Tag: ಶರಣಗೌಡ ಕಂದಕೂರು

  • ಹೃದಯಾಘಾತ – ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ

    ಹೃದಯಾಘಾತ – ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ

    ಯಾದಗಿರಿ: ಜಿಲ್ಲೆಯ ಗುರುಮಠಕಲ್‌ನ (Gurumatakal) ಮಾಜಿ ಶಾಸಕ ನಾಗನಗೌಡ ಕಂದಕೂರು (Naganagouda Kandkur) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

    ನಾಗನಗೌಡ ಕಂದಕೂರು (79) ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗುರುಮಠಕಲ್‌ನ ಹಾಲಿ ಶಾಸಕ ಶರಣಗೌಡ ಕಂದಕೂರು ಅವರ ತಂದೆಯಾಗಿರುವ ನಾಗನಗೌಡ ಕಂದಕೂರು 2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಜೆಡಿಎಸ್ (JDS) ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ನಿಧನ ಸುದ್ದಿ ತಿಳಿದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅಭಿಮಾನಿ ಬಳಗ ಆಸ್ಪತ್ರೆಗೆ ಧಾವಿಸಿದೆ. ಇದನ್ನೂ ಓದಿ: ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ

    ಭಾನುವಾರ (ಜ.28) ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಹೃದಯಾಘಾತ (Heart Attack) ಸಂಭವಿಸಿ ಸಾವನ್ನಪ್ಪಿದ್ದಾರೆ. ನಾಗನಗೌಡ ಕಂದಕೂರು ವಿಧಿವಶ ಹಿನ್ನೆಲೆ ಶಾಸಕ ಶರಣಗೌಡ ಕಂದಕೂರು ತಂದೆಯ ಪಾರ್ಥಿವ ಶರೀರವನ್ನು ಅಂಬುಲೆನ್ಸ್‌ನಲ್ಲಿ ಯಾದಗಿರಿ (Yadgiri) ನಗರದ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಕಲ್ಕಾಜಿ ದೇಗುಲದಲ್ಲಿ ವೇದಿಕೆ ಕುಸಿದುಬಿದ್ದು ಮಹಿಳೆ ಸಾವು – 17 ಮಂದಿಗೆ ಗಾಯ

    ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ಪತಿಯ ಮೃತದೇಹವನ್ನು ಕಂಡು ಪತ್ನಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ತಾಯಿಯ ಸ್ಥಿತಿ ಕಂಡು ಶಾಸಕ ಶರಣಗೌಡ ಕಂದಕೂರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಕೆಳಗಿಳಿಸಿದ ಪೊಲೀಸರು – ಸ್ಥಳೀಯರ ಮೇಲೆ ಲಾಠಿ ಚಾರ್ಜ್‌, ಕೆರಗೋಡು ಗ್ರಾಮ ಉದ್ವಿಗ್ನ

  • ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧವಿದೆ – ಜೆಡಿಎಸ್‌ ವಿರುದ್ಧ ಕಂದಕೂರು ರೆಬೆಲ್‌

    ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧವಿದೆ – ಜೆಡಿಎಸ್‌ ವಿರುದ್ಧ ಕಂದಕೂರು ರೆಬೆಲ್‌

    ಬೆಂಗಳೂರು: ಬಿಜೆಪಿ (BJP) ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧ ಇದೆ. ನನ್ನ ಹಿಂದಿನ ಹೇಳಿಕೆಗೆ ಈಗಲೂ ಬದ್ದ ಎಂದು ಗುರುಮಠಕಲ್‌ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರು (Sharana Gowda Kandakur) ಜೆಡಿಎಸ್ ವರಿಷ್ಠರ ವಿರುದ್ಧ ಕಿಡಿಕಾರಿದ್ದಾರೆ.

    ಹಾಸನದಲ್ಲಿ ನಡೆದ ಜೆಡಿಎಸ್ ಸಭೆಗೆ (JDS Meeting) ಗೈರಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಭೆಗೆ ಹೋಗದೇ ಇರಲು ಪಕ್ಷದ ವಿರುದ್ದ ಸಮಾಧಾನ ಅಸಮಾಧಾನ ಪ್ರಶ್ನೆ ಅಲ್ಲ. ಅನೇಕ ದಿನಗಳಿಂದ ಸಮಿತಿ ಸಭೆಗೆ ಹೋಗಿರಲಿಲ್ಲ. ಸಮಿತಿ ಸಭೆ ಇವತ್ತು ಇದೆ ಅದಕ್ಕೆ ಸಭೆಗೆ ಹೋಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಯ್ತು ಸರ್ಕಾರಿ ಅಧಿಕಾರಿಯ ಟೇಬಲ್‌ ಬೋರ್ಡ್‌

    ವರಿಷ್ಠರು ಸಭೆಗೆ ಆಹ್ವಾನ ಮಾಡಿದ್ದರು. ನಾನು ಸಭೆಗೆ ಬರುವುದಿಲ್ಲ ಎಂದು ಹೇಳಿಲ್ಲ. ಸಮಿತಿ ಸಭೆ ಇರುವುದರಿಂದ ನಾನು ಹೋಗಲಿಲ್ಲ ಅಷ್ಟೇ ಎಂದು ತಿಳಿಸಿದರು. ಮೈತ್ರಿಗೆ ನನ್ನ ಅಸಮಾಧಾನ ಇದೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್‌ನಿಂದ ದೂರ ಆಗುತ್ತಿಲ್ಲ. ಅಸಮಾಧಾನ ಇದ್ದರೂ ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ ಎಂದರು.

     

    ನಿಖಿಲ್ ಕುಮಾರಸ್ವಾಮಿ ಮತ್ತು ನನ್ನದು ರಾಜಕೀಯ ಮೀರಿದ ಸಂಬಂಧ. ಆದರೂ ಅವರ ಜೊತೆ ಹಲವು ರಾಜಕೀಯ ವಿಚಾರ ಚರ್ಚೆ ಮಾಡಿದ್ದೇನೆ. ಬಿಜೆಪಿ ಜೊತೆ ಮೈತ್ರಿಗೆ ವಿರೋಧ ಇದ್ದು, ಮೊದಲ ಹೇಳಿಕೆಗೆ ನಾನು ಈಗಲೂ ಬದ್ಧ. ಮೈತ್ರಿ ಬೇಡ ಎಂದು ನಾನು ಮೊದಲೇ ಹೇಳಿದ್ದೇನೆ. ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್‌ನಲ್ಲಿ ಮುಂದುವರಿದ ಶಾಸಕ ಶರಣಗೌಡ ಕಂದಕೂರು ಅಸಮಾಧಾನ – ಸಭೆಗೆ ಹಾಜರಾಗದೇ ವರಿಷ್ಠರಿಗೆ ಸೆಡ್ಡು

    ಕಂದಕೂರು ‌ಕಾಂಗ್ರೆಸ್ ಸೇರ್ಪಡೆ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆ ಎನ್ನುವುದಕ್ಕಿಂತ ಅವರಿಗೆ 135 ಸ್ಥಾನ ಇದೆ. ನನ್ನನ್ನು ತೆಗೆದುಕೊಂಡು ಅವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಿಎಂ, ಡಿಸಿಎಂ, ಸಚಿವರ ಜೊತೆ ಮಾತಾಡಿದ್ದೇನೆ. ಕಾಂಗ್ರೆಸ್ ‌ನಿಂದ ಪಕ್ಷಕ್ಕೆ ಬನ್ನಿ ಅಂತ ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್‌ಗೆ ನನ್ನ ಅವಶ್ಯಕತೆ ಇಲ್ಲ.ಕಾಂಗ್ರೆಸ್ ಗೆ 135 ಸ್ಥಾನ ಇದೆ. ಜೆಡಿಎಸ್ ನ 2-3 ಶಾಸಕರು ಅವರಿಗೆ ಅವಶ್ಯಕತೆ ಇಲ್ಲ. ನನ್ನ ಅಸಮಾಧಾನ ಪಕ್ಷದ ವೇದಿಕೆಯಲ್ಲಿ ಹೇಳುತ್ತೇನೆ ಎಂದರು.

  • ಜೆಡಿಎಸ್‌ನಲ್ಲಿ ಮುಂದುವರಿದ ಶಾಸಕ ಶರಣಗೌಡ ಕಂದಕೂರು ಅಸಮಾಧಾನ – ಸಭೆಗೆ ಹಾಜರಾಗದೇ ವರಿಷ್ಠರಿಗೆ ಸೆಡ್ಡು

    ಜೆಡಿಎಸ್‌ನಲ್ಲಿ ಮುಂದುವರಿದ ಶಾಸಕ ಶರಣಗೌಡ ಕಂದಕೂರು ಅಸಮಾಧಾನ – ಸಭೆಗೆ ಹಾಜರಾಗದೇ ವರಿಷ್ಠರಿಗೆ ಸೆಡ್ಡು

    ಯಾದಗಿರಿ: ಇಂದು (ಬುಧವಾರ) ಹಾಸನದಲ್ಲಿ (Hassan) ಜೆಡಿಎಸ್ (JDS) ಶಾಸಕರ ಮಹತ್ವದ ಸಭೆ ನಡೆಯುತ್ತಿದ್ದರೂ ಸಭೆಗೆ ಯಾದಗಿರಿಯ (Yadgiri) ಗುರುಮಟ್ಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು (Sharana Gowda Kandakur) ಗೈರಾಗುವ ಮೂಲಕ ತಮ್ಮ ಹೈಕಮಾಂಡ್‌ಗೆ ಶಾಕ್ ನೀಡಿದ್ದಾರೆ.

    ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿನ ಮೈತ್ರಿ ಕುರಿತು ಮಹತ್ವ ಪಡೆದುಕೊಂಡಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧಿಸಿದ್ದ ಶಾಸಕ ಶರಣಗೌಡ ಕಂದಕೂರು ಮೊದಲಿನಿಂದಲೂ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಮುರುಘಾಶ್ರೀಗೆ ಜೈಲಾ? ಬೇಲಾ? ಇಂದು ಹೈಕೋರ್ಟ್ ನಿರ್ಧಾರ

    ಜೆಡಿಎಸ್ ಪಕ್ಷದೊಂದಿಗೆ ಅಂತರ ಕಾಯ್ದಕೊಳ್ಳುತ್ತಿರುವ ಶಾಸಕ ಶರಣಗೌಡ ಕಂದಕೂರು ಪದೇ ಪದೇ ಜೆಡಿಎಸ್ ಸಭೆಗೆ ಗೈರಾಗುತ್ತಿದ್ದಾರೆ. ಈಗಾಗಲೇ 3-4 ಬಾರಿ ಜೆಡಿಎಸ್ ಸಭೆಗೆ ಗೈರಾಗಿರುವ ಶಾಸಕ ಶರಣಗೌಡ ಕಂದಕೂರು, ಬೆಂಗಳೂರಿನಲ್ಲಿದ್ದರೂ ಇಂದಿನ ಹಾಸನದ ಶಾಸಕರ ಸಭೆಗೆ ಹಾಜರಾಗಿಲ್ಲ. ಕಳೆದ ಶನಿವಾರ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ನಡೆಸಿದ್ದ ಸಭೆಗೂ ಶಾಸಕ ಶರಣಗೌಡ ಕಂದಕೂರು ಗೈರಾಗಿದ್ದರು. ಇದನ್ನೂ ಓದಿ: ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಯ್ತು ಸರ್ಕಾರಿ ಅಧಿಕಾರಿಯ ಟೇಬಲ್‌ ಬೋರ್ಡ್‌

  • BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    – ವಿಚಾರಣೆಗೆ ಹಾಜರಾದ ಶರಣಗೌಡ ಕಂದಕೂರು ಅಸಮಧಾನ

    ರಾಯಚೂರು: ಜಿಲ್ಲೆಯ ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಆಪರೇಷನ್ ಕಮಲ ಆಡಿಯೋ ಪ್ರಕರಣ ಹಿನ್ನೆಲೆ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ದೂರುದಾರ ಶರಣಗೌಡರನ್ನ ಇಂದು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಮಾತನಾಡಿರುವ ಶರಣೇಗೌಡ ನನಗೆ ನೂರಕ್ಕೆ ನೂರು ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಆದ್ರೂ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿದೆ ಅಂತ ಹೇಳಿದ್ದಾರೆ.

    ಜನಪ್ರತಿನಿಧಿಗಳ ಕೋರ್ಟ್ ನಿಂದ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆ ಮಾಡಬೇಕೆಂದು ಆದೇಶ ಬಂದ ಹಿನ್ನೆಲೆ ತನಿಖಾ ಅಧಿಕಾರಿಯಾಗಿ ರಾಯಚೂರು ಡಿವೈಎಸ್ ಪಿ ಯವರನ್ನ ನೇಮಕ ಮಾಡಿದ್ದಾರೆ. ಡಿವೈಎಸ್ ಪಿ ಶಿವನಗೌಡ ಪಾಟೀಲ್ ನೋಟಿಸ್ ನೀಡಿ ನಮಗೆ ಬರಲು ಹೇಳಿದ್ರು, ಇದರಿಂದಾಗಿ ಇಂದು ವಿಚಾರಣೆ ಬಂದಿದ್ದೇನೆ. ನಾವು ಮಾಡಿರುವ ಆಡಿಯೋ ಹಾಗೂ ನಮ್ಮ ಹೇಳಿಕೆಗಳು ಪಡೆದುಕೊಂಡಿದ್ದಾರೆ. ಒಬ್ಬ ಡಿವೈಎಸ್ ಪಿ ಸಿಎಂ ವಿರುದ್ಧ ಯಾವ ರೀತಿ ತನಿಖೆ ಮಾಡಲು ಆಗುತ್ತೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕಾಗಿತ್ತು ಅಂತ ಶರಣಗೌಡ ಹೇಳಿದ್ದಾರೆ.

    ರಾಜೀನಾಮೆ ನೀಡದೆ ತನಿಖೆ ನಡೆಯುತ್ತಿರುವುದರಿಂದ ಮುಂದೆ ಏನಾಗುತ್ತೆ ಎಂಬುವುದು ನಮಗೆ ಗೊತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿ ರಿಪೋರ್ಟ್ ಹಾಕಬಹುದು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲರ ಜೊತೆಗೆ ಈಗಾಗಲೇ ಮಾತುಕತೆ ಆಗಿದೆ. ಈ ತನಿಖಾ ವರದಿಯಲ್ಲಿ ನನಗೆ ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಸತ್ಯಕ್ಕೆ ನ್ಯಾಯ ಸಿಗದೇ ಇದ್ದಾಗ ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಇಡಿ ಇದೆ. ಆಡಿಯೋದಲ್ಲಿ ಎಲ್ಲವೂ ಇದ್ದು, ನ್ಯಾಯ ಸಿಗದೇ ಇದ್ದರೆ ಕಾನೂನು ಹೋರಾಟ ಮುಂದುವರಿಸುವುದಾಗಿ ಜೆಡಿಎಸ್ ಮುಖಂಡ ಶರಣಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ

  • ಜೆಡಿಎಸ್‍ನಲ್ಲೂ ಶುರುವಾಯ್ತು ರಾಜೀನಾಮೆ ಪರ್ವ

    ಜೆಡಿಎಸ್‍ನಲ್ಲೂ ಶುರುವಾಯ್ತು ರಾಜೀನಾಮೆ ಪರ್ವ

    – ಪ್ರಮುಖ ಜವಾಬ್ದಾರಿಗೆ ಶರಣಗೌಡ ಕಂದಕೂರು ರಾಜೀನಾಮೆ

    ಯಾದಗಿರಿ: ವಿಧಾನಸಭೆ ಉಪಚುನಾವಣೆ ಫಲಿತಾಂಶದ ನಂತರ ಕೈ ಪಾಳಯದಲ್ಲಿ ಆರಂಭವಾಗಿದ್ದ ರಾಜೀನಾಮೆ ಪರ್ವ, ಈಗ ಜೆಡಿಎಸ್‍ನಲ್ಲಿಯೂ ಸಹ ಶುರುವಾಗಿದೆ. ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶರಣಗೌಡ ಕಂದಕೂರು ರಾಜೀನಾಮೆ ನೀಡಿದ್ದಾರೆ.

    ಶರಣಗೌಡ ಕಂದಕೂರ ಅವರು ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಒಂದು ಸ್ಥಾನ ಗೆಲ್ಲದ ಹಿನ್ನೆಲೆಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬಕ್ಕೆ ಆಪ್ತರಾಗಿರುವುದರಿಂದ ಶರಣಗೌಡ ಕಂದಕೂರ ಅವರಿಗೆ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಸದ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶರಣಗೌಡ ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

    ಯಾರು ಈ ಶರಣಗೌಡ ಕಂದಕೂರ?
    ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರನೇ ಶರಣಗೌಡ ಕಂದಕೂರು. ಫೆಬ್ರವರಿಯಲ್ಲಿ ಶಾಸಕ ನಾಗನಗೌಡರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪನವರು ಶರಣಗೌಡ ಸಂಪರ್ಕಿಸಿದ್ದರು ಎನ್ನಲಾದ ಆಡಿಯೋವನ್ನು ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದರು. ಆಡಿಯೋದಲ್ಲಿ 50 ಕೋಟಿ ರೂ. ಆಫರ್ ಮತ್ತು ಚುನಾವಣೆಯಲ್ಲಿ ಬೆಂಬಲದದ ಜೊತೆ ಮಂತ್ರಿ ಸ್ಥಾನ ನೀಡಲಾಗುವುದು ಎಂಬ ಧ್ವನಿ ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ತಂದೆಯವರು ಅನರ್ಹರಾದರೆ ಏನು ಎಂದು ಕೇಳಿದ್ದಕ್ಕೆ ಅದಕ್ಕೆ ಏನು ತಲೆ ಕೆಡಿಸಿಕೊಳ್ಳಬೇಡ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ. ನೀಡಿ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಕೋರ್ಟ್ ನಲ್ಲಿ ಏನಾದರೆ ಆದರೆ ಎಂದು ಕೇಳಿದ್ದಕ್ಕೆ ಅದಕ್ಕೆಲ್ಲ ಹೆದರುವ ಅಗತ್ಯವಿಲ್ಲ. ಅಮಿತ್ ಶಾ, ಮೋದಿ ಇದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ಗಳನ್ನು ಬುಕ್ ಮಾಡಿದ್ದಾರೆ ಎಂದು ಅಡಿಯೋದಲ್ಲಿ ಹೇಳಲಾಗಿತ್ತು. ಅಂದು ಹೆಚ್.ಡಿ.ಕುಮಾರಸ್ವಾಮಿ ಅವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಶರಣಗೌಡ ಕಂದಕೂರ ಉಪಸ್ಥಿತರಿದ್ದರು.