Tag: ಶಬಾನಾ ಅಜ್ಮಿ

  • ಮೋದಿ ಟ್ವೀಟ್ ಕಾಪಿ ಮಾಡಿ ಐರಾವತ ಬೆಡಗಿ ಟ್ರೋಲ್

    ಮೋದಿ ಟ್ವೀಟ್ ಕಾಪಿ ಮಾಡಿ ಐರಾವತ ಬೆಡಗಿ ಟ್ರೋಲ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಕಾಪಿ ಮಾಡಿ ಐರಾವತ ಸಿನಿಮಾದ ನಟಿ ಊರ್ವಶಿ ರೌಟೇಲಾ ಟ್ರೋಲ್‍ಗೆ ಒಳಗಾಗಿದ್ದಾರೆ.

    ಶಬಾನಾ ಅಜ್ಮಿ ಅವರು ಶನಿವಾರ ಸಂಜೆ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಈ ವಿಚಾರ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ‘ಅಪಘಾತದಲ್ಲಿ ಶಬಾನಾ ಅಜ್ಮಿ ಜಿ ಗಾಯಗೊಂಡ ಸುದ್ದಿ ದುಃಖ ತಂದಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ಪ್ರಧಾನಿ ಮೋದಿ ಅವರ ಟ್ವೀಟ್ ಅನ್ನು ಊರ್ವಶಿ ರೌಟೇಲಾ ಯಥಾವತ್ತಾಗಿ ನಕಲು ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಊರ್ವಶಿ ರೌಟೇಲಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ನೀವ್ಯಾಕೆ ಮೋದಿ ಅವರ ಟ್ವೀಟ್ ಅನ್ನು ಕಾಪಿ, ಪೇಸ್ಟ್ ಮಾಡಿದ್ರಿ. ಸುಮ್ಮನೆ ರಿಟ್ವೀಟ್ ಮಾಡಬಹುದಿತ್ತು ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಕಾಪಿ, ಪೇಸ್ಟ್ ಮಾಡುವುದು ಅಪರಾಧವಲ್ಲ ಬಿಡಿ. ಕಾಪಿ ಪೇಸ್ಟ್ ಸೂಪರ್ ಎಂದು ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

  • ಶಬಾನಾ ಅಜ್ಮಿ ಕಾರ್ ಅಪಘಾತ- ಚಾಲಕನ ವಿರುದ್ಧ ಎಫ್‍ಐಆರ್

    ಶಬಾನಾ ಅಜ್ಮಿ ಕಾರ್ ಅಪಘಾತ- ಚಾಲಕನ ವಿರುದ್ಧ ಎಫ್‍ಐಆರ್

    ಮುಂಬೈ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಬಾನಾ ಅಜ್ಮಿ ಅವರ ಕಾರ್ ಚಾಲಕನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಶನಿವಾರ ಮಧ್ಯಾಹ್ನ ಮುಂಬೈ-ಪುಣೆ ಹೆದ್ದಾರಿಯಲ್ಲಿ ಶಬಾನಾ ಅಜ್ಮಿ ಪ್ರಯಾಣಿಸುತ್ತಿರುವ ಕಾರ್ ಅಪಘಾತಕ್ಕೊಳಗಾಗಿತ್ತು. ಕಾರ್ ಚಾಲಕನನ್ನು ಅಮ್ಲೆಶ್ ಯೋಗೇಂದ್ರ ಕಾಮತ್ ಎಂದು ಗುರುತಿಸಲಾಗಿದ್ದು, ಅಪಘಾತಕ್ಕೊಳಗಾದ ಲಾರಿಯ ಚಾಲಕ ರಾಜೇಶ್ ಪಾಂಡುರಂಗ ಶಿಂಧೆ ಅವರು ಶಬಾನಾ ಅಜ್ಮಿ ಅವರ ಕಾರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನೆಲೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಚಾಲಕನ ರ್ಯಾಶ್ ಡ್ರೈವಿಂಗ್ (ಅತಿಯಾದ ವೇಗ)ನಿಂದಾಗಿ ಈ ಅಪಘಾತ ಸಂಭಿಸಿದೆ. ಪುಣೆ-ಮುಂಬೈ ಹೈ ವೇಯಲ್ಲಿ ಚಲಿಸುತ್ತಿದ್ದ ಲಾರಿಗೆ ಕಾರು ಗುದ್ದಿದೆ ಎಂದು ಎಫ್‍ಐಆರ್‍ನಲ್ಲಿ ದಾಖಲಿಸಲಾಗಿದೆ.

    ಘಟನೆ ಸಂಭವಿಸುತ್ತಿದ್ದಂತೆ ಶಬಾನಾ ಅಜ್ಮಿಯವರನ್ನು ತಕ್ಷಣವೇ ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಅಂಧೇರಿಯಲ್ಲಿನ ಕೋಕಿಲಾಬೆನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ವೈದ್ಯರು ಮಾಹಿತಿ ನೀಡಿ, ಅಜ್ಮಿಯವರ ತಲೆಗೆ ಪೆಟ್ಟು ಬಿದ್ದಿದೆ. ಅಲ್ಲದೆ ಬೆನ್ನು ಮೂಳೆಗೆ ಹಾನಿಯಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ಕುರಿತು ಶಬಾನಾ ಅಜ್ಮಿ ಪತಿ, ಸಾಹಿತಿ, ಜಾವೇದ್ ಅಖ್ತರ್ ಪ್ರತಿಕ್ರಿಯಿಸಿ, ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

    ನಟಿ ಶಬನಾ ಅಜ್ಮಿಯವರು ಪ್ರಯಾಣಿಸುತ್ತಿದ್ದ ಕಾರು ಮುಂಬೈ-ಪುಣೆ ಎಕ್ಸ್‍ಪ್ರೆಸ್ ವೇಯಲ್ಲಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ 3.30ಕ್ಕೆ ಅಪಘಾತಕ್ಕೀಡಾಗಿತ್ತು. ಅಜ್ಮಿಯವರು ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿತ್ತು. ಅವರನ್ನು ಎಂಜೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಕೋಕಿಲಾಬೆನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    ಅಪಘಾತ ಸುದ್ದಿ ತಿಳಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದರು.

  • ರೈಲ್ವೇ ಜೊತೆ  ಕ್ಷಮೆ ಕೇಳಿದ ಹಿರಿಯ ನಟಿ ಶಬಾನಾ ಅಜ್ಮಿ

    ರೈಲ್ವೇ ಜೊತೆ ಕ್ಷಮೆ ಕೇಳಿದ ಹಿರಿಯ ನಟಿ ಶಬಾನಾ ಅಜ್ಮಿ

    ನವದೆಹಲಿ: ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ ಎನ್ನುವ ವಿಡಿಯೋವನ್ನು ಟ್ವೀಟ್ ಮಾಡಿದ್ದ ಹಿರಿಯ ನಟಿ ಶಬಾನಾ ಅಜ್ಮಿ ಈಗ ಕ್ಷಮೆ ಕೇಳಿದ್ದಾರೆ.

    ಸೋಮವಾರ ಹಿರಿಯ ನಟಿ ಅಜ್ಮಿ ಅವರು, ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದ 30 ಸೆಕೆಂಡ್ ವಿಡಿಯೋ ಟ್ವೀಟ್ ಮಾಡಿದ್ದರು. ಅಲ್ಲದೇ ಇದನ್ನು ನೋಡಿ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ರೈಲ್ವೇ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದರು.

    ಅಜ್ಮಿ ಅವರ ಟ್ವೀಟ್‍ನಿಂದ ತಬ್ಬಿಬ್ಬಾದ ರೈಲ್ವೇ ಸಚಿವಾಲಯ ವಿಡಿಯೋ ಎಲ್ಲಿದೆಂದು ಪತ್ತೆಹಚ್ಚಿ, ಬುಧವಾರ ಸಂಜೆ ತಮ್ಮ ಉತ್ತರವನ್ನು ಟ್ವೀಟ್ ಮಾಡಿದ್ದಾರೆ. “ಮೇಡಂ ನೀವು ಟ್ಯಾಗ್ ಮಾಡಿರುವ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿವ ವಿಡಿಯೋ ಮಲೇಷ್ಯಾದ ಉಪಹಾರ ಗೃಹಕ್ಕೆ ಸೇರಿದ್ದು” ಎಂದು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.

    ಸಚಿವಾಲಯ ಟ್ವೀಟ್ ನೋಡಿದ ಬಳಿಕ ಎಚ್ಚೆತ್ತ ಹಿರಿಯ ನಟಿ, ನನ್ನಿಂದ ತಪ್ಪಾಗಿದೆ ಕ್ಷಮಿಸಿ ಹಾಗೂ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಶಬಾನಾ ಅಜ್ಮಿ ಅವರ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದು, ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ರೈಲ್ವೇ ಸಚಿವಾಲಯವು ಅಜ್ಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕೆಂದು ಆಗ್ರಹಿಸಿದ್ದಾರೆ.

  • ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಮುಂಬೈ: ಮಂಗಳವಾರ ರಾತ್ರಿ ಮನೆಯ ಬಾಗಿಲು ತೆಗೆಯುತ್ತಿದ್ದಾಗ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಘಟನೆ ಇಡೀ ದೇಶ ಬೆಚ್ಚಿಬೀಳುವಂತೆ ಆಗಿದೆ. ಇದಕ್ಕೆ ಬಾಲಿವುಡ್ ಮಂದಿ ಪ್ರತಿಕ್ರಿಯಿಸಿ ಟ್ವಿಟ್ಟರ್ ನಲ್ಲಿ ಖಂಡಿಸಿ ಕಂಬನಿ ಮಿಡಿದಿದ್ದಾರೆ.

    ಬಾಲಿವುಡ್ ನ ಸೋನಮ್ ಕಪೂರ್, ಫರಾನ್ ಅಕ್ತರ್, ಶಬಾನಾ ಅಜ್ಮಿ, ಶೇಖರ್ ಕಪೂರ್, ಮಹೇಶ್ ಭಟ್ ಹಾಗೂ ವಿಶಾಲ್ ದದ್ಲಾನಿ ಟ್ವಿಟ್ಟರ್ ನಲ್ಲಿ ಹತ್ಯೆಯನ್ನು ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ಹೆಸರಲ್ಲಿ ಈ ಘಟನೆಗಳನ್ನು ನಡೆಸುತ್ತಿದ್ದಾರೆ. ಗೌರಿ ಲಂಕೇಶ್ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಸಾವಿಗೆ ನ್ಯಾಯ ಸಿಗಲಿ ಎಂದು ಬಾಲಿವುಡ್ ಪ್ರತಿಕ್ರಿಸಿದ್ದಾರೆ.

    ಗೌರಿ ಲಂಕೇಶ್ ಹತ್ಯೆಯ ಕುರಿತು ಕೆಲವು ಟ್ವೀಟ್ ಗಳು ಇಲ್ಲಿವೆ