Tag: ಶತಕ

  • 49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

    49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

    ಕೋಲ್ಕತ್ತಾ: ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸದ್ಯ ನಿನ್ನೆಯಿಂದ (ನ.5) ಸುದ್ದಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಈಡನ್‌ ಗಾರ್ಡನ್‌ ಮೈದಾನದಲ್ಲಿ ಶತಕ ಸಿಡಿಸುವ ಜೊತೆಗೆ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿಯ ಈ ಮಹತ್ವದ ಸಾಧನೆಯನ್ನು ದೇಶಾದ್ಯಂತ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

    ಜಾಲತಾಣಗಳಲ್ಲಿ ವಿರಾಟ್‌ ಕೊಹ್ಲಿ ಅವರ ಕ್ರಿಕೆಟ್‌ ವೃತ್ತಿಜೀವನದಿಂದ ಈವರೆಗೆ ಕ್ರಿಕೆಟ್‌ನಲ್ಲಿ ಲೋಕದಲ್ಲಿ ಮಾಡಿದ ಸಾಧನೆಗಳ ವಿಶೇಷ ವೀಡಿಯೋ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. #ವಿರಾಟೋತ್ಸವ2023 ಟ್ರೆಂಡ್‌ ಅಲೆಯೂ ಧೂಳೆಬ್ಬಿಸಿದೆ. ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    2021ರ ಐಪಿಎಲ್‌ ಸಂದರ್ಭದಲ್ಲಿ ಕೊಹ್ಲಿ ಸಂಪೂರ್ಣ ಫಾರ್ಮ್‌ ಕಳೆದುಕೊಂಡಿದ್ದರು. ಸುಮಾರು 2 ವರ್ಷಗಳ ಕಾಲ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಕ್ರಿಕೆಟ್‌ ಲೋಕದಿಂದಲೇ ದೂರ ಉಳಿಯುತ್ತಾರೆ, ನಿವೃತ್ತಿ ಘೋಷಿಸುವುದು ಸರಿ ಎಂದು ಹೇಳಲಾಗಿತ್ತು. ಇನ್ನೂ ಕೆಲವರು ಸ್ವಲ್ಪ ಬ್ರೇಕ್‌ ತಗೊಳ್ಳಿ ಎಂದು‌ ಟ್ರೋಲ್‌ ಮಾಡಿದ್ದರು. ಆದ್ರೆ 2022ರ ಟಿ20 ಏಷ್ಯಾಕಪ್‌ ಟೂರ್ನಿಯ ಮೂಲಕ ಮತ್ತೆ ಕೊಹ್ಲಿ ಭರ್ಜರಿ ಕಮ್ಯಾಂಬ್‌ ಮಾಡಿದ್ರು. ಇಂದು ದೇಶದ ಅಭಿಮಾನಿಗಳು ಮಾತ್ರವಲ್ಲದೇ ವಿವಿಧ ದೇಶಗಳ ಹಿರಿಯ ಕ್ರಿಕೆಟಿಗರು ಕೊಹ್ಲಿಯ ಗುಣಗಾನ ಮಾಡುತ್ತಿದ್ದಾರೆ. #ವಿರಾಟೋತ್ಸವ2023 ಹ್ಯಾಟ್‌ಟ್ಯಾಗ್‌ನೊಂದಿಗೆ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಕೊಹ್ಲಿಯ ಕ್ರಿಕೆಟ್‌ ವೃತ್ತಿಜೀವನವನ್ನೇ ಜಾಲತಾಣದಲ್ಲಿ ಅನಾವರಣಗೊಳಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ತಮ್ಮ ಮೊಬೈಲ್‌ ಟಾರ್ಚ್‌ ಆನ್‌ ಮಾಡಿ ಗೌರವ ಸೂಚಿಸಿದರು. ಕೊಹ್ಲಿಯೂ ಸಹ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ತಮ್ಮನ್ನು ಹುರಿದುಂಬಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ: ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಕೊಹ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸುವ ಮೂಲಕ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ.

    ಇದೀಗ ಏಕದಿನ ಕ್ರಿಕೆಟ್‌ನಲ್ಲಿ 277 ಇನ್ನಿಂಗ್ಸ್‌ನಲ್ಲಿ 49 ಶತಕ ಸಿಡಿಸಿದ ಕೊಹ್ಲಿಯೇ ನಂ.1 ಶತಕ ವೀರನಾಗಿದ್ದು, 452 ಇನ್ನಿಂಗ್ಸ್‌ಲ್ಲಿ ಈ ಸಾಧನೆ ಮಾಡಿದ ಸಚಿನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 251 ಇನ್ನಿಂಗ್ಸ್‌ನಲ್ಲಿ 31 ಶತಕ ಬಾರಿಸಿರುವ ರೋಹಿತ್ ಶರ್ಮಾ, 365 ಇನ್ನಿಂಗ್ಸ್‌ನಲ್ಲಿ 30 ಶತಕ ಬಾರಿಸಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್, 433 ಇನ್ನಿಂಗ್ಸ್‌ನಲ್ಲಿ 28 ಶತಕ ಬಾರಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

    ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ 79 ಶತಕಗಳನ್ನ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ಇನ್ನು ಒಂದೇ ಒಂದು ಶತಕವಷ್ಟೇ ಬಾಕಿಯಿದೆ ಎಂಬುದು ವಿಶೇಷ.

  • ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

    ಕೊಹ್ಲಿ ಶತಕ ಕಣ್ತುಂಬಿಕೊಳ್ಳಲು 12,445 ಕಿಮೀನಿಂದ ಬಂದಿದ್ದ ಅಭಿಮಾನಿಗೆ ಭಾರೀ ನಿರಾಸೆ

    ಲಕ್ನೋ: ಸೂಪರ್‌ ಸಂಡೇನಲ್ಲಿ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಪಂದ್ಯವು ರೋಚಕತೆಯಿಂದ ಕೂಡಿದೆ. 20 ವರ್ಷಗಳ ಬಳಿಕ ಟೀಂ ಇಂಡಿಯಾ (Team India) ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ಮಣಿಸಿ ಹೊಸ ಇತಿಹಾಸ ನಿರ್ಮಿಸುವ ತವಕದಲ್ಲಿದೆ.

    ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ, 11.5 ಓವರ್‌ಗಳಲ್ಲಿ 40 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ವಿಶ್ವದಾಖಲೆಯ ಶತಕ ಸಿಡಿಸುವ ಭರವಸೆ ಮೂಡಿಸಿದ್ದ ಕಿಂಗ್‌ ಕೊಹ್ಲಿ (Virat Kohli) 9 ಎಸೆತಗಳಲ್ಲಿ 1 ರನ್‌ ಸಹ ಗಳಿಸದೇ ನಿರಾಸೆ ಮೂಡಿಸಿದರು. ಇದು ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲದೇ ವಿದೇಶಗಳಿಂದ ಬಂದಿದ್ದ ಅಭಿಮಾನಿಗಳಲ್ಲೂ ನಿರಾಸೆ ತರಿಸಿತ್ತು.

    ಲಕ್ನೋ ಕ್ರೀಡಾಂಗಣದಲ್ಲಿ ಕಿಂಗ್‌ ಕೊಹ್ಲಿ ಶತಕ ಸಿಡಿಸುತ್ತಾರೆ ಎಂಬ ಆಸೆಯಿಂದಲೇ ಅಮೆರಿಕದಿಂದ 12,445 ಕಿಮೀ (7,732 ಮೈಲು) ದೂರ ಪ್ರಯಾಣ ಮಾಡಿ ಅಭಿಮಾನಿಯೊಬ್ಬರು ಮ್ಯಾಚ್‌ ನೋಡಲು ಬಂದಿದ್ದಾರೆ. ಆದ್ರೆ ಕೊಹ್ಲಿ ಒಂದು ರನ್‌ ಕೂಡ ಗಳಿಸದೇ ಶೂನ್ಯಕ್ಕೆ ಔಟಾಗಿದ್ದು, ಅಮಾನಿಗಳಿಗೆ (Kohli Fans) ಅರಗಿಸಿಕೊಳ್ಳಲಾರದಷ್ಟು ಬೇಸರವಾಗಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ 87 ರನ್‌ಗಳ ಭರ್ಜರಿ ಜಯ – ಬಲಿಷ್ಠ ಇಂಗ್ಲೆಂಡ್‌ ತಂಡವನ್ನೇ ಹಿಂದಿಕ್ಕಿದ ಡಚ್ಚರು

    2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ‌ಬೆಸ್ಟ್‌ ಫಾರ್ಮ್‌ನಲ್ಲಿದ್ದು, 6 ಪಂದ್ಯಗಳಲ್ಲಿ 1 ಶತಕ ಸೇರಿ ಒಟ್ಟು 354 ರನ್‌ ಗಳಿಸಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup 2023: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ 29 ಟೆಸ್ಟ್‌ ಶತಕ, 1 T20 ಶತಕ ಹಾಗೂ 48 ಏಕದಿನ ಕ್ರಿಕೆಟ್‌ ಶತಕ ಸೇರಿ ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನ ಸರಿಗಟ್ಟುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅಭಿಮಾನಿಗಳ ಕನಸು ಹುಸಿಯಾಗಿದೆ. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿಮಾನಿಗಳಿಗೆ ಅದ್ಭುತ, ಆಟಗಾರರಿಗೆ ಭಯಾನಕ: ಮೂಕ ಕಲ್ಪನೆ  ಎಂದು ಮ್ಯಾಕ್ಸ್‌ವೆಲ್‌ ಕೆಂಡ

    ಅಭಿಮಾನಿಗಳಿಗೆ ಅದ್ಭುತ, ಆಟಗಾರರಿಗೆ ಭಯಾನಕ: ಮೂಕ ಕಲ್ಪನೆ ಎಂದು ಮ್ಯಾಕ್ಸ್‌ವೆಲ್‌ ಕೆಂಡ

    ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ (World Cup Cricket) ಪಂದ್ಯದ ವೇಳೆ ಆಯೋಜನೆಗೊಂಡಿರುವ ಲೈಟ್‌ ಶೋಗೆ ಆಸ್ಟ್ರೇಲಿಯಾದ (Australia) ಸ್ಫೋಟಕ ಬ್ಯಾಟರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಅಸಮಾಧಾನ ಹೊರ ಹಾಕಿದ್ದಾರೆ.

    ನೆದರ್ಲೆಂಡ್ಸ್‌ (Netherlands) ವಿರುದ್ಧ ವೇಗದ ಶತಕ ಸಿಡಿಸಿದ ನಂತರ ಪ್ರತಿಕ್ರಿಯಿಸಿದ ಅವರು, ಲೈಟ್‌ ಶೋ (Light Show) ನನಗೆ ತಲೆನೋವು ತಂದಿತ್ತು. ನನ್ನ ಕಣ್ಣುಗಳು ಮರುಹೊಂದಿಸಲು ನನಗೆ ಸ್ವಲ್ಪ ಸಮಯ ಬೇಕಾಗಿತ್ತು  ಎಂದು ಹೇಳಿದರು.

    ಬಿಗ್ ಬ್ಯಾಷ್ ಪಂದ್ಯದ ವೇಳೆ ಪರ್ತ್ ಸ್ಟೇಡಿಯಂನಲ್ಲಿ ನಾನು ಅಂತಹ ಬೆಳಕಿನ ಪ್ರದರ್ಶನವನ್ನು ನೋಡಿದ್ದೆ. ಈ ಬೆಳಕಿನ ಪ್ರದರ್ಶನ ಭಯಾನಕ ಕಲ್ಪನೆ. ಅಭಿಮಾನಿಗಳಿಗೆ ಅದ್ಭುತವಾಗಿದೆ. ಆದರೆ ಆಟಗಾರರಿಗೆ ಭಯಾನಕವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಒಂದು ಪಂದ್ಯ, ಎರಡು ದಾಖಲೆ; ನೆದರ್ಲೆಂಡ್ಸ್‌ ವಿರುದ್ಧ ಆಸ್ಟ್ರೇಲಿಯಾಗೆ 309 ರನ್‌ಗಳ ಜಯ

    ನೆದರ್ಲೆಂಡ್ಸ್‌ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ 309 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆಸ್ಟ್ರೇಲಿಯಾ 8 ವಿಕೆಟ್‌ ನಷ್ಟಕ್ಕೆ 399 ರನ್‌ ಹೊಡೆದರೆ  ನೆದರ್ಲೆಂಡ್ಸ್‌ 309 ರನ್‌ಗಳಿಗೆ ಆಲೌಟ್‌ ಆಗಿತ್ತು.

    ಗ್ಲೇನ್‌ ಮ್ಯಾಕ್ಸ್‌ವೆಲ್‌ 27 ಎಸೆತಗಳಲ್ಲಿ 50 ರನ್‌ ಹೊಡೆದಿದ್ದರೆ ನಂತರ ಕೇವಲ 13 ಎಸೆತಗಳಲ್ಲಿ 50 ರನ್‌ ಚಚ್ಚಿದ್ದರು. ಅಂತಿಮವಾಗಿ ಮ್ಯಾಕ್ಸ್‌ವೆಲ್‌ 106 ರನ್‌ (44 ಎಸೆತ, 9 ಬೌಂಡರಿ, 8 ಸಿಕ್ಸರ್‌) ಹೊಡೆದು ಔಟಾದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಹಲವು ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌

    ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಹಲವು ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌

    ಡೊಮಿನಿಕಾ: ಪಾದಾರ್ಪಣೆ ಟೆಸ್ಟ್‌ ಪಂದ್ಯದಲ್ಲೇ ಟೀಂ ಇಂಡಿಯಾದ (Team India) ಆರಂಭಿಕ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ (Yashasvi Jaiswal) ಶತಕ ಸಿಡಿಸುವ ಮೂಲಕ ಸೌರವ್‌ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.

    ವಿಂಡೀಸ್‌ (West Indies) ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 21 ವರ್ಷದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಔಟಾಗದೇ 143 ರನ್‌ (350 ಎಸೆತ, 14 ಬೌಂಡರಿ) ಹೊಡೆದಿದ್ದಾರೆ. ಈ ಮೂಲಕ ವಿದೇಶದಲ್ಲಿ ಟೆಸ್ಟ್‌ ಕ್ರಿಕೆಟ್‌ (Test Cricket) ಕ್ಯಾಪ್‌ ಧರಿಸಿ ಅತಿ ಹೆಚ್ಚು ರನ್‌ ಹೊಡೆದ ಭಾರತದ ಬ್ಯಾಟರ್‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    1996 ರಲ್ಲಿ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್‌ ಮೈದಾನದಲ್ಲಿ ಸೌರವ್‌ ಗಂಗೂಲಿ (Sourav Ganguly) 131 ರನ್‌ ಹೊಡೆದಿದ್ದರು. ಯಶಸ್ವಿ ಜೈಸ್ವಾಲ್‌ 131 ರನ್‌ಗಳ ಗಡಿಯನ್ನು ದಾಟುವ ಮೂಲಕ 27 ವರ್ಷದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

    ವಿದೇಶದಲ್ಲಿ ಪಾದಾರ್ಪಣೆ ಮಾಡಿ ಶತಕ ಸಿಡಿಸಿದ 7ನೇ ಭಾರತದ ಆಟಗಾರ ಎಂಬ ಖ್ಯಾತಿಗೆ ಜೈಸ್ವಾಲ್‌ ಪಾತ್ರರಾಗಿದ್ದಾರೆ. ಈ ಮೊದಲು ಅಬ್ಬಾಸ್ ಅಲಿ, ಸುರೀಂದರ್ ಅಮರನಾಥ್, ಪ್ರವೀಣ್ ಆಮ್ರೆ, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ ಶತಕ ಹೊಡೆದಿದ್ದರು.

    ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಭಾರತೀಯ ಆಟಗಾರನೊಬ್ಬ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆಯೂ ಈಗ ಜೈಸ್ವಾಲ್‌ ಪಾಲಾಗಿದೆ. 1984 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಿದ್ದ ಅಜರುದ್ದೀನ್ 322 ಎಸೆತ ಎದುರಿಸಿದ್ದರು.  ಇದನ್ನೂ ಓದಿ: IND vs WI: ಅಪ್ಪ, ಮಗನನ್ನು ಔಟ್ ಮಾಡಿ ದಾಖಲೆ ಬರೆದ ಅಶ್ವಿನ್

    ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 17 ನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಈ ಹಿಂದೆ ಲಾಲಾ ಅಮರನಾಥ್ (118), ದೀಪಕ್ ಶೋಧನ್ (110), ಎಜಿ ಕೃಪಾಲ್ ಸಿಂಗ್ (100*), ಅಬ್ಬಾಸ್ ಅಲಿ ಬೇಗ್ (112), ಹನುಮಂತ್ ಸಿಂಗ್ (105), ಗುಂಡಪ್ಪ ವಿಶ್ವನಾಥ್ (137), ಸುರೀಂದರ್ ಅಮರನಾಥ್ (124), ಮೊಹಮ್ಮದ್ ಅಜರುದ್ದೀನ್ (110), ಪ್ರವೀಣ್ ಆಮ್ರೆ (103), ಸೌರವ್ ಗಂಗೂಲಿ (131), ವೀರೇಂದ್ರ ಸೆಹ್ವಾಗ್ (105), ಸುರೇಶ್ ರೈನಾ (120), ಶಿಖರ್ ಧವನ್ (187), ರೋಹಿತ್ ಶರ್ಮಾ (177), ಪೃಥ್ವಿ ಶಾ (134) , ಮತ್ತು ಶ್ರೇಯಸ್ ಐಯ್ಯರ್ (105) ರನ್‌ ಹೊಡೆದಿದ್ದರು.

    ಉತ್ತಮ ಸ್ಥಿತಿಯಲ್ಲಿ ಭಾರತ:
    ಯಶಸ್ವಿ ಜೈಸ್ವಾಲ್‌ ಮತ್ತು ನಾಯಕ ರೋಹಿತ್‌ ಶರ್ಮಾ ಅವರ ಶತಕದ ಜೊತೆಯಾಟದಿಂದ ಭಾರತ 113 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 312 ರನ್‌ ಗಳಿಸಿದ್ದು ಉತ್ತಮ ಸ್ಥಿತಿಯಲ್ಲಿದೆ.

    ಮೊದಲ ವಿಕೆಟಿಗೆ ಜೈಸ್ವಾಲ್‌ ಮತ್ತು ರೋಹಿತ್‌ ಶರ್ಮಾ 454 ಎಸೆತಗಳಲ್ಲಿ 229 ರನ್‌ ಜೊತೆಯಾಟವಾಡಿದರು. ರೋಹಿತ್‌ ಶರ್ಮಾ 103 ರನ್‌ (221 ಎಸೆತ, 10 ಬೌಂಡರಿ, 2 ಸಿಕ್ಸರ್)‌ ಸಿಡಿಸಿ ಔಟಾದರು. ನಂತರ ಬಂದ ಶುಭಮನ್‌ ಗಿಲ್‌ 6 ರನ್‌ ಗಳಿಸಿ ಬೇಗನೇ ಔಟಾದರೂ ವಿರಾಟ್‌ ಕೊಹ್ಲಿ ಮತ್ತು ಜೈಸ್ವಾಲ್‌ ಮುರಿಯದ ಮೂರನೇ ವಿಕೆಟಿಗೆ 72 ರನ್‌ ಜೊತೆಯಾಟವಾಡಿದ್ದಾರೆ.

     

    ದಿನದ ಅಂತ್ಯಕ್ಕೆ ಜೈಸ್ವಾಲ್‌ 143 ರನ್‌, ವಿರಾಟ್‌ ಕೊಹ್ಲಿ 36 ರನ್‌ (96 ಎಸೆತ, 1 ಬೌಂಡರಿ) ಹೊಡೆದಿದ್ದು ಮೂರನೇ ದಿನ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ 64.3 ಓವರ್‌ಗಳಲ್ಲಿ 150 ರನ್‌ ಗಳಿಗೆ ಆಲೌಟ್‌ ಆಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

    ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

    ಕೋಲ್ಕತ್ತಾ: ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಅವರ ಸ್ಫೋಟಕ ಶತಕದಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ 23 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 4 ವಿಕೆಟ್‌ ನಷ್ಟಕ್ಕೆ 228 ರನ್‌ ಹೊಡೆಯಿತು. 229 ರನ್‌ಗಳ ಸವಾಲು ಪಡೆದ ಕೋಲ್ಕತ್ತಾ 7 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಕೋಲ್ಕತ್ತಾ 30 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ನಾಯಕ ನಿತೀಶ್‌ ರಾಣಾ (Nitish Rana) ಮತ್ತು ರಿಂಕು ಸಿಂಗ್‌ (Rinku Singh) ಸ್ಫೋಟಕ ಆಟವಾಡಿದರು. ರಾಣಾ 75 ರನ್‌(41 ಎಸೆತ, 5 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಕೊನೆಯವರೆಗೂ ಹೋರಾಡಿದ ರಿಂಕು ಔಟಾಗದೇ 58 ರನ್‌(31 ಎಸೆತ, 4 ಬೌಂಡರಿ, 4 ಸಿಕ್ಸರ್‌) ಚಚ್ಚಿದ್ದರು.

    ಕೊನೆಯ 24 ಎಸೆತದಲ್ಲಿ ಕೋಲ್ಕತ್ತಾ ಗೆಲ್ಲಲು 70 ರನ್‌ಗಳ ಅವಶ್ಯಕತೆಯಿತ್ತು. ರಾಣಾ ಮತ್ತು ರಿಂಕು ಸಿಂಗ್‌ 6ನೇ ವಿಕೆಟಿಗೆ 39 ಎಸೆತಗಳಲ್ಲಿ 69 ರನ್‌ ಹೊಡೆದಿದ್ದರು. 17ನೇ ಓವರ್‌ನ ಮೊದಲ ಎಸೆತವನ್ನು ರಾಣಾ ಸಿಕ್ಸರ್‌ಗೆ ಅಟ್ಟಿದ್ದರೆ ಎರಡನೇ ಎಸೆತವನ್ನೂ ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ನಡೆಸಿದರು. ಆದರೆ ಕ್ಯಾಚ್‌ ಔಟಾದ ಪರಿಣಾಮ ಪಂದ್ಯ ಹೈದರಬಾದ್‌ ಕಡೆಗೆ ತಿರುಗಿತು.

    ಬ್ರೂಕ್‌ ಶತಕ:
    ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದರು. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಅತಿ ಹೆಚ್ಚು ಸ್ಕೋರ್‌ ಆಗಿರುವುದು ವಿಶೇಷ.

    ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌ (17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌ (6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌) ಬಂದಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 26 ಎಸೆತ
    100 ರನ್‌ – 66 ಎಸೆತ
    150 ರನ್‌ – 59 ಎಸೆತ
    200 ರನ್‌ – 109 ಎಸೆತ
    228 ರನ್‌ – 120 ಎಸೆತ

  • ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ಕೋಲ್ಕತ್ತಾ: ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ.

    ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದಾರೆ. ಪರಿಣಾಮ ಹೈದರಾಬಾದ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 228 ರನ್‌ ಗಳಿಸಿದೆ. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಟಾಪ್‌ ಸ್ಕೋರ್‌ ಆಗಿರುವುದು ವಿಶೇಷ.

    ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌(17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌( 6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌) ಬಂದಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 26 ಎಸೆತ
    100 ರನ್‌ – 66 ಎಸೆತ
    150 ರನ್‌ – 59 ಎಸೆತ
    200 ರನ್‌ – 109 ಎಸೆತ
    228 ರನ್‌ – 120 ಎಸೆತ

  • 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

    ದುಬೈ: ಟೀಂ ಇಂಡಿಯಾದ ರನ್ ಮಿಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli)  ಬ್ಯಾಟ್ ಮತ್ತೆ ಘರ್ಜಿಸಿದೆ. ಏಷ್ಯಾಕಪ್‍ನ (Asia Cup 2022) ಸೂಪರ್‌ ಫೋರ್‌ ಹಂತದ ಅಘ್ಘಾನಿಸ್ತಾನ (Afghanistan) ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.

    ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿದ ಕೊಹ್ಲಿ ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 2 ವರ್ಷ, 9 ತಿಂಗಳು, 16 ದಿನಗಳ ಬಳಿಕ ಶತಕ ಸಿಡಿಸಿದರು. 1,021 ದಿನಗಳ ಬಳಿಕ ಕೊಹ್ಲಿ ಬ್ಯಾಟ್‍ನಿಂದ ಶತಕದ ವೈಭವ ಕಂಡುಬಂತು. ಈ ಶತಕ ಕೊಹ್ಲಿಯ 71ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಇದನ್ನೂ ಓದಿ: ಬೌಲರ್‌ಗೆ ಬ್ಯಾಟ್‍ನಲ್ಲಿ ಹೊಡೆಯಲು ಮುಂದಾದ ಆಸಿಫ್ ಅಲಿ – ಜೋರಾದ #BanAsifAli ಕೂಗು

    ಪಂದ್ಯದಲ್ಲಿ ಕೊಹ್ಲಿ ಅಜೇಯ 122 ರನ್ (61 ಎಸೆತ, 12 ಬೌಂಡರಿ, 6 ಸಿಕ್ಸ್) ಚಚ್ಚಿ ಮಿಂಚಿದರು. ಈ ಮೂಲಕ ಭಾರತ ತಂಡ ಅಘ್ಘಾನಿಸ್ತಾನ ವಿರುದ್ಧ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್‍ಗಳ ಬೃಹತ್ ಮೊತ್ತ ಪೇರಿಸಿದೆ. ಇದನ್ನೂ ಓದಿ: ಸೋತಿದ್ದಕ್ಕೆ ಕ್ರೀಡಾಂಗಣದಲ್ಲಿ ಅಫ್ಘಾನ್‌ ಅಭಿಮಾನಿಗಳ ಹುಚ್ಚಾಟ – ಚಯರ್‌ನಲ್ಲೇ ಪಾಕಿಗಳ ಮೇಲೆ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಶತಕ ಸಿಡಿಸಿ ಸಚಿನ್, ಕೊಹ್ಲಿ, ಸ್ಮಿತ್ ಜೊತೆ ಸ್ಥಾನ ಪಡೆದ ರೂಟ್

    ಶತಕ ಸಿಡಿಸಿ ಸಚಿನ್, ಕೊಹ್ಲಿ, ಸ್ಮಿತ್ ಜೊತೆ ಸ್ಥಾನ ಪಡೆದ ರೂಟ್

    ಲಂಡನ್: ಲಾರ್ಡ್ಸ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್‌ಮ್ಯಾನ್ ಜೋ ರೂಟ್ ತಂಡದ ಗೆಲುವಿನ ಶತಕ ಗಳಿಸುವುದರೊಂದಿಗೆ ಟೆಸ್ಟ್‌ನಲ್ಲಿ 10 ಸಾವಿರ ರನ್‍ಗಳ ಗಡಿಯನ್ನು ದಾಟಿದ್ದಾರೆ.

    ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾಗದೇ 115 ರನ್(170 ಎಸೆತ, 12 ಬೌಂಡರಿ) ಹೊಡೆದರು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

    ಟೆಸ್ಟ್ ಕ್ರಿಕೆಟ್‍ನಲ್ಲಿ ಮೈಲುಗಲ್ಲನ್ನ ತಲುಪಿದ ವಿಶ್ವದ 14ನೇ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಹಿಂದೆ 10 ಸಾವಿರ ರನ್ ಹೊಡೆದಿದ್ದರು. ಈಗ ಈ ದಿಗ್ಗಜರ ಪಟ್ಟಿಗೆ ರೂಟ್ ಈಗ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಮೈದಾನದಲ್ಲೇ ಬ್ಯಾಟ್‍ನಲ್ಲಿ ಮ್ಯಾಜಿಕ್ ಮಾಡಿದ ರೂಟ್

    ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. 20 ಟೆಸ್ಟ್ ಆಡಿರುವ ಸಚಿನ್ 329 ಇನ್ನಿಂಗ್ಸ್‌ನಿಂದ 15,921 ರನ್ ಹೊಡೆದಿದ್ದಾರೆ.

    ಇಂಗ್ಲೆಂಡ್ ಪರ 10 ಸಾವಿರ ರನ್ ಹೊಡೆದ ಎರಡನೇ ಆಟಗಾರನಾಗಿ ಜೋ ರೂಟ್ ಹೊರ ಹೊಮ್ಮಿದ್ದಾರೆ. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಅಲಸ್ಟೈರ್ ಕುಕ್ ಟೆಸ್ಟ್‌ನಲ್ಲಿ 161 ಪಂದ್ಯಗಳನ್ನು ಆಡಿ 12,472 ರನ್ ಹೊಡೆದಿದ್ದಾರೆ. ಇದನ್ನೂ ಓದಿ: 22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ

    31 ವರ್ಷದ ಜೋ ರೂಟ್ 118 ಪಂದ್ಯಗಳ 218 ಇನ್ನಿಂಗ್ಸ್‌ಗಳಿಂದ 10,015 ರನ್ ಹೊಡೆದಿದ್ದಾರೆ. ಇಲ್ಲಿಯವರೆಗೆ ಒಟ್ಟು 26 ಶತಕ, 53 ಅರ್ಧಶತಕ ಹೊಡೆದಿದ್ದಾರೆ.

  • ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು

    ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು

    ಸಿಡ್ನಿ: ಪುರುಷರ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಮೊದಲ ಭಾರತೀಯ ಬ್ಯಾಟ್ಸ್‌ಮ್ಯಾನ್‌ ಆದರೆ, ಇದೀಗ ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ಪಿಂಕ್‍ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ ಭಾರತದ ಮಹಿಳಾ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಮೊದಲ ಪಿಂಕ್‍ಬಾಲ್ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತನ್ನ ಮೊದಲ ಟೆಸ್ಟ್ ಶತಕ 127ರನ್(216 ಎಸೆತ, 22 ಬೌಂಡರಿ, 1 ಸಿಕ್ಸ್) ಬಾರಿಸಿ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ್ತಿಯಾಗಿ ಮಿಂಚಿದ್ದಾರೆ. ಈ ಮೂಲಕ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಭಾರತದ ಎರಡನೇ ಮಹಿಳಾ ಅಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೊದಲು 1984ರಲ್ಲಿ ಸಂಧ್ಯಾ ಅಗರ್ವಾಲ್ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದರು, ಬಳಿಕ ಇದೀಗ ಮಂಧಾನ ಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ಪುರಷರ ವಿಭಾಗದ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿಧಾರಿ ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದರೆ, ಕಾಕತಾಳಿಯವೆಂಬಂತೆ ಮಹಿಳಾ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿ ತೊಡುವ ಸ್ಮೃತಿ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಮೊದಲ ಶತಕ ಸಿಡಿಸಿ ಮೆರೆದಿದ್ದಾರೆ. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ಭಾರತದ ಪುರುಷರ ತಂಡದಲ್ಲಿ ವಿರಾಟ್ ಕೊಹ್ಲಿ ರನ್ ಮೆಷಿನ್ ಆಗಿ ಗುರುತಿಸಿಕೊಂಡರೆ, ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ರನ್ ಮೆಷಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ಕೂಡ ಸ್ಟೈಲಿಷ್ಟ್ ಬ್ಯಾಟರ್‍ ಗಳಾಗಿದ್ದು, ಭಾರತಕ್ಕಾಗಿ ಇನ್ನಷ್ಟು ರನ್ ಸಿಡಿಸಿ ದಾಖಲೆಗಳ ಒಡೆಯರಾಗಲಿ ಎಂಬುದು ಅಭಿಮಾನಿಗಳ ಆಶಯ.

  • ಐಪಿಎಲ್‍ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಐಪಿಎಲ್‍ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಬೆಂಗಳೂರು: ಐಪಿಎಲ್ ಎಂದರೆ ಕ್ರಿಕೆಟ್ ಪ್ರೇಮಿಗಳ ಹಬ್ಬ. ಇಲ್ಲಿ ಬೌಲರ್‍ ಗಿಂತ ಬ್ಯಾಟ್ಸ್ ಮ್ಯಾನ್‍ಗಳು ಹೆಚ್ಚು ಕಾರುಬಾರು ಮಾಡುತ್ತಾರೆ. ಅದೇ ರೀತಿ ಐಪಿಎಲ್‍ನಲ್ಲಿ ರನ್ ಮಳೆ ಸುರಿಸುವ ಆಟಗಾರರನ್ನು ಒಳಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವುದೇ ತಂಡ ಮಾಡದೆ ಇರುವುವಂತಹ ದಾಖಲೆಯೊಂದನ್ನು ನಿರ್ಮಿಸಿ ಅಭಿಮಾನಿಗಳ ಮನಗೆದ್ದಿದೆ.

    ಈಗಾಗಲೇ 13 ಸೀಸನ್‍ಗಳನ್ನು ಕಂಡಿರುವ ಐಪಿಎಲ್ ಅದೇಷ್ಟೋ ದಾಖಲೆಗಳು ನಿರ್ಮಾಣವಾಗಿದೆ. ಅದರಲ್ಲಿ ಒಂದು ತಂಡವೊಂದು ಅತೀ ಹೆಚ್ಚು ಶತಕ ಬಾರಿಸಿದ ಕೀರ್ತಿಗೆ ಪಾತ್ರವಾಗಿದೆ. ಅದೂ ಕೂಡ ಐಪಿಎಲ್‍ನಲ್ಲಿ ಇದುವರೆಗೂ ಕಪ್ ಗೆಲ್ಲದ ಆರ್​ಸಿಬಿ ತಂಡ ಶತಕಗಳ ಸಾಧನೆಯಲ್ಲಿ ಎಲ್ಲಾ ತಂಡಗಳಿಗಿಂತ ಮುಂದಿದೆ. ಈ ಮೂಲಕ ಐಪಿಎಲ್‍ನಲ್ಲಿ ಅತೀ ಹೆಚ್ಚು 14 ಶತಕ ಸಿಡಿಸಿ ದಾಖಲೆ ಮಾಡಿದೆ.

    2008ರಿಂದ ಪ್ರಾರಂಭವಾದ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆರ್​ಸಿಬಿ ತಂಡ ಒಟ್ಟು 14 ಶತಕ ಸಿಡಿಸಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಆರ್​ಸಿಬಿ ಪರ 5 ಶತಕ ಸಿಡಿಸಿದರೆ. ಅದೇ ತಂಡದಲ್ಲಿದ್ದ ಕ್ರೀಸ್ ಗೇಲ್ 4 ಶತಕ, ಎಬಿಡಿ ವಿಲಿಯರ್ಸ್ 3 ಶತಕ, ಮನೀಶ್ ಪಾಂಡೆ 1 ಶತಕ ಮತ್ತು ದೇವದತ್ ಪಡಿಕ್ಕಲ್ 1 ಶತಕ ಬಾರಿಸಿ ಒಟ್ಟು 14 ಶತಕ ಬಾರಿಸುವ ಮೂಲಕ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

    ಶತಕಗಳ ಸಾಧನೆಯಲ್ಲಿ 11 ಶತಕ ಸಿಡಿಸಿರುವ ಪಂಜಾಬ್ ತಂಡ 2ನೇ ಸ್ಥಾನ ಪಡೆದುಕೊಂಡಿದೆ. ಪಂಜಾಬ್ ಪರ ಕ್ರೀಸ್ ಗೇಲ್ ಮತ್ತು ಆಶೀಮ್ ಆಮ್ಲ ತಲಾ 2 ಶತಕ ಬಾರಿಸಿದರೆ, ಶಾನ್ ಮಾರ್ಷ್, ಮಹೇಲಾ ಜಯವರ್ಧನೆ, ಪೌಲ್ ವಾಲ್‍ತಾಟಿ, ಆ್ಯಡಮ್ ಗಿಲ್‍ಕ್ರಿಸ್ಟ್, ಡೇವಿಡ್ ಮಿಲ್ಲರ್, ವಿರೇಂದ್ರ ಸೆಹ್ವಾಗ್, ವೃದ್ದಿಮಾನ್ ಸಹಾ, ಮತ್ತು ಕೆ.ಎಲ್ ರಾಹುಲ್ ತಲಾ ಒಂದು ಶತಕ ಸಿಡಿಸುವ ಮೂಲಕ ಪಂಜಾಬ್ ತಂಡ ಒಟ್ಟು 11 ಶತಕಗಳ ಸಾಧನೆ ಮಾಡಿದೆ.

    ಈ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಡೆದುಕೊಂಡಿದ್ದು, 6 ಆಟಗಾರರು ಚೆನ್ನೈ ಪರ ಶತಕ ಸಿಡಿಸಿದ್ದಾರೆ. ಚೆನ್ನೈ ತಂಡ ಒಟ್ಟು 8 ಶತಕಗಳನ್ನು ಸಿಡಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

    ನಂತರ ಡೆಲ್ಲಿ ತಂಡ 7 ಶತಕ, ರಾಜಸ್ಥಾನ ತಂಡ 6 ಶತಕ, ಮುಂಬೈ ತಂಡ 4 ಶತಕ ಮತ್ತು ಹೈದರಾಬಾದ್ ತಂಡದ ಪರ 3 ಶತಕಗಳು ದಾಖಲಾಗಿದೆ.