Tag: ಶತ್ರು ಭೈರವಿ ಯಾಗ

  • ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ, ಆ ದೇವರೇ ಶಿಕ್ಷೆ ಕೊಡಲಿ: ಹೆಚ್‌ಡಿಕೆ

    ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ, ಆ ದೇವರೇ ಶಿಕ್ಷೆ ಕೊಡಲಿ: ಹೆಚ್‌ಡಿಕೆ

    –  ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿ ಬಿಡು ನಾಲಿಗೆ
    – ದಾಸರ ಕೀರ್ತನೆ ಮೂಲಕ ಡಿಕೆಶಿಗೆ ಹೆಚ್‌ಡಿಕೆ ಟಾಂಗ್

    ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರಿಗೆ ರಕ್ಷಣೆ ಮಾಡೋದಕ್ಕೆ ದೇವರು ಇರುವಂತೆ ನಮಗೂ ದೇವರಿದ್ದಾನೆ. ನಾನು ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ರಾಜರಾಜೇಶ್ವರ ದೇವರಿಗೇ ಇದನ್ನ ಬಿಡ್ತೀನಿ, ರಾಜರಾಜೇಶ್ವರ ದೇವರೆ ಅವರಿಗೆ ಶಿಕ್ಷೆ ಕೊಡಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ನಗರದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿಂದು ಸಭೆ ನಡೆಸಿ ಮಾತನಾಡಿದ ಅವರು, `ನಮ್ಮ ಸರ್ಕಾರದ ನಾಶಕ್ಕಾಗಿ ನನ್ನ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ (Shatru Bhairavi Yaga) ಮಾಡಿಸುತ್ತಿದ್ದಾರೆ’ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿ ಬಿಡು ನಾಲಿಗೆ” ಎಂಬ ಪುರಂದರ ದಾಸರ ಕೀರ್ತನೆಯ ಮೂಲಕ ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಥಿಯೇಟರ್ ಸಮಸ್ಯೆ ಬಗ್ಗೆ ರಿಷಬ್ ಶೆಟ್ಟಿ ರಿಯಾಕ್ಷನ್

    ಯಾಗ ಮಾಡಿಸೋದು ಡಿಕೆಶಿ ಸಂಸ್ಕೃತಿ:
    ಡಿಸಿಎಂ ಆಗಿದ್ದರೂ ಆ ಸ್ಥಾನದ ಗೌರವ, ಮೌಲ್ಯ ಏನು ಅಂತ ಅವರಿಗೆ ಅರ್ಥ ಅಗಿಲ್ಲ. ಒಟ್ಟಿನಲ್ಲಿ ನಮ್ಮ ಕುಟುಂಬ ಮುಗಿಸಲೇಬೇಕು ಅಂತ ಶ್ರಮಪಡ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಯಾಗದ ಮಾತು ಹೇಳ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನನಗೆ ತಿಳಿವಳಿಕೆ ಬಂದಾಗಿನಿಂದ ಕುರಿ, ಕೋಣ, ಮೇಕೆ ಕಡಿಯೋದು ಯಾವತ್ತೂ ಮಾಡಿಲ್ಲ. ನಾವು ದೇವರ ಪೂಜೆ ಮಾಡ್ತೀವಿ. ಹಿಂದೂ ಸಂಸ್ಕೃತಿಯಲ್ಲಿ ಇರೋ ಧಾರ್ಮಿಕವಾಗಿ ನಾವು ಪೂಜೆ ಮಾಡ್ತೀವಿ. ನಮಗೆ ಇರೋ ದೋಷ ಪರಿಹಾರಕ್ಕೆ ದೇವಾಲಯಕ್ಕೆ ಹೋಗ್ತೀವಿ ಹೊರತು ಯಾಗ ಮಾಡುವುದಿಲ್ಲ. ಯಾಗ ಮಾಡೋದು ಡಿಕೆಶಿ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಳ್ಳನಿಗೆ ಮಳ್ಳ ಸಾಕ್ಷಿ:
    ಕಳ್ಳನಿಗೆ ಮಳ್ಳನ ಸಾಕ್ಷಿ ಎಂಬಂತೆ ಅವರೆ ತಮ್ಮ ನಮ್ಮ ಹೆಸರು ಹೇಳ್ತಾರೆ. ನಾನು ಎರಡು ಬಾರಿ ಸಿಎಂ ಆಗಿದ್ದೆ ಕೋಣ, ಕುರಿ ಕಡಿದು ಆಗಿಲ್ಲ. ದೇವರು ಕೊಟ್ಟು, ಆಗಿದ್ದೇನೆ. ದೇವೇಗೌಡರು ಅಧಿಕಾರ ಅನುಭವಿಸಿದ್ದೇ ಕಡಿಮೆ ಅವಧಿ. ಅದೇನು ಕೋಳಿ, ಕುರಿ ಕಡಿದು ಮಾಡಿ ಆಗಿದ್ದಾ? ಡಿಕೆ ಶಿವಕುಮಾರ್ ದೇವರು, ಶರಣರ ಜೊತೆ ಚೆಲ್ಲಾಟ ಆಡಬಾರದು. ಡಿಸಿಎಂ ನನಗೆ ಸ್ಪಷ್ಟ ಮಾಹಿತಿ ಇದೆ ಅಂತ ಹೇಳಿದ್ದಾರೆ. ಈಗ ಎಲ್ಲದ್ದಕ್ಕೂ ಎಸ್‌ಐಟಿ ಮಾಡ್ತಾರೆ, ಇದಕ್ಕೂ ಒಂದು ಎಸ್‌ಐಟಿ ತನಿಖೆ ಮಾಡಸಲಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಗೌಡರ ಕುಟುಂಬ ಮುಗಿಸುವ ಸಂಚು:
    ನಾನು ಇತ್ತೀಚೆಗೆ ವಿಶ್ರಾಂತಿಗೆಂದು ಕಬಿನಿ ಹಿನ್ನಿರಿಗೆ ಹೋಗಿದ್ದೆ. ಅದಕ್ಕೂ ಕೇರಳಕ್ಕೆ ಮಾಠ ಮಾಡಿಸೋಕೆ ಅಂತ ಹೇಳಿದ್ರು. ನನ್ನ ಮೊಮ್ಮಗನ ಜೊತೆ ವಿಶ್ರಾಂತಿಗೆ ಹೋಗಿದ್ದೆ. ನಾನು ಹೋಗಿ ಯಾಗ ಮಾಡಿಸಬೇಕಾ? ಕಾನೂನಿನ ಪ್ರಕಾರ ಕೋಣ, ಕುರಿ ಬಲಿ ಕೊಟ್ಟು ನಾಶ ಮಾಡೋದು ಅಪರಾಧ. ಆಗ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ತಾನೆ. ಜನರಲ್ಲಿ ನಮ್ಮ ಕುಟುಂಬ ನೆಲ ಕಚ್ಚಿಸಬೇಕು ಅಂತ ಇಂತಹ ಸುದ್ದಿ ಹರಡಿಸುತ್ತಿದ್ದಾರೆ. ಇಡೀ ದೇವೇಗೌಡ ಕುಟುಂಬ ನಾಶ ಮಾಡೋಕೆ ಮುಂದಾಗಿದ್ದಾರೆ. ಇದು ಅದರ ಮುಂದುವರಿದ ಭಾಗ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಯಾವಾಗ ಬಿಜೆಪಿ ಜೊತೆಗೆ ಹೊಂದಾಣಿಕೆ ಆಯ್ತು ಅವತ್ತಿಂದ ಇವರಿಗೆ ಉಳಿಗಾಲ ಇಲ್ಲ ಅಂತ ಹೀಗೆಲ್ಲ ಮಾಡ್ತಿದ್ದಾರೆ. 25 ಸ್ಥಾನ ಗೆಲ್ಲುತ್ತೇವೆ ಅಂತ ಓಡಾಡುತ್ತಿದ್ದರು. ನಾವು ಮೈತ್ರಿ ಆದಾಗ ಅವರಿಗೆ ಗೆಲುವು ಸಾಧ್ಯವಿಲ್ಲ ಅಂತಾ ಗೊತ್ತಾಯ್ತು, ಅದಕ್ಕೆ ನಮ್ಮ ಕುಟುಂಬವನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದರ್ ಡೈರಿ ಶಾಕ್‌ – ಇಂದಿನಿಂದ ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಳ!

  • ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗ ನಡೆದಿಲ್ಲ – ಡಿಕೆಶಿ ಆರೋಪ ಸುಳ್ಳು ಎಂದ ಆಡಳಿತ ಮಂಡಳಿ

    ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗ ನಡೆದಿಲ್ಲ – ಡಿಕೆಶಿ ಆರೋಪ ಸುಳ್ಳು ಎಂದ ಆಡಳಿತ ಮಂಡಳಿ

    ತಿರವನಂತಪುರಂ: ಕಣ್ಣೂರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ (Taliparamba Rajarajeswara Temple) ಸಮೀಪದಲ್ಲಿ ಪ್ರಾಣಿಬಲಿ ನೀಡಿ ಶತ್ರು ಭೈರವಿ ಯಾಗ (Shatru Bhairavi Yaga) ಮಾಡಲಾಗಿದೆ ಎಂಬ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿದೆ.

    ದೇವಸ್ವಂ ಟ್ರಸ್ಟಿ ಮಂಡಳಿ ಸದಸ್ಯ ಮಾಧವನ್ ಪ್ರತಿಕ್ರಿಯಿಸಿ, ಯಾವುದೇ ದೇವಾಲಯವನ್ನು ಕೊಲ್ಲುವ ಶತ್ರು-ಸಂಹಾರ ಪೂಜೆ ಅಥವಾ ಪ್ರಾಣಿ ಬಲಿ ದೇವಾಲಯದಲ್ಲಿ ಅಥವಾ ದೇವಾಲಯದ ಸುತ್ತಲೂ ನಡೆದಿರುವುದು ತಿಳಿದಿಲ್ಲ. ಅವರು ಹೇಳಿದಂತೆ ಮೇಕೆ, ಎಮ್ಮೆಗಳನ್ನು ಕಡಿಯಲಾಗಿದೆ ಎಂಬ ಹೇಳಿಕೆ ನೂರಕ್ಕೆ 100% ರಷ್ಟು ಸುಳ್ಳು ಎಂದಿದ್ದಾರೆ.  ಇದನ್ನೂ ಓದಿ: ಶತ್ರು ಮರ್ಧನಕ್ಕೆ ಶತ್ರು ಭೈರವಿ ಯಾಗ – ಏನಿದು ಯಾಗ? ಹೇಗೆ ಮಾಡಲಾಗುತ್ತದೆ? 

    ತಳಿಪರಂಬ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಗೌಪ್ಯವಾಗಿ ನಡೆಯಲು ಸಾಧ್ಯವಿಲ್ಲ ಎಂದು ಟ್ರಸ್ಟಿ ಸದಸ್ಯರು ಹೇಳಿಕೆ ನೀಡಿದ್ದು, ದೇವಸ್ಥಾನದ ಆವರಣದಲ್ಲಿ ನಡೆದಿದೆ ಎಂದು ಹೇಳಿ ದೇವಸ್ಥಾನದ ಹೆಸರನ್ನು ಎಳೆದು ತಂದಿರುವುದು ನಿರಾಸೆ ತಂದಿದೆ ಎಂದಿದ್ದಾರೆ.

    ರಾಜರಾಜೇಶ್ವರ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಇಲ್ಲ. ಕ್ಷೇತ್ರದ ಅಕ್ಕಪಕ್ಕದಲ್ಲಿ ಮೇಕೆ, ಕೋಣವನ್ನು ಬಲಿ ಕೊಟ್ಟಿದ್ದಾರೆ ಎನ್ನುವುದೂ ಸರಿಯಲ್ಲ. ನಾವು ಈ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಯಾರಿಗೂ ಗೊತ್ತಾಗದಂತೆ ತಳಿಪರಂಬ ಪ್ರದೇಶದಲ್ಲಿ ಯಾಗ ನಡೆಸಲು ಸಾಧ್ಯವಿಲ್ಲ. ಇದು ನಿರಾಶಾದಾಯಕ ಹೇಳಿಕೆ. ದೇವಸ್ಥಾನದ ಸುತ್ತಮುತ್ತ ಮುತ್ತ ನಡೆಯಿತು ಎಂದು ಹೇಳಿದ್ದು ಸರಿಯಲ್ಲ. ಈ ದೇವಸ್ಥಾನದಲ್ಲಿ ಈ ರೀತಿಯ ಪೂಜೆ ನಡೆಯುವುದಿಲ್ಲ. ಇಲ್ಲಿ ಬ್ರಾಹ್ಮಣರು ಮಾತ್ರ ಪೂಜೆ ನಡೆಸುವ ಕ್ಷೇತ್ರವಾಗಿದೆ. ರಾಜರಾಜೇಶ್ವರ ದೇಗುಲದಲ್ಲಿ ಶತ್ರು ಭೈರವ ಯಾಗ ಸೇವೆಯೇ ಇಲ್ಲ. ಮಲಬಾರಂ ದೇವಸ್ವಂ ಬೋರ್ಡ್ ಅಡಿ ಬರುವ ಯಾವ ದೇಗುಲದಲ್ಲೂ ಬಲಿ ಕೊಡುವುದಿಲ್ಲ. ಡಿಕೆಶಿ ಹೇಳಿಕೆ ದೌರ್ಭಾಗ್ಯಕರ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

     

    ಡಿಕೆಶಿ ಆರೋಪ ನಿರಾಕರಿಸಿದ ಕೇರಳ ಸರ್ಕಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ, ಡಿಕೆಶಿ ಆರೋಪ‌ ಮಾಡಿದಂತೆ ಕೇರಳದಲ್ಲಿ ನಡೆದಿರಲು ಸಾಧ್ಯವಿಲ್ಲ. ಕೇರಳದಲ್ಲಿ ನಡೆಯಲು ಸಾಧ್ಯತೆ ಇಲ್ಲದ ಘಟನೆ ಇದು. ಆದರೂ ಇದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕೇರಳದ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ತಿಳಿಸಿದ್ದಾರೆ.

  • ಶತ್ರು ಮರ್ಧನಕ್ಕೆ ಶತ್ರು ಭೈರವಿ ಯಾಗ – ಏನಿದು ಯಾಗ? ಹೇಗೆ ಮಾಡಲಾಗುತ್ತದೆ?

    ಶತ್ರು ಮರ್ಧನಕ್ಕೆ ಶತ್ರು ಭೈರವಿ ಯಾಗ – ಏನಿದು ಯಾಗ? ಹೇಗೆ ಮಾಡಲಾಗುತ್ತದೆ?

    ಬೆಂಗಳೂರು: ಶತ್ರು ಭೈರವಿ ಯಾಗ (Shatru Bhairavi Yaga) ಮಾಡಿದ ದಿನದಿಂದ ಆರು ತಿಂಗಳು, ಒಂದು ವರ್ಷದ ಒಳಗಡೆ ಇದರ ಪರಿಣಾಮ ಬೀರುತ್ತದೆ ಎಂದು ಖ್ಯಾತ ಜ್ಯೋತಿಷಿ ಕಮಲಾಕರ ಭಟ್‌ ತಿಳಿಸಿದ್ದಾರೆ.

    ನನ್ನ ಮತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಕೇರಳದಲ್ಲಿ ಶತ್ರುಭೈರವಿ ಯಾಗ ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಬಾಂಬ್‌ ಸಿಡಿಸಿದ ಬೆನ್ನಲ್ಲೇ ಈ ಯಾಗ ಯಾಕೆ ಮಾಡುತ್ತಾರೆ? ಹೇಗೆ ಮಾಡುತ್ತಾರೆ ಎಂಬುದರ ಬಗ್ಗೆ ಪಬ್ಲಿಕ್‌ ಟಿವಿಗೆ ಕಮಲಾಕರ ಭಟ್‌ ಮಾಹಿತಿ ನೀಡಿದ್ದಾರೆ.

    ಏನಿದು ಯಾಗ?
    ಶತ್ರು ಮರ್ಧನ ಯಾಗ ಅಥವಾ ವಿಷ ಯಾಗ ಎಂದೇ ಕರೆಯುವ ಈ ಯಾಗವವನ್ನು ಶತ್ರುವನ್ನು ಮಣಿಸಲು ಮಾಡುತ್ತಾರೆ. ಈ ಯಾಗದಿಂದ ಶತ್ರುವಿನ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಒಂದೋ ಶತ್ರುವಿನ ಬುದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಅಥವಾ ಶತ್ರು ಸಾವನ್ನಪ್ಪುತ್ತಾನೆ. ಕೆಲವೊಮ್ಮೆ ವೈದ್ಯಕೀಯ ವ್ಯವಸ್ಥೆಗೂ ಸಹ ವ್ಯಕ್ತಿಗೆ ಬಂದಿರುವ ರೋಗ ಯಾವುದು ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಈ ಯಾಗದಿಂದ ಇಂದಿಗೂ ಫಲ ಪಡೆಯಬಹುದು ಎನ್ನುವುದಕ್ಕೆ  ಹಲವು ನಿದರ್ಶನಗಳಿವೆ.  ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ; 33 ವರ್ಷಗಳ ಹಿಂದಿನ ಫೋಟೊ ವೈರಲ್‌

     

    ಹೇಗೆ ಮಾಡಲಾಗುತ್ತದೆ?
    ಅಘೋರಿಗಳನ್ನು ಕರೆಸಿ ಸ್ಮಶಾನದಲ್ಲಿ ಯಾಗ ನಡೆಯುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯನ್ನು ಕರೆದು ಯಾಗ ಮಾಡಿಸಲಾಗುತ್ತದೆ. ಮೊದಲು ಪ್ರಾಣಿಯ ಮೇಲೆ ನಡೆಯುತ್ತದೆ. ನೋಡುತ್ತಾ ನೋಡುತ್ತಾ ಪ್ರಾಣಿ ಸತ್ತು ಬೀಳುತ್ತದೆ. ಇದಕ್ಕೆ ಮಾಮೂಲಿ ತುಪ್ಪ, ಮರದ ಚಕ್ಕೆಗಳನ್ನು ಬಳಸುವುದಿಲ್ಲ. ಹಂದಿ, ಎಮ್ಮೆ ತುಪ್ಪ ಬಳಕೆ ಮಾಡಲಾಗುತ್ತದೆ. ವಿಷಯುಕ್ತ ಕಸರಕ ಮರ ಚಕ್ಕೆಗಳನ್ನು ಹೋಮಕ್ಕೆ ಹಾಕಿ ಹವನ ಮಾಡಲಾಗುತ್ತದೆ. ಮಣ್ಣಿನ ದೇವಿಗೆ ರಕ್ತ ನೀಡಿದಾಗ ರಕ್ತ ಹೀರುತ್ತದೆ.  ಈ ಯಾಗ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆಯುವುದಿಲ್ಲ. 9 ದಿನಗಳ ಕಾಲ ಪ್ರತಿ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆಯವರೆಗೆ ಈ ಯಾಗ ನಡೆಯುತ್ತದೆ.

    ಯಾರು ಮಾಡುತ್ತಾರೆ?
    ಸಾಮಾನ್ಯ ಪುರೋಹಿತರು ಈ ಯಾಗ ಮಾಡುವುದಿಲ್ಲ. ಕಾಪಾಲಿಕರು, ಮಾಂತ್ರಿಕರು‌ ಮಾತ್ರವೇ ಈ ಯಾಗ ಮಾಡುತ್ತಾರೆ. ಈ ಯಾಗ ಮಾಡುವಾಗ ಸ್ವಲ್ಪ ವ್ಯತ್ಯಾಸವಾದ್ರೂ ಮಾಡಿಸುವ ಕರ್ತೃ, ಮಾಡಿಸುವ ಮಾಂತ್ರಿಕ ಇಬ್ಬರಿಗೂ ಹಾನಿ ಸಂಭವಿಸುವ ಸಾಧ್ಯತೆ. ಪಶ್ಚಿಮ ಬಂಗಾಳದಲ್ಲಿ ಮಾಡುವ ಕಾಶ್ಮೋರ ಪ್ರಯೋಗಕ್ಕೆ ಸರಿ ಸಮಾನವಾಗಿದೆ. ತಂತ್ರ ವಿದ್ಯೆ ಗೊತ್ತಿರುವ ಮಂದಿಗೆ ಮಾತ್ರ ಈ ಯಾಗ ಮಾಡಲು ಸಾಧ್ಯವಿದೆ. ಕೇರಳದ ಬೆರಳೆಣಿಕೆ ಮಂದಿ  ಯಾಗ ಮಾಡಲು ಅರ್ಹತೆ ಪಡೆದಿದ್ದಾರೆ.

     

    ಪರಿಣಾಮ ಬೀರುತ್ತಾ?
    ಶತ್ರು ಭೈರವಿ ಯಾಗ ಮಾಡಿದ ದಿನದಿಂದ ಆರು ತಿಂಗಳು, ಒಂದು ವರ್ಷದ ಒಳಗಡೆ ಇದರ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ದೈಹಿಕ, ಸಂಸಾರಿಕ, ಸಾಮಾಜಿಕವಾಗಿ ಪರಿಣಾಮ ಬೀರಬಹುದು. ವ್ಯಕ್ತಿಯ ಅಂಗಾಗಳನ್ನು ಬಲ ಹೀನರನ್ನಾಗಿ ಮಾಡಬಹುದು ಅಥವಾ ವ್ಯಕ್ತಿ ಸಾವನ್ನಪ್ಪಬಹುದು.

    ಡಿಕೆಶಿ ಹೇಳಿದ್ದೇನು?
    ಕೇರಳದ ರಾಜರಾಜೇಶ್ವರಿ ದೇವಸ್ಥಾನದ (Kerala’s Rajarajeshwari Temple ) ಆಸುಪಾಸಿನಲ್ಲಿ ಶತ್ರು ನಾಶಕ್ಕಾಗಿ ಶತ್ರು ಭೈರವಿ ಯಾಗ ನಡೆಯುತ್ತಿದೆ. ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತ ಅಘೋರಿಗಳ ಮೊರೆ ಹೋಗಿದ್ದಾರೆ. ಅದಕ್ಕಾಗಿ ಹಂದಿ, ಕುರಿ ಸೇರಿ ಎಲ್ಲಾ ಬಲಿ ಕೊಡ್ತಿದ್ದಾರೆ. ಇದೆಲ್ಲವನ್ನ ಯಾರು ಮಾಡಿಸುತ್ತಿದ್ದಾರೆ ಅಂತ ನಮಗೆ ಗೊತ್ತಿದೆ. ಅವರ ನಂಬಿಕೆ ಅವರು ಮಾಡಲಿ. ಆದ್ರೆ ನಾವು ನಂಬಿರುವ ದೇವರು ನಮ್ಮನ್ನ ಕಾಪಾಡುತ್ತದೆ.

    ಶತ್ರು ಸಂಹಾರ ಯಾಗ ಮಾಡಿಸುವುದಕ್ಕಾಗಿಯೇ 5 ಹಂದಿ, 3 ಎಮ್ಮೆ, 21 ಕಪ್ಪು ಬಣ್ಣದ ಕುರಿ, 21 ಮೇಕೆಗಳನ್ನ ಬಲಿ ಕೊಡ್ತಿದ್ದಾರೆ. ಈ ಶತ್ರು ಸಂಹಾರ ಯಾಗ ಯಾರು ಮಾಡ್ತಿದ್ದಾರೆ? ಯಾರು ಮಾಡಿಸುತ್ತಿದ್ದಾರೆ? ಎಲ್ಲವೂ ನನಗೆ ಗೊತ್ತಿದೆ. ಇದೆಲ್ಲವನ್ನು ರಾಜಕೀಯದಲ್ಲಿ ಇರುವವರೇ ಮಾಡುತ್ತಿದ್ದಾರೆ. ಈ ಬಗ್ಗೆ ಸದ್ಯಕ್ಕೆ ನಾನು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.

  • ಸರ್ಕಾರ ನಾಶ ಮಾಡೋದಕ್ಕೆ ನನ್ನ, ಸಿಎಂ ಮೇಲೆ ಶತ್ರು ಭೈರವಿ ಯಾಗ ಮಾಡಿಸ್ತಿದ್ದಾರೆ: ಡಿಕೆಶಿ ಬಾಂಬ್

    ಸರ್ಕಾರ ನಾಶ ಮಾಡೋದಕ್ಕೆ ನನ್ನ, ಸಿಎಂ ಮೇಲೆ ಶತ್ರು ಭೈರವಿ ಯಾಗ ಮಾಡಿಸ್ತಿದ್ದಾರೆ: ಡಿಕೆಶಿ ಬಾಂಬ್

    ಬೆಂಗಳೂರು: ನನ್ನ ಮತ್ತು ಮುಖ್ಯಮಂತ್ರಿಗಳ ಮೇಲೆ ಹಾಗೂ ನಮ್ಮ ಸರ್ಕಾರದ (Congress Govt) ವಿರುದ್ಧ ಶತ್ರು ಭೈರವಿ ಯಾಗ (Shatru Bhairavi Yaaga) ಮಾಡಿಸುತ್ತಿದ್ದಾರೆ. ಇದು ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತಾ ರಾಜಕೀಯದಲ್ಲಿ ಇರುವವರೇ ಮಾಡಿಸುತ್ತಿರುವ ಯಾಗ ಅದಕ್ಕಾಗಿ ಅಘೋರಿಗಳ ಮೊರೆ ಹೋಗಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೊಸ ಬಾಂಬ್ ಸಿಡಿಸಿದ್ದಾರೆ.

    ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮತ್ತು ಮುಖ್ಯಮಂತ್ರಿಗಳ ಮೇಲೆ, ನಮ್ಮ ಸರ್ಕಾರದ ವಿರುದ್ಧ ಯಾಗ ನಡೆಯುತ್ತಿದೆ. ದೊಡ್ಡ ಮಟ್ಟದ ಪೂಜೆ ನಡೆಯುತ್ತಿದೆ. ಯಾವ ಪೂಜೆ ಮಾಡ್ತಿದ್ದಾರೆ? ಯಾರು ಮಾಡ್ತಿದ್ದಾರೆ? ಎಲ್ಲಿ ಮಾಡ್ತಿದ್ದಾರೆ? ಅಂತ ಎಲ್ಲವನ್ನು ಬರೆದುಕೊಟ್ಟಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಮೋದಿ ಭಾಷಣ ಪ್ರಧಾನಿ ಕಚೇರಿಯ ಘನತೆ ಕ್ಷೀಣಿಸುವಂತೆ ಮಾಡಿದೆ: ಮನಮೋಹನ್ ಸಿಂಗ್ ಆರೋಪ

    ಕೇರಳದ ರಾಜರಾಜೇಶ್ವರಿ ದೇವಸ್ಥಾನದ (Kerala’s Rajarajeshwari Temple )ಆಸುಪಾಸಿನಲ್ಲಿ ಶತ್ರು ನಾಶಕ್ಕಾಗಿ ಶತ್ರು ಭೈರವಿ ಯಾಗ ನಡೆಯುತ್ತಿದೆ. ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತ ಅಘೋರಿಗಳ ಮೊರೆ ಹೋಗಿದ್ದಾರೆ. ಅದಕ್ಕಾಗಿ ಹಂದಿ, ಕುರಿ ಸೇರಿ ಎಲ್ಲಾ ಬಲಿ ಕೊಡ್ತಿದ್ದಾರೆ. ಇದೆಲ್ಲವನ್ನ ಯಾರು ಮಾಡಿಸುತ್ತಿದ್ದಾರೆ ಅಂತ ನಮಗೆ ಗೊತ್ತಿದೆ. ಅವರ ನಂಬಿಕೆ ಅವರು ಮಾಡಲಿ. ಆದ್ರೆ ನಾವು ನಂಬಿರುವ ದೇವರು ನಮ್ಮನ್ನ ಕಾಪಾಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಪ್ರೀಕ್ವೆಲ್ ಸಿನಿಮಾಗೆ ಮಾಲಿವುಡ್ ನಟ ಎಂಟ್ರಿ

    ಶತ್ರು ಸಂಹಾರ ಯಾಗ ಮಾಡಿಸುವುದಕ್ಕಾಗಿಯೇ 5 ಹಂದಿ, 3 ಎಮ್ಮೆ, 21 ಕಪ್ಪು ಬಣ್ಣದ ಕುರಿ, 21 ಮೇಕೆಗಳನ್ನ ಬಲಿ ಕೊಡ್ತಿದ್ದಾರೆ. ಈ ಶತ್ರು ಸಂಹಾರ ಯಾಗ ಯಾರು ಮಾಡ್ತಿದ್ದಾರೆ? ಯಾರು ಮಾಡಿಸುತ್ತಿದ್ದಾರೆ? ಎಲ್ಲವೂ ನನಗೆ ಗೊತ್ತಿದೆ. ಇದೆಲ್ಲವನ್ನು ರಾಜಕೀಯದಲ್ಲಿ ಇರುವವರೇ ಮಾಡೋದು. ಆದ್ರೆ ಈ ಬಗ್ಗೆ ಸದ್ಯಕ್ಕೆ ನಾನು ಏನೂ ಮಾತಾಡೋದಿಲ್ಲ ಎಂದು ಆತಂಕಕಾರಿ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ.

    ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನಲ್ಲಿ ಕಿಡಿಗೇಡಿಗಳು ಶತ್ರು ಸಂಹಾರ ಯಾಗ ಮಾಡ್ತಿದ್ದಾರೆ. ಆದ್ರೆ ನಮ್ಮ ದೇವರ ಕೃಪೆ ಬಹಳ ಜೋರಾಗಿದೆ. ನಾನು ಹೊರಗೆ ಹೋಗುವ ಪ್ರತಿದಿನ ದೇವರಿಗೆ ಕೈ ಮುಗಿದು ಹೋಗ್ತೀನಿ. ಅದಕ್ಕೆ ಇಷ್ಟು ರಕ್ಷಣೆ ಎಲ್ಲಾ ಇದೆ ಎಂದ ಅವರು ಶತ್ರು ಸಂಹಾರ ಯಾಗದ ಬಗ್ಗೆ ಚೀಟಿಯಲ್ಲಿ ಬರೆದುಕೊಂಡಿದ್ದನ್ನ ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸಿದ್ದಾರೆ. ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್