Tag: ಶದಾಬ್ ಖಾನ್

  • ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ಕಷ್ಟ – ಪಾಕ್ ಬೌಲರ್

    ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ಕಷ್ಟ – ಪಾಕ್ ಬೌಲರ್

    ಲಾಹೋರ್: ಭಾರತದ ತಂಡದ ಆರಂಭಿಕ  ಬ್ಯಾಟ್ಸ್​ಮನ್​  ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಆರಂಭಿಕ ಎಡಗೈ  ಬ್ಯಾಟ್ಸ್​ಮನ್​  ಡೇವಿಡ್ ವಾರ್ನರ್ ಅವರಿಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟ ಎಂದು ಪಾಕಿಸ್ತಾನದ ತಂಡದ ಸ್ಪಿನ್ನರ್ ಶದಾಬ್ ಖಾನ್ ಹೇಳಿದ್ದಾರೆ.

    ಇತ್ತೀಚೆಗೆ ಅಷ್ಟೆ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಮೂರು ಟಿ20 ಸರಣಿಯಲ್ಲಿಯೂ ಶದಾಬ್ ಖಾನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಮೊದಲ ಟಿ20 ಪಂದ್ಯದಲ್ಲಿ ಶದಾಬ್ 3 ವಿಕೆಟ್ ಕಿತ್ತು ಮಿಂಚಿದ್ದು, ನಂತರ ಎರಡು ಮತ್ತು ಮೂರನೇ ಪಂದ್ಯದಲ್ಲಿ ವಿಕೆಟ್ ತೆಗೆಯದಿದ್ದರೂ ರನ್‍ಗಳಿಗೆ ಕಡಿವಾಣ ಹಾಕಿದ್ದರು.

    ಇತ್ತೀಚೆಗೆ  ಟ್ವಿಟ್ಟರ್ ನಲ್ಲಿ ಶದಾಬ್ ಖಾನ್ ಅವರ ಅಭಿಮಾನಿಯೊಬ್ಬರು ಎದುರಾಳಿ ತಂಡದ ಯಾವ ಆಟಗಾರನಿಗೆ ಬೌಲಿಂಗ್ ಮಾಡಲು ನೀವು ತುಂಬಾ ಕಷ್ಟಪಡುತ್ತೀರಿ ಎಂದು ಪ್ರಶ್ನೆ ಕೇಳಿರುತ್ತಾರೆ. ಶದಾಬ್ ಅದಕ್ಕೆ ಉತ್ತರವಾಗಿ ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್

    ಟಿ20 ವಿಶ್ವಕಪ್ 2021 ರ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತ್ತು. ಪಾಕಿಸ್ತಾನ ಲೀಗ್‍ನ ಹಂತದಲ್ಲಿ 5 ಪಂದ್ಯಗೆದ್ದು ಸೆಮಿಫೈನಲ್‍ಗೆ ಪ್ರವೇಶ ಮಾಡಿತ್ತು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿತ್ತು. ಇದನ್ನೂ ಓದಿ: ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