ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಧನ್ವೀರ್ (Dhanveer) ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ವಾಮನ (Vamana) ಚಿತ್ರದ ಆಕ್ಷನ್ ಟೀಸರ್ ಇಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಸಖತ್ ಹಿಟ್ ಆಗಿದೆ. ಸದ್ಯ ಆಕ್ಷನ್ ಟೀಸರ್ ಬಿಡುಗಡೆಯಾಗಲಿದ್ದು, ಅದೇ ದಿನ ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್ ಸಹ ಇದೆ.
ಚೇತನ್ ಗೌಡ ಅವರು ನಿರ್ಮಿಸಿರುವ ಮೊದಲ ಚಿತ್ರವಿದು. ಶಂಕರ್ ರಾಮನ್ (Shankar Raman) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್ ನೃತ್ಯ ನಿರ್ದೇಶನ, ಅರ್ಜುನ್ ರಾಜ್, ವಿಕ್ರಂ ಮೋರ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ನವೀನ್ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಧನ್ವೀರ್ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತಕುಮಾರ್, ಕಾಕ್ರೋಜ್ ಸುಧಿ, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕೆ.ಜಿ.ಸಚ್ಚು, ಅರುಣ್ ಶ್ರೀರಾಮಯ್ಯ ಮುಂತಾದವರು “ವಾಮನ” ಚಿತ್ರದ ತಾರಾಬಳಗದಲ್ಲಿದ್ದಾರೆ.
ಶೋಕ್ದಾರ್ ಧನ್ವೀರ್ ಗೌಡ ನಟಿಸುತ್ತಿರುವ ಬಹುನಿರೀಕ್ಷಿತ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ‘ವಾಮನ’. ಟೀಸರ್ ಮೂಲಕ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ವಾಮನ’ ಸಿನಿಮಾತಂಡ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆದಿದೆ.
ನಿರ್ದೇಶಕ ಶಂಕರ್ ರಾಮನ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಹಲವು ಸಿನಿಮಾದಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದೇನೆ. ‘ವಾಮನ’ ಸಿನಿಮಾ ಸತತ ಒಂದು ವರ್ಷದ ಜರ್ನಿ. ಇವತ್ತು ಹೀರೋ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯಲಾಗ್ತಿದೆ ಈ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆಯುತ್ತಿದ್ದೇವೆ. 72 ದಿನಗಳ ಕಾಲ ಶೂಟ್ ಮಾಡಿದ್ದೇವೆ. ಕಲಾವಿದರು, ತಾಂತ್ರಿಕ ಬಳಗ ತುಂಬಾ ಸಪೋರ್ಟಿವ್ ಆಗಿದ್ದಾರೆ. ಪಕ್ಕಾ ಕಮರ್ಶಿಯಲ್ ಸಿನಿಮಾವಿದು. ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಕೆಟ್ಟವನು ಇರ್ತಾನೆ. ಒಳ್ಳೆಯವನಾಗಬೇಕಾ..? ಕೆಟ್ಟವನಾಗಬೇಕಾ ಎನ್ನೋದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯವನು, ಕೆಟ್ಟದರ ನಡುವಿನಲ್ಲಿ ಭಿನ್ನತೆಯಲ್ಲಿ ಆತ ಯಾರೇ ಆಗಿದ್ರು ಆತನಿಗೆ ಸಲ್ಲಬೇಕಾದ ಶಿಕ್ಷೆ ಅಥವಾ ಸೆಟಲ್ ಮೆಂಟ್ ಸಿಕ್ಕೇ ಸಿಗುತ್ತೆ ಅನ್ನೋದನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಸಿನಿಮಾವನ್ನು ಇಲ್ಲಿವರೆಗೆ ಸುಸೂತ್ರವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದ್ದು ನಿರ್ಮಾಪಕ ಚೇತನ್ ಗೌಡ ಅವರ ಸಹಕಾರದಿಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ನಾಲ್ಕು ಸಾಂಗ್, ನಾಲ್ಕು ಫೈಟ್ ಇದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಇದನ್ನೂ ಓದಿ: ಸಿನಿಮಾ ಸಕ್ಸಸ್ ಸೆಲೆಬ್ರೇಶನ್ ಸಂಭ್ರಮದಲ್ಲಿ `ಕಾಂತಾರ’ ಟೀಮ್
ನಟ ಧನ್ವೀರ್ ಗೌಡ ಮಾತನಾಡಿ ಇವತ್ತು ಚಿತ್ರೀಕರಣ ಕಂಪ್ಲೀಟ್ ಆಗುತ್ತಿದೆ. ಒಂದೊಳ್ಳೆ ಕಂಟೆಂಟ್, ಕಥೆ ಇಟ್ಕೊಂಡು, ಒಂದೊಳ್ಳೆ ತಂಡದ ಜೊತೆ, ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ. ಈ ಕಥೆ ಮೂಲಕ ಕರ್ನಾಟಕ ಜನತೆಯನ್ನು ರಂಜಿಸಲು ಬರ್ತಿದ್ದೇವೆ. ಚಿತ್ರದಲ್ಲಿ ಗುಣ ಪಾತ್ರ ಮಾಡಿದ್ದೇನೆ. ಗ್ರೇ ಶೇಡ್ ಪಾತ್ರ. ಬ್ಯಾಡ್ ಬಾಯ್ ಅಲ್ಲ, ಗುಡ್ ಬಾಯ್ ಕೂಡ ಅಲ್ಲ ಆ ರೀತಿಯ ಪಾತ್ರ. ಇದು ನನ್ನ ಮೂರನೇ ಸಿನಿಮಾ ಎಲ್ಲರ ಆಶೀರ್ವಾದ ಈ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದ್ರು. ನಿರ್ಮಾಪಕ ಚೇತನ್ ಗೌಡ ಮಾತನಾಡಿ ಈದು ಈಕ್ವಿನಾಕ್ಸ್ ಗ್ಲೋಬಲ್ ಸಂಸ್ಥೆ ಮೊದಲ ಸಿನಿಮಾ. ಸತತ 72 ದಿನಗಳ ಚಿತ್ರೀಕರಣ ಇಂದು ಮುಕ್ತಾಯಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ನಡೆಯುತ್ತಿದೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ ಎಂದು ತಿಳಿಸಿದ್ರು.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಚೇತನ್ ಗೌಡ ‘ವಾಮನ’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಶಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ. ಆರ್. ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುದಿ, ಜ್ಯೂನಿಯರ್ ಸಲಗ ಶ್ರೀಧರ್, ಸಚ್ಚಿತಾನಂದ, ಅರುಣ್ ಒಳಗೊಂಡ ದೊಡ್ಡ ತಾರಾಬಳಗವಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜು, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ನೃತ್ಯ ನಿರ್ದೇಶಕ ಭೂಷಣ್ ನೃತ್ಯ ಸಂಯೋಜನೆ ಜೊತೆಗೆ ದನ್ವೀರ್ ಸ್ನೇಹಿತನ ಪಾತ್ರದಲ್ಲೂ ಸಹ ಮಿಂಚಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹುನಿರೀಕ್ಷಿತ ವಾಮನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಜಬರ್ದಸ್ತ್ ಆಗಿ ಮೂಡಿ ಬಂದಿರುವ ಟೀಸರ್ ಝಲಕ್ ನಲ್ಲಿ ಧನ್ವೀರ್ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಅದ್ಧೂರಿ ಸೆಟ್, ಭರ್ಜರಿ ಆಕ್ಷನ್, ಧನ್ವೀರ್ ನಯಾ ಗೆಟಪ್, ಬ್ಯಾಗ್ರೌಂಡ್ ಮ್ಯೂಸಿಕ್, ವಿಷ್ಯೂವಲ್ಸ್ ಎಫೆಕ್ಟ್ ಟೀಸರ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಧನ್ವೀರ್ ಗುಣ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
1.50 ನಿಮಿಷ ಇರುವ ವಾಮನ ಸಿನಿಮಾದ ಟೀಸರ್ ತುಣುಕು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದ್ದು, ಶಂಕರ್ ರಾಮನ್ ಸಾರಥ್ಯದಲ್ಲಿ ಚಿತ್ರ ಮೂಡಿ ಬರ್ತಿದೆ. ಧನ್ವೀರ್ ಗೆ ಜೋಡಿಯಾಗಿ ಏಕ್ ಲವ್ ಯಾ ಬೆಡಗಿ ರೀಷ್ಮಾ ನಾಣಯ್ಯ ನಟಿಸ್ತಿದ್ದಾರೆ. ಈಗಾಗಲೇ 70 ದಿನ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸದ್ಯ ಬಾಕಿ ಉಳಿದ ಭಾಗದ ಚಿತ್ರೀಕರಣದಲ್ಲಿ ನಿರತವಾಗಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಂದೆಯಾದ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಖ್ಯಾತಿ ಗಳಿಸಿರುವ ಚೇತನ್ ಕುಮಾರ್ ತಮ್ಮದೇ ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಷಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಖಳನಾಯಕನಾಗಿ ಸಂಪತ್ ನಟಿಸುತ್ತಿದ್ದು, ಉಳಿದಂತೆ ಅಚ್ಯುತ್ ಕುಮಾರ್, ತಾರಾ, ಶಿವರಾಜ್ ಕೆ ಆರ್ ಪೇಟೆ ಮತ್ತು ಕಾಕ್ರೋಚ್ ಸುದಿ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ ಕೈಚಳಕ, ಸುರೇಶ್ ಆರ್ಮುಖ ಸಂಕಲನ, ಅರ್ಜುನ್ ರಾಜ್ ಆಕ್ಷನ್ ಸಿನಿಮಾಕ್ಕಿದೆ.
ಶೋಕ್ದಾರ್ ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ವಾಮನ ಅಂಗಳದಿಂದ ಮೆಗಾ ಅಪ್ ಡೇಟ್ ಸಿಕ್ಕಿದೆ. ಧನ್ವೀರ್ ಗೆ ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುತೂಹಲದ ಪ್ರಶ್ನೆಗೆ ಚಿತ್ರತಂಡ ಉತ್ತರ ಸಿಕ್ಕಿದೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ
ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟುಬಿಟ್ಟು ಕೊಡದ ರಚನಾ, ಬಬ್ಲಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವುದಾಗಿ ಹೇಳಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಫ್ಲೈಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್
ಸದ್ಯ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ನಾಯಕಿಯಾಗಿ ನಟಿಸ್ತಿರುವ ರಚನಾ ರೈ, ಈಗಾಗಲೇ ಸೆಕೆಂಡ್ ಶೆಡ್ಯೂಲ್ಡ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ನಡಿ ಮೂಡಿ ಬರ್ತಿರುವ ಮಾಸ್ ಆಕ್ಷನ್ ಎಂಟರ್ಟೇನರ್ ವಾಮನ ಸಿನಿಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದು, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಭಾಷಣಾಗಾರನಾಗಿ ಕಾರ್ಯನಿರ್ವಹಿಸಿದ್ದ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಬಜಾರ್ ಸಿನಿಮಾ ಮೂಲಕ ಚಂದನವನದ ಭವಿಷ್ಯದ ಭರವಸೆಯ ನಾಯಕ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಂಡ ನಟ ಧನ್ವೀರ್. ಸಿಂಪಲ್ ಸುನಿ ಅಖಾಡದಿಂದ ಮಾಸ್ ಅಂಡ್ ಕ್ಲಾಸ್ ಹೀರೋ ಆಗಿ ಲಾಂಚ್ ಆದ ಶೋಕ್ದಾರ್ ಧನ್ವೀರ್ ಮೊದಲ ಸಿನಿಮಾ ಗೆದ್ದರೂ ಸ್ಕ್ರಿಪ್ಟ್ ಆಯ್ಕೆಯಲ್ಲಿ ಸಖತ್ ಚ್ಯುಸಿ. ಸದ್ಯ ಹರಿ ಸಂತೋಷ್ ನಿರ್ದೇಶನದ ಬೈ ಟು ಲವ್ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಧನ್ವೀರ್ ಇದೀಗ ಮೂರನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಬೈ ಟು ಲವ್ ಬಿಡುಗಡೆಗೂ ಮುನ್ನವೇ ಮೂರನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಧನ್ವೀರ್. ಮೂರನೇ ಸಿನಿಮಾ ಟೈಟಲ್ ಏನು, ಧನ್ವೀರ್ ಲುಕ್ ಹೇಗಿರುತ್ತದೆ ಎಂಬ ಪ್ರಶ್ನೆಗಳಿಗೆ ಜನವರಿ 14ರಂದು ಉತ್ತರ ಸಿಗಲಿದೆ. ಸಂಕ್ರಾತಿ ಹಬ್ಬದಂದೇ ತಮ್ಮ ಮುಂದಿನ ಚಿತ್ರದ ಬಗ್ಗೆ ತಿಳಿಸಲಿದ್ದು ಅಂದೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಗುರುತಿಸಿಕೊಂಡಿದ್ದ ಶಂಕರ್ ರಾಮನ್ ಧನ್ವೀರ್ ಮೂರನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ 13 ವರ್ಷದ ಸಿನಿಪಯಣದ ಅನುಭವವನ್ನು ಮೊದಲ ಸಿನಿಮಾಗೆ ಶಂಕರ್ ರಾಮನ್ ಧಾರೆ ಎರೆಯಲು ಸಜ್ಜಾಗಿದ್ದಾರೆ. ಅದಕ್ಕೆಂದೇ ಮಾಸ್ ಕಥೆ ಕೂಡ ಮಾಡಿಕೊಂಡಿದ್ದಾರೆ. ಮಾಫಿಯಾ ಮತ್ತು ಮಾಸ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಕಥೆ ಕೇಳಿ ಧನ್ವೀರ್ ಕೂಡ ಥ್ರಿಲ್ ಆಗಿದ್ದು ಶಂಕರ್ ರಾಮನ್ ಜೊತೆ ಕೈ ಜೋಡಿಸಿ ಮೂರನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನೂ ಓದಿ:36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಚೇತನ್ ಕುಮಾರ್ ಗೌಡ ಬಂಡವಾಳ ಹಾಕಿ ಅದ್ದೂರಿಯಾಗಿ ಸಿನಿಮಾ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಉಳಿದಂತೆ ಧನ್ವೀರ್ ಲುಕ್ ಹೇಗಿರಲಿದೆ, ಚಿತ್ರದ ನಾಯಕಿ ಯಾರು, ಚಿತ್ರತಂಡದಲ್ಲಿ ಯಾರೆಲ್ಲ ಇರುತ್ತಾರೆ ಎಂಬ ಪ್ರಶ್ನೆಗಳಿಗೆ ಡಿಟೈಲ್ಸ್ ಜನವರಿ 14ಕ್ಕೆ ಉತ್ತರ ಸಿಗಲಿದೆ. ಧನ್ವೀರ್, ಶ್ರೀಲೀಲಾ ಜೋಡಿಯ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಬೇಕಿದ್ದು, ಕೊರೊನಾ ಕಾರಣದಿಂದ ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಒಟ್ಟಿನಲ್ಲಿ ವರ್ಷದ ಆರಂಭದಲ್ಲಿಯೇ ಹೊಸ ಸಿನಿಮಾಗೆ ಧನ್ವೀರ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಅವರ ಅಭಿಮಾನಿ ಬಳಗಕ್ಕೆ ಸಂತಸ ತಂದಿದೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್