Tag: ಶತೃಘ್ನ ಸಿನ್ಹಾ

  • ಒಂದು ಬಾರಿಯಾದ್ರೂ ದೇಶದ ಜನತೆಗೆ ಮೋದಿ ಉತ್ತರಿಸಲಿ: ಶತೃಘ್ನ ಸಿನ್ಹಾ

    ಒಂದು ಬಾರಿಯಾದ್ರೂ ದೇಶದ ಜನತೆಗೆ ಮೋದಿ ಉತ್ತರಿಸಲಿ: ಶತೃಘ್ನ ಸಿನ್ಹಾ

    ಮುಂಬೈ: ದೇಶದ ಆರ್ಥಿಕ ಸ್ಥಿತಿಯಲ್ಲಿ ಜನರು ಕುಸಿಯುತ್ತಿದ್ದಾರೆ ಎಂದು ಕೇಂದ್ರ ಹಾಗೂ ಹಣಕಾಸು ಸಚಿವ ಅರುಣ್ ಜೆಟ್ಲಿಗೆ ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಬಳಿಕ ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಸರಣಿ ಟ್ವೀಟ್ ಮಾಡಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ನನ್ನ ಯಶವಂತ್ ಸಿನ್ಹಾ ಅವರ ಸಲಹೆಯನ್ನು ತೆಗೆದುಕೊಂಡರೆ ಮುಂದಿನ ದಿನಗಳಲಿ ಸಾರ್ವಜನಿಕರು ಮೋದಿ ಸರ್ಕಾರವನ್ನು ಮತ್ತೆ ತರುತ್ತಾರೆ. ಸಿನ್ಹಾರ ರಾಜ್ಯದ ಅರ್ಥಶಾಸ್ತ್ರದ ಬಲವಾದ ಚಿಂತನೆಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ದೇಶದಲ್ಲಿ ಅರ್ಥ ಶಾಸ್ತ್ರದ ಬಗ್ಗೆ ಚಿಂತನೆ ಮಾಡುವ ನಾಯಕರು ಅನೇಕರಿದ್ದಾರೆ. ಕಳೆದ ಎರಡು ದಿನಗಳಿಂದ ದೇಶದ ಜನರು ಪಕ್ಷಕ್ಕೆ ಒಳಗೂ ಹೊರಗೂ ಪಕ್ಷಕ್ಕೆ ಬೆಂಬಲ ಹಾಗೂ ಶಕ್ತಿ ತುಂಬುತ್ತಿದ್ದಾರೆ. ಎಡಪಂಕ್ತಿಗಳ ನಾಯಕರು ಸೇರಿದಂತೆ ಕಾರ್ಮಿಕರು ಕೂಡ ದೇಶದ ಆರ್ಥಿಕ ಬೆಳವಣಿಗೆಗೆ ಪ್ರಾಮುಖ್ಯತೆ ನೀಡುತ್ತಾರೆ. ದೇಶದ ಆರ್ಥಿಕ ವಿಚಾರವೂ ಸಿನ್ಹಾ ಮತ್ತು ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಇಡೀ ದೇಶಕ್ಕೆ ಸಂಬಂಧಪಡುತ್ತದೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರ ನೀಡಿದ ಶತೃಘ್ನ ಸಿನ್ಹಾ, ನಮ್ಮ ಪ್ರಧಾನಿ ಆರ್ಥಿಕತೆ ಬಗ್ಗೆ ಯೋಚನೆ ಮಾಡುವುದಾದರೆ ಗುಜರಾತ್‍ನಲ್ಲಿ ಬರುವ ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮಧ್ಯಮ ವರ್ಗ, ಸಣ್ಣ ವ್ಯಾಪಾರಿಗಳತ್ತ ಗಮನ ಹರಿಸಲಿ.

    ಯಶವಂತ್ ಸಿನ್ಹಾ ಉತ್ತಮ ರಾಜಕಾರಣಿಯಾಗಿದ್ದು, ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರು ಬುದ್ಧಿವಂತ ರಾಜಕಾರಣಿ ಎಂಬುದಕ್ಕೆ ಹಲವಾರು ಬಾರಿ ಸಾಬೀತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

     

    ಪ್ರಧಾನಿ ಮೋದಿಗೆ ಟ್ವೀಟ್ಟರ್‍ನಲ್ಲಿ ಮನವಿ ಮಾಡಿಕೊಂಡ ಬಳಿಕ ಬಿಜೆಪಿ ಅಮರ ಜೈ ಬಿಹಾರ್, ಜೈ ಮಹಾರಾಷ್ಟ್ರ ಜೈ, ಗುಜರಾತ್ ಜೈ ಹಿಂದ್ ಎಂದು ಟ್ವಿಟ್ಟರ್‍ನಲ್ಲಿ ಕೊನೆಯದಾಗಿ ಬರೆದುಕೊಂಡಿದ್ದಾರೆ.