Tag: ಶಂಕು ಸ್ಥಾಪನೆ

  • ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕು ಸ್ಥಾಪನೆ

    ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕು ಸ್ಥಾಪನೆ

    ಮೈಸೂರು: ಇಂದು ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆನ್‍ಲೈನ್ ಮೂಲಕ ಚಾಲನೆ ನೀಡಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕಕ್ಕೆ ಗೃಹ ಕಚೇರಿ ಕೃಷ್ಣಾದಿಂದ ಸಚಿವರೊಟ್ಟಿಗೆ ಆನ್‍ಲೈನ್ ಮೂಲಕ ಭೂಮಿ ಪೂಜೆಗೆ ಚಾಲನೆ ಕೊಟ್ಟಿದ್ದಾರೆ. ಮೈಸೂರಿನ ಹಾಲಾಳು ಗ್ರಾಮದಲ್ಲಿ ಶಂಕು ಸ್ಥಾಪನೆಯ ಸಮಾರಂಭ ನಡೆದಿದ್ದು, ಹಿರಿಯ ನಟಿ ಭಾರತಿ ಅವರು ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಈಗಾಗಲೇ ತಡವಾಗಿದೆ. ಆದ್ದರಿಂದ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಡಾ.ವಿಷ್ಣುವರ್ಧನ್ ತವರು ಜಿಲ್ಲೆ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

    ಮೈಸೂರು ತಾಲೂಕಿನ ಹೆಚ್.ಡಿ.ಕೋಟೆ ರಸ್ತೆಯ ಮಾರ್ಗದಲ್ಲಿ ಬರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ಪೊಲೀಸ್ ವಸತಿಗೃಹ ನಿರ್ಮಾಣ ಸಂಸ್ಥೆಯ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ 11 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಾಮಗಾರಿ ಪ್ರಾರಂಭಿಸಲು ಸುಮಾರು 5 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಡಾ. ವಿಷ್ಣುವರ್ಧನ್ ಸ್ಮಾರಕವು ಸುಸಜ್ಜಿತವಾಗಿ ನಿರ್ಮಾಣಗೊಳ್ಳಲು ಎಲ್ಲ ರೀತಿಯ ಕ್ರಮಕೈಗೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

    ಡಾ.ವಿಷ್ಣುವರ್ಧನ್ ಸ್ಮಾರಕ ಭವನ 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸ್ಮಾರಕ ನಿರ್ಮಾಣದ ಗುತ್ತಿಗೆಯನ್ನು ಪೊಲೀಸ್ ವಸತಿ ನಿಗಮಕ್ಕೆ ನೀಡಲಾಗುತ್ತಿದೆ. ಎಂ-9 ಡಿಸೈನ್ ಸ್ಟುಡಿಯೋದಿಂದ ಆರ್ಕಿಟೆಕ್ ಡಿಸೈನ್ ಮಾಡಿಸಲಾಗಿದೆ. ಸ್ಮಾರಕದಲ್ಲಿ ವಿಷ್ಣು ಪುತ್ಥಳಿ, ಆಡಿಟೋರಿಯಂ, ಫೋಟೋ ಗ್ಯಾಲರಿ, ಉದ್ಯಾನವನ, ವಾಟರ್ ಪೌಂಡ್ ಇರುತ್ತದೆ.

  • ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

    ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

    ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ರಸ್ತೆಯಲ್ಲಿನ ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಗುರುತಿಸಲಾಗಿದ್ದ ವಿವಾದಿತ ಜಾಗದಲ್ಲಿ ಮಂಡ್ಯದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.

    ಭಾನುವಾರ ಸಂಜೆ ಮಂಡ್ಯದಿಂದ ಬಂದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ವಿವಾದಿತ ಜಾಗದಲ್ಲೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕೂಡ ನೆರವೇರಿಸಿ ಪೂಜೆ ಸಲ್ಲಿಸಿದ್ದಾರೆ.

    ಸರ್ಕಾರವು ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡಿತ್ತು. ಆದರೆ ಸ್ಥಳೀಯ ರೈತರು ಈ ಜಾಗ ತಮ್ಮದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಹೀಗಾಗಿ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ತಡೆ ಬಿದ್ದಿತ್ತು. ಈಗ ಇದೇ ಸ್ಥಳಕ್ಕೆ ಬಂದ ಮಂಡ್ಯದ ವಿಷ್ಣುಸೇನಾ ಸಂಘಟನೆ ಕಾರ್ಯಕರ್ತರು ವಿವಾದಿತ ಜಾಗವನ್ನು ಶುಚಿಗೊಳಿಸಿ ಬಾಳೆ ಕಂಬ, ಹೂ, ಇಟ್ಟಿಗೆ ಇಟ್ಟು ತಮ್ಮ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿ ಅಭಿಮಾನ ತೋರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿ ಆಸ್ತಿಯನ್ನ ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತಾಡ್ತಿದ್ದಾರೆ: ಸಿಎಂ

    ಬಿಬಿಎಂಪಿ ಆಸ್ತಿಯನ್ನ ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತಾಡ್ತಿದ್ದಾರೆ: ಸಿಎಂ

    ಬೆಂಗಳೂರು: ಬಿಬಿಎಂಪಿ ಆಸ್ತಿಯನ್ನು ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಶಂಕರಮಠ ವಾರ್ಡ್ ಹಾಗೂ ಮಹಾಲಕ್ಷ್ಮಿ ಲೇಔಟ್‍ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಜಾಸ್ತಿ ಮಾತಾಡುತ್ತಿದ್ದಾರೆಂದು ಬಿಜೆಪಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಅಂತ ನಿತ್ಯ ಸುಳ್ಳು ಹೇಳಿಕೊಂಡು ರಾಜ್ಯಾದ್ಯಂತ ತಿರುಗಾಡುತ್ತಿದ್ದಾರೆ. ಅವರೂ ಕೆಲಸ ಮಾಡಲ್ಲ, ಒಳ್ಳೆ ಕೆಲಸ ಮಾಡೋರಿಗೂ ಅಡ್ಡಗಾಲು ಹಾಕುತ್ತಾರೆ. ಬಿಜೆಪಿಯವರ ಅಧಿಕಾರವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ, ಕಸ ವಿಲೇವಾರಿ, ಒಳಚರಂಡಿ, ರಾಜಕಾಲುವೆ ಅಭಿವೃದ್ಧಿಯನ್ನ ಮಾಡಲಿಲ್ಲ. ಇವತ್ತಿನ ಬೆಂಗಳೂರಿನ ಪರಿಸ್ಥಿತಿಗೆ ಬಿಜೆಪಿಯವರೇ ಕಾರಣವೆಂದು ವಾಗ್ದಾಳಿ ನಡೆಸಿದರು.

    ರಾಜಕಾಲುವೆ ಅಭಿವೃದ್ಧಿ ಕೆಲಸ ನಾವು ಮಾಡ್ತಿದ್ದೇವೆ. ಸಾವಿರಾರು ಕೋಟಿ ಬೆಂಗಳೂರು ಅಭಿವೃದ್ದಿಗೆ ನಮ್ಮ ಸರ್ಕಾರದಿಂದ ಹಣ ನೀಡಿದ್ದೇವೆ. ಮುಂದಿನ ಅವಧಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಮುಂದಿನ ಅವಧಿಯಲ್ಲಿ ಎಷ್ಟೇ ಕೋಟಿ ಖರ್ಚು ಆದರೂ ಇಡೀ ಬೆಂಗಳೂರಿಗೆ ವೈಟ್ ಟ್ಯಾಪಿಂಗ್ ರೋಡ್ ಹಾಕಿಸುತ್ತೇನೆಂದು ಸಿಎಂ ಘೋಷಣೆ ಮಾಡಿದರು.

    109 ಕೋಟಿ.ರೂ. ವೆಚ್ಚದಲ್ಲಿ, ಉದ್ಯಾನವನದ ಶೆಲ್ಟರ್ ನಿರ್ಮಾಣ, ಈಜುಕೊಳದ ಉನ್ನತೀಕರಣ ಕಾಮಗಾರಿ, ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಪದ್ಮಾವತಿ, ಸಚಿವ ಸೀತಾರಾಂ, ಶಾಸಕರಾದ ಗೋಪಾಲಯ್ಯ, ಮುನಿರತ್ನ ಭಾಗಿಯಾಗಿದ್ದರು.

    ಗೋಪಾಲಯ್ಯ ವಾಗ್ದಾಳಿ: ಇವತ್ತು ಬಿಬಿಎಂಪಿ ಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಇದೆ. ನಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡಿಲ್ಲ. ನಾವು ಅಭಿವೃದ್ಧಿ ಕೆಲಸ ಮಾಡಲು ಹೋದರೆ ಬಿಜೆಪಿಯವರು ವಿನಾಕಾರಣ ವಿರೋಧ ಮಾಡಿ ತೊಂದರೆ ಕೊಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳಾಗಿಲ್ಲ. ನಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಬಿಜೆಪಿ ವಿರುದ್ಧ ಗೋಪಾಲಯ್ಯ ವಾಗ್ದಾಳಿ ನಡೆಸಿದರು.