Tag: ಶಮಂತ್ ಬ್ರೊ ಗೌಡ

  • ಕಣ್ಮಣಿ ಡಾರ್ಲಿಂಗ್, ನೀನಂದ್ರೆ ನಂಗಿಷ್ಟ : ಶಮಂತ್

    ಕಣ್ಮಣಿ ಡಾರ್ಲಿಂಗ್, ನೀನಂದ್ರೆ ನಂಗಿಷ್ಟ : ಶಮಂತ್

    ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಕಣ್ಮಣಿ ಪರಿಚಯ ಮನೆಯ ಸದಸ್ಯರಿಗೆ ಆಗಿದೆ. ಕಣ್ಮಣಿ ಯಾರು ಅಂತ ಸ್ಪರ್ಧಿಗಳು ತುಂಬ ಹುಡುಕಿದ್ದಾರೆ. ಕಣ್ಮಣಿ ಧ್ವನಿ ಯಾರದ್ದು ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.

    ಮನೆಯಲ್ಲಿ ಒಂದು ಮಹಿಳೆ ಧ್ವನಿ ಕೇಳಿ ಬಂದಿದೆ. ಅದು ಯಾರದ್ದು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಆ ಮೇಲೆ ಆ ಮಹಿಳೆ ಒಂದಷ್ಟು ಸುಳಿವು ನೀಡಿದರೂ ಕೂಡ ಯಾರಿಗೂ ಕಂಡು ಹಿಡಿಯಲಾಗಲಿಲ್ಲ. ಆಕೆ ಹೆಸರು ಕಣ್ಮಣಿ. ಕಣ್ಮಣಿ ಯಾರಿಗೂ ಸಂಬಧಿಕಳಲ್ಲ, ಬದಲಾಗಿ ಅದು ಬಿಗ್ ಬಾಸ್ ಮನೆಯಲ್ಲಿರುವ ಕ್ಯಾಮರಾ ಎಂದು ಹೇಳಿದ್ದಾರೆ.

     ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಕ್ಯಾಮರಾ ಜೊತೆ ಮಾತನಾಡಿದ್ದಾರೆ. ಆ ವೇಳೆ ಕಣ್ಮಣಿ ಕೇಳಿದ ಕೆಲವು ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ನೀಡಿದ್ದಾರೆ. ಕಣ್ಮಣಿ ಸ್ಪರ್ಧಿಗಳ ಕಾಲೆಳೆಯೋದು ಮರೆತಿಲ್ಲ. ಶಮಂತ್ ಅವರು ಕಣ್ಮಣಿ ಕಂಡರೆ ಇಷ್ಟ ಎಂದಿದ್ದಾರೆ.

     ಉಪವಾಸ ಹಾಗೂ ಚಕ್ರವರ್ತಿ ಚಂದ್ರಚೂಡ್ ಅಲ್ಲಿ ಯಾವುದು ಇಷ್ಟ? ಯಾವುದನ್ನು ಬಿಡಲು ಸುಲಭ? ಎಂದು ಕಣ್ಮಣಿ ಕೇಳಿದ್ದಾರೆ. ಉಪವಾಸ ಇಷ್ಟ. ಉಪವಾಸ ನನ್ನ ಜೀವನದ ಭಾಗ, ಹಠ ಹಾಗೂ ಶುದ್ಧೀಕರಣಕ್ಕೆ ಉಪವಾಸ ಶಕ್ತಿಯಾಗಿದೆ, ಚಕ್ರವರ್ತಿ ಬಿಡೋದು ಸುಲಭ ಎಂದು ಸಂಬಗಿ ಹೇಳಿದ್ದಾರೆ.

    ಈ ಮನೆಗೆ ನೀವು ಆಟಗಾರನಾಗಿ ಬಂದಿದ್ದೀರಾ? ಆಟ ಆಡಿಸಲು ಬಂದಿದ್ದೀರಾ? ಎಂದು ಚಕ್ರವರ್ತಿಗೆ ಕಣ್ಮಣಿ ಕೇಳಿದಾಗ ಆಟ ಅನ್ನೋದು ತಾನು ಆಡುತ್ತ ಆಡಿಸಬೇಕು. ಆಟ ಆಡಿಸುವವನಿಗೆ ಆಟ ಆಡಿದ ಅನುಭವ, ಆಟ ಆಡುವವನಿಗೆ ಆಟ ಆಡಿಸುವ ಅನುಭವ ಇರಬೇಕು. ನಿಮ್ಮ ಎರಡು ಪ್ರಶ್ನೆಯಲ್ಲಿ ಉತ್ತರ ಇದೆ. ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದನಂತರ ಕಣ್ಮಣಿ ಧ್ವನಿ ಯಾರದ್ದು ಅಂತ ಹುಡುಕ್ತೀನಿ ಎಂದು ಚಕ್ರವರ್ತಿ ಹೇಳಿದ್ದಾರೆ.

     ಹೀಗೆ ಕಣ್ಮಣಿ ಮನೆ ಮಂದಿಗೆಲ್ಲ ಕೆಲವು ಪ್ರಶ್ನಗೆಗಳನ್ನು ಕೇಳಿದ್ದಾಳೆ. ಆಗ ಉತ್ತರ ಕೊಡಲಾಗದೆ ಕೆಲವರು ತಡಕಾಡಿದ್ದಾರೆ. ಕಣ್ಮಣಿ ಹೆಚ್ಚಾಗಿ ಶಮಂತ್‍ನನ್ನು ಹೆಚ್ಚಾಗಿ ಮಾತನಾಡಿಸಿದ್ದಾಳೆ. ಯಾಕೆ ಎಂದರೆ ಆಗಾಗ ಕ್ಯಾಮೆರಾ ಎದುರು ಹೋಗಿ ಬಿಗ್‍ಬಾಸ್ ನನಗೆ ಬಾ..ಗುರು ಸಾಂಗ್ ಹಾಕಿ ಎಂದು ಪ್ರತಿನಿತ್ಯ ರಿಕ್ವೆಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಕಣ್ಮಣಿ ಶಮಂತ್‍ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ಕಣ್ಮಣಿ ಡಾರ್ಲಿಂಗ್, ನೀನಂದ್ರೆ ನಂಗಿಷ್ಟ ಎಂದು ಶಮಂತ್ ಹೇಳಿದ್ದಾರೆ.

  • ಸ್ಪರ್ಧಿಗಳಿಗೆ ನಿಂಬೆಹಣ್ಣು ಮಂತ್ರಿಸಿಕೊಟ್ಟ ಬ್ರೊ ಗೌಡ

    ಸ್ಪರ್ಧಿಗಳಿಗೆ ನಿಂಬೆಹಣ್ಣು ಮಂತ್ರಿಸಿಕೊಟ್ಟ ಬ್ರೊ ಗೌಡ

    ಶಮಂತ್ ಬ್ರೊ ಗೌಡ ಇನ್ನೇನು ಮನೆಯಿಂದ ಆಚೆ ಕಾಲಿಡಬೇಕು ಎಂದುಕೊಳ್ಳುತ್ತಿದ್ದಾಗಲೇ, ಎಲ್ಲವೂ ತಲೆಕೆಳಗಾಯ್ತು. ಶಮಂತ್ ಬದಲು ವೈಜಯಂತಿ ಅಡಿಗ ತಮ್ಮದೇ ಆಗಿರುವ ಕೆಲವು ಕಾರಣ ಕೊಟ್ಟು ಮನೆಯಿಂದ ಆಚೆಗೆ ಹೋದರು. ಇದೀಗ ಶಮಂತ್ ಬಗ್ಗೆ ಇಡೀ ಮನೆಯೇ ಮಾತನಾಡಿಕೊಳ್ಳುತ್ತಿದೆ.

    ಶಮಂತ್‍ಗೆ ಇದೆಯಂತೆ ಮಚ್ಚೆ

    ಶಮಂತ್ ಉಳಿದುಕೊಂಡಿದ್ದ ಬಗ್ಗೆ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಚರ್ಚೆ ಮಾಡುತ್ತಿದ್ದರು. ಏನ್ ಅದೃಷ್ಟ ಅಲ್ವಾ ಶಮಂತ್‍ದು ಎಂದು ದಿವ್ಯಾ ಹೇಳುವಾಗ, ನಿಜವಾಗಿಯೂ ಇದು ಸಾಧ್ಯವೇ ಇಲ್ಲ. ಶಮಂತ್‍ಗೆ ಏನೋ ಮಚ್ಚೆ ಇದೆ ಎಂದು ಮಂಜು ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪ್ರಿಯಾಂಕ ಮತ್ತು ದಿವ್ಯಾ ಜೋರಾಗಿ ನಕ್ಕಿದ್ದಾರೆ.

    ಶಮಂತ್‍ನಿಂದ ಆಶೀರ್ವಾದ ಪಡೆಯಲು ಸಿದ್ಧರಾದ ಸ್ಪರ್ಧಿಗಳು

    ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಬಳಿ ರಾಜೀವ್, ನಮ್ಮ ಬುದ್ದಿಗೆ ಏನಾಗಿದೆ. ಶಮಂತ್ ನಾಮಿನೇಷನ್ ಆಗ್ತಾನೆ ಅಂತ ಬೆಡ್ ರೂಮ್ ಬಿಟ್ಟುಕೊಟ್ಟೆವು. ಎರಡು ವಾರ ಕ್ಯಾಪ್ಟನ್ ಮಾಡಿದ್ವಿ. ಇನ್ಮೇಲೆ ನಾವೆಲ್ಲ ಮಲಗುವಾಗ ಶಮಂತ್‍ನ ಬೆಡ್ ಮುಟ್ಟಿ ನಮಸ್ಕಾರ ಮಾಡ್ಕೊಂಡು ಮಲಗೋಣ. ಯಾರ್ಯಾರೋ ಜಗಳ ಮಾಡ್ತಾರೆ, ಉಪವಾಸ, ಸತ್ಯಾಗ್ರಹ ಮಾಡ್ತಾರೆ.. ತುಪ್ಪಕ್ಕೆ ಜಗಳ ಎಲ್ಲ ನಡೆಯಿತು… ಅವರೆಲ್ಲ ಮನೆಯಿಂದ ಹೋದ್ರು. ಏನೇ ಆಗಲಿ ಶಮಂತ್ ಹತ್ತಿರ ಬಂದು ಆಶೀರ್ವಾದ ಪಡೆಯಬೇಕು ಎಲ್ಲರೂ ಎಂದು ರಾಜೀವ್ ಹೇಳಿದ್ದಾರೆ.

    ರಾಜೀವ್ ಒಂದು ನಿಂಬೆ ಹಣ್ಣು ತೆಗೆದುಕೊಂಡು ಹೋಗಿ ಅದನ್ನು ಶಮಂತ್ ಕೈಗೆ ಇಟ್ಟು ನೀನು ಮನಸಲ್ಲಿ ಏನಾದರೂ ಅಂದುಕೊಂಡು ಈ ನಿಂಬೆ ಹಣ್ಣು ನನಗೆ ಕೊಡು ಎಂದು ಹೇಳಿಕೊಟ್ಟರು. ರಾಜೀವ್ ಹೇಳಿದಂತೆ ಶಮಂತ್ ಅದನ್ನು ಹಣೆ ಬಳಿ ಇಟ್ಟುಕೊಂಡು ವಾಪಸ್ ಕೊಟ್ಟರು. ನಂತರ ಶಮಂತ್ ಮಗಲುವ ಜಾಗಕ್ಕೆ ನಮಸ್ಕರಿಸಿದ ರಾಜೀವ್, ಶಮಂತ್ ಮಂತ್ರಿಸಿಕೊಟ್ಟ ನಿಂಬೆ ಹಣ್ಣನನ್ನು ಮನೆಮಂದಿಗೆಲ್ಲ ಮುಟ್ಟಿಸಿಕೊಂಡು ಬಂದರು.

    ಶಮಂತ್ ಎಲಿಮಿನೇಟ್ ಆದರೂ ಮನೆಯಲ್ಲಿ ಉಳಿದುಕೊಂಡಿರುವುದು ಮನೆಯ ಸ್ಪರ್ಧಿಗಳು ಮತ್ತು ವೀಕ್ಷಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಶಮಂತ್ ಕುರಿತಾಗಿ ಇಡೀ ಮನೆಯೆ ಮಾತನಾಡಿಕೊಳ್ಳುತ್ತಿದೆ. ಅದೇನೇ ಆಗಲಿ ಶಮಂತ್ ತಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಚೆನ್ನಾಗಿ ಆಡ್ತಾರಾ ಎಂಬುದನ್ನು ಕಾದುನೋಡಬೇಕಿದೆ.