Tag: ಶರಣಪ್ರಕಾಶ ಪಾಟೀಲ್

  • ನೀಟ್ ಸೀಟು – ದಲ್ಲಾಳಿಗಳ ಮೋಸದ ಜಾಲಕ್ಕೆ ಬಲಿಯಾಗಬೇಡಿ: ಶರಣಪ್ರಕಾಶ್ ಪಾಟೀಲ್

    ನೀಟ್ ಸೀಟು – ದಲ್ಲಾಳಿಗಳ ಮೋಸದ ಜಾಲಕ್ಕೆ ಬಲಿಯಾಗಬೇಡಿ: ಶರಣಪ್ರಕಾಶ್ ಪಾಟೀಲ್

    ಕಲಬುರಗಿ: ವೈದ್ಯರಾಗಬೇಕೆಂಬ ಭವ್ಯ ಭವಿಷ್ಯದ ಕನಸು ಹೊತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೋಸದ ಜಾಲಕ್ಕೆ ಬೀಳಬಾರದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Sharanprakash Patil) ಕರೆ ನೀಡಿದ್ದಾರೆ.

    ಈ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಅತ್ಯುತ್ತಮವಾಗಿ ಓದಿ, ಪರೀಕ್ಷೆ ಬರೆದಿರುವ ಆಕಾಂಕ್ಷಿಗಳು, ಸೀಟು ಪಡೆಯಲೇಬೇಕು ಎಂಬ ಆತಂಕದಿಂದ ಮೋಸದ ಜಾಲಕ್ಕೆ ಬೀಳಬಾರದು. ವೈದ್ಯಕೀಯ ಸೀಟು ಕೊಡಿಸುತ್ತೇವೆ. ಆ ಕಾಲೇಜಿನಲ್ಲಿ ಸೀಟು ಸಿಗುತ್ತೆ ನಿಮಗೆ, ನಮಗೆ ಅವರು ಗೊತ್ತಿದ್ದಾರೆ. ಇವರು ಗೊತ್ತಿದ್ದಾರೆ ಎಂದು ಹೇಳಿ ಸೀಟು ಕೊಡಿಸುವ ಭರವಸೆ ನೀಡಿ ಮರಳು ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಲತ್ತಗಿರಿ | ಪ್ರವಾಸಿಗರ ಕಾರಿನ ಮೇಲೆ ಬಿದ್ದ ಬೃಹತ್ ಮರ – ತಪ್ಪಿದ ಅನಾಹುತ

    ನೀಟ್ ಫಲಿತಾಂಶಗಳು ಈಗಾಗಲೇ ಪ್ರಕಟವಾಗಿವೆ. ಕರ್ನಾಟಕದಲ್ಲಿ 1,47,782 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 1,42,369 ವಿದ್ಯಾರ್ಥಿಗಳು ಹಾಜರಾಗಿದ್ದರು, ಈ ಪೈಕಿ 83,582 ಅರ್ಹತೆ ಪಡೆದುಕೊಂಡಿದ್ದಾರೆ. ಹೇಗಾದರೂ ಮಾಡಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಪಡೆಯಬೇಕು ಎಂಬ ಆತುರಕ್ಕೆ ಬರಬೇಡಿ. ನಿಮ್ಮ ಆತಂಕವನ್ನು ದುರುಪಯೋಗಪಡಿಸಿಕೊಳ್ಳಲು ಮಧ್ಯವರ್ತಿಗಳು ಕಾದಿರುತ್ತಾರೆ. ಅವರ ಮೋಸದ ಜಾಲಕ್ಕೆ ಬೀಳಬೇಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಅಧ್ಯಯನ ಪ್ರವಾಸ: ಮಲೇಶಿಯಾದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್

    ಕೆಇಎಯಿಂದ ಸೀಟು ಹಂಚಿಕೆ
    ನಮ್ಮ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದಲೇ ಸೀಟುಗಳ ಹಂಚಿಕೆ ಕ್ರಮಬದ್ಧವಾಗಿ ಆಗುತ್ತದೆ. ಅದರಂತೆ ನಿಯಮಗಳನ್ನು ಪಾಲಿಸಿ. ವಿದ್ಯಾರ್ಥಿಗಳು ಮತ್ತು ಪೋಷಕರು ಇದನ್ನು ತಪ್ಪದೇ ತಿಳಿದುಕೊಳ್ಳಬೇಕು. ಅತ್ಯುತ್ತಮ ಸಾಧನೆ ಮಾಡಿ, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವೂ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್

