Tag: ಶಮಿತಾ ಶೆಟ್ಟಿ

  • ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್‌

    ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್‌

    ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ (Shamitha Shetty)  ಟ್ರೋಲಿಗರ (Troll) ಕಾಟ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಶಮಿತಾಗೆ ವಯಸ್ಸಾಯ್ತು ಮದುವೆಯಾಗು ಎಂದ ನೆಟ್ಟಿಗನಿಗೆ ನಟಿ ಸಖತ್ ಆಗಿ ತಿರುಗೇಟು ನೀಡಿದ್ದಾರೆ. ಯಾವಾಗ ಮದುವೆ ಎಂದವನಿಗೆ ನಟಿ ಕುಟುಕಿದ್ದಾರೆ.

    ಶಿಲ್ಪಾ ಶೆಟ್ಟಿ (Shilpa Shetty) ಸಹೋದರಿ ಶಮಿತಾ ಶೆಟ್ಟಿ 45 ವರ್ಷ ಆಗಿದ್ದರೂ ಇನ್ನೂ ಸಿಂಗಲ್. ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ನಟಿ ಸದ್ದು ಮಾಡುತ್ತಿರುತ್ತಾರೆ. ಟ್ರೋಲ್‌ಗಳನ್ನು ಹೇಗೆ ಎದುರಿಸಬೇಕು ಎಂದು ನಟಿಗೆ ಗೊತ್ತಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಕೆಣಕಿದವನಿಗೆ ನಟಿ ಕೊಟ್ಟಿರೋ ಉತ್ತರ ಫ್ಯಾನ್ಸ್ ಗಮನ ಸೆಳೆದಿದೆ.

    ಮದುವೆಯಾಗು ವಯಸ್ಸಾಯ್ತು ಎಂದು ನೆಟ್ಟಿಗನೊಬ್ಬ ಶಮಿತಾಗೆ ಕೆಣಕಿದ್ದಾರೆ. ಅದಕ್ಕೆ ನಟಿ, ನಿಮಗೆ ಅಭಿನಂದನೆಗಳು. ಮಿಷನ್ ಯಶಸ್ವಿಯಾಗಿದೆ. ಮದುವೆಯಾಗುವುದು ನನ್ನ ಜೀವನದಲ್ಲಿ ನನ್ನ ಏಕೈಕ ಉದ್ದೇಶವಲ್ಲ. ನಾನು ಸ್ವತಂತ್ರವಾಗಿರುವುದಕ್ಕೆ ನನಗೆ ಖುಷಿಯಿದೆ ಎಂದಿದ್ದಾರೆ. ಇದನ್ನೂ ಓದಿ:ರಾಜಕೀಯ ಅಖಾಡಕ್ಕೆ ಮೆಗಾಸ್ಟಾರ್ ಮನೆ ಮಗಳು?

    ನಿಮ್ಮ ಜೀವನದಲ್ಲಿ ನಿಮಗೆ ಬಹಳಷ್ಟು ಪಾಸಿಟಿವಿಟಿ ಸಿಗಲಿ ಎಂದು ಹಾರೈಸುತ್ತೇನೆ. ನೀವು ಇನ್ಮುಂದೆ ಬೇರೆ ಮಹಿಳೆಯರನ್ನು ಕೆಳಗೆ ಎಳೆಯಲು ಪ್ರಯತ್ನಿಸುವುದಿಲ್ಲ ಎಂದು ಭಾವಿಸುತ್ತೇನೆ ಎಂದು ನಟಿ ತಿರುಗೇಟು ನೀಡಿದ್ದಾರೆ. ನಟಿಯ ಬೋಲ್ಡ್‌ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಅಂದಹಾಗೆ, ಅಕ್ಕ ಶಿಲ್ಪಾ ಶೆಟ್ಟಿಯಂತೆ ಬಾಲಿವುಡ್‌ನಲ್ಲಿ ಶಮಿತಾ ಕೆರಿಯರ್‌ಗೆ ಬ್ರೇಕ್ ಸಿಗಲಿಲ್ಲ. ‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ (Bigg Boss Hindi 15) ಶಮಿತಾ ಹೈಲೆಟ್ ಆಗಿದ್ದರು. ಈ ಶೋನಿಂದ ಅಪಾರ ಅಭಿಮಾನಿಗಳನ್ನು ನಟಿ ಗಳಿಸಿದ್ದಾರೆ.

  • ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ಬಾಲಿವುಡ್ (Bollywood) ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ತುಳುನಾಡಿನ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari Temple) ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶಿಲ್ಪಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು, ಮುಂಬೈನಲ್ಲಿ ಸೆಟಲ್ ಆಗಿದ್ದರು ಕೂಡ ಇಂದಿಗೂ ದೈವ ಕೋಲ, ಇನ್ನಿತರ ಪೂಜೆ ಕಾರ್ಯಕ್ರಮಗಳಿಗೆ ಆಗಾಗ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡುತ್ತಾರೆ. ಅದರಂತೆಯೇ ಇದೀಗ ಶಿಲ್ಪಾ ಶೆಟ್ಟಿ ಕುಟುಂಬ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಲ್ಪಾ ಜೊತೆ ಪತಿ ರಾಜ್‌ ಕುಂದ್ರಾ, ಶಮಿತಾ ಶೆಟ್ಟಿ, ಸುನಂದಾ ಶೆಟ್ಟಿ ಭಾಗಿಯಾಗಿದ್ದರು.  ದೇವಳದ ವತಿಯಿಂದ ಶಿಲ್ಪಾ ಶೆಟ್ಟಿಗೆ ದೇವರ ವಸ್ತ್ರ ಪ್ರಸಾದ ನೀಡಿ ಅಶೀರ್ವಾದ ಮಾಡಲಾಯಿತು. ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಯಶ್ ವೀಡಿಯೋ ವೈರಲ್

    ಕನ್ನಡದ ‘ಕೆಡಿ’ ಸಿನಿಮಾ ಮೂಲಕ 17 ವರ್ಷಗಳ ನಂತರ ಮತ್ತೆ ನಟಿ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಡೈರೆಕ್ಟರ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.

  • ರಾಕೇಶ್ ಬಾಪಟ್ ಜೊತೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

    ರಾಕೇಶ್ ಬಾಪಟ್ ಜೊತೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

    ಬಾಲಿವುಡ್‌ನಲ್ಲಿ ಡೇಟಿಂಗ್ ಮತ್ತು ಲವ್ ಬ್ರೇಕಪ್ ಎಲ್ಲಾ ಸಾಮಾನ್ಯವಾಗಿದೆ. ಇಂದು ಜತೆ ಇರುವವರು ಮುಂದೆ ಕೂಡ ಒಟ್ಟಾಗಿ ಜೀವನ ಸಾಗಿಸುತ್ತಾರೆ ಎಂಬುದು ಸುಳ್ಳು. ಹೀಗಿರುವಾಗ ಬಾಲಿವುಡ್ ನಲ್ಲಿ ಮತ್ತೊಂದು ಬ್ರೇಕಪ್ ಸುದ್ದಿ ಅಧಿಕೃತವಾಗಿ ಹೊರ ಬಿದ್ದಿದೆ. ಕೆಲ ದಿನಗಳ ಹಿಂದೆ ಹಬ್ಬಿದ್ದ ಮಾತು ಈಗ ಸತ್ಯವಾಗಿದೆ.

    ಹಿಂದಿ ಕಿರುತೆರೆಯ ದೊಡ್ಮನೆ ಬಿಗ್ ಬಾಸ್ ಸ್ಟಾರ್ ಜೋಡಿಗಳಾಗಿದ್ದ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ತಾವು ಇಬ್ಬರು ಪರಸ್ಪರ ದೂರವಾಗುತ್ತಿದ್ದೇವೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಶಮಿತಾ ಶೆಟ್ಟಿ, ನಾನು ಇದುವರೆಗೆ ಕೆರಿಯರ್ ನಲ್ಲಿ ತುಂಬಾ ತಪ್ಪುಗಳನ್ನು ಮಾಡಿದ್ದೇನೆ. ಅದಕ್ಕಾಗಿ ಪಶ್ಚಾತ್ತಾಪ ಪಟ್ಟಿದ್ದೇನೆ. ಕೆಲವೊಮ್ಮೆ ಒಳ್ಳೆಯ ಸಂಬಂಧಗಳ ಕೂಡ ಕೊನೆಯಾಗುತ್ತವೆ ಎಂದು ಹೇಳುವ ಮೂಲಕ ತಮ್ಮ ಹಾಗೂ ರಾಕೇಶ್ ಸಂಬಂಧದ ಬ್ರೇಕಪ್ ಬಗ್ಗೆ ಪರೋಕ್ಷವಾಗಿ ಹೇಳಿದ್ದರು. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಇಬ್ಬರು ಒಟ್ಟಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೀಗ ಇಬ್ಬರು ತಮ್ಮ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ.

    ಈ ಬಗ್ಗೆ ರಾಕೇಶ್ ನಾನು ಹಾಗೂ ಶಮಿತಾ ಇನ್ಮುಂದೆ ಒಂದಾಗಿ ಇರುವುದಿಲ್ಲ. ನಮ್ಮಿಬ್ಬರನ್ನು ವಿಧಿ ಅನಿರೀಕ್ಷಿತವಾಗಿ ಭೇಟಿ ಮಾಡಿಸಿತು. ಪ್ರೀತಿ ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ಇಬ್ಬರು ಜತೆಯಾಗಿ ಕಾಣಿಸಿಕೊಂಡಿರುವ ಮ್ಯೂಸಿಕ್ ವಿಡಿಯೋ ಅಭಿಮಾನಿಗಳಿಗೆ ಸರ್ಪಿಸುತ್ತೇವೆ ಎಂದಿದ್ದಾರೆ. ಶಮಿತಾ ಶೆಟ್ಟಿ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ರಾಕೇಶ್ ಹಾಗೂ ಶಮಿತಾ ಶೆಟ್ಟಿ ಹಿಂದಿಯ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಭೇಟಿಯಾಗಿದ್ದರು, ಅಲ್ಲಿಂದ ಶುರುವಾದ ಅವರ ಸ್ನೇಹ ಪ್ರೀತಿಗೆ ತಿರುಗಿ ಬಿಗ್ ಬಾಸ್ ಮನೆಯ ಹೊರಗೆಯೂ ಹಾಗೆಯೇ ಇತ್ತು. ಈಗ ಅಧಿಕೃತ ಬ್ರೇಕಪ್ ಹೇಳುವ ಮೂಲಕ ಪ್ರೀತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಬಾಪಟ ಜೊತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್

    ರಾಕೇಶ್ ಬಾಪಟ ಜೊತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್

    ಚಿತ್ರರಂಗದಲ್ಲಿ ಲವ್, ಮದುವೆ, ಬ್ರೇಕಪ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಇಂದು ಕೈ ಕೈ ಹಿಡಿದು ಓಡಾಡಿದ ತಾರೆಯರು ನಾಳೆ ಮದುವೆ ಎಂದಾಗ ನಾ ದೂರ ನೀ ತೀರ ಎನ್ನುವುದು ಕಾಮನ್ ಆಗಿದೆ. ಇದೀಗ ಈ ಸಾಲಿಗೆ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕೂಡ ಸೇರಿದ್ದಾರೆ. ರಾಕೇಶ್ ಬಾಪಟ ಜತೆ ಬ್ರೇಕಪ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Raqesh Bapat (@raqeshbapat)

    ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ `ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ರಾಕೇಶ್ ಬಾಪಟ ಅವರ ಪರಿಚಯ ಸ್ನೇಹವಾಗಿ, ಪ್ರೀತಿಗೆ ತಿರುಗಿತ್ತು. ಶೋ ಮುಗಿದ ಬಳಿಕವೂ ಅವರ ಪ್ರೀತಿ ಮುಂದುವರಿದಿತ್ತು. ಅನೇಕ ಸಮಾರಂಭಗಳಲ್ಲಿ ಪ್ರೇಮ ಪಕ್ಷಿಗಳಾಗಿ ಈ ಜೋಡಿ ಕಾಣಿಸಿಕೊಂಡಿತ್ತು. ಆದರೆ ಈಗ ಬ್ರೇಕಪ್ ಸುದ್ದಿ ಜೋರಾಗಿ ಕೇಳಿ ಬಂದಿದೆ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

    ಬಾಲಿವುಡ್‌ನಲ್ಲಿ ಸದ್ಯದ ಹಾಟ್ ನ್ಯೂಸ್ ಎಂದ್ರೆ ಶಮಿತಾ ಶೆಟ್ಟಿ ಬ್ರೇಕಪ್ ಮ್ಯಾಟ್ರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಶಮಿತಾ ಆಗಲಿ ಅವರ ಕುಟುಂಬದವರಾಗಲಿ ಈ ಕುರಿತು ಸೈಲೆಂಟ್ ಆಗಿದ್ದಾರೆ. ತಮ್ಮ ಲವ್ ಸ್ಟೋರಿ ಅಂತ್ಯ ಹಾಡಿ, ಸ್ನೇಹಿತರಾಗಿ ಮುಂದುವರಿಯಲು ಶಮಿತಾ ಮತ್ತು ರಾಕೇಶ್ ನಿರ್ಧರಿಸಿದ್ದಾರಂತೆ. ಇನ್ನು ೪೩ರ ಶಮಿತಾ ರಾಕೇಶ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಊಹಿಸಿದ್ದ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ನಿರಾಸೆಯಾಗಿದೆ.

  • 21 ಲಕ್ಷ ಸಾಲ ಮರುಪಾವತಿ ಕೇಸ್- ಶಿಲ್ಪಾ ಶೆಟ್ಟಿ ತಾಯಿಗೆ ವಾರೆಂಟ್ ಜಾರಿ

    21 ಲಕ್ಷ ಸಾಲ ಮರುಪಾವತಿ ಕೇಸ್- ಶಿಲ್ಪಾ ಶೆಟ್ಟಿ ತಾಯಿಗೆ ವಾರೆಂಟ್ ಜಾರಿ

    ಮುಂಬೈ: 21 ಲಕ್ಷ ರೂ. ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ತಾಯಿ ಸುನಂದಾ ಶೆಟ್ಟಿ (Sunanda Shetty) ಯವರಿಗೆ ಕೋರ್ಟ್ ವಾರೆಂಟ್ ಜಾರಿ ಮಾಡಿದೆ.

    ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (Metropolitan Magistrate) ಸುನಂದಾ ಶೆಟ್ಟಿ ಹಾಗೂ ಮಗಳು ಶಮಿತಾ ಶೆಟ್ಟಿ (ShamithaShetty) ಗೆ ಜಾಮೀನು ಪಡೆಯಬಹುದಾದಂತಹ ವಾರೆಂಟ್ ಜಾರಿ ಮಾಡಿದೆ. ಶಿಲ್ಪಾ ಶೆಟ್ಟಿ ಕುಟುಂಬವು ತನ್ನಿಂದ ಪಡೆದಿದ್ದ 21 ಲಕ್ಷ ರೂ. ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಉದ್ಯಮಿಯೊಬ್ಬರು ದೂರು ದಾಖಲಿಸಿದ್ದರು. ಹೀಗಾಗಿ ಶಿಲ್ಪಾ ಶೆಟ್ಟಿ, ಅವರ ಸಹೋದರಿ ಶಮಿತಾ ಶೆಟ್ಟಿ ಹಾಗೂ ತಾಯಿ ಸುನಂದಾ ಶೆಟ್ಟಿ ವಿರುದ್ಧ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಂಚನೆ ಪ್ರಕರಣದ ತನಿಖೆಗೆ ಆದೇಶಿಸಿತ್ತು.

    ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟಿ ಕುಟುಂಬ ದಿಂಡೋಶಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿತ್ತು. ಸೋಮವಾರ ಸೆಷನ್ಸ್ ಜಡ್ಜ್ ಎ ಝಡ್ ಖಾನ್ ಅವರು ಶಿಲ್ಪಾ ಹಾಗೂ ಶಮಿತಾ ವಿರುದ್ಧ ಮ್ಯಾಜಿಸ್ಟ್ರೆಟ್ ಆದೇಶ ತಡೆಹಿಡಿದಿದ್ದು, ಸುನಂದಾ ಅವರಿಗೆ ಯಾವುದೇ ರಿಲೀಫ್ ನೀಡಲಿಲ್ಲ. ಅಲ್ಲದೆ ತಂದೆ ದಿ. ಸುರೇಂದ್ರ ಶೆಟ್ಟಿ (Surendra Shetty) ಮತ್ತು ಸುನಂದಾ ಅವರ ಸಂಸ್ಥೆಯಲ್ಲಿ ಪಾಲುದಾರರು. ಆದರೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇಲ್ಲಿ ಪಾಲುದಾರರಾಗಿದ್ದಾರೆ. ಈ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಲಾಗಿಲ್ಲ ಎಂದು ಹೇಳಿದೆ. ಅಲ್ಲದೆ ಪ್ರಕರಣ ಸಬಂಧ ಜಾಮೀನು ನೀಡಬಹುದಾದ ವಾರೆಂಟ್ ಅನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದೆ.

    ಏನಿದು ಪ್ರಕರಣ..?
    ಉದ್ಯಮಿಯೊಬ್ಬರು ಶಿಲ್ಪಾ ಸೇರಿ ಕುಟುಂಬದ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ದೂರಿನ ಅನ್ವಯ ಶಿಲ್ಪಾ ಅವರ ತಂದೆ ದಿವಂಗತ ಸುರೇಂದ್ರ ಶೆಟ್ಟಿ 21 ಲಕ್ಷ ರೂ ಸಾಲವನ್ನು ಪಡೆದಿದ್ದರು. ಈ ಸಾಲವನ್ನು 2017ರ ಜನವರಿಯಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕಾಗಿತ್ತು. ಆದರೆ ಸಾಲವನ್ನು ಮರುಪಾವತಿಸಲು ಶಿಲ್ಪಾ, ಶಮಿತಾ ಮತ್ತು ಸುನಂದಾ ವಿಫಲರಾಗಿದ್ದಾರೆ ಎನ್ನಲಾಗಿದೆ.

    ಸುರೇಂದ್ರ ಕಂಪನಿ ಪರವಾಗಿ ಚೆಕ್ ಬರೆದಿದ್ದು, ಸಾಲದ ವಿಚಾರ ಅವರ ಪುತ್ರಿಯರು ಮತ್ತು ಪತ್ನಿಗೆ ತಿಳಿದಿತ್ತು. ಆದರೆ ಸಾಲ ಮರುಪಾವತಿ ಮಾಡುವ ಮುನ್ನವೇ ಸುರೇಂದ್ರ ತೀರಿಕೊಂಡಿದ್ದರಿಂದ ಅದನ್ನು ಮರುಪಾವತಿಸುವ ಜವಾಬ್ದಾರಿ ಕುಟುಂಬದ್ದಾಗಿತ್ತು. ಆದರೆ ಕುಟುಂಬ ತಾವು ಹಣವೇ ಪಡೆದಿಲ್ಲ ಎಂದು ಹೇಳುತ್ತಿದೆ.

  • ನಮಗೆ ಗೊತ್ತು ನೀವು ನಮ್ಮನ್ನ ಬಿಟ್ಟು ಹೋಗಿಲ್ಲ: ತಂದೆಯನ್ನು ನೆನೆದು ಶಿಲ್ಪಾ ಶೆಟ್ಟಿ ಪೋಸ್ಟ್

    ನಮಗೆ ಗೊತ್ತು ನೀವು ನಮ್ಮನ್ನ ಬಿಟ್ಟು ಹೋಗಿಲ್ಲ: ತಂದೆಯನ್ನು ನೆನೆದು ಶಿಲ್ಪಾ ಶೆಟ್ಟಿ ಪೋಸ್ಟ್

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಂದೆಯನ್ನು ನೆನೆದು ಭಾವುಕ ಪೋಸ್ಟ್ ಹಾಕಿದ್ದಾರೆ.

    ಡಿಸೆಂಬರ್ 22 ರಂದು ಅವರ ತಂದೆ ಸುರೇಂದ್ರ ಶೆಟ್ಟಿಯವರ ಜನ್ಮದಿನವಾದ ಹಿನ್ನೆಲೆ ಅವರ ತಂಗಿ ಶಮಿತಾ ಶೆಟ್ಟಿ ಜೊತೆಗೆ ಅಪ್ಪನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.

    ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಕರೆದುಕೊಂಡು ಹೋಗುವಾಗ ಹೃದಯಾಘಾತದಿಂದ 2016ರಲ್ಲಿ ಸುರೇಂದ್ರ ಶೆಟ್ಟಿ ರಸ್ತೆಯ ಮಧ್ಯೆ ಮೃತಪಟ್ಟಿದ್ದರು. ಈಗ ತಂದೆ ನಮ್ಮೊಂದಿಗಿಲ್ಲ ಎಂಬ ನೋವು ಇಬ್ಬರು ಮಕ್ಕಳಿಗಿದೆ. ಇದನ್ನೂ ಓದಿ: ಗೂಗಲ್ ನಂತರ ಇದೀಗ ಇಂಟೆಲ್- ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ

    ಪೋಸ್ಟ್‌ನಲ್ಲಿ ಏನಿದೆ?
    ವಿಶ್ಯೂ ಹ್ಯಾಪಿ ಬರ್ತಡೇ ಪಪ್ಪಾ, ನಮಗೆ ಗೊತ್ತು ನೀವು ನಮ್ಮನ್ನ ಬಿಟ್ಟು ಹೋಗಿಲ್ಲ. ಗರ್ಜಿಯನ್ ಎಂಜಲ್ ಆಗಿ ಈಗಲೂ ಕೂಡಾ ನೀವು ನಮ್ಮನ್ನು ಕಾಪಾಡುತ್ತಿದ್ದೀರಿ. ನಮ್ಮ ಕಷ್ಟದ ಸಮಯದಲ್ಲಿ ನೀವು ನಮ್ಮೊಂದಿಗೆ ಇದ್ದಿದ್ದು, ನಿಮ್ಮ ಮೊಮ್ಮಗಳಾದ ಟುಂಕಿ ನೀವು ಬೇಕು ಎಂದು ಬಯಸುತ್ತಿದ್ದಾಳೆ. ಲವ್ ಯೂ ಪಪ್ಪಾ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಶಮಿತಾ ಶೆಟ್ಟಿ ಈಗ ಬಿಗ್ ಬಾಸ್ 15 ರ ಮನೆಯಲ್ಲಿದ್ದು, ಶಿಲ್ಪಾ ಶೆಟ್ಟಿ ಮುಂಬೈನಲ್ಲಿದ್ದಾರೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ವೀಡಿಯೋ ತಯಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈಗ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್

  • ಅಕ್ಕ ಬೆಳಗ್ಗಿನ ಯೋಗ, ಬಾವ ರಾತ್ರಿ ಯೋಗ ಕಲಿಸ್ತಿದ್ದಾರೆ – ಟ್ರೋಲ್‍ಗೊಳಗಾದ ಶಿಲ್ಪಾ ತಂಗಿ

    ಅಕ್ಕ ಬೆಳಗ್ಗಿನ ಯೋಗ, ಬಾವ ರಾತ್ರಿ ಯೋಗ ಕಲಿಸ್ತಿದ್ದಾರೆ – ಟ್ರೋಲ್‍ಗೊಳಗಾದ ಶಿಲ್ಪಾ ತಂಗಿ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರೀಕರಣ ದಂಧೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

    ಜು.23ರಂದು ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ ಮೂಲಕ ಹಂಗಮಾ 2 ಸಿನಿಮಾ ರಿಲೀಸ್ ಆಯಿತು. ಹಲವು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ನಟಿಸಿರುವ ಸಿನಿಮಾ ಇದು. ಅದಕ್ಕಾಗಿ ಅಕ್ಕನಿಗೆ ಶಮಿತಾ ಶೆಟ್ಟಿ ಶುಭ ಕೋರಿದ್ದಾರೆ. 14 ವರ್ಷಗಳ ನಂತರ ನಿನ್ನ ನಟನೆಯ ಹಂಗಾಮಾ 2 ರಿಲೀಸ್ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜೊತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಿ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದಿ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶಮಿತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ

    ಈ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಬಹುತೇಕರು, ರಾಜ್ ಕುಂದ್ರಾ ವಿಚಾರವನ್ನು ಎಳೆದು ತಂದಿದ್ದಾರೆ. ತುಂಬಾ ಕಟುವಾಗಿ ಟ್ರೋಲ್ ಮಾಡಿದ್ದಾರೆ. ಅಂತಹ ಕೆಲವು ಕಾಮೆಂಟ್‍ಗಳು ಈಗ ಸಖತ್ ವೈರಲ್ ಆಗುತ್ತಿದೆ. ನಿಮ್ಮ ಅಕ್ಕ ನಮಗೆ ಬೆಳಗ್ಗಿನ ಯೋಗ ಪೋಸ್‍ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಬಾವ ರಾತ್ರಿಯ ಯೋಗಪೋಸ್‍ಗಳನ್ನು ಕಲಿಸಿಕೊಡುತ್ತಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ರಾಜ್ ಕುಂದ್ರಾ ಹೇಗಿದ್ದಾರೆ? ಅವರನ್ನು ಯಾಕೆ ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ? ಈ ಸಂದರ್ಭದಲ್ಲಿ ಶಿಲ್ಪಾಗಿಂತಲೂ ಹೆಚ್ಚು ಶುಭ ಹಾರೈಕೆ ಬೇಕಿರುವುದು ಅವರಿಗೆ ಎಂಬ ಇತ್ಯಾದಿ ಹಲವಾರು ಕಾಮೆಂಟ್‍ಗಳ ಮೂಲಕ ಜನ ಕಾಲೆಳೆದಿದ್ದಾರೆ. ಇದನ್ನೂ ಓದಿ:  ಪತಿ ಕಾಮಪ್ರಚೋದಕ ಚಿತ್ರಗಳನ್ನು ತೆಗೆಯುತ್ತಿದ್ದರೆ ವಿನಃ ಅಶ್ಲೀಲ ಚಿತ್ರವಲ್ಲ: ಶಿಲ್ಪಾ ಶೆಟ್ಟಿ

    ತಮ್ಮ ಹಾಟ್‍ಶಾಟ್ಸ್ ಆ್ಯಪ್ ಮೂಲಕ ಅಶ್ಲೀಲ ಸಿನಿಮಾಗಳನ್ನು ರಾಜ್ ಕುಂದ್ರಾ ಪ್ರಸಾರ ಮಾಡುತ್ತಿದ್ದರು ಎಂಬ ಆರೋಪ ಇದೆ. ಅಲ್ಲದೆ ತಮ್ಮ ನಾದಿನಿ ಶಮಿತಾ ಶೆಟ್ಟಿ ಜೊತೆಗೂ ಅವರು ಒಂದು ಸಿನಿಮಾ ಮಾಡಿ, ಅದನ್ನು ಆ್ಯಪ್‍ನಲ್ಲಿ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂಬ ವಿಷಯವನ್ನು ಇತ್ತೀಚೆಗೆ ನಟಿ ಗೆಹನಾ ವಸಿಷ್ಠ್ ಬಾಯಿ ಬಿಟ್ಟಿದ್ದರು. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಈಗ ನೆಟ್ಟಿಗರಿಂದ ಭಾರೀ ಟ್ರೋಲ್‍ಗೆ ಒಳಗಾಗುತ್ತಿದ್ದಾರೆ. ಈ ನಟಿಯರು ಮಾಡುವ ಸೋಶಿಯಲ್ ಮೀಡಿಯಾ ಪೋಸ್ಟ್​ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್‍ಗಳು ಬರುತ್ತಿವೆ.