Tag: ಶರಣಪ್ಪ

  • ಫ್ರೆಂಡ್‌ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್‌ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು

    ಫ್ರೆಂಡ್‌ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್‌ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು

    ಬೆಂಗಳೂರು: ಜ್ಯೂಸ್ ಕುಡಿಯಲು ಶಾಂಪಿಗ್ ಕಾಂಪ್ಲೆಕ್ಸ್‌ಗೆ ಬಂದಿದ್ದ ಯುವತಿ ವಾಶ್‍ರೂಂನಿಂದ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಯುವತಿಯನ್ನು ಕಾಪಾಡಲು ಹೋದ ಯುವಕನಿಗೆ ಗಂಭೀರ ಗಾಯವಾದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

    ಲಿಯಾ(18) ಮೃತ ಯುವತಿ ಹಾಗೂ ಪೀಟರ್ (18) ಗಾಯಗೊಂಡ ಯುವಕ. ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಲಿಯಾ ಹಾಗೂ ಆಂಧ್ರ ಮೂಲದ ಪೀಟರ್ ಇಬ್ಬರೂ ಸೆಂಟ್ ಜಾನ್ಸ್ ಕಾಲೇಜಿನಲ್ಲಿ ಓದುತ್ತಾ ಇದ್ದರು. ಈ ಇಬ್ಬರೂ ಸ್ನೇಹಿತರು ಬ್ರಿಗೇಡ್ ರಸ್ತೆಯ ಶಾಂಪಿಂಗ್ ಕಾಂಪ್ಲೆಕ್ಸ್‌ಗೆ ಬಂದಿದ್ದರು.

    ಫುಡ್ ಕೋರ್ಟ್‍ನಲ್ಲಿ ಊಟ ಮುಗಿಸಿ ವಾಷ್ ರೂಂಗೆ ಹೋಗಿದ್ದರು. ಈ ವೇಳೆ ಲಿಯಾ ಕಾಲುಜಾರಿ ಬಿದ್ದಿದ್ದಾಳೆ. ಅವಳನ್ನು ಕಾಪಾಡಲು ಹೋದ ಪೀಟರ್ ಕೂಡ ಆಯತಪ್ಪಿ ಬಿದ್ದಿದ್ದಾನೆ. ಘಟನೆ ವೇಳೆ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಣ್ಣೆ ಹಳ್ಳದಲ್ಲಿ ಪ್ರವಾಹ – ನಾಲ್ವರು ಕಾರ್ಮಿಕರನ್ನ ರಕ್ಷಿಸಿದ ಅಗ್ನಿಶಾಮಕ ದಳ

    POLICE JEEP

    ಈ ಬಗ್ಗೆ ಮಾತನಾಡಿದ ಡಿಸಿಪಿ ಶರಣಪ್ಪ ಅವರು, ಸ್ನೇಹಿತರೊಂದಿಗೆ ಲೀಯಾ ಜ್ಯೂಸ್ ಕುಡಿಯೋದಕ್ಕೆ ಬಂದಿದ್ದರು. ವಾಷ್ ರೂಂಗೆ ಹೋಗಿ ಬರುವಾಗ ಸ್ಟೇರ್ ಕೇಸ್‍ನಿಂದ ಇಬ್ಬರು ಕಾಲು ಜಾರಿ ಕೆಳಗಡೆ ಬಿದ್ದಿದ್ದಾರೆ. ಆತ್ಮಹತ್ಯೆ ಯತ್ನದ ಬಗ್ಗೆ ಪ್ರಾಥಮಿಕವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ – ಇಬ್ಬರು ಭ್ರಷ್ಟ ಅಧಿಕಾರಿಗಳು ಬಲೆಗೆ

  • ಮಕ್ಕಳ ಅಭಿವೃದ್ಧಿಯೇ ನಮ್ಮ ಪ್ರಗತಿ- ಶಾಲೆಗಾಗಿಯೇ ಅರ್ಧ ಸಂಬಳ ಮೀಸಲಿಡ್ತಾರೆ ರೋಣಾದ ಶರಣಪ್ಪ ಮೇಷ್ಟ್ರು

    ಮಕ್ಕಳ ಅಭಿವೃದ್ಧಿಯೇ ನಮ್ಮ ಪ್ರಗತಿ- ಶಾಲೆಗಾಗಿಯೇ ಅರ್ಧ ಸಂಬಳ ಮೀಸಲಿಡ್ತಾರೆ ರೋಣಾದ ಶರಣಪ್ಪ ಮೇಷ್ಟ್ರು

    ಗದಗ: ಸರ್ಕಾರಿ ಕೆಲಸ ತಿಂಗಳಿಗೆ ಸಂಬಳ ಎಣಿಸಿಕೊಂಡು ಮನೆಗೆ ಹೋಗೋವ್ರೇ ಜಾಸ್ತಿ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ರೋಣಾ ತಾಲೂಕಿನ ಕಳಕಾಪುರದ ಮೇಷ್ಟ್ರು ಶರಣಪ್ಪ ಅವರು ತಮ್ಮ ಅರ್ಧ ಸಂಬಳವನ್ನು ವಿದ್ಯಾರ್ಥಿಗಳಿಗಾಗಿ ಖರ್ಚು ಮಾಡ್ತಿದ್ದಾರೆ.

    ಗದಗ ಜಿಲ್ಲೆಯ ರೋಣ ತಾಲೂಕಿನ ಕಳಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಶರಣಪ್ಪ ಮೇಸ್ಟ್ರು ಕಾರ್ಯನಿರ್ವಹಿಸುತ್ತಿದ್ದಾರೆ. ತಮಗೆ ಬರುವ ಶೇಕಡಾ ಅರ್ಧದಷ್ಟು ಸಂಬಳ ಬಡಮಕ್ಕಳ ಶಿಕ್ಷಣ, ಪರಿಸರ, ಕ್ರೀಡೆ, ಗ್ರಾಮದ ಆರೋಗ್ಯಕರ ಕೆಲಸಕ್ಕೆ ಮೀಸಲಿಡುತ್ತಿದ್ದಾರೆ.

    ಕಳೆದ ಎಂಟು ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಿ-ನಲಿ ಈ ಶರಣಪ್ಪ ಮೆಸ್ಟ್ರು, ಕೇವಲ ಶಾಲೆಗೆ ಸೀಮಿತರಾಗಿಲ್ಲ. ಊರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರಮಜೀವಿ. ಕ್ರೀಡಾ, ಸಂಗೀತ, ಶಿಕ್ಷಣ, ಪರಿಸರ, ಆರೋಗ್ಯ ಗ್ರಾಮ ಹೀಗೆ ನಾನಾ ಬಗೆಯ ಕಾರ್ಯಗಳ ಮೂಲಕ ಕಳಕಾಪುರ ಗ್ರಾಮಕ್ಕೆ ಕಳೆ ತುಂಬುತ್ತಿದ್ದಾರೆ. ತಮ್ಮ ಹಿರಿಯ ವಿದ್ಯಾರ್ಥಿ ಬಳಗ ಕಟ್ಟಿಕೊಂಡು “ಸ್ನೇಹಜೀವಿ ಕಲಾತಂಡ”ವನ್ನು ಸ್ಥಾಪಿಸಿದ್ದಾರೆ.

    ಪ್ರತಿ ತಿಂಗಳಿಗೊಮ್ಮೆ ಗ್ರಾಮದ ಅಭಿವೃದ್ಧಿ, ಸ್ವಚ್ಛತೆ, ಆರೋಗ್ಯ ಬಗ್ಗೆ ಜನಜಾಗ್ರತಿ ಮೂಡಿಸುವ ವಿಶೇಷ ಶಿಬಿರ ಹಮ್ಮಿಕೊಳ್ಳುವ ಮೂಲಕ ಏನನ್ನಾದರೂ ಸಾಧನೆ ಮಾಡಬೇಕೆಂಬ ಬಯಕೆ ಶಿಕ್ಷಕ ಶರಣಪ್ಪ ಹೆಬ್ಬಳ್ಳಿಯವರದ್ದಾಗಿದೆ. ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯ ಚಹರೆಯನ್ನೇ ಬದಲಿಸಿದ್ದಾರೆ. ಶಾಲಾ ಸೌಂದರ್ಯಕ್ಕೆ ಸುಣ್ಣ, ಬಣ್ಣ, ಚಿತ್ರಕಲೆ, ನಕಾಶೆ, ಮಕ್ಕಳ ಶಿಕ್ಷಣಕ್ಕೆ ಬೇಕಾದ ವಸ್ತುಚಿತ್ರ, ಪ್ರಾಜೆಕ್ಟರ್ ಹೀಗೆ ಅನೇಕ ವಿಷಯಕ್ಕೆ ತಮ್ಮ ಸ್ವಂತ ಹಣ ಖರ್ಚುಮಾಡಿದ್ದಾರೆ. ಪ್ರಾಥಮಿಕ ಮಕ್ಕಳಿಗೆ ಪ್ರೊಜೆಕ್ಟರ್ ಮೂಲಕ ಶಿಕ್ಷಣ, ಕುಳಿತುಕೊಳ್ಳಲು ರೌಂಡ್ ಟೆಬಲ್ ಹಾಗೂ ಖುರ್ಚಿಗೆ ಸರ್ಕಾರ ಹಾಗೂ ಸ್ಥಳೀಯರ ಸಹಾಯ ಬಯಸದೇ ತಾವೇ ಖರ್ಚುಮಾಡ್ತಾರೆ.

    ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಓದುವ ಮಕ್ಕಳ ಮನೆಗೆ ನಿತ್ಯ ಭೇಟಿ ನೀಡಿ ವಿಚಾರಿಸಿ ಓದಿನ ಉಪಚಾರ ಮಾಡ್ತಾರೆ. ಸಾಯಂಕಾಲ 6 ರಿಂದ 9 ಗಂಟೆವರೆಗೆ ಟಿವಿ ಹಾಕದಂತೆ ಪಾಲಕರಿಗೆ ಸೂಚನೆ ನೀಡ್ತಾರೆ. ಇವರು ಪ್ರಾಥಮಿಕ ಶಾಲೆ ಶಿಕ್ಷಕರಾದ್ರೂ ಗ್ರಾಮದ ಹೈಸ್ಕೂಲ್ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಿಹಿ ಉಣಬಡಿಸುವ ಮಹಾನ್ ಮೆಸ್ಟ್ರು. ಇವರ ಈ ಕಾರ್ಯ ಇಡೀ ಗ್ರಾಮದ ಪ್ರತಿಯೊಬ್ಬರ ಮೆಚ್ಚುಗೆ ಹಾಗೂ ಅಭಿಮಾನಕ್ಕೂ ಕಾರಣವಾಗಿದೆ.

    ಮಕ್ಕಳು ದೇವರ ಸಮಾನ, ಮಕ್ಕಳಿಂದ ಬರುವ ವೇತನದಲ್ಲೆ ಮಕ್ಕಳಿಗಾಗಿ ಖರ್ಚು ಮಾಡಿದರೆ ತಮಗೆ ಒಳಿತಾಗುತ್ತೆ ಅನ್ನೋ ನಂಬಿಕೆ ಶರಣಪ್ಪ ಅವರದ್ದಾಗಿದ್ದು, ಶಿಕ್ಷಕ ರಾಷ್ಟ್ರ ರಕ್ಷಕ ಅನ್ನೋ ಮಾತು ಶರಣಪ್ಪ ಗುರುಗಳಿಗೆ ಹೇಳಿ ಮಾಡಿಸಿವೆ. ಶರಣಪ್ಪ ಅವರ ಶಿಕ್ಷಣ ಕಾಳಜಿ ಇತರ ಶಿಕ್ಷಕರಿಗೆ ಮಾದರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=ff_hhrXot4o