Tag: ಶಕೀಲಾ

  • ತಾಯಿಯಾಗ್ತಿದ್ದಾರೆ ‘ಶಕೀಲಾ’ ಚಿತ್ರದ ನಟಿ ರಿಚಾ ಚಡ್ಡಾ

    ತಾಯಿಯಾಗ್ತಿದ್ದಾರೆ ‘ಶಕೀಲಾ’ ಚಿತ್ರದ ನಟಿ ರಿಚಾ ಚಡ್ಡಾ

    ನ್ನಡ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಶಕೀಲಾ’ (Shakeela) ಸಿನಿಮಾದಲ್ಲಿ ನಟಿಸಿದ್ದ ರಿಚಾ ಚಡ್ಡಾ (Richa Chadha) ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ರಿವೀಲ್ ಮಾಡಿದ್ದಾರೆ.

    ‘1 + 1= 3’ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಚಾ ಚಡ್ಡಾ ಮತ್ತು ಅಲಿ ಫಜಲ್ ದಂಪತಿ ಪೋಷಕರಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ‘ಒಂದು ಚಿಕ್ಕ ಹಾರ್ಟ್‌ಬೀಟ್  ನಮ್ಮ ಜಗತ್ತಿನಲ್ಲಿ ಅತಿದೊಡ್ಡ ಶಬ್ದ’ ಎಂದು ಈ ಜೋಡಿ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿ ಪ್ರೆಗ್ನೆನ್ಸಿ ನ್ಯೂಸ್ ಹಂಚಿಕೊಂಡಿದೆ. ರಿಚಾ ದಂಪತಿಗೆ ಕನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ ಸೇರಿದಂತೆ ಅನೇಕರು ಶುಭಹಾರೈಸಿದ್ದಾರೆ.

     

    View this post on Instagram

     

    A post shared by ali fazal (@alifazal9)

    ಸೆಪ್ಟೆಂಬರ್ 23ರಂದು ರಿಚಾ ಮತ್ತು ಅಲಿ ಫಜಲ್ (Ali Fazal) ಅದ್ಧೂರಿಯಾಗಿ ಮದುವೆಯಾದರು. ಬಳಿಕ ಮುಂಬೈ, ದೆಹಲಿ ಮತ್ತು ಲಕ್ನೋದಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದರು. ಇದನ್ನೂ ಓದಿ:ಮಿಥುನ್ ಚಕ್ರವರ್ತಿಗೆ ಬ್ರೈನ್ ಸ್ಟ್ರೋಕ್- ಆರೋಗ್ಯ ಸ್ಥಿತಿ ಹೇಗಿದೆ?

    ಅಂದಹಾಗೆ, ಸಿನಿಮಾ ಸೆಟ್‌ವೊಂದರಲ್ಲಿ ರಿಚಾ ಮತ್ತು ಅಲಿ ಅವರಿಗೆ ಪರಿಚಯವಾಗಿ ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು. 10 ವರ್ಷಗಳ ಡೇಟಿಂಗ್ ನಂತರ 2022ರಲ್ಲಿ ಈ ಜೋಡಿ ಮದುವೆಯಾದರು.

  • Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    ಲ್ಲಾ ಭಾಷೆಯಲ್ಲೂ ದೊಡ್ಮನೆ ಆಟಕ್ಕೆ ತಯಾರಿ ನಡೆಯುತ್ತಿದೆ. ಬಿಗ್ ಬಾಸ್ ತೆಲುಗು ಸೀಸನ್ 7 (Bigg Boss Telugu 7) ಇದೇ ಸೆಪ್ಟೆಂಬರ್‌ನಿಂದ ಶೋ ಶುರುವಾಗಲಿದೆ. ಬಿಗ್ ಬಾಸ್ ಶೋಗಾಗಿ ಕಾದು ಕೂರುವ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ ಬಿಗ್ ಬಾಸ್ ಮನೆಗೆ ಮಲಯಾಳಂ ನಟಿ ಶಕೀಲಾ(Shakeela) ಕಾಲಿಡುತ್ತಿದ್ದಾರೆ.

    ನಾಗರ್ಜುನ ಅಕ್ಕಿನೇನಿ(Nagarjuna Akkineni) ನಿರೂಪಣೆಯ ಬಿಗ್ ಬಾಸ್ (Bigg Boss) ಪ್ರೋಮೋ ಈಗಾಗಲೇ ರಿವೀಲ್ ಆಗಿದೆ. ಸಾಕಷ್ಟು ಫನ್ ಈ ಸೀಸನ್‌ನಲ್ಲಿ ಇರಲಿದೆ ಕಾದುನೋಡಿ ಎಂದು ಫ್ಯಾನ್ಸ್‌ಗೆ ತಲೆಗೆ ಹುಳಬಿಟ್ಟಿದ್ದಾರೆ. ಇದೆಲ್ಲದರ ನಡುವೆ ದೊಡ್ಮನೆಗೆ ಹಾಟ್ ನಟಿ ಶಕೀಲಾ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    1994ರಲ್ಲಿ ತಮಿಳಿನ ಪ್ಲೇಗರ್ಲ್ಸ್ ಅವರ ಮೊದಲ ಸಿನಿಮಾ. ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾಗಳು ಡಬ್ ಆಗಿ ಪರಭಾಷೆಗಳಲ್ಲಿ ರಿಲೀಸ್ ಆಯಿತು. ಶಕೀಲಾ: ಆತ್ಮಕಥಾ ಹೆಸರಿನ ಆಟೋಬಯೋಗ್ರಫಿಯನ್ನು 2013ರಲ್ಲಿ ಬಿಡಗಡೆ ಮಾಡಲಾಯಿತು. ಇದು ಮಲಯಾಳಂ ಭಾಷೆಯಲ್ಲಿದೆ. ಈ ಪುಸ್ತಕದಲ್ಲಿ ಅವರು ಕುಟುಂಬ, ಸಿನಿಮಾ ಜಗತ್ತು- ರಾಜಕೀಯದ ಬಗ್ಗೆ ಹೇಳಿದ್ದಾರೆ.

    ಸದ್ಯ ಶಕೀಲಾ ಬಿಗ್ ಬಾಸ್‌ಗೆ ಕಾಲಿಡೋಕೆ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅವರ ಜೀವನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಈ ಶೋ ಮೂಲಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೂಟಿಂಗ್ ವೇಳೆ ಶಕೀಲಾ ಕೆನ್ನೆಗೆ ಹೊಡೆದಿದ್ದ ಸಿಲ್ಕ್ ಸ್ಮಿತಾ

    ಶೂಟಿಂಗ್ ವೇಳೆ ಶಕೀಲಾ ಕೆನ್ನೆಗೆ ಹೊಡೆದಿದ್ದ ಸಿಲ್ಕ್ ಸ್ಮಿತಾ

    ಬೆಂಗಳೂರು: ಶೂಟಿಂಗ್ ವೇಳೆ ಸಿಲ್ಕ್ ಸ್ಮಿತಾ ಅವರು ನನ್ನ ಕೆನ್ನೆಗೆ ಹೊಡೆದಿದ್ದರು ಎಂದು ಮಾದಕ ನಟಿ ಶಕೀಲಾ ಹೇಳಿದ್ದಾರೆ.

    90 ದಶಕದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮಾದಕ ನಟಿಯರಾದ ಸಿಲ್ಕ್ ಸ್ಮಿತಾ ಮತ್ತು ಶಕೀಲಾ ತನ್ನದೇ ಅದ ಅಭಿಮಾನಿ ಬಳಗವನ್ನು ಇಬ್ಬರು ಹೊಂದಿದ್ದರು. ಆದರೆ ಈ ಇಬ್ಬರು ನಟಿಯರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ ಎಂದು ಸ್ವತಃ ಶಕೀಲಾ ಅವರೇ ಹೇಳಿಕೊಂಡಿದ್ದರು.

    ಜೊತೆಗೆ ಸಿಲ್ಕ್ ಸ್ಮಿತಾ ಬಗ್ಗೆ ಮಾತನಾಡುವಾಗ ಅವರಿಬ್ಬರ ಮಧ್ಯೆ ನಡೆದ ಒಂದು ಪ್ರಸಂಗವನ್ನು ಕೂಡ ಶಕೀಲಾ ನೆನಪಿಸಿಕೊಂಡಿದ್ದಾರೆ. ಆಗ ನಾನು ಇನ್ನೂ ಸಿನಿಮಾ ರಂಗಕ್ಕೆ ಹೊಸಬಳು. ಆದರೆ ಸಿಲ್ಕ್ ಸ್ಮಿತಾ ಆಗಾಲೇ ಸಿನಿಮಾರಂಗದಲ್ಲಿ ಬಹಳ ಹೆಸರು ಮಾಡಿದ್ದರು. ಹೀಗಿರುವಾಗ ನಾವಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದೆವು. ಆಗ ಒಂದು ದೃಶ್ಯದ ಚಿತ್ರೀಕರಣದ ಬಗ್ಗೆ ರಿಹರ್ಸಲ್ ಮಾಡೋಣ ಬನ್ನಿ ಎಂದು ನಾನು ಅವರನ್ನು ಕರೆದಿದ್ದೆ. ಆದರೆ ಅವರು ಬರಲಿಲ್ಲ ಎಂದು ಶಕೀಲಾ ಹೇಳಿದ್ದಾರೆ.

    ಆ ದೃಶ್ಯದಲ್ಲಿ ನನಗೆ ಸಿಲ್ಕ್ ಸ್ಮಿತಾ ಹೊಡೆಯಬೇಕಿತ್ತು. ನಾನು ರಿಹರ್ಸಲ್ ಮಾಡೋಣವೆಂದರೂ ಬೇಡವೆಂದು ಸಿಲ್ಕ್ ಸ್ಮಿತಾ ಶೂಟಿಂಗ್ ಟೈಮ್‍ನಲ್ಲಿ ನಿಜವಾಗಿಯೇ ನನ್ನ ಕೆನ್ನೆಗೆ ಜೋರಾಗಿ ಭಾರಿಸಿದ್ದರು. ಅಂದು ಅವರು ಹೊಡೆದ ರಭಸಕ್ಕೆ ನನ್ನ ಕೆನ್ನೆ ಊದಿತ್ತು. ನಾನು ಶೂಟಿಂಗ್ ಸೆಟ್‍ನಿಂದ ಅಳುತ್ತಲೇ ಮನೆಗೆ ಹೋಗಿದ್ದೆ. ನಂತರ ಎರಡು ದಿನ ಶೂಟಿಂಗ್‍ಗೆ ಬಂದಿರಲಿಲ್ಲ. ಬಳಿಕ ನಿರ್ಮಾಪಕರು ಬಂದು ಸಮಾಧಾನ ಮಾಡಿ ಕರೆದುಕೊಂಡು ಬಂದರು ಎಂದು ಶಕೀಲಾ ತಿಳಿಸಿದ್ದಾರೆ.

    ಇದಾದ ನಂತರ ನಾನು ಅವರನ್ನು ಮಾತನಾಡಿಸಲು ಹೋಗಲಿಲ್ಲ. ಅವರು ಇದ್ದ ಕಡೆ ನಾನು ಹೋಗುತ್ತಿರಲಿಲ್ಲ. ಸಿಲ್ಕ್ ಸ್ಮಿತಾ ಅವರು ನಾನು ಅವರ ಜಾಗವನ್ನು ಕಿತ್ತುಕೊಳ್ಳುತ್ತೇನೆ ಎಂಬ ಭಯದಿಂದಲೇ ಹೊಡೆದರು ಎಂದು ಶಕೀಲಾ ತಿಳಿಸಿದ್ದಾರೆ. ಇದಾದ ನಂತರ ಸಿಲ್ಕ್ ಸ್ಮಿತಾ ಅವರೇ ಶಕೀಲಾ ಅವರ ಬಳಿ ಬಂದು ಅಂದು ಹೊಡೆದಿದ್ದಕ್ಕೆ ಕ್ಷಮೆ ಕೇಳಿದ್ದರಂತೆ. ಚಾಕೋಲೆಟ್ ಬಾಕ್ಸ್ ನೀಡಿ ಸ್ವಾರಿ ಎಂದು ಸ್ಮಿತಾ ಹೇಳಿದ್ದರಂತೆ.

    1979ರಲ್ಲಿ ಸಿನಿಮಾಗೆ ಎಂಟ್ರಿಕೊಟ್ಟ ಸಿಲ್ಕ್ ಸ್ಮಿತಾ ನಂತರ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗ ಸೇರಿದಂತೆ ಸೌತ್‍ಸಿನಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಬಿ ಗ್ರೇಡ್ ಸಿನಿಮಾ ಐಟಂ ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದ ಸ್ಮಿತಾ, ಅಂದಿನ ಕಾಲದಲ್ಲೇ ಬಹಳ ಬೇಡಿಕೆಯ ನಟಿ ಆಗಿದ್ದರು. ಜೊತೆಗೆ ಬಾಲಿವುಡ್‍ನಲ್ಲೂ ನಟಿಸಿದ್ದ ಸ್ಮಿತಾ 1996ರಲ್ಲಿ ತನ್ನ ಚೆನ್ನೈ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು.

    ಆಂಧ್ರಪ್ರದೇಶ ನೆಲ್ಲೂರಿನಲ್ಲಿ ಜನಿಸಿದ ಶಕೀಲಾ ತನ್ನ 18ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದರು. ಒಂದು ಕಾಲದಲ್ಲಿ ಬಿ ಗ್ರೇಡ್ ಸಿನಿಮಾಗಳಿಗೆ ಸಿಮೀತವಾಗಿದ್ದ ಶಕೀಲಾ, ನಂತರ ನಾನು ವಯಸ್ಕರ ಚಿತ್ರ ಮಾಡುವುದಿಲ್ಲ ಎಂದು ಅದರಿಂದ ಹೊರಗೆ ಬಂದರು. ನಂತರ ಕನ್ನಡ, ಮಲೆಯಾಳಂ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  • ಮಹೇಶ್, ಅಲ್ಲು ಫಾನ್ಸ್ ನಡುವೆ ಕಿಡಿ ಹಚ್ಚಿದ ಶಕೀಲಾ

    ಮಹೇಶ್, ಅಲ್ಲು ಫಾನ್ಸ್ ನಡುವೆ ಕಿಡಿ ಹಚ್ಚಿದ ಶಕೀಲಾ

    ಬೆಂಗಳೂರು: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ನಟಿ ಶಕೀಲಾ ಪ್ರಿನ್ಸ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜನ್ ಫಾನ್ಸ್ ನಡುವೆ ಬೆಂಕಿ ಹಚ್ಚಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸ್ಟಾರ್ ವಾರ್ ಎಂಬುದು ಎಲ್ಲಾ ಚಿತ್ರರಂಗದಲ್ಲೂ ಕಾಮನ್. ಈ ವಿಚಾರಕ್ಕೆ ಈಗ ತೆಲುಗು ಚಿತ್ರರಂಗದಲ್ಲಿ ಅಲ್ಲು ಮತ್ತು ಮಹೇಶ್ ಅಭಿಮಾನಿಗಳು ಸಖತ್ ಸದ್ದು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮುಲೋ ಮತ್ತು ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಸಿನಿಮಾ ಒಂದೇ ಬಾರಿ ರಿಲೀಸ್ ಆಗಿ ಸ್ಟಾರ್ ವಾರ್ ಗೆ ಕಾರಣವಾಗಿದೆ.

    ಬಿನ್ನಿ ಮತ್ತು ಪ್ರಿನ್ಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ಹೀರೋಗಳನ್ನು ಹೊಗಳಿ, ಅಲ್ಲು ಮತ್ತು ಮಹೇಶ್‍ರನ್ನು ಸಖತ್ ಅಗಿ ಟ್ರೋಲ್ ಮಾಡಿದ್ದರು. ಈ ವಿಚಾರ ಸಿನಿಮಾ ಸಂಪಾದನೆಯವರೆಗೂ ಹೋಗಿ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟರನ್ನು ಮುಜುಗರಕ್ಕೀಡಾಗುವಂತೆ ಮಾಡಿತ್ತು. ಈಗ ನಟಿ ಶಕೀಲಾ ಕೊಟ್ಟಿರುವ ಹೇಳಿಕೆಯೊಂದು ಮತ್ತೆ ಈ ಸ್ಟಾರ್ ವಾರ್ ಗೆ ಪುಷ್ಟಿಕೊಟ್ಟಂತೆ ಆಗಿದೆ.

    ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ಶಕೀಲಾ, ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನನಗೆ ಮಹೇಶ್ ಬಾಬು ಸಹೋದರನಂತೆ, ಜೂನಿಯರ್ ಎನ್‍ಟಿಆರ್ ಸೂಪರ್ ಅಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಶಕೀಲಾ ಅವರ ಹೇಳಿಕೆಯಿಂದ ಟಾಲಿವುಡ್‍ನಲ್ಲಿ ಸ್ವಲ್ಪ ಕಮ್ಮಿ ಆಗಿದ್ದ ಸ್ಟಾರ್ ವಾರ್ ಮತ್ತೆ ಶುರುವಾಗಿದ್ದು, ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟ ಮಾಡುತ್ತಿದ್ದಾರೆ.

    ಶಕೀಲಾ ಅವರ ಈ ಹೇಳಿಕೆಯಿಂದ ಕಾದ ಕೆಂಡದಂತಾಗಿರುವ ಅರ್ಜುನ್ ಫಾನ್ಸ್, ಅಲ್ಲು ಅರ್ಜನ್ ಅವರಿಗೆ ನಮ್ಮ ದೇಶದಲ್ಲಿ ಅಲ್ಲದೇ ಹೊರದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಆದರೆ ಇಲ್ಲಿಯವರೇ ಆದ ಶಕೀಲಾ ಅವರಿಗೆ ಅಲ್ಲು ಗೊತ್ತಿಲ್ವಾ? ಅವರು ಬೇಕಂತಲೇ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಶಕೀಲಾ ಅವರ ಸಹೋದರ ಮಹೇಶ್ ಬಾಬು ಎಂದು ಟ್ರೋಲ್ ಕೂಡ ಮಾಡುತ್ತಿದ್ದಾರೆ.

  • ಶಕೀಲಾ ಹೇಳಿದ ಕಥೆ ಕೇಳಿ ಅತ್ತಿದ್ದರಂತೆ ರಿಚಾ ಛಡ್ಡಾ!

    ಶಕೀಲಾ ಹೇಳಿದ ಕಥೆ ಕೇಳಿ ಅತ್ತಿದ್ದರಂತೆ ರಿಚಾ ಛಡ್ಡಾ!

    ಬೆಂಗಳೂರು: ಬಾಲಿವುಡ್ ನಟಿ ರಿಚಾ ಛಡ್ಡಾ ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಯಸ್ಕರ ಸಿನಿಮಾಗಳ ಮೂಲಕವೇ ಪ್ರಸಿದ್ಧರಾದ ಶಕೀಲಾ ಬದುಕಿನ ಕಥೆ ಎಂಥವರನ್ನೂ ಭಾವುಕರನ್ನಾಗಿಸುವಂಥಾದ್ದು. ಅಂಥಾ ಶಕೀಲಾ ಪಾತ್ರ ನಿರ್ವಹಿಸುತ್ತಿರುವ ರಿಚಾ ಈ ಚಿತ್ರಕ್ಕಾಗಿ ಭಾರೀ ತಯಾರಿ ಆರಂಭಿಸಿಕೊಂಡೇ ಅಖಾಡಕ್ಕಿಳಿದಿದ್ದಾರೆ.

    ಈ ಪಾತ್ರವನ್ನು ಮಾಡಲು ಒಪ್ಪಿಕೊಂಡ ನಂತರ ರಿಚಾ ಶಕೀಲಾ ಅವರನ್ನು ಖುದ್ದಾಗಿ ಭೇಟಿಯಾಗಿದ್ದರಂತೆ. ಅವರ ಸಾಂಗತ್ಯದೊಂದಿಗೆ ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲೆತ್ನಿಸಿದ್ದ ರಿಚಾ ಶಕೀಲ ಜೊತೆ ಗಂಟೆಗಟ್ಟಲೆ ಮಾತಾಡಿದ್ದರಂತೆ. ಈ ಭೇಟಿ ಪುನರಾವರ್ತನೆಯಾದಾಗ ಇಬ್ಬರ ನಡುವೆ ಆತ್ಮೀಯತೆ ಬೆಳೆದುಕೊಂಡು ತಂತಮ್ಮ ಪರ್ಸನಲ್ ವಿಚಾರಗಳನ್ನೂ ವಿನಿಮಯ ಮಾಡಿಕೊಂಡಿದ್ದರಂತೆ.

    ಈ ಬಗ್ಗೆ ರಿಚಾ ಛಡ್ಡಾ ಹೇಳಿಕೊಂಡಿದ್ದಾರೆ. ಮೊದಲ ಸಲ ಶಕೀಲಾರನ್ನು ರಿಚಾ ಭೇಟಿಯಾಗಿ ಒಂದಷ್ಟು ಮಾತಾಡಿ ಬಂದಿದ್ದರು. ಆದರೆ ಎರಡನೇ ಸಲ ಭೇಟಿಯಾದಾಗ ಶಕೀಲಾ ತಮ್ಮ ಬದುಕಿನ ಕೆಲ ಪುಟಗಳನ್ನು ಬಿಚ್ಚಿಟಾಗ ರಿಚಾ ಛಡ್ಡ ಅತ್ತು ಬಿಟ್ಟಿದ್ದರಂತೆ. ಹೊರ ಜಗತ್ತಿಗೆ ಮಾದಕತೆಯ ಸಿಂಬಲ್ ಆಗಿ ಕಾಣಿಸುವ ಶಕೀಲಾ ಅವರೊಳಗೆ ಅವಿತಿರೋ ಆದ್ರ್ರ ಭಾವಗಳನ್ನು ಕಂಡು ಭಾವುಕರಾಗಿದ್ದರಂತೆ.

    ಈ ಭೇಟಿ ಮತ್ತು ಸಲುಗೆಯಿಂದ ಶಕೀಲಾ ಪಾತ್ರವನ್ನು ಪರಿಣಾಮಕಾರಿಯಾಗಿ ಪ್ರಸದ್ತುತಪಡಿಸಲು ಸಾಧ್ಯವಾಗಿದೆ ಎಂಬುದು ರಿಚಾ ಛಡ್ಡಾ ಅಭಿಪ್ರಾಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv