Tag: ಶಕ್ತಿಕಾಂತ ದಾಸ್

  • ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

    ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

    ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನೂತನ ಗವರ್ನರ್‌ ಆಗಿ ಕಂದಾಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ (Sanjay Malhotra) ಅವರನ್ನು ನೇಮಕ ಮಾಡಲಾಗಿದೆ.‌

    ಹಾಲಿ ಗರ್ವನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರ ಅಧಿಕಾರಾವಧಿ ಡಿ.10ರಂದು (ಮಂಗಳವಾರ) ಕೊನೆಗೊಳ್ಳಲಿದೆ. ಡಿಸೆಂಬರ್‌ 11ರಂದು ಬುಧವಾರ ರಿಸರ್ವ್‌ ಬ್ಯಾಂಕ್‌ನ ಮುಂದಿನ ಗವರ್ನರ್‌ ಆಗಿ ಮಲ್ಹೋತ್ರಾ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಅವರು ಕೇಂದ್ರೀಯ ಬ್ಯಾಂಕ್‌ ಅನ್ನು ಮುನ್ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

    2018ರ ಡಿ.12ರಂದು ಮಾಜಿ ಗವರ್ನರ್‌ ಊರ್ಜಿತ್ ಪಟೇಲ್ ಅವರ ಹಠಾತ್ ನಿರ್ಗಮನದ ನಂತರ, RBIನ 25ನೇ ಗವರ್ನರ್ ಆಗಿ ಶಕ್ತಿಕಾಂತ ದಾಸ್‌ ನೇಮಕಗೊಂಡಿದ್ದರು. ಮೂರು ವರ್ಷ ಅಧಿಕಾರ ಪೂರ್ಣಗೊಳಿಸಿದ ಬಳಿಕ 2ನೇ ಅವಧಿಗೂ ಅವರನ್ನ ಮುಂದುವರಿಸಲಾಗಿತ್ತು.

    ಸಂಜಯ್‌ ಮಲ್ಹೋತ್ರಾ ಅವರು 1990ರ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್‌ಇಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅಲ್ಲದೇ ತೆರಿಗೆ ಸಂಗ್ರಹ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಜೆಟ್‌ ವಿಚಾರದಲ್ಲಿ ತೆರಿಗೆ ಸಂಬಂಧಿತ ಪ್ರಸ್ತಾವನೆಗಳನ್ನು ಅವರು ಪರಿಶೀಲಿಸುತ್ತಿದ್ದರು. ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿ ಹಾಗೂ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ನಿರೀಕ್ಷೆಗಳ ವಿಚಾರಗಳಂಥ ಕ್ಲಿಷ್ಟ ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿದ್ದರು.

    ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಮಲ್ಹೋತ್ರಾ ಅವರು ಯುಎಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    33 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ವಿದ್ಯುತ್‌, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹಣಕಾಸು ಮತ್ತು ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆರ್‌ಬಿಐ ಗವರ್ನರ್‌ ಆಗಿ ನೇಮಕಗೊಳ್ಳುವುದಕ್ಕೂ ಮುನ್ನ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಂದಾಯ ಕಾರ್ಯದರ್ಶಿಯಾಗಿದ್ದರು.

  • RBI ಬಡ್ಡಿ ದರ ಇಳಿಕೆ ಇಲ್ಲ – ಸತತ 10ನೇ ಬಾರಿಗೆ ಯಥಾಸ್ಥಿತಿ ಮುಂದುವರಿಕೆ

    RBI ಬಡ್ಡಿ ದರ ಇಳಿಕೆ ಇಲ್ಲ – ಸತತ 10ನೇ ಬಾರಿಗೆ ಯಥಾಸ್ಥಿತಿ ಮುಂದುವರಿಕೆ

    ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಸತತ 10ನೇ ಬಾರಿಗೆ ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲೇ ಮುಂದುವರಿಸಿದೆ.

    ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ನೇತೃತ್ವದಲ್ಲಿ ಬುಧವಾರ (ಅ.9) 6 ಸದಸ್ಯರ ಹಣಕಾಸು ನೀತಿ ಸಮಿತಿ (MPC) ಸಭೆ ನಡೆಸಿತು. ಈ ಪೈಕಿ ಮೂವರು ಹೊಸ ಸದಸ್ಯರನ್ನು ಎಂಪಿಸಿಗೆ ಸೇರ್ಪಡೆಗೊಳಿಸಲಾಯಿತು. ದೆಹಲಿ ವಿವಿಯ (Dehli University) ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಪ್ರೊಫೆಸರ್ ರಾಮ್ ಸಿಂಗ್, ಅರ್ಥಶಾಸ್ತ್ರಜ್ಷ ಸೌಗತ ಭಟ್ಟಾಚಾರ್ಯ, ಕೈಗಾರಿಕಾ ಅಭಿವೃದ್ಧಿಯ ಅಧ್ಯಯನಗಳ ಸಂಸ್ಥೆಯ ಸಿಇಒ ಡಾ.ನಾಗೇಶ್ ಕುಮಾರ್ ನೂತನ ಸದಸ್ಯರು. ಇದನ್ನೂ ಓದಿ: Haryana Assembly Elections: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ಗೆ ಗೆಲುವು

    ಸಭೆಯ ಬಳಿಕ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಶಕ್ತಿಕಾಂತ ದಾಸ್‌, 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 7.2% ರಷ್ಟಾಗುವ ಮುನ್ಸೂಚನೆ ಇದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ತರದೇ 6.5% ನಲ್ಲೇ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ ಪೈಕಿ 5:1 ರಷ್ಟು ಸದಸ್ಯರು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು ಎಂದು ತಿಳಿಸಿದರು.

    ಕಳೆದ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲೂ ಆರ್‌ಬಿಐ ಇದೇ ದರವನ್ನು ಕಾಯ್ದುಕೊಂಡಿತ್ತು. ಕೊನೆಯದ್ದಾಗಿ 2023ರ ಫೆಬ್ರವರಿ 8ರಂದು ನಡೆದ ಸಭೆಯಲ್ಲಿ ಆರ್‌ಬಿಐ ರೆಪೋ ದರ ಏರಿಕೆ ಮಾಡಿತ್ತು. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ

    ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಆರ್‌ಬಿಐ ಬಡ್ಡಿ ದರವನ್ನು ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಸ್ರೇಲ್‌-ಇರಾನ್‌ ನಡುವೆ ಯುದ್ಧ ಭೀತಿಯಿಂದಾಗಿ ಬಡ್ಡಿದರವನ್ನು ಇಳಿಸದ ಆರ್‌ಬಿಐ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ. ಇದನ್ನೂ ಓದಿ: ಭೂಪಿಂದರ್‌ ಹೂಡಾಗೆ ಮಣೆ ಹಾಕಿ ಕೈ ಸುಟ್ಟುಕೊಂಡ ಕಾಂಗ್ರೆಸ್!‌

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

  • ಇನ್ನು ಮುಂದೆ UPI Lite ನಲ್ಲಿ ಪಿನ್‌ ಹಾಕದೇ 500 ರೂ. ಸೆಂಡ್‌ ಮಾಡಿ – ರೆಪೋ ದರದಲ್ಲಿ ಇಲ್ಲ ಬದಲಾವಣೆ

    ಇನ್ನು ಮುಂದೆ UPI Lite ನಲ್ಲಿ ಪಿನ್‌ ಹಾಕದೇ 500 ರೂ. ಸೆಂಡ್‌ ಮಾಡಿ – ರೆಪೋ ದರದಲ್ಲಿ ಇಲ್ಲ ಬದಲಾವಣೆ

    ನವದೆಹಲಿ: ಯುಪಿಐ ಲೈಟ್ (UPI Lite) ವಹಿವಾಟು ಮಿತಿಯನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) 200 ರೂ.ನಿಂದ 500 ರೂ.ಗೆ ಏರಿಸಿದೆ. ಇದರಿಂದಾಗಿ ಇನ್ನು ಮುಂದೆ ಗ್ರಾಹಕರು ಯುಪಿಐ ಲೈಟ್‌ ಅಪ್ಲಿಕೇಶನ್‌ನಲ್ಲಿ ಪಿನ್‌ ಹಾಕದೇ  500 ರೂ. ಕಳುಹಿಸಬಹುದಾಗಿದೆ.

    ಹಣಕಾಸು ನೀತಿ ಸಮಿತಿಯು (MPC) ಸಭೆ ನಡೆಸಿದ ಬಳಿಕ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (RBI Governor Shaktikanta Das) ಸುದ್ದಿಗೋಷ್ಠಿ ನಡೆಸಿದರು. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಮತ್ತು ಯುಪಿಐ ಲೈಟ್ ಸೇರಿದಂತೆ ಆಫ್‌ಲೈನ್ ಮೋಡ್‌ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳಿಗಾಗಿ ಪ್ರತಿ ವಹಿವಾಟಿಗೆ 200 ರೂ. ಮತ್ತು ದಿನದ ವಹಿವಾಟಿಗೆ 2,000 ರೂ. ಮಿತಿ ಹೇರಲಾಗಿತ್ತು. ಜನರಿಂದ ಮನವಿ ಬಂದಿರುವ ಹಿನ್ನಲೆ ಪ್ರತಿ ವಹಿವಾಟಿನ ಮೌಲ್ಯವನ್ನು 200 ರೂ. ನಿಂದ 500 ರೂ.ಗೆ ಏರಿಸಲಾಗಿದೆ ಎಂದರು.

    ಬಳಕೆದಾರರಿಗೆ ಡಿಜಿಟಲ್ ಪಾವತಿಯ ಅನುಭವವನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ. ಯುಪಿಐನಲ್ಲಿ ಸಂಭಾಷಣಾ ಪಾವತಿಗಳನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇರಲಿದ್ದು ಬಳಿಕ ಭಾರತದ ಎಲ್ಲ ಭಾಷೆಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇದು ಬಳಕೆದಾರರಿಗೆ ಪಾವತಿಗಳನ್ನು ಮಾಡಲು ಮತ್ತು ಆಫ್‌ಲೈನ್ ಅನ್ನು ಪರಿಚಯಿಸಲು AI- ಚಾಲಿತ ವ್ಯವಸ್ಥೆಗಳೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ CJI ಹೊರಗೆ – ರಾಜ್ಯಸಭೆಯಲ್ಲಿ ಮಸೂದೆ ಮಂಡನೆ

    ಯುಪಿಐ ಲೈಟ್‌ ಮೂಲಕ NFC ತಂತ್ರಜ್ಞಾನವನ್ನು ಬಳಸಿಕೊಂಡು ಆಫ್‌ಲೈನ್‌ ಪಾವತಿ ಪರಿಚಯಿಸಲು ಆರ್‌ಬಿಐ ಸಿದ್ಧವಾಗಿದೆ. ಈ ವೈಶಿಷ್ಟ್ಯವು ಸೀಮಿತ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡಬಹುದು ಎಂದರು.

    ರೆಪೋ ದರವನ್ನು (Repo Rate) 6.50% ರಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಆರ್‌ಬಿಐ ಕೈಗೊಂಡಿದೆ. ಮೂರು ದಿನ ಚರ್ಚೆ ನಡೆಸಿದ ಎಂಪಿಸಿ ಸದಸ್ಯರು ರೆಪೋ ದರದಲ್ಲಿ ಬದಲಾವಣೆ ಮಾಡದಿರಲು ಸರ್ವಾನುಮತದಿಂದ ಒಪ್ಪಿದ್ದಾರೆ. 2024ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ 6.5% ರಷ್ಟು ಇರಲಿದೆ ಎಂದು ಎಂಪಿಸಿ ಅಂದಾಜಿಸಿರುವುದಾಗಿಯೂ ಅವರು ತಿಳಿಸಿದ್ದಾರೆ

    ಯುಪಿಐ ಪಾವತಿ ವ್ಯವಸ್ಥೆಯ ಸರಳೀಕೃತ ಆವೃತ್ತಿಯಾದ ಯುಪಿಐ ಲೈಟ್‌ ಅನ್ನು ಸೆಪ್ಟೆಂಬರ್ 2022 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಆರ್‌ಬಿಐ ಪರಿಚಯಿಸಿತ್ತು.

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ಇದನ್ನೂ ಓದಿ: ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

    UPI-Lite ಮತ್ತು UPI ನಡುವಿನ ವ್ಯತ್ಯಾಸವೇನು?
    ಯುಪಿಐ ಮೂಲಕ ಹೆಚ್ಚಿನ ಮೌಲ್ಯದ ಹಾಗೂ ಕಡಿಮೆ ಮೌಲ್ಯದ ವಹಿವಾಟುಗಳನ್ನು ನಿರ್ವಹಿಸಲು ಬಳಸಬಹುದು. UPI-ಲೈಟ್ ನಲ್ಲಿ ನಿರ್ದಿಷ್ಟವಾಗಿ ಕಡಿಮೆ ಮೌಲ್ಯದ ವಹಿವಾಟುಗಳನ್ನು ಮಾತ್ರ ಮಾಡಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    – ಮಾರುಕಟ್ಟೆಯಲ್ಲಿದ್ದ 50% ರಷ್ಟು 2,000ದ ನೋಟುಗಳು ವಾಪಸ್

    ನವದೆಹಲಿ: 500 ರೂ. ನೋಟುಗಳನ್ನು (Rs. 500 Note) ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಅಥವಾ 1,000 ರೂ. ನೋಟುಗಳನ್ನು (Rs. 1,000 Note) ಮರು ಪರಿಚಯಿಸುವ ಯಾವುದೇ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಗುರುವಾರ ಹೇಳಿದ್ದಾರೆ.

    ಆರ್ಥಿಕ ವರ್ಷ 2024 ರ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಬಿಐ 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ, ಊಹಾಪೋಹ ಮಾಡದಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

    2,000 ನೋಟುಗಳನ್ನು (Rs. 2,000 Note) ಚಲಾವಣೆಯಿಂದ ಹಿಂದೆ ಪಡೆದ ಬಳಿಕ ಮಾರುಕಟ್ಟೆಯಲ್ಲಿದ್ದ 3.62 ಲಕ್ಷ ಕೋಟಿ ರೂ. ಪೈಕಿ 1.82 ಲಕ್ಷ ಕೋಟಿ ರೂ. ಬ್ಯಾಂಕುಗಳಿಗೆ ಮರಳಿದೆ. ಇದರ ಪ್ರಮಾಣ 50% ರಷ್ಟಾಗಿದೆ. ಬ್ಯಾಂಕುಗಳಿಗೆ ಬಂದ ಹಣದ ಪೈಕಿ 85% ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳಾಗಿ ಹಿಂತಿರುಗಿದರೆ, ಉಳಿದ ಪ್ರಮಾಣದ ಹಣ ನೋಟು ವಿನಿಮಯಕ್ಕಾಗಿ ಬಂದಿವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ

    ಆರ್‌ಬಿಐ ಮೇ 19 ರಂದು ತನ್ನ ಅತ್ಯಧಿಕ ಮೌಲ್ಯದ 2,000 ರೂ. ಕರೆನ್ಸಿ ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಆದರೆ ಜನರು ಸೆಪ್ಟೆಂಬರ್ 30 ರವರೆಗೆ ದಿನಕ್ಕೆ 20,000 ರೂ.ವರೆಗೆ ಠೇವಣಿ ಅಥಾವ ವಿನಿಮಯ ಮಾಡುವ ಮೂಲಕ ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

  • 2023ರ ಆರ್ಥಿಕ ವರ್ಷದಲ್ಲಿ GDP ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗಲಿದೆ – RBI ಗವರ್ನರ್‌

    2023ರ ಆರ್ಥಿಕ ವರ್ಷದಲ್ಲಿ GDP ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗಲಿದೆ – RBI ಗವರ್ನರ್‌

    ನವದೆಹಲಿ: 2023ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ (GDP) ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರ್‌ಬಿಐ (RBI) ಗವರ್ನರ್‌ ಶಕ್ತಿಕಾಂತ ದಾಸ್ (Shaktikanta Das) ಹೇಳಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕಳೆದ ಹಣಕಾಸು ವರ್ಷದ 3 ಮತ್ತು 4ನೇ ತ್ರೈಮಾಸಿಕದಲ್ಲಿ ಆರ್ಥಿಕ ವೇಗ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ 2022-23ರ ಬೆಳವಣಿಗೆಯು 7 ಶೇಕಡಕ್ಕಿಂತ ಹೆಚ್ಚಾಗಿರುತ್ತದೆ. ಇದರಿಂದ ಅಚ್ಚರಿ ಪಡಬೇಕಾದುದ್ದಿಲ್ಲ. 2022-23 ರ ತಾತ್ಕಾಲಿಕ ವಾರ್ಷಿಕ ಅಂದಾಜುಗಳನ್ನು ಪ್ರಸಕ್ತ ವರ್ಷದ ಮೇ 31ರಂದು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

    ವಾಸ್ತವವಾಗಿ ಆರ್‌ಬಿಐ ಮೇಲ್ವಿಚಾರಣೆ ಮಾಡಿದಾಗ ಎಲ್ಲಾ ಹೆಚ್ಚಿನ ಆವರ್ತನ ಸೂಚಕಗಳಲ್ಲಿ, 4ನೇ ತ್ರೈಮಾಸಿಕದಲ್ಲಿ ಆರ್ಥಿಕ ವೇಗ ಕಾಯ್ದುಕೊಂಡಿರುವುದು ಗಮನಕ್ಕೆ ಬಂದಿದೆ. ಪ್ರಸಕ್ತ ವರ್ಷದಲ್ಲೇ ಆರ್‌ಬಿಐ ಶೇ.6.5ರಷ್ಟು ಪ್ರಗತಿ ದರ ನಿರೀಕ್ಷಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ಹಣದುಬ್ಬರ, ಬ್ಯಾಂಕಿಂಗ್‌ ಒತ್ತಡಗಳು ಹಾಗೂ ಜಾಗತಿಕ ಅನಿಶ್ಚಿತತೆಯ ನಡುವೆ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯು ಸ್ಥಿರವಾಗಿದೆ. ಉತ್ತಮವಾದ ಬಂಡವಾಳ ಹೂಡಿಕೆ, ಆಸ್ತಿಯ ಗುಣಮಟ್ಟ ಹಾಗೂ‌ ಸುಧಾರಿತ ಲಾಭದಾಯಕತೆ ಇವೆಲ್ಲವೂ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದಿದ್ದಾರೆ.

    ಆರ್‌ಬಿಐ ಮೇ 2022ರಿಂದ ರೆಪೊ ದರವನ್ನ 250 ಬೇಸಿಸ್‌ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ವಿರಾಮ ನೀಡುವ ಸಾಧ್ಯತೆಗಳಿವೆ. ಆದ್ರೆ ಇದು ನನ್ನ ಕೈಯಲ್ಲಿ ಇಲ್ಲ. ಆರ್ಥಿಕ ಸ್ಥಿತಿಯನ್ನು ಅವಲಂಭಿಸಿರುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಹವಾಲಾ ಹಣದ ಮೇಲೆ ED, IT ನಿಗಾ – ಪೆಟ್ರೋಲ್ ಬಂಕ್ ಮೇಲೆ ಕಣ್ಣು

  • ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಪ್ರತಿಷ್ಠಿತ ವರ್ಷದ ಗವರ್ನರ್‌ ಪ್ರಶಸ್ತಿ

    ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಪ್ರತಿಷ್ಠಿತ ವರ್ಷದ ಗವರ್ನರ್‌ ಪ್ರಶಸ್ತಿ

    ನವದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (RBI) ಗವರ್ನರ್‌ ಶಕ್ತಿಕಾಂತ ದಾಸ್‌ (Governor Shaktikanta Das) ಅವರಿಗೆ ಪ್ರತಿಷ್ಠಿತ ʼವರ್ಷದ ಗವರ್ನರ್‌ʼ ಪ್ರಶಸ್ತಿ ಲಭಿಸಿದೆ.

    ಕೋವಿಡ್‌ 19 ಮತ್ತು ಉಕ್ರೇನ್‌- ರಷ್ಯಾ ನಡುವಿನ ಯುದ್ಧದಿಂದಾಗಿ ಸೃಷ್ಟಿಯಾದ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಕ್ಕೆ ಅಂತರರಾಷ್ಟ್ರೀಯ ಆರ್ಥಿಕ ಸಂಶೋಧನಾ ಜರ್ನಲ್‌ ಆಗಿರುವ ಸೆಂಟ್ರಲ್‌ ಬ್ಯಾಂಕಿಂಗ್‌ 2023ರ ವರ್ಷದ ಗವರ್ನರ್‌ ಪ್ರಶಸ್ತಿ (Governor of the Year Award) ನೀಡಿದೆ.

    ಕೋವಿಡ್‌ 19 (Covid 19) ಉಕ್ರೇನ್‌ ಯುದ್ಧದಿಂದಾಗಿ (Russia-Ukraine War ) ಸೃಷ್ಟಿಯಾದ ಹಣದುಬ್ಬರ ಮತ್ತು ಹಲವು ಸವಾಲಿನ ಮಧ್ಯೆಯೂ ಶಕ್ತಿಕಾಂತ್‌ ದಾಸ್‌ ಅವರ ಸ್ಥಿರ ನಾಯಕತ್ವವನ್ನು ಶ್ಲಾಘಿಸಲಾಗಿದೆ.

    ದಾಸ್ ಅವರ ನಾಯಕತ್ವದಲ್ಲಿ ಹಣದುಬ್ಬರ ನಿಯಂತ್ರಿಸಲು ಹಲವಾರು ಬಾರಿ ರೆಪೋ ದರಗಳನ್ನು ಹೆಚ್ಚಿಸುವ ಹಲವಾರು ನಿರ್ಣಾಯಕ ಸುಧಾರಣೆಗಳನ್ನು ಜಾರಿಗೆ ತಂದಿತು. ನವೀನ ಪಾವತಿ ವ್ಯವಸ್ಥೆಗಳನ್ನು ಪರಿಚಯಿಸಿತು. ತೀವ್ರವಾದ ರಾಜಕೀಯ ಒತ್ತಡ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ಆರ್‌ಬಿಐಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಪ್ರಕಟಣೆ ಮೆಚ್ಚುಗೆ ವ್ಯಕ್ತಪಡಿಸಿದೆ.

    ಸಾರ್ವಜನಿಕ ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಪರಿಣತಿ ಹೊಂದಿರುವ ಹಣಕಾಸು ಪ್ರಕಾಶಕವಾಗಿರುವ ಸೆಂಟ್ರಲ್‌ ಬ್ಯಾಂಕಿಂಗ್‌ ಕೇಂದ್ರೀಯ ಬ್ಯಾಂಕುಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲೆ ಅಧ್ಯಯನ ನಡೆಸುತ್ತದೆ.

    ಆರ್‌ಬಿಐ ಈ ಪ್ರಶಸ್ತಿಯನ್ನು ಎರಡನೇ ಬಾರಿ ಪಡೆದಿದೆ. ಈ ಹಿಂದೆ 2015ರಲ್ಲಿ ಅಂದಿನ ಗವರ್ನರ್‌ ರಘುರಾಮ್‌ ರಾಜನ್‌ ಪಡೆದಿದ್ದರು. ಇದನ್ನೂ ಓದಿ: ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ಶಕ್ತಿಕಾಂತ ದಾಸ್ ಅವರ ಅಧಿಕಾರ ಅವಧಿಯನ್ನು ಕೇಂದ್ರ ಸರ್ಕಾರ 2021ರ ಅಕ್ಟೋಬರ್‌ನಲ್ಲಿ ಮೂರು ವರ್ಷಗಳಿಗೆ ವಿಸ್ತರಿಸಿದ್ದು ಅವರು 2024ರ ಡಿಸೆಂಬರ್‌ವರೆಗೂ ಆರ್‌ಬಿಐ ಗವರ್ನರ್ ಆಗಿ ಮುಂದುವರಿಯಲಿದ್ದಾರೆ.

    ಊರ್ಜಿತ್ ಪಟೇಲ್ ಅವರ ರಾಜೀನಾಮೆ ನಂತರ, ದಾಸ್ ಅವರನ್ನು ಆರ್‌ಬಿಐನ 25ನೆಯ ಗವರ್ನರ್ ಆಗಿ 2018ರ ಡಿಸೆಂಬರ್ 11ರಂದು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಎರಡನೆಯ ಅವಧಿಗೆ ಗವರ್ನರ್ ಆಗಿ ನೇಮಕಗೊಂಡಿರುವ ಮೊದಲ ವ್ಯಕ್ತಿ ದಾಸ್. ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವಲ್ಲಿ ದಾಸ್ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು.

  • ಸತತ 5ನೇ ಬಾರಿ ರೆಪೋ ರೇಟ್‌ ಹೆಚ್ಚಳ – ಏರಿಕೆ ಮಾಡಿದ್ದು ಯಾಕೆ?

    ಸತತ 5ನೇ ಬಾರಿ ರೆಪೋ ರೇಟ್‌ ಹೆಚ್ಚಳ – ಏರಿಕೆ ಮಾಡಿದ್ದು ಯಾಕೆ?

    ನವದೆಹಲಿ: ಸತತ ಐದನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರೆಪೊ ದರವನ್ನು(Repo Rate) 35 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಹೆಚ್ಚಿಸಿದೆ. ಈ ನಿರ್ಧಾರದಿಂದ ರೆಪೋ ದರ ಶೇ. 6.25ಕ್ಕೆ ಏರಿಕೆಯಾದಂತಾಗಿದೆ.

    ಗವರ್ನರ್‌ ಶಕ್ತಿಕಾಂತ ದಾಸ್‌ (Governor Shaktikanta Das) ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (MPC) ಸಭೆ ನಡೆಸಿ ರೆಪೋ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ದರವು ಆಗಸ್ಟ್ 2018 ರಿಂದ ಅತ್ಯಧಿಕ ಮಟ್ಟದಾಗಿದೆ.

    ಇತ್ತೀಚಿನ ಏರಿಕೆಯೊಂದಿಗೆ, ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಆರ್‌ಬಿಐ ಈ ವರ್ಷ ಒಟ್ಟಾರೆಯಾಗಿ 225 ಬೇಸಿಸ್ ಪಾಯಿಂಟ್‌ ಏರಿಕೆ ಮಾಡಿದೆ.

    “ಜಾಗತಿಕ ಆರ್ಥಿಕತೆಯು ಇನ್ನೂ ಅನಿಶ್ಚಿತತೆಯಿಂದ ಕೂಡಿದೆ. ಐಎಂಎಫ್‌ ಪ್ರಕಾರ ಮೂರನೇ ಒಂದು ಭಾಗದಷ್ಟು ಆರ್ಥಿಕತೆಗಳು ಈ ವರ್ಷ ಅಥವಾ ಮುಂದಿನ ವರ್ಷ ಸಂಕುಚಿತಗೊಳ್ಳುತ್ತವೆ. ಹಣದುಬ್ಬರವು ಇತರ ದೇಶಗಳಲ್ಲಿ ಹೆಚ್ಚಾಗಿದ್ದರೂ ಭಾರತದಲ್ಲಿ ನಿಯಂತ್ರಣ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

    ಹಿಂದಿನ ಮೂರು ನೀತಿ ಪರಾಮರ್ಶೆಗಳಲ್ಲಿ ತಲಾ 50 ಬಿಪಿಎಸ್ ಹೆಚ್ಚಳವಾಗಿದ್ದರೆ ಮೇ ತಿಂಗಳಿನಲ್ಲಿ 40 ಬಿಪಿಎಸ್ ಏರಿಕೆಯಾಗಿತ್ತು. ಈ ಹೆಚ್ಚಳಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಳದ ಪ್ರಮಾಣ ಕಡಿಮೆಯಾಗಿದೆ. ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ.

    ಏರಿಕೆ ಮಾಡಿದ್ದು ಯಾಕೆ?
    ಕೋವಿಡ್‌ 19 ಮತ್ತು ರಷ್ಯಾ, ಉಕ್ರೇನ್‌ ನಡುವಿನ ಯುದ್ಧದ ಬಳಿಕ ವಿಶ್ವಾದ್ಯಂತ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹಣದುಬ್ಬರವನ್ನು ತಗ್ಗಿಸಲು ಆರ್‌ಬಿಐ ರೆಪೋ ದರವನ್ನು ಏರಿಸುತ್ತಾ ಬಂದಿದೆ. ಅಕ್ಟೋಬರ್‌ನಲ್ಲಿ ಹಣದುಬ್ಬರವು ಶೇ. 6.77ಕ್ಕೆ ಇಳಿದಿತ್ತು. ಇದು ಮೂರು ತಿಂಗಳ ಕನಿಷ್ಠ ಮಟ್ಟವಾಗಿತ್ತು. ಆರ್‌ಬಿಐ ಚಿಲ್ಲರೆ ಹಣದುಬ್ಬರ ಶೇ. 4ಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ.

    ಆರ್‌ಬಿಐ 2022ರ ಏಪ್ರಿಲ್‌ನಿಂದ ಇಲ್ಲಿಯವರೆಗೆ 225 ಬಿಪಿಎಸ್‌ ಏರಿಕೆ ಮಾಡಿದ್ದರೆ ಅಮೆರಿಕದ ಕೇಂದ್ರ ಬ್ಯಾಂಕ್‌ ಫೆಡರಲ್‌ ರಿಸರ್ವ್‌ 350 ಬಿಪಿಎಸ್‌ ಏರಿಕೆ ಮಾಡಿದೆ. ಇದನ್ನೂ ಓದಿ: ಆರ್ಥಿಕತೆಯಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಟಾಪ್ 10 ರಾಜ್ಯಗಳು – ಕರ್ನಾಟಕಕ್ಕೆ ಎರಡನೇ ಸ್ಥಾನ

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ

    ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶುಕ್ರವಾರ ತನ್ನ ರೆಪೊ ದರವನ್ನು ಶೇ.0.50 ಬೇಸಿಸ್‌ ಪಾಯಿಂಟ್‌  ಹೆಚ್ಚಿಸಿದೆ. ಈ ಮೂಲಕ ರೆಪೊ ದರ ಶೇ.5.40 ರಷ್ಟು ಹೆಚ್ಚಳವಾಗಿದೆ.

    ಏರುತ್ತಿರುವ ಹಣದುಬ್ಬರವನ್ನು ಸರಿಪಡಿಸಲು ಆರ್‌ಬಿಐ ಸತತ 3ನೇ ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಎಲ್ಲಾ 6 ಸದಸ್ಯರು ರೆಪೊ ದರ ಏರಿಕೆಗೆ ಒಮ್ಮತ ಸೂಚಿಸಿದ್ದಾರೆ. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    ರೆಪೊ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇದರಿಂದ ಗೃಹ, ವಾಹನ ಹಾಗೂ ಇರತ ಸಾಲಗಳ ಮೇಲಿನ ಬಡ್ಡಿ ದರ ಇನ್ನಷ್ಟು ಜಾಸ್ತಿಯಾಗಲಿದೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಆರ್‌ಬಿಐ ರೆಪೊ ದರವನ್ನು ಮೇ ತಿಂಗಳಿನಲ್ಲಿ ಶೇ.0.40 ರಷ್ಟು ಹಾಗೂ ಜೂನ್‌ನಲ್ಲಿ ಶೇ.0.50 ರಷ್ಟು ಹೆಚ್ಚಿಸಿತ್ತು. ಇದೀಗ ಸತತ 3ನೇ ಬಾರಿ ಹೆಚ್ಚಿಸಿದ್ದು, ಈ ದರ 2019ರಿಂದ ನಡೆದ ಮೊದಲ ಅತಿದೊಡ್ಡ ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಡಿಜಿಟಲ್ ರೂ.ಗೂ ಸಾಮಾನ್ಯ ರೂ.ಗೂ ವ್ಯತ್ಯಾಸವಿಲ್ಲ: ಶಕ್ತಿಕಾಂತ ದಾಸ್

    ಡಿಜಿಟಲ್ ರೂ.ಗೂ ಸಾಮಾನ್ಯ ರೂ.ಗೂ ವ್ಯತ್ಯಾಸವಿಲ್ಲ: ಶಕ್ತಿಕಾಂತ ದಾಸ್

    ನವದೆಹಲಿ: ಡಿಜಿಟಲ್ ರೂಪಾಯಿ ಹಾಗೂ ಸಾಮಾನ್ಯ ರೂಪಾಯಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಭಾರತೀಯ ರಸರ್ವ್ ಬ್ಯಾಂಕ್(ಆರ್‍ಬಿಐ) ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

    ಆರ್‍ಬಿಐ ಡಿಜಿಟಲ್ ರೂಪಾಯಿಯನ್ನು 2022-23ರಲ್ಲಿ ಬಿಡುಗಡೆ ಮಾಡಲಿದೆ. ಇದರ ನಿರ್ಧಿಷ್ಟ ಟೈಮ್‍ಲೈನ್ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಶಕ್ತಿಕಾಂತ ದಾಸ್ ಗುರುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌ ಮಧ್ಯಂತರ ಆದೇಶ

    2022-23ರ ಬಜೆಟ್ ಅನ್ನು ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದರು. ಈ ವೇಳೆ ಆರ್‍ಬಿಐ ಬ್ಲಾಕ್‍ಚೈನ್ ತಂತ್ರಜ್ಞಾನ ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ಶೀಘ್ರವೇ ತರಲಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮೋದಿಗೆ ನಾನು ಹೆದರೋಲ್ಲ, ಅವರ ಸೊಕ್ಕು ನೋಡಿ ನಗು ಬರುತ್ತೆ: ರಾಹುಲ್‌ ಗಾಂಧಿ

    ಬಜೆಟ್ ಮಂಡನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ರೂಪಾಯಿಯನ್ನು ನಗದು ರೂಪದಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು.