ದುಬೈ: ಬಾಂಗ್ಲಾದೇಶದ (Bangladesh) ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಬೌಲಿಂಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ನಿಷೇಧ ಹೇರಿದೆ.
ಬೌಲಿಂಗ್ ವೇಳೆ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿದ ಹಿನ್ನೆಲೆಯಲ್ಲಿ ಶಕೀಬ್ ಬೌಲಿಂಗ್‌ಗೆ ನಿಷೇಧ ಹೇರಲಾಗಿದೆ. ಇದು ಐಸಿಸಿಯ ದೇಶೀಯ ಮತ್ತು ವಿದೇಶದಲ್ಲಿ ನಡೆಯಲಿರುವ ಪಂದ್ಯಗಳಿಗೆ ಅನ್ವಯವಾಗಲಿದೆ.
ಡಿಸೆಂಬರ್‌ನಲ್ಲಿ ಇಂಗ್ಲೆಂಡಿನ ಲೌಬರೋ ವಿಶ್ವವಿದ್ಯಾನಿಲಯದಲ್ಲಿ ದಿನನಿತ್ಯದ ಮೌಲ್ಯಮಾಪನದ ನಂತರ, ಬೌಲಿಂಗ್ ಮಾಡುವಾಗ ಶಕೀಬ್ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿರುವುದು ಕಂಡುಬಂದಿದೆ. ಐಸಿಸಿ ನಿಯಮದ ಪ್ರಕಾರ ಬೌಲಿಂಗ್ ವೇಳೆ ಮೊಣಕೈ ವಿಸ್ತರಣೆಯು 15 ಡಿಗ್ರಿ ಮಿತಿಯನ್ನು ಮೀರುವಂತಿಲ್ಲ.ಯಾವುದೇ ಬೌಲರ್‌ನ ಮೊಣಕೈ ಈ ಮಿತಿಯನ್ನು ಮೀರಿ ವಿಸ್ತರಿಸಿದರೆ ಕಾನೂನುಬಾಹಿರ ಬೌಲಿಂಗ್ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್ ಬ್ಯಾನ್ ಮಾಡಿ – ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ನೋಟಿಸ್
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸ್ವತಂತ್ರವಾಗಿ ಮೌಲ್ಯಮಾಪನ ನಡೆಸಿ ಶಕೀಬ್ ಅವರ ಬೌಲಿಂಗ್ ಐಸಿಸಿ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಖಚಿತಪಡಿಸಿದೆ. ವರದಿ ಬಂದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳನ್ನು ಒಳಗೊಂಡಿರುವ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಟೂರ್ನಿಗಳಲ್ಲಿ ಬೌಲಿಂಗ್‌ನಿಂದ ಅವರನ್ನು ಅಮಾನತುಗೊಳಿಸುವುದಾಗಿ ಇಸಿಬಿ ಘೋಷಿಸಿತು.
37 ವರ್ಷದ ಶಕೀಬ್ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಎಡಗೈ ಬ್ಯಾಟ್ಸ್‌ಮ್ಯಾನ್ ಮತ್ತು ಎಡಗೈ ಬೌಲರ್ ಆಗಿರುವ ಬಾಂಗ್ಲಾ ಪರವಾಗಿ 71 ಟೆಸ್ಟ್, 247 ಏಕದಿನ, 129 ಟಿ20 ಪಂದ್ಯವಾಡಿದ್ದಾರೆ.
ಢಾಕಾ: ಕೊಲೆ ಪ್ರಕರಣದ ಆರೋಪಿಯಾಗಿರುವ ಬಾಂಗ್ಲಾದೇಶ ಪುರುಷರ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಅವರನ್ನ ಕೂಡಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಬ್ಯಾನ್ ಮಾಡುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (Bangladesh Cricket Board) ನೋಟಿಸ್ ನೀಡಲಾಗಿದೆ.
ಸದ್ಯ ರಾವಲ್ಪಿಂಡಿಯಲ್ಲಿರುವ ಶಕೀಬ್ ಪಾಕಿಸ್ತಾನ (Pakistan_ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯ (Test Series) ಭಾಗವಾಗಿದ್ದಾರೆ. ಈ ನಡುವೆ ಬಾಂಗ್ಲಾ ರ‍್ಯಾಲಿಯಲ್ಲಿ ಕೊಲೆಯಾದ ರುಬೆಲ್ ಎಂಬಾತನ ತಂದೆ ರಫೀಕುಲ್ ಇಸ್ಲಾಂ ಪರ ವಕೀಲರು ಶಕೀಬ್ ಅವರನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: Jammu Kashmir Election | ಘೋಷಿಸಿದ ಪಟ್ಟಿ ಹಿಂಪಡೆದು ಕೊನೆಗೂ 15 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ
ಶಕೀಬ್ ವಿರುದ್ಧ ಕೊಲೆ ಕೇಸ್ ದಾಖಲಾಗಿರುವುದು ಏಕೆ?
ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲಿ ಇದೇ ಆಗಸ್ಟ್ 7ರಂದು ಮುಸ್ಲಿಂ ಮುಖಂಡ ರಫೀಕುಲ್‌ನ ಪುತ್ರ ರುಬೆಲ್ ಎಂಬಾತನ ಹತ್ಯೆಯಾಗಿತ್ತು. ಢಾಕಾದ ಅಡಬೋರ್‌ನ ರಿಂಗ್‌ರಸ್ತೆಯಲ್ಲಿ ನಡೆಯುತ್ತಿದ್ದ ರ‍್ಯಾಲಿ ವೇಳೆ ರುಬೆಲ್‌ನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಘಟನೆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್ ಹಾಗೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ನೂರಾರು ಮಂದಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಗೃಹ ಸಚಿವರೇ ನಿಮ್ಮದು ಯಾವ ನ್ಯಾಯ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಏಕೆ?- ಸಾರ್ವಜನಿಕರಿಂದ ತರಾಟೆ
ಈ ಕೊಲೆ ಪ್ರಕರಣ ಸಂಬಂಧ ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶಕೀಬ್ 28ನೇ ಆರೋಪಿ ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶದ ಜನಪ್ರಿಯ ನಟ ಫೆರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಾಗಿರುವ ಒಟ್ಟು 154 ಪ್ರಮುಖ ವ್ಯಕ್ತಿಗಳ ಪೈಕಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೆಸರೂ ಪ್ರಕರಣದಲ್ಲಿ ದಾಖಲಾಗಿದೆ. ಅಲ್ಲದೇ ಸುಮಾರು 400-500 ಅಪರಿಚಿತ ವ್ಯಕ್ತಿಗಳೂ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.
ರಾವಲ್ಪಿಂಡಿ: ಪಾಕ್ (Pakistan) ತಂಡದ ಓವರ್ ಕಾನ್ಫಿಡೆನ್ಸ್‌ನಿಂದಾಗಿ ತವರಿನಲ್ಲೇ ನಡೆದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಅಲ್ಲದೇ ಪಾಕ್ ನೆಲದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು (Test Series) 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾವಲ್ಪಿಂಡಿಯಲ್ಲಿ (Rawalpindi) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದ ಪಾಕ್ ತಂಡದ ಆಟಗಾರರು ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 171 ರನ್ ಗಳಿಸಿ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದ ಮೊಹಮ್ಮದ್ ರಿಜ್ವಾನ್ (Mohammad Rizwan) ಬ್ಯಾಟ್ ಬಿಸಾಡಿ ಆಕ್ರೋಶ ಹೊರಹಾಕಿದ್ದರು. ಪಾಕ್ ತಂಡ ಮಾಡಿದ ಯಡವಟ್ಟಿನಿಂದಲೇ ಇದೀಗ ಹೀನಾಯ ಸೋಲು ಕಂಡಿದೆ.
ಪಾಕ್ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಪಾಕ್ ಪರ ಸೌದ್ ಶಕೀಲ್ 261 ಎಸೆತಗಳಲ್ಲಿ 141 ರನ್ ಗಳಿದಿದ್ರೆ, ಮೊಹಮ್ಮದ್ ರಿಜ್ವಾನ್ 239 ಎಸೆತಗಳಲ್ಲಿ 171 ರನ್ (11 ಬೌಂಡರಿ, 3 ಸಿಕ್ಸರ್), ಸೈಮ್ ಅಯೂಬ್ 56 ರನ್ ಗಳಿಸಿದ್ದರು. ಇದರಿಂದ ತಂಡದ ಮೊತ್ತ ಪಾಕ್ 113 ಓವರ್‌ಗಳಲ್ಲಿ 448 ರನ್ ಗಳಿಸಿತ್ತು. ಆದ್ರೆ ತನ್ನ ಸರದಿ ಆರಂಭಿಸಿದ್ದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 167.3 ಓವರ್‌ಗಳಲ್ಲಿ 565 ರನ್ ಪೇರಿಸಿತ್ತು. ಬ್ಯಾಟಿಂಗ್‌ನಲ್ಲಿ ಮೊದಲ ಇನಿಂಗ್ಸ್ನಲ್ಲಿ ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಅನುಭವಿ ಆಟಗಾರ ಮುಶ್ಫಿಕರ್ ರಹೀಂ 191 ರನ್ ಬಾರಿಸಿದ್ದರು. ಅವರ ಈ ಭರ್ಜರಿ ಆಟ ಬಾಂಗ್ಲಾ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ಉಳಿದಂತೆ ಮೆಹಿದಿ ಹಸನ್ 77, ಶಾದ್ಮನ್ ಇಸ್ಲಾಂ 93 ರನ್‌ಗಳ ಕೊಡುಗೆ ನೀಡಿದ್ದರು.
ಇನ್ನೂ 4ನೇ ದಿನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 146 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ರಿಜ್ವಾನ್ 51 ರನ್, ಅದ್ಭುಲ್ ಶಫಿಕ್ 37 ರನ್, ಬಾಬರ್ ಆಜಂ (Babar Azam) 22 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದ್ದರು. ಇದರಿಂದ ಗೆಲುವಿಗೆ ಕೇವಲ 30 ರನ್ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು. ಅತಿಯಾದ ಆತ್ಮವಿಶ್ವಾಸವೇ ಪಾಕ್ ತಂಡದ ಸೋಲಿಗೆ ಕಾರಣವಾಯಿತು.
ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೆಹಿದಿ ಹಸನ್ ಮಿರಾಜ್ 21 ರನ್ಗೆ 4 ವಿಕೆಟ್ ಕಿತ್ತರೆ, ಆಲ್‌ರೌಂಡರ್ ಶಕಿಬ್ ಅಲ್ ಹಸನ್ 3 ವಿಕೆಟ್,ಶೊರಿಫುಲ್, ಹಸನ್ ಮೊಹಮ್ಮದ್ ಹಾಗೂ ನಹಿದ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಜಾಕಿರ್ ಹಸನ್ 15 ರನ್, ಶಾದ್‌ಮನ್ ಇಸ್ಲಾಮ್ 9 ರನ್ ಗಳಿಸಿದ್ರೆ, ವೈಡ್ ಮತ್ತು ಲೆಗ್‌ಬೈಸ್‌ನಿಂದ ಹೆಚ್ಚುವರಿ 6 ರನ್ ತಂಡಕ್ಕೆ ಸೇರ್ಪಡೆಯಾಯಿತು.
ಐತಿಹಾಸಿಕ ಗೆಲುವು:
ಬಾಂಗ್ಲಾದೇಶ, ಪಾಕಿಸ್ತಾನ ನೆಲದಲ್ಲಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ 14ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸಾಧನೆ ಮಾಡಿದೆ.
ಸಂಕ್ಷಿಪ್ತ ಸ್ಕೋರ್ ಮೊದಲ ಇನ್ನಿಂಗ್ಸ್ ಪಾಕಿಸ್ತಾನ – 448/6d, ಬಾಂಗ್ಲಾದೇಶ – 565/10
2ನೇ ಇನ್ನಿಂಗ್ಸ್ ಪಾಕಿಸ್ತಾನ – 146/10, ಬಾಂಗ್ಲಾದೇಶ – 30/0
ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina), ಬಾಂಗ್ಲಾದೇಶ ಪುರುಷರ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಢಾಕಾದ ಮಾಧ್ಯಮವೊಂದು ವರದಿ ಮಾಡಿದೆ.
ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ (Reservation) ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ ಇದೇ ಆಗಸ್ಟ್ 7ರಂದು ಮುಸ್ಲಿಂ ಮುಖಂಡ (Muslim Leader) ರಫೀಕುಲ್‌ನ ಪುತ್ರ ರುಬೆಲ್ ಎಂಬಾತನ ಹತ್ಯೆಯಾಗಿತ್ತು. ಢಾಕಾದ ಅಡಬೋರ್‌ನ ರಿಂಗ್‌ರಸ್ತೆಯಲ್ಲಿ ನಡೆಯುತ್ತಿದ್ದ ರ‍್ಯಾಲಿ ವೇಳೆ ರುಬೆಲ್‌ನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಘಟನೆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್ ಹಾಗೂ ಹಸೀನಾ ಸೇರಿದಂತೆ ನೂರಾರು ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ಈ ಕೊಲೆ ಪ್ರಕರಣ ಸಂಬಂಧ ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ (Dhaka Adabor Police) ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶಕೀಬ್ 28ನೇ ಆರೋಪಿ ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶದ ಜನಪ್ರಿಯ ನಟ ಫೆರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾನೆ. ಇವರಿಬ್ಬರೂ ಸಂಸತ್ತಿನಲ್ಲಿ ಅವಾಮಿ ಲೀಗ್‌ನ ಮಾಜಿ ಸಂಸದರಾಗಿದ್ದರು. ಪ್ರಕರಣ ದಾಖಲಾಗಿರುವ ಒಟ್ಟು 154 ಪ್ರಮುಖ ವ್ಯಕ್ತಿಗಳ ಪೈಕಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೆಸರೂ ಪ್ರಕರಣದಲ್ಲಿ ದಾಖಲಾಗಿದೆ. ಅಲ್ಲದೇ ಸುಮಾರು 400-500 ಅಪರಿಚಿತ ವ್ಯಕ್ತಿಗಳೂ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಬಿಸಿಸಿಐ ಆತಿಥ್ಯದಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ (Bangladesh) ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ (Shakib Al Hasan) ನೇಮಕಗೊಂಡಿದ್ದರು. ಆದ್ರೆ ಸರಣಿಯುದ್ಧಕ್ಕೂ ಕಳಪೆ ಪ್ರದರ್ಶನದಿಂದಾಗಿ ಲೀಗ್‌ಸುತ್ತಿನಲ್ಲೇ ಹೊರಬಿದ್ದ ಪರಿಣಾಮ ಶಕೀಬ್ ಅವರನ್ನ ನಾಯಕತ್ವದಿಂದ ಕೆಳಗಿಳಿಸಲಾಯಿತು. ಸದ್ಯ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ನಜ್ಮುಲ್ ಹೊಸೈನ್ ಶಾಂಟೊ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಿದ್ದಾರೆ.
ಕೋಲ್ಕತ್ತಾ: ಸಂಘಟಿತ ಬೌಲಿಂಗ್ ದಾಳಿ ಹಾಗೂ ನಾಯಕ ಸ್ಕಾಟ್ ಎಡ್ವರ್ಡ್ಸ್ (Scott Edwards) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನೆದರ್ಲೆಂಡ್ಸ್ ತಂಡವು ಬಾಂಗ್ಲಾದೇಶದ (Bangladesh) ವಿರುದ್ಧ 87 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಬಲಿಷ್ಠ ಇಂಗ್ಲೆಂಡ್ (England) ತಂಡವನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೆ ಜಿಗಿದಿದೆ.
ಚೇಸಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡದಲ್ಲಿ ಮೆಹಿದಿ ಹಸನ್ ಮಿರಾಜ್ 35 ರನ್, ಮಹಮ್ಮದುಲ್ಲಾ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 20 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದೇ ಡಚ್ಚರ ಬೌಲಿಂಗ್ ದಾಳಿಗೆ ತತ್ತರಿಸಿದರು. ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಕೂಡ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 142 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್ ನೆರವಿನಿಂದ ಚೇತರಿಸಿಕೊಂಡಿತು. ವೆಸ್ಲಿ ಬ್ಯಾರೆಸಿ 41 ರನ್, ನಾಯಕ ಸ್ಕಾಟ್ ಎಡ್ವರ್ಡ್ಸ್ 68 ರನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 35 ರನ್ ಹಾಗೂ ಲೋಗನ್ ವ್ಯಾನ್ ಬೀಕ್ 23 ರನ್‌ಗಳ ಕೊಡುಗೆ ನೀಡುವ ಮೂಲ ತಂಡವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಕೊಲಂಬೊ: ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಶ್ರೀಲಂಕಾ (Sri Lanka) ತಂಡ ಮಂದಗತಿಯ ಬ್ಯಾಟಿಂಗ್ ಹೊರತಾಗಿಯೂ ಬಾಂಗ್ಲಾದೇಶದ (Bangladesh) ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಏಕದಿನ ಏಷ್ಯಾಕಪ್ (AsiaCup) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 42.4 ಓವರ್‌ಗಳಲ್ಲಿ 164 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ 39 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: 5,966 ಕೋಟಿ ರೂ.ಗೆ BBCI ಮಾಧ್ಯಮ ಹಕ್ಕು ಪಡೆದ Viacom18
ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ ತಂಡಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಪಾತುಂ ನಿಸ್ಸಾಂಕ (14 ರನ್) ಹಾಗೂ ದಿಮುತ್ ಕರುಣಾರತ್ನೆ (1 ರನ್) ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಈ ಬೆನ್ನಲ್ಲೇ ಕುಸಲ್ ಮೆಂಡೀಸ್ ಸಹ 5 ರನ್‌ಗಳಿಗೆ ವಿಕೆಟ್ ಕೈಚೆಲ್ಲಿ ಪೆವಿಲಿಯನ್ ಸೇರಿಕೊಂಡರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ಸದೀರ ಸಮರವಿಕ್ರಮ, ಚರಿತ್ ಅಸಲಂಕ ಶತಕದ ಜೊತೆಯಾಟದಿಂದ ಗೆಲುವಿನ ಹಾದಿಯತ್ತ ಸಾಗಿತು.
4ನೇ ವಿಕೆಟ್‌ಗೆ ಈ ಜೋಡಿ 119 ರನ್‌ಗಳ ಜೊತೆಯಾಟ ನೀಡಿತು. ಸಮರವಿಕ್ರಮ 77 ಎಸೆತಗಳಲ್ಲಿ 56 ರನ್ ಗಳಿಸಿದ್ರೆ, ಅಸಲಂಕ 92 ಎಸೆತಗಳಲ್ಲಿ ಅಜೇಯ 62 ರನ್ (5 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದರು. ಕೊನೆಯಲ್ಲಿ ನಾಯಕ ದಸುನ್ ಶನಾಕ (Dasun Shanaka) 21 ಎಸೆತಗಳಲ್ಲಿ 14 ರನ್ ಗಳಿಸಿ ಜಯದ ದಡ ಮುಟ್ಟಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಲಂಕಾ ಬೌಲರ್‌ಗಳ ದಾಳಿಗೆ ತತ್ತರಿಸಿತು. 3ನೇ ಕ್ರಮಾಂಕದಲ್ಲಿ ಬಂದ ನಜ್ಮುಲ್ ಹೊಸೈನ್ ಶಾಂತೋ 122 ಎಸೆತಗಳಲ್ಲಿ 89 ರನ್ (7 ಬೌಂಡರಿ), ತೌಹಿದ್ ಹೃದಯೊಯ್ 20 ರನ್ ಗಳಿಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಚೆಲ್ಲಿದ ಪರಿಣಾಮ ತಂಡಕ್ಕೆ ಸೋಲಾಯಿತು.
ತೀಕ್ಷ್ಣ ಬೌಲಿಂಗ್ ಬಾಂಗ್ಲಾ ತತ್ತರ: ಮೊದಲು ಫೀಲ್ಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ಪರ ಬೌಲರ್‌ಗಳು ಉತ್ತಮ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಮಾರಕ ಬೌಲಿಂಗ್ ದಾಳಿ ನಡೆಸಿದ ಮಥೀಶ ಪತಿರಣ 7.4 ಓವರ್‌ಗಳಲ್ಲಿ 32 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರೆ, ಮಹೀಶ್ ತೀಕ್ಷಣ 2 ವಿಕೆಟ್, ಧನಂಜಯ ಡಿ ಸಿಲ್ವಾ, ದುನಿತ್ ಹಾಗೂ ದಸುನ್ ಶನಾಕ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಢಾಕಾ: ಬಾಂಗ್ಲಾ (Bangladesh) ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ (Shakib Al Hasan) ಮತ್ತೊಮ್ಮೆ ನೇಮಕಗೊಂಡಿದ್ದಾರೆ. ಈ ಮೂಲಕ ಅವರು 2023ರ ವಿಶ್ವಕಪ್‍ನಲ್ಲಿ (World Cup) ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಶಕೀಬ್ ಈಗ ಎಲ್ಲಾ ಸ್ವರೂಪದ ಕ್ರಿಕೆಟ್‍ನ ನಾಯಕರಾಗಿದ್ದಾರೆ. ಕಳೆದ ವರ್ಷದಿಂದ ಟೆಸ್ಟ್ ಮತ್ತು ಟಿ20 ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಏಷ್ಯಾಕಪ್‍ನಿಂದ ಹೊರಗುಳಿದ ನಂತರ ಆಗಸ್ಟ್ 3 ರಂದು ಕೆಳಗಿಳಿದಿದ್ದ ತಮೀಮ್ ಇಕ್ಬಾಲ್ ಬದಲಿಗೆ ನಾಯಕ ಸ್ಥಾನವನ್ನು ಪಡೆದಿದ್ದಾರೆ. ಇದನ್ನೂ ಓದಿ: Asia Cup 2023: ಟೀಂ ಇಂಡಿಯಾ ಜೆರ್ಸಿಯಲ್ಲಿ ಪಾಕ್ ಹೆಸರು – ಫೋಟೋ ವೈರಲ್
ಶಕೀಬ್ ಲಂಕಾ ಪ್ರೀಮಿಯರ್ ಲೀಗ್‍ನಿಂದ ಹಿಂದಿರುಗಿದಾಗ ನಾವು ಅವರೊಂದಿಗೆ ಹೆಚ್ಚು ಚರ್ಚಿಸಲಿದ್ದೇವೆ. ಅವರ ಜೊತೆ ಫೊನ್‍ನಲ್ಲಿ ಮಾತನಾಡಲಾಗಿದೆ. ಆದರೆ ಅವರು ಪ್ರಸ್ತುತ ಫ್ರಾಂಚೈಸ್ ಲೀಗ್‍ನಲ್ಲಿ ನಿರತರಾಗಿರುವ ಕಾರಣ ನಾವು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದು ಸರಿಯಾದ ಕ್ರಮವಾಗಿದೆ. ಅವರು ಯಾವ ಬಗೆಯ ಕ್ರಿಕೆಟ್‍ನಲ್ಲಿ ತಂಡವನ್ನು ಮುನ್ನಡೆಸುತ್ತಾರೆ ಎಂಬುದರ ಮಾತನಾಡಲಾಗುತ್ತದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.
ಶಕಿಬ್ ನಾಯಕತ್ವಕ್ಕೆ ಮೊದಲ ಆಯ್ಕೆಯಾಗಿದ್ದಾರೆ. ಆದರೆ ಅವರನ್ನು ನೇಮಿಸುವ ಮೊದಲು ನಾವು ಅವರೊಂದಿಗೆ ಮಾತನಾಡಬೇಕಾಗಿತ್ತು. ಬೇರೆ ಆಟಗಾರರು ಈ ಬಗ್ಗೆ ಬೇರೆ ಅರ್ಥದಲ್ಲಿ ಯೋಚಿಸಬಾರದು ಎಂದಿದ್ದಾರೆ.
ಕೊಲಂಬೊ: ಭಾರತದಲ್ಲಿ ಐಪಿಎಲ್ ಟೂರ್ನಿ ಜನಪ್ರಿಯತೆ ಪಡೆದುಕೊಂಡ ನಂತರ ವಿದೇಶಗಳಲ್ಲೂ ಟಿ20 ಕ್ರಿಕೆಟ್ ಸಖತ್ ಟ್ರೆಂಡ್ ಆಗಿದೆ. ಲಂಡನ್‌ನಲ್ಲಿ ಇತ್ತೀಚೆಗಷ್ಟೇ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿ ನಡೆಯಿತು. ನಂತರ ಅಮೇರಿಕದಲ್ಲಿ ಮೇಜರ್ ಕ್ರಿಕೆಟ್ ಲೀಗ್ ಟೂರ್ನಿ ಆಯೋಜನೆಗೊಂಡಿದ್ದು, ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ LPL (ಲಂಕಾ ಪ್ರೀಮಿಯರ್ ಲೀಗ್) ಟೂರ್ನಿಯ 4ನೇ ಆವೃತ್ತಿ ಆಯೋಜನೆಗೊಂಡಿದೆ.
ಐಪಿಎಲ್ (IPL) ಟೂರ್ನಿ ಮಾದರಿಯಲ್ಲೇ ಲಂಕಾ ಟೂರ್ನಿಯೂ ನಡೆಯಲಿದ್ದು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಜುಲೈ 30 ರಿಂದ ಆಗಸ್ಟ್ 21ರ ವರೆಗೆ ಲಂಕಾದ ಕೊಲಂಬೊ ಮತ್ತು ಕ್ಯಾಂಡಿ ಕ್ರಿಕೆಟ್ ಅಂಗದಲ್ಲಿ ನಡೆಯಲಿದೆ. ಆಗಸ್ಟ್ 20ರಂದು ಫೈನಲ್ ಪಂದ್ಯ ನಡೆಯಲಿದೆ ಒಂದು ವೇಳೆ ಮಳೆಯಿಂದ ಅಡ್ಡಿಯಾದರೆ ಆ.21 ರಂದು ಫೈನಲ್ ಪಂದ್ಯ ಮುಂದೂಡಲಾಗುತ್ತದೆ. ಅದಕ್ಕಾಗಿಯೇ ಒಂದು ದಿನ ಹೆಚ್ಚುವರಿಯಾಗಿ ನಿಗದಿ ಮಾಡಲಾಗಿದೆ ಎಂದು ಎಲ್‌ಪಿಎಂ ಸಮಿತಿ ತಿಳಿಸಿದೆ. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು
ನಿರೋಶನ್ ಡಿಕ್ವೆಲ್ಲಾ ನಾಯಕತ್ವದ ಕೊಲಂಬೊ ಸ್ಟ್ರೈಕರ್ಸ್ (Colombo Strikers), ಕುಸಲ್ ಮೆಂಡಿಸ್ ನೇತೃತ್ವದ ದಂಬುಲ್ಲಾ ಔರಾ, ದಸುನ್ ಶನಾಕ ನೇತೃತ್ವದ ಗಾಲೆ ಟೈಟಾನ್ಸ್, ವಾನಿಂದು ಹಸರಂಗ ನಾಯಕತ್ವದ ಬಿ-ಲವ್ ಕ್ಯಾಂಡಿ ಮತ್ತು ಹಾಲಿ ಚಾಂಪಿಯನ್ ಜಾಫ್ನಾ ಕಿಂಗ್ಸ್ (Jaffna Kings) ಸೇರಿ ಐದು ತಂಡಗಳು ಕಾದಾಡಲಿವೆ.
ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ (David Miller), ಪಾಕಿಸ್ತಾನದ ಬಾಬರ್ ಆಜಂ (Babar Azam) ಹಾಗೂ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ (Shakib Al Hasan) ಸೇರಿದಂತೆ ಸ್ಟಾರ್ ಕ್ರಿಕೆಟಿಗರು ಕಣದಲ್ಲಿ ಅಬ್ಬರಿಸಲಿದ್ದಾರೆ. ರೌಂಡ್ ರಾಬಿನ್ ಸ್ವರೋಪದಲ್ಲಿ ಟೂರ್ನಿ ನಡೆಯಲಿದ್ದು ಪ್ರತಿ ತಂಡವು ಇತರ ತಂಡಗಳೊಂದಿಗೆ ಎರಡು ಬಾರಿ ಸೆಣಸಲಿವೆ. ಅಗ್ರಸ್ಥಾನ ಪಡೆದ 4 ತಂಡಗಳು ಆಗಸ್ಟ್ 17ರಿಂದ ಆರಂಭವಾಗುವ ಪ್ಲೇ ಆಫ್ ಪ್ರವೇಶಿಸಲಿವೆ. ಆಗಸ್ಟ್ 21 ರಂದು ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI
ಢಾಕಾ: ಟೀಂ ಇಂಡಿಯಾದ ಕುಲ್‌ದೀಪ್ ಯಾದವ್ (Kuldeep Yadav), ಅಕ್ಷರ್ ಪಟೇಲ್ (Axar Patel) ಸ್ಪಿನ್ ಬೌಲಿಂಗ್ ದಾಳಿ ಹಾಗೂ ಶುಭಮನ್‌ಗಿಲ್ (Shubman Gill), ಚೇತೇಶ್ವರ್ ಪೂಜಾರ (Cheteshwar Pujara) ಭರ್ಜರಿ ಶತಕದ ಕಮಾಲ್‌ನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ (Test Cricket) ಪಂದ್ಯದಲ್ಲಿ ಭಾರತ 188 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಫಲವಾಗಿ 4ನೇ ದಿನದಾಟದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ಗಳಿಸಿ 241 ರನ್‌ಗಳ ಹಿನ್ನಡೆಯಲ್ಲಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 113.2 ಓವರ್‌ಗಳಲ್ಲಿ 324 ರನ್‌ಗಳಿಗೆ ಸರ್ವಪತನಕಂಡಿದೆ. ಭಾರತ ಭರ್ಜರಿ 188 ರನ್‌ಗಳ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ಗಿಲ್ ಚೊಚ್ಚಲ 100, ಪೂಜಾರ ವೇಗದ ಶತಕ – ಬಾಂಗ್ಲಾಗೆ ಬೃಹತ್ ಟಾರ್ಗೆಟ್
4ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ರನ್ ಬಾರಿಸಿತ್ತು, ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಅಜೇಯ 40 ರನ್ (69 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಮೆಹಿದಿ ಹಸನ್ ಮಿರಾಜ್ 9 ರನ್ ಸಿಡಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಬಾಂಗ್ಲಾ (Bangladesh) ಗೆಲುವಿಗೆ 241 ರನ್ ಬಾಕಿಯಿತ್ತು. ಇಂದು ಬಾಂಗ್ಲಾದೇಶ ಗೆಲುವಿನ ಭರವಸೆಯೊಂದಿಗೆ ಕ್ರೀಸ್‌ಗಿಳಿದಿತ್ತು. ಆದರೆ ಟೀಂ ಇಂಡಿಯಾ ಬೌಲರ್‌ಗಳ ಸ್ಪಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ 113.2 ಓವರ್‌ಗಳಿಗೆ ಸರ್ವಪತನ ಕಂಡಿತು.
ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ 11.2 ಓವರ್‌ಗಳಲ್ಲಿ 52 ರನ್ ಗಳಿಸುವ ವೇಳೆಗೆ ಭಾರತ ಎದುರಾಳಿಗಳನ್ನು ಕಟ್ಟಿಹಾಕಿತು. 2ನೇ ಇನ್ನಿಂಗ್ಸ್‌ನಲ್ಲಿ ಜಾಕಿರ್ ಹಸನ್ 224 ಎಸೆತಗಳಲ್ಲಿ 100 ರನ್ (13 ಬೌಂಡರಿ, 1 ಸಿಕ್ಸರ್) ಸಿಡಿದರು. ನಾಯಕ ಶಕೀಬ್ ಅಲ್ ಹಸನ್ 108 ಎಸೆತಗಳಲ್ಲಿ ಸ್ಫೋಟಕ 84 ರನ್ (6 ಬೌಂಡರಿ, 6 ಸಿಕ್ಸರ್) ಚಚ್ಚಿ ಔಟಾದರು. ನಂತರದಲ್ಲಿ ಕ್ರೀಸ್‌ಗಿಳಿದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಬಾಂಗ್ಲಾದೇಶ ಸೋಲಿಗೆ ಶರಣಾಯಿತು. ಇದನ್ನೂ ಓದಿ: ಬಾಂಗ್ಲಾದ ಭಾರ ಹೊತ್ತ ಜಾಕಿರ್ – ಜಯದ ಹೊಸ್ತಿಲಲ್ಲಿ ಭಾರತ
ಕುಲ್‌ದೀಪ್, ಅಕ್ಷರ್ ಸ್ಪಿನ್ ಕಮಾಲ್:
ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ 40 ರನ್ ಗಳಿಸಿ, ಬೌಲಿಂಗ್‌ನಲ್ಲಿ 5 ವಿಕೆಟ್ ಕಬಳಿಸಿದ ಕುಲ್‌ದೀಪ್ 2ನೇ ಇನ್ನಿಂಗ್ಸ್ನಲ್ಲೂ 3 ವಿಕೆಟ್ ಕಬಳಿಸುವ ಮೂಲಕ ಕಮಾಲ್ ಮಾಡಿದರು. ಇನ್ನೂ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ ತೃಪ್ತಿ ಪಡೆಕೊಂಡಿದ್ದ ಅಕ್ಷರ್‌ಪಟೇಲ್ 2ನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದರು.
ಬಾಂಗ್ಲಾ ವಿರುದ್ಧ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಬ್ಯಾಟ್ಸ್‌ಮ್ಯಾನ್ ತಮ್ಮ ಉತ್ತಮ ಲಯ ಮುಂದುವರಿಸಿದ್ದರು. ಭಾರತ ಪರ ಶುಭಮನ್ ಗಿಲ್ 110 ರನ್ (152 ಎಸೆತ, 10 ಬೌಂಡರಿ, 3 ಸಿಕ್ಸ್) ಚಚ್ಚಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಇನ್ನೊಂದೆಡೆ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದ ಪೂಜಾರ 2ನೇ ಇನ್ನಿಂಗ್ಸ್‌ನಲ್ಲಿ 102 ರನ್ (130 ಎಸೆತ, 13 ಬೌಂಡರಿ) ಬಾರಿಸಿ ಶತಕ ಪೂರೈಸಿಕೊಂಡರು. ಇದು ಪೂಜಾರ ಅವರ ಟೆಸ್ಟ್ ವೃತ್ತಿ ಜೀವನದ ವೇಗದ ಹಾಗೂ 19ನೇ ಶತಕವಾಗಿದೆ. ಪೂಜಾರ ಶತಕ ಸಿಡಿಸುತ್ತಿದ್ದಂತೆ 61.4 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 258 ರನ್ ಬಾರಿಸಿದ್ದಾಗ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
Live Tv
[brid partner=56869869 player=32851 video=960834 autoplay=true]
ಟೀಂ ಇಂಡಿಯಾದ (Team India) ಬ್ಯಾಟಿಂಗ್ ವೈಫಲ್ಯ ಹಾಗೂ ಕಳಪೆ ಫೀಲ್ಡಿಂಗ್ ಬಗ್ಗೆಯೂ ಈಗ ಹಲವು ಪ್ರಶ್ನೆಗಳು ಎದ್ದಿವೆ. ಕೆ.ಎಲ್ ರಾಹುಲ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಹಲವು ಆಟಗಾರರ ಕಳಪೆ ಫೀಲ್ಡಿಂಗ್ ಕೂಡ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಗಿದೆ.
43ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದ ಮೆಹಿದಿ ಹಸನ್ ಮಿರಾಜ್ ನೀಡಿದ ಸುಲಭದ ಕ್ಯಾಚ್ ಅನ್ನು ಕೆ.ಎಲ್. ರಾಹುಲ್ ಕೈಚೆಲ್ಲಿದರು. ನಂತರದ ಕ್ಯಾಚ್‌ನಲ್ಲಿ ವಾಷಿಂಗ್ಟನ್ ಸುಂದರ್ ಕನಿಷ್ಠ ಪ್ರಯತ್ನವನ್ನೂ ಮಾಡದ ಕಾರಣ ಕಳಪೆ ಫೀಲ್ಡಿಂಗ್ ನೋಡಿ ರೋಹಿತ್ ಶರ್ಮಾ (Rohit Sharma) ಕ್ರೀಡಾಂಗಣದಲ್ಲೇ ಕೆಂಡಾಮಂಡಲವಾದರು. ತಾಳ್ಮೆ ಕಳೆದುಕೊಂಡ ಹಿಟ್‌ಮ್ಯಾನ್ ಕೆಟ್ಟ ಪದ ಬಳಸಿದರು. ಇದನ್ನೂ ಓದಿ: ಕ್ರಿಕೆಟ್‌ನಲ್ಲೂ ಮೀಸಲಾತಿ ತರಬೇಕು – ನಟ ಚೇತನ್
ರೋಹಿತ್ ಶರ್ಮಾ ಅವರು ಬಳಸಿದ ಪದ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಕ್ಯಾಪ್ಟನ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಹಿರಿಯ ಆಟಗಾರರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು, ಹೀಗೆ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ವೀಡಿಯೋವನ್ನು ಟ್ವಿಟ್ಟರ್‌ನಿಂದ ಡಿಲೀಟ್ ಮಾಡಲಾಗಿದೆ.
ಈ ಕುರಿತು ಮ್ಯಾಚ್ ಮುಗಿದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ನಾವು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ, 186 ಸ್ಕೋರ್ ಉತ್ತಮವಾದುದಲ್ಲ. ಆದರೆ ಬೌಲಿಂಗ್‌ನಲ್ಲಿ ಚೆನ್ನಾಗಿ ಮಾಡಿದ್ದೇವೆ. ಕೊನೆಯವರೆಗೂ ಬೌಲರ್‌ಗಳು ತಮ್ಮ ಹಿಡಿತ ಸಾಧಿಸಿದ್ದರು. ಕೊನೆಯ ಅಂತಿಮ ಕೆಲವು ಓವರ್‌ಗಳಲ್ಲಿ ತಂಡವು ಉತ್ತಮವಾಗಿ ಆಡಬಹುದಿತ್ತು. 10 ವಿಕೆಟ್‌ಗಳನ್ನೂ ಪಡೆಯಬಹುದಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಬಾಂಗ್ಲಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ 46 ಓವರ್‌ಗಳಲ್ಲಿ 187 ರನ್ ಗಳಿಸಿ 1 ವಿಕೆಟ್ ರೋಚಕ ಜಯ ಸಾಧಿಸಿತು.
Live Tv
[brid partner=56869869 player=32851 video=960834 autoplay=true]