Tag: ಶಮಂತ್ ಗೌಡ

  • ‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ‘ಲಕ್ಷ್ಮಿ ಬಾರಮ್ಮ’ (Lakshmi Baramma) ನಟ ಶಮಂತ್ ಗೌಡ (Shamanth Bro Gowda) ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸದ್ಯ ಬೆಂಗಳೂರಿನಲ್ಲಿ ನಟನ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಸಂಭ್ರಮದಲ್ಲಿ ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ.

    ಭಾವಿ ಪತ್ನಿ ಮೇಘನಾ (Meghana) ಜೊತೆ ಶಮಂತ್ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಡ್ಯಾನ್ಸ್ ಮಾಡುತ್ತಲೇ ವೇದಿಕೆ ಏರಿದ್ದಾರೆ. ವಧು ಮೇಘನಾ ಗಿಳಿ ಹಸಿರು ಡ್ರೆಸ್‌ನಲ್ಲಿ ಮಿಂಚಿದ್ರೆ, ವರ ಶಮಂತ್ ಕಪ್ಪು ಬಣ್ಣದ ಸೂಟ್ ಧರಿಸಿದ್ದಾರೆ. ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾ ಗೆದ್ದ ಬೆನ್ನಲ್ಲೇ ದೇವಿ ಮೊರೆ ಹೋದ ಶ್ರೀನಿಧಿ ಶೆಟ್ಟಿ

    ಈ ಮದುವೆ ಆರತಕ್ಷತೆಗೆ ರ‍್ಯಾಪರ್ ಆಲ್ ಓಕೆ, ನಟಿ ಮೌನ ಗುಡ್ಡೆಮನೆ, ‘ಭಾಗ್ಯಲಕ್ಷ್ಮಿ’ ಸೀರಿಯಲ್ ಬಾಲನಟ ಗುಂಡಣ್ಣ ಅಲಿಯಾಸ್ ನಿಹಾರ್, ತನ್ವಿ ಅಲಿಯಾಸ್ ಅಮೃತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಶಮಂತ್ ಮೂಲತಃ ಉತ್ತರ ಕರ್ನಾಟಕದವರು. ಶಮಂತ್ ಹಿರೇಮಠ ಅವರ ಪೂರ್ಣ ಹೆಸರು. ಇನ್ನೂ ಮೇಘನಾ ಮರಾಠಿಗರು. ಹೀಗಾಗಿ ಎರಡು ರೀತಿಯ ಪದ್ಧತಿಯಂತೆ ಮದುವೆ ಶಾಸ್ತ್ರಗಳು ನಡೆಯಲಿದೆ.

    ‘ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.

  • ಅಕ್ಕ ತಂಗಿ ಬಾಂಧವ್ಯದ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಗೆ ಸುಷ್ಮಾ ನಾಯಕಿ

    ಅಕ್ಕ ತಂಗಿ ಬಾಂಧವ್ಯದ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಗೆ ಸುಷ್ಮಾ ನಾಯಕಿ

    ಸೀರಿಯಲ್ (Serial) ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೊಚ್ಚ ಹೊಸ ಧಾರಾವಾಹಿಯೊಂದು ಹೊಸ ಕಥೆಯೊಂದಿಗೆ ಮನೆ ಮಂದಿಗೆಲ್ಲ ಮನರಂಜನೆ ನೀಡಲು ರೆಡಿಯಾಗಿದೆ. ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ (Bhagyalakshmi) ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈಗಾಗಲೇ ಪ್ರೋಮೋ ಮೂಲಕ ಗಮನ ಸೆಳೆದ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 10ರಿಂದ ಪ್ರತಿದಿನ ಪ್ರಸಾರವಾಗಲಿದೆ.  ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ಲಕ್ಷಣ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳ ಜೊತೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಸೇಪರ್ಡೆಗೊಳ್ಳಲಿದೆ. ಅಕ್ಟೋಬರ್ 10ರಿಂದ ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ದೊಡ್ಡ ತಾರಾಬಳಗವನ್ನು ಹೊಂದಿದ್ದು, ಇಡೀ ತಂಡ ಇಂದು ಮಾಧ್ಯಮದೆದುರು ಹಾಜರಾಗಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.

    ಅಕ್ಕತಂಗಿಯ ಬಾಂಧವ್ಯದ ಕಥೆ ಹೊಂದಿರುವ ಈ ಧಾರಾವಾಹಿಯಲ್ಲಿ ನಿರೂಪಕಿ ಸುಷ್ಮಾ (Sushma) ಕಥಾ ನಾಯಕಿಯಾಗಿ  ನಟಿಸುತ್ತಿದ್ದು,  ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ (Shamanth Gowda)(ಬ್ರೋ ಗೌಡ), ಸುದರ್ಶನ್, ಪದ್ಮಜಾ ರಾವ್ (Padmaja Rao), ಭೂಮಿಕ, ತಾಂಡವ ಸೂರ್ಯವಂಶಿ  ತಾರಾಬಳಗದಲ್ಲಿದ್ದಾರೆ. ಈ ಧಾರಾವಾಹಿ ಮೂಲಕ ಬಿಗ್ ಬಾಸ್ ಬ್ರೋ ಗೌಡ ಇದೇ ಮೊದಲ ಬಾರಿಗೆ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಜೈ ಮಾತಾ ಕಂಬೈನ್ಸ್ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಸುಷ್ಮಾ ಮಾತನಾಡಿ ಭಾಗ್ಯಲಕ್ಷ್ಮೀ ಮೂಲಕ ಹತ್ತು ವರ್ಷದ ನಂತರ ಮತ್ತೆ ಸೀರಿಯಲ್ ನಲ್ಲಿ ನಟಿಸುತ್ತಿದ್ದೇನೆ. ಜೀವನದಲ್ಲಿ ಏನೇ ಬಂದರು ಅದನ್ನು ಖುಷಿಯಿಂದ ಸ್ವಾಗತಿಸಿ ಸುತ್ತಮುತ್ತಲಿನವರನ್ನು ಖುಷಿಯಿಂದ ಇಡುವುದು, ಮನೆಯ ಜವಾಬ್ದಾರಿಯನ್ನು ಹೊತ್ತು ಇಡೀ ಜೀವನವನ್ನೇ ಸಂಸಾರಕ್ಕಾಗಿ ಮುಡಿಪಾಗಿಟ್ಟಿರೋ ಹೆಣ್ಣು ಮಗಳ ಪಾತ್ರ. ತನ್ನ ಪ್ರೀತಿಯ ತಂಗಿಗೆ ಒಳ್ಳೆಯ ವರನನ್ನು ನೋಡಿ ಆಕೆಯನ್ನು ಮದುವೆ ಮಾಡಬೇಕು ಆಕೆ ಖುಷಿಯಿಂದ ಇರಬೇಕು ಎಂಬ ಉದ್ದೇಶ ಇರುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ತಿಳಿಸಿಕೊಟ್ರು.

    ಹಿರಿಯ ಕಲಾವಿದೆ ಪದ್ಮಜಾ ರಾವ್ ಮಾತನಾಡಿ ಈ ಧಾರಾವಾಹಿಯಲ್ಲಿ ನನ್ನದು ಅತ್ತೆ ಪಾತ್ರ. ಇಲ್ಲಿ ನಾನು ಗಟ್ಟಿಗಿತ್ತಿಯಾದ ಅತ್ತೆ ಪಾತ್ರ ನಿರ್ವಹಿಸುತ್ತಿದ್ದೇನೆ. ಜೋರು ಮಾಡುವ, ಗದರುವ ಪಾತ್ರ ನನ್ನದು. ಇಲ್ಲಿವರೆಗೂ ಸಾಪ್ಟ್ ಕ್ಯಾರೆಕ್ಟರ್ ಮಾಡಿದ್ದ ನನಗೂ ಬದಲಾವಣೆ ಬೇಕಿತ್ತು ಈ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ. ಆರಂಭದಲ್ಲಿ  ಪಾತ್ರಕ್ಕೆ ಒಗ್ಗಿಕೊಳ್ಳಲು ಮುರ್ನಾಲ್ಕು ದಿನ ಬೇಕಾಯಿತು ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದ್ರು. ಕಲರ್ಸ್ ಫಿಕ್ಷನ್ ಹೆಡ್ ಜೆಡಿ ಮಾತನಾಡಿ ಭಾಗ್ಯಲಕ್ಷ್ಮೀ ಸಂಬಂಧಗಳ ಬೆಲೆಯನ್ನು ಸಾರುವ ಧಾರಾವಾಹಿ. ನಾವು ಯಾವಾಗಲೂ ಒಂದೇ ಜಾನರ್ ಧಾರಾವಾಹಿ ಮಾಡೋದಿಲ್ಲ. ಪ್ರತಿ ಭಾರೀ ಹೊಸತನ್ನು ಕೊಡಲು ನಮ್ಮ ತಂಡ ಪ್ರಯತ್ನಿಸುತ್ತಿರುತ್ತೇವೆ. ಸಂಬಂಧಗಳ ಮೇಲೆ ಬರೆದಿರುವ  ಅಕ್ಕತಂಗಿಯರ ಕಥೆ ಇದು. ವಿಭಿನ್ನ ಕಥಾಹಂದರವಿದೆ. ಖಂಡಿತ ಒಂದು ಹೊಸ ಅನುಭವವನ್ನು ವೀಕ್ಷಕರಿಗೆ ಇದು ನೀಡಲಿದೆ ಎಂದು ಸೀರಿಯಲ್ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    Live Tv
    [brid partner=56869869 player=32851 video=960834 autoplay=true]

  • ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಳೆದ ಕೆಲ ದಿನಗಳಿಂದ ಪ್ರಿಯಾಂಕಾ ಹಾಗೂ ಶಮಂತ್ ಜೋಡಿ ಕುರಿತು ಸಖತ್ ಚರ್ಚೆಯಾಗುತ್ತಿದ್ದು, ಚಕ್ರವರ್ತಿ ಇವರಿಬ್ಬರನ್ನು ಸೇರಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಮಾತ್ರ ನಾಚುತ್ತಲೇ ತಿರಸ್ಕರಿಸುತ್ತಿದ್ದಾರೆ. ಇಬ್ಬರೂ ಪರೋಕ್ಷವಾಗಿ ಮಾತನಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ಮಧ್ಯೆ ಕನ್ವಿನ್ಸ್ ಮಾಡಲು ಬಂದ ಚಕ್ರವರ್ತಿ ಅವರಿಗೆ ನಗುತ್ತಲೇ ತಕ್ಕ ಉತ್ತರ ನೀಡಿದ್ದಾರೆ.

    ನಿನ್ನೆ ನಾನು ಹೇಳಿದ್ದಕ್ಕೆ ಶಮಂತ್ ತುಂಬಾ ಡಿಸ್ಟರ್ಬ್ ಆಗಿಬಿಟ್ಟಿದ್ದಾನೆ, ಹಾಗೆ ಹೇಳಬೇಡಿ ಸರ್ ಎಂದು ಜಗಳ ಮಾಡಿದ. ನನಗೆ ಇಂಟರೆಸ್ಟ್ ಇಲ್ಲ, ಹೋಗಿ ನೇರವಾಗಿ ಹೇಳುತ್ತೇನೆ ಅವರಿಗೆ ಎಂದು ರೇಗಾಡಿದ ಎಂದು ಚಕ್ರವರ್ತಿ ಪ್ರಿಯಾಂಕಾಗೆ ಹೇಳಿದ್ದಾರೆ. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಪ್ರಿಯಾಂಕಾ, ನೀವು ನಿನ್ನೆ ತುಂಬಾ ಅತಿಯಾಗಿ ಮಾತನಾಡಿದಿರಿ ಎಂದು ಹೇಳಿದ್ದಾರೆ. ಇದಕ್ಕೆ ಚಕ್ರವರ್ತಿ ಉತ್ತರಿಸಿ ನನಗೇನು ಗೊತ್ತು, ನೀನು ಲವ್ ಸಿಂಬಲ್ ಮಾಡಿದ್ದಕ್ಕೆ ಆ ರೀತಿ ಅಫೆಕ್ಷನ್ ಇರಬಹುದು ಎಂದುಕೊಂಡೆ ಎಂದಿದ್ದಾರೆ. ತಕ್ಷಣವೇ ಉತ್ತರಿಸಿದ ಪ್ರಿಯಾಂಕಾ, ನನಗೆ ಹೊರಗಡೆ ತುಂಬಾ ಜನ ಬೇಕಾದವರಿದ್ದಾರೆ, ಈ ಮನೆಗೆ ಅದಕ್ಕೋಸ್ಕರ ಬಂದಿಲ್ಲ. ಆ ರೀತಿ ಯೋಚನೆಗಳೂ ಬರಲ್ಲ ಎಂದು ಖಾರವಾಗಿ ಪ್ರತಿಕ್ರಿಸಿದ್ದಾರೆ.

    ಇದಕ್ಕಾಗಿಯೇ ಬರಲ್ಲ, ಆ ರೀತಿ ಸಂಭವಿಸಬಹುದು ಎಂದು ಚಕ್ರವರ್ತಿ ಸಮರ್ಥಿಸಿಕೊಳ್ಳಲು ಹೋಗಿದ್ದಾರೆ. ನಿಮಗೆ ನೀವೇ ಹೇಗೆ ಯೋಚನೆ ಮಾಡುತ್ತೀರಿ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಹಾಗೆ ಅನ್ನಿಸಿದ್ದಕ್ಕೆ ಬಂದು ನಿನ್ನನ್ನು ಕೇಳಿದೆ, ಹಾಗೆ ಅನ್ನಿಸಿಲ್ಲ ಎಂದು ಗೊತ್ತಾದ ಮೇಲೆ ಬಿಟ್ಟಾಕಿದೆ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ಅಷ್ಟು ಬುದ್ಧಿವಂತರಾಗಿ ಹೀಗೆ ಮಾಡಿದರೆ ಹೇಗೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈ ಬಗ್ಗೆ ಶಮಂತ್ ಸಹ ಬೇಡ ಸರ್ ನಂಗೆ ಇಂಟರೆಸ್ಟ್ ಇಲ್ಲ ಅಂದ, ಸರಿ ಫ್ರೆಂಡ್ ಆಗಿರಿ ಎಂದು ಹೇಳಿದೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಹಾಗಾದರೆ ನಮಗೆ ಇಂಟರೆಸ್ಟ್ ಇದೆ ಅಂತಾನಾ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಆಗ ನನಗೆ ಮೂರ್ನಾಲ್ಕು ದಿನದಿಂದ ಹಾಗೆ ಅನ್ನಿಸುತ್ತಿತ್ತು, ನಿಮ್ಮಿಬ್ಬರ ನಡುವೆ ಅಫೆಕ್ಷನ್ ಇದೆ ಎಂದು ಭಾಸವಾಗಿತ್ತು ಎಂದು ಚಕ್ರವರ್ತಿ ಹೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸ್‍ನಲ್ಲಿ ಅಥವಾ ಎಲ್ಲಿ ಪರಿಚಯವಾಗಿದ್ದಿಯಾ ಗೊತ್ತಿಲ್ಲ, ಒಟ್ನಲ್ಲಿ ನೀನು ಚೆನ್ನಾಗಿರಬೇಕು ಅಷ್ಟೇ. ಇದಕ್ಕಾಗಿ ನಮ್ಮ ಕೈಲಾಗಿದ್ದನ್ನು ನಾವು ಮಾಡುತ್ತೇವೆ, ನಮಗೆ ದೇವರು ಶಕ್ತಿ, ಅಸ್ಥಿತ್ವ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಅದನ್ನು ಇಂತಹ ಕೆಲಸಗಳಿಗೆ ಉಪಯೋಗಿಸಬೇಡಿ, ಬೇರೆ ಕೆಲಸಗಳಿವೆ ಅವುಗಳನ್ನು ಮಾಡಿ, ನಾವು ಯಾರನ್ನು ಮದುವೆ ಆಗಬೇಕು ಎಂಬುದು ನಮಗೆ ಗೊತ್ತಿದೆ ಎಂದು ತಕ್ಕ ಉತ್ತರ ನೀಡಿದ್ದಾರೆ.

  • ಹೆಣ್ ಹಿಂದೆ ನಾವ್ ಹೋದ್ರೆ ಚೀಪ್, ಅವರು ನಮ್ ಹಿಂದೆ ಬರ್ಬೇಕು- ಶಮಂತ್‍ಗೆ ಸಂಬರಗಿ ಬುದ್ಧಿವಾದ

    ಹೆಣ್ ಹಿಂದೆ ನಾವ್ ಹೋದ್ರೆ ಚೀಪ್, ಅವರು ನಮ್ ಹಿಂದೆ ಬರ್ಬೇಕು- ಶಮಂತ್‍ಗೆ ಸಂಬರಗಿ ಬುದ್ಧಿವಾದ

    ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಕಲರವ ಹೆಚ್ಚಾಗಿದೆ. ಆದರೆ ಕೆಲವರಿಗೆ ಮಾತ್ರ ಒಂಟಿತನ ಕಾಡುತ್ತಿದೆ. ಅದರಲ್ಲಿ ಶಮಂತ್ ಸಹ ಒಬ್ಬರು. ಈ ಬಗ್ಗೆ ಅವರೇ ಹಲವು ಬಾರಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಜಂಟಿಯಾಗುವ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಅದೇ ರೀತಿ ಇಂದು ಪ್ರಶಾಂತ್ ಸಂಬರಗಿ ಅವರ ಬಳಿ ಈ ವಿಚಾರದ ಕುರಿತು ಹೇಳಿದ್ದು, ಇದಕ್ಕೆ ಸಂಬರಗಿ ಬುದ್ಧಿವಾದ ಹೇಳಿದ್ದಾರೆ.

    ಈ ಬಾರಿ ಮುಂದಿನ ವಾರ ಸುದೀಪ್ ಸರ್ ಶಮಂತ್ ಬಿಟ್ಟರೆ ನೀವು ಯಾರ ಹತ್ತಿರವೂ ಕಾಣಿಸಿಕೊಳ್ಳುವುದಿಲ್ಲವಲ್ಲ ಎಂದು ಹೇಳಬೇಕು, ಹಂಗ್ ಮಾಡ್ತೀನಿ ಎಂದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಅವರು ಕುಳಿತಾಗ ಶಮಂತ್ ಹೇಳುತ್ತಾರೆ. ಆಗ ಪ್ರತಿಕ್ರಿಯಿಸಿದ ಸಂಬರಗಿ, ಸುಮ್ನಿರು ನೀನು ಏನೂ ಮಾಡಬೇಡ. ಅವಾಗ್ಲೆ ಹೇಳಿದಿನಿ, ಹುಡ್ಗೀರನ್ನ ನೀನು ಚೇಸ್ ಮಾಡಬೇಡ, ಅವರು ನಿನ್ನನ್ನು ಚೇಸ್ ಮಾಡಬೇಕು. ಲೈಫ್‍ನಲ್ಲಿ ಪಾಠ ಹೇಳಿಕೊಟ್ಟಿದ್ದೇನೆ ನಿನಗೆ ಎಂದು ಹೇಳಿದ್ದಾರೆ.

    ಹೆಣ್ ಹಿಂದೆ ನಾವು ಹೋದರೆ ಚೀಪ್, ಅವರು ನಮ್ಮ ಹಿಂದೆ ಬರಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಮಂತ್, ನಾನು ಯಾರ ಹಿಂದೆ ಹೋದೆ ಇವಾಗ ಎಂದು ಪ್ರಶ್ನಿಸಿದ್ದಾರೆ. ಹೋಗ್ತಿದಿಯಲ್ಲ, ಈಗ ಹೇಳಿದೆಯಲ್ಲ ಎಂದಿದ್ದಾರೆ ಪ್ರಶಾಂತ್. ಈ ಮೂಲಕ ಶಮಂತ್‍ಗೆ ತಿವಿದಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿರುವುದು ಹೆಚ್ಚು ಕಂಡುಬರುತ್ತಿದೆ. ಒಂದೆಡೆ ಅರವಿಂದ್, ದಿವ್ಯಾ ಉರುಡುಗ ಮತ್ತೊಂದೆಡೆ ಮಂಜು, ದಿವ್ಯಾ ಸುರೇಶ್ ಜೋಡಿಯಾಗಿದ್ದಾರೆ. ಆದರೆ ಶಮಂತ್‍ಗೆ ಮಾತ್ರ ಒಂಟಿತನ ಕಾಡುತ್ತಿರುತ್ತದೆ. ಈ ಬಗ್ಗೆ ಶಮಂತ್ ದಿವ್ಯಾ ಉರುಡುಗ ಬಳಿ ಮಾತನಾಡಿದ್ದು, ಕಷ್ಟ- ಸುಖ ಹಂಚಿಕೊಳ್ಳಲು ನೀವು ಜೋಡಿಯಾಗಿದ್ದೀರಿ, ನನಗೆ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದರು. ಆಗ ಯಾವುದೇ ವಿಚಾರ ಇದ್ದರೂ ನನ್ನ ಬಳಿ ಹಂಚಿಕೋ ಎಂದು ದಿವ್ಯಾ ಉರುಡುಗ ಹೇಳಿದ್ದರು.

    ಇದೀಗ ಕಿಚ್ಚ ಸುದೀಪ್ ಸಹ ವಾರದ ಪಂಚಾಯಿತಿಯಲ್ಲಿ ಭಾಗವಹಿಸದಿದ್ದರೂ, ವಾಯ್ಸ್ ನೋಟ್ ಮೂಲಕ ಸ್ಪರ್ಧಿಗಳಿಗೆ ತಿವಿದಿದ್ದಾರೆ. ಇದರಲ್ಲಿ ಜೋಡಿ ಬಗ್ಗೆ ಸಹ ಮಾತನಾಡಿದ್ದು, ಬೇರೆ ಯಾರೊಂದಿಗೂ ಬೆರೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ಹೊತ್ತಲ್ಲಿ ಹುಡ್ಗೀರಿಗೆ ಹತ್ತಿರವಾಗಲು ಶಮಂತ್ ಪ್ರಯತ್ನಿಸುತ್ತಿದ್ದು, ಇದಕ್ಕೆ ಸಂಬರಗಿಯವರು ಬುದ್ಧಿವಾದ ಹೇಳಿದ್ದಾರೆ.

  • ಶಮಂತ್‌ಗೆ ನಾಯಕತ್ವದ ಪಾಠ ಹೇಳಿಕೊಟ್ಟ ಸುದೀಪ್‌

    ಶಮಂತ್‌ಗೆ ನಾಯಕತ್ವದ ಪಾಠ ಹೇಳಿಕೊಟ್ಟ ಸುದೀಪ್‌

    ಬೆಂಗಳೂರು: ಬಿಗ್‌ಬಾಸ್‌ ವಾರದ ಕಥೆಯಲ್ಲಿ ಸುದೀಪ್‌ ನಾಯಕ ಶಮಂತ್‌ ಗೌಡ(ಬ್ರೋ ಗೌಡ) ಅವರಿಗೆ ನಾಯಕತ್ವದ ಪಾಠ ಹೇಳಿಕೊಟ್ಟಿದ್ದಾರೆ.

    ಮೊದಲ ವಾರದಲ್ಲೇ ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡಿದ್ದರು. ಚಂದ್ರಕಲಾ ಮೋಹನ್‌, ನಿರ್ಮಲ ಮತ್ತು ನಿಧಿ ಸುಬ್ಬಯ್ಯ ಅವರಿಗೆ ಅಡುಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ನಿರ್ಮಲ ಅಡುಗೆ ಮನೆ ಕೆಲಸದಲ್ಲಿ ತೊಡಗಿಕೊಳ್ಳದ ಕಾರಣ ಚಂದ್ರಕಲಾ ಅವರಿಗೆ ಸಿಟ್ಟು ಬಂದಿತ್ತು. ಈ ಕಾರಣಕ್ಕೆ ಇಬ್ಬರೂ ಎಲ್ಲರ ಮುಂದೆಯೇ ಜಗಳವಾಡಿದ್ದರು.

    ವಾರದ ಕಥೆಯಲ್ಲಿ ಸುದೀಪ್ ಈ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ನಾಯಕ ಶಮಂತ್ ಗೌಡರನ್ನು ಈ ವಿಚಾರದ ಬಗ್ಗೆ ಕೇಳಿದಾಗ, “ನನಗೆ ಅಡುಗೆ ಮನೆಯಲ್ಲಿ ಕೆಲಸ ಇಲ್ಲ. ಚಂದ್ರಕಲಾ ಅವರೇ ಮಾಡುತ್ತಿದ್ದಾರೆ ನಾನು ಶೌಚಾಲಯ ಕ್ಲೀನ್ ಮಾಡುತ್ತೇನೆ ಎಂದು ನಿರ್ಮಲ ಹೇಳಿದ್ದರು. ಅದಕ್ಕೆ ನಾನು ಮೊದಲು ಅಡುಗೆ ಜವಾಬ್ದಾರಿಯನ್ನು ನೋಡಿಕೊಳ್ಳಿ. ನಂತರ ಫ್ರೀ ಆದರೆ ಶೌಚಾಲಯ ಇತ್ಯಾದಿ ಕೆಲಸ ಮಾಡಿ” ಎಂದು ಹೇಳಿದ್ದೆ ಎಂದರು.

    ಇದಕ್ಕೆ ಸುದೀಪ್‌ ಯಾರಿಗೆ ಯಾವ ಟಾಸ್ಕ್‌ ಕೊಡಲಾಗಿದೆಯೋ ಅವರು ಅದನ್ನೇ ಮಾಡಬೇಕು. ಬೇರೆಯವರು ಬೇರೆ ಕೆಲಸ ಮಾಡುತ್ತಾರೆ.  ನಾಯಕನಾದವರು ಈ ವಿಚಾರದಲ್ಲಿ ಸ್ಪಷ್ಟತೆಯನ್ನು ಹೊಂದಿರಬೇಕು. ಇನ್ನು ಮುಂದೆ ಈ ರೀತಿ ತಪ್ಪುಗಳು ಮನೆಯಲ್ಲಿ  ನಡೆಯಬಾರದು ಎಂದು  ನಾಯಕತ್ವದ ಪಾಠವನ್ನು ಹೇಳಿಕೊಟ್ಟರು.

    ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಶಮಂತ್ ಎರಡನೇ ವಾರವೂ ನಾಯಕನಾಗಿ ಮುಂದುವರಿದಿದ್ದಾರೆ. ಶಮಂತ್ ಅವರನ್ನು ಎರಡನೇ ವಾರವೂ ಸಹ ಕ್ಯಾಪ್ಟನ್ ಆಗಿ ಮುಂದುವರಿಸಲು ಮನೆಯವರು ತೀರ್ಮಾನ ತೆಗೆದುಕೊಂಡಿದ್ದಾರೆ.

  • ಇಲ್ಲಿಂದ ಬೋಳಿಸಿಯೇ ಕಳಿಸೋದು: ಧನುಶ್ರೀ

    ಇಲ್ಲಿಂದ ಬೋಳಿಸಿಯೇ ಕಳಿಸೋದು: ಧನುಶ್ರೀ

    ಬೆಂಗಳೂರು: ಬಿಗ್‍ಬಾಸ್ ಆರಂಭದ ಮೊದಲ ದಿನವೇ ಆಟ ಶುರುವಾಗಿದ್ದು, ನಾಲ್ಕು ಜನ ಮನೆಯಿಂದ ಹೊರ ಹೋಗೋಕೆ ನಾಮಿನೇಟ್ ಆಗಿದ್ದಾರೆ. ಈ ನಡುವೆ ಟಿಕ್‍ಟಾಕ್ ಸ್ಟಾರ್ ಧನುಶ್ರೀ ಮತ್ತು ಶಮಂತ್ ಗೌಡ ನಡುವೆ ಫನ್ನಿ ಮಾತು ನಡೆತಯುತ್ತಿದೆ.

    ಧನುಶ್ರೀ ಬಿಗ್‍ಬಾಸ್ ಮನೆಗೆ ಮೊದಲ ಬಂದ ಸ್ಪರ್ಧಿ. ಬಿಗ್‍ಬಾಸ್ ಆರಂಭಕ್ಕೂ ಮುನ್ನ ದೊಡ್ಮನೆಗೆ ಬಂದಿದ್ದ ಸುದೀಪ್ ಬಚ್ಚಿಟ್ಟಿದ್ದ ಚೆಂಡುಗಳನ್ನು ಹುಡುಕುವ ಕೆಲಸವನ್ನ ಧನುಶ್ರೀಗೆ ನೀಡಲಾಗಿತ್ತು. ಬಿಗ್‍ಬಾಸ್ ಸೂಚನೆಯಂತೆ ಮೊದಲ ಸ್ಪರ್ಧಿಯಾಗಿ ಬಂದ ಧನುಶ್ರೀ ಬಚ್ಚಿಟ್ಟಿದ್ದ ಎಲ್ಲ 17 ಚೆಂಡುಗಳನ್ನ ಹುಡುಕಿ ತಮ್ಮ ಬಳಿ ಇರಿಸಿಕೊಂಡಿದ್ದರು. ಆದ್ರೆ ಬೆಳಗ್ಗೆ ದಿವ್ಯಾ 17ರಲ್ಲಿಯ ಒಂದು ಚೆಂಡನ್ನು ಧನುಶ್ರೀಗೆ ಹೇಳದೇ ಎತ್ತಿಟ್ಟುಕೊಂಡರು.

    ಕೆಲವೇ ಕ್ಷಣಗಳಲ್ಲಿ ಚೆಂಡುಗಳನ್ನ ಎಲ್ಲರಿಗೂ ಹಂಚುವಂತೆ ಧನುಶ್ರೀಗೆ ಸೂಚಿಸಿದ್ರು. ಆದ್ರೆ ಒಂದು ಚೆಂಡು ಕಾಣಿಸುತ್ತಿಲ್ಲ ಎಂದು ಹೇಳಿದ ಧನುಶ್ರೀ 16 ಬಾಲ್ ಎಲ್ಲರಿಗೂ ಹಂಚಲು ಮುಂದಾದ್ರು. ಈ ವೇಳೆ ಶಮಂತ್ ಗೌಡ ಮೇಲೆ ಅನುಮಾನ ವ್ಯಕ್ತಪಡಿಸಿದ ಧನುಶ್ರೀ, ಬಾಲ್ ನೀಡಲು ಹಿಂದೇಟು ಹಾಕಿದರು. ಆವಾಗ ನಿಮ್ಮ ಕೂದಲಿನ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಚೆಂಡು ತೆಗೆದುಕೊಂಡಿಲ್ಲ ಎಂದು ಹೇಳಿದಾಗ ಮುನಿಸಿಕೊಂಡ ಧನುಶ್ರೀ ನನ್ನ ಕೂದಲು ಮೇಲೆ ಯಾಕೆ ಆಣೆ ಮಾಡ್ತೀರಿ. ನಿಮ್ಮ ಕೂದಲಿನ ಮೇಲೆ ಆಣೆ ಮಾಡಿ. ಇಲ್ಲಿಂದ ಹೋಗುವಷ್ಟರಲ್ಲಿ ನಿಮ್ಮ ಕೂದಲು ಬೋಳಿಸಿಯೇ ಕಳಿಸೋದು ಎಂದು ಹೇಳಿ ನಕ್ಕರು.

    ಬಿಗ್‍ಬಾಸ್ ನೀಡಿದ ಮೊದಲ ಟಾಸ್ಕ್ ನಲ್ಲಿ ಗೆದ್ದ ಶಮಂತ್ ಗೌಡ್ ಈ ವಾರದ ವಿನ್ನರ್ ಪಟ್ಟದ ಜೊತೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ನಿರ್ಮಲಾ, ಧನುಶ್ರೀ, ಮಂಜು ಪಾವಗಡ, ನಿಧಿ ಮತ್ತು ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.