ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ತೀವ್ರ ತನಿಖೆಗೆ ಇಳಿದಿದ್ದು, ಇದೀಗ ಬಳ್ಳಾರಿಯಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಇಂದು (ಬುಧವಾರ) ಮುಂಜಾನೆ 4 ಗಂಟೆಗೆ ಶಬ್ಬೀರ್ ಎಂಬವನನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಯುವಕನಿಗೂ ಲಿಂಕ್ ಇದ್ಯಾ ಎಂಬ ಅನುಮಾನದ ಮೇಲೆ ಶಬ್ಬೀರ್ ನನ್ನು ತನಿಖೆಗೆ ಒಳಪಡಿಸಲಾಗಿದೆ.
ಶಂಕಿತ ಉಗ್ರ ಬಳ್ಳಾರಿಗೆ ಬಂದ ಸಮಯದಲ್ಲಿ ಕೌಲ್ ಬಜಾರ್ ನಿವಾಸಿ ಶಬ್ಬೀರ್ ನನ್ನು ಭೇಟಿ ಮಾಡಿದ್ದ. ಅಲ್ಲದೇ ಹೈದರಾಬಾದ್‍ಗೆ ಹೋಗಲು ಆತನಿಗೆ ಸಹಾಯ ಮಾಡಿದ್ದ ಎನ್ನುವ ಆರೋಪದ ಮೇಲೆ ಅಧಿಕಾರಿಗಳು ಶಬ್ಬೀರ್ ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಶಂಕಿತ ಉಗ್ರ ಹೈದರಾಬಾದ್‍ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಮಾ.1 ರಂದು ವೈಟ್‍ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು. ಬಳಿಕ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಲಾಗಿದ್ದು, ಶಂಕಿತ ಉಗ್ರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಘಟನೆ ನಡೆದು ವಾರದ ಬಳಿಕ ಅಂದರೆ ಮಹಾಶಿವರಾತ್ರಿಯಂದು ಕೆಫೆಯನ್ನು ರೀ ಓಪನ್ ಮಾಡಲಾಗಿದೆ.
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಇಂದು ಮತ್ತೆರಡು ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ.
ಪಬ್ಲಿಕ್ ಟಿವಿಗೆ ಶಂಕಿತನ ಎಕ್ಸ್‌ಕ್ಲೂಸೀವ್ ವೀಡಿಯೋ ಸಿಕ್ಕಿದೆ. 2.04 ನಿಮಿಷಕ್ಕೆ ಬಿಬಿಎಂಟಿಸಿ ಬಸ್ ಹತ್ತಿರುವ ಶಂಕಿತ, 3.40 ಕ್ಕೆ ಗೊರಗುಂಟೆಪಾಳ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಇಲ್ಲಿಂದ ಹುಮ್ನಾಬಾದ್ ಬಸ್‍ನಲ್ಲಿ ಬಳ್ಳಾರಿ ಕಡೆ ಶಂಕಿತ ಪಯಣ ಮಾಡಿದ್ದಾನೆ. ರಾತ್ರಿ 9 ಗಂಟೆಗೆ ಬಳ್ಳಾರಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ, ಓರ್ವ ವಶಕ್ಕೆ – ಏನಿದು ಐಸಿಸ್ ಬಳ್ಳಾರಿ ಮಾಡ್ಯೂಲ್?
ಬಳ್ಳಾರಿ ಬಸ್‍ನಿಲ್ದಾಣದಲ್ಲೂ ಬಾಂಬರ್ ಓಡಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಶಂಕಿತ ಆ ಕಡೆಯಿಂದ ಈ ಕಡೆಗೆ ಸಿಸಿಟಿವಿಯನ್ನು ಗಮನಿಸಿಕೊಂಡು ಓಡಾಡಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಬಳ್ಳಾರಿಯ ಪೊಲೀಸ್ ಚೌಕಿ ಮುಂದೆಯೇ ಶಂಕಿತ ಓಡಾಟ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ- ನಾಲ್ವರನ್ನು ವಶಕ್ಕೆ ಪಡೆದ NIA
ಮುಂಬೈ: ಕೇರಳದಲ್ಲಿ ಭಾನುವಾರ ರಾತ್ರಿ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ (Central Intelligence) ಮತ್ತು ಭಯೋತ್ಪಾದನಾ ನಿಗ್ರಹ (Anti Terrorism) ಅಧಿಕಾರಿಗಳ ಜಂಟಿ ತಂಡ ಬುಧವಾರ ಶಂಕಿತ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾರುಖ್ ರೈಲಿಗೆ ಬೆಂಕಿ ಹಚ್ಚಿದ ಶಂಕಿತ ಆರೋಪಿಯಾಗಿದ್ದು, ಮಹಾರಾಷ್ಟ್ರದ (Maharashtra) ರತ್ನಗಿರಿ (Ratnagiri) ಜಿಲ್ಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಕೇರಳ ಪೊಲೀಸರ ತಂಡವೂ ರತ್ನಗಿರಿ ತಲುಪಿದ್ದು, ಶಂಕಿತ ಆರೋಪಿಯನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ – ಮೂವರು ಸಾವು
ಪ್ರಕರಣದ ಹಿಂದಿನ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ (Kozhikode) ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ವಾದದ ನಂತರ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಕಣ್ಣೂರು ನಿಲ್ದಾಣದಲ್ಲಿ ರೈಲಿನ ಕೋಚ್‌ಗಳನ್ನು ಪರೀಕ್ಷಿಸಿ ವಿಧಿವಿಜ್ಞಾನ ಸಾಕ್ಷಿಗಳನ್ನು ಸಂಗ್ರಹಿಸಿದೆ. ಘಟನೆಯ ವೇಳೆ ಅಲ್ಲಿದ್ದ ಕೆಲವು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯನ್ನೂ ಎನ್‌ಐಎ ವಿಚಾರಣೆಗೊಳಪಡಿಸಿದೆ. ಇದನ್ನೂ ಓದಿ: ವರನ ಕೊಲೆಗೆ ಸ್ಕೆಚ್ ಹಾಕಿ ಸ್ಫೋಟಕ ತುಂಬಿ ಗಿಫ್ಟ್ ಕೊಟ್ಟ ವಧುವಿನ ಮಾಜಿ ಲವ್ವರ್!
ಪ್ರಕರಣದ ತನಿಖೆಗಾಗಿ ಕೇರಳ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಅಲ್ಲದೇ ಶಂಕಿತ ಆರೋಪಿಯ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ ರಜಾಕ್ ನೀಡಿದ ಸಾಕ್ಷಿ ವಿವರಣೆಯ ಆಧಾರದ ಮೇಲೆ ಪೊಲೀಸರು ಶಂಕಿತ ಆರೋಪಿಯ ರೇಖಾಚಿತ್ರವನ್ನೂ (Sketch) ಬಿಡುಗಡೆ ಮಾಡಿದ್ದರು.
ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಕೇರಳದ (Kerala) ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿತ್ತು. ಈ ವೇಳೆ ಅನಾಮಿಕನೊಬ್ಬ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ, ನಂತರ ಆತನಿಗೆ ಬೆಂಕಿ (Fire) ಹಚ್ಚಿದ ಪರಿಣಾಮ 9 ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದ ಕೂಡಲೇ ವ್ಯಕ್ತಿ ಪರಾರಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಕಚ್ಚಾ ತೈಲ ಮೇಲಿನ ವಿಂಡ್‌ಫಾಲ್ ತೆರಿಗೆ ಕಡಿತಗೊಳಿಸಿದ ಭಾರತ
ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಅದರಲ್ಲೂ 5 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕೋಝಿಕ್ಕೋಡ್‌ನ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ವರದಿಗಳು ತಿಳಿಸಿವೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರೀ ಹಿಮಪಾತ – 6 ಸಾವು, ಹಲವರು ನಾಪತ್ತೆ
ಗದಗ: ಕೊರೊನಾ ಶಂಕಿತ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವ ದೃಶ್ಯ ಗದಗ ನಗರದ ಬೆಟಗೇರಿ ಭಾಗದಲ್ಲಿ ಕಂಡು ಬಂದಿದೆ.
ನಡುರಸ್ತೆಯಲ್ಲಿ ನರಳಾಡಿದ ವ್ಯಕ್ತಿ ನಗರದ ಕುರಹಟ್ಟಿಪೆಟೆ ನಿವಾಸಿ ಎನ್ನಲಾಗಿದೆ. ಗಂಟಲು ನೋವು, ಹೊಟ್ಟೆ ಉರಿ, ಎದೆ ಉರಿ ಎಂದು ಎದೆ ಬಡಿದುಕೊಂಡು ನರಳಾಡುತ್ತಿದ್ದರೂ ಯಾರು ಮುಟ್ಟಿಲ್ಲ. ಕೂಡಲೇ 108 ವಾಹನಕ್ಕೆ ಫೋನ್ ಮಾಡಿದರೂ ವಾಹನ ಬರಲಿಲ್ಲ. ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಇರಬಹುದು ಎಂದು ತಿಳಿದು ಯುವಕನನ ಬಳಿ ಹೋಗಲು ಯಾರೂ ಮುಂದಾಗಿಲ್ಲ. ಅವನ ಸಂಕಷ್ಟದ ಕೂಗು ಕೇಳಲಾಗದೇ ಓರ್ವ ವ್ಯಕ್ತಿ ಸಹಾಯಕ್ಕೆ ಮುಂದಾಗಿದ್ದಾನೆ. ನೀರು ಕುಡಿಸಿ ಸಮಾಧಾನ ಮಾಡಿದ್ದಾನೆ. 108 ಅಂಬುಲೆನ್ಸ್ ತಡವಾಗಿದ್ದಕ್ಕೆ ಅವನೇ ಹೊತ್ತುಕೊಂಡು ಆಸ್ಪತ್ರೆಗೆ ಹೋಗಲು ಮುಂದಾಗಿದ್ದು, ಅಷ್ಟರಲ್ಲಿ ಅಂಬುಲೆನ್ಸ್ ಬಂದ ಹಿನ್ನೆಲೆ ವಾಹನದ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಲ್ಲರೂ ನಿಂತು ನೋಡುವ ಸಂದರ್ಭದಲ್ಲಿ ಓರ್ವ ಯುವಕ ಏನನ್ನು ಯೋಚಿಸದೇ ಅವನ ಸಹಾಯಕ್ಕೆ ಬಂದು ಜೀವ ಉಳಿಸಲು ಮುಂದಾಗಿರುವುದು ನಿಜಕ್ಕೂ ಮೆಚ್ಚಲೇಬೇಕಾದ ವಿಚಾರವಾಗಿದೆ. ನಡುರಸ್ತೆಯಲ್ಲಿ ನರಳಾಡುತ್ತಿದ್ದ ವ್ಯಕ್ತಿ ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕನನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ವರದಿಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕಾಯುತ್ತಿದೆ.
ಮಡಿಕೇರಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಶಂಕಿತ ವೃದ್ಧ ರೋಗಿಯೊಬ್ಬ ಎಸ್ಕೇಪ್ ಆಗಲು ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೇರಳದ ವಯನಾಡಿನ 70 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ಶಂಕೆಯ ಆಧಾರದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈ ವೃದ್ಧ ಆಸ್ಪತ್ರೆಯಿಂದ ಹೊರಬಂದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಒಂದು ಕ್ಷಣಕ್ಕೆ ದಿಗ್ಭ್ರಮೆಗೊಂಡಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡ ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ ಪೊಲೀಸ್ ಸಹಾಯ ಪಡೆದು ವೃದ್ಧನನ್ನು ಹುಡುಕಾಡಿದ್ದಾರೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವೃದ್ಧ ಮಡಿಕೇರಿ ನಗರದ ಶಾಂತಿ ಚರ್ಚ್ ಬಳಿ ಹೋಗುತ್ತಿದ್ದ ಎನ್ನಲಾಗಿದೆ. ಅಲ್ಲಿಗೆ ಹುಡುಕಿಕೊಂಡು ಹೋದ ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ ಆತನನ್ನು ಕರೆತಂದಿದ್ದಾರೆ. ಬಳಿಕ ಸಾರ್ವಜನಿಕ ಜೀಪ್ ಒಂದರ ಮೂಲಕ ಆಸ್ಪತ್ರೆಗೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿ: ಕೊರೊನಾ ವೈರಸ್ ಶಂಕಿತ ವ್ಯಕ್ತಿ 7ನೇ ಮಹಡಿಯಿಂದ ಜಿಗಿದು ಆತ್ಮಹೆತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ತನ್ವೀರ್ ಎಂದು ಗುರುತಿಸಲಾಗಿದ್ದು, ಪಂಜಾಬ್ ಮೂಲದ ತನ್ವೀರ್ ಸಿಂಗ್ ಬುಧವಾರ ಸಂಜೆ ಸಿಡ್ನಿಯಿಂದ ಹಿಂದಿರುಗಿದ್ದ. ಈತನನ್ನು ಪರೀಕ್ಷೆಗಾಗಿ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಯ ಎಸ್‍ಎಸ್‍ಬಿ ಕಟ್ಟಡಕ್ಕೆ ಕರೆತರಲಾಗಿತ್ತು. ರಾತ್ರಿ 9 ಗಂಟೆಗೆ ವೇಳೆಗೆ ಎಸ್‍ಎಸ್‍ಬಿ ಕಟ್ಟಡ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Devender Arya, Deputy Commissioner of Police (South West): A suspected #COVID19 patient committed suicide by jumping from the Safdarjung Hospital. The deceased has been identified as Tanveer Singh, he was admitted at hospital today at 9 pm after returning from Sydney, Australia. pic.twitter.com/DKCeKZgtYT
ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಆತನ ಗಂಟಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರುವುದನ್ನು ಕಾಯುತ್ತಿದ್ದೆವು. ಅಷ್ಟರಲ್ಲೇ ಪಿಎಸ್-ಸಫ್ದರ್‍ಜಂಗ್ ಎನ್‍ಕ್ಲೇವ್ ವೈಡ್ ಡಿಡಿ ನಂ.42ಎ ನಂಬರ್ ನ ರೋಗಿ ಎಸ್‍ಎಸ್‍ಬಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದವನನ್ನು 35 ವರ್ಷದ ಪುರುಷ ಎಂದು ಗುರುತಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೊನಾ ಶಂಕಿತ ವ್ಯಕ್ತಿಯನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆ ತಂದು ರಾತ್ರಿ 9ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಎಐ-301 ನಂಬರಿನ ವಿಮಾನದಲ್ಲಿ ಸಿಡ್ನಿಯಿಂದ ಆಗಮಿಸಿದ್ದ. ಕಳೆದ ಒಂದು ವರ್ಷದಿಂದ ಸಿಡ್ನಿಯಲ್ಲೇ ನೆಲೆಸಿದ್ದ. ಈತನಿಗೆ ವಿಪರೀತ ತಲೆನೋವು ಇತ್ತು ಎಂದು ನೋಡೆಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್‍ನಿಂದಾಗಿ 3ಜನ ಸಾವನ್ನಪ್ಪಿದ್ದು, 151 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಮಂಗಳೂರು: ಮಂಗಳೂರು ವಿಮಾನದಲ್ಲಿ ಬಾಂಬ್ ಇಟ್ಟು ಹೋದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಶಂಕಿತ ಉಗ್ರನ ಚಲನವಲನಗಳ ಒಟ್ಟು 13 ವಿಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಟೊಪ್ಪಿ ಧರಿಸಿದ್ದ ಶಂಕಿತ ಉಗ್ರ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಆಟೋದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಬಳಿಕ ಕಾರ್ ಪಾರ್ಕಿಂಗ್ ಮಧ್ಯದ ರಸ್ತೆಯಲ್ಲಿ ನಡೆದುಕೊಂಡು ವಿಮಾನ ನಿಲ್ದಾಣ ಪ್ರವೇಶಿಸಿದ್ದ. ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಇಟ್ಟು ಕೈಯಲ್ಲಿ ಒಂದು ಪುಸ್ತಕ ಹಿಡಿದು ಅಲ್ಲಿಂದ ಎಸ್ಕೆಲೇಟರ್ ಮೂಲಕ ಕೆಳಗೆ ಇಳಿದು ಬಂದಿದ್ದ. ಬಳಿಕ ಹೊರ ಬಂದು ವೇಗವಾಗಿ ಹೆಜ್ಜೆ ಹಾಕಿ ಆಟೋ ಹತ್ತಿ ಶಂಕಿತ ಪರಾರಿಯಾಗಿದ್ದಾನೆ. ಶಂಕಿತ ಉಗ್ರನ ಚಲನವಲನದ ಒಟ್ಟು 13 ವಿಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಏರ್‌ಪೋರ್ಟ್ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ
ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಬಾಂಬ್ ಇಟ್ಟು ವಾಪಸ್ ಹೋದವ ಸ್ಫೋಟಕವಿದ್ದ ಬ್ಯಾಗ್ ಬಿಟ್ಟು ಹೋಗಿದ್ದ. ಈ ಸಂಬಂಧ ಶಂಕಿತನ ಫೋಟೋ ಮತ್ತು ರಿಕ್ಷಾದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳಲು ಆರಂಭವಾಯಿತೋ ಆಗ ರಿಕ್ಷಾ ಚಾಲಕ ಶಾಕ್ ಆಗಿದ್ದ. ಕೂಡಲೇ ಪೊಲೀಸರ ಮುಂದೆ ಆತ ಹಾಜರಾಗಿ ಇರುವ ವಿಷಯವನ್ನು ತಿಳಿಸಿದ್ದ. ರಾತ್ರಿ ಪೊಲೀಸರು ಆತನನ್ನು ವಿಚಾರಣೆ ನಡೆಸಿ ಬಿಟ್ಟುಬಿಟ್ಟಿದ್ದರು. ಇದನ್ನೂ ಓದಿ: ಬಾಂಬ್ ಪತ್ತೆ ಪ್ರಕರಣದ ಬಗ್ಗೆ ನಾಯಕರು ಜವಾಬ್ದಾರಿ ಅರಿತು ಮಾತನಾಡಬೇಕು: ಹರ್ಷ
ಎರಡು ಬ್ಯಾಗ್: ಖಾಸಗಿ ಬಸ್ಸಿನಲ್ಲಿ ಬಂದ ಮಧ್ಯ ವಯಸ್ಕ ಶಂಕಿತ ವ್ಯಕ್ತಿ ಬಳಿಯಲ್ಲಿ ಎರಡು ಬ್ಯಾಗ್ ಇತ್ತು. ಕೆಂಜಾರಿನಲ್ಲಿ ಇಳಿದ ಆತ ಒಂದು ಬ್ಯಾಗನ್ನು ಸೆಲೂನ್ ಅಂಗಡಿ ಬಳಿ ಇರಿಸಿದ್ದ. ಈ ವೇಳೆ ಮಾಲೀಕರು ಆ ಬ್ಯಾಗನ್ನು ಹೊರಗಡೆ ಇಡು ಎಂದು ಹೇಳಿದ್ದರು. ಹೀಗಾಗಿ ಬ್ಯಾಗನ್ನು ಹೊರಗಡೆ ಇಟ್ಟು ಆತ ರಿಕ್ಷಾ ಏರಿ ವಿಮಾನ ನಿಲ್ದಾಣದ ಕಡೆ ಪ್ರಯಾಣಿಸಿದ್ದ.
ಬೆಳಗ್ಗೆ 8:50ಕ್ಕೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಹೊರ ಭಾಗದಲ್ಲಿ ಬ್ಯಾಗ್ ಇರಿಸಿ ರಿಕ್ಷಾ ಏರಿದ್ದ. ಬಜ್ಪೆ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದವ ಆಟೋದಲ್ಲಿ ಚಾಲಕನೊಂದಿಗೆ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದ. ಬಳಿಕ ಕೆಂಜಾರಿಗೆ ತೆರಳಿ ಅಂಗಡಿಯಲ್ಲಿ ಇಟ್ಟಿದ್ದ ಬ್ಯಾಗನ್ನು ಎತ್ತಿಕೊಂಡಿದ್ದ. ಪ್ರಯಾಣದ ಅವಧಿಯಲ್ಲಿ ಯಾವುದೇ ಆತಂಕ ತೋರಿಸಿಕೊಂಡಿಲ್ಲ. ಆರಾಮಾಗಿ ಮಾತನಾಡುತ್ತಾ ಪಂಪ್‍ವೆಲ್ ತಲುಪಿ ರಿಕ್ಷಾ ಚಾಲಕನಿಗೆ 400 ರೂ. ನೀಡಿದ್ದ. ಇದನ್ನೂ ಓದಿ: ಏರ್‌ಪೋರ್ಟ್ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