Tag: ಶನಿ ದೇವರು

  • ಶನಿ ದೇವರ ಮೊರೆ ಹೋದ ಟ್ರಬಲ್ ಶೂಟರ್ ಡಿಕೆಶಿ!

    ಶನಿ ದೇವರ ಮೊರೆ ಹೋದ ಟ್ರಬಲ್ ಶೂಟರ್ ಡಿಕೆಶಿ!

    ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶನಿಕಾಟದಿಂದ ಮುಕ್ತಿ ಪಡೆಯಲು ಶನೇಶ್ವರನ ಮೊರೆ ಹೋಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಡಿ.ಕೆ.ಶಿವಕುಮಾರ್ ಶುಕ್ರವಾರ ಸಂಜೆಯೇ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ತಿರುನಲ್ಲೂರಿನ ಶನೀಶ್ವರ ದರ್ಶನಕ್ಕೆ ತೆರಳಿದ್ದು, ಶನೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಶಿವಕುಮಾರ್ ಅವರ ಜಾತಕದಲ್ಲಿ ಶನಿ ಕಾಟ ಇದೆಯಂತೆ. ಈ ಹಿನ್ನೆಲೆಯಲ್ಲಿ ದೋಷ ಪರಿಹಾರಕ್ಕಾಗಿ ತಿರುನಲ್ಲೂರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

    ಮೊದಲಿಗೆ ಡಿಕೆಶಿ ಅವರು ಶನೀಶ್ವರ ದೇವಸ್ಥಾನದ ಪವಿತ್ರ ಪುಷ್ಕರಣಿಯಲ್ಲಿ ಪುಣ್ಯ ಸ್ನಾನ ಮಾಡಿದ್ದು, ಬಳಿಕ ಶನೀಶ್ವರನ ಸನ್ನಿಧಿಯಲ್ಲಿ ಸಂಕಷ್ಟ ಹರ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ರಾತ್ರಿ ಹೊತ್ತಿನಲ್ಲಿ ಅಲ್ಲೇ ಇರುವ ದರ್ಬೆಶ್ವರನ ದರ್ಶನವನ್ನು ಮಾಡಿದ್ದಾರೆ.

    ದರ್ಬೆಯಿಂದ ಆವೃತವಾದ ಆ ಶಿವಲಿಂಗ ಪೂಜೆ ಹಾಗೂ ದರ್ಶನದಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ಪ್ರತೀತಿ ಇದೆ. ಹೀಗಾಗಿ ಶನಿ ದೇವನ ಅವಕೃಪೆಯಿಂದ ಪಾರಾಗಲು ಟ್ರಬಲ್ ಶೂಟರ್ ಶನೀಶ್ವರನ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಸಿಎಂಗೆ ಕಪ್ಪು ಬಣ್ಣದ ಮೇಲ್ಯಾಕೆ ಅಷ್ಟೊಂದು ಪ್ರೀತಿ: ಇಲ್ಲಿದೆ ಬ್ಲ್ಯಾಕ್ ಕಲರ್ ಲವ್ ಸ್ಟೋರಿ

    ಸಿಎಂಗೆ ಕಪ್ಪು ಬಣ್ಣದ ಮೇಲ್ಯಾಕೆ ಅಷ್ಟೊಂದು ಪ್ರೀತಿ: ಇಲ್ಲಿದೆ ಬ್ಲ್ಯಾಕ್ ಕಲರ್ ಲವ್ ಸ್ಟೋರಿ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರಿಗೆ ಈಗ ಕಪ್ಪು ಬಣ್ಣದ ವ್ಯಾಮೋಹ ಹಿಡಿದಿದೆ. ಕಪ್ಪು ಬಣ್ಣದ ಕಾರನ್ನು ಬಳಸುತ್ತಿರುವ ಸಿಎಂ ಈಗ ಕಪ್ಪು ಬಣ್ಣ ಖಾಸಗಿ ವಿಮಾನವನ್ನು ಬಳಸುತ್ತಿದ್ದಾರೆ.

