Tag: ಶನೇಶ್ವರ ದೇವಾಲಯ

  • ಸೀರೆಯುಟ್ಟು ದೇವಾಲಯದ ಕಳ್ಳತನಕ್ಕೆ ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ!

    ಸೀರೆಯುಟ್ಟು ದೇವಾಲಯದ ಕಳ್ಳತನಕ್ಕೆ ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ!

    ರಾಮನಗರ: ಕಳ್ಳತನ ಮಾಡಿ ತಗಲಾಕಿಕೊಳ್ಳಬಾರದು ಎಂದು ಖದೀಮರು ಒಂದಲ್ಲೊಂದು ಉಪಾಯ ಹುಡುಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಸೀರೆಯುಟ್ಟು ಹೆಣ್ಣಿನ ವೇಷದಲ್ಲಿ ಬಂದು ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿ, ಪೊಲೀಸರ ಅತಿಥಿಯಾಗಿರುವ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಮಣ್ಣಿಗನಹಳ್ಳಿ (Manniganahalli) ಗ್ರಾಮದಲ್ಲಿ ನಡೆದಿದೆ.

    ಮಣ್ಣಿಗನಹಳ್ಳಿ ಗ್ರಾಮದ ಶಶಿ ಬಂಧಿತ ಆರೋಪಿ. ಈತ ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಉಪಾಯ ಮಾಡಿ ಸೀರೆಯುಟ್ಟು ಕಳ್ಳತನ ಮಾಡಲು ಮುಂದಾಗಿದ್ದ. ಇದನ್ನೂ ಓದಿ: ಶಿವಮೊಗ್ಗ | ಎರಡೇ ದಿನದಲ್ಲಿ ಹೃದಯಾಘಾತಕ್ಕೆ ನಾಲ್ವರು ಬಲಿ

    ಆರೋಪಿಯು ಸೀರೆಯುಟ್ಟು ಗ್ರಾಮದ ಶನೇಶ್ವರ ದೇವಾಲಯದಲ್ಲಿ (Shaneshwara Temple) ಕಳ್ಳತನ ಮಾಡಲು ಬಂದಿದ್ದ. ಕಬ್ಬಿಣದ ಸಲಾಕೆಯಿಂದ ದೇವಾಲಯ ಬಾಗಿಲು ಮುರಿಯಲು ಯತ್ನಿಸಿ, ಸಾಧ್ಯವಾಗದಿದ್ದಾಗ ಕಿಟಕಿಗಳನ್ನು ಮುರಿಯಲು ಯತ್ನಿಸಿ ವಿಫಲನಾಗಿ ಹಿಂದಿರುಗಿದ್ದ. ಇದನ್ನೂ ಓದಿ: ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ, ಸಿಎಂ ಆಗ್ಬಿಟ್ಟ – ಬಿ.ಆರ್ ಪಾಟೀಲ್

    ಕಳ್ಳತನಕ್ಕೆ ಯತ್ನಿಸಿದ ದೃಶ್ಯ ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನಾ ಸಂಬಂಧ ದೇವಾಲಯದ ಆಡಳಿತ ಮಂಡಳಿಯವರು ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾ ದೃಶ್ಯದ ಆಧಾರದ ಮೇಲೆ ಆರೋಪಿಯನ್ನು ಅಕ್ಕೂರು ಪೊಲೀಸರು ಬಂಧಿಸಿದ್ದಾರೆ.

  • ತಿರುನಲ್ಲೂರಿನಲ್ಲಿರುವ ದೇವಾಲಯಕ್ಕೆ ರಾಕಿಂಗ್ ಸ್ಟಾರ್, ಅಶ್ವಥ್ ನಾರಾಯಣ್ ಭೇಟಿ

    ತಿರುನಲ್ಲೂರಿನಲ್ಲಿರುವ ದೇವಾಲಯಕ್ಕೆ ರಾಕಿಂಗ್ ಸ್ಟಾರ್, ಅಶ್ವಥ್ ನಾರಾಯಣ್ ಭೇಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ನಟ ಯಶ್ ಮತ್ತು ಡಿಸಿಎಂ ಅಶ್ವತ್ ನಾರಾಯಣ್ ತಿರುನಲ್ಲೂರಿನಲ್ಲಿರುವ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಸದ್ಯ ಕೆಜಿಎಫ್ ಭಾಗ ಒಂದರ ಯಶಸ್ಸಿನ ನಂತರ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿರುವ ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್‍ರ ಕೆಜಿಎಫ್ – 2 ಚಿತ್ರದ ಚಿತ್ರೀಕರಣ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾಗಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿರುವ ಯಶ್ ಬಿಡುವು ಮಾಡಿಕೊಂಡು ಇಂದು ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರುನಲ್ಲಿರುವ ಶನೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ವೇಳೆ ಬಿಜೆಪಿ ಪಕ್ಷದ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ತಿರುನಲ್ಲೂರುನಲ್ಲಿನ ಶನೇಶ್ವರನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ನಡುವೆ ಯಶ್ ಕೂಡ ಅಲ್ಲಿಯೇ ಇರುವುದನ್ನು ತಿಳಿದು ಇಬ್ಬರೂ ಜತೆಗೆ ದೇವರ ದರ್ಶನ ಪಡೆದಿದ್ದಾರೆ.

    ಸದ್ಯ ರಾಕಿಂಗ್ ಸ್ಟಾರ್ ಯಶ್‍ನ ಕೆಜಿಎಫ್- 2 ಭಾಗದ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ಮಾಪಕ ವಿಜಯ್ ಕಿರಂಗದೂರ್ ಬಂಡವಾಳ ಹೂಡಿದ್ದಾರೆ. ಸದ್ಯ ಪೋಸ್ಟರ್ ಮೂಲಕವೇ ಕುತೂಹಲ ಕೆರಳಿಸಿರುವ ಕೆಜೆಎಫ್-2 ಬಗ್ಗೆ ಜನರಿಗೆ ಹೆಚ್ಚು ಕ್ಯೂರಿಯಸ್ ಹುಟ್ಟಿಸಿರುವ ಚಿತ್ರತಂಡ, ಸಿನಿಮಾ ಬಿಡುಗಡೆಯ ನಂತರ ರಾಕಿಂಗ್ ಸ್ಟಾರ್ ಯಶ್ ಮತ್ತೆ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

  • ಮಂಡ್ಯದ ಶನೇಶ್ವರ ದೇವಾಲಯದೊಳಗೆ ಕಾಗೆ

    ಮಂಡ್ಯದ ಶನೇಶ್ವರ ದೇವಾಲಯದೊಳಗೆ ಕಾಗೆ

    ಮಂಡ್ಯ: ಜಿಲ್ಲೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ಕಾಗೆ ಪ್ರವೇಶ ಮಾಡಿದ್ದು, ಈ ಮೂಲಕ ದೇವಾಲಯದಲ್ಲೊಂದು ಅಚ್ಚರಿ ಸಂಗತಿ ನಡೆದಿದೆ.

    ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಈ ಘಟನೆ ನಡೆದಿದೆ. ಶನೇಶ್ವರನ ವಾಹನ ಕಾಗೆಯೊಂದು ಗರ್ಭಗುಡಿಯ ಪ್ರವೇಶ ಮಾಡಿ ಶನಿದೇವರ ಪಾದದ ಬಳಿ ಕುಳಿತು ಅಚ್ಚರಿ ಮೂಡಿಸಿದೆ. ಕಾಗೆ ಶನಿ ದೇವರ ಗರ್ಭಗುಡಿಗೆ ಪ್ರವೇಶ ಮಾಡಿದ ಸುದ್ದಿ ತಿಳಿದು ಜನರು ಗರ್ಭಗುಡಿಯಲ್ಲಿದ್ದ ಕಾಗೆಯ ದರ್ಶನ ಮಾಡಿದ್ದಾರೆ.

    ಗ್ರಾಮದ ಹಿರಿಯರ ಸಲಹೆ ಮೇರೆಗೆ ಅರ್ಚಕ ಕಾಗೆಗೂ ಪೂಜೆ ಸಲ್ಲಿಸಿ ನೈವೇದ್ಯ ನೀಡಿದ್ದಾರೆ. ಕಾಗೆ ತನಗೆ ಮಂಗಳಾರತಿ ಮಾಡುತ್ತಿದ್ದರೂ ಸ್ವಲ್ಪವೂ ಕದಲದೆ ಸುಮ್ಮನೆ ಕುಳಿತಿತ್ತು. ಗರ್ಭಗುಡಿಯ ನಂತರ ದೇವಾಲಯದ ಮುಂಭಾಗದಲ್ಲಿರುವ ಅರಳಿಮರಕ್ಕೆ ಕಾಗೆ ಪ್ರದಕ್ಷಿಣೆ ಹಾಕಿದೆ.

    ಬೆಳಗ್ಗೆಯಿಂದ ದೇವಾಲಯದಲ್ಲಿದ್ದು ಪೂಜೆ ನೈವೇದ್ಯ ಸ್ವೀಕರಿಸಿ ಸಂಜೆ ವೇಳೆ ಕಾಗೆ ಹೋಗಿದೆ. ದೇವಾಲಯದಲ್ಲಿ ನಡೆದ ಘಟನೆಗೆ ಗ್ರಾಮದ ಜನರು ಅಚ್ಚರಿಗೊಂಡಿದ್ದಾರೆ. ಜೊತೆಗೆ ಇದೆಲ್ಲಾ ಶನಿದೇವರ ಮಹಾತ್ಮೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.