    ದಲ್ಲಾಳಿಗಳಿಗೆ ಎಚ್ಚರಿಕೆ
    ಸೀಟು ಕೊಡಿಸುತ್ತೇನೆಂದು ವಿದ್ಯಾರ್ಥಿಗಳು ಅಥವಾ ಪೋಷಕರ ದಿಕ್ಕು ತಪ್ಪಿಸಿ ಮೋಸ ಮಾಡಿದವರು ಕಂಡುಬಂದರೆ, ಅಂತಹ ದಲ್ಲಾಳಿಗಳನ್ನು ಪತ್ತೆ ಹಚ್ಚಿ, ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜಾರಿಗೊಳಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ. ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

  • NEET ಪರೀಕ್ಷೆ ಅಕ್ರಮ ಕೇಸ್‌: ಇದು ಮೋದಿ ಸರ್ಕಾರದ ದೊಡ್ಡ ಹಗರಣ: ಶರಣಪ್ರಕಾಶ ಪಾಟೀಲ್

    NEET ಪರೀಕ್ಷೆ ಅಕ್ರಮ ಕೇಸ್‌: ಇದು ಮೋದಿ ಸರ್ಕಾರದ ದೊಡ್ಡ ಹಗರಣ: ಶರಣಪ್ರಕಾಶ ಪಾಟೀಲ್

    ರಾಯಚೂರು: ನೀಟ್ ಪರೀಕ್ಷಾ ಅಕ್ರಮ ಪ್ರಕರಣ (NEET UG 2024 Row) ಮೋದಿ ಸರ್ಕಾರದ ಬಹುದೊಡ್ಡ ಹಗರಣ. ಇದರಲ್ಲಿ ಬಹಳ ದೊಡ್ಡ ದೊಡ್ಡ ಜನ ಶಾಮೀಲಾಗಿದ್ದಾರೆ ಅನ್ನೋ ಶಂಕೆ ದೇಶದ ಜನರಿಗೆ ಬರುತ್ತಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharanprakash Patil) ಕಿಡಿಕಾರಿದ್ದಾರೆ.

    ರಾಯಚೂರಿನಲ್ಲಿ (Raichur) ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ (Central Government) ನಿಲುವು ಬಹಳ ಅನುಮಾನಾಸ್ಪದವಾಗಿದೆ. ಬಹಳ ದೊಡ್ಡ ಮಟ್ಟದ ಹಗರಣ ಆದ್ರೂ ಕೇಂದ್ರ ತನಿಖೆ ಮಾಡಿಲ್ಲ. ನೆಟ್ ಪರೀಕ್ಷೆ ಸಹ ರದ್ದಾಗಿದೆ. ಇದನ್ನ ಸಿಬಿಐಗೆ ನೀಡಬೇಕು ಎಂಬ ಆಗ್ರಹ ಎಲ್ಲಾ ರಾಜ್ಯಗಳಲ್ಲಿ ಕೇಳಿಬರುತ್ತಿದೆ. ಆದರೂ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ. ಕೇಂದ್ರ ಯಾರನ್ನು ರಕ್ಷಣೆ ಮಾಡುತ್ತಿದೆ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪೊಲೀಸರು ಹೋಗಿ ಉತ್ತರ ಪ್ರದೇಶದಲ್ಲಿ ತಪ್ಪೇನೂ ಮಾಡಿಲ್ಲ: ಗೃಹ ಸಚಿವ ಪರಮೇಶ್ವರ್

    ದೇಶದ 24 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯದ ಜೊತೆ ಮೋದಿ ಸರ್ಕಾರ ಚೆಲ್ಲಾಟ ಆಡುತ್ತಿದೆ. ನೀಟ್ ತಿರಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ನೀಟ್ ನಡೆಸೋದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀರ್ಪು ಇದೆ. ಕೇಂದ್ರ ಸರ್ಕಾರದ ಆ್ಯಕ್ಟ್ ನಿಂದ ನೀಟ್ ಬಂದಿದೆ ಹಾಗಾಗಿ ನೀಟ್ ರದ್ದು ಮಾಡೋಕೆ ಸುಪ್ರೀಂ ಕೋರ್ಟ್ ತೀರ್ಪು ಆಗಬೇಕು. ಬೇರೆ ರಾಜ್ಯಗಳಂತೆ ಬೇಜವಾಬ್ದಾರಿಯಿಂದ ಹೇಳುವುದಕ್ಕೆ ಆಗೋದಿಲ್ಲ. ತಮಿಳುನಾಡು ಸರ್ಕಾರ ಅದರ ಅಭಿಪ್ರಾಯ ಹೇಳಿದೆ. ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಸಿದ್ದಾರೆ.

    ಕೇಂದ್ರ ಸರ್ಕಾರ ಪಾರದರ್ಶಕವಾಗಿ ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಪೇಪರ್ ಲೀಕ್ ಆಗಿದೆ ಎಂಬುದು ಎಲ್ಲಾ ಮಕ್ಕಳ ಅನುಮಾನ ಇದೆ. ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದೆ. ಯಾರನ್ನೂ ರಕ್ಷಣೆ ಮಾಡುವಂತಿಲ್ಲ, ನಿಮ್ಮ ತಪ್ಪು ಇದ್ದರೆ ಒಪ್ಪಿಕೊಳ್ಳಿ ಎಂದು ಸುಪ್ರೀಂ ಹೇಳಿದೆ ಅಂತ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಲಿ, ನಾನು ರಾಜ್ಯಾಧ್ಯಕ್ಷ ಆಗ್ತೀನಿ: ಯತ್ನಾಳ್

  • ಅಕ್ರಮವಾಗಿ ಹಣ ಸಂಪಾದಿಸಲು ಕಾರ್ಯಕರ್ತರಿಗೆ ಸ್ವತಃ ಸರ್ಕಾರ ಸೂಚನೆ: ಶರಣಪ್ರಕಾಶ್‌

    ಅಕ್ರಮವಾಗಿ ಹಣ ಸಂಪಾದಿಸಲು ಕಾರ್ಯಕರ್ತರಿಗೆ ಸ್ವತಃ ಸರ್ಕಾರ ಸೂಚನೆ: ಶರಣಪ್ರಕಾಶ್‌

    ಕಲಬುರಗಿ: ಅಕ್ರಮ ದಾರಿ ಮೂಲಕ ಹಣ ಸಂಪಾದಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರಿಗೆ ಸ್ವತಃ ಸರ್ಕಾರ ಹೇಳಿಕೊಟ್ಟಿದೆ ಎಂದು ಮಾಜಿ ಸಚಿವರಾದ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಶರಣಪ್ರಕಾಶ್‌ ಪಾಟೀಲ್ ಆರೋಪ ಮಾಡಿದರು.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, 545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು. ದಿವ್ಯಾ ಹಾಗರಗಿ ಬಿಜೆಪಿ ಮಾಜಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದರು. ದಿಶಾ ಸಮಿತಿ ಸದಸ್ಯರಿದ್ದಾರೆ. ಜೊತೆಗೆ ಕರ್ನಾಟಕ ನಸಿರ್ಂಗ್ ಕೌನ್ಸಿಲ್ ಸದಸ್ಯರಿದ್ದಾರೆ. ಇಷ್ಟಿದ್ದರೂ ಸಹ ಹಗರಣ ಹೊರಬರುತ್ತಿದ್ದಂತೆ ದಿವ್ಯಾಗೂ ಬಿಜೆಪಿಗೂ ಸಂಬಂಧವಿಲ್ಲ ಅಂತಿದ್ದಾರೆ. ದಿವ್ಯಾ ಹಾಗರಗಿ ಮಾತ್ರವಲ್ಲ ಹಗರಣದಲ್ಲಿ ಇನ್ನೂ ಹಲವು ಬಿಜೆಪಿ ನಾಯಕರಿದ್ದಾರೆ ಎಂದು ದೂರಿದರು.

    ದಿವ್ಯಾ ಹಾಗರಗಿ ಅವರಿಗೆ ಸೇರಿದ ಜ್ಞಾನಜ್ಯೋತಿ ಶಾಲೆಗೆ ಯಾವ ಮಾನದಂಡದ ಮೇಲೆ ಪರೀಕ್ಷಾ ಕೇಂದ್ರವಾಗಿಸಲಾಗಿತ್ತು. ಕೆಲ ನಾಯಕರು ಒತ್ತಡ ಹಾಕುವ ಮುಖಾಂತರ ಪರೀಕ್ಷಾ ಕೇಂದ್ರ ಮಾಡಲಾಗಿದೆ. ಈ ಕೇಂದ್ರದ ಎಲ್ಲಾ ಅಭ್ಯರ್ಥಿಗಳ ಒಎಮ್‍ಆರ್ ಶೀಟ್ ತಪಾಸಣೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಜೆಪಿಯನ್ನು ಬೈದು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವುದು ಮುರ್ಖತನ: ಬಿಸಿ ಪಾಟೀಲ್

    ಪಿಎಸ್‍ಐ ನೇಮಕಾತಿ ಹಗಣರವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕುವ ಯತ್ನ ಮಾಡುತ್ತಿದೆ. ಪ್ರಕರಣವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೂಲಕ ಸೂಕ್ತ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ನವರೇ ಕಾರಣ: ಬಿಎಸ್‍ವೈ