    ಹೌದು. ಸಾಧಾರಣವಾಗಿ ಜನ ಪ್ರತಿನಿಧಿಗಳು ಬಿಳಿ ಬಣ್ಣವನ್ನು ಇಷ್ಟ ಪಡುತ್ತಾರೆ. ಆದರೆ ಸಿಎಂ ಕಪ್ಪು ಬಣ್ಣದ ರೇಂಜ್ ರೋವರ್ ಕಾರು, ಖಾಸಗಿ ವಿಮಾನವನ್ನು ಬಳಸುತ್ತಿದ್ದು ದೂರದ ಭೇಟಿ ವೇಳೆ ಈ ವಿಮಾನದ ಮೂಲಕವೇ ಸಂಚರಿಸುತ್ತಿದ್ದಾರೆ.

    ಶನಿಗೆ ಇಷ್ಟವಾದ ಬಣ್ಣ ಕಪ್ಪು ಆಗಿದ್ದು, ಈಗ ಎಚ್‍ಡಿಕೆಯ ಮಿಥುನ ರಾಶಿಯ ಏಳನೇ ಮನೆಯಲ್ಲಿ ಶನಿ ಇದ್ದಾನೆ. ಮುಂದಿನ ವರ್ಷ ಶನಿ ಎಂಟನೇ ಮನೆಗೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಹೆಚ್ಚಿರುತ್ತವೆ. ಹೀಗಾಗಿ ಪ್ರಯಾಣದ ವೇಳೆ ಶನಿಗೆ ಇಷ್ಟವಾದ ಕಪ್ಪು ಬಣ್ಣದ ವಾಹನವನ್ನು ಆರಿಸುವಂತೆ ಸಿಎಂಗೆ ಜ್ಯೋತಿಷಿ ಒಬ್ಬರು ಸಲಹೆ ನೀಡಿದ್ದಾರೆ.

    ಕಪ್ಪು ಬಣ್ಣದ ವಾಹನ ಬಳಸಿದರೆ ಬೇರೆಯವರ ದೃಷ್ಟಿ ಬೀಳುವುದಿಲ್ಲ. ಕಪ್ಪು ಬಣ್ಣದಿಂದ ಮನಸ್ಸು ಸ್ಥಿಮಿತದಲ್ಲಿರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ನಂಬಿಕೆಗಳಿಗೆ ಕಟ್ಟು ಬಿದ್ದು ಎಚ್‍ಡಿಕೆ ಕಪ್ಪು ಬಣ್ಣದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಪ್ಪು ಬಣ್ಣ ಅಪಾಯಕಾರಿ:
    ಕಪ್ಪು ಬಣ್ಣದ ವಿಮಾನಗಳನ್ನ ಬಳಸುವುದು ಅಪಾಯಕಾರಿ. ಕಪ್ಪು ಬಣ್ಣದ ವಿಮಾನಗಳು ಬಿಸಿಯನ್ನ ತಡೆದು ಹಿಡಿಯುವುದರಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಕಪ್ಪು ಬಣ್ಣದ ವಿಮಾನಗಳು ಬಳಕೆಗೆ ಸೂಕ್ತವಲ್ಲ. ಕಪ್ಪು ಬಣ್ಣದ ವಿಮಾನಗಳಿಗೆ ಹಕ್ಕಿಗಳು ಡಿಕ್ಕಿ ಹೊಡೆಯೋ ಸಾಧ್ಯತೆನೂ ಹೆಚ್ಚು. ಹೀಗಾಗಿ ಬೇರೆ ಬಣ್ಣವನ್ನ ವಿಮಾನಗಳಿಗೆ ಬಳಸಿದರೂ ಶೇ.40 ರಷ್ಟು ಬಿಳಿ ಬಣ್ಣ ಇರಲೇಬೇಕು ಎಂದು ಅಮೆರಿಕದ ಫೆಡರೇಶನ್ ಆಫ್ ಏವಿಯೇಷನ್ ಎಚ್ಚರಿಕೆಯನ್ನು ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv