Tag: ಶಂಶುದ್ದೀನ್

  • ಬೌಲರ್‌ಗೆ ಎಸೆಯುವ ಬದಲು ಅಂಪೈರ್‌ಗೆ ಎಸೆತ- ಭಾರೀ ಅಪಾಯದಿಂದ ಪಾರು

    ಬೌಲರ್‌ಗೆ ಎಸೆಯುವ ಬದಲು ಅಂಪೈರ್‌ಗೆ ಎಸೆತ- ಭಾರೀ ಅಪಾಯದಿಂದ ಪಾರು

    ರಾಜ್‍ಕೋಟ್: ಬಂಗಾಳ ಮತ್ತು ಸೌರಾಷ್ಟ್ರ ನಡುವ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆನ್-ಫೀಲ್ಡ್ ಅಂಪೈರ್ ಸಿ ಶಂಶುದ್ದೀನ್ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗುಜರಾತ್‍ನ ರಾಜ್‍ಕೋಟ್ ಮೈದಾನದಲ್ಲಿ ಸೋಮವಾರದಿಂದ ರಣಜಿ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಮಾಡಿಕೊಂಡು ಮೊದಲ ದಿನದ ಮುಕ್ತಾಯಕ್ಕೆ 80.5 ಓವರ್‌ಗಳಲ್ಲಿ  5 ವಿಕೆಟ್‍ಗೆ 206 ರನ್ ಪೇರಿಸಿತ್ತು. ಈ ಮಧ್ಯೆ ಫಿಲ್ಡೀಂಗ್ ಮಾಡುತ್ತಿದ್ದ ಬಂಗಾಳದ ಆಟಗಾರರೊಬ್ಬರು ಬೌಲರ್ ಕೈಗೆ ಬಾಲ್ ಎಸೆಯುವ ಬದಲು ದೂರಕ್ಕೆ ಎಸೆದಿದ್ದಾರೆ. ಈ ಬಾಲ್ ನೇರವಾಗಿ ಶಂಶುದ್ದೀನ್ ಅವರ ಮರ್ಮಾಂಗಕ್ಕೆ ಬಿದ್ದಿದೆ.

    ಗಂಭೀರವಾಗಿ ಗಾಯಗೊಂಡ ಅಂಪೈರ್ ಸಿ. ಶಂಶುದ್ದಿನ್ ಅವರು ಮಂಗಳವಾರ ರಣಜಿ ಟ್ರೋಫಿಯ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರು 2ನೇ ದಿನದಾಟಕ್ಕೆ ಅಲಭ್ಯವಾಗಿದ್ದಾರೆ. ಶಂಶುದ್ದೀನ್ ಅವರ ಬದಲಿಗೆ ಸೋಮವಾರ ಹೆಚ್ಚುವರಿ ಅಂಪೈರ್ ಎಸ್.ರವಿ ಮೈದಾಕ್ಕಿಳಿದಿದ್ದರು. ಯಶ್ವಂತ್ ಬಾರ್ಡೆ ಮೂರನೇ ದಿನದಾಟದ ಅಂಪೈರಿಂಗ್ ನಿರ್ವಹಿಸಿದ್ದರು.

    ಸೌರಾಷ್ಟ್ರವು ಎರಡನೇ ದಿನದಾಟದ ಮುಕ್ತಾಯಕ್ಕೆ 160 ಓವರ್ ಗಳಲ್ಲಿ 8 ವಿಕೆಟ್‍ಗೆ 384 ರನ್ ಗಳಿಸಿದೆ.