Tag: ಶಂಕರ್

  • ನಿರ್ದೇಶಕ ಶಂಕರ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಣ್‌ವೀರ್ ಸಿಂಗ್

    ನಿರ್ದೇಶಕ ಶಂಕರ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಣ್‌ವೀರ್ ಸಿಂಗ್

    ಕೆಲ ವರ್ಷಗಳಿಂದ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಚಿತ್ರರಂಗವನ್ನ ಶೇಕ್ ಮಾಡಿದೆ. ಇದೀಗ ಖ್ಯಾತ ನಿರ್ದೇಶಕ ಶಂಕರ್(Director Shankar) ಕೂಡ ಇಂತಹದ್ದೇ ಪ್ರಯಕ್ಕೆ ಕೈ ಹಾಕಿದ್ದಾರೆ. ಸ್ಟಾರ್ ನಟ ರಣ್‌ವೀರ್‌‌ ಸಿಂಗ್‌ಗೆ (Ranveer Singh) ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ.

    ಶಂಕರ್ ಮತ್ತು ರಣ್‌ವೀರ್ ಸಿಂಗ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿದೆ. ತಮಿಳು ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿರುವ `ವೆಲ್‌ಪರಿ'(Velpari) ಎಂಬ ಐತಿಹಾಸಿಕ ಕಾದಂಬರಿಯನ್ನ ಈ ಚಿತ್ರ ಆಧರಿಸಿದೆ. ವೆಂಕಟೇಶನ್ ಬರೆದಿರುವ ವೆಲ್‌ಪರಿ ಕಾದಂಬರಿಯನ್ನ ತೆರೆಯ ಮೇಲೆ ಅದ್ದೂರಿ ತೋರಿಸಲು ಶಂಕರ್ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:ಬಹಿರಂಗವಾಗಿ ನೋವು ಹಂಚಿಕೊಂಡ ರಶ್ಮಿಕಾ: ನೋವು ಕೊಟ್ಟೋರು ಉದ್ದಾರಾಗ್ತಾರಾ ಎಂದ ಫ್ಯಾನ್ಸ್

    ಈ ಸಿನಿಮಾದಲ್ಲಿ ಎಲ್ಲವೂ ಇದೆ. ಒಂದು ಅದ್ಭುತವಾದ ಪ್ರೇಮಕಥೆಯ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲವನ್ನೂ ಒಳಗೊಂಡಿದೆ. ಗ್ರಾಫಿಕ್ಸ್ ಈ ಚಿತ್ರದಲ್ಲಿ ಪಾತ್ರ ವಹಿಸಲಿದೆ. ಇನ್ನೂ ಮಾಡಿರದ ವಿಭಿನ್ನ ಪಾತ್ರದಲ್ಲಿ ರಣ್‌ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

    ಶಂಕರ್ ಮತ್ತು ರಣ್‌ವೀರ್ ಈ ಕಾಂಬಿನೇಷನ್ನ ‌ʻಅನ್ನಿಯನ್ʼ ಚಿತ್ರ ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ರಾಮ್‌ಚರಣ್ ಸಿನಿಮಾ ಮತ್ತು ಕಮಲ್ ಹಾಸನ್ ನಟನೆಯ `ಇಂಡಿಯನ್‌ 2′ ನಂತರ ರಣ್‌ವೀರ್ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಶುರುವಾದ ‘ಇಂಡಿಯನ್ 2’ ಸಿನಿಮಾ: ಕಮಲ್ ಹಾಸನ್ ಫ್ಯಾನ್ಸ್ ಗೆ ಹಬ್ಬವೋ ಹಬ್ಬ

    ಮತ್ತೆ ಶುರುವಾದ ‘ಇಂಡಿಯನ್ 2’ ಸಿನಿಮಾ: ಕಮಲ್ ಹಾಸನ್ ಫ್ಯಾನ್ಸ್ ಗೆ ಹಬ್ಬವೋ ಹಬ್ಬ

    ವಿಕ್ರಮ್ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುಗುತ್ತಿರುವ ಕಮಲ್ ಹಾಸನ್ ಅಭಿಮಾನಿಗಳಿಗೆ ಇವತ್ತು ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಎರಡು ವರ್ಷಗಳ ಹಿಂದೆ ನಿಂತಿದ್ದ ಇಂಡಿಯನ್ 2 ಸಿನಿಮಾ ಮತ್ತೆ ಚಾಲನೆ ಸಿಕ್ಕಿದ್ದು, ಈ ಕುರಿತು ಚಿತ್ರತಂಡವು ಹೊಸ ಲುಕ್ ರಿಲೀಸ್ ಮಾಡುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ರಿಲೀಸ್ ಆಗಿರುವ ನಯಾ ಲುಕ್ ನೋಡಿ ಕಮಲ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಇಂಡಿಯನ್ 2 ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯಬೇಕಿತ್ತು. 2020ರಲ್ಲಿ ನಿರ್ದೇಶಕ ಶಂಕರ್ ಈ ಸಿನಿಮಾದ ಚಿತ್ರೀಕರಣ  ಶುರು ಮಾಡಿದ್ದರು. ಆದರೆ, ಕ್ರೇನ್ ದುರಂತಕ್ಕೆ ಕಾರ್ಮಿಕರು ಬಲಿಯಾಗಿ, ಅಲ್ಲಿಗೆ ಶೂಟಿಂಗ್ ನಿಲ್ಲಿಸಿದ್ದರು. ನಂತರದ ದಿನಗಳಲ್ಲಿ ಕೋವಿಡ್ ಎಂಬ ಮಹಾಮಾರಿ ಕಾಲಿಟ್ಟಿತ್ತು. ಹಾಗಾಗಿ ಎರಡು ವರ್ಷಗಳ ಕಾಲ ಅವರು ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಇಂದು ಇಂಡಿಯನ್ 2 ಸಿನಿಮಾದ ಅಪ್ ಡೇಟ್ ವಿವರನ್ನು ನಿರ್ದೇಶಕ ಶಂಕರ್ ನೀಡಿದ್ದು, ಅತೀ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. 1996ರಲ್ಲಿ ಇಂಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸನಲ್ಲಿ ಭಾರೀ ಗಳಿಕೆ ಮಾಡಿತ್ತು. ಆನಂತರ ಇಂಡಿಯನ್ 2 ಸಿನಿಮಾ ಮಾಡುವ ವಿಚಾರ ಬಂತು. 24 ವರ್ಷಗಳ ಬಳಿಕೆ ಇಂಡಿಯನ್ ಸಿಕ್ವೆಲ್ ಸಿನಿಮಾ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದಿಂದ ಕೈತಪ್ಪಿ ಹೋಗ್ತಾರಾ ನ್ಯಾಷನಲ್ ಸ್ಟಾರ್ ಯಶ್?

    ಕನ್ನಡದಿಂದ ಕೈತಪ್ಪಿ ಹೋಗ್ತಾರಾ ನ್ಯಾಷನಲ್ ಸ್ಟಾರ್ ಯಶ್?

    ಕೆಜಿಎಫ್ 2 ಸಿನಿಮಾದ ಯಶಸ್ಸಿನ ನಂತರ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ರಾಶಿ ರಾಶಿ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಅವರ ಮುಂದಿನ ಸಿನಿಮಾ ನರ್ತನ್ ಮಾಡಲಿದ್ದಾರೆ ಎನ್ನುವುದರಿಂದ ಹಿಡಿದು, ಅವರು ತಮಿಳು ನಿರ್ದೇಶಕ ಶಂಕರ್ ಅವರ ಚಿತ್ರಕ್ಕೂ ಸಹಿ ಮಾಡಿದ್ದಾರೆ ಎನ್ನುವತನಕ ಸುದ್ದಿಗಳಿವೆ. ಆದರೆ, ಯಶ್ ಈವರೆಗೂ ಹೊಸ ಸಿನಿಮಾದ ಬಗ್ಗೆ ತುಟಿ ಬಿಚ್ಚಿಲ್ಲ.

    ಈಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಸುದ್ದಿ ಹರಡಿದೆ. ಸದ್ಯಕ್ಕೆ ನರ್ತನ್ ಅವರ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲವಾದ್ದರಿಂದ ಅವರು ತಮಿಳು ನಿರ್ದೇಶಕರಿಗೆ ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ ಈ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನುವ ಸುದ್ದಿಯೂ ಜೊತೆಗಿದೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

    ನರ್ತನ್ ಜೊತೆ ಮಾಡಬೇಕಿದ್ದ ಸಿನಿಮಾವನ್ನು ಈ ತಮಿಳು ನಿರ್ದೇಶಕರ ಸಿನಿಮಾ ನಂತರ ಮಾಡಲಿದ್ದಾರಂತೆ ಯಶ್. ಅಲ್ಲಿವರೆಗೂ ನರ್ತನ್ ಬೇರೆ ನಟರಿಗೆ ಸಿನಿಮಾ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆ ತಮಿಳು ನಿರ್ದೇಶಕ ಕಂಡಿತಾ ಶಂಕರ್ ಅಲ್ಲವಂತೆ. ಆದರೆ, ಶಂಕರ್ ಅವರಷ್ಟೇ ಖ್ಯಾತಿ ಪಡೆದ ನಿರ್ದೇಶಕರು ಯಶ್ ಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಯಶ್ ಏನು ಸ್ಪಷ್ಟನೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಐದು ವರ್ಷ ಯಶ್ ಖಾಲಿ ಇಲ್ಲ : ಅವರಿಗಾಗಿ ಕಾದಿವೆ ಭಾರೀ ಬಜೆಟ್ ಚಿತ್ರಗಳು

    ಐದು ವರ್ಷ ಯಶ್ ಖಾಲಿ ಇಲ್ಲ : ಅವರಿಗಾಗಿ ಕಾದಿವೆ ಭಾರೀ ಬಜೆಟ್ ಚಿತ್ರಗಳು

    ಕೆಜಿಎಫ್ ಸಿನಿಮಾದ ನಂತರ ಯಶ್ ನಡೆ ಏನು ಎನ್ನುವುದು ಈವರೆಗೂ ಕುತೂಹಲಕಾರಿಯಾಗಿಯೇ ಉಳಿದುಕೊಂಡಿದೆ. ಕೆಜಿಎಫ್ 2 ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಾಕಿ ಭಾಯ್, ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದೂ ಕೂಡ ಸಸ್ಪೆನ್ಸ್. ಕನ್ನಡದಲ್ಲಿ ಈಗಾಗಲೇ ಒಂದು ಸಿನಿಮಾದ ಹೆಸರು ಓಡಾಡುತ್ತಿದ್ದರೆ ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲೂ ಸಿನಿಮಾ ಮಾಡಲಿದ್ದಾರೆ ಎಂದೂ ಸುದ್ದಿ ಆಗಿದೆ. ಹಾಗಾಗಿ ಯಶ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

    ಯಶ್ ಅವರ ಆಪ್ತರ ಪ್ರಕಾರ ಈಗಾಗಲೇ ಅವರಿಗಾಗಿ ನಾಲ್ಕು ಸಿನಿಮಾಗಳು ಕಾಯುತ್ತಿವೆಯಂತೆ. ಅಲ್ಲಿಗೆ ಬರೋಬ್ಬರಿ ಐದು ವರ್ಷಗಳ ಕಾಲ ಯಶ್ ಬುಕ್ ಆಗಿದ್ದಾರೆ ಎನ್ನುವ ಸುದ್ದಿಯೂ ಇದೆ. ಈ ನಾಲ್ಕು ಸಿನಿಮಾಗಳು ಯಾವಾಗೆಲ್ಲ ಬರಬೇಕು ಎನ್ನುವುದು ಕೂಡ ಪಕ್ಕಾ ರೆಡಿಯಾಗಿದೆಯಂತೆ. ಹಾಗಾಗಿ, ಯಶ್ ಯಾವುದೇ ಕಾರಣಕ್ಕೂ ಅವಸರ ಮಾಡುತ್ತಿಲ್ಲವಂತೆ. ಪಕ್ಕಾ ಪ್ಲ್ಯಾನ್ ಜೊತೆಗೆ ಅವರು ಮುಂದಿನ ನಡೆಯನ್ನು ಇಡಲಿದ್ದಾರಂತೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ಮೊದಲು ಕನ್ನಡದಲ್ಲೇ ಸಿನಿಮಾ ಮಾಡಲಿದ್ದು, ಈ ಚಿತ್ರಕ್ಕೆ ನರ್ತನ್ ನಿರ್ದೇಶನವಿದೆ. ಬಹುತೇಕ ಸ್ಕ್ರಿಪ್ಟ್ ಕೂಡ ರೆಡಿಯಿದೆಯಂತೆ. ಮೊದಲು ಇದೇ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಯಶ್. ನಂತರ ದಿಲ್ ರಾಜುಗಾಗಿ ಒಂದು ಸಿನಿಮಾವನ್ನು ಮಾಡಲಿದ್ದಾರಂತೆ. ಈ ಎರಡೂ ಸಿನಿಮಾಗಳು ಮುಗಿದ ನಂತರ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗಾಗಿ ಯಶ್ ಸಿನಿಮಾ ಮಾಡಲಿದ್ದಾರಂತೆ. ಈ ಮೂರು ಸಿನಿಮಾಗಳ ನಂತರ ಕೆಜಿಎಫ್ 3 ಸಿನಿಮಾ ಬರಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ಶ್ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ. ಮೊನ್ನೆಯಷ್ಟೇ ಯಶ್ ಗಾಗಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದು, 100 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಸುದ್ದಿ ಆಯಿತು.  ಅದಕ್ಕೂ ಮುನ್ನ ಕೆವಿಎನ್ ಪ್ರೊಡಕ್ಷನ್ ಹೌಸ್ ಕಡೆಯಿಂದ  ಯಶ್ ಮುಂದಿನ ಸಿನಿಮಾ ನಿರ್ಮಾಣ ಅಂತಾಯಿತು. ತೆಲುಗು ಸಿನಿಮಾ ನಿರ್ದೇಶಕರಿಗೂ ಯಶ್ ಕಾಲ್ ಶೀಟ್ ಕೊಟ್ಟಿದ್ದಾರೆ  ಅನ್ನುವ ಸುದ್ದಿಯೂ ಹರಡಿತ್ತು. ಸದ್ಯ ನರ್ತನ್ ಜೊತೆ ಸಿನಿಮಾ ಮಾಡುವ ವಿಚಾರವೂ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಹೊಸ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.

    ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟರಿಗೆ ಅದ್ಭುತವಾದ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಶಂಕರ್ ಕೂಡ ತಮ್ಮ ಸಿನಿಮಾದ ಮೂಲಕ ಸಾವಿರಾರು ಕೋಟಿ ಬಾಚಿದವರು. ಯಶ್ ನಟನೆಯ ಕೆಜಿಎಫ್ 2 ಚಿತ್ರ ಕೂಡ ಸಾವಿರ ಕೋಟಿ ಹಣ ಗಳಿಸಿದೆ. ಹಾಗಾಗಿ ಸಾವಿರದ ಸರದಾರರು ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಹಾಗಂತ ಯಾವುದೇ ತಂಡದಿಂದ ಬಂದಿರುವ ಹೇಳಿಕೆ ಇವಲ್ಲ. ಗಾಸಿಪ್ ರೀತಿಯಲ್ಲೂ ಹರಡಿರಬಹುದು. ಅಥವಾ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ಶಂಕರ್ ನಿರ್ದೇಶನ ಮತ್ತು ಯಶ್ ನಟ ಅಂತಾನೂ ಆಗಬಹುದು. ಒಟ್ಟಿನಲ್ಲಿ ಯಶ್ ಅವರ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಹರಡುತ್ತಿವೆ. ಅಭಿಮಾನಿಗಳಿಗಂತೂ ಆ ಸುದ್ದಿಗಳು ಥ್ರಿಲ್ ನೀಡುತ್ತಿವೆ.

    Live Tv

  • ವಾಮನ ಸಿನಿಮಾಗೆ ಎಂಟ್ರಿ ಕೊಟ್ಟ ಸಂಪತ್: ಮೂರು ಶೇಡ್ ಪಾತ್ರದಲ್ಲಿ ಖಳನಟ

    ವಾಮನ ಸಿನಿಮಾಗೆ ಎಂಟ್ರಿ ಕೊಟ್ಟ ಸಂಪತ್: ಮೂರು ಶೇಡ್ ಪಾತ್ರದಲ್ಲಿ ಖಳನಟ

    ನ್ವೀರ್ ಗೌಡ ನಟಿಸ್ತಿರುವ ಬಹುನಿರೀಕ್ಷಿತ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗ್ಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇದೀಗ ವಾಮನ ಬಳಗಕ್ಕೆ ಮತ್ತೊಬ್ಬ ಸದಸ್ಯ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟ, ಖಳನಾಯಕನ ಪಾತ್ರಧಾರಿ ಸಂಪತ್ ವಾಮನ ತಂಡ ಸೇರಿಕೊಂಡಿದ್ದಾರೆ.

    ವಾಮನ ಪಾತ್ರದಲ್ಲಿ ಸಂಪತ್ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇಡೀ ಮಾಫಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಕ್ರೂರಿಯಾಗಿ ಬದುಕುವ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಶೇಡ್ ನಲ್ಲಿ ಸಂಪತ್ ಅಬ್ಬರಿ ಬೊಬ್ಬಿರಿಯಲಿದ್ದು, ಅವರ ಪಾತ್ರಕ್ಕಾಗಿಯೇ ಪ್ರತ್ತೇಕ್ಷವಾಗಿ ಕಾಸ್ಟ್ಯೂಮ್ ಡಿಸೈನ್ ಎನ್ನುತ್ತಾರೆ ನಿರ್ದೇಶಕ ಶಂಕರ್. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಬರಹಗಾರನಾಗಿ, ಸಂಭಾಷಣೆಗಾರನಾಗಿ ಗುರುತಿಸಿಕೊಂಡಿರುವ ಶಂಕರ್ ರಾಮನ್ ಎಸ್ ವಾಮನ ಸಿನಿಮಾ ಮೂಲಕ ನಿರ್ದೇಶನದ ಮೊದಲ ಹೆಜ್ಜೆ ಇಟ್ಟಿದ್ದು, ಶಂಕರ್ ಕನಸಿಗೆ ಫ್ಯಾಷನೇಟೇಡ್ ಪ್ರೊಡ್ಯೂಸರ್ ಚೇತನ್ ಗೌಡ ಸಾಥ್ ಕೊಟ್ಟಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ಮೂಡಿ ಬರ್ತಿರುವ ಮಾಸ್ ಆಕ್ಷನ್ ಎಂಟರ್ಟೇನರ್ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ಜೋಡಿಯಾಗಿ ರಚನಾ ರೈ ನಟಿಸ್ತಿದ್ದು, ಮಹೇನ್ ಸಿಂಹ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಃ ಸಂಕಲನ, ಅರ್ಜುನ್ ರಾಜ್, ಜಾಲಿ ಬಾಸ್ಟಿನ್ ಸಾಹಸಸಿನಿಮಾಕ್ಕಿದೆ.

    ಲೈವ್ ಲೋಕೇಷನ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ಸ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ವಾಮನ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಚೇತನ್ ಗೌಡ, ದೊಡ್ಡ ಮಟ್ಟದ ಸಿನಿಮಾ ಮಾಡುವ ಆಸಕ್ತಿ-ಶಕ್ತಿ ಎರಡು ಅವರಲಿದೆ ಎನ್ನುತ್ತಾರೆ ನಿರ್ದೇಶಕ ಶಂಕರ್.

  • ಶೂಟಿಂಗ್‍ಗಾಗಿ ರಾಜಮಂಡ್ರಿಗೆ ಬಂದಿಳಿದ ರಾಮ್ ಚರಣ್ – ಅಭಿಮಾನಿಗಳಿಂದ ನೂಕು ನುಗ್ಗಲು

    ಶೂಟಿಂಗ್‍ಗಾಗಿ ರಾಜಮಂಡ್ರಿಗೆ ಬಂದಿಳಿದ ರಾಮ್ ಚರಣ್ – ಅಭಿಮಾನಿಗಳಿಂದ ನೂಕು ನುಗ್ಗಲು

    ಹೈದರಾಬಾದ್: ಆರ್‌ಸಿ 15 ಚಿತ್ರೀಕರಣಕ್ಕಾಗಿ ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರು ಆಂಧ್ರಪ್ರದೇಶದ ರಾಜಮಂಡ್ರಿಯ ರಾಜಾಜಿನಗರಕ್ಕೆ ಬಂದಿಳಿದ ತಕ್ಷಣ ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿ ಚರಣ್ ಅವರನ್ನು ಕಾಣಲು ಮುಗಿಬಿದ್ದಿದ್ದಾರೆ.

    ರಾಮ್ ಚರಣ್ ತಮ್ಮ ಮುಂಬರುವ ಚಿತ್ರ ಆರ್‍ಆರ್‍ಆರ್ ಬಿಡುಗಡೆಗಾಗಿ ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರವು ಮಾರ್ಚ್ 25 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ತೆಲುಗು ಅಲ್ಲದೆ, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಸಹ ಚಿತ್ರವು ಬಿಡುಗಡೆಯಾಗಲಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿದ ಬಾಲಿವುಡ್ ನಟಿ ರಾಖಿ ಸಾವಂತ್

     

    View this post on Instagram

     

    A post shared by Kamlesh Nand (work) (@artistrybuzz_)

    ಫೆಬ್ರವರಿ 13 ರಂದು, ರಾಮ್ ಚರಣ್ ಮತ್ತು ಅವರ ತಂಡವು ಆರ್‌ಸಿ 15 ರ ಶೂಟಿಂಗ್‍ಗಾಗಿ ರಾಜಮಂಡ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇದನ್ನೂ ಗಮನಿಸಿದ ಅಭಿಮಾನಿಗಳು ಚರಣ್ ಅವರ ದರ್ಶನ ಪಡೆಯಲು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದರು.

    ವಿಮಾನ ನಿಲ್ದಾಣದಿಂದ ಅವರು ರಾಜಮಂಡ್ರಿಯ ಪ್ರತಿಷ್ಠಿತ ಹೋಟೆಲ್‍ವೊಂದಕ್ಕೆ ತೆರಳುತ್ತಿದ್ದಾಗ ಅಭಿಮಾನಿಗಳು ರಸ್ತೆಯ ಎರಡೂ ಬದಿಯಲ್ಲಿ ಸಾಲುಗಟ್ಟಿ ನಿಂತು ಚರಣ್‍ಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಈ ಸಂದರ್ಭದಲ್ಲಿ ರಾಮ್ ಚರಣ್ ಬೌನ್ಸರ್‌ಗಳು ಅಭಿಮಾನಿಗಳನ್ನು ಚದುರಿಸಲು ಹರ ಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ: ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಆರ್‌ಸಿ 15 ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರವಾಗಿದೆ. ಈ ಚಿತ್ರವನ್ನು ಶಂಕರ್ ಅವರು ನಿರ್ದೇಶಿಸಿದ್ದು, ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ಚಿತ್ರವನ್ನು ಉದ್ದೇಶಿಸಿ ಮಾತನಾಡಿದ್ದು, ನಾನು ಈ ರಾಜಕೀಯ ಕಥೆಯನ್ನು ಹಲವು ವರ್ಷಗಳ ಹಿಂದೆ ಬರೆದಿದ್ದೇನೆ. ನನಗೆ ಬಹಳ ಹಿಂದೆಯೇ ಶಂಕರ್ ಸರ್ ಈ ಚಿತ್ರವನ್ನು ನಿರ್ದೇಶಿಸಿದರೆ ಉತ್ತಮವಾಗಿರುತ್ತದೆ ಅಂತ ಅನಿಸಿತ್ತು. ಹೀಗಾಗಿ ನಾನು ಈ ಕಥೆಯನ್ನು ಅವರಿಗೆ ನೀಡಿದಾಗ ಅವರು ಅದನ್ನು ಇಷ್ಟಪಟ್ಟರು. ಅವರು ಈಗಾಗಲೇ ಈ ಕಥೆಯನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದಾರೆ. ನಾನು ಅವರೊಂದಿಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಅತ್ಯಂತ ಸಂತೋಷ ಮತ್ತು ಹೆಮ್ಮೆಯೆನಿಸುತ್ತದೆ.

    ರಾಮ್ ಚರಣ್ ಹೊರತಾಗಿ, ಆರ್‌ಸಿ 15 ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಅಂಜಲಿ, ಜಯರಾಮ್, ಸುನಿಲ್, ಶ್ರೀಕಾಂತ್ ಮತ್ತು ನವೀನ್ ಚಂದ್ರ ನಟಿಸಿದ್ದಾರೆ. ಛಾಯಾಗ್ರಾಹಕ ತಿರುರು, ಸಂಕಲನಕಾರ ಶಮೀರ್ ಮುಹಮ್ಮದ್ ಮತ್ತು ಸಂಗೀತ ಸಂಯೋಜಕ ಎಸ್ ಥಮನ್ ತಾಂತ್ರಿಕ ತಂಡದ ಭಾಗವಾಗಿದ್ದಾರೆ.

  • ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮಗನಿಂದಲೇ ಅಪ್ಪನ ಕೊಲೆಗೆ ನಡೆದಿತ್ತಂತೆ ಸ್ಕೇಚ್!

    ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮಗನಿಂದಲೇ ಅಪ್ಪನ ಕೊಲೆಗೆ ನಡೆದಿತ್ತಂತೆ ಸ್ಕೇಚ್!

    ಬೆಂಗಳೂರು: ತಿಗಳರಪಾಳ್ಯದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಮಗ ಮಧುಸಾಗರ್ ನಿಂದಲೇ ತಂದೆ ಶಂಕರ್ ಕೊಲೆಗೆ ಸ್ಕೆಚ್ ನಡೆದಿತ್ತು ಎಂಬ ಮಾಹಿತಿಯೊಂದು ಹೊರಬಿದ್ದಿದೆ.

    ಹೌದು. ಮಧುಸಾಗರ್ ಹಾಗೂ ಶಂಕರ್ ಫೈಟ್‍ಗೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ಆತ್ಮಹತ್ಯೆಗೂ ಮುಂಚೆ ನಾಲ್ವರು ಡೆತ್ ನೋಟ್ ಬರೆದಿದ್ದರು. ಸದ್ಯ ಡೆತ್ ನೋಟ್ ನಲ್ಲಿರುವ ವಿಚಾರಗಳು ಒಂದೊಂದಾಗಿಯೇ ಹೊರಬರುತ್ತಿವೆ. ಇದನ್ನೂ ಓದಿ: ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- 9 ತಿಂಗಳ ಕಂದಮ್ಮನನ್ನು ಕತ್ತು ಹಿಸುಕಿ ಕೊಂದಿದ್ದ ತಾಯಿ

    ಇತ್ತ ತಂದೆ ಶಂಕರ್ ಕೊಲೆಗೆ ಮಗ ಮಧುಸಾಗರ್ ಸ್ಕೆಚ್ ಹಾಕಿದ್ದ ಎಂಬುದು ಸದ್ಯದ ಮಾಹಿತಿ. ತನ್ನನ್ನು ಕೊಲೆ ಮಾಡಲು ಮಗ ಸ್ಕೆಚ್ ಹಾಕಿರುವ ವಿಚಾರವನ್ನು ಸ್ವತಃ ಶಂಕರ್ ಅವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸದ್ಯ ಶಂಕರ್ ಕೊಟ್ಟ ಈ ಮಾಹಿತಿಗೂ, ಸಿಕ್ಕ ಟೆಕ್ನಿಕಲ್ ಸಾಕ್ಷಿಗೂ ತಾಳೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು: ಶಂಕರ್

    ಸೆಪ್ಟೆಂಬರ್ 12 ರಂದು 10 ಲಕ್ಷ ಕೊಡ್ತೇನೆ ಬಾ ಅಂತ ಮಗ ಶಂಕರ್ ಗೆ ಮೆಸೇಜ್ ಹಾಕಿದ್ದ. ಮೆಸೇಜ್‍ಗೆ ರಿಪ್ಲೈ ಮಾಡದಿದ್ದಾಗ ಮಧುಸಾಗರ್ ತನ್ನ ತಂದೆಗೆ 3 ಬಾರಿ ಕಾಲ್ ಮಾಡಿದ್ದ. ಕೊನೆ ಕರೆ ವೇಳೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಅಮ್ಮ-ಅಕ್ಕಂದಿರು ಹೋದ್ಮೇಲೆ ಅಪ್ಪನನ್ನು ಬಿಡೋದ್ ಬೇಡ ಅಂತ ತೀರ್ಮಾನಿಸಿದ್ದ. ಮಗನ ಮಾತು ನಂಬಿ ನಾನು ಮನೆಗೆ ಹೋಗಿದ್ರೆ ಅಂದೇ ಕೊಲೆ ಆಗುತ್ತಿದ್ದೆ ಎಂದು ಹಲ್ಲೇಗೆರೆ ಶಂಕರ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಐವರು ಆತ್ಮಹತ್ಯೆ ಪ್ರಕರಣ- ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಎರಡು ಕೆಜಿಯಷ್ಟು ಚಿನ್ನಾಭರಣ ಪತ್ತೆ

  • ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

    ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

    – ತಂದೆಯ ರಾಸಲೀಲೆಯ ಸ್ಕ್ರೀನ್ ಶಾಟ್ ಸೇವ್ ಮಾಡಿದ್ದ ಪುತ್ರ
    – ಲ್ಯಾಪ್‍ಟಾಪ್‍ನಲ್ಲಿ ತಂದೆಯ ವಿರುದ್ಧ ಸಾಕ್ಷ್ಯ ಸಂಗ್ರಹ

    ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಾವು ಸತ್ತ ಮೇಲೆ ನೀನು ನೆಮ್ಮದಿಯಾಗಿರಬಾರದು ಎಂದು ಶಂಕರ್ ರಾಸಲೀಲೆ ಬಯಲು ಮಾಡಿ ಮಗ ಮಧು ಸಾಗರ್ ಸಮರ ಸಾರಿದ್ದಾರೆ. ಇದನ್ನೂ ಓದಿ:  ಎಲೆಕ್ಟ್ರಾನಿಕ್ ಸಿಟಿ ಆಕ್ಸಿಡೆಂಟ್ ಕೇಸಿಗೆ ತಿಲಾಂಜಲಿ? – ಇಬ್ಬರ ಜೀವ ತೆಗೆದವನಿಗೆ ಸ್ಟೇಷನ್ ಬೇಲ್

    ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ಪುತ್ರ ಮಧು ಸಾಗರ್, ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು. ನಮ್ಮ ಸಾವು ನಿನಗೆ ಪಾಠ ಆಗಬೇಕು. ನಮ್ಮ ಸಾವಿಗೆ ನಮ್ಮ ಅಪ್ಪನೇ ಕಾರಣ. ನಮ್ಮ ಅಪ್ಪನ ವಿರುದ್ಧ ನಾನು ಸಾಕ್ಷ್ಯ ಕಲೆ ಹಾಕಿದ್ದೇನೆ. ನಾನು ಸತ್ತ ಮೇಲೆ ಕೂಡ ನನ್ನ ಲ್ಯಾಪ್ ಟಾಪ್ ಅಲ್ಲಿ ಸಾಕ್ಷ್ಯಗಳನ್ನು ಇರುತ್ತದೆ. ನಮ್ಮ ಅಪ್ಪನ ಅಸಲಿ ಮುಖ ಅನಾವರಣ ಆಗುತ್ತದೆ. ಅಲ್ಲದೇ ನನ್ನ ಅಪ್ಪ ಬ್ಲಾಕ್ ಮೇಲ್ ಮಾಡಿ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಿದ್ದಾರೆ.

    ಇದೀಗ ಪೊಲೀಸರು ಆ ಲ್ಯಾಪ್ ಟಾಪ್ ಗಳನ್ನು ರಿಟ್ರೀವ್ ಮಾಡಿದ್ದು, 15 ಸ್ಕ್ರೀನ್ ಶಾಟ್ ಗಳು ಸಿಕ್ಕಿದೆ. ಮನೆಯಲ್ಲಿ ಸಿಕ್ಕ ಪೆನ್ ಡ್ರೈವ್ ಮತ್ತು ಒಂದು ಲ್ಯಾಪ್ ಟಾಪ್ ಸಂಪೂರ್ಣ ಖಾಲಿ ಇತ್ತು. ಆದರೆ ಆಪಲ್ ಕಂಪನಿಯ ಲ್ಯಾಪ್ ಟಾಪ್ ಅಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದ್ದು, ಅಪ್ಪನ ರಾಸಲೀಲೆಯ ಸ್ಕ್ರೀನ್ ಶಾಟ್ ಗಳನ್ನು ಆ ಲ್ಯಾಪ್‍ಟಾಪ್ ಅಲ್ಲಿ ಮಧು ಸಾಗರ್ ಇರಿಸಿದ್ದ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:  ವಾಹನ ಸವಾರರ ಮೇಲೆ ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಗೂಂಡಾಗಿರಿ

    ಈ ವೇಳೆ ಶಂಕರ್ ಒಂದೇ ಒಂದು ಹೆಂಗಸಿನ ಜೊತೆಯಲ್ಲಿ ಮಾತ್ರ ಅಲ್ಲ, ನಾಲ್ವರು ಹೆಂಗಸರುಗಳ ಜೊತೆಯಲ್ಲಿ ವಾಟ್ಸಾಪ್ ಚಾಟ್ ಮಾಡಿರುವುದು ಬಹಿರಂಗಗೊಂಡಿದೆ. ಶಂಕರ್ ಮಗ ಮಧು ಸಾಗರ್ ಶಂಕರ್ ಮೊಬೈಲ್ ನಿಂದಲೇ ಈ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡಿದ್ದಾನೆ. ಬಳಿಕ ಮಧು ಸಾಗರ್ ಶಂಕರ್ ಮೊಬೈಲ್ ನಿಂದ ಸ್ಕ್ರೀನ್ ಶಾಟ್ ಗಳನ್ನು ಸೇವ್ ಮಾಡಿದ್ದಾನೆ. ಬಳಿಕ ಆ ಸ್ಕ್ರೀನ್ ಶಾಟ್‍ಗಳೆಲ್ಲವನ್ನೂ ತನ್ನ ಲ್ಯಾಪ್ ಟಾಪ್ ಅಲ್ಲಿ ಸಂಗ್ರಹ ಮಾಡಿದ್ದಾರೆ. ಒಟ್ಟು 15ಕ್ಕೂ ಹೆಚ್ಚು ಸ್ಕ್ರೀನ್ ಶಾಟ್ ಗಳು ಈಗ ಪೊಲೀಸರ ಕೈ ಸೇರಿದೆ. ಅದರಲ್ಲಿ ಶಂಕರ್ ನಾಲ್ವರು ಮಹಿಳೆಯರ ಜೊತೆಯಲ್ಲಿ ಚಾಟ್ ಮಾಡಿ ಮಾತನಾಡಿದ್ದು, ಹಾಯ್, ಏನ್ಮಾಡ್ತಾ ಇದ್ದೀಯಾ? ಎಲ್ಲಿ ಇದ್ದೀಯಾ? ಇವತ್ತು ಏನಾದ್ರೂ ಸಿಕ್ತಿಯಾ? ಡ್ರಿಂಕ್ಸ್ ಮಾಡೋಣ ಇವತ್ತು ಜೊತೆ ಕಂಪನಿ ಕೊಡು ಅಂತ ಕರೆದಿರುವುದು. ಅಲ್ಲದೇ ಆ ನಾಲ್ವರು ಮಹಿಳೆಯರ ಜೊತೆ ಸ್ವಲ್ಪ ಅಸಭ್ಯವಾಗಿ ಚಾಟಿಂಗ್ ಮಾಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಈ ಕುರಿತಂತೆ ಪೊಲೀಸರು ತಾಂತ್ರಿಕ ಅಂಶಗಳನ್ನು ಇಟ್ಟುಕೊಂಡು ತನಿಖೆ ಮುಂದುವರೆಸಿದ್ದಾರೆ.

     

    ಸದ್ಯ ಒಂದೇ ಕುಟುಂಬದ ಐವರ ಸಾವು ಪ್ರಕರಣ ಟ್ವಿಸ್ಟ್ ಸಿಕ್ಕಿದ್ದು, ಈಗಾಗಲೇ ಕಾನೂನು ಸಲಹೆ ಪಡೆದಿರುವ ಬ್ಯಾಡರಹಳ್ಳಿ ಪೊಲೀಸರು ಶಂಕರ್ ವಿರುದ್ಧ ಮಕ್ಕಳು ತಮ್ಮ ಸಾವಿಗೆ ತಂದೆ ಶಂಕರ್ ನ ನೇರವಾಗಿ ಹೊಣೆ ಮಾಡಿರುವುದು ಹಾಗೂ ಆತ್ಮಹತ್ಯೆ ಪ್ರಚೋದನೆ ಹಿನ್ನೆಲೆ ಐಪಿಸಿ 306 ಅಡಿಯಲ್ಲಿ ಶಂಕರ್ ವಿರುದ್ಧ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಜೊತೆಗೆ ಶಂಕರ್ ಜೊತೆಗೆ 9 ತಿಂಗಳ ಮಗು ಕೊಂದ ಹಿನ್ನಲೆ ಮೃತ ಸಿಂಧೂರಾಣಿ ಮೇಲೆ ಕೊಲೆ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.

     

  • ಐವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಅಲ್ಲ: ಶಂಕರ್ ತಂಗಿ

    ಐವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಅಲ್ಲ: ಶಂಕರ್ ತಂಗಿ

    – ನಾವ್ಯಾರು ಅಣ್ಣನ ಮನೆಗೆ ಹೋಗುತ್ತಿರಲಿಲ್ಲ
    – ನಮ್ಮಣ್ಣನಿಗೆ ಟಾರ್ಚರ್ ಕೊಡುತ್ತಿದ್ದರು

    ಮಂಡ್ಯ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣ ಸಂಬಂಧ, ವಿಚಾರಣೆಯಲ್ಲಿರುವ ಶಂಕರ್ ಅವರ ತಂಗಿ ಹೇಳಿಕೆ ನೀಡಿದ್ದಾರೆ. ಅವರ ಸಾವಿಗೆ ಅವರೇ ಕಾರಣ ನಮ್ಮಣ್ಣ ಅಲ್ಲವೆಂದು ಸಹೋದರನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

    ಒಂದೇ ಕುಟುಂಬದ ಐವರು ಸಾವಿನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇತ್ತ ಶಂಕರ್ ಕೂಡಾ ಮೃತ ಹೆಂಡತಿ, ಮಕ್ಕಳು ಮಾಡಿರುವ ಆರೋಪ ಸುಳ್ಳು ಎನ್ನುತ್ತಿದ್ದಾರೆ. ಇತ್ತ ಶಂಕರ್ ತಂಗಿಯು ಅಣ್ಣನ ಮೇಲಿನ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ. ಇದನ್ನೂ ಓದಿ:   ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು: ಶಂಕರ್

    ಮಂಡ್ಯದಲ್ಲಿ ಮಾಧ್ಯಮದವರೊಂಂದಿಗೆ ಮಾತನಾಡಿದ ಅವರು, ಸಾಯುವ ಮುನ್ನ ತಂದೆ ಶಂಕರ್ ವಿರುದ್ಧ ಡೆತ್ ನೋಟ್ ಬರೆದು ಮಧುಸಾಗರ್, ತಂದೆಯ ಮೇಲೆ ಗಂಭೀರ ಆರೋಪ ಮಾಡಿದ್ದಾನೆ. ಇದೀಗ ಈ ಆರೋಪಗಳನ್ನು ಶಂಕರ್ ತಂಗಿ ಪಾರ್ವತಿ ಈ ಆರೋಪಗಳೆಲ್ಲಾವೂ ಸುಳ್ಳು, ಅವರ ಸಾವಿಗೆ ನಮ್ಮ ಅಣ್ಣ ಕಾರಣ ಅಲ್ಲ, ಅವರೇ ಅವರ ಸಾವಿಗೆ ಕಾರಣ ಎಂದು ಮಂಡ್ಯದ ಹಲ್ಲೆಗೆರೆಯಲ್ಲಿ ಕಣ್ಣೀರಿಡುತ್ತಾ ಮಾತನಾಡಿದ್ದಾರೆ.

    ಅವರ ತಪ್ಪು ಇಟ್ಟುಕೊಂಡು ಇನ್ನೊಬ್ಬರನ್ನ ದೂರುತ್ತಾರಲ್ಲ ಅದು ತಪ್ಪು. ನಮ್ಮಣ್ಣ ಆ ರೀತಿಯ ವ್ಯಕ್ತಿಯಲ್ಲ, ಬೇಕಿದ್ದರೆ ಅಕ್ಕಪಕ್ಕದ ಊರಿನವರನ್ನ ಕೇಳಿಕೊಳ್ಳಿ. ಅವನ ಹೆಂಡತಿ ಮದುವೆಯಾದಾಗಿನಿಂದಲೂ ನಮ್ಮಣ್ಣನಿಗೆ ಟಾರ್ಚರ್ ಕೊಡುತ್ತಿದ್ದರು. ನಮ್ಮಣ್ಣ ನೆಮ್ಮದಿಯಿಂದರಲಿ ಎಂದು ನಾವ್ಯಾರು ಮನೆಗೆ ಹೋಗುತ್ತಿರಲಿಲ್ಲ ಎಂದು ಪಾರ್ವತಿ ಅವರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಐಟಿ ದಾಳಿ ಬಳಿಕ ಕೊನೆಗೂ ಮೌನ ಮುರಿದ ಸೋನು ಸೂದ್

    ನಮ್ಮಮ್ಮ ಅವರ ಮನೆಗೆ ಹೋಗುತ್ತೇವೆ ಎಂದರೆ ಗಡಗಡ ನಡುಗುತ್ತಿದ್ದರು. ನನ್ನ ಸೊಸೆ, ನನ್ನ ಮೊಮ್ಮಕ್ಕಳು ಏನಾದರು ಮಾಡ್ತಾರೆ ಅಂತಾ ಕಣ್ಣೀರಿಡುತ್ತಿದ್ದರು. ನಮಗೆ ಹಾಗೂ ನಮ್ಮ ತಾಯಿಗೆ ಚಿತ್ರಹಿಂಸೆ ಅವರು ಕೊಡುತ್ತಿದ್ದರು. ನಮ್ಮಣ್ಣ ದಯವಿಟ್ಟು ಬರಬೇಡಿ ಕಂಡ್ರೊ ಅಂತಾ ನಮ್ಮ ಬಳಿ ಕಣ್ಣೀರಿಡುತ್ತಿದ್ದರು. ಮದುವೆಯಾದಗಿನಿಂದಲೂ ಕೂಡ ನಮ್ಮಣ್ಣನ ಹೆಂಡತಿ ಹಠವಾದಿ. ನಮ್ಮ ಜೊತೆಗೆ ನಮ್ಮಣ್ಣನ ಹೆಂಡತಿ, ಮಕ್ಕಳು ಮಾತಾಡುತ್ತಿರಲಿಲ್ಲ. ನಮ್ಮಣ್ಣ ಅವರ ಕಷ್ಟವನ್ನ ಯಾವತ್ತು ನಮ್ಮ ಹತ್ತಿರ ಹೇಳಿಕೊಳ್ಳುತ್ತಿರಲಿಲ್ಲ. ಅವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಕಾರಣನಲ್ಲ. ನಮ್ಮ ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ನಮ್ಮಣ್ಣ ಅಂತಹವರಲ್ಲ ಎಂದು ಹೇಳಿದ್ದಾರೆ.