಷ್ಟಿಸುತ್ತಲೇ ಇರುತ್ತಾರೆ. ನಯಾ ಲುಕ್‌ನಲ್ಲಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ.

    ಹಳದಿ ಬಣ್ಣದ ಮಾಡ್ರರ್ನ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಶರಣ್ಯ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಶರಣ್ಯ ಹೊಸ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಇದನ್ನೂ ಓದಿ:ನಟಿ ಸಂಗೀತಾ ಸವಾಲಿಗೆ ತಲೆ ಶೇವ್ ಮಾಡಿಕೊಂಡ ಕಾರ್ತಿಕ್

    ‘ಗಟ್ಟಿಮೇಳ’ (Gattimela) ಸೀರಿಯಲ್‌ನ ಸಾಹಿತ್ಯ ಪಾತ್ರದ ಮೂಲಕ ಟಿವಿ ಪ್ರಿಯರ ಮನೆಗೆದ್ದ ಚೆಲುವೆ ಈಗ ಬೆಳ್ಳಿಪರದೆಯಲ್ಲಿ ಹೀರೋಯಿನ್ ಮಿಂಚ್ತಿದ್ದಾರೆ. ಈಗಾಗಲೇ 1980, ಹುಟ್ಟುಹಬ್ಬದ ಶುಭಾಶಯಗಳು, ಸ್ಫೂಕಿ ಕಾಲೇಜ್ ಸಿನಿಮಾಗಳಲ್ಲಿ ಶರಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಸದ್ಯ ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ‘ಕೃಷ್ಣಂ ಪ್ರಣಯ ಸಖಿ’, ಅನೀಶ್‌ಗೆ ಜೋಡಿಯಾಗಿ ಹೊಸ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಶರಣ್ಯ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಎಲಿಮಿನೇಷನ್ ಹಾಟ್ ಸೀಟ್‌ನಲ್ಲಿ 9 ಮಂದಿ- ಯಾರ ಆಟಕ್ಕೆ ಅಂತ್ಯ?

    ಹೊಸ ಬಗೆಯ ಕಥೆಗಳನ್ನ ಕೇಳ್ತಿರೋ ಶರಣ್ಯ, ಸಿನಿಮಾಗಾಗಿ ಸಕಲ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಇಳಿದಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾಗಳ ಅಪ್‌ಡೇಟ್ ನೀಡಲಿದ್ದಾರೆ. ಸಿನಿರಸಿಕರ ಮನಗೆಲ್ಲುವಲ್ಲಿ ಶೆಟ್ರ ಬೆಡಗಿ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಕಾದುನೋಡಬೇಕಿದೆ.

  • ಅಭಿದಾಸ್‌, ಶರಣ್ಯ ಶೆಟ್ಟಿ ನಟನೆಯ ‌’ನಗುವಿನ ಹೂಗಳ ಮೇಲೆ’ ಸಿನಿಮಾದ ಸಾಂಗ್ ಔಟ್

    ಅಭಿದಾಸ್‌, ಶರಣ್ಯ ಶೆಟ್ಟಿ ನಟನೆಯ ‌’ನಗುವಿನ ಹೂಗಳ ಮೇಲೆ’ ಸಿನಿಮಾದ ಸಾಂಗ್ ಔಟ್

    ಕಿರುತೆರೆಯ ‘ಗಟ್ಟಿಮೇಳ'(Gattimela) ಖ್ಯಾತಿಯ ಅಭಿದಾಸ್(Abhidas), ನಟಿ ಶರಣ್ಯಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿರುವ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಎಸ್‌ಆರ್‌ವಿ ಥಿಯೇಟರ್‌ನಲ್ಲಿ ‘ಗೊತ್ತಿಲ್ಲ ಯಾರಿಗೂ’ (Gottilla Yarigu) ಎಂಬ ರೊಮ್ಯಾಂಟಿಕ್ ಹಾಡೊಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಸದ್ಯ ಶರಣ್ಯ ಶೆಟ್ಟಿ-ಅಭಿ ಜೋಡಿ ನೋಡುಗರನ್ನ ಮೋಡಿ ಮಾಡ್ತಿದೆ.

    ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, ‘ನಗುವಿನ ಹೂಗಳ ಮೇಲೆ’ ಹೆಸರು ತುಂಬಾ ಚೆನ್ನಾಗಿದೆ ಮತ್ತು ತುಂಬಾ ತೂಕವಾದ ಹೆಸರು. ಡಾ.ರಾಜ್ ಕುಮಾರ್ ಸರ್ ಹಾಡಿರುವ, ಚಿ. ಉದಯ್ ಶಂಕರ್ ಬರೆದಿರುವ ಭಾಗ್ಯವಂತರು ಸಿನಿಮಾದ ಹಾಡಿನ ಎರಡನೇ ಚರಣದಲ್ಲಿ ಬರುವ ತೂಕವಿರುವ ಪದ ಇದು. ಹೀಗಾಗಿ ನಮ್ಮ ಕಂಟೆಂಟ್ ಚೆನ್ನಾಗಿ ಮಾಡುವ ಜವಾಬ್ದಾರಿ ಹೆಚ್ಚಿತ್ತು. ಶರಣ್ಯ ಶೆಟ್ಟಿ- ಅಭಿ ಕಾಂಬಿನೇಷನ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ನಗುವಿನ ಹೂಗಳ ಮೇಲೆ ಒಂದೊಳ್ಳೆ ಪ್ರೇಮಕಥೆ. 18 ವರ್ಷದಿಂದ 80 ವರ್ಷದವರು ನೋಡಬಹುದು. ಪ್ರೇಮ ಅನ್ನೋದಕ್ಕೆ ಸಾವಿಲ್ಲ. ವಯಸ್ಸಿಲ್ಲ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ನಮಗೆ ಬೆಂಬಲವಾಗಿ ನಿಂತಿದ್ದರು. 27 ದಿನಗಳು ಶೂಟಿಂಗ್ ಮಾಡಿ ಮುಗಿಸಿದ್ದೇವೆ ಎಂದು ತಿಳಿಸಿದರು.

    ನಟ ಅಭಿದಾಸ್ ಮಾತನಾಡಿ, ಸೋಲೋ ಹೀರೋ ಆಗಿ ಇದು ನನ್ನ ಮೊದಲ ಸಿನಿಮಾ. ವೆಂಕಟ್ ಸರ್, ರಾಧಾ ಮೋಹನ್ ಸರ್ ಧನ್ಯವಾದ ನನ್ನ ಸೆಲೆಕ್ಟ್ ಮಾಡಿದ್ದಕ್ಕೆ. ನಾಲ್ಕು ಮೆಲೋಡಿ ಹಾಡು ಕೊಟ್ಟಿದ್ದಾರೆ. ಇರಲಿ ಬಿಡು, ಗೊತ್ತಿಲ್ಲ ಯಾರಿಗೂ ನನ್ನ ಫೇವರೇಟ್ ಹಾಡುಗಳು ಎಂದರು. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ಶರಣ್ಯ ಶೆಟ್ಟಿ (Sharanya Shetty) ಮಾತನಾಡಿ, ನಗುವಿನ ಹೂಗಳ ಮೇಲೆ ನನಗೆ ತುಂಬಾ ಸ್ಪೆಷಲ್ ಸಿನಿಮಾ. ಸೋಲೋ ಹೀರೋಯಿನ್ ಆಗಿ ಫಸ್ಟ್ ಸೈನ್ ಮಾಡಿದ ಮೂವಿ. ಎರಡು ವರ್ಷದ ಹಿಂದೆ ಶೂಟ್ ಮಾಡಿದ್ದು ಇದು. ಸ್ಕ್ರೀನ್‌ನಲ್ಲಿ ನನ್ನ ಮುಗ್ದತೆ ಕಾಣಿಸುತ್ತದೆ. ಶೂಟಿಂಗ್ ಪ್ರೋಸೆಸ್ ತುಂಬಾ ಚೆನ್ನಾಗಿತ್ತು. ಈ ಸಿನಿಮಾ ಟ್ರೂ ಲವ್ ಸ್ಟೋರಿ ಬೆಸೆಡ್ ಇದೆ. ತನು ಮನುವಿನ ಪ್ರೇಮಕಥೆ ನಗುವಿನ ಹೂಗಳ ಮೇಲೆ. ನಾನು ತೆರೆಮೇಲೆ ಚಿತ್ರ ನೋಡಲು ಕಾತುರಳಾಗಿದ್ದೇನೆ ಎಂದರು.

    ಗೊತ್ತಿಲ್ಲ ಯಾರಿಗೂ ಎಂಬ ಪ್ರೇಮಗೀತೆಗೆ ಲವ್ ಪ್ರಾನ್ ಮೆಹತಾ ಟ್ಯೂನ್ ಹಾಕಿದ್ದು, ಚಿದಂಬರ ನರೇಂದ್ರ ಸಾಹಿತ್ಯ ಬರೆದಿದ್ದು, ತಜೀಂದರ್ ಸಿಂಗ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಶರಣ್ಯ ಹಾಗೂ ಅಭಿದಾಸ್ ಮಿಂಚಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇರಲಿ ಬಿಡು ಈ ಜೀವ ನಿನಗಾಗಿ ಗಾನಲಹರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

    ಆಮ್ಲೆಟ್, ಕೆಂಪಿರ್ವೆ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿದ್ದು, ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.

    ಟಾಲಿವುಡ್ ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]