ದಾಳಿಯ ವೇಳೆ ಗೋಮಾಂಸ ಪತ್ತೆಯಾಗಿದೆ. ನಿಮ್ಮ ಕುಮ್ಮಕ್ಕಿನಿಂದಲೇ ಗೋವುಗಳ ಹತ್ಯೆ ನಡೆಯುತ್ತಿದೆ. ಧಮ್ ಇದ್ದರೆ ಇಲ್ಲಿಗೆ ಬಾರೋ ಎಂದು ಕಾಂಗ್ರೆಸ್ ಮುಖಂಡ ವಿಜಯ್ ಸಿಂಗ್‌ಗೆ ಸಲಗಾರ್ ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ತುಮಕೂರು ಬಳಿ ಭೀಕರ ಅಪಘಾತ – ಮೂವರು ಬೈಕ್ ಸವಾರರು ಸಾವು
ನಾನು ಇರುವವರೆಗೂ ಗೋವುಗಳ ಬಲಿ ಕೊಡಲು ಬಿಡಲ್ಲ. ಯಾರು ಯಾವುದಕ್ಕೆ ಭಯ ಪಡುವ ಅಗತ್ಯವಿಲ್ಲ. ಯಾರಿಗೂ ಹೆದರಿ ಕೆಲಸ ಮಾಡಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ.
ಬೀದರ್: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾನ, ಮರ್ಯಾದೆ ಇದ್ರೆ ಕೂಡಲೇ ಮಂಜುನಾಥರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಶಾಸಕ ಶರಣು ಸಲಗರ್(Sharanu Salagar) ಕಿಡಿಕಾರಿದರು.
ಬೀದರ್‌ನಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಸಿಂಧೂರ(Operation Sindoor) ಬಗ್ಗೆ ರೈತರು, ಕೂಲಿ ಕಾರ್ಮಿಕರು ಎಲ್ಲರಿಗೂ ಸಂತೋಷವಿದೆ. ಉಗ್ರವಾದವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಆಪರೇಷನ್ ಸಿಂಧೂರ ಮಾಡಿದೆ ಎಂದರು. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅಬ್‌ನಾರ್ಮಲ್ ಪರ್ಸನ್, ಕಾಂಗ್ರೆಸ್ ಸಸ್ಪೆಂಡ್ ಮಾಡ್ಬೇಕು: ಎನ್.ಮಹೇಶ್ ಆಗ್ರಹ
ಕಾಂಗ್ರೆಸ್ ಶಾಸಕರು ಮೂರ್ಖತನದ ಹೇಳಿಕೆ ಕೊಡುತ್ತಿದ್ದು, ಕಾಂಗ್ರೆಸ್‌ನ(Congress) ಮುಖವಾಡ ಕಳಚುತ್ತಿದೆ. ಇದು ಕೇವಲ ಶಾಸಕನ ಮಾತಲ್ಲ, ಇಡೀ ಕಾಂಗ್ರೆಸ್ ಪಕ್ಷದ ಹೇಳಿಕೆ. ಯಾಕಂದ್ರೆ, ಇದು ರಾಷ್ಟ್ರ ಕಟ್ಟುವ ಕೆಲಸವಾಗಿದ್ದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!
ಮುರ್ಖತನ, ದೇಶದ್ರೋಹದ ಹೇಳಿಕೆ ಕೊಟ್ಟಿರುವ ಕೊತ್ತೂರು ಮಂಜುನಾಥ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಂತಹ ದೇಶದ್ರೋಹಿ ಶಾಸಕರನ್ನ ಅಧಿವೇಶನದೊಳಗೆ ಕಾಲಿಡಲು ಬಿಡಲ್ಲ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಚಾರವಾಗಿ ಮಾತನಾಡಿ, ಯುದ್ಧ ಮಾಡಬೇಕಾದ್ರೆ ಇವರೆಲ್ಲರಿಗೂ ಲೈವ್ ತೋರಿಸಿ ಯುದ್ಧ ಮಾಡೋಕೆ ಆಗಲ್ಲ. ಪ್ರಿಯಾಂಕ್ ಖರ್ಗೆಯವರ ಹೇಳಿಕೆಯಲ್ಲ ಇಡೀ ಕಾಂಗ್ರೆಸ್ ಹೇಳಿಕೆಯಾಗಿದೆ. ಪ್ರಿಯಾಂಕ್ ಖರ್ಗೆಯವರಿಗೆ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಕೂಗೋ ಮನಸ್ಥಿತಿ ಇರೋರನ್ನ ಸಂಸತ್ ನಿಯೋಗದಲ್ಲಿ ಸೇರಿಸಬೇಕಾ: ಕರಂದ್ಲಾಜೆ
ಇದು ಸಿಂಧೂರ ಅಷ್ಟೇ, ಕೆಲವೇ ದಿನಗಳಲ್ಲಿ ಆಪರೇಷನ್ ಸಂಹಾರ ಮಾಡಲಾಗುತ್ತದೆ. ನನಗೂ ಆದೇಶ ಬಂದ್ರೆ ಗನ್ ಹಿಡಿದು ಯುದ್ಧಕ್ಕೆ ಹೋಗ್ತೀನಿ. ನನಗೆ ಯಾವುದೇ ತರಬೇತಿ ಬೇಡ. ಅನುಮತಿ ಕೊಟ್ರೆ ಪಾಕಿಸ್ತಾನ ವಿರುದ್ಧ ಮುಗಿ ಬೀಳುತ್ತೇವೆ ಎಂದು ಹೇಳಿದರು.
ಬೀದರ್: ಲೋಕೋಪಯೋಗಿ ಇಲಾಖೆ ಎಫ್‍ಡಿಎಗೆ ಕರೆ ಮಾಡಿ ಹತ್ತು ಸಾವಿರ ರೂ. ಲಂಚ ಪಡೆದು ನಮ್ಮವರ ಕೆಲಸ ಮಾಡಿಕೊಡಿ ಎಂದ ಶಾಸಕ ಶರಣು ಸಲಗರ್ (Sharanu Salagar) ಫೋನ್ ಕರೆಯ ಆಡಿಯೋ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶಾಸಕ ಸಲಗರ್ ಲೋಕೋಪಯೋಗಿ ಇಲಾಖೆ ಎಫ್‍ಡಿಎ ವೆಂಕಟರಾವ್ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ನಾನು ಲೆಕ್ಕಪತ್ರ ಶಾಖೆಯ ವೆಂಕಟರಾವ್ ಎಂದು ಎಫ್‍ಡಿಎ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಶಾಸಕರು, 10 ಸಾವಿರ ರೂ. ತೆಗೆದುಕೊಂಡು ಕೆಲಸ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಪ್ಪ-ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ
ಹೆಚ್ಚಿಗೆ ತೆಗೆದುಕೊಳ್ಳುವುದು ಬೇಡ, ಕಡಿಮೆ ತೆಗೆದುಕೊಳ್ಳುವುದು ಬೇಡ. ಅವರಿಗೆ ತೊಂದರೆ ಕೊಡುವುದೂ ಬೇಡ ಎಂದಿದ್ದಾರೆ. ಅಲ್ಲದೇ ಇದು ನಡೆಯದಿದ್ದರೆ ನಾನೇ ಅಲ್ಲಿಗೆ ಬರಬೇಕಾಗುತ್ತದೆ ಎಂದು ಅಧಿಕಾರಿಗೆ ಶಾಸಕ ಎಚ್ಚರಿಕೆ ನೀಡಿದ್ದಾರೆ. ಇದಿಷ್ಟು ವೈರಲ್ ಆಗಿರುವ ಆಡಿಯೋದಲ್ಲಿ ಇದೆ.
ಬೀದರ್: ಗೋ ಹತ್ಯೆ ತಡೆಯಲು ಹೋದಾಗ ಅನ್ಯ ಕೋಮಿನ ವ್ಯಕ್ತಿ ಜೊತೆ ಕಿರಿಕ್ ವಿಚಾರವಾಗಿ ಗುರುವಾರ ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮನೆಯ ಮಾಲೀಕನ ಮಗ ಮೇಹರಾಜ್ ಇನಾಮುಲ್ಲಾಖಾನ್ ಅವರು ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು ದೂರಿನ್ವಯ ಬಸವಕಲ್ಯಾಣ ನಗರ ಠಾಣೆಯಲ್ಲಿ (Basavakalyan Police Station) ಎಫ್‌ಐಆರ್ ದಾಖಲಾಗಿದೆ.
ಬಕ್ರೀದ್ ಹಬ್ಬದಂದು ಕುರ್ಬಾನಿ ಕೊಡುತ್ತಿದ್ದಾಗ ಮನೆಗೆ ಬಂದು ಶಾಸಕರು ಮತ್ತು ಅವರ ಬೆಂಬಲಿಗರು ಧಮ್ಮಿ ಹಾಕಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ. ಶಾಸಕ ಶರಣು ಸಲಗರ್ ಹಾಗೂ ಅವರ ಜೊತೆ ಬಂದಿದ್ದ 15-25 ಜನರು ನಮ್ಮ ಮನೆಯ ಬಳಿ ಬಂದು ಕಿರುಚಾಡಿದ್ದು ಅದು ಹೇಗೆ ಕುರ್ಬಾನಿ ಕೊಡುತ್ತೀರಿ ನೋಡೋಣ, ಕಲ್ಯಾಣದಲ್ಲಿ ನಿಮ್ಮದು ಜಾಸ್ತಿಯಾಗಿದ್ದು ನಾವು ಏನು ಎಂದು ತೋರಿಸುತ್ತೇವೆ ಎಂದು ನಮ್ಮ ಹಾಗೂ ನಮ್ಮ ತಂದೆಗೆ ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ
ಜುಲೈ 1 ರಂದು ಮನೆಯಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಕರೆ ಬಂದಾಗ ಅದನ್ನು ತಡೆಲು ಶಾಸಕರು ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಮನೆಯ ಮಾಲೀಕ ಶಾಸಕರನ್ನು ಒಳಗಡೆ ಬಿಡದಿದ್ದಕ್ಕೆ ಇಬ್ಬರ ಮಧ್ಯೆ ಕಿರಿಕ್ ಆಗಿತ್ತು. ಅಂದು ಶಾಸಕ ಶರಣು ಸಲಗರ್ ನೀಡಿದ ದೂರಿನ್ವಯ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಶಾಸಕ ಸಲಗರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಮನೆಯ ಮಾಲೀಕನ ಮಗ ದೂರು ನೀಡಿದ್ದಾರೆ. ಇದನ್ನೂ ಓದಿ: KSRTC ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ – ಚಲುವರಾಯಸ್ವಾಮಿ ಸ್ಪಷ್ಟನೆ
ಬೀದರ್: ಬಿಜೆಪಿ ಶಾಸಕ (BJP MLA) ರೊಬ್ಬರು ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ.
ಶ್ರೀರಾಮನ ನವಮಿಯಂದು ಬಿಜೆಪಿ ಶಾಸಕ ಮಾಡಿಕೊಂಡಿರುವ ಎಡವಟ್ಟಿನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮೂಲಕ ಶಾಸಕರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶ್ರೀರಾಮ(Shri Rama) ನಿಗೆ ಅವಮಾನ ಮಾಡಿದ್ರಾ ಎಂಬ ಪ್ರಶ್ನೆ ಹುಟ್ಟಿದೆ.
ಬಸವಕಲ್ಯಾಣದಲ್ಲಿ ನಡೆದ ಶ್ರೀರಾಮನ ಶೋಭಾಯಾತ್ರೆ ವೇಳೆ ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ಅವರು ಶ್ರೀರಾಮನ ಎಡಗಡೆಯ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿ ಪೋಸ್ ಕೊಟ್ಟಿದ್ದಾರೆ. ಈ ದೃಶ್ಯವನ್ನು ನೆರೆದಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಶಾಸಕರ ನಡೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಎಡವಟ್ಟು ಮಾಡಿಕೊಂಡ ಶಾಸಕರ ವಿರುದ್ಧ ಶ್ರೀರಾಮನ ಭಕ್ತ ಅಸಮಾಧಾನ ಹೊರಹಾಕಿದ್ದು, ಬಸವಕಲ್ಯಾಣವನ್ನು ಬಿಡದ ಶಾಸಕರು ಶ್ರೀರಾಮನನ್ನು ಬಿಟ್ಟಿಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ
ಬೀದರ್: ಕಾಂಗ್ರೆಸ್ (Congress) ನಾಯಕ ಬಾಬು ಹೊನ್ನಾ (Babu Honna Naik) ಮಾತಿಗೆ ತೀವ್ರ ಅಸಮಾಧಾನಗೊಂಡು ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ಸಭೆ ಮಧ್ಯದಿಂದಲೇ ಹೊರಟು ಹೋದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾಮೂನಾಯಕ್ ತಾಂಡದಲ್ಲಿ ನಡೆದಿದೆ.
ನಾಯಕನ ಮಾತಿನಿಂದ ಅಸಮಾಧಾನಗೊಂಡ ಶಾಸಕರು ವೇದಿಕೆಯಿಂದ ಇಳಿದು ಹೊರಟು ಹೋದರು. ಈ ವೇಳೆ ಈ ಬಾರಿ ಶಾಸಕರು ಹೋಗುವವರಿದ್ದಾರೆ. ಹೋಗಲಿ ಬಿಡಿ, ಇಂತಹವರು ಏನು ಮಾಡುತ್ತಾರೆ ಎಂದು ಬಾಬು ಹೊನ್ನಾ ನಾಯಕ ಶಾಸಕರಿಗೆ ಟಾಂಗ್ ನೀಡಿದರು.