Tag: ಶರಣು

  • ಹುಡ್ಗಿ ಎದ್ರು ಗನ್ ತೋರಿಸಿ ಶೋ ಕೊಟ್ಟಿದ್ದ ಬಿಎಸ್‍ಪಿ ಮುಖಂಡನ ಪುತ್ರ ನ್ಯಾಯಾಲಯಕ್ಕೆ ಶರಣು!

    ಹುಡ್ಗಿ ಎದ್ರು ಗನ್ ತೋರಿಸಿ ಶೋ ಕೊಟ್ಟಿದ್ದ ಬಿಎಸ್‍ಪಿ ಮುಖಂಡನ ಪುತ್ರ ನ್ಯಾಯಾಲಯಕ್ಕೆ ಶರಣು!

    ನವದೆಹಲಿ: ಗನ್ ಹಿಡಿದು ಯುವತಿ ಹಾಗೂ ಆಕೆಯ ಬಾಯ್ ಫ್ರೆಂಡ್ ಜೊತೆ ಪುಂಡಾಟ ಮೆರೆದಿದ್ದ ಬಿಎಸ್‍ಪಿ ಮಾಜಿ ಸಂಸದ ರಾಕೇಶ್ ಪಾಂಡೆಯ ಪುತ್ರ ಆಶಿಶ್ ಪಾಂಡೆ ನ್ಯಾಯಾಲಯಕ್ಕೆ ಶರಣನಾಗಿದ್ದಾನೆ.

    ನ್ಯಾಯಾಲಯಕ್ಕೆ ಶರಣಾದ ಬಳಿಕ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಆಶಿಶ್ ಪಾಂಡೆ, ಪೊಲೀಸರು ದೇಶದಾದ್ಯಂತ ನನ್ನನ್ನು ಭಯೋತ್ಪಾದಕನಂತೆ ಬಿಂಬಿಸಿದ್ದಾರೆ. ಇದಕ್ಕೆ ಅವರು ಹೊರಡಿಸಿರುವ ನೋಟಿಸ್ ಸಾಕ್ಷಿಯಾಗಿದೆ. ನಿಮಗೆ ಅಷ್ಟು ಅನುಮಾನವಿದ್ದರೆ ಹೋಟಿಲ್ ನ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿ, ಯಾರು ಮಹಿಳೆಯರ ಶೌಚಾಲಯಕ್ಕೆ ಹೋದರು, ಯಾರು ಯಾರನ್ನು ನಿಂದಿಸಿದರು ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾನೆ.

    ನಾನು ನನ್ನ ರಕ್ಷಣೆಗಾಗಿ ಪಿಸ್ತೂಲನ್ನು ಹೊಂದಿದ್ದೇನೆ. ಅದನ್ನು ಬೆದರಿಸುವುದಕ್ಕೆ ಬಳಕೆ ಮಾಡಿಲ್ಲ ಎಂದು ಹೇಳುವ ಮೂಲಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ. ನ್ಯಾಯಾಲಯಕ್ಕೆ ಆಶಿಶ್ ಪಾಂಡೆಯನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

    ಸಾರ್ವಜನಿಕ ಪ್ರದೇಶದಲ್ಲಿ ಗನ್ ಹಿಡಿದು ಪುಂಡಾಟ ನಡೆಸಿದ್ದಕ್ಕೆ, ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು. ಪೊಲೀಸರು ಆಶಿಶ್‍ಗೆ ಸಂಬಂಧಪಟ್ಟ ದೆಹಲಿ ಹಾಗೂ ಲಕ್ನೋದ ಸ್ನೇಹಿತರನ್ನು ಸಹ ವಿಚಾರಣೆಗೆ ಒಳಪಡಿಸಿತ್ತು.

    ಏನಿದು ಘಟನೆ?
    ಆಶಿಶ್ ಪಾಂಡೆ ಅಕ್ಟೋಬರ್ 14ರ ಭಾನುವಾರ ರಾತ್ರಿ ದಕ್ಷಿಣ ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಯುವ ಜೋಡಿ ಹಾಗೂ ಆಶಿಶ್ ಪಾಂಡೆ ನಡುವೆ ಜಗಳ ಏರ್ಪಟಿತ್ತು. ಈ ವೇಳೆ ಸಿಟ್ಟಿಗೆದ್ದ ಆಶಿಶ್ ತಮ್ಮ ಬಳಿಯಿದ್ದ ಗನ್ ತೆಗೆದು ಯುವತಿ ಹಾಗೂ ಆತನ ಪ್ರಿಯಕರನಿಗೆ ಬೆದರಿಸಿದ್ದರು. ಆಶಿಶ್ ಗನ್ ತೆಗೆದು ರಂಪಾಟ ನಡೆಸುತ್ತಿದ್ದನ್ನು ಕಂಡ ಹೋಟೆಲ್‍ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿ ಕಳುಹಿಸಿದ್ದರು.

    ಹೋಟೆಲ್ ಸಿಬ್ಬಂದಿ ತಕ್ಷಣ ಎಚ್ಚತ್ತುಕೊಂಡಿದ್ದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿತ್ತು. ಅಲ್ಲದೇ ಆಶಿಶ್ ಪಾಂಡೆ ಗನ್ ಹಿಡಿದು ಪುಂಡಾಟ ಮೆರೆದ 1 ನಿಮಿಷಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತುಕೊಂಡಿದ್ದ ದೆಹಲಿ ಪೊಲೀಸರು, ಸಾರ್ವಜನಿಕ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತೋರಿ ದರ್ಪ ಮೆರೆದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

    https://twitter.com/rajshekharTOI/status/1052068745319931904

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತುಮಕೂರು ಮಾಜಿ ಮೇಯರ್ ಹತ್ಯೆ: ಆರೋಪಿಗಳು ಪೊಲೀಸರಿಗೆ ಶರಣು

    ತುಮಕೂರು ಮಾಜಿ ಮೇಯರ್ ಹತ್ಯೆ: ಆರೋಪಿಗಳು ಪೊಲೀಸರಿಗೆ ಶರಣು

    ಚಿಕ್ಕಬಳ್ಳಾಪುರ: ತುಮಕೂರಿನ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದ ಮೂಲ ರೂವಾರಿಯಾಗಿದ್ದ ರೌಡಿಶೀಟರ್ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ಹಾಗೂ ಆತನ ಸಹಚರರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

    ಭಾನುವಾರ ತುಮಕೂರು ನಗರದ ಬಟವಾಡಿ ಸೇತುವೆ ಬಳಿ ಬೆಳ್ಳಂಬೆಳಗ್ಗೆ ಮಾಜಿ ಮೇಯರ್ ಗಡ್ಡರವಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಸುಜಯ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಪೊಲೀಸರು ಸಹ ಸುಜಯ್ ಹಾಗೂ ಆತನ ಸಹಚರರೇ ಹತ್ಯೆ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಆರೋಪಿಗಳಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ರಾಜಕಾರಣಿಗಳ ಒತ್ತಡದಿಂದ ಸುಜಯ್ ಮೇಲೆ ಎನ್‍ಕೌಂಟರ್ ಮಾಡುವ ಸುದ್ದಿಯೂ ಸಹ ಹಬ್ಬಿತ್ತು.

    ಪೊಲೀಸರ ಎನ್‍ಕೌಂಟರ್ ನಿಂದ ತಪ್ಪಿಸಿಕೊಳ್ಳಲು ಸುಜಯ್ ಹಾಗೂ ಆತನ ಸಹಚರರು ತಲೆ ಮರೆಸಿಕೊಂಡಿದ್ದರು. ಅಲ್ಲದೇ ಆರೋಪಿಗಳ ಬಲೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನು ಸಹ ರಚಿಸಿದ್ದರು. ಇದಲ್ಲದೇ ಸೋಮವಾರ ಆರೋಪಿಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎನ್ನುವ ಕಾರಣದಿಂದ ಪೊಲೀಸರು ನ್ಯಾಯಾಲಯದ ಆವರಣದಲ್ಲಿ ಕಾದು ಕುಳಿತಿದ್ದರು. ಆದರೆ ಇಂದು ಸುಜಯ್ ಸೇರಿದಂತೆ ಇತರೆ ಆರೋಪಿಗಳು ಸ್ವತಃ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

    ಏನಿದು ಪ್ರಕರಣ?
    ಭಾನುವಾರ ಬೆಳ್ಳಂಬೆಳಗ್ಗೆ 8 ಗಂಟೆಯ ಸುಮಾರಿಗೆ ರವಿ ಬಟವಾಡಿ ಸೇತುವೆ ಬಳಿ ಟೀ ಕುಡಿಯುತ್ತಾ ನಿಂತಿದ್ದರು. ಈ ವೇಳೇ ಟಾಟಾ ಏಸ್‍ನಲ್ಲಿ ಬಂದಿದ್ದ 7 ಜನ ದುಷ್ಕರ್ಮಿಗಳು ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಸಿದರೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರವಿಯ ತಲೆಗೆ ಹೊಡೆದಿದ್ದಾರೆ. ಮಾರಕಾಸ್ತ್ರಗಳ ದಾಳಿಯಿಂದಾಗಿ ತಲೆ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ರವಿ ಸಾವನ್ನಪ್ಪಿದ್ದರು. ರವಿ ಸಾವನ್ನಪ್ಪುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು.

    ಈ ಹಿಂದೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ರವಿ, ಕಳೆದ 10 ವರ್ಷಗಳಿಂದ ಜೆಡಿಎಸ್ ಪಕ್ಷ ಕಾರ್ಯಕರ್ತನಾಗಿದ್ದರು. ಕಳೆದ 6 ತಿಂಗಳ ಹಿಂದೆಯಷ್ಟೇ ಜೆಡಿಎಸ್‍ನಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2015 ರಲ್ಲಿ ಹಟ್ಟಿ ಮಂಜಣ್ಣ ಕೊಲೆ ನಡೆದಿದ್ದು, ಅದರಲ್ಲಿ ರವಿಯ ಕೈವಾಡವಿತ್ತು. ಹೀಗಾಗಿ ಹಟ್ಟಿ ಮಂಜನ ಸಹಚರರೇ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲಿ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ ರೈ ಬೆಂಬಲಿಗ ಪೊಲೀಸರಿಗೆ ಶರಣು

    ನಡುರಸ್ತೆಯಲ್ಲಿ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ ರೈ ಬೆಂಬಲಿಗ ಪೊಲೀಸರಿಗೆ ಶರಣು

    ಮಂಗಳೂರು: ಹಲವು ದಿನಗಳಿಂದ ತಲೆ ಮರಿಸಿಕೊಂಡಿದ್ದ ಮಾಜಿ ಸಚಿವ ರಮಾನಾಥ್ ರೈ ಆಪ್ತ, ತುಳು ನಟ ಸುರೇಂದ್ರ ಮಂಗಳೂರು ಡಿಸಿಐಬಿ ಪೊಲೀಸರಿಗೆ ಶರಣಾಗಿದ್ದಾನೆ.

    ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ನಟ ಸುರೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಟನೆಯ ಬಳಿಕ ಸುರೇಂದ್ರ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಸದ್ಯ ಬಂಟ್ವಾಳ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಇಂದು ಸಂಜೆ ಶರಣಾಗಿರುವ ಸುರೇಂದ್ರರನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

    ಏನಿದು ಘಟನೆ:
    ಬಂಟ್ವಾಳ ಪೇಟೆ ಬಳಿಯ ಬಡ್ಡಕಟ್ಟೆ ಎಂಬಲ್ಲಿ ಜೂನ್ 21ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿರುವ ಬೀದಿ ಕಾಳಗದಲ್ಲಿ ರಮಾನಾಥ ರೈ ಆಪ್ತ ಸುರೇಂದ್ರ, ತಲ್ವಾರ್ ಹಿಡಿದು ಕೊಲೆಗೆ ಯತ್ನಿಸಿದ್ದ. ಈ ಘಟನೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಸುರೇಂದ್ರ ತಲ್ವಾರ್ ಹಿಡಿದು ಬಿಜೆಪಿ ಕಾರ್ಯಕರ್ತರನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿತ್ತು.

    ಘಟನೆಯಲ್ಲಿ ಗಣೇಶ್ ಮತ್ತು ಪುಷ್ಪರಾಜ್ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದರು. ಅಂದಹಾಗೇ ಸುರೇಂದ್ರ ಈ ಹಿಂದೆ ಎರಡು ತುಳು ಸಿನಿಮಾಗಳಲ್ಲಿ ನಟಿಸಿದ್ದು, ತುಳು ಸಿನಿಮಾ ರಂಗದ ಕಲಾವಿದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಅಲ್ಲದೆ, ಮಂಗಳೂರು ಮತ್ತು ಬಂಟ್ವಾಳದಲ್ಲಿ ಹಣದ ವ್ಯವಹಾರ ನಡೆಸುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದನು ಎಂಬುದಾಗಿ ತಿಳಿದುಬಂದಿತ್ತು.

    https://www.youtube.com/watch?v=BD46Vi6guss

  • ಅಪ್ಪ ಹೇಳಿದ 1ಗಂಟೆಯಲ್ಲೇ ಮಗ ಸರೆಂಡರ್ – ನಲಪಾಡ್‍ಗೆ ಜ್ಯೂಸ್ ನೀಡಿ ರಾಜಮರ್ಯಾದೆ ಕೊಟ್ಟ ಪೊಲೀಸರು!

    ಅಪ್ಪ ಹೇಳಿದ 1ಗಂಟೆಯಲ್ಲೇ ಮಗ ಸರೆಂಡರ್ – ನಲಪಾಡ್‍ಗೆ ಜ್ಯೂಸ್ ನೀಡಿ ರಾಜಮರ್ಯಾದೆ ಕೊಟ್ಟ ಪೊಲೀಸರು!

    ಬೆಂಗಳೂರು: ಪ್ರಭಾವಿ ಶಾಸಕ ಹ್ಯಾರಿಸ್ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ನ ಗೂಂಡಾಗಿರಿ ಪ್ರಕರಣ ಸಂಬಂಧ ಕಳೆದ 36 ಗಂಟೆಗಳಿಂದ ತಲೆ ಮರೆಸಿಕೊಂಡಿದ್ದ ನಲಪಾಡ್‍ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ಹ್ಯಾರಿಸ್‍ರ ಶಾಂತಿನಗರ ನಿವಾಸಕ್ಕೆ ಅಶೋಕನಗರ ಪೊಲೀಸರು ಭೇಟಿ ಹುಟುಕಾಟ ನಡೆಸಿದ್ರು. ಈ ವೇಳೆ ನನ್ನ ಮಗನಿಗೆ ಶರಣಾಗಲು ಹೇಳಿದ್ದೇನೆ ಅಂತ ಶಾಸಕರು ಹೇಳಿದ್ದರು. ಶಾಸಕರು ಮಾತನಾಡಿದ ಕೇವಲ 1 ಗಂಟೆಯಲ್ಲಿ ವಿವಿಐಪಿ ಗೂಂಡಾ ಮಗ ನಲಪಾಡ್‍ನನ್ನು ಕಬ್ಬನ್‍ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ರಾಜ ಮರ್ಯಾದೆ ಕೊಟ್ಟು ಕರೆದುಕೊಂಡು ಬಂದಿದ್ದಾರೆ. ಬಳಿಕ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಎದುರೇ ಕುಳ್ಳಿರಿಸಿ ನೋಡಲು ಟಿವಿ, ಕುಡಿಯಲು ಜ್ಯೂಸ್ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

    ಹ್ಯಾರಿಸ್ ಮನೆಯಿಂದ ಹೊರಬಂದ ಕಾರಿನಲ್ಲೇ ನಲಪಾಡ್ ಠಾಣೆ ಕಡೆ ತೆರಳಿದ್ದ ಎನ್ನಲಾಗಿದೆ. ಹಾಗಾದ್ರೆ ಬೆಳಗ್ಗೆ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದ್ದು ಸುಳ್ಳಾ..? ಮಗ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಬೆಳಗ್ಗೆ ಕಥೆ ಕಟ್ಟಿದ್ದ ಹ್ಯಾರಿಸ್ ಗುಟ್ಟಾಗಿ ಮಗನನ್ನು ಠಾಣೆಗೆ ಕಳಿಸಿ ಶರಣಾಗುವಂತೆ ಸೂಚಿಸಿದ್ರಾ..? ಎಂಬ ಅನುಮಾನ ಕಾಡ್ತಿದೆ. ಇದನ್ನೂ ಓದಿ: ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್

    ಎಲ್ಲಿದ್ದ ನಲಪಾಡ್?: ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಸಂಬಂಧ ಕೇಸ್ ದಾಖಲಾಗುತ್ತಿದ್ದಂತೆ ನಲಪಾಡ್ ಎಸ್ಕೇಪ್ ಆಗಿದ್ದು, ಕಬ್ಬನ್‍ಪಾರ್ಕ್ ಠಾಣೆ ಕೂಗಳತೆಯಲ್ಲೇ ಅಡಗಿಕೊಂಡಿದ್ದನು. ಯುಬಿ ಸಿಟಿ ಪಕ್ಕದಲ್ಲಿರುವ ಐಷಾರಾಮಿ 7 ಸ್ಟಾರ್ ಹೋಟೆಲ್‍ನ ರೂಂ ನಂಬರ್ 882 ನಲ್ಲಿ ಯಾವುದೇ ಭಯವಿಲ್ಲದೇ ಪಾರ್ಟಿಯೊಂದಲ್ಲಿ ಪಾಲ್ಗೊಂಡಿದ್ದನು. ಇದೀಗ ಅಪ್ಪ ಮಾಧ್ಯಮದ ಮುಂದೆ ಮಾತನಾಡಿದ ಕೇವಲ ಒಂದು ಗಂಟೆಯಲ್ಲಿಯೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿರೋ ನಲಪಾಡ್ ವಿರುದ್ಧ ಸೆಕ್ಷನ್ 307 ಅಡಿ (ಕೊಲೆ ಯತ್ನ) ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂದು ಆರೋಪಿ ನಲಪಾಡ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹ್ಯಾರಿಸ್ ಪುತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸರೇ ನೇರ ಹೊಣೆ: ರಾಮಲಿಂಗಾ ರೆಡ್ಡಿ

    ಯುವಕನ ಮೇಲೆ ರೆಸ್ಟೊರೆಂಟ್ ನಲ್ಲಿ ಹಲ್ಲೆ ನಡೆಸಿದ ಬಳಿಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದನು. ಈ ಕುರಿತು ಇಂದು ಬೆಳಗ್ಗೆ ಶಾಸಕ ಹ್ಯಾರಿಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದನು. ನಿನ್ನೆ ರಾತ್ರಿ ಅವ್ನ ಅಮ್ಮನಿಗೆ ಫೋನ್ ಮಾಡಿದ್ದನು. ಆಗ ಸರೆಂಡರ್ ಆಗುವಂತೆ ನಾನೇ ಮಗನಿಗೆ ಹೇಳಿರುವುದಾಗಿ ತಿಳಿಸಿದ್ದರು.

    https://www.youtube.com/watch?v=aQxY3U–B2g