Tag: ಶಬ್ಧ ಮಾಲಿನ್ಯ

  • ವಾಲಗದ ಸದ್ದು, ನಾದಸ್ವರ ಇಲ್ಲದೇ ಮದ್ವೆ ಆಗಬೇಕಂತೆ!

    ವಾಲಗದ ಸದ್ದು, ನಾದಸ್ವರ ಇಲ್ಲದೇ ಮದ್ವೆ ಆಗಬೇಕಂತೆ!

    ಬೆಂಗಳೂರು: ಸೌಂಡಿಲ್ಲದೇ ಮದ್ವೆ ಆಗ್ರಪ್ಪ…! ವಾಲಗದ ಸದ್ದು ನಾದಸ್ವರದ ಸದ್ದಿದೊಂದಿಗೆ ಮದ್ವೆ ಆದರೆ ಕೇಸ್ ಹಾಕೋದಕ್ಕೆ ಅಧಿಕಾರಿಗಳು ರೆಡಿಯಾಗಿದ್ದಾರೆ. ಮದುವೆಯಲ್ಲಿ ಸಂಗೀತ ಇರಲೇಬೇಕು. ಮಾಂಗಲ್ಯಧಾರಣೆ ವೇಳೆ ಗಟ್ಟಿಮೇಳ ಆಗಲೇಬೇಕು. ಈ ಸಂಗೀತದಿಂದ ಶಬ್ಧ ಮಾಲಿನ್ಯ ಆಗುತ್ತೆ ಎಂದು ಅಧಿಕಾರಿಗಳು ಮದುವೆ ನಡೆಯುವ ಹೋಟೆಲ್ ಗೆ ನೋಟಿಸ್ ನೀಡಿದ್ದಾರೆ.

    ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಫೇಮಸ್ ಜಯಮಹಲ್ ಹೋಟೆಲ್‍ಗೆ ನೋಟಿಸ್ ನೀಡಿದೆ. ಬೆಂಗಳೂರಿನ ರಸ್ತೆಯ ಕೆಟ್ಟು ಹೋದ ವಾಹನ, ಕಾರ್ಖನೆಗಳಿಂದ ಶಬ್ಧ ಮಾಲಿನ್ಯವಾಗ ಆಗಲ್ವಂತೆ. ಮದುವೆಯಲ್ಲಿ ಬಳಸುವ ಸಂಗೀತದಿಂದ ಸಿಕ್ಕಾಪಟ್ಟೆ ಶಬ್ಧಮಾಲಿನ್ಯ ಆಗುತ್ತಿದೆ ಎಂದು ಅಧಿಕಾರಿಗಳು ಹೋಟೆಲ್ ಗೆ ನೋಟಿಸ್ ನೀಡಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಟ್ರಾಫಿಕ್‍ನಲ್ಲಿ ಕರ್ಕಶ ಶಬ್ಧ ಮಾಡ್ಕೊಂಡು ಓಡಾಡುವ ವಾಹನ, ಕೆಟ್ಟ ಶಬ್ಧ ಬರುವ ಕಾರ್ಖಾನೆಗಳ ಬಗ್ಗೆ ಕ್ಯಾರೆ ಮಾಡದೇ ಮದ್ವೆ ವಾಲಗ ಸದ್ದು, ರಿಸೆಪ್ಶನ್ ಫಂಕ್ಷನ್‍ನಲ್ಲಿ ಹಾಕುವ ಲೈಟ್ ಮ್ಯೂಸಿಕ್‍ನ ಬಗ್ಗೆ ಹೆವ್ವಿ ತಲೆಕೆಡಿಸಿಕೊಂಡಿದೆ.

    ಬೆಂಗಳೂರಿನ ಕಂಟೋನ್ಮೆಂಟ್‍ನಲ್ಲಿರುವ ಜಯಮಹಲ್ ಹೋಟೆಲ್‍ನಲ್ಲಿ ಮದುವೆ, ಆರತಕ್ಷತೆಯಿಂದ ಶಬ್ಧ ಮಾಲಿನ್ಯವಾಗುತ್ತಿದೆ ಅಂತಾ ನೋಟಿಸ್ ನೀಡಲಾಗಿದೆ. ನೋಟಿಸ್ ನೋಡಿ ತಬ್ಬಿಬ್ಬಾಗಿರುವ ಹೋಟೆಲ್‍ನವರು, ಮದುವೆ ವಾಲಗದ ಸೌಂಡ್‍ಗೆ ನೋಟಿಸ್ ಕೊಟ್ರೇ ಹೇಗೆ? ವಾಲಗ, ನಾದಸ್ವರ, ಲೈಟ್ ಮ್ಯೂಸಿಕ್ ಇಲ್ಲದೇ ಇದ್ರೆ ಮದುವೆ ಹೇಗೆ ಅಂತಾ ಪ್ರಶ್ನಿಸಿದ್ದಾರೆ.

    ಅಧಿಕಾರಿಗಳು ನೋಟಿಸ್ ನೀಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ಎನ್‍ಜಿಟಿ ಶಾಕ್

    ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ಎನ್‍ಜಿಟಿ ಶಾಕ್

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ ಯಾರು ಯಾವುದೇ ಪ್ರತಿಭಟನೆಗಳನ್ನು ನಡೆಸುವಂತಿಲ್ಲ.

    ಶಬ್ದ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಆದೇಶ ಹೊರಡಿಸಿದೆ. ಪ್ರತಿಭಟನೆಗಳಿಗೆ ರಾಮಲೀಲಾ ಮೈದಾನ ಅಥಾನ ಅಜ್ಮೀರಿ ಗೇಟ್ ಪರ್ಯಾಯ ಜಾಗ ಕಲ್ಪಿಸುವಂತೆ ದೆಹಲಿ ಸರ್ಕಾರ ಮತ್ತು ಪಾಲಿಕೆಗೆ ಎನ್‍ಜಿಟಿ ಸೂಚಿಸಿದೆ.

    ಈ ಆದೇಶ ಪ್ರಕಟವಾದ ಈ ಕ್ಷಣದಿಂದಲೇ ಈ ಸ್ಥಳದಲ್ಲಿ ಧ್ವನಿವರ್ಧಕಗಳನ್ನು ಬಳಸಿ ಯಾವುದೇ ಪ್ರತಿಭಟನೆ, ಧರಣಿ, ಜನರನ್ನು ಉದ್ದೇಶಿಸಿ ಯಾರು ಮಾತನಾಡಕೂಡದು ಎಂದು ಸೂಚಿಸಿದೆ.

    ವರುಣ್ ಸೇಠ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಎನ್‍ಜಿಟಿ ಈ ಆದೇಶ ಹೊರಡಿಸಿದೆ. ಶಾಂತಿ ಮತ್ತು ಆರೋಗ್ಯ ಪೂರ್ಣ ವಾತಾವರಣದಲ್ಲಿ ಜೀವಿಸಬೇಕು. ಆದರೆ ಈ ಪ್ರತಿಭಟನೆಗಳಲ್ಲಿ ಬಳಸುವ ಧ್ವನಿವರ್ಧಕಗಳಿಂದ ನಿದ್ದೆ ಮಾಡುವ ಮತ್ತು ಬದುಕುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಈ ಸ್ಥಳದಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಭಟನೆಗಳನ್ನು ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ವರುಣ್ ಸೇಠ್ ಮನವಿ ಮಾಡಿಕೊಂಡಿದ್ದರು.