Tag: ಶಕ್ತಿ ಯೋಜನೆ

  • ಬಸ್‌ ಸೀಟಿಗಾಗಿ ಕಿತ್ತಾಟ – ಚಪ್ಪಲಿಯಿಂದ ಹಲ್ಲೆ, ಬಟ್ಟೆ ಹಿಡಿದು ಎಳೆದಾಡಿದ ಮಹಿಳೆಯರು

    ಬಸ್‌ ಸೀಟಿಗಾಗಿ ಕಿತ್ತಾಟ – ಚಪ್ಪಲಿಯಿಂದ ಹಲ್ಲೆ, ಬಟ್ಟೆ ಹಿಡಿದು ಎಳೆದಾಡಿದ ಮಹಿಳೆಯರು

    ಬೀದರ್‌: ಬಸ್ ಸೀಟಿಗಾಗಿ (Bus Seat) ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಬೀದರ್‌ನಿಂದ ಕಲಬುರಗಿ ಬಸ್‌ನಲ್ಲಿಇಬ್ಬರು ಶಕ್ತಿ ಯೋಜನೆ (Shakti Scheme) ಅಡಿ ಉಚಿತ ಟಿಕೆಟ್‌ (Free Ticket) ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್‌ ಬಿಡಲ್ಲ. ಏನ್‌ ಮಾಡ್ತಿ” ಎಂದು ಪ್ರಶ್ನಿಸಿದ್ದಾಳೆ. ಇದನ್ನೂ ಓದಿ: ಚೀನಾ ಸಾಲದ ಸುಳಿಗೆ ಬಿದ್ದ ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ

    ಇಬ್ಬರು ಪರಸ್ಪರ ಮಾತಿನಲ್ಲಿ ಜಗಳ ಮಾಡುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಜಗಳ ಮಾಡುತ್ತಿದ್ದ ಮಹಿಳೆ ಹೊಡೆದಿದ್ದಾಳೆ.

    ಚಪ್ಪಲಿ ಹಲ್ಲೆ ಬಳಿಕ ಮೈಮೇಲೆ ಹಾಕಿದ ಬಟ್ಟೆ ಹಿಡಿದು ಮಹಿಳೆಯರು ಎಳೆದಾಡಿಕೊಂಡಿದ್ದಾರೆ. ಇದನ್ನೂ ಓದಿ:ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರಿ ಅರೆಸ್ಟ್

     

  • ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ: ರಾಮಲಿಂಗಾರೆಡ್ಡಿ

    ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ: ರಾಮಲಿಂಗಾರೆಡ್ಡಿ

    ಬೆಂಗಳೂರು: ಶಕ್ತಿ ಯೋಜನೆಯಲ್ಲಿ(Shakti Scheme) ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. 5 ವರ್ಷ ಯೋಜನೆ ಮುಂದುವರೆಯಲಿದೆ. ಮುಂದಿನ ಅವಧಿಯಲ್ಲಿ ಕಾಂಗ್ರೆಸ್ (Congress) ಮತ್ತೆ ಅಧಿಕಾರಕ್ಕೆ ಬರುತ್ತದೆ ಅಗಲೂ ಶಕ್ತಿ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.

    ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿಯಿಂದ(KSRTC)100 ಹೊಸ ಬಸ್ ಗೆ ಚಾಲನೆ ನೀಡ್ತಿದ್ದೇವೆ, ಏಪ್ರಿಲ್ ಹೊತ್ತಿದೆ 1000 ಬಸ್ ಬರಲಿದೆ. ಶಕ್ತಿ ಯೋಜನೆ ಬಂದಾಗಿನಿಂದ 1 ಕೋಟಿ 10 ಲಕ್ಷ ಜನ ನಿತ್ಯ 4 ನಿಗಮದಿಂದ ಓಡಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಶಕ್ತಿಯಿಂದ ಸಮಸ್ಯೆ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಹೊಸ ಬಸ್ ಖರೀದಿ ‌ಮಾಡುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದರು.  ಇದನ್ನೂ ಓದಿ: ನಮ್ಮ ಗ್ಯಾರಂಟಿಗಳನ್ನು ನೋಡಿಕೊಂಡು ಬಿಜೆಪಿ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಅಂತಾರೆ: ಸಿದ್ದರಾಮಯ್ಯ

     

    4 ವರ್ಷಗಳಿಂದ ಒಂದು ಬಸ್ ಖರೀದಿ ಮಾಡಿರಲಿಲ್ಲ. ನಾವು ಈಗ ಸುಮಾರು 5 ಸಾವಿರ ಬಸ್ ಗಳು ಖರೀದಿಗೆ ನಿರ್ಧಾರ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಖಾಲಿ ಹುದ್ದೆ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ 9 ಸಾವಿರ ಹುದ್ದೆ ನೇಮಕಕ್ಕೆ ಸಿಎಂ ಒಪ್ಪಿದ್ದಾರೆ. ಪ್ರಕ್ರಿಯೆ ಶುರುವಾಗಿದೆ. ಆದಷ್ಟು ಬೇಗ 9 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ. ಇಲ್ಲಿಯವರಗೆ 146 ಕೋಟಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಓಡಾಡಿದ್ದಾರೆ. ಶಕ್ತಿ ಯೋಜನೆ ಯಶಸ್ವಿಯಾಗಿದೆ. ಬಿಜೆಪಿಗಿಂತ ಉತ್ತಮವಾಗಿ ಇಲಾಖೆ ನಾವು ನಡೆಸಿದ್ದೇವೆ. ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಶಕ್ತಿ ಯೋಜನೆ ಮುಂದೆವರೆಸುತ್ತೇವೆ ಎಂದು ಹೇಳಿದರು.

     

  • KSRTCಗೆ 800 ʻಅಶ್ವಮೇಧʼ ಕ್ಲಾಸಿಕ್ ಬಸ್‌ಗಳ ಬಲ – 100 ಬಸ್‌ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ

    KSRTCಗೆ 800 ʻಅಶ್ವಮೇಧʼ ಕ್ಲಾಸಿಕ್ ಬಸ್‌ಗಳ ಬಲ – 100 ಬಸ್‌ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ

    ಬೆಂಗಳೂರು: KSRTC ವತಿಯಿಂದ ನೂತನ 100 ಅಶ್ವಮೇಧ ಕ್ಲಾಸ್ ಬಸ್ (Ashwamedha Classic Bus) ಲೋಕಾರ್ಪಣೆಗೊಳಿಸಿದರು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಏಪ್ರಿಲ್ ವೇಳೆಗೆ 800 ಅಶ್ವಮೇಧ ಕ್ಲಾಸಿಕ್ ಬಸ್‌ಗಳು ರಸ್ತೆಗೆ ಇಳಿಯಲಿದ್ದು, ಸೋಮವಾರ (ಫೆ.5) ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಚಾಲನೆ ನೀಡಿದ್ದಾರೆ.

    ಅಶ್ವಮೇಧ ಕ್ಲಾಸಿಕ್ ಬಸ್ ವಿಶೇಷತೆ ಏನು?
    * ಎಕ್ಸ್‌ಪ್ರೆಸ್ (Express Bus) ಹೆಸರಿನಲ್ಲಿ ಬಸ್ ಆಪರೇಟ್ ಆಗಲಿದೆ. ವಾಹನದ ಎತ್ತರ 3.4 ಮೀಟರ್ ಇದೆ. 50ಕ್ಕೂ ಹೆಚ್ಚು ಆಸನಗಳನ್ನ ಒಳಗೊಂಡಿದೆ. ಎತ್ತರದ, ಉತ್ತಮ ಗುಣಮಟ್ಟದ ಕುಷನ್ ಮತ್ತು ರೆಕ್ಸಿನ್ ಒಳಗೊಂಡ ಆಸನಗಳಿವೆ. ಪ್ರತಿ ಆಸನದ ಹಿಂಬದಿಯಲ್ಲಿ ಮ್ಯಾಗ್ ಜಿನ್ ಹಾಗೂ ವಾಟರ್ ಪೌಚ್‌ನ ಸೌಲಭ್ಯ ಒಳಗೊಂಡಿದೆ. ಇದನ್ನೂ ಓದಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    * ‌ವಿಶಾಲವಾದ ವಾಹನದ ಮುಂದಿನ ಹಾಗೂ ಹಿಂದಿನ ಗಾಜು. ವಿಶಾಲವಾದ ಪ್ರಯಾಣಿಕರ ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು. ಮೇಲ್ಚಾವಣಿಯಲ್ಲಿ 2 ಸಾಲು ಗ್ರಾಬ್ ರೈಲ್. ಬಸ್ಸಿನ ಹಿಂದೆ ಮತ್ತು ಮುಂದೆ LED ಮಾರ್ಗ ಫಲಕ ಅಳವಡಿಕೆ. ಜಾಹೀರಾತು ಮಾದರಿಯ ಹ್ಯಾಂಡ್ ಗ್ರಿಪ್. FRP ಡ್ಯಾಶ್ ಬೋರ್ಡ್ ವ್ಯವಸ್ಥೆ ಇದೆ. ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು

    * ‌ಮೇಲ್ಚಾವಣಿ (ಸಲೂನ್) ಎಲ್‌ಇಡಿ ಸ್ಕ್ರಿಪ್ಟ್ 2 ಸಂಖ್ಯೆ ಲೈಟ್. ಪ್ರವೇಶದ ಫುಟ್ ಸ್ಟೆಪ್ ಮೇಲೆ ಸ್ಕ್ರಿಪ್ಟ್ ಮಾದರಿಯ ಎಲ್‌ಇಡಿ ಬಲ್ಬ್ ಗಳು. ಬಸ್ ಮುಂಬದಿ, ಹಿಂಬದಿ ತಲಾ 1 ಕ್ಯಾಮರಾ ಅಳವಡಿಕೆ. ಎಲೆಕ್ಟ್ರಾನಿಕ್ ವಾಹನ ಸ್ಥಿರತೆ ನಿಯಂತ್ರಣ ಉಪಕರಣ ಅಳವಡಿಕೆ (EVSC) Bs-6OBD 2 ಕಂಪ್ಲೈಂಟ್. ವಾಹನಕ್ಕೆ ಟ್ರ್ಯಾಕಿಂಗ್ ಉಪಕರಣ, ಪ್ಯಾನಿಕ್ ಬಟನ್ ಗಳು ಮತ್ತು ಬಸ್ ನಿಲ್ದಾಣಗಳ ಮಾಹಿತಿ ನೀಡುವ ಧ್ವನಿವರ್ಧಕ ಯಂತ್ರಗಳ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಜಿಡಿಎಸ್‌ಗೆ ವೋಟ್ ಹಾಕಿದ್ದಕ್ಕೆ ಗಂಗಾ ಕಲ್ಯಾಣ ಪಟ್ಟಿಗೆ ತಡೆ – ಸಚಿವ ವೆಂಕಟೇಶ್ ವಿರುದ್ಧ ರೈತರ ಕಿಡಿ

  • ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಇಳಿಯಲು ಮುಂದಾದ ಯುವತಿ – ಯುವತಿ, ಕಂಡಕ್ಟರ್ ನಡುವೆ ಗಲಾಟೆ

    ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಇಳಿಯಲು ಮುಂದಾದ ಯುವತಿ – ಯುವತಿ, ಕಂಡಕ್ಟರ್ ನಡುವೆ ಗಲಾಟೆ

    ಬೆಂಗಳೂರು: ಟಿಕೆಟ್ (Ticket) ಪಡೆದ ನಿಲ್ದಾಣ ಬರುವ ಮೊದಲೇ ಯುವತಿ (Young Woman) ಬಸ್ ಇಳಿಯಲು ಮುಂದಾಗಿದ್ದು, ಯುವತಿ ಹಾಗೂ ಕಂಡಕ್ಟರ್ (Conductor) ನಡುವೆ ಗಲಾಟೆ ನಡೆದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಾಗಿನಿಂದ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವಿನ ಜಟಾಪಟಿ ದಿನೇ ದಿನೇ ಹೆಚ್ಚುತ್ತಿದೆ. ಪ್ರಯಾಣಿಕರು ನಿಗದಿತ ಸ್ಥಳಕ್ಕೆ ಟಿಕೆಟ್ ಪಡೆದು ಸ್ಟಾಪ್ ಬರುವ ಮುನ್ನವೇ ಬಸ್ಸಿನಿಂದ ಇಳಿಯುತ್ತಿರುವ ಘಟನೆಗಳು ಹೆಚ್ಚಿದ್ದು, ಮಹಿಳಾ ಪ್ರಯಾಣಿಕರ ಈ ನಡೆಗೆ ನಿರ್ವಾಹಕರು ಸುಸ್ತಾಗಿದ್ದಾರೆ. ಅಲ್ಲದೇ ಮಹಿಳೆಯರ ನಡೆಯಿಂದ ನಿರ್ವಾಹಕರು ಈಗ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಇದನ್ನೂ ಓದಿ: ಮಂಡ್ಯ ಬಸ್ ಹತ್ತುವಾಗ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು

    ಅದೇ ರೀತಿ ಬಿಎಂಟಿಸಿಯಲ್ಲಿ (BMTC) ಯುವತಿ ಮತ್ತು ಕಂಡಕ್ಟರ್ ನಡುವೆ ಗಲಾಟೆ ನಡೆದಿದೆ. ಯುವತಿಯೋರ್ವಳು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕಾಡುಬೀಸನಹಳ್ಳಿಗೆ ಟಿಕೆಟ್ ಪಡೆದಿದ್ದು, ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಅಗರ ಬಳಿ ಇಳಿಯಲು ಮುಂದಾಗಿದ್ದಾಳೆ. ಯುವತಿಯ ಈ ನಡೆಗೆ ಕಂಡಕ್ಟರ್ ಗರಂ ಆಗಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ಕಂಡಕ್ಟರ್ ಜೊತೆ ಯುವತಿ ವಾಗ್ವಾದ ಮಾಡಿದ್ದಾಳೆ. ಈ ಸಂದರ್ಭ ನಿರ್ವಾಹಕ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಇದನ್ನೂ ಓದಿ: ಭದ್ರಾವತಿ ಬಿಜೆಪಿ ಕಾರ್ಯಕರ್ತನ ಕಾರು ಜಖಂ – ಮೂವರು ಆರೋಪಿಗಳು ಅರೆಸ್ಟ್

    ಒಂದೊಮ್ಮೆ ಉಚಿತ ಟಿಕೆಟ್ ಪಡೆದ ಸ್ಥಳಕ್ಕಿಂತ ಹಿಂದೆಯೇ ಪ್ರಯಾಣಿಕರು ಇಳಿದರೆ, ಚೆಕ್ಕಿಂಗ್ ಅಧಿಕಾರಿಗಳು ಬಂದಾಗ ನಿರ್ವಾಹಕರು ದಂಡ ಕಟ್ಟಬೇಕಾಗುತ್ತದೆ. ಸದ್ಯ ಮಹಿಳಾ ಪ್ರಯಾಣಿಕರ ಈ ನಡೆಯಿಂದ ನಿರ್ವಾಹಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು – 11 ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ

  • ಇಬ್ಬರಿಗೂ ಒಂದೇ ಆಧಾರ್‌ ಕಾರ್ಡ್‌ – ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬುರ್ಖಾಧಾರಿ ಮಹಿಳೆಯರು

    ಇಬ್ಬರಿಗೂ ಒಂದೇ ಆಧಾರ್‌ ಕಾರ್ಡ್‌ – ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬುರ್ಖಾಧಾರಿ ಮಹಿಳೆಯರು

    ಬೆಂಗಳೂರು: ಒಂದೇ ಆಧಾರ್‌ ಕಾರ್ಡ್‌ (Aadhar Card) ಬಳಸಿ ಶಕ್ತಿ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರು ರೆಡ್‌ಹ್ಯಾಂಡಾಗಿ ನಿರ್ವಾಹಕನ (Conductor) ಕೈಗೆ ಸಿಕ್ಕಿ ಬಿದ್ದಿದ್ದಾರೆ.

    ನಿರ್ವಾಹಕರು ಎಂದಿನಿಂತೆ ಟಿಕೆಟ್‌ ಕೊಡುವ ಮುನ್ನ ದಾಖಲೆ ಕೇಳಿದ್ದಾರೆ. ಈ ವೇಳೆ ಮಹಿಳೆಯರು ಆಧಾರ್‌ ಕಾರ್ಡ್‌ ತೋರಿಸಿದ್ದಾರೆ. ಇಬ್ಬರ ಕಾರ್ಡ್‌ನಲ್ಲಿ ಒಂದೇ ನಂಬರ್‌ ಇರುವುದನ್ನು ನೋಡಿ ಇದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಒಬ್ಬರು ಟಿಕೆಟ್‌ ಪಡೆದು ಪ್ರಯಾಣಿಸಿದ್ದಾರೆ.   ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – ಬೆಂಗಳೂರು, ಹೈದರಾಬಾದ್ ಬಳಿಕ ಅಹಮದಾಬಾದ್‍ನ ಎಫ್‍ಎಸ್‍ಎಲ್‍ಗೆ ಮೊಬೈಲ್ ರವಾನೆ

    ನಿರ್ವಾಹಕನೇ ಈ ವಿಡಿಯೋ ಮಾಡಿ ಯಾವ ರೀತಿ ಮಹಿಳೆಯರು ಮೋಸ ಮಾಡುತ್ತಾರೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಕರ್ನಾಟಕ ರಾಜ್ಯಕ್ಕೆ ಸೇರಿದ ಮಹಿಳೆಯರು ಮಾತ್ರ ಶಕ್ತಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಬೇರೆ ರಾಜ್ಯದವರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.

     

  • ಮೆಜೆಸ್ಟಿಕ್‌ನಲ್ಲಿದ್ದ ಬೂತ್‌ಗಳ ಎತ್ತಂಗಡಿ – BMTCಗೆ ಬೇಡವಾಯ್ತಾ ನಂದಿನಿ?

    ಮೆಜೆಸ್ಟಿಕ್‌ನಲ್ಲಿದ್ದ ಬೂತ್‌ಗಳ ಎತ್ತಂಗಡಿ – BMTCಗೆ ಬೇಡವಾಯ್ತಾ ನಂದಿನಿ?

    ಬೆಂಗಳೂರು: ನಂದಿನಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌, ಈಗ ಸರ್ಕಾರದ ಅಂಗ ಸಂಸ್ಥೆಯಾದ ಬಿಎಂಟಿಸಿಗೆ (BMTC) ಬೇಡವಾಗಿದೆ. ಶಕ್ತಿ ಯೋಜನೆಯ ಖರ್ಚು ಸರಿದೂಗಿಸಬೇಕಾದ ಒತ್ತಡದಲ್ಲಿ, ಹೆಚ್ಚು ಆದಾಯದ ಆಸೆಯಿಂದ ನಂದಿನಿ ಪಾರ್ಲರ್‌ಗಳನ್ನ ಜನರಲ್ ಸ್ಟೋರ್ (General Store) ಆಗಿ ಬದಲಾಯಿಸುವ ಮೂಲಕ ನಂದಿನಿ ಬೂತ್‌  (Nandini Parlor) ಎತ್ತಂಗಡಿ ಮಾಡಿದೆ.

    2023ರ ವಿಧಾನಸಭಾ ಚುನಾವಣೆ (Election 2023) ಸಂಧರ್ಭದಲ್ಲಿ ನಂದಿನಿ ವಿಚಾರವನ್ನೇ ಹೆಚ್ಚು ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಬಹುಶಃ ನಾಡಿನ ಹೆಮ್ಮೆಯ ನಂದಿನಿಯನ್ನೇ ಮರೆತಂತೆ ಕಾಣುತ್ತಿದೆ. ಬಿಎಂಟಿಸಿ ತನ್ನ ಆದಾಯದ ಮೂಲವನ್ನ ಹೆಚ್ಚಿಸಿಕೊಳ್ಳಬೇಕಾದ ಭರದಲ್ಲಿ, ತನ್ನ ವ್ಯಾಪ್ತಿಯ ವ್ಯಾಪಾರ ಸ್ಥಳಗಳಲ್ಲಿದ್ದ ನಂದಿನಿ ಪಾರ್ಲರ್‌ಗಳನ್ನ ಏಕಾಏಕಿ ಜನರಲ್ ಸ್ಟೋರ್‌ಗಳನ್ನಾಗಿ ಪರಿವರ್ತನೆ ಮಾಡುವ ಕೆಲಸಕ್ಕೆ ಮುಂದಾಗಿದೆ.

    ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಳೆದ ಅನೇಕ ವರ್ಷಗಳಿಂದ ನಂದಿನಿ ಪಾರ್ಲರ್‌ಗಳನ್ನ ತೆರೆಯಲಾಗಿತ್ತು. ಪ್ರತಿ ತಿಂಗಳು 30 ಸಾವಿರ ಬಾಡಿಗೆ ಕೂಡ ಪಡೆಯುತ್ತಿತ್ತು. ಆದರೀಗ ಆದಾಯ ಹೆಚ್ಚಿಸುವ ಭರದಲ್ಲಿ ಎಲ್ಲಾ ಪಾರ್ಲರ್‌ಗಳನ್ನ ಜನರಲ್ ಸ್ಟೋರ್‌ಗಳನ್ನಾಗಿ ಬದಲಾಯಿಸಿದೆ. ಕಾರಣ ನಂದಿನಿ ಪಾರ್ಲರ್‌ಗಳಿಗೆ ಹೋಲಿಕೆ ಮಾಡಿದ್ರೆ ಜನರಲ್ ಸ್ಟೋರ್‌ಗಳಿಂದ ಬಿಎಂಟಿಸಿಗೆ ಆದಾಯ ಹೆಚ್ಚು. ಟೆಂಡರ್‌ನಲ್ಲಿ ಪ್ರತಿ ಜನರಲ್ ಸ್ಟೋರ್‌ಗಳು ತಿಂಗಳಿಗೆ 90 ಸಾವಿರ ಬಾಡಿಗೆ ಪಡೆಯುವುದಾಗಿ ಬಿಡ್ ಪಡೆದಿವೆ. ನಂದಿನಿ ಪಾರ್ಲರ್‌ಗಿಂತ ಮೂರು ಪಟ್ಟು ಹೆಚ್ಚಿಗೆ ಹಣವನ್ನ ಜನರಲ್ ಸ್ಟೋರ್ ನೀಡುತ್ತಿರೋ ಕಾರಣ ಪಾರ್ಲರ್‌ಗಳನ್ನೇ ಪರಿವರ್ತನೆ ಮಾಡಲು ನಿಗಮ ಮುಂದಾಗಿದೆ. ಇದನ್ನೂ ಓದಿ: ‘ಕೈ’ ತೆಲಂಗಾಣ ಗೆದ್ದಿದ್ದಕ್ಕೆ ಬಿಜೆಪಿ ಅಸೂಯೆ ಪಡುವ ಬದಲು ತಾನು ಗೆದ್ದ ರಾಜ್ಯಗಳಲ್ಲಿ ಸಿಎಂ ಆಯ್ಕೆ ಮಾಡಲಿ: ದಿನೇಶ್ ಗುಂಡೂರಾವ್

    ಇನ್ನೂ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣದಲ್ಲಿ 14 ನಂದಿನಿ ಪಾರ್ಲರ್‌ಗಳನ್ನ ಈಗಾಗಲೇ ಕ್ಲೋಸ್ ಮಾಡಲಾಗಿದೆ. ಕೆಲವು ಪಾರ್ಲರ್‌ಗಳನ್ನ ಜನರಲ್ ಸ್ಟೋರ್‌ಗಳಾಗಿ ಬದಲಾಯಿಸಿ ನಂದಿನಿ ಹೆಸರಿನ ಮೇಲೆಯೇ ಜನರಲ್ ಸ್ಟೋರ್ ಅನ್ನೋ ಬೋರ್ಡಗಳನ್ನ ಹಾಕಲಾಗಿದೆ. ಬಿಎಂಟಿಸಿಯ ಈ ನಡೆ ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಸಚಿವರು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಕುಡುಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?

  • ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

    ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

    ಬೆಂಗಳೂರು: ಸರ್ಕಾರದ ಶಕ್ತಿ ಯೋಜನೆಗೆ (Shakti Scheme) ಮಹಿಳಾ ಮಣಿಗಳು ಬಹುಪರಾಕ್ ಎಂದಿದ್ದು, ಭರ್ಜರಿಯಾಗಿ ಯಶಸ್ವಿಯಾಗಿದೆ. ಶಕ್ತಿ ಯೋಜನೆ ಈಗ ಸಾರಿಗೆ ಇಲಾಖೆಗೆ (Transport Department) ಕೈಸುಡುತ್ತಿದ್ದು ಮೀಸಲಿಟ್ಟ ದುಡ್ಡು ಸಿಕ್ಕಾಪಟ್ಟೆ ಹೈಸ್ಪೀಡ್‌ನಲ್ಲಿ ಖರ್ಚಾಗುತ್ತಿದೆ.

    ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ ಈಗಾಗಲೇ ಐದು ತಿಂಗಳು ಕಳೆದಿವೆ. ಜೂನ್ 11ರಿಂದ ಈ ಯೋಜನೆ ಜಾರಿಯಾಗಿದ್ದು, ಸುಮಾರು 90 ಕೋಟಿಗೂ ಹೆಚ್ಚು ನಾರಿಯರು ಉಚಿತವಾಗಿ ರಾಜ್ಯದಲ್ಲಿ ಪ್ರಯಾಣಿಸಿದ್ದಾರೆ.  ಇದನ್ನೂ ಓದಿ: ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    ಸಿಎಂ ಸಿದ್ದರಾಮಯ್ಯನವರು (CM Siddaramaiah) ಶಕ್ತಿ ಯೋಜನೆಗೆ ಎಂದು ತಮ್ಮ ಬಜೆಟ್‌ನಲ್ಲಿ 9 ತಿಂಗಳಿಗೆ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಆದರೆ ಈ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ ಈ ಹಣ ಖಾಲಿಯಾಗುತ್ತಾ ಬಂದಿದೆ.

    ಸರ್ಕಾರದ ಅಂದಾಜು ಎಷ್ಟಿತ್ತು?
    1 ತಿಂಗಳಿಗೆ ಸರ್ಕಾರದ 311 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಿತ್ತು. ಆದರೆ 5 ತಿಂಗಳಿಗೆ (ನವೆಂಬರ್ 12ರವರೆಗೆ) 2,246 ಕೋಟಿ ರೂ. ಖರ್ಚಾಗಿದೆ.

    ಉಳಿದ 4 ತಿಂಗಳಿಗೆ ಸರ್ಕಾರದ ಈ ಹಿಂದೆ ನಿಗದಿ ಮಾಡಿದ ಲೆಕ್ಕಾಚಾರದಂತೆ 1,244 ಕೋಟಿ ರೂ. ಹಣ ಬೇಕಾಗುತ್ತದೆ. ಈ ಲೆಕ್ಕ ಪರಿಗಣಿಸಿದರೆ ಒಟ್ಟು 690 ಕೋಟಿ ರೂ. ಹಣ ಕೊರತೆಯಾಗುವ ಸಾಧ್ಯತೆಯಿದೆ. ಪ್ರತಿನಿತ್ಯ 40 ಲಕ್ಷದಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳು ಇರುವುದರಿಂದ ಶಕ್ತಿ ಯೋಜನೆಗೆ ಎಷ್ಟು ಖರ್ಚಾಗಬಹುದು ಎಂಬ ಕುತೂಹಲ ಈಗ ಹೆಚ್ಚಾಗಿದೆ.

     

    ಶಕ್ತಿ ಯೋಜನೆಯ ಮೀಸಲಿಟ್ಟ ಹಣ ಖರ್ಚಾಗುತ್ತಿರುವುದಕ್ಕೆ ಪಬ್ಲಿಕ್ ಟಿವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ ಡಿಸೆಂಬರ್‌ನಲ್ಲಿ ಉಳಿದ ಹಣವನ್ನು ಸರ್ಕಾರ ಕೊಡಲಿದೆ. ಇನ್ನೂ 1 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

    ಶಕ್ತಿ ಯೋಜನೆ ಜಾರಿಯಾದ ಕೆಲ ತಿಂಗಳುಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದ್ದು, ದಿನದಿಂದ ದಿನಕ್ಕೆ ಶಕ್ತಿ ಯೋಜನೆಗೆ ಭರ್ಜರಿ ಯಶಸ್ಸು ಕಂಡುಬರುತ್ತಿದೆ. ಹೀಗಾಗಿ ಸರ್ಕಾರದ ಲೆಕ್ಕಾಚಾರ ಮೀರಿ ಹಣ ಖರ್ಚಾಗುತ್ತಿದೆ.

     

  • ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಿರೋ ಹೆಣ್ಣುಮಕ್ಕಳಿಗೆ ಒಳ್ಳೆಯದಾಗಲಿ: ಸಿದ್ದರಾಮಯ್ಯ

    ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಿರೋ ಹೆಣ್ಣುಮಕ್ಕಳಿಗೆ ಒಳ್ಳೆಯದಾಗಲಿ: ಸಿದ್ದರಾಮಯ್ಯ

    ಬೆಂಗಳೂರು: ಶಕ್ತಿ ಯೋಜನೆ (Shakti Seheme) ಅಡಿ 88 ಕೋಟಿ ಹೆಣ್ಣುಮಕ್ಕಳು ಓಡಾಡಿದ್ದಾರೆ. ಶಕ್ತಿ ಯೋಜನೆ ಮಾಡಿದ ಮೇಲೆ ಧರ್ಮಸ್ಥಳಕ್ಕೆ ಬರೋರು ಜಾಸ್ತಿ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಾರೆ ಅಂತ ಹೇಳಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ನುಡಿದಿದ್ದಾರೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಿದರು.

    ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಸಂಘಟಿತ ಕಡ್ಟಟ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಬೇಕು ಅಂತ 226 ಕೋಟಿ ರೂ. ಧನಸಹಾಯ ಮಾಡ್ತಿದ್ದೇವೆ. 9.60 ಲಕ್ಷ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದ್ದೇವೆ. ರಾಜ್ಯದಲ್ಲಿ 83% ಅಸಂಘಟಿತ ಕಾರ್ಮಿಕರು ಇದ್ದಾರೆ. ಕೃಷಿ ಇಲಾಖೆ ಬಿಟ್ಟರೆ ಕಾರ್ಮಿಕರೇ ಹೆಚ್ಚು ಈ ದೇಶದಲ್ಲಿ ಇರೋದು. ಯಾವುದೇ ರಾಷ್ಟ್ರದ ಶಕ್ತಿ ಕಾರ್ಮಿಕರು ಅಂತ ಅಂಬೇಡ್ಕರ್ ಹೇಳಿದ್ದರು ಎಂದು ನುಡಿದರು.

    ದೇಶದಲ್ಲಿ ಸಂಪತ್ತು ಉತ್ಪಾದನೆ ಮಾಡೋದು ಕಾರ್ಮಿಕರು. ಅದನ್ನು ಅನುಭವಿಸೋರು ಉಳ್ಳವರು. ಬಸವಣ್ಣ ಕಾಯಕ ಮತ್ತು ದಾಸೋಹ ಅಂತ ಹೇಳಿದ್ದರು. ಎಲ್ಲರು ಉತ್ಪನ್ನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ಪಾದನೆ ಅದುದ್ದನ್ನು ಹಂಚಿಕೆ ಮಾಡಿಬೇಕು ಅಂತ ಹೇಳಿದ್ರು. ಬಡತನ, ನಿರುದ್ಯೋಗ, ಅನಕ್ಷರತೆ ಇದು ಸಾಧ್ಯವಿಲ್ಲ. ಇದನ್ನೇ ಸಂವಿಧಾನದಲ್ಲಿ ಹೇಳಿರೋದು. ಸಮಾನತೆ ಪಾಲು ಎಲ್ಲರಿಗೂ ಸಿಗಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ ಎಂದರು.

    ಸಂವಿಧಾನ ಗೊತ್ತಿಲ್ಲದೆ ಹೋದರೆ ದೇಶದ ಇತಿಹಾಸ ಗೊತ್ತಿರೋದಿಲ್ಲ. ಯಾರಿಗೆ ಇತಿಹಾಸ ಗೊತ್ತಿರುತ್ತೆ ಅವರು ಇತಿಹಾಸ ನಿರ್ಮಿಸುತ್ತಾರೆ ಅಂತ ಅಂಬೇಡ್ಕರ್ ಹೇಳಿದ್ರು. ಸಮ ಸಮಾಜ ಹೇಳೋದ್ರಿಂದ ಮಾತ್ರ ನಿರ್ಮಾಣ ಆಗಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಬೇಕು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಇದರಿಂದ ಶೂದ್ರ ವರ್ಗ ಮತ್ತು ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾದರು. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ನೋಡ್ತಿದ್ದೇವೆ. ಈ ಅಸಮಾನತೆ ಹೋಗಲಾಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

    ಅಸಮಾಧಾನ ಹೋಗಲಾಡಿಸದೇ ಹೋದರೆ ಪ್ರಜಾಪ್ರಭುತ್ವ ಸೌಧವನ್ನು ಧ್ವಂಸ ಮಾಡ್ತಾರೆ ಅಂತ ಅಂಬೇಡ್ಕರ್ ಹೇಳಿದ್ದರು. ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಕೊಡ್ತಿರೋದು ಅವರು ಮುಖ್ಯ ವಾಹಿನಿಗೆ ಬರಬೇಕು ಅಂತ. ನಮ್ಮಲ್ಲಿ ಅನೇಕ ಜಾತಿ, ಭಾಷೆ, ವ್ಯವಸ್ಥೆ ಇದೆ. ಎಲ್ಲರು ಬೆಳವಣಿಗೆ ಆದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡೋಕೆ ಸಾಧ್ಯ. ಕೆಲವರಿಗೆ ಮಾತ್ರ ಪ್ರೊತ್ಸಾಹ ಮಾಡಿದ್ರೆ ಎಲ್ಲರ ಬೆಳವಣಿಗೆ ಆಗಲ್ಲ. ಧರ್ಮ ಮತ್ತು ಜಾತಿ ಹೆಸರಲ್ಲಿ ಸಮಾಜ ಒಡೆಯುವವರ ಬಗ್ಗೆ ಎಚ್ಚರವಾಗಿ ಇರಬೇಕು. ಅಂತಹವರನ್ನು ವಿರೋಧಿಸೋ ಕೆಲಸ ಮುಲಾಜಿಲ್ಲದೆ ಮಾಡಬೇಕು. ಸಂವಿಧಾನ ವಿರೋಧ ಮಾಡೋರು ಈ ದೇಶದಲ್ಲಿ ಇದ್ದಾರೆ. ಸಂವಿಧಾನ ವಿರೋಧ ಮಾಡೋರು ಸಾಮಾಜಿಕ ನ್ಯಾಯದ ವಿರೋಧಿಗಳು. ಅವರನ್ನು ನಾವು ಪಟ್ಟಭದ್ರ ಹಿತಾಸಕ್ತಿಗಳು ಅಂತಾರೆ. ಅವರಿಂದ ಎಚ್ಚರಿಕೆಯಿಂದ ಇರಬೇಕು. ನಮ್ಮ ಸರ್ಕಾರ ಸಮ ಸಮಾಜದ ಆಧಾರದಲ್ಲಿ ಸರ್ಕಾರ ಮಾಡ್ತಿದೆ ಎಂದರು.

    ನಮ್ಮ ಸರ್ಕಾರ 5 ಗ್ಯಾರಂಟಿ ಕೊಡ್ತಿದೆ. ಯಾವುದೇ ಜಾತಿ, ಧರ್ಮ ಇಲ್ಲದೆ ಜಾರಿ ಮಾಡಿದ್ದೇವೆ. ಜಾತಿ, ಧರ್ಮ ನೋಡದೇ ಬಡವರಿಗೆ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಅಡಿ 1 ಕೋಟಿ 07 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಕೊಡ್ತಿದ್ದೇವೆ. ಕೆಲವರಿಗೆ ಇನ್ನು ಸಿಕ್ಕಿಲ್ಲ. ಅದಕ್ಕೆ ಟೆಕ್ನಿಕಲ್ ಕಾರಣ ಇದೆ. ಶಕ್ತಿ ಯೋಜನೆ ಅಡಿ 88 ಕೋಟಿ ಹೆಣ್ಣು ಮಕ್ಕಳು ಓಡಾಡಿದ್ದಾರೆ. ಶಕ್ತಿ ಯೋಜನೆ ಮಾಡಿದ ಮೇಲೆ ಧರ್ಮಸ್ಥಳಕ್ಕೆ ಬರೋರು ಜಾಸ್ತಿ ಆಗಿದ್ದಾರೆ ಅಂತ ವೀರೇಂದ್ರ ಹೆಗ್ಗಡೆ ಹೇಳಿದ್ರು. ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಾರೆ ಅಂತ ಹೇಳಿದ್ರು. ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ನುಡಿದಿದ್ದಾರೆ. ಇದನ್ನೂ ಓದಿ: ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ಹೇಳಿತ್ತು: ಸದಾನಂದಗೌಡ ನಿವೃತ್ತಿ ಘೋಷಣೆಗೆ ಬಿಎಸ್‌ವೈ ಪ್ರತಿಕ್ರಿಯೆ

  • ಬಸ್‌ನಲ್ಲಿ ಸೀಟ್ ವಿಚಾರಕ್ಕೆ ವೃದ್ಧ ಪ್ರಯಾಣಿಕನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ

    ಬಸ್‌ನಲ್ಲಿ ಸೀಟ್ ವಿಚಾರಕ್ಕೆ ವೃದ್ಧ ಪ್ರಯಾಣಿಕನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ

    ಯಾದಗಿರಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti Seheme) ಜಾರಿಗೆ ತಂದಿದೆ. ಶಕ್ತಿಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ರಾಜ್ಯದ ಅಲ್ಲಲ್ಲಿ ಸೃಷ್ಟಿಯಾಗಿವೆ. ಯಾದಗಿರಿ (Yadagiri) ಜಿಲ್ಲೆಯಲ್ಲಿ ಅಂತದ್ದೇ ಅವಾಂತರ ಸೃಷ್ಟಿಯಾಗಿದ್ದು, ಬಸ್‌ನಲ್ಲಿ ಸೀಟ್‌ಗಾಗಿ ವಯೋವೃದ್ಧನ ಮೇಲೆ ನಾಲ್ವರು ಮಹಿಳೆಯರು ಮನಸೋ ಇಚ್ಛೆ ಥಳಿಸಿರುವ ಆರೋಪ ಕೇಳಿ ಬಂದಿದೆ.

    ಯಾದಗಿರಿಯಿಂದ ಸೇಡಂಗೆ ಹೊರಟ್ಟಿದ್ದ ಬಸ್‌ನಲ್ಲಿ ಘಟನೆ ನಡೆದಿದೆ. ಬಸ್‌ನಲ್ಲಿ ಕುಳಿತಿದ್ದ ವೃದ್ಧನಿಗೆ ಬಸ್ ಏರಿದ ನಾಲ್ವರು ಮಹಿಳೆಯರು ಸೀಟ್ ಬಿಡುವಂತೆ ಕೇಳಿದ್ದಾರೆ. ಆಗ ಮುಂದಿನ ಸೀಟ್‌ಗಳು ಖಾಲಿ ಇವೆ, ಅಲ್ಲಿ ಕುಳಿತುಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೆ ನಾಲ್ವರು ಮಹಿಳೆಯರು ವಯೋವೃದ್ಧನ ಮೇಲೆ ಮುಗಿಬಿದ್ದು, ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಸುಗಳ ಮಾಂಸ ಬಳಕೆ ಆರೋಪ- ಸಾಕುಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ

    ಘಟನೆ ಬಗ್ಗೆ ಇತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು, ವೃದ್ಧನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ವಿಚಾರಣೆಗೆಂದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಕ್ತಿ ಯೋಜನೆ ಎಫೆಕ್ಟ್ – ಬಸ್‌ನಿಂದ ಬಿದ್ದು ಮಹಿಳೆಗೆ ಗಾಯ

    ಶಕ್ತಿ ಯೋಜನೆ ಎಫೆಕ್ಟ್ – ಬಸ್‌ನಿಂದ ಬಿದ್ದು ಮಹಿಳೆಗೆ ಗಾಯ

    ಗದಗ: ಶಕ್ತಿ ಯೋಜನೆಯಿಂದ (Shakti Scheme) ಬಸ್ (Bus) ಫುಲ್ ರಶ್ ಆಗಿದ್ದು, ಹತ್ತುವ ವೇಳೆ ನೂಕುನುಗ್ಗಲಿನಿಂದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಶ್ರಾವಣ ಮಾಸದ ಕೊನೆಯ ವಾರದ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಬಸ್‌ಗಳೆಲ್ಲಾ ಫುಲ್ ರಶ್ ಆಗುತ್ತಿವೆ. ಈ ಸಂದರ್ಭದಲ್ಲಿ ಲಕ್ಷ್ಮೇಶ್ವರದಿಂದ ಗದಗ ಮಾರ್ಗವಾಗಿ ಯಲಬುರ್ಗಾ ತೆರಳುತ್ತಿದ್ದ ಮಹಿಳೆ ಹುಸೇನಬಿ ಅಲಿಸಾಬ್ ಬಳಿಗಾತಗೆ ಗಾಯವಾಗಿದೆ. ಇದನ್ನೂ ಓದಿ: ರೈಲು ಪ್ರಯಾಣದ ವೇಳೆ 8 ಯುವಕರಿಗೆ ಮತ್ತು ಬರೋ ಚಾಕ್ಲೇಟ್ ನೀಡಿ ದರೋಡೆ

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ನಿವಾಸಿ ಲಕ್ಷ್ಮೇಶ್ವರ ದೂದಪೀರ ನಾನ ದರ್ಗಾಗೆ ಬಂದಿದ್ದರು. ಬಸ್ ರಶ್ ಇದ್ದರೂ ಚಲಿಸುವ ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ. ಆದರೆ ಸ್ವಲ್ಪದರಲ್ಲೇ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗಾಯಾಳು ಮಹಿಳೆಯನ್ನು ಕೂಡಲೆ ಲಕ್ಷ್ಮೇಶ್ವರ ತಾಲೂಕಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಿಚ್ಛೇದಿತ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ – ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]