Tag: ಶರಣ್ಯಾ ಶೆಟ್ಟಿ

  • ಲವ್ಲಿ ಸ್ಟಾರ್ ಪ್ರೇಮ್‌ಗೆ ಶರಣ್ಯಾ ಶೆಟ್ಟಿ ನಾಯಕಿ

    ಲವ್ಲಿ ಸ್ಟಾರ್ ಪ್ರೇಮ್‌ಗೆ ಶರಣ್ಯಾ ಶೆಟ್ಟಿ ನಾಯಕಿ

    ‘ಕೃಷ್ಣಂ ಪ್ರಣಯ ಸಖಿ’ (Krishnam Pranaya Sakhi) ಸಿನಿಮಾದ ಸಕ್ಸಸ್ ಬಳಿಕ ಕನ್ನಡದ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ಕುಡ್ಲದ ಬೆಡಗಿ ಶರಣ್ಯಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ಹೊಸ ಸಿನಿಮಾಗೆ ಶರಣ್ಯಾ ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:‘ದೋಸ್ತಾ ನೀ ಮಸ್ತಾ’: ಗೆಳೆಯನ ಗೆಲುವುವನ್ನು ಸಂಭ್ರಮಿಸಿದ ಧನರಾಜ್ ಆಚಾರ್

    ನೆನಪಿರಲಿ ಪ್ರೇಮ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ಶರಣ್ಯಾ (Sharanya Shetty) ಸೆಲೆಕ್ಟ್ ಆಗಿದ್ದು, ಅವರು ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಪವರ್‌ಫುಲ್ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

    ಇನ್ನೂ ಈ ಸಿನಿಮಾದ ಜೊತೆಗೆ ತೆಲುಗಿನಲ್ಲಿ ಚಿತ್ರವೊಂದಕ್ಕೆ ಶರಣ್ಯಾ ಆಯ್ಕೆಯಾಗಿದ್ದಾರೆ. ಇಬ್ಬರೂ ಸ್ಟಾರ್ ನಟರಿರುವ ಸಿನಿಮಾ ಅವರು ನಾಯಕಿಯಾಗಿದ್ದು, ಈ ಚಿತ್ರದ ಕುರಿತು ಮತ್ತಷ್ಟು ವಿವರ ಇನ್ನೂ ರಿವೀಲ್ ಆಗಬೇಕಿದೆ.

    ಇನ್ನೂ ‘ಗಟ್ಟಿಮೇಳ’ (Gattimela) ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಚೆಲುವೆ ಆ ನಂತರ 1980, ನಗುವಿನ ಹೂಗಳೇ, ಫಾರೆಸ್ಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೊತೆಯಾಗಿ ನಟಿಸಿ ಸೈ ಎನಿಸಿಕೊಂಡರು. ಈ ಚಿತ್ರ ಅವರಿಗೆ ಬಿಗ್ ಬ್ರೇಕ್ ಕೊಟ್ಟಿದೆ.

  • ಕನ್ನಡದ ನಟಿಗೆ ಬಿಗ್ ಚಾನ್ಸ್- ತೆಲುಗಿನತ್ತ ಶರಣ್ಯ ಶೆಟ್ಟಿ

    ಕನ್ನಡದ ನಟಿಗೆ ಬಿಗ್ ಚಾನ್ಸ್- ತೆಲುಗಿನತ್ತ ಶರಣ್ಯ ಶೆಟ್ಟಿ

    ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಖ್ಯಾತಿಯ ಶರಣ್ಯ ಶೆಟ್ಟಿಗೆ (Sharanya Shetty) ಬೇಡಿಕೆ ಹೆಚ್ಚಾಗಿದೆ. ಸ್ಟಾರ್ ನಟನಿಗೆ ನಾಯಕಿಯಾಗುವ ಟಾಲಿವುಡ್‌ನತ್ತ (Tollywood) ಶರಣ್ಯ ಮುಖ ಮಾಡಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್‌ಡೇ ಸಂಭ್ರಮ

    ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ, ಆಶಿಕಾ ರಂಗನಾಥ್, ರುಕ್ಮಿಣಿ ವಸಂತ್ (Rukmini Vasanth) ತೆಲುಗಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅದೇ ಹಾದಿಯಲ್ಲಿ ಶರಣ್ಯ ಶೆಟ್ಟಿ ಹೆಜ್ಜೆ ಇಡುತ್ತಿದ್ದಾರೆ. ತೆಲುಗಿನ ನಿರ್ಮಾಣ ಸಂಸ್ಥೆಯೊಂದು ನಟಿಯ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸಿದೆ. ಅತೀ ಶೀಘ್ರದಲ್ಲಿ ಈ ಸಿನಿಮಾದ ಬಗ್ಗೆ ಘೋಷಣೆ ಆಗಲಿದೆ. ಇದನ್ನೂ ಓದಿ:ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್‌ ನೆಕ್ಲೇಸ್‌ ಕಳ್ಳತನ

    ಶರಣ್ಯ ಶೆಟ್ಟಿ ಚೊಚ್ಚಲ ತೆಲುಗು ಸಿನಿಮಾಗೆ ಅಲ್ಲಿನ ಸ್ಟಾರ್ ನಟರೊಬ್ಬರು ಹೀರೋ ಆಗಿ ಬಣ್ಣ ಹಚ್ಚಲಿದ್ದಾರೆ. ಅದು ಯಾರು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಕನ್ನಡದ ನಟಿಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಇದೆ ಎಂಬುದು ಪದೇ ಪದೇ ಸಾಬೀತು ಆಗುತ್ತಿದೆ. ಸದ್ಯ ನಟಿಯ ಬಗೆಗಿನ ಸಿನಿಮಾ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಟಿಯ ಹೊಸ ಹೆಜ್ಜೆಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ಇನ್ನೂ ಕಿರುತೆರೆಯ ಜನಪ್ರಿಯ ಸೀರಿಯಲ್ ಗಟ್ಟಿಮೇಳ ಮೂಲಕ ವಿಲನ್ ಆಗಿ ಶರಣ್ಯ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕಳೆದ ವರ್ಷ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಮೂಲಕ ಶರಣ್ಯ ಸಕ್ಸಸ್ ಸಿಕ್ಕಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು.

  • ಚಿತ್ರೀಕರಣ ಮುಗಿಸಿದ ಚಿಕ್ಕಣ್ಣ ನಟನೆ ‘ಫಾರೆಸ್ಟ್’ ಸಿನಿಮಾ

    ಚಿತ್ರೀಕರಣ ಮುಗಿಸಿದ ಚಿಕ್ಕಣ್ಣ ನಟನೆ ‘ಫಾರೆಸ್ಟ್’ ಸಿನಿಮಾ

    ನ್ನಡದಲ್ಲೀಗ ಕಂಟೆಂಟ್ ಆಧರಿಸಿದ ಚಿತ್ರಗಳದ್ದೇ ಕಾರುಬಾರು. ಉತ್ತಮ ಕಂಟೆಂಟ್ ಇರುವ ಚಿತ್ರಗಳು ಇತ್ತೀಚಿಗೆ ಯಶಸ್ವಿಯಾಗಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿದೆ. ಅಂತಹದೇ ಉತ್ತಮ ಕಂಟೆಂಟ್‌ನೊಂದಿಗೆ ಕನ್ನಡಿಗರ ಮುಂದೆ ಬರುತ್ತಿದೆ ‘ಫಾರೆಸ್ಟ್’  (Forest Film) ಸಿನಿಮಾ. ಸದ್ಯ ಈ ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.

    ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್.ಎಂ ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಫಾರೆಸ್ಟ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ ‘ಓಡೋ ಓಡೋ’ ಹಾಡು ಬಿಡುಗಡೆಯಾಗಿತ್ತು. ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಹಾಡನ್ನು ಈಗಾಗಲೇ 11 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದರು. ಈ ಹಾಡಿಗೆ ಈಗ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಮಲ್ಟಿಸ್ಟಾರ್‌ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಫಾರೆಸ್ಟ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

    ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜೊತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದಾಗಿದೆ. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ ‘ಫಾರೆಸ್ಟ್’ ಚಿತ್ರಕ್ಕಿದೆ. ಇದನ್ನೂ ಓದಿ:ಚಿತ್ರೀಕರಣದ ವೇಳೆ ವರುಣ್ ಧವನ್ ಪಕ್ಕೆಲುಬಿಗೆ ಪೆಟ್ಟು

    ಚಿಕ್ಕಣ್ಣ (Chikkanna), ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ (Sharanya Shetty), ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಮುದ್ದಾದ ಹಾಡಾಗಿ ಬಂತು ನಗುವಿನ ಹೂಗಳ ಮೇಲೆ

    ಮುದ್ದಾದ ಹಾಡಾಗಿ ಬಂತು ನಗುವಿನ ಹೂಗಳ ಮೇಲೆ

    ವೆಂಕಟ್ ಭಾರದ್ವಾಜ್ (Venkat Bharadwaj) ನಿರ್ದೇಶನದ `ನಗುವಿನ ಹೂಗಳ ಮೇಲೆ’ (Naguvina Hoogala Mele) ಚಿತ್ರ ನಾಳೆ ಬಿಡುಗಡೆಗೊಳ್ಳಲಿದೆ. ತೆರೆಗಾಣುವ ಕಡೇ ಘಳಿಗೆಯವರೆಗೂ ಪ್ರೇಕ್ಷಕರನ್ನು ಬೆರಗಾಗಿಸುವ ಸಲುವಾಗಿ ಇದೀಗ ಮುದ್ದಾದ ಹಾಡೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಈಗಾಗಲೇ ನಗುವಿನ ಹೂಗಳ ಮೇಲೆ ಗಾಢ ನಿರೀಕ್ಷೆಗಳ ಇಬ್ಬನಿ ಮೂಡಿಕೊಂಡಿದೆ. ಅದನ್ನು ಮತ್ತಷ್ಟು ತೀವ್ರವಾಗಿಸುವ ನಿಟ್ಟಿನಲ್ಲಿ ಈ ಹಾಡು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಸದರಿ ಸಿನಿಮಾದಲ್ಲಿ ಪ್ರೇಮದ ನಾನಾ ಮಜಲುಗಳಿವೆ. ಅದರಲ್ಲೊಂದು ಭಾವದ ಅಭಿವ್ಯಕ್ತಿಯೆಂಬಂತೆ ಸದರಿ ಹಾಡನ್ನು ರೂಪಿಸಿದಂತಿದೆ.

    ಮುದ್ದು ಬೇಬಿ ಲವ್ ಯು ಬೇಬಿ ಅಂತ ಶುರುವಾಗುವ ಈ ಗೀತೆ ಲವ್ ಫ್ರಾನ್ ಮೆಹತಾ ಸಂಗೀತ ಸ್ಪರ್ಶದೊಂದಿಗೆ ಮೂಡಿ ಬಂದಿದೆ. ಕಿರಣ್ ನಾಗರಾಜ್ ಸಾಹಿತ್ಯ ಮತ್ತು ರೋನಿ, ಮೇಘನಾ ಕಠಸಿರಿಯಲ್ಲಿ ಮುದ್ದಾಗಿ ರೂಪುಗೊಂಡಿರುವ ಈ ಹಾಡು ಫಲಿಸಿದ ಪ್ರೇಮದ ಎಲ್ಲ ಭಾವಗಳನ್ನೂ ಸಶಕ್ತವಾಗಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ಜೀ ಮ್ಯೂಸಿಕ್ ಮೂಲಕ ಬಿಡುಗಡೆಗೊಂಡಿರುವ ಮುದ್ದು ಬೇಬಿ ಹಾಡು ಬಹು ಬೇಗನೆ ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ. ಇನ್ನೇನು ಪ್ರೇಮಿಗಳ ದಿನ ಹತ್ತಿರದಲ್ಲಿದೆ. ಆ ಹೊತ್ತಿಗೆಲ್ಲ ಈ ಹಾಡು ಸಮಸ್ತ ಪ್ರೇಮಿಗಳ ಫೇವರಿಟ್ ಆಗಿ ಬದಲಾಗುವ ಲಕ್ಷಣಗಳಿವೆ.

    ನಿರ್ದೇಶಕ ವೆಂಕಟ್ ಭಾರದ್ವಾಜ್ ಸಣ್ಣ ಸಣ್ಣ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಈ ಸಿನಿಮಾವನ್ನು ರೂಪಿಸಿದ್ದಾರೆ. ಅದರಲ್ಲಿಯೂ ಕಥೆಯ ಓಘಕ್ಕೆ ತಕ್ಕುದಾಗಿ ಹಾಡುಗಳನ್ನು ರೂಪಿಸಲು ಒಂದು ಅನ್ವೇಷಣೆಯನ್ನೇ ನಡೆಸಿದ್ದರಂತೆ. ಅದರ ಭಾಗವಾಗಿ ಪಂಜಾಬ್ ಮೂಲದ ಪ್ರಸಿದ್ಧ ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹತ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳ ಗಾಯಕರನ್ನೂ ಒಂದೆಡೆ ಕಲೆಹಾಕಿದ್ದಾರೆ. ಇಂಥಾದ್ದೊಂದು ಪರಿಶ್ರಮ, ಕನಸಿನ ಪ್ರತಿಫಲವಾಗಿಯೇ ನಗುವಿನ ಹೂಗಳ ಮೇಲೆ ಚಿತ್ರದ ಒಂದೊಂದು ಹಾಡುಗಳೂ ಒಂದೊಂದು ಬೆರಗು ಹೊತ್ತು ಬಂದಿವೆ. ಇದೀಗ ಬಿಡುಗಡೆಗೊಂಡಿರುವ ಹಾಡಿನಲ್ಲಿಯೂ ಅಂತಹ ಛಾಯೆಯಿದೆ.

     

    ಇದು ಪರಿಶುದ್ಧ ಪ್ರೇಮ ಕಥನದ ಭೂಮಿಕೆಯಲ್ಲಿ ತೆರೆದುಕೊಳ್ಳುವ ಬದುಕಿಗೆ ಹತ್ತಿರವಾದ ಕಥನ. ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅಭಿ ದಾಸ್ (Abhi Das) ಹಾಗೂ ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ‘ನಗುವಿನ ಹೂಗಳ ಮೇಲೆ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ತೆಲುಗು ನಿರ್ಮಾಪಕ

    ‘ನಗುವಿನ ಹೂಗಳ ಮೇಲೆ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ತೆಲುಗು ನಿರ್ಮಾಪಕ

    ಪ್ರೇಮಕಥಾನಕವೆಂಬುದು ಯಾವತ್ತಿದ್ದರೂ ಸಿನಿಮಾ ಫ್ರೇಮಿಗೆ ಫ್ರೆಶ್ ಆಗಿ ಒಗ್ಗುವಂಥಾ ಮಾಯೆ. ಆದರೆ, ನಿರ್ದೇಶಕರು ಯಾವ ರೀತಿಯ ಜಾಣ್ಮೆ ಅನುಸರಿಸುತ್ತಾರೆ? ಅದೆಷ್ಟು ಹೊಸತನದಲ್ಲಿ ಸಿನಿಮಾವನ್ನು ರೂಪಿಸಿದ್ದಾರೆಂಬುದರ ಮೇಲೆ ಪ್ರೇಕ್ಷಕರ ನಿರ್ಧಾರ ನಿಂತಿರುತ್ತೆ. ಅದರಲ್ಲಿಯೂ ಸದಾ ಹೊಸತನಗಳಿಗೆ ಹಾತೊರೆಯುತ್ತಾ, ಆ ಹಾದಿಯಲ್ಲಿಯೇ ಗೆದ್ದಿರೋ ವೆಂಕಟ್ ಭಾರದ್ವಾಜ್ (Venkat Bharadwaj) ಅವರು ಸಾರಥ್ಯ ವಹಿಸಿದ್ದಾರೆಂದ ಮೇಲೆ ನಿರೀಕ್ಷೆ ಮತ್ತಷ್ಟು ತೀವ್ರವಾಗೋದರಲ್ಲಿ ಅಚ್ಚರಿಯೇನಿಲ್ಲ. ಆ ಕಾರಣದಿಂದಲೇ ಗಮನ ಸೆಳೆದು, ಇದೇ ಫೆಬ್ರವರಿ 9ರಂದು ಬಿಡುಗಡೆಗೊಳ್ಳುತ್ತಿರುವ ಚಿತ್ರ `ನಗುವಿನ ಹೂಗಳ ಮೇಲೆ’.

    `ಆಮ್ಲೆಟ್, `ಕೆಂಪಿರ್ವೆ’ ಮುಂತಾದ ಸಿನಿಮಾಗಳ ಮೂಲಕ ತಮ್ಮದು ಭಿನ್ನ ಹಾದಿ ಎಂಬುದನ್ನು ಸಾಬೀತು ಪಡಿಸಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ `ನಗುವಿನ ಹೂಗಳ ಮೇಲೆ’ ನಿರೀಕ್ಷೆಗಳ ಮೆರವಣಿಗೆ ಶುರುವಾಗಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. `ಪಂಥಂ’, `ಬೆಂಗಾಲ್ ಟೈಗರ್’, `ಒಡೇಲ ರೈಲ್ವೇ ಸ್ಟೇಷನ್’ ಮುಂತಾದ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕರಾಗಿರುವ ಕೆ.ಕೆ ರಾಧಾ ಮೋಹನ್ (KK Radha Mohan) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಕೆ.ಕೆ ರಾಧಾ ಮೋಹನ್ ಅವರ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ `ನಗುವಿನ ಹೂಗಳ ಮೇಲೆ’ ಚಿತ್ರಕ್ಕೆ ಸಲ್ಲುತ್ತದೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆ ಪರಭಾಷಾ ಚಿತ್ರರಂಗದಲ್ಲಿಯೂ ಮಿಂಚುತ್ತಿರೋದರ ಸಂಕೇತ. ಕೆ.ಕೆ ರಾಧಾ ಮೋಹನ್ ಯಾವುದೇ ಸಿನಿಮಾವನ್ನು ಎಲ್ಲ ದಿಕ್ಕಿನಲ್ಲಿಯೂ ಪರಾಮರ್ಶಿಸಿ ನಿರ್ಮಾಣಕ್ಕಿಳಿಯುವವರು. ವೆಂಕಟ್ ಭಾರದ್ವಾಜ್ ಸಿದ್ಧಪಡಿಸಿಕೊಂಡಿದ್ದ ಕಥೆ, ಅದರಲ್ಲಿ ಮಿಂಚುತ್ತಿದ್ದ ಹೊಸತನಗಳನ್ನು ಕಂಡು ಥ್ರಿಲ್ ಆಗಿಯೇ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರಂತೆ. ಅಂಥಾ ನಂಬಿಕೆಯನ್ನು ಉಳಿಸಿಕೊಳ್ಳುವಂತೆ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂತೆ ಈ ಸಿನಿಮಾವನ್ನು ನಿರ್ದೇಶನ ಮಾಡಿರುವ ತುಂಬು ತೃಪ್ತಿ ವೆಂಕಟ್ ಭಾರಧ್ವಾಜ್ ಅವರಲ್ಲಿದೆ.

    ಹೊಸಾ ತೆರನಾದ ಪ್ರೇಮಕಥನವನ್ನೊಳಗೊಂಡಿರುವ ಚಿತ್ರ `ನಗುವಿನ ಹೂಗಳ ಮೇಲೆ’. ಇದರಲ್ಲಿ ಅಭಿದಾಸ್ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಸೀರಿಯಲ್ಲುಗಳ ಮೂಲಕ ಮನೆಮಾತಾಗಿರುವ ಅಭಿ ಪಾಲಿಗೆ ಒಂದೊಳ್ಳೆ ಪಾತ್ರವೇ ಸಿಕ್ಕಿದೆಯಂತೆ. ಇನ್ನು ಒಂದಷ್ಟು ಪಾತ್ರಗಳ ಮೂಲಕ ಸೆಳೆದುಕೊಂಡಿದ್ದ ಶರಣ್ಯಾ ಶೆಟ್ಟಿ (Sharanya Shetty) ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

    ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

    ಸಿ.ವಿ ಶಿವಶಂಕರ್ (C.v Shivashankar) ಕನ್ನಡ ಚಿತ್ರರಂಗ ಕಂಡ ಖ್ಯಾತ ಗೀತರಚನೆಕಾರರು. ನಟರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿಯೂ ಜನಪ್ರಿಯತೆ ಗಳಿಸಿದ್ದರು. ಮಿನುಗುತಾರೆ ಕಲ್ಪನಾ, ಮಂಜುಳಾ, ಉದಯ್ ಕುಮಾರ್, ನರಸಿಂಹರಾಜು, ತೂಗುದೀಪ್ ಶ್ರೀನಿವಾಸ್, ರಾಜೇಶ್ ಹೀಗೆ ಅವತ್ತಿನ ಘಟಾನುಘಟಿ ತಾರೆಯರಿಗೆ ಆ್ಯಕ್ಷನ್ ಕಟ್ ಹೇಳಿದವರು. ಮನೆಕಟ್ಟಿ ನೋಡು, ಪದವೀಧರ, ನಮ್ಮ ಊರು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟವರು. ಅಷ್ಟಕ್ಕೂ, ಇವತ್ತು ಸಿ.ವಿ ಶಿವಶಂಕರ್ ಅವರ ಬಗ್ಗೆ ಮಾತನಾಡೋದಕ್ಕೆ ಕಾರಣ ಅವರ ಪುತ್ರ ವೆಂಕಟ್ ಭಾರದ್ವಾಜ್.

    ವೆಂಕಟ್ ಭಾರದ್ವಾಜ್ (Venkat Bharadwaj)ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಸಿ.ವಿ ಶಿವಶಂಕರ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಐಟಿ ಕಂಪೆನಿಗಳಲ್ಲಿ ಸೇಲ್ಸ್ ಹೆಡ್ ಆಗಿ ಕೆಲಸ ಮಾಡಿಕೊಂಡು ನೂರಾರು ದೇಶ ಸುತ್ತಿರೋ ಇವರು, ಕೊನೆಗೆ ಸಿನಿಮಾ ಫೀಲ್ಡಿಗೆ ಬಂದಿಳಿದಿದ್ದಾರೆ. ತಂದೆಯಂತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಂಪಿರ್ವೆ, ಆಮ್ಲೆಟ್, ಎ ಡೇ ಇನ್ ದಿ ಸಿಟಿ, ಬಬ್ಲೂಷ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್, ಕೆಂಪಿರ್ವೆ ಚಿತ್ರಕ್ಕಾಗಿ ರಾಜ್ಯಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ‘ನಗುವಿನ ಹೂಗಳ ಮೇಲೆ’ ಎಂಬ ಪ್ರೇಮಕಥಾಹಂದರವುಳ್ಳ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

    ‘ಭಾಗ್ಯವಂತರು’ ಚಿತ್ರದ ಹಾಡಿನ ಚರಣದ ಸಾಲನ್ನ ಸಿನಿಮಾ ಶೀರ್ಷಿಕೆಯನ್ನಾಗಿಸಿದ ನಿರ್ದೇಶಕರು, ಅಣ್ಣಾವ್ರ ಸಾಕ್ಷಾತ್ಕಾರ ಸಿನಿಮಾದಿಂದ ಸ್ಪೂರ್ತಿ ಪಡೆದು ‘ನಗುವಿನ ಹೂಗಳ ಮೇಲೆ’ ಸಿನಿಮಾದ ಕಥೆ ಹೆಣೆದರಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನಿಜವಾದ ಪ್ರೀತಿ ಅಂದರೆ ಯಾವುದು? ಹೇಗಿರುತ್ತೆ ಅನ್ನೋದನ್ನ ತೆರೆಮೇಲೆ ಕಟ್ಟಿಕೊಟ್ಟಿರುವುದಾಗಿ ಹೇಳಿಕೊಂಡರು. ಸೆನ್ಸಾರ್ ಮಂಡಳಿಯಿಂದ ಕ್ಲೀನ್ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ. ಕಂಟೆಂಟ್, ಮೇಕಿಂಗ್, ಸಾಂಗ್ಸ್, ಆರ್ಟಿಸ್ಟ್‌ಗಳ ಪರ್ಫಾಮೆನ್ಸ್ ಎಲ್ಲವೂ ಅದ್ಭುತವಾಗಿರುವುದಾಗಿ ತಿಳಿಸಿದರು. ಇದನ್ನೂ ಓದಿ:ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರೆಡಿಯಾದ ರಾಧಿಕಾ ಪಂಡಿತ್

    ಇನ್ನೂ ‘ನಗುವಿನ ಹೂಗಳ ಮೇಲೆ’ ಚಿತ್ರ ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದು ಮಟ್ಟಿಗೆ ಸೌಂಡ್ ಮಾಡುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಪ್ರೇಮಿಗಳನ್ನ ರೀಚ್ ಆಗುವಲ್ಲಿ ಯಶಸ್ವಿ ಕೂಡ ಆಗಿದೆ. ಗೊತ್ತಿಲ್ಲ ಯಾರಿಗೂ, ಇರಲಿ ಬಿಡು ಈ ಜೀವ ನಿನಗಾಗಿ ಗೀತೆಗಳು ಚಿತ್ರಪ್ರೇಮಿಗಳ ಹೃದಯ ಗೆದ್ದಿವೆ. ಹೀರೋ ಅಭಿದಾಸ್, ಹೀರೋಯಿನ್ ಶರಣ್ಯಾ ಶೆಟ್ಟಿ (Sharanya Shetty) ಕಾಂಬಿನೇಷನ್ ಕಿಕ್ಕೇರಿಸುತ್ತಿದ್ದು, ಬಿಗ್ ಸ್ಕ್ರೀನ್ ಮೇಲೆ ಈ ಜೋಡಿ ನೋಡೋದಕ್ಕೆ ಯುವಪ್ರೇಮಿಗಳು ಮಾತ್ರವಲ್ಲ ಸಿನಿಮಾ ಪ್ರೇಮಿಗಳು ಕೂಡ ಕಾತುರದಿಂದ ಕಾಯ್ತಿದ್ದಾರೆ. ಇವರಿಬ್ಬರಿಗೂ ಇದು ಸ್ಪೆಷಲ್ ಸಿನಿಮಾ. ಯಾಕಂದ್ರೆ, ಅಭಿದಾಸ್ ಹಾಗೂ ಶರಣ್ಯಾ ಇಬ್ಬರು ಕೂಡ ಈ ಚಿತ್ರದಿಂದ ಸೋಲೋ ಹೀರೋ, ಹೀರೋಯಿನ್ ಆಗಿ ಪರಿಚಯ ಆಗ್ತಿದ್ದಾರೆ. ಹಾಡುಗಳ ಮೂಲಕವೇ ಚಿತ್ರಪ್ರೇಮಿಗಳನ್ನ ಅಟ್ರ‍್ಯಾಕ್ಟ್ ಮಾಡುವಲ್ಲಿ ಗೆಲುವು ಕಂಡಿದ್ದಾರೆ.

    ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಪ್ರಮೋದ್ ಮರವಂತೆ, ಕಬ್ಬಡಿ ನರೇಂದ್ರ ಬಾಬು, ಚಿದಂಬರ ನರೇಂದ್ರ, ಕಿರಣ್ ನಾಗರಾಜ್ ಸಾಹಿತ್ಯ ಗೀಚಿದ್ದಾರೆ. ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ ಸಂಯೋಜಿಸಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ. ಸಂಕಲನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ತ್ರಾಸಿ ಬೀಚ್, ಹುಲಿಕಲ್ ಘಾಟ್, ಮಾಸ್ತಿಗುಡಿ, ಶಿವಮೊಗ್ಗ, ತೀರ್ಥಹಳ್ಳಿ, ಮಲೆನಾಡು, ಮರವಂತೆ ಬೀಚ್ ಸೇರಿದಂತೆ ಹಲೆವೆಡೆ ‘ನಗುವಿನ ಹೂಗಳ ಮೇಲೆ’ ಸಿನಿಮಾ ಚಿತ್ರೀಕರಣಗೊಂಡಿದೆ.

    ಅಭಿದಾಸ್ (Abhidas) ಮತ್ತು ಶರಣ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗಾರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ. ಟಾಲಿವುಡ್‌ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರ ಮೂಡಿಬಂದಿದೆ. ಈ ಸಂಸ್ಥೆಯಲ್ಲಿ ನಿರ್ಮಾಣಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ. ಇದೇ ಫೆ.9ರಂದು ಈ ಚಿತ್ರ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.

  • ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ಔಟ್- ಚಿತ್ರತಂಡಕ್ಕೆ ಎ.ಹರ್ಷ ಸಾಥ್

    ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ಔಟ್- ಚಿತ್ರತಂಡಕ್ಕೆ ಎ.ಹರ್ಷ ಸಾಥ್

    ವೆಂಕಟ್ ಭಾರದ್ವಾಜ್ ನಿರ್ದೇಶನದ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಚಿತ್ರ ಇದೇ ಫೆ.9ರಂದು ರಿಲೀಸ್ ಈಗಾಗಲೇ ಹಾಡುಗಳ ಮೂಲಕ, ಒಟ್ಟಾರೆ ಕಥೆಯ ಒಂದಷ್ಟು ಸುಳಿವುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾ ಟ್ರೈಲರ್ ಅನ್ನು ಇಂದು (ಜ.29) ಖ್ಯಾತ ನಿರ್ದೇಶಕ ಎ.ಹರ್ಷ (A.Harsha) ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ:ರಜನಿ ಸಂಘಿ ಅಲ್ಲ: ಮಗಳ ಮಾತಿಗೆ ಅಪ್ಪನ ಪ್ರತಿಕ್ರಿಯೆ

    ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಎ.ಹರ್ಷ ಶುಭಕೋರಿದ್ದಾರೆ. ಈಗಾಲೇ ಒಂದಷ್ಟು ಭಿನ್ನ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ವೆಂಕಟ್ ಭಾರದ್ವಾಜ್. ಅವರೀಗ ‘ನಗುವಿನ ಹೂಗಳ ಮೇಲೆ’ ಚಿತ್ರದ ಮೂಲಕ ಪರಿಶುದ್ಧವಾದ ಪ್ರೇಮಕಥಾನಕದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಪ್ರೇಮ ಕಥನದ ಚಿತ್ರಗಳೆಂದರೇನೇ ಯಾವತ್ತಿಗೂ ಮುಸುಕಾಗದಂಥಾ ಮೋಹವೊಂದು ಪ್ರೇಕ್ಷಕರಲ್ಲಿರುತ್ತದೆ. ಅದನ್ನು ಮತ್ತಷ್ಟು ಮುದಗೊಳಿಸುವ ಲಕ್ಷಣಗಳಿರೋ ಈ ಸಿನಿಮಾ ಟ್ರೈಲರ್, ಮೂಲಕ ಈ ಚಿತ್ರದ ಸಾರವನ್ನು ಪ್ರೇಕ್ಷಕರ ಮುಂದಿಟ್ಟಿದೆ.

    ಕಿರುತೆರೆಯಲ್ಲಿ ಒಂದಷ್ಟು ಹೆಸರು ಮಾಡಿರುವ ಅಭಿದಾಸ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶರಣ್ಯಾ ಶೆಟ್ಟಿ (Sharanya Shetty) ನಾಯಕಿಯಾಗಿ ಜೊತೆಯಾಗಿದ್ದಾರೆ. ಎಲ್ಲ ವಯೋಮಾನದವರನ್ನೂ ತಾಕುವ ಗುಣ ಹೊಂದಿರುವ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧಾ ಮೋಹನ್ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದ ಗಾಯಕ ಜುಬಿನ್ ನೌಟಿಯಾಲ್

    ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯ್ಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ನಿರ್ದೇಶನ ಮತ್ತು ಚಂದನ್ ಪಿ. ಸಂಕಲನ ಈ ಚಿತ್ರಕ್ಕಿದೆ.

  • ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಮ್ಲೆಟ್, ಕೆಂಪಿರ್ವೆ ಖ್ಯಾತಿಯ ನಿರ್ದೇಶಕ ವೆಂಕಟ್ ಭಾರದ್ವಾಜ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಮತ್ತೊಂದು ಬಹು ನಿರೀಕ್ಷಿತ ಚಿತ್ರ ‘ನಗುವಿನ ಹೂಗಳ ಮೇಲೆ’. ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಿ ಸಿನಿಮಾವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ವೆಂಕಟ್ ಭಾರದ್ವಾಜ್. ಬಿಡುಗಡೆಯ ಸನಿಹದಲ್ಲಿರುವ ಚಿತ್ರತಂಡ ಸದ್ಯ ಹಿನ್ನೆಲೆ ಸಂಗೀತ ಯಶಸ್ವಿಯಾಗಿ ಮುಗಿಸಿದ ಸಂಭ್ರಮದಲ್ಲಿದೆ.

    ಚಿತ್ರದ ಸಂಗೀತ ನಿರ್ದೇಶಕ ಲವ್ ಪ್ರಾನ್ ಮೆಹತಾ ಲಂಡನ್ ನ Mellifluous ಸ್ಟುಡಿಯೋ ನಲ್ಲಿ ಚಿತ್ರದ ಹಿನ್ನೆಲೆ ಸಂಗೀತ, ಎಫೆಕ್ಟ್ಸ್, ಫೈನಲ್ ಮಿಕ್ಸಿಂಗ್ ಸುಸೂತ್ರವಾಗಿ ಮುಗಿಸಿದ್ದು 7.1 ಫೈನಲ್ ಔಟ್ ಪುಟ್ ದೊರೆತಿದೆ. ಔಟ್ ಪುಟ್ ಕಂಡು ನಿರ್ದೇಶಕ ವೆಂಕಟ್ ಭಾರದ್ವಾಜ್ ಹರುಷಗೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ನಡೆಸುತ್ತಿದೆ. ಇದೀಗ ಚಿತ್ರದ ಬ್ಯಾಗ್ರೌಂಡ್ ಸ್ಕೋರ್ ಅಂದುಕೊಂಡಂತೆ ಯಶಸ್ವಿಯಾಗಿರೋದು ಚಿತ್ರತಂಡದ ಸಂಭ್ರಮ ಹೆಚ್ಚಿಸಿದೆ. ಇದನ್ನೂ ಓದಿ:ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು? 

    ನಾಯಕ ಅಭಿಷೇಕ್ ರಾಮದಾಸ್, ನಾಯಕಿ ಶರಣ್ಯಾ ಶೆಟ್ಟಿ ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ನಡೆಸುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲ ರಾಜವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ರೋಮ್ಯಾಂಟಿಕ್  ಜೊತೆಗೆ ಆಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧಾ ಮೋಹನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಮೊದಲ ಕನ್ನಡ ಸಿನಿಮಾವಾಗಿದೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ,  ಪ್ರಮೋದ್ ಭಾರತಿಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ಚಿತ್ರಕ್ಕಿದೆ.

     

    Live Tv
    [brid partner=56869869 player=32851 video=960834 autoplay=true]